Oppanna.com

ಸಮಸ್ಯೆ 68 : ಬೇಸಗೆಯೋಡುಸಿ ಮಳೆ ಬ೦ತು

ಬರದೋರು :   ಸಂಪಾದಕ°    on   10/05/2014    24 ಒಪ್ಪಂಗೊ

24 thoughts on “ಸಮಸ್ಯೆ 68 : ಬೇಸಗೆಯೋಡುಸಿ ಮಳೆ ಬ೦ತು

  1. ಆಸೆಯಪಟ್ಟನು
    ಹಾಸನದಜ್ಜನು
    ಕೂಸಿನ ಕೂರ್ಸುಲೆ ಪಟ್ಟದೊಳ
    ರೈಸಿದ ತಾವರೆ
    ಬೀಸಿದ ಗಾಳಿಗೆ
    ಬೇಸಗೆಯೋಡಿಸಿ ಮಳೆ ಬಂತು

  2. ಆಸನ ಸಿಕ್ಕಿತು
    ಕಾಶಿಯ ಸಭೆಯೊಳ
    ಕಾಸಿನ ಹಂಚದೆ ಜನರೊಳವೇ
    ಆಸೆಯು ಹುಟ್ಟಿತು
    ದೇಶದ ಏಳ್ಗೆಗೆ
    ಬೇಸಗೆಯೋಡಿಸಿ ಮಳೆ ಬಂತು

  3. ಆನು ಇಂದೇ ನೋಡಿದ್ದು,ಬೈಲಿಂಗೆ ಬಾರದ್ದೆ ವಾರ ಎರಡಾತಿದ.
    ಪದ್ಯಂಗೊ ಎಲ್ಲವೂ ರೈಸಿದ್ದು.

  4. ಬಾಸಿ೦ಗವೊ! ಮು೦
    ಡಾಸೋ! ತೆರೆ ಹಿಡಿ
    ದಾ ಸೋದರಮಾವನ ಕೈಯೋ?I
    ಆಸೆಯ ಕಣ್ಣಿಲಿ
    ಕೂಸಿನ ನೋಡೊಗ
    ಬೇಸಗೆಯೋಡಿಸಿ ಮಳೆ ಬಂತು II
    ( ಆದಿಪ್ರಾಸ ಗುರು – ಲಘು ಆದ್ದದೊ೦ದು ಕೊರತೆ.)

  5. ಉಮ್ಮಾ… ಮಾತ್ರೆ ಲೆಕ್ಕ, ಹಾಳಿತ ಅಂದಾಜಿ ಎಲ್ಲ ಎನಗಿಲ್ಲೆ. ಅಂದರೂ ಇಲ್ಲಿ ಬಂದು ಇಲ್ಲ್ಯಾಣ ಕವಿಗಳ ಉತ್ಸಾಹವ ಮತ್ತೆ ಕವಿತೆಗಳ ನೋಡಿ ಹಲ್ಲುಕಿಸಿತ್ತ ಇದ್ದೆ ಹೇದು ಒಂದೊಪ್ಪ 😀

  6. ಶೈಲಕ್ಕನ ಪದ್ಯ ರಜ್ಜ ಬದಲಿಸಿ —
    ಸಾಸಿನ ಸೇರುಸಿ
    ದೋಸೆಯ ತಿ೦ಬಗ
    ಬೀಸಿದ ಗಾಳಿಗೆ ತ೦ಪಾತು I
    ಗ್ಲಾಸಿನ ಹಿಡುದೂ
    ಜೂಸಿನ ಎರವಗ
    ಬೇಸಗೆಯೋಡಿಸಿ ಮಳೆ ಬಂತು II
    ಸಾಸು =sauce

  7. ವರುಣನ ಕಣ್ಣುಮುಚ್ಚಾಲೆ
    ————————
    ಆಸೆಯ ತೋರುಸಿ
    ಮೀಸೆಯ ತಿರ್ಪಿದ
    ಬೇಸಗೆಯೋಡುಸಿ ಮಳೆ ಬಂತು
    ಮೋಸದ ವರುಣನ
    ಕಾಸಿನ ಮಜ್ಜಿಗೆ
    ಬೂಸಿನ ಗೌಜಿಯೆ ಜೋರಾತು
    (ಬೂಸು=ಊಟ)

    1. ಲಾಯ್ಕ ಆಯಿದು ಮಾವ. ಮಳೆ ಹೋಗಿ ಸೆಕೆ ಬ೦ತೋ ?

  8. ಆಸರ ದೊ೦ಡೆಲಿ
    ಮೀಸೆಯ ಉದ್ದಿದೆ
    ಬೀಸಣಿಗೆಯ ಬೀಸಿದೆ ಇರುಳುI
    ಹಾಸಿಗೆಲಿದ್ದರೆ
    ಮೋಸವೆ ಹೇಳೊಗ
    ಬೇಸಿಗೆಯೋಡುಸಿ ಮಳೆ ಬ೦ತುII

  9. ಪ್ರಾಸಕ್ಕಾಗಿ ಕೆಲವು ಕನ್ನಡ ಶಬ್ದ ತೆಕ್ಕೊಳೆಕ್ಕಾತು. ಃ-(
    ನೇಸರ ಭೂಮಿಗೆ
    ಬೀಸಿದ ಬಾಣಕೆ
    ಕಾಸಿದ ಕಬ್ಬಿಣ ನೆಲವಾತು
    ಆಸರು ತಣಿಶುಲೆ
    ಸಾಸಿರ ಜೀವದ
    ಬೇಸಗೆಯೋಡಿಸಿ ಮಳೆ ಬ೦ತು

    1. ಅದಿತಿ ಅಕ್ಕನೂ, ಇ೦ದಿರತ್ತೆಯೂ ಬೇಸಗೆ ಮಳೆಯ ಹಾ೦ಗೆ ಅಪರೂಪವೆ ಃ-(

    2. ಸೂರ್ಯನ ಕಿರಣ ಬಾಣಕ್ಕೆ ನೆಲ ಕಾಸಿದ ಕಬ್ಬಿಣವಾತು ..
      ಒಳ್ಳೆ ಉಪಮೆ ಅಕ್ಕ.

  10. ಅಮ್ಮ೦ದ್ರು, ಅಜ್ಜಿಯಕ್ಕೊ ಹಪ್ಪಳ ಮಾಡುವ ಗೌಜಿ (ಅಮ್ಮಂದ್ರ ದಿನಾಚರಣೆಗೆ ಹೀ೦ಗೊಂದು ನೆನಪ್ಪು )
    ಕಾಸಿದ ಸೊಳೆಯಾ
    ಬೀಸವೆ ಕಡದೂ
    ಕೈಸಾಲೆ೦ದಾ ಹಸೆ ತಂದಾ I
    ಹಾಸಲೆ ಹಸೆಲೀ
    ಕೂಸದು ಸೇರೊಗ
    ಬೇಸಗೆಯೋಡಿಸಿ ಮಳೆ ಬಂತು II

    1. ಹಪ್ಪಳಕ್ಕೆ ನೀರಾದ್ದು ಪಷ್ಟಾಯಿದು ಭಾಗ್ಯಕ್ಕ.. 🙂

  11. ಜೂಸಿನ ಕುಪ್ಪಿಗೊ
    ಬೀಸಕೆ ಫೇನುಗೊ
    ಬೋಸನ ಬೆಗರಿಲಿ ಬೊಡುದಾಗಿ
    ದೋಸೆಯ ಕರುಕುರು
    ಹಾಸಿಗೆಲೊರಗುಲೆ
    ಬೇಸಿಗೆಯೋಡುಸಿ ಮಳೆ ಬ೦ತು 🙂 🙂

    1. ಕಡಮ್ಮೆ ಶಬ್ದಲ್ಲಿ ಪೂರ್ತಿ ಅರ್ಥ ಬಪ್ಪಲೆ ಕಷ್ಟವೇ..(ದೋಸೆಯ ಕರುಕುರು
      ಹಾಸಿಗೆಲೊರಗುಲೆ) ಅರ್ಥ ಪೂರ್ತಿ ಬಯಿ೦ದಿಲ್ಲೆ ಶೈಲಜಕ್ಕ.

      1. ಅದಪ್ಪು. ಅಣ್ಣ…. ಮಾತ್ರೆಗೊ ಕಮ್ಮಿ ಆಗಿ ಹೆಚ್ಚು ವಿಷಯ ತಕ್ಕೊಂಡ್ರೆ ಹೀಂಗಾವ್ತು…

  12. ಭಾಷಣ ಬಿಗುದೇ
    ಘೋಷಣೆ ಕೂಗೊಗ
    ಬೇಸಗೆಯೋಡಿಸಿ ಮಳೆ ಬಂತು II
    ಮಾಸಿದ ಕೆರೆಗಳ
    ಹೇಸಿಗೆ ತೆಗದರೆ
    ದೋಷವೆ ಕಾಣದ ನೀರಿಕ್ಕು II
    ರಾಜ ಕಾರಣಿಗ ಮಾಡುವ ಕೆಲಸಕ್ಕೂ ಹೇಳುವ ಮಾತಿ೦ಗು ಸಂಬಧ ಇಲ್ಲೆ ಹೇಳುವ ಅರ್ಥಲ್ಲಿ

    1. ಹ್ಮ್.. ಲಾಯ್ಕ ಆಯಿದು.
      ಬೇಸಗೆ ಅಲ್ಲಿಯೇ ಬಾಕಿ ಹಾ೦ಗಾರೆ.

    2. ಆದಿಪ್ರಾಸ ರಜಾ ಬದಲು ಕಾಣುತ್ತು,ಎರಡರಲ್ಲೂ..ದೋಷ ಅಲ್ಲದ್ದರೂ..

  13. ವಾಸದ ಇಳೆಯ
    ತ್ರಾಸವ ನೋಡೊಗ
    ಕಾಸಿದ ಕಬ್ಬಿಣದಾ೦ಗಿತ್ತು I
    ದಾಸರು ಹಾಡೊಗ
    ತೋಷಲ್ಲಾ ಕಡು
    ಬೇಸಗೆಯೋಡಿಸಿ ಮಳೆ ಬಂತು II
    ದಾಸರು =ಭಕ್ತರು (ಮೊನ್ನೆ ಕಾರ್ಯಕ್ರಮದ ದಿನ ಮಳೆ ಬಂದದಕ್ಕೆ)

    1. ಮೊನ್ನೆ ಬೈಲಿನ ಕಾರ್ಯಕ್ರಮಲ್ಲಿ ”ತೆ೦ಕಣ ಗಾಳಿಯಾಟ ” ದ ಮಧ್ಯೆ ಮಳೆ ಸೊಯ್ಪಿತ್ತು..ಇಲ್ಲಿ ರೈಸಿತ್ತು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×