Oppanna.com

ಸಮಸ್ಯೆ 91 : ಪೇಟೆಯ ಜನಜ೦ಗುಳಿಯ ವರ್ಣನೆ

ಬರದೋರು :   ಸಂಪಾದಕ°    on   14/03/2015    6 ಒಪ್ಪಂಗೊ

ಈ ವಾರ ಪೇಟೆಯ ತೆರಕ್ಕಿನ ವರ್ಣನೆ ಮಾಡುವ.. ಛ೦ದಸ್ಸು,ಹನಿ,ಮಿನಿ ,ನವ್ಯ ಎಲ್ಲದಕ್ಕೂ ಸ್ವಾಗತ.

6 thoughts on “ಸಮಸ್ಯೆ 91 : ಪೇಟೆಯ ಜನಜ೦ಗುಳಿಯ ವರ್ಣನೆ

  1. ಜನ -ಜನ- ಜನವೋ ಜನ –
    ಅಲ್ಲಿ- ಇಲ್ಲಿ – ಎಲ್ಲೆಲ್ಲೂ ಜನ
    ಅವರ ಗುರ್ತ ಇವಕ್ಕಿಲ್ಲೆ- ಇವರದ್ದು ಅವಕ್ಕಿಲ್ಲೆ
    ಆದರೂ ದಿನಗಳೆತ್ತವು ಅಕ್ಕಪಕ್ಕಲ್ಲೇ ಇದ್ದು!

    ಮಾರ್ಗಲ್ಲಿ ಹೋಪಲೆ ದಾರಿಯೇ ಇಲ್ಲೆ-
    ಕಾರು- ಬಸ್ಸು- ರಿಕ್ಷಾ -ಬೈಕು- ಸ್ಕೂಟಿ-
    ಒಂದರ ಹಿಂದೊಂದು , ಅಡ್ಡಕ್ಕೆ- ನೀಟಕ್ಕೆ
    ಓಡುಸುತ್ತವು ಎರುಗಳ ಸಾಲಿನಾಂಗೆ-

    ಮಾಲು- ಹೋಟೇಲು, ದರ್ಶಿನಿಗಳ ಎದುರು
    ಜನಂಗ ಇಲ್ಲದ್ದ ಹೊತ್ತೇ ಇಲ್ಲೆ –
    ಮನೆಯೂಟಕ್ಕೆ ಬಾಯ್ಬಾಯಿ ಬಿಡುವವ್ವೇ
    ಮುತ್ತಿಗೊಂಡಿಕ್ಕು ಹೋಟ್ಳಿಲಿ ನೆಳವುಗಳ ಹಾಂಗೆ!

    ಕಲ್ತಿಕ್ಕಿ ಬಂದವಕ್ಕೆ ಹಳ್ಳಿಯು ಸಾಲ
    ಅವರನ್ನೇ ನೋಡುತ್ತ ಹೆರಡುತ್ತವು ಎಲ್ಲಾ
    ಪೇಟೆಯ ಹೊಗೆಗೆ ಪರಂಚಿದರು ಅವಕ್ಕೆ
    ಪೇಟೆಯ ಬಿಡ್ಳೆಡಿಯ , ಜೀವನವೇ ಅಲ್ಲಿ –

    ಬಾವಿಯ ನೀರು, ಪರಿಶುದ್ಧ ಗಾಳಿ
    ಬದುಕಿನ ಸೌಖ್ಯಕ್ಕೆ ಇದು ಅತೀ ಮುಖ್ಯ !
    ಭಾಷಣ ಬಿಗಿತ್ತವು ಹಳ್ಳಿಗೆ ಹೋಗಿ-
    ಮರುದಿನ, ಬ್ಯಾಗಿನ ತೆಕ್ಕೊಂಡು ಬಿಡುತ್ತವು ಗಾಡಿ!

    1. “ಮುತ್ತಿಗೊಂಡಿಕ್ಕು ಹೋಟ್ಳಿಲಿ ನೆಳವುಗಳ ಹಾಂಗೆ!”
      ಇದೊಂದು ಸಾಲು ಸಾಕನ್ನೇ ಪೇಟೆಯ ವರ್ಣನೆಗೆ ..
      ಇಂದಿರತ್ತೆಯ ಹೊಸ ಬಗೆ ಪ್ರಯತ್ನ ಲಾಯ್ಕ ಆಯಿದು .

  2. ನಾಕ -ನರಕ
    ಹಾದಿ ನೆಡವ ಲೆ ಭಾರೀ ಕಷ್ಟ
    ಮಾರ್ಗದ ಕರೆಲೆ ಇಷ್ಟಾನಿಷ್ಟ
    ಜಾತಿ ಮತಂಗಳ ಹಂಗೇ ಇಲ್ಲೆ
    ವೇಷ ಭೂಷಣಕ್ಕೆ ಮಿತಿಯೇ ಇಲ್ಲೆ
    ಭಾಷೆಯ ಮೀರಿದ ಕೈ ಭಾಷೆ
    ವಹಿವಾಟಿಂಗೆ ತೋರಿದ ಭಾಷೆ
    ತಳಿಯದ್ದೆ ನಿಂದರೆ ಹಾಕುಗು ಟೊಪ್ಪಿ
    ಬಣ್ಣದ ನೀರಿನ ಕುಪ್ಪಿಲೆ ಉರ್ಪಿ
    ಕಳ್ಳಕಾಕ ರಿಂಗಿ ಲ್ಲಿಯೆ ಸ್ವರ್ಗ
    ಅಗತ್ಯ ಬಿದ್ದವಕ್ಕಿದುವೆ ನಿಸರ್ಗ

    1. ವೇಷಕೆ ಮಿತಿ ಭೂಷಣಕೆ ಮಿನಿ ಅಲ್ಲದೋ ಮಾವ ? ಒಳ್ಳೆ ರಚನೆ .

  3. ಹಾಳು ಟೀವಿಯೊ ಫೋನು ಸಾಕೀ
    ಗಾಳು ಕೆಲಸವೆ ನೋಡು ತೋಟವ
    ಕೇಳುವೋರಿಲ್ಲೆ ಪೇಟೆ ಜೀವನದಾಶೆ ಪಡದರಿದಾ
    ಧೂಳಹೊಗೆಯಿದ ಕಾಟು ಜೆನಗಳೊ
    ಕೂಳು ಪೈಸೆಗೆ ಜೈಲಿನಾಂಗಿ
    ಲ್ಲೇಳು ಸುಮ್ಮನೆ ಕೂರೆಡದೊ ಬಾ ಬರವ ಶುದ್ದಿಗಳ ||ದಾಣಿಕೆ ಒಂದು ಸಮಸ್ಯೆಗೆ ಬರದ ಪೂರಣ ಪೋಸ್ಟ್ ಮಾಡದ್ದೆ ಒಳುದ್ದದು ಇದಕ್ಕೆ ಸರಿಯಾವುತ್ತೊ ಏನೊ?

    1. ಹಾ .. ಪೂರ್ತಿ ಅಲ್ಲದ್ದರೂ ಸಂಗತಿ ಲಾಯ್ಕಿದ್ದು .

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×