Oppanna.com

ಸಮಸ್ಯೆ 66 : ಹೊಳೆ ಹರುದು ಪುತ್ತೂರ ಸೆಕೆ ತಗ್ಗುಗೋ?

ಬರದೋರು :   ಸಂಪಾದಕ°    on   26/04/2014    25 ಒಪ್ಪಂಗೊ

ಈ ವರ್ಷ ಪುತ್ತೂರಿನ ಸೆಕೆ ಊರವರ ನಡುಗಿಸಿದ್ದು ಹೇಳಿ ಸುದ್ದಿ.ಹಾ೦ಗಾರೆ  ನಮ್ಮ ಸಮಸ್ಯೆಯೂ ಇದೇ ಆಗೆಡದೋ?
ಕುಸುಮ ಷಟ್ಪದಿಲಿ ಇಪ್ಪ ಈ ಸಮಸ್ಯೆಗೆ ನಾಳೆ ಜೈನಭವನಲ್ಲಿ ಪರಿಹಾರ ಸಿಕ್ಕುಗೋ ಏನೋ? ಪೂರಣ ಇಲ್ಲಿ ಬರೆಯಿ . ಅಲ್ಲಿ ಕಾ೦ಬ,ಆಗದೋ?
 

“ಹೊಳೆ ಹರುದು ಪುತ್ತೂರ ಸೆಕೆ ತಗ್ಗುಗೋ?”

25 thoughts on “ಸಮಸ್ಯೆ 66 : ಹೊಳೆ ಹರುದು ಪುತ್ತೂರ ಸೆಕೆ ತಗ್ಗುಗೋ?

  1. ಒಳ ಸೇಡಿಯಾಪಜ್ಜ°
    ಇಳಿವಯಸಿಲಿದ್ದ ಬಗೆ
    ಯೊಳನೋಟ ವರ್ಣಿಸೊಗ ಕೊರ್ಗಿ ಮಾವ°
    ಹಳೆ ನೆ೦ಪುಗಳ ಕೇಳಿ
    ಇಳುದ ಕಣ್ಣಿನ ಧಾರೆ
    ಹೊಳೆ ಹರುದು ಪುತ್ತೂರ ಸೆಕೆ ತಗ್ಗುಗೋ?

  2. ಪುತ್ತೂರಿಲಿ ಮೊನ್ನೆ ತೆಂಕಣ ಗಾಳಿಯಾಟ ಹೇಳಿ ಅಪ್ಪಗ ಗುಡುಗಿತ್ತು.ಮತ್ತೆ ರಜ ಹೊತ್ತಿಲಿ ಮಳೆಯೂ ಬಂತು!

  3. *ಹಳುಗುತ್ತು ಭಾವಯ್ಯ
    ಕಳುದ ವರುಷಕ್ಕಿಂತ
    ಝಳ ಬೆಶಿಲ ಗಾವಿನ್ನು ಸಹಿಸಲೆಡಿಗೋ! /
    ಪಳುದ್ದೆ ಕುಡುದಷ್ತುದೆ
    ಇಳುದತ್ತು ಬೆಗರಾಗಿ
    ಹೊಳೆಯಾಗಿ ಹರುದತ್ತು ಧಾರೆ ಧಾರೇ/
    *ಹೊಳೆ ನೀರು ಒಣಗಿತ್ತು
    ಮಳೆ-ಗಾಳಿ ಕೊಂಡೋತೊ!
    ಇಳೆ ತಂಪು ಮಾಡುವುದು ಮಳೆಯಲ್ಲದೋ? /
    ಜಳ ಜಳನೆ ನೀರಾಗಿ
    ಮಳೆ ಸುರಿದು ಇಂದೀಗ
    ಹೊಳೆ ಹರುದು ಪುತ್ತೂರ ಸೆಕೆ ತಗ್ಗುಗೋ/
    *ಮಳೆ ಬಂತೊ! ಅಲ್ಲದೋ!
    ಸೆಳೆ ಮಿಂಚೆ ಹೊಳದತ್ತೊ!
    ಕಳೆ ಕಟ್ಟಿ ರಂಗಲ್ಲಿ ವಾಗ್ದೇವಿಯಾ-/
    ಹೊಳೆವ ಸಿರಿ ಕಂಠಂದ
    ಇಳುದಿಳುದ ಗಾನದಾ
    ಹೊಳೆ ಹರುದು ಪುತ್ತೂರ’ ಸೆಕೆ ‘ತಗ್ಗುಗೋ?/
    ( ಸೆಕೆ-ಇಲ್ಲಿ ಸೆಕೆಂದ ಆಸರು- ‘ಕಾವ್ಯ ದಾಹ ‘ ಹೇಳಿ ಅರ್ಠ ಮಾಡಿದರೆ ಅಕ್ಕೋ?)

    1. ರೈಸಿದ್ದು ಬಾಲಣ್ಣ ಮಾವ.
      (ಪಳುದ್ದೆ ಕುಡುದಷ್ತುದೆ) – ಇದು ಅರ್ಥ ಆತಿಲ್ಲೆ.ಜಗಣ ಕೂಡ ಆಯಿದು.
      ತೆ೦ಕಣ ಗಾಳಿಯಾಟದ “ದಡಕ್ಕೆ” ಯ ವ್ಯಾಖ್ಯಾನ ನೆನಪ್ಪಾತು.

      1. * ಹಳುಗುತ್ಸು= ಬೆಗರುತ್ಸು
        * ಪಳುದ್ದೆ = ಬೆಶಿನೀರು ಪಳುದ್ದೆ ಕುಡುದಷ್ತುದೆ. ( kududashtude ) (ಹಳುಗು ,ಪಳುದ್ದೆ… ಇತ್ಯಾದಿ ಶಬ್ದಂಗೊ ಹಳೆಯ ಅಜ್ಜಂದ್ರು ಉಪಯೋಗಿಸಿಂಡು ಇತ್ತಿದ್ದ ವು. ಈಗ ಬಳಕೆಲಿ ಅಷ್ತು ಕಾಣುತ್ತಿಲ್ಲೆ , ಹೀಂಗಿರ್ತ ಕೆಲವು ಶಬ್ದಂಗೊ ಮರೆಯಾಗಿ ಹೋವ್ತಾ ಇದ್ದು ,ಹೊಳ್ಲಚ್ಚು ಹೇಳಿರೆ ಗೊಂತಿದ್ದಾ ಮುಳಿಯದಣ್ಣಾ?

        1. ಹೊಳ್ಲಚ್ಚು – ಅರ್ಥ ಗೊ೦ತಿಲ್ಲೆ ಮಾವ.

        2. (hollachchu) ಹೊಳ್ಳಚ್ಚು = ಸೋಂಟೆ ,ಸೌದಿ ಕೊಳ್ಳಿ….(ಮಗಾ,ಒಲಗೆ ಎರಡು ಹೊಳ್ಳಚ್ಚು ತಂದು ಮಡುಗು)

    2. ”ಹಳಗುದು” ಹೇಳುದರ ಅರ್ಥದೆ ಕೊಟ್ಟಿಕ್ಕಿ ಬಾಲಣ್ಣ

      1. ಹಳುಗುದು=ಬೆಗರುದು

        1. ಧನ್ಯವಾದ ಗೋಪಾಲಣ್ಣ , ಬಾಲಣ್ಣ .

  4. ಸುಳಿವ ಗಾಳಿಲಿ ನಾದ
    ಮೊಳಗಿ ಮಳೆಮುತ್ತುದುರಿ
    ಹೊಳೆ ಹರುದು ಪುತ್ತೂರ ಸೆಖೆ ತಗ್ಗುಗೋ ?
    ತಿಳಿಯಾಗಿ ಬಾನೆಲ್ಲ
    ವುಲುದು ಹಕ್ಕಿಗೊ ಹಾರಿ
    ಹೊಳವ ಹೊಸತನಕೂರು ಗರಿ ಬಿಚ್ಚುಗೋ ?II
    ಹೊಸತನಕೆ +ಊರು = ಹೊಸತನಕೂರು

  5. ಪುತ್ತೂರಿನ ಜೈನ ಭವನಲ್ಲಿ ಒಪ್ಪಣ್ಣ ಒಪ್ಪಕ್ಕಂದ್ರ ಹೊಳೆ ಹರುದು “ಇಂದು ಸಾವಿರಾರು ಸಮಸ್ಯೆಗಳಿಂದ ಆಂತರಿಕ ಸೆಕೆ ಅನುಭವಿಸುತ್ತಾ ಇಪ್ಪ ಸಮಾಜ ಬಂಧುಗೊಕ್ಕೆ ಪರಿಹಾರ ಸಿಕ್ಕುವ ಹಾಂಗೆ ಆಗಲಿ” ಹೇಳುವ ಭಾವವ ಬರಹಕ್ಕೆ ಇಳಿಸುಲೆ ಎಷ್ಟರ ಮಟ್ಟಿ೦ಗೆ ಸಾಧ್ಯ ಆಯಿದು ಗೊಂತಿಲ್ಲೇ…ಪ್ರಯತ್ನವ ನಿಂಗಳ ಜೊತೆ ಹಂಚಿಗೊಳ್ಳುತ್ತಾ ಇದ್ದೆ…
    ಇಳೆಯ ಕಾವೇರಿದ್ದು
    ಮಳೆಯಿಲ್ಲೆ ಸೆಕೆಯಾವ್ತು
    ಕಳಕಳಿಲಿ ಬೇಡಿದರೆ ಮಳೆಯು ಬಕ್ಕೋ?
    ಕೊಳೆರೋಗ ಬೆಳೆನಾಶ
    ತಳವಾರ್ಲಿ ಗೋನಾಶ
    ಹೊಳೆ ಹರುದು ಪುತ್ತೂರ ಸೆಕೆ ತಗ್ಗುಗೋ?
    ಬಳೆಯಿಲ್ಲೆ ಬೊಟ್ಟಿಲ್ಲೆ
    ಕಳೆಯಿಲ್ಲೆ ಮೋರೆಲ್ಲಿ
    ಹಳೆ ಸಂಸ್ಕ್ರುತಿಯನು’ಮೋದಿ’ಸುವವಿಕ್ಕೋ?
    ಒಳಿತಿನೆಡೆ ಮುನ್ನಡೆವ
    ಸೆಳೆತಕ್ಕೆ ಸಿಗದವರ
    ಹೊಳೆ ಹರುದು ಪುತ್ತೂರ ಸೆಕೆ ತಗ್ಗುಗೋ?
    ಒಳವಿಪ್ಪ ಸಂತಾಪ
    ವಿಳಿಸಿದರೆ ಬರಹಕ್ಕೆ
    ಮಳೆ ಹಾಂಗೆ ಸುರಿಗದುದೆ ಬಯಿಲುತುಂಬ
    ಕಳೆ ಕಟ್ಟಿ ಗಾನಂದ
    ಪಳಗಿದಾ ತಂಡಂಗ
    ಹೊಳೆ ಹರುದು ಪುತ್ತೂರ ಸೆಕೆ ತಗ್ಗುಗೋ?
    ಒಳಿತಿನಾ ಸುಳಿವಿಲ್ಲೆ
    ಖಳರದ್ದೆ ಕಾರ್ಬಾರು
    ಬಳಬಳನೆ ಹೆರಬತ್ತು ನೊಂದಭಾವ|
    ಘಳಿಗೆಯೊಂದೆರಡರಲಿ
    ಮಿಳಿತ ನೂರುಮನಂಗ
    ಹೊಳೆ ಹರುದು ಪುತ್ತೂರ ಸೆಕೆ ತಗ್ಗುಗೋ?

    1. ಹಳೆ ಸಂಸ್ಕೃತಿಯನು’ಮೋದಿ’ಸುವವು ಇಕ್ಕೋ? – ಇಲ್ಲಿ ಮಾತ್ರಾದೋಷ ಇದ್ದು ಅಕ್ಕ.

      1. {ಹಳೆ ಸಂಸ್ಕೃತಿಯನು’ಮೋದಿ’ಸುವವು ಇಕ್ಕೋ? } [ಹಳೆ ಸಂಸ್ಕೃ|ತಿಯನು’ಮೋ|ದಿ’ಸುವವಿ|ಕ್ಕೋ?] ಹೇಳಿ ಸರಿಯಾವುತ್ತಿಲ್ಲೆಯ? ಗೊಂತಾವ್ತಿಲ್ಲೇ… ವಿವರುಸಿ ಹೇಳ್ತಿರ?

        1. ಹು.ಹು.. ಸರಿ ಇದ್ದನ್ನೆ.- ಹಳೆ ಸ೦ಸ್ಕೃತಿಯ ಅನುಮೋದಿಸುವವು ಇಕ್ಕೊ – ಆನು ಲೆಕ್ಕ ಮಾಡಿದ್ದಿಲ್ಲೆ,ಓದುಲೆ ಕಷ್ಟ ಆಗಿ ಸ೦ಶಯ ಬ೦ತು.
          ಲಾಯ್ಕ ಆಯಿದು ಕಲ್ಪನೆ.

    2. ಜಯಶ್ರೀ ಅಕ್ಕ, ಅಪರೂಪಕ್ಕೆ ಬಂದದಾದರೂ ಕವನಂಗಳ ಸುರಿಮಳೆಲಿ ಹೊಳೆಹರುಶಿ ಪುತ್ತೂರಿನ ಸೆಕೆ ತಗ್ಗುಸಿದ್ದು ಫಶ್ಟಾಯಿದು.

  6. ಕೆಳಪರ್ಕಳದ ನೀರ
    ಸೆಲೆಯು ಪುತ್ತೂರಿಲೂ
    ಹೊಳೆದು ತೋರಿರೆ ಬೆಶಿಲ ಖಾರದೆಡೆಯೂ
    ಇಳಿಯ ಖಂಡಿತ , ಬಾನ
    ತಿಳಿಮುಗಿಲು ಕಪ್ಪಾಗಿ
    ಹೊಳೆ ಹರಿದು ಪುತ್ತೂರ ಸೆಕೆ ತಗ್ಗುಗೊ?

    1. ಗೋಪಾಲಣ್ಣನ ನಿನ್ನೆ ಕ೦ಡು ಕೊಶಿಯಾತು. ಭಾರೀ ಲಾಯ್ಕ ಆಯಿದು ಈ ಕಲ್ಪನೆ.

  7. ಬೆಳಿಬಾನ ಸಾಮ್ರಾಜ್ಯ
    ದೊಳ ರವಿಯ ಕಾರ್ಬಾರು
    ಬಳಬಳನೆ ಅರುದತ್ತು ಬೆಗರಧಾರೆ ।
    ಇಳೆಯೆಡೆಗೆ ಸೊಯ್ಪಿದರೆ
    ಮಳೆ ಮೋಡ ದಟ್ಟೈಸಿ
    ಹೊಳೆ ಹರುದು ಪುತ್ತೂರ ಸೆಕೆ ತಗ್ಗುಗೋ

    1. ಎರಡು ದಿನ೦ದ ಸೊಯ್ಪುತ್ತಾ ಇದ್ದಲ್ಲದೋ ಅತ್ತೆ ? ಲಾಯ್ಕ ಆಯಿದು.

  8. ಬಳಬಳನೆ ಬೆಗರನೀ-
    ರಿಳಿತ್ತು ಬೆಶಿಲಿಂಗೇ
    ಹೊಳೆ ಹರುದು ಪುತ್ತೂರ ಸೆಕೆ ತಗ್ಗುಗೋ?
    ಮಳೆ ಬಂದರೆ ಮಾಂತ್ರವೆ
    ಇಳೆಯ ತಾಪ ತಗ್ಗುಗು
    ಒಳಿಗು ರಜ ಆದರೂ ಬಪ್ಪದಕ್ಕೇ

    1. ಮಾವಾ,
      ನಿನ್ನೆ ಕ೦ಡು ಮಾತಾಡಿ ಕೊಶಿಯಾತು.
      ನಿ೦ಗಳ ಪರಿಹಾರ ಲಾಯ್ಕ ಆಯಿದು,ಆದರೆ ಸಣ್ಣ ಮಾತ್ರಾದೋಷ೦ಗೊ ಕಾಣುತ್ತು.ಹೀ೦ಗೆ ಸರಿ ಮಾಡುಲಕ್ಕು.
      ಬಳಬಳನೆ ಬೆಗರನೀ-
      ರಿಳುದು ಕಡು ಬೆಶಿಲಿಂಗೆ
      ಹೊಳೆ ಹರುದು ಪುತ್ತೂರ ಸೆಕೆ ತಗ್ಗುಗೋ?
      ಮಳೆ ಬಂದು ಜೆಪ್ಪಿದರೆ
      ಇಳೆಯ ತಾಪ ತಗ್ಗಿ
      ಒಳಿಗು ರಜವಾದರೂ ಬಪ್ಪದಕ್ಕೇ

      1. ಇಳೆಯ ತಾಪವು ತಗ್ಗಿ – ಹೇಳಿ ಆಯೆಕ್ಕು,ಐದನೆ ಸಾಲು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×