Oppanna.com

ಸಮಸ್ಯೆ 34 : “ಆಕಾಶ ನೋಡೂ ಮುಗಿಲೋಡಿ ಬ೦ತೂ”

ಬರದೋರು :   ಸಂಪಾದಕ°    on   15/06/2013    37 ಒಪ್ಪಂಗೊ

ಈ ವಾರ  “ಇ೦ದ್ರವಜ್ರ” ಛ೦ದಸ್ಸಿನ ಪ್ರಯತ್ನ ಮಾಡುವ.

ಪ್ರತಿ ಸಾಲಿಲಿ ಹನ್ನೊ೦ದು ಶಬ್ದ೦ಗೊ ಬಪ್ಪ ಈ ಅಕ್ಷರವೃತ್ತದ ಲಕ್ಷಣ ಹೀ೦ಗಿದ್ದು ಃ

– – ೧ – – ೧೧ – ೧ – – ( ನಾನಾನನಾನಾನನನಾನನಾನಾ)

ಶಾಲೆಲಿ ಕಲುಶೊಗ ” ತಾನಿ೦ದ್ರವಜ್ರ೦ ತತಜ೦ಗಯುಗ್ಮ೦” ಹೇಳಿ ಕನ್ನಡಪ೦ಡಿತಕ್ಕೊ ಹೇಳಿ ಕೊಡೊದಡ.

ಉದಾಹರಣೆಗೆ ಅ.ರಾ.ಮಿತ್ರರು “ಛ೦ದೋಮಿತ್ರಲ್ಲಿ

ಬಾನುದ್ದಕೆದ್ದ೦ ಬೆಳೆದ೦ತೆ ಬುದ್ಧ೦

ಜ್ಞಾನಕ್ಕೆ ಬೋಢ೦ ಚತುರಾಯ ಸತ್ಯ೦

ಹೀನಾಶೆಯೇ ಎಲ್ಲತರ ದುಃಖಮೂಲ೦

ಜ್ಞಾನ೦ ಸಮರ್ಥ೦ ಕಡಿಯಲ್ಕೆ ಬ೦ಧ೦

ಹೇಳಿ ಬರದ್ದವು.

ನಮ್ಮ ಸಮಸ್ಯೆ ಹೀ೦ಗಿದ್ದು ಃ

” ಆಕಾಶ ನೋಡೂ ಮುಗಿಲೋಡಿ ಬ೦ತೂ “

ಮೇಗೆ  ಓಡುವ ಮುಗಿಲುಗಳ ನೋಡ್ಯೊ೦ಡು ಪ್ರಯತ್ನ ಮಾಡುವ°,ಬನ್ನಿ.

 

37 thoughts on “ಸಮಸ್ಯೆ 34 : “ಆಕಾಶ ನೋಡೂ ಮುಗಿಲೋಡಿ ಬ೦ತೂ”

  1. ಡೈಮಂಡು ಭಾವ ಹೇಳಿದ್ದಕ್ಕೆ +1
    ಬಾಲಣ್ಣ, ಇಂದಿರತ್ತೆ, ಮುಳಿಯಭಾವ°, ಟೀಕೆ ಮಾವ°, ಭಾಗ್ಯಕ್ಕ°, ಅದಿತಿಯಕ್ಕ, ಶೈಲಕ್ಕ, ಏತಡ್ಕ ಮಾವ° ಬರದ್ದಕ್ಕೆಲ್ಲ +1.
    ಬೊಳುಂಬು ಮಾವನ ಉತ್ಸಾಹಕ್ಕೂ +1

    ಇನ್ನು ಬರೆತ್ತವಕ್ಕೂ ಯಾವತ್ತೂ +1

    ಇದರಿಂದ ಹೆಚ್ಚಿಗೆ ಈ ಅಂಕಣಲ್ಲಿ ಎನ್ನ ಕಾಲು ಕೊಣಿಯ

  2. ಗಾಳೀಯ – ? ಇದರ ಸರಿ ಮಾಡ್ಲೆಡಿಗೋ ಅತ್ತೆ. ?

    1. ‘ನಾಕಾವೆ’ , ‘ಗಾಳೀಯ’- ಎರಡುದೆ ಮನಸ್ಸಿಂಗೆ ಹಿತವಾಗಿ ಹಾಕಿದ ಶಬ್ಧಂಗೊ ಅಲ್ಲ -ಆದರೆ ಇಂದ್ರನ ವಜ್ರವ ತೆಕ್ಕೊಂಬ ಅರ್ಜೆಂಟಿಲಿ ಬೇರೆ ಹುಡುಕುಲೆ ಪುರುಸೊತ್ತು ಆಯಿದಲ್ಲೆ. ಮಾತ್ರೆ ಹೆಚ್ಚುಕಮ್ಮಿ ಅಪ್ಪಲಾಗ ಹೇಳ್ತ ಒಂದೇ ಯೋಚನೆಲಿ ರೆಜಾ ರಾಗ ಎಳದೆ. ಮತ್ತೆ ನಿಂಗಳೂ ರಘುವೂ ಇದ್ದೀರನ್ನೆ, ಅಲ್ಲಿಗೆ ಸರಿಯಾದ ಬೇರೆ ಶಬ್ಧ ಹುಡುಕಿ ಹೇಳುವಿ ಹೇಳುವ ಧೈರ್ಯ ! ನಿಜವಾಗಿ ಎನ್ನ ಶಬ್ಧ್ಹಭಂಡಾರ ಸೊರಗಿದ್ದು – ಆಲೋಚನೆ ಮಾಡಿಮಾಡಿ ತಲೆಬೆಶಿಯಾತು- ಹಾಂಗೇ ಹಾಕಿಬಿಟ್ಟೆ ಮಾವ.

  3. ನಾಕಾಳು ಕೂಡೀ ಬಲೆಬೀಸುವಾ೦ಗೇ
    ತಾಕತ್ತಿಲಿದ್ದೂ ಬಿರುಬೀಸುಗಾಳೀ
    ನೂಕುತ್ತ ಮಕ್ಕೋ ಬಿಡುವಾ೦ಗೆ ಶಾಲೇ
    ಆಕಾಶ ನೋಡೂ ಮುಗಿಲೋಡಿ ಬ೦ತೂ॥

  4. ಆಕಾಶ ನೋಡೂ ಮುಗಿಲೋಡಿ ಬಂತೂ
    ಸಾಕಾತು ಮೋಡಕ್ಕದ ಚಂದ್ರನೋಡ್ಸೀ
    ಬೇಕಾವ್ತು ಗಾಳೀಯ ಸಹಾಯ ಹಸ್ತಾ
    ಸೇಂಕೂವ ಮೋಡಕ್ಕೆ ಬೆಗರ್ತು ಜೋರೂ ॥

  5. ಬೇಕಾರೆ ಕೇಳೂ ಕೈಲಿಲ್ಲೆಯೆಂತೂ
    ಪೋಕಾಲವಲ್ಲದೊ ಮಳೆಯಿಲ್ಲವೆಂತೋ
    ಸಾಕಾರವಾಗಲಿ ಮನದಾಸೆಯೆಂದೂ
    ಆಕಾಶ ನೋಡೂ ಮುಗಿಲೋಡಿ ಬಂತೂ।

    1. ಪ್ರತಿ ಸಾಲಿಲಿ ೧೧ ಅಕ್ಷರ ಇರೆಕ್ಕಪ್ಪದು. ನಿಂಗೊಗೆ ತಪ್ಪಿತ್ತೋ ಕಾಣ್ತು.

      1. ಓ, ಅಪ್ಪಲ್ಲದೊ, ೧೧ ಅಕ್ಷರ ಆಯೆಕಾತು. ಅದು ನೋಡಿದ್ದೇ ಇಲ್ಲೆ ಅದ. ನಮ್ಮ ಅಡಿಗೆ ಸತ್ಯಣ್ಣ ಪದ್ಯ ಪೂರಣ ಮಾಡಿದ ಹಾಂಗಾತೋ ಹೇಳಿ. ನೋಡೊ, ಪುರುಸೊತ್ತು ಅಪ್ಪಗ ಸರಿ ಮಾಡುವೊ.

        1. ಬೇಕಾರೆ ಕೇಳೂ ಕೊಡುಲಿಲ್ಲೆಯೆಂತೂ
          ಪೋಕಾಲವಲ್ದೋ ಮಳೆಯೆಲ್ಲಿ ಹೋತೋ!
          ಸಾಕಾರವಾಗೀ ಮನದಾಸೆಯಿ೦ದೂ
          ಆಕಾಶ ನೋಡೂ ಮುಗಿಲೋಡಿ ಬಂತೂ।

          ಹೇಳಿ ಮಾಡ್ಲಕ್ಕು ಮಾವಾ.

  6. ಏಕಾಗಿ ನಿನ್ನಾ ತಲೆ ಮೇಗೆ ಕೈಯ್ಯೂ
    ಸಾಕಾಗಿ ಹೋತೋ ಬಿರು ಬೇಸಗೇಯೋ/
    ನೂಕಾಚೆ ದೂರಾ ಕಡು ಕಷ್ತ ಚಿಂತೇ
    ಆಕಾಶ ನೋಡೂ ಮುಗಿಲೋಡಿ ಬಂತೂ/

    1. ಅದಪ್ಪು ಬಾಲಣ್ಣ, ರಜ್ಜ ಸಮಯಕ್ಕೆ ಮದಲು ಇದುವೇ ವಾಸ್ತವ.

  7. ವಾಕಿಂಗು ಹೋಪಾಗ ಸುಮಕ್ಕ ಹೇಳ್ತೂ
    ಆಕಾಶ ನೋಡೂ ಮುಗಿಲೋಡಿ ಬಂತೂ
    ಸೊಕ್ಕೀಲಿ ಬೀಸುತ್ತದ ಗಾಳಿ ಜೋರೂ
    ಸಾಕಪ್ಪ ಸಂಚಾರವ ಬೇಗ ನಿಲ್ಸೂ ॥

    ಆಕಾಶ ನೋಡೂ ಮುಗಿಲೋಡಿ ಬಂತೂ
    ಆಕಾರ ಕಾಣುತ್ತು ನಮೂನೆಯಾಗೀ
    ಬೇಕಾದ ರೂಪಲ್ಲಿಯೆ ಪದ್ಯ ಮಾಡೀ
    ಹಾಕೆಕ್ಕು ಒಪ್ಪಣ್ಣನ ಬೈಲ ಜಾಲ್ಲೀ ॥

    1. ಅಡ್ಡಿ ಇಲ್ಲೆ ಅತ್ತೆ, ನೀಂಗೊ ಹೀಂಗೇ ಪದ್ಯ ಬರದು ಹಾಕಿ, ಎಂಗೊ ಓದಿ “ಟೀಕೆ” ಮಾಡ್ತಿಯೊ.

  8. ಆಕಾಶ ನೋಡೂ ಮುಗಿಲೋಡಿ ಬಂತೂ
    ನಾಕಾರು ತೊಟ್ಟೂ ಚಳಿಶೀತ ತಕ್ಕೂ
    ಸೀ ಕಾರ ಕೊಡ್ತೇ ಹೆರ ಹೋಪಲಾಗಾ
    ಜೋಕಾಲೆ ಆಡೂ ಮನೆಹಿತ್ತಿಲಿಲ್ಲೇ

  9. ಸಾಕಾಗಿ ಮಾಡಾ ಸರಿಯೋಡ ಮಡ್ಗೀ
    ಬೇಕೆಂಟು ಹೋಳ್ಗೇ ಘಮತುಪ್ಪ ಹಾಕೀ
    ಸಾವ್ಕಾಶ ಮಾಡ್ಲೇ ಪುರುಸೊತ್ತೆ ಕಾಣೇ
    ಆಕಾಶ ನೋಡೂ ಮುಗಿಲೋಡಿ ಬಂತೂ

  10. ಆಕಾಶ ನೋಡೂ ಮುಗಿಲೋಡಿ ಬಂತೂ
    ಬೇಕಾಷ್ತು ಗಾಳೀ ಮಳೆಯೆಲ್ಲ ತಂತೂ
    ಲೋಕಕ್ಕೆ ಶಾಂತೀ ಸುಖವೆಲ್ಲ ಸಿಕ್ಕೀ
    ನಾಕಕ್ಕೆ ಹೋಪಾಶೆಯ ಹುಟ್ಟುಸಿಕ್ಕೀ
    ——
    ಸಾಕಾರಗೊಂಡತ್ತು ಜೆನಂಗಳಾಶೇ
    ಆಕಾಶ ನೋಡೂ ಮುಗಿಲೋಡಿ ಬಂತೂ
    ಬೇಕಾಷ್ತು ಬಂತೂ ಮಳೆ ಗಾಳಿಯೆಲ್ಲಾ
    ಬೇಕಾಗಿ ಬಂತೂ ಕೊಡೆ,ಕೋಟು,ಬೂಟೂ
    —-
    ಸಾಕಾತು ಬೆಂದೂ ದಿನನಿತ್ಯವಂತೂ
    ಬೇಕಾಗಿ ಬಂತೂ ಬಲಿವಾಡು ಕೂಟಾ
    ಆಕಾಶ ನೋಡೂ ಮುಗಿಲೋಡಿ ಬಂತೂ
    ಬೇಕಾಷ್ಟು ಬಂತೂ ಮಳೆಗಾಳಿ ತಂಪೂ

    1. ಅಪ್ಪು, ರೈಸಿದ್ದು. ಎನ್ನ ಕೇಳಿರೆ ಮೂರ್ನೆದಕ್ಕೇ ಜಾಸ್ತಿ ಮಾರ್ಕು ಮಾವ.

  11. ಆಕಾಶ ನೋಡೂ ಮುಗಿಲೋಡಿ ಬಂತೂ
    ಆಕಾರ ಎಂಥಾ ಕರಿಯನ್ನು ಮೀರ್ತೂ
    ಬೇಕಾದ ಹಾಂಗೇ ಮಳೆಸೀರೆ ನೇಯ್ವಾ
    ನೇಕಾರನಿಕ್ಕೋ ಬುವಿಮೇಗೆ ಕಾಂಬಾ

    1. ಒಳ್ಳೆ ಅಲ೦ಕಾರ ತು೦ಬಿದ ರಚನೆ.ಲಾಯ್ಕಾಯಿದು ಅದಿತಿ ಅಕ್ಕಾ.

    2. ಅದ್ಭುತ. ನಿಂಗಳ ಹಾಂಗಿಪ್ಪ ಕವಯಿತ್ರಿಗಳ ಕಲ್ಪನಾ ಸಾಮ್ರಾಜ್ಯಲ್ಲಿ ಮಳೆನೀರ ನೇಯ್ವ ನೇಕಾರನೂ ಸಿಕ್ಕುಗು , ಅವ ನೇಯ್ದ ಸೀರೆಗಳ ಸುತ್ತುವ ನೀರೆಯರೂ ಇಕ್ಕು.

      1. ಅದಿತಿ ಅಕ್ಕ ಇಲ್ಲಿ ಬಾರದ್ದರೆ ಇಲ್ಲಿ ಬಪ್ಪ ಛ೦ದಸ್ಸುಗೊ ಎಲ್ಲಾ ಆಯತ ಮಾಡದ್ದ ಮದ್ಮಾಳಿನ ಹಾ೦ಗೆ ಅಲ೦ಕಾರ ಶೂನ್ಯ ಇರುತ್ತು ಹೇಳಿ ಗ್ರೇಶಿಗೊ೦ಡಿತ್ತಿದ್ದೆ. ಮೇಲೆ ಬರದ ೨ ಒಪ್ಪ೦ಗಳೂ ಎನ್ನ ಆಲೋಚನೆಯ ಪುಷ್ಟೀಕರಿಸಿತ್ತು .

        1. ಮೆಚ್ಚುಗೆಯ ನುಡಿಗೊಕ್ಕೆ ‘ಟೀಕೆ’ ಮಾವ ಮತ್ತು ಭಾಗ್ಯಕ್ಕಂಗೆ ಧನ್ಯವಾದ 🙂

  12. ತಾನೇ ಬಿತ್ತಿ ಬೆಳದು ಉಣ್ಣೆಕ್ಕು ಹೇಳುವ ಸ್ವಾಭಿಮಾನಿ —

    ಆಕಾಶ ನೋಡೂ ಮುಗಿಲೋಡಿ ಬಂತೂ
    ಸಾಕೀಗ ಶೋಕಾ ಮಳೆಯನ್ನೆ ತಂತೂ
    ಬೇಕೀಗ ಯೇಣೆಲ್ ತೆನೆಯೆಳ್ಸೊ ಬಿತ್ತೂ
    ಹಾಕೆಕ್ಕು ಬೇಗಾ ಬೆಗರಿಳ್ಸೊ ಸೊತ್ತೂ

    ***************************

    ಆಕಾಶ ನೋಡೂ ಮುಗಿಲೋಡಿ ಬಂತೂ
    ಆಕ೦ದ°ವೊ೦ದೇ ಕೊಡೆ ನೆಗ್ಗಿ ನಿ೦ದಾ°
    ಬಾಕಿಲ್ಲೆಯಾರೂ ಕರ ಜೋಡ್ಸಿದೋರೂ
    ಹಾ೦ಕಾರಿಯಿಂದ್ರಾ° ಮಳೆ ಕಳ್ಸಿ ಬೆ೦ದಾ°

    1. ಭಾಗ್ಯಕ್ಕಾ,
      ನೇಗಿಲಯೋಗಿ ಹೀ೦ಗೇ ಯೋಚನೆ ಮಾಡುಗು. ಚೆ೦ದದ ಕಲ್ಪನೆ.

    2. ಎರಡೂ ಲಾಯಿಕಿದ್ದು ಭಾಗ್ಯಕ್ಕ, ಆದರೂ ಶುರುವಾಣದ್ದಕ್ಕೆ ಜಾಸ್ತಿ ಮಾರ್ಕು.

      1. ನಿ೦ಗ ಹಾಕಿದ ಮಾರ್ಕಿನ ರಿಮಾರ್ಕು ಮಾಡಿಗೊನ್ದೆ ಮಾವ.

  13. ಆಕಾಶ ನೋಡೂ ಮುಗಿಲೋಡಿ ಬಂತೂ
    ನಾಕಾವೆ ಕಣ್ಮುಂದೆ ಕೊಣಿತ್ತ ಹಾಂಗೇ
    ಚೌಕಟ್ಟುಯಿಲ್ಲದ್ದ ನಭಕ್ಕೆಯೇರೀ
    ಜೋಕಾಲಿ ಕಟ್ಟೆಕ್ಕು ಬಲಾಹಕಕ್ಕೇ ॥

    ಬಲಾಹಕ = ಮೋಡ, ಮುಗಿಲು.

    1. ಅತ್ತೆ,

      ಅದ್ಭುತ ಕಲ್ಪನೆ.ಲಾಯ್ಕ ಇದ್ದು,ಬೇಲಿ ಇಲ್ಲದ್ದ ಆಕಾಶದ೦ಗಣ.

      1. ಜೋಕಾಲಿ ಕಟ್ಟುವ ಕಲ್ಪನೆ ಪಶ್ಟಾಯಿದು ಅತ್ತೆ.

        “ನಾಕಾವೆ” – ಹೇಳಿರೆ ಎಂತ ?

        1. ನಾಕ = ಸ್ವರ್ಗವ ರಾಗಲ್ಲಿ ಎಳದ್ದಾಗಿಕ್ಕನ್ನೆ..

  14. ಚಂದಪ್ಪ ಚಾಮೀ ಅದ ನೋಡು ಪುಟ್ಟೂ
    ಬೆನ್ನಿಂಗೆ ಹತ್ತೀ ನಿನ ಕೈಲಿ ಮುಟ್ಟೂ
    ಆಕಾಶ ನೋಡೂ ಮುಗಿಲೋಡಿ ಬಂತೂ
    ಓಡೋಡಿ ಹೋದಾ ಕಯಿ ಜೋರು ತಟ್ಟೂ /

    1. ಬಾಲಣ್ಣಾ.
      ಆದಿಪ್ರಾಸ ಬೇಕಾತು.ಹೀ೦ಗುದೆ ನಿ೦ಗಳ ಸಾಹಿತ್ಯ ಓದಲೆ ಕೊಶಿ ಆವುತ್ತು.

      1. ಹಾಂ.ಅದಪ್ಪಲ್ಲದಾ.ನೋಡುವ..

        1. ಬಾಲಣ್ಣ, ನಿಂಗಳ ಕಲ್ಪನೆಗೆ ಮೆಚ್ಚಿದೆ. ಒಪ್ಪ.
          ಆದಿ ಪ್ರಾಸವ ನೋಡಿಗೊಂಬಗ, ನಾಕನೆ ಸಾಲಿಲಿ ‘ಕೈ’ಯ ‘ಕಯಿ’ ಹೇಳಿ ಬಿದುಸಿದ್ದರನ್ನೆ, ಅದನ್ನೂ ನೋಡಿಗೊಳ್ಳಿ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×