Oppanna.com

ಸಮಸ್ಯೆ 74 : ಹೊಸ ತೋಟವ ನೋಡುವ ಬನ್ನಿ

ಬರದೋರು :   ಸಂಪಾದಕ°    on   12/07/2014    28 ಒಪ್ಪಂಗೊ

ಈ ವಾರ ಶರ ಷಟ್ಪದಿಲಿ ಸಮಸ್ಯೆ:

  ಹೊಸ ತೋಟವ ನೋಡುವ ಬನ್ನಿ

ಹವ್ಯಕರ ಮೂಲ ಕಸುಬು ಆದ ತೋಟ ಕೃಷಿ ಒಳಿಯಲಿ ,ಬೆಳೆಯಲಿ  ಹೇಳ್ತದು ಬೈಲಿನ ಹಾರೈಕೆ .

28 thoughts on “ಸಮಸ್ಯೆ 74 : ಹೊಸ ತೋಟವ ನೋಡುವ ಬನ್ನಿ

  1. ತೆಂಗಿನ ಕಂಗಿನ
    ಬಾಳೆಯ ತೋಟ
    ಭತ್ತದ ಗೆದ್ದೆಯ ಚೆಂದವ ನೋಡಿ|
    ಪೇಟೇಲಿ ಇಲ್ಲೇ
    ಈ ನಾಟಿಯು ವಿಧ-ವಿಧ
    ಹಸಿ-ಹಸಿ ಚೆಂದವ ನೋಡ್ಳೆ ಬನ್ನಿ||
    (ನಿನ್ನೆ ರಜ ಬರ್ಕ್ಕೊಂಡಿದ್ದ ಹಾಂಗೆ ಕರೆಂಟು ಹೋತಿದ .ಅಲ್ಲಿಗೇ ಒಪ್ಪ ಕೊಟ್ಟಿಕ್ಕಿ ಮಡಗಿದೆ.)

  2. ತೆಂಗಿನ ಕಂಗಿನ
    ಭತ್ತದ ಕೃಷಿಯ
    ಬಾಳೆಯತೋಟವ ಚೆಂದವನೋಡಿ |
    ಪೇಟೇಲಿ ಇಲ್ಲೇ
    ಈ ನಾಟಿಯು ವಿಧ-ವಿಧ
    ಹಸುರುಟ್ಟ ಧರಣಿ
    ಹಸಿ-ಹಸಿ ಚೆಂದವ ನೋಡ್ಳೆ ಬನ್ನಿ ||

  3. ನೆಟ್ಟಿ ಕೃಷಿ
    ಬಸಳೆಯ,ಬೆಂಡೆಯ
    ಕೆಸವಿನ,ಕೇನೆಯ
    ಫಸಲಿನ ನೆಟ್ಟಿಯ ವಿಧವಿಧವು |
    ಹಸನಿಲಿ ಬೆಳಶಿದ
    ಹೊಸಮನೆ ಸವಿತನ
    ಹೊಸ ತೋಟವ ನೋಡುವ ಬನ್ನಿ ||
    (ನೆಟ್ಟಿ=ತರಕಾರಿ,ಹಸನಿಲಿ=ಚೆಂದಕೆ )

    1. ಏತಡ್ಕ ಮಾವಾ , ಈ ಸರ್ತಿ ತರಕಾರಿಗೆ ಕ್ರಯ ವಿಪರೀತ. ಹೊಸತೋಟಲ್ಲಿ ಇಷ್ಟು ಬಗೆ ನೆಟ್ಟ ಕಾರಣ ಬಚಾವ್ .. ಲಾಯ್ಕ ಆತು .

      1. ಅಂತೂ ಸಮಸ್ಯೆ ಜ್ವಲಂತ ಹೇಳಿ ಆತು.ಪರಿಹಾರವೂ ನಮ್ಮಲ್ಲಿಯೇ ಇದ್ದನ್ನೆ.ಧನ್ಯವಾದ.

  4. ವಸುಮತಿ ಸುತ್ತಿತು
    ಹಸುರಿನ ಸೀರೆಯ
    ಕೊಷಿಯಿಂದಲೆ ಮಳೆ ಬಪ್ಪಾಗ |
    ನಸುಬೆಷಿಲಿಪ್ಪಗ
    ಸೆಸಿಗಳ ಸಡಗರ
    ಹೊಸ ತೋಟಲಿ ನೋಡುವ ಬನ್ನಿ ||

    1. ಇ೦ದಿರತ್ತೆ , ಒಳ್ಳೆ ರೂಪಕ . ಪಟ್ಟೆ ಸೀರೆಯೋ ?

  5. ಭಾಗ್ಯಕ್ಕಾ … ಅಪ್ಪಟ ಪದ್ಯ .. ಕೊಶಿಲಿ ಎಂತ ಹೇಳೆಕ್ಕು ಗೊಂತಾತಿಲ್ಲೆ..

    ಅಕ್ಕೆರ್ ಪಂಡಿನ
    ಸಕ್ಕರೆ ಪದ್ಯೊನು
    ತೆಕ್ಕರೆ ತಿಂದ್ ದ್ ಪಂಡೊ೦ದು
    ಪಕ್ಕ ಪಿದಡ್ ನಗ
    ತಿಕ್ಕಿನ ಜೋಕುಳು
    ಮಕ್ಕರ್ ಮಾಳ್ಪುನೆ ದಾಯೆಗ್ ಯೇ ?

    1. ಅಣ್ಣೆರ್ , ಬಟ್ಯನ ಪದ್ಯ ಬರೆಯಿನ ಎಡ್ಡೆ ಆತ್oಡ್
      .
      ಆನು ಬರದಪ್ಪಗ, ತುಳು ಭಾಷೆ ಅಕ್ಷರ ವೃತ್ತಕ್ಕೆ ಚೆಂದ ಹೊಂದಿಕೆ ಅಕ್ಕೋ ಹೇಳಿ ಅನ್ಸಿತ್ತು .

    2. ಹವ್ಯಕ ಪದ್ಯಂಗಳ ಎಡಕ್ಕಿಲ್ಲಿ ಮುಳಿಯದಣ್ಣನ ತುಳು ಪದ್ಯವುದೆ ರೈಸಿದ್ದು. ಬಯಲಿಲ್ಲಿ ಹೊಸ ತೋಟಲ್ಲಿ ಬಗೆ ಬಗೆಯ ಪದ್ಯಂಗಳ ಓದಿ ಕೊಶಿಯಾತು.

  6. ”ಕೆಲಸದವು ಕಾಣವು ”ಬಟ್ಯ ಸುಮ್ಮನೆ ಕೂರುಗೋ ? . ಆಟಿ ತಿಂಗಳ ಭಯಂಕರ ಮಳಗೆ ಗಸಣಿ ದಾರಿ ಇಡಿಕ ಒಸರಾಗಿ ಜರುದು ಬಿದ್ದು, ಸಂಕ ಬೆಳ್ಳಕ್ಕೆ ಹೋಯಿದು . ದೂರದ ದಾರಿ ಹಿಡುದು ಬರೆಕ್ಕಾರೆ ಎನಗೆ ಅಸಲಾಗ ( ಕಷ್ಟ ಆವುತ್ತು) ಹೇಳುದು ಬಟ್ಯನ ಸಮಜಾಯಿಷಿ .

    ಒಸರಾತಾಟಿದ
    ಗಸಣಿತ ಸಾದಿಡ್
    ಪೊಸ ಸಂಕೊಲ ಬೊಳ್ಳಡೆ ಪೋ೦ಡು I
    ಅಸಲಾವಂದೀ
    ಕುಸೆಲುತ ಬರ್ಸಗ್
    ಪೊಸ ತೋಟನು ಸೂಯರ ಪೋ೦ಡ II

    1. ಭಾಗ್ಯಕ್ಕ , ಭಾರಿ ಭಾರಿ ಲಾಯ್ಕಾಯಿದು ಬಟ್ಯನ ಸ್ವಗತ.

  7. ಕೆಸರಾದರೆ ಕೈ
    ಮೊಸರಕ್ಕದ ಬಾಯ್
    ಅಸಬಡುದರು ನೆಮ್ಮದಿಯಿದ್ದು
    ನುಸಿಪೆಟ್ಟಿಕ್ಕು ಕೆ
    ಲಸದವು ಕಾಣವು
    ಹೊಸತೋಟವ ನೋಡುವ ಬನ್ನಿ

  8. ನಸು ಕೇಸರಿಯಾ
    ಕಶಿ ದಾಸನವಿದು
    ಹೊಸ ಹೂಗಿನ ಬಿಟ್ಟಿದು ನೋಡಿ I
    ಕೆಸರಿನಕೆರೆ ಬೆಳಿ-
    ಯೆಸಳಿನ ಕಮಲದ
    ಹೊಸ ತೋಟವ ನೋಡುವ ಬನ್ನಿ II

    ಬೆಳಿ ಎಸಳಿನ ಕಮಲ =ನೈದಿಲೆ (ಇರುಳು ಅರಳುವ ಹೂಗು ಬೆಳಿಯೆ +ಒಳ್ಳೆ ಪರಿಮಳ ಇರ್ತು; ಕೀಟ೦ದ ಪರಾಗ ಸ್ಪರ್ಶ ಅಪ್ಪಲೆ ಬೇಕಾಗಿ )

  9. ಮಸದೇ ಮಡುಗಿದ
    ಹೊಸ ಕತ್ತಿಲಿಯೇ
    ಕಸವಿನ ಕೂಡಲೆ ಹೋಯೆಕ್ಕು I
    ಕೆಸರಿನ ಮಣ್ಣಿಲಿ
    ಹಸುರಾಗಿಪ್ಪಾ
    ಹೊಸ ತೋಟವ ನೋಡುಲೆ ಬನ್ನಿ II

  10. ಒಸರುದೆ ಸಿಕ್ಕಿತು
    ಹಿಸ್ಸೆಯ ಭೂಮಿಲಿ
    ಸೆಸಿಗಳ ನೆಟ್ಟಿದೆ ಹುರುಪಿಂದ |
    ಹಸುರೆಲೆ ಸಂಪದ
    ಪಸರುಗು ಸಂಭ್ರಮ
    ಹೊಸ ತೋಟವ ನೋಡುವ, ಬನ್ನಿ ||

    1. ಹಿಸ್ಸೆ ಹೇಳಿರೆ ಪಾಲು ಅಲ್ಲದೋ ಅತ್ತೆ? ಗುರು ಆದ ಕಾರಣ ಸಣ್ಣ ಲೋಪ ಆದರೂ ಲಾಯ್ಕ ಇದ್ದು .

  11. ಹೊಸ ಮನೆ ಕಟ್ಟಿದ ಅತ್ತೆ ಮನಗೆ ಬಂದ ನೆಂಟ್ರತ್ತರೆ ಪಾತ್ರ ತೊಳದಿಕ್ಕಿ , ಮತ್ತೆ ಹೂಗಿನ ತೋಟ ತೋರ್ಸುತ್ತೆ ಹೇಳುದು 🙂

    ಗಸಿ ಮಾಡಿದಯೀ
    ಮಸಿ ಹಿಡುದಳಗೆಯ
    ಹಸಿ ಕಾಯಿಯ ಕೂರಿಲಿ ತಿಕ್ಕಿI
    ಹೊಸ ಜಾಲಿನ ಕರೆ
    ರಸಮಯ ಹೂಗಿನ
    ಹೊಸ ತೋಟವ ನೋಡುವ ಬನ್ನಿ II

    1. ಹೊಸ ಮನೆ ಕರೆಲಿ ಹೊಸ ತೋಟ .. ಲಾಯಕ ಆಯಿದು ಭಾಗ್ಯಕ್ಕ .

  12. ಅರಳಿದ ತೋಟ
    ಅಸಲಾಗದ್ದರು
    ಹೊಸಹೊಸ ಯೋಜನೆ
    ರಸಗೊಬ್ಬರ ಹಾಕದ್ದೆ ಕಸಿ-
    ಸೆಸಿಗಳ ನೆಟ್ಟಿದ
    ನಸುಕಿಲ್ಲರಳಿದ
    ಹೊಸ ತೋಟವ ನೋಡುವ ಬನ್ನಿ

    1. ಮಾವಾ ,
      ಲಾಯಕ ಆಯಿದು . ಮೂರನೇ ಸಾಲಿನ ಅಂತ್ಯ ಮತ್ತೆ ನಾಲ್ಕನೇ ಸಾಲಿನ ಆದಿಯ ನೆಡುಕೆ ಸಂಬಂಧ ಇಲ್ಲದ್ದರೆ ಒಳ್ಳೇದೋ ಹೇಳಿ ಕಾಣುತ್ತು.

  13. ಮನಸಿನ ಕನಸಿನ
    ಕನಸಿನ ನನಸಿನ
    ವನಸಿರಿ ಈ ಹೊಸತೋಟ|
    ದಿನದಿನ ದುಡುದ್ದರ
    ಗೆನ ಪ್ರತಿಫಲವೇ
    ಮನ ಗೆಲ್ಲುವ ಈ ನೋಟ |

    ಅವಿನಾ ಭಾವದ
    ಅನನ್ಯ ರೀತಿಯ
    ದಿನಚರಿ ಅಡಕೆಯ ಕೃಷಿಯೇ|
    ಅನೂಚಾನದ
    ಅನುದಿನ ಬೆಸೆದಾ
    ಅನುವಂಶೀಯದ ಖುಷಿಯೇ|

    ಗುಡ್ಡೆಯ ಹರಗೀ
    ಒಡ್ಡಿನ ನೀರಿಲಿ
    ಮಾಡಿದ ಈತೋಟ |
    ಗೆಡುಗಳ ನೆಟ್ಟು
    ಬುಡಕ್ಕೆಲ್ಲ ಕೊಟ್ಟು
    ಜಡವಿಲ್ಲದ್ದೊಡನಾಟ|

    ಮಾಡುವ ಬನ್ನಿ
    ಕೂಡಿ ಒಟ್ಟಿಂಗೆ
    ಕಡೆಗಣಿಸಡಿ ಈ ಕೃಷಿಯಾ|
    ಕೊಡಿ ಕೂಸುಗಳ
    ತಡ ಮಾಡದ್ದೆ|
    ಬಿಡಿ ಪೇಟೆಯ ಮೋಹ|

    1. ಆಶಕ್ಕಾ ,
      ಒಳ್ಳೆ ಆಶಯದ ಕವನಕ್ಕೆ ಅಭಿನಂದನೆ . ನಿಂಗಳ ಮಾಹಿತಿಗೆ – ಭಾಗ್ಯಕ್ಕ ಮೊನ್ನೆ ಹೇಳಿದ ಪದ್ಯಪಾನ ದ ಪಾಠ ಅಲ್ಲದ್ದೆ , ನಮ್ಮ ಬೈಲಿಲಿ ಒಪ್ಪಣ್ಣ ಬರದ ಶುದ್ದಿ ಛಂದಸ್ಸುಗಳ ಮತ್ತೆ ನೆನಪ್ಪು ಮಾಡಿಗೊ೦ಬಲೆ ಸಹಕಾರಿ ಅಕ್ಕು . ನಿಂಗಳ ರಚನೆ ಶರ ಷಟ್ಪದಿ ಛಂದಸ್ಸಿಂಗೆ ತುಂಬಾ ಹತ್ತರೆ ಇದ್ದು . ಮೂರನೇ ಮತ್ತೆ ಆರನೇ ಸಾಲುಗಳ ಮಾತ್ರೆಗಳ ರಜಾ ಹೆಚ್ಚು ಮಾಡಿರೆ ಆತು ಉದಾ : ವನಸಿರಿ/ ಯೇ ಈ / ಹೊಸತೋಟ .ನಮ್ಮ ಭಾಷೇಲಿ ಅನುಕೂಲಕ್ಕಾಗಿ ವಿಸಂಧಿ ದೋಷದ ನಿಯಮವ ಸಡಿಲು ಮಾಡಿದ್ದು .
      ಇನ್ನು , ಅವಿನಾಭಾವವ ಹೇಳುವ ಸಾಲಿಲಿ ” ನ” ಕಾರ ಆದಿಪ್ರಾಸ ಸರಿ ಮಾಡೆಕ್ಕು ಉದಾ : ತನುಮನ ಮೆಚ್ಚುವ .. ನಿಂಗಳ ಹಿರಿಯರು ನೆಡದ ಸಾಹಿತ್ಯ ರಚನೆಯ ದಾರಿಲಿ ಮುನ್ನಡೆತ್ತಾ ಇಪ್ಪದು ಸಂತೋಷದ ವಿಷಯ .

      https://oppanna.com/oppa/shara-kusuma-bhoga-bhamini-shatpadi

      1. ಮುಳಿಯದಣ್ಣ , ನಿಂಗಳ ಸಲಹೆ ಹಾಗೂ ಪ್ರೋತ್ಸಾಹ ನೋಡಿ ತುಂಬ ಸಂತೋಷ ಆತು. ಹೊಸಬ್ಬರ ಬೆನ್ನು ತಟ್ಟುವ ನಿಂಗಳ ಗುಣ ದೊಡ್ಡದು. ಇಲ್ಲಿ ಬರವೊರೆಲ್ಲೋರತ್ತರು ಇದು ಕಾಣ್ತಾ ಇದ್ದು. ನವ್ಯಲ್ಲಿ ಬರವಲೆ ಕಷ್ಟ ಇಲ್ಲೆ. ಪದ ಜೋಡ್ಸಿರೆ ಆತು. ಈ ಬೈಲಿಂಗೆ ಬಂದರೆ ಮನೆಯ ವಾತಾವರಣ ಕಂಡಂಗೆ ಆಗಿ ಮನಸಿಂಗೆ ತುಂಬ ಖುಷಿ ಆವುತ್ತು. ಹಿಂದಣದ್ದರ ಓದುತ್ತಾ ಇದ್ದೆ. ಎಲ್ಲೋರಿಂಗು ಅಭ್ಹಿನಂದನೆಗೊ, ವಂದನೆಗೋ.

  14. ಬಿಸಿಲಿಲಿ ಬಚ್ಚಿದ
    ಬಸಿರಿನ ಉಸುರಿನ
    ದೆಸೆ ಬದಲಾಗಿಸೆ ಮಳೆ ಬಂತು
    ಹಸಿರೆಲೆ ಚಿಗುರಿಲಿ
    ಸೆಸಿ ನಳನಳಿಸುವ
    ಹೊಸ. ತೋಟವ ನೋಡುವ ಬನ್ನಿ

    1. ಶೈಲಜಕ್ಕಾ , ಹಸುರೆಲೆಯ ಹೊಸತೋಟದ ನೋಟ ರೈಸಿದ್ದು .

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×