Oppanna.com

ಸಮಸ್ಯೆ 50 : ಚಿತ್ರಕ್ಕೆ ಪದ್ಯ

ಬರದೋರು :   ಸಂಪಾದಕ°    on   05/10/2013    33 ಒಪ್ಪಂಗೊ

ಸಮಸ್ಯಾಪೂರಣದ ಸುವರ್ಣ ಮಹೋತ್ಸವಕ್ಕೆ ಸ್ವಾಗತ.
ಈ ಅ೦ಕಣಲ್ಲಿ ಪದ್ಯ ಬರೆತ್ತಾ ಇಪ್ಪ,ಪದ್ಯ೦ಗಳ ಓದಿ ಕೊಶಿಪಟ್ಟುಗೊ೦ಡಿಪ್ಪ ಬೈಲಿನ ನೆ೦ಟ್ರಿ೦ಗೆಲ್ಲಾ ಅಭಿನ೦ದನೆ.
ಇ೦ದ್ರಾಣ ಸಮಸ್ಯೆಗೆ ಅದಿತಿ ಅಕ್ಕ° ಹೊನ್ನ ಹರಳಿನ ಗುಡ್ಡೆಯ ಪಟ ತೆಗದು ಕಳುಸಿದ್ದವು . ಬೈಲಿನ ಕವಿಗಳ ಕಲ್ಪನೆಗೊ ಈ ಪರ್ವತಾರೋಹಣ ಮಾಡಲಿ,ಆಗದೋ?

ಹೊನ್ನ ಹರಳ ಗುಡ್ಡೆ ಹತ್ತುವ ಬನ್ನಿ
ಹೊನ್ನ ಹರಳ ಗುಡ್ಡೆ ಹತ್ತುವ ಬನ್ನಿ

33 thoughts on “ಸಮಸ್ಯೆ 50 : ಚಿತ್ರಕ್ಕೆ ಪದ್ಯ

  1. ಕಡು ಬೆಶಿಲಿನಾರ್ಭಟೆಗೆ ನೆಲವಿಡಿ
    ಸುಡುವ ಬಾಣಲೆಯಾದರೂ ನಾ
    ವ್ನೆಡದ ಹೆಜ್ಜೆಯ ಗುರ್ತ ನೆಗದೀ ಹೊಯ್ಗೆ ಮಾರ್ಗಲ್ಲಿ
    ಒಡೆಯ° ಬಗೆಬಗೆಲೆಳದು ಬಳ್ಳಿಲಿ
    ಬಡುದ ಪೆಟ್ಟಿನ ರಭಸಕಿ೦ದೆ
    ನ್ನೊಡಲ ನೀರಿನ ಕಡಲು ಕಣ್ಣಿಲಿ ‘ಓಯಸಿಸ’ವಾತೋ?

  2. ಒಂಟೆಯ ನಾಡಿಲಿ
    ತಂಟೆಯೆ ಬಾರದೆ
    ಗಂಟೆಯ ಕಳದೂ ಮುದದಲ್ಲಿ
    ನೆಂಟರ ಜೆತೆಲಿಯೆ
    ತುಂಟರು ಬಂದರೆ
    ಎಂಟೆದೆ ಬಂಟನ ಬಲವಲ್ಲಿ

  3. ಬೊಜ್ಜು ಬೆನ್ನಿಲಿ ದಾರಿ ಖರ್ಚಿಯು
    ಹೆಜ್ಜೆ ಒಂಟೆದು ಹೊಯಿಗೆ ಮಾರ್ಗಲಿ
    ಸಜ್ಜಿಲಿದ್ದರೆ ನೆತ್ತಿ ಬೆಶಿಲದು ನಡವ ದಾರಿಯಿಡಿ
    ರಜ್ಜ ದೂರಲಿ ಕಾಂಬ ಮೃಗಜಲ
    ಕುಬ್ಜರಕ್ಕದ ಬಚ್ಚಲಿಳುಶುವ
    ಮಜ್ಜನಂದಲೆ ಹೇಳಿ ಗ್ರೇಶಿರದುವೆ ಮರೀಚಿಕೆಯೊ

  4. ಹೊನ್ನ ಹರಳಿಲಿ ಕಣ್ಣು ಹೊರಳೊಗ
    ಳೆನ್ನ ಹೃದಯಕೆ ಕನ್ನ ಹಾಕಿದ
    ನೆನಪು ಜಾರಿತು ಹೆಜ್ಜೆ ಗುರುತಿನ ಹಾಂಗೆ ಬಾಲ್ಯಕ್ಕೆ
    ಚಿನ್ನದಾ ಬಣ್ಣಲ್ಲಿ ಹರಡಿದ
    ಭಾನು ಕಿರಣಕೆ ಕರಗಿತೆನ್ನೀ
    ಮನವು ಕನಸಿಲಿ ಕವನವುಕ್ಕುಗನ೦ತ ಪರದೆಯೊಳ
    ಅನ೦ತ ಪರದೆ =ಆಕಾಶ /ಮನಸ್ಸು
    ಭಾನು =ಸೂರ್ಯ

    1. ಮನಸಿನ ಕಡಲಿಲಿ, ಯಾವಾಗಳೂ ಪದ್ಯಗಳ ತೆರೆಗ ಉಕ್ಕಿ ಬತ್ತಾ ಇರಲಿ.
      ಮನಸ್ಸಿಗೆ ಅನ೦ತ ಪರದೆಯ ಹೋಲಿಕೆ ಅದ್ಭುತ.

  5. ಉಸುಕು ದಾರಿಲಿ ಜತೆಲಿಯೊಂಟೆಯು
    ನಸುಕಬೆಣಚಿಲಿ ಹಾದಿ ಹಿಡುದವು
    ಕಿಸೆಯ ತುಂಬುವ ದುಡಿಮೆಮಾಡುಲೆ ಭಾರ ಹೇರ್ಯೊಂಡು ।
    ಬೆಶಿಯ ಗಾಳಿಯು ಸುತ್ತಿ ಬೀಸೊಗ
    ಮಸುಳಿಹೋಕದ ಪಾದ ಗುರುತುಗೊ
    ಬಿಸಿಲುಗುದುರೆ ಭ್ರಾಂತಿ ಹುಟ್ಟುವ ಹೊಯಿಗೆರಾಶಿಯೊಳ ।।
    ಕಳೆದ ಬಾಲ್ಯದೊಳಾಟವಾಡಿದ
    ಹಳೆಯ ನೆನಪುಗೊ ಮತ್ತೆ ಬಂದವು
    ಹೊಳವ ಹರಳಿನ ಹೊನ್ನಗುಡ್ಡೆಯ ನೋಡಿಯಪ್ಪಾಗ ।
    ಹುಳುಕು ಮೂಡದ ಮುಗ್ದ ಮನಸಿಲಿ
    ಗೆಳೆಯರೆಲ್ಲರು ಕೂಡಿ ಹೋಪದು
    ಮಳಲರಾಶಿಲಿ ಬಿದ್ದು ಹೊಡೆಚುಲೆ, ಶಾಲೆ ಬಿಟ್ಟಿಕ್ಕಿ ।।

    1. ನಿ೦ಗಳ ಪದ್ಯ ಓದಿಯಪ್ಪಗ, ಮನೆಯ ಎದುರಣ ಹೊಯಿಗೆ ರಾಶಿಲಿ ಅಯಸ್ಕಾ೦ತ ಹಿಡಿಯುದು, ಹೊಯಿಗೆಲಿ ಮಾಟೆ ಮಾಡುದು ಎಲ್ಲ ನೆ೦ಪಾತು.
      ಪದ್ಯ ಲಾಯ್ಕಾಯ್ದು.

  6. ಒಂಟೆಯೊಪ್ಪ ಹೆಸರೆ ಮರುಭೂಮಿಯ ಹಡಗು
    ಹೊನ್ನ ಹರಳ ಗುಡ್ಡೆಲಿ ಸವಾರಿಯ ಬೆಡಗು
    ರಸ ಬಾಳೆಯ ತಿಂದನುಭವವನ್ನೆ ಕೊಡುಗು
    ಆದರೂ ಕೇಳ ಕಾಸಿಂತಿಷ್ಟೆ ಮಡುಗು

  7. ಕವನ ಬರವದೇ ತುಂಬಾ ಕಷ್ಟದ ವಿಚಾರ ,ಇನ್ನು ಅದರಲ್ಲೂ ಛಂದಸ್ಸಿಂಗೆ ಅನುಗುಣವಾಗಿ !ಇದು ನಮ್ಮಂದಾಗದ್ದದು ಹೇಳಿ ಕೈ ಬಿಟ್ಟಿದೆ!ಅದಕ್ಕೆ ಈ ಪುಟಕ್ಕೆ ಬಂದುಗೊಂಡೇ ಇತ್ತಿದಿಲ್ಲೆ!
    ಆದರೂ ಇಂದು ಕುತೂ ಹಲಲ್ಲಿ ನಿಲ್ಕಿ ನೋಡಿದೆ ,ಓದಿದೆ ಕೂಡಾ . ಇಲ್ಲಿಪ್ಪ ಕವಿತೆಗಳ ಓದಿ ಅಪ್ಪಗ ಬರವಲೆ ಅರಡಿಯದ್ದರೆ ಎಂತಾತು ಓದುಲೆ ಅರಡಿತ್ತನ್ನೆ ಪುಣ್ಯಕ್ಕೆ ಹೇಳಿ ಅನ್ಸಿತ್ತು .ಒಂದರಿನ್ನೊಂದು ಮೀರ್ಸಿ ರೈಸುತ್ತ ಇದ್ದು ಇಲ್ಲ್ಯಣ ರಚನೆಗ ,ಎಲ್ಲೋರಿಂಗುದೆ ಹೃತ್ಪೂರ್ವಕ ಅಭಿನಂದನೆಗ

  8. ಸಮಸ್ಯಾಪೂರಣದ ಪದ್ಯಂಗಳ ಓದುಲೆ ಭಾರೀ ಖುಶಿ ಆವ್ತು….ಸುವರ್ಣ ಸಂಭ್ರಮಕ್ಕೆ ಅಭಿನಂದನೆಗೊ..

  9. ಮಯನ ಸೃಷ್ಟಿಯ ಮೇಲೆ
    ಪಯವೂರಿ ಹೆರಟದೆ
    ಲ್ಲಿಯ ಸಂತೆಗೆಂತಮಾರಾಟಕ್ಕೆಯೊ?
    ಪಯಣಲ್ಲಿ ಬೇಡಾವ
    ಪಯವಿದಕೆ, ಸುಮ್ಮನೆಯೊ
    ‘ಹೊಯಿಗೆನಾಡಿನ ಹಡಗು’ ಬಿರುದಿಪ್ಪದು?
    ಪಯ= ಅಡಿ, ಪಾದ
    ಪಯ = ನೀರು, ಹಾಲು
    Reference : kanaja.in

    1. ಓಂಟೆಗೊಂದು ಬಿರುದು ಕೊಟ್ಟದು ಪಷ್ಟಿದ್ದು.

  10. ಬಿಕ್ಕಿದ್ದು ಲೆಕ್ಕವಿಲ್ಲದ್ದಷ್ಟು ಹೊಯಿಗೆ
    ಸಿಕ್ಕುಗೋ ಹೊನ್ನಿಲ್ಲಿ ಹುಡ್ಕಿರರೆಗಳಿಗೆ?
    ಒಂಟೆಗಳ ಮೇಲೆ ಹೊರಿಸಿಪ್ಪ ಬಟ್ಟೆಗಳ
    ಗಂಟಿಂದ ಮಾರಿ ಕರ್ಜೂರಹಣ್ಣುಗಳ
    ಕತ್ತಿಯನು ಹುಗ್ಗಿಸುತ ತಂದವಿನ್ನೆಂತ
    ಸುತ್ತಿದೆಲ್ಲಾ ನಾಡು ವಶಬಂತು ಸ್ವಂತ!
    ಎಲ್ಲಿಂದ ಬಂತೊ ಹೀಂಗೀ ಕಾರವಾನು?
    ಹೇಂಗೆ ನಡೆದತ್ತಿಲ್ಲಿ ಅವರ ಫರ್ಮಾನು?

    1. ಸಮಸ್ಯಾಪೂರಣದ ಸುವರ್ಣ ಸಮಸ್ಯೆಗೆ ಸ್ವರ್ಣದಾಂಗಿಪ್ಪ ಪೂರಣ ಗೋಪಾಲಣ್ಣ. ಅಭಿನಂದನೆಗೊ.

    2. ಪೂರಣ ರೈಸಿದ್ದು ಗೋಪಾಲಣ್ಣ.

  11. ಹೊನ್ನ ಹರಳಿನಾ ಗುಡ್ಡೆಯ
    ಬಿನ್ನಣ ಹೆಚ್ಚಾತು ಸೂರ್ಯಕಿರಣಂದಾಗೀ
    ಬನ್ನದ ಚಾರಣವೆ ಕೊಶಿಯು
    ಬನ್ನಣೆಗೆ ನಿಲುಕದನುಭವವೊಂಟೆ ಸವಾರೀ
    (ಬಿನ್ನಣ=ಸೊಬಗು,ಬನ್ನ=ಕಷ್ಟ,ಬನ್ನಣೆ=ವರ್ಣನೆ)

    1. ಕಂದ ಪದ್ಯ ಲಾಯಿಕ್ಕಾಯಿದು ಮಾವ.
      ಕಂದ ಪದ್ಯ ಚೆಂದ ಆಯೆಕ್ಕಾರೆ ಛಂದಸ್ಸು ಸರಿ ಇರೆಕ್ಕಡ.( ಹಾಂಗಾಗಿಯೆ ಬಹುಶಃ ಕಂದ ರಚನೆ ಭಾರೀ ಕಷ್ಟದ ಕೆಲಸ) ಅಕೇರಿಯಾಣ ಸಾಲಿಲಿ
      ಬನ್ನಣೆ।ಗೆ ನಿಲುಕ।ದನುಭವ।ವೊಂಟೆ ಸ।ವಾರೀ — ಇಲ್ಲಿ ಮೂರನೆ ಗಣ(ದನುಭವ) ಸರ್ವ ಲಘು ಆದ ಕಾರಣ, ಶುರುವಾಣ ಲಘುವಿನ ನಂತ್ರ ಯತಿ ಬರೆಕ್ಕಿತ್ತು, ಅಲ್ಲದೋ ಮಾವ.

      1. ನಿಂಗೊ ಹೇಳಿದ್ದದು ಸರಿ ತೆಕ್ಕುಂಜ ಮಾವ.ಆನು ಅದರ ಗಮನಿಸಿದ್ದಿಲ್ಲೆ.’ದನುಭವ’ದ ಬದಲಿಂಗೆ ‘ದ ಭಾವ’ಹೇಳಿ ಮಾಡಿರೆ ಸರಿ ಅಕ್ಕು ಹೇಳಿ ಕಾಣುತ್ತು. ಜಗಣ ಆವುತ್ತು.ಜಗಣಲ್ಲಿ ಯತಿ ಬಂದರೆ ತೊಂದರೆ ಇಲ್ಲೆನ್ನೆ?

        1. ಅಪ್ಪು, ಹಾಂಗಕ್ಕು.

  12. ನಭದ ನೀರವತೆಗೆ ಬೆಳದ ಬ೦ದನವಿದುವೋ?
    ಶುಭವ ಕೋರುವ ಹೊನ್ನ ಹರಳ ಕಲಶವೆಯೊ ?
    ಅಭಿನ೦ದನೀಯ ರಥಯಾತ್ರೆಗಿದು ಸಾಕ್ಷಿಯೋ ?
    ಅಭಯ ನೀಡುವ ಮರಳುಗಾಡಿನೊಂಟೆ ?
    ಅಭಿನ೦ದನೀಯ ರಥಯಾತ್ರೆ= ೫೦ ನೆಯೆ ಸಮಸ್ಯಾ ಪೂರಣ

    1. ಸುವರ್ಣ ಯಾತ್ರೆಯ ಯಾತ್ರಿಗೊಕ್ಕೆಲ್ಲ ಆಭಿನಂದನೆಗೊ.

      1. ವಿಷೇಶವಾಗಿ ಶೈಲಕ್ಕನ ನೆನಪಿಸಿಯೊ೦ಡು , ಎಲ್ಲೋರ ಪರವಾಗಿ ಧನ್ಯವಾದ೦ಗೊ ಮಾವ.

        1. ಭಾಗ್ಯಕ್ಕಾ…. ನವರಾತ್ರಿಲಿ ಮಗನ ಅಜ್ಜನ ಮನೆಲಿ ಕೂದ್ದಿದಾ…. ಬಂದು ನೋಡಿರೆ ಪೂರಣಂಗಳ ಹೂರಣದ ಹೋಳಿಗೆಂಗೊ….. ಎಲ್ಲವೂ ರೈಸಿದ್ದು…

  13. ಒಂಟೆಯ ಸ್ವಗತ
    ===================
    ದಿನವಿಡೀ ಬೆನ್ನಬಾದಿಯೆಳದೇ ಬಚ್ಚಿತ್ತು
    ಜನರ ಕೋಲಾಹಲಕೆ ಕೆಮಿಯು ಹೊಟ್ಟಿತ್ತು
    ಕನಸು ಕಾಂಬಲುದೆ ಪುರುಸೊತ್ತಿಲ್ಲೆ, ಈ ದಡ್ಡ
    ಮನುಜ ಎಂಗಳ ಬಿಡುಗೊ ಎಂದಾದರೂ?

    1. ಇರುಳೇ ಕನಸು ಕಂಡರಾತು.ಅಭಿವ್ಯಕ್ತಿ ಲಾಯ್ಕಾಯಿದು.

    2. ಸ್ವಗತ ಒಳ್ಳೆದಿದ್ದು. ಅಕೇರಿಯಾಣ ಎರಡು ಸಾಲು ಇನ್ನುದೇ ರಿಫೈನ್ ಆದರೆ ಮತ್ತೂ ಚೆಂದ ಅಕ್ಕು.

  14. ಸರಳ ರಗಳೆಲಿ ಒಂದು ಪ್ರಯತ್ನ-
    ಇಳಿಹೊತ್ತು ಚಾರಣದ ಗಮ್ಮತ್ತು ರಂಗಾಗಿ
    ಒಂಟಿತನ ದೂರಮಾಡಿದ್ದೊಂಟೆಯ ಸವಾರಿ
    ಹೊನ್ನ ರಾಶಿಗೆ ಕನ್ನ ಹಾಕಿದಷ್ಟು ಕೊಶಿಯೇ
    ಸುಳಿವ ಗಾಳಿಗಸ್ತಿತ್ವವೇ ಮರದತ್ತನ್ನೆ

    1. ಆ ಹೊಯಿಗೆ ರಾಶಿಯ ಹತ್ತಿಯಪ್ಪಗ ಇಪ್ಪ ಗಮ್ಮತ್ತು ಪದ್ಯಲ್ಲಿಯೂ ಇದ್ದು.

  15. ಮೊನ್ನೆ ಆ ಬೞಾರಿ ರೆಡ್ಡಿಗೊ
    ಕನ್ನ ಹಾಕಿದವಲ್ಲದೋ ಇಡಿ
    ಚಿನ್ನವಾ ಸಾಗುಸಿದವು ಅದಿರಿನ ಬೇಲಿಕೇರಿಂದ /
    ಮನ್ನೆಯರು ಎಂತೆಂತೊ ಕಳ್ಲುಗು
    ಇನ್ನಿದಾ ಈ ಹೊಡೆಲಿ ನೋಡುಗು
    ಹೊನ್ನ ಹರಳಿನ ಗುಡ್ಡೆ ಇದು! ಬರಿ ತೋರಿಕೆಯ ಮರಳೋ? /

    1. ಮೂರನೆಯ ಸಾಲು ‘ಚಿನ್ನವಾ ಸಾಗುಸಿದವದುರಿನ ಬೇಲಿಕೇರಿಂದ’ ಹೇಳಿ ಓದಿಯೊಳೆಕು.

      1. ಗಣಿಧಣಿಗಳ ಕಣ್ಣು ಬೀಳದ್ದರೆ ಸಾಕು ಇಲ್ಲಿಯೂ.
        ಲಾಯ್ಕದ ಕಲ್ಪನೆ ಮಾವ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×