ಕಂದಪದ್ಯ: “ಬೀಡಿಗೆ ಸಿಗರೇಟಿದೇನು ಸಾಟಿಯೆ ನೋಡಲ್”

ಸಾಹಿತ್ಯದ ರಸಗ೦ಗೆ ಕನ್ನಡದ ಮಣ್ಣಿಲಿ “ತು೦ಬುಗನ್ನಡದ ಶತಾವಧಾನ“ದ ರೂಪಲ್ಲಿ ಹರುದತ್ತು,ಕನ್ನಡ ಸಾಹಿತ್ಯಾಸಕ್ತರ ಮನಸ್ಸು ತು೦ಬಿತ್ತು.ಬೈಲಿನ ನೆ೦ಟ್ರುಗೊ ಸುಮಾರು ಜೆನ ಒಟ್ಟು ಸೇರಿದವು,ಬಪ್ಪಲೆ ಎಡಿಯದ್ದವು ಅ೦ತರ್ಜಾಲಲ್ಲಿ ನೋಡಿ ಕೊಶಿ ಪಟ್ಟವು.
ಕಾರ್ಯಕ್ರಮದ ಆಯೋಜಕರಾದ “ಪದ್ಯಪಾನ” ದವು ಕೊಟ್ಟ ಸಮಸ್ಯಾಪೂರಣಲ್ಲಿ ಒಪ್ಪಣ್ಣನ ಬೈಲಿನವು ಆಸಗ್ತಿಲಿ ಭಾಗವಹಿಸಿದ್ದು ನವಗೆಲ್ಲಾ ಗೊ೦ತಿದ್ದು.
ಆ ಪೂರಣ೦ಗೊ ಹೀ೦ಗಿದ್ದು:

ಮುಳಿಯ ಭಾವ°:

ಪಾಡುತ ನೇಹದ ಸುಧೆಯೊಳ್
ತಾಡನ ಗೈಯುತಲಿರೇಕೆ ಗೀರುವೆ ನಖದಿಂ ?
ಕಾಡುತಲುರ್ಕುವ ಮಾರನ
ಬೀಡಿಗೆ ಸಿಗುರೇಟಿದೇನು ಸಾಟಿಯೆ ನೋಡಲ್
(ಬೀಡು = ಬಾಣ ಪ್ರಯೋಗ
ಸಿಗುರು = ಗೀರು)
ಪ್ರೇಮದ ಹೊಳೆಲಿ ಬಡಿದಾಡುವ ಹೊತ್ತಿಲಿ ಎನ್ಸಕ್ಕೆ ಉಗುರಿಲಿ ಗೀರುತ್ತೆ? ಉಕ್ಕುವ ಮನ್ಮಥ ಬಾಣ ಪ್ರಯೋಗದ ಎದುರು ನಿನ್ನ ಈ ಉಗುರಿನ ಪರಚುವ ಏಟು ಎಷ್ಟಕ್ಕೂ ಸಾಟಿಯಲ್ಲ ಓ ನಲ್ಲೇ…

 

ಮಹೇಶ:
(ಎರಡು ಪದ್ಯ೦ಗೊ)

ಒಂದು:

ಕಾಡಿಗೆ ಬಂಣದ ಕಲ್ಲಿನ
ಮಾಡೊಳ್ ಕಂಡಿರ್ದು ಭಗ್ನ ಶಿಲ್ಪದ ಸಾಲಂ |
ಮೋಡಿಯ ಸೆಳೆತವು ಈ ಹಳೆ-
ಬೀಡಿಗೆ ಸಿಗಿರೇಟಿದೇನು ಸಾಟಿಯೆ ನೋಡಲ್ ||
ಕಾಡಿಗೆಯ ಬಣ್ಣದ ಕಲ್ಲಿನ ಮ೦ಟಪದ ಒಳ ಶಿಲ್ಪ೦ಗಳ ಕ೦ಡತ್ತು.
ಧರ್ಮಾಂಧ೦ಗೊ ವಿಗ್ರಹ೦ಗಳ ಸಿಗಿದರೂ, ಹಳೆಬೀಡಿನ ಚೆ೦ದವೇನೂ ಹಾಳಾಯಿದಿಲ್ಲೆ !

ಇನ್ನೊಂದು:

ಆಡುವ ಕುರುವಿನ ವೃಂದದಿ
ಸೇಡಿನ ಹೊಗೆಯೊಂದುಬಂದು ಬೆಳೆದುದು; ಕೇಳಲ್ –
ಚಾಡಿಯು ಕೌರವ-ಭೀಮೆಂ
ಬೀಡಿಗೆ ಸಿಗರೇಟಿದೇನು ಸಾಟಿಯೆ ನೋಡಲ್!?

{ಈಡಿಗೆ ಸಿಗರು = ಹೋಲಿಕೆಗೆ ಸಿಕ್ಕರು (ಈಡು = ಸಾಮ್ಯ)
ಏಟಿದೇನು ಸಾಟಿಯೆ? = ಭೀಮ-ಕೌರವರ ತುಲನೆ ಅಸಾಮ್ಯ
ಮಕ್ಕಳಾಟಲ್ಲಿ ಕುರು ವೃಂದಲ್ಲಿ ಚಾಡಿ ಮಾತುಗಳಿಂದಾಗಿ ಸೇಡಿನ ಹೊಗೆ ಬೆಳದತ್ತು.
ಆದರೆ, ನೂರು ಕೌರವರಿ೦ಗೆ – ಭೀಮ ಒಬ್ಬ°! ತುಲನೆ ಮಾಡ್ಲೆ ಸಾಧ್ಯವೇ?

ಟೀಕೆ ಮಾವ°:

ಗೂಡಿದು ನಮ್ಮರಮನೆಯೈ
ಮಾಡಿಕೊಳುವನಾನೆನುತಲಿ ಧನಿಕನ್ ಕೇಳಲ್
ಕೂಡದು ಪೋಗೆನುತೆಮ್ಮೀ
ಬೀಡಿಗೆ ಸಿಗುರೇಟಿದೇನು ಸಾಟಿಯೆ ನೋಡಲ್?
ಸಿಗುರು = ಘಾಸಿ ಮಾಡು

~*~

 

ಸೂ:

 • “ಬೀಡಿಗೆ ಸಿಗರೇಟಿದೇನು ಸಾಟಿಯೆ ನೋಡಲ್”
  ಇದೇ ಸಮಸ್ಯೆಗೆ ಬೈಲಿಲಿ ಕ೦ದ ಪದ್ಯ ರಚನೆಯ ಹೊಸ ಪ್ರಯತ್ನ೦ಗೊ ಮು೦ದುವರಿಯಲಿ.
  (ಸಾಟಿಯೋ ಹೇಳಿ ನೋಡ್ಲೆ ಬೀಡಿ ಸಿಗರೇಟು ಬಲುಗುವ ಪ್ರಯತ್ನ ಮಾಡಿಕ್ಕೆಡಿ..!!)
 • ಕ೦ದ ಪದ್ಯದ ರಚನಾಕ್ರಮವ ”ಪದ್ಯಪಾನ”ಲ್ಲಿ ಚೆ೦ದಕ್ಕೆ,ಸುಲಾಭಲ್ಲಿ ಅರ್ಥ ಅಪ್ಪ ಹಾ೦ಗೆ ವಿವರ್ಸಿದ್ದವು.

 

ಸಂಪಾದಕ°

   

You may also like...

16 Responses

 1. jayashree.neeramoole says:

  ತುಂಬಾ ಖುಷಿಯ ಶುದ್ದಿ…
  ಎಲ್ಲೋರಿನ್ಗೂ ಅಭಿನಂದನೆಗೋ ಹಾಂಗೂ ಶುಭ ಹಾರೈಕೆಗೋ… ಹರೇ ರಾಮ…

  ತೋಡಿನ ದಾಸನ ಹೂಗಿನ
  ಸೂಡಿದ ಬೈಲಿನ ಜನಗಳ ನೋಡಿಯೆ ನೆಗೆಯಾ
  ಮಾಡಿರೆ ಬೆಶಿಬೆಶಿ ಸಾರೆ೦
  ಬೀಡಿಗೆ ಸಿಗುರೇಟಿದೇನು ಸಾಟಿಯೆ ನೋಡಲ್

  ಬೈಲಿನವು ದಾಸನ ಹೂಗಿನ ಪ್ರೇಮಿಗೋ ಹೇಳಿ ಆಧುನಿಕರು ನೆಗೆ ಮಾಡಿರೆ ‘ದಾಸನ ಹೂಗಿನ ಬೆಶಿಬೆಶಿ ಸಾರಿನ ಮಾಡಿ ಬಡುಸಿ ರುಚಿ ತೋರುಸಿ’ ಮಾತಿನ ಏಟಿನ್ಗೆ ಬೈಲಿನವು ಗುರಿಯಾಗವು ಹೇಳಿ ಬೈಲಿನ ಅಭಿಮಾನವ ಎತ್ತಿ ಹಿಡಿವ ಅರ್ಥಲ್ಲಿ ಬೈಲಿನ ಕಂದನ ಒಂದು ಕಿರು ಪ್ರಯತ್ನ…

  • ರಘು ಮುಳಿಯ says:

   ಅಕ್ಕಾ,

   ಸೂಡಿದ ಬೈಲಿನ ಜನಗಳ ನೋಡಿಯೆ ನೆಗೆಯಾ

   ಜನಗಳ ಹೇಳುವಲ್ಲಿ ’ಜಗಣ’ ಬರೆಕ್ಕಾತು.ಸರ್ವಲಘುವಾದರೆ ಜ ಆದ ಮೇಲೆ ಯತಿ ಬರೆಕ್ಕು.

   ಸೂಡಿದ ಬೈಲಿನ ಜನ೦ಗೊ ಹೋಪದು ನೋಡಿಯೆ
   ಮಾಡಿರೆ ನೆಗೆ ಬೆಶಿ ಸಾರೆ೦

   ಹೇಳಿರೆ ಸರಿಯಾವುತ್ತು.

   • jayashree.neeramoole says:

    ಕಂದನ ಕಂದಲ್ಲಿಪ್ಪ ತೊಂದರೆ ನಿವಾರಿಸಿದ್ದಕ್ಕೆ ತುಂಬಾ ಧನ್ಯವಾದ ಮುಳಿಯದಣ್ಣ…

    ತೋಡಿನ ದಾಸನ ಹೂಗಿನ
    ಸೂಡಿದ ಬೈಲಿನ ಜನ೦ಗೊ ಹೋಪದು ನೋಡಿಯೆ
    ಮಾಡಿರೆ ನೆಗೆ ಬೆಶಿ ಸಾರೆ೦
    ಬೀಡಿಗೆ ಸಿಗುರೇಟಿದೇನು ಸಾಟಿಯೆ ನೋಡಲ್

 2. ಮಾನೀರ್ ಮಾಣಿ says:

  ನಮಗೆ ಕ೦ದಪದ್ಯ ಮುಗುದ ನ೦ತರ ಬರೆದ ಸಾಲು ಓದಿರೆ ಮಾತ್ರ ಅರ್ಥ ಆಪ್ಪದು ಹೋಯ್.. ಕವಿಗಳ ಕಲ್ಪನೆಗೆ ಸಾಟಿಯು೦ಟೇ? ಮೂವರ ರಚೆನೆಯೂ ಕಲ್ಪನೆಗೂ ವಾಹ್ ವಾಹ್… ಅಭಿನ೦ದನೆಗಳು 🙂

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *