ಸಮಸ್ಯೆ:31 ಚಿತ್ರಕ್ಕೆ ಪದ್ಯ (4)

May 18, 2013 ರ 6:00 amಗೆ ನಮ್ಮ ಬರದ್ದು, ಇದುವರೆಗೆ 8 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಈ ಚಿತ್ರಕ್ಕೆ ನಿ೦ಗಳ ಕಲ್ಪನೆ ಕವಿತೆಯಾಗಿ ಬರಳಿ.

ನೀನೇರಿದೆತ್ತರಕೆ..

ಚಿತ್ರಕೃಪೆ ಃ ಪವನಜ ಮಾವ

ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 8 ಒಪ್ಪಂಗೊ

 1. ಗೋಪಾಲಣ್ಣ
  ಎಸ್.ಕೆ.ಗೋಪಾಲಕೃಷ್ಣ ಭಟ್ಟ

  ಬೆಶಿಲಿನ ಗಾವಿಂಗೆ ಸೊಪ್ಪೆಲ್ಲಾ ಹೋದತ್ತು
  ದೊಂಡೆಯ ಪಸೆಯಾರಿತ್ತು
  ಬೇರಿಂಗೆ ನೀರಿಲ್ಲೆ ಮೇಲಂಗೆ ನೆರಳಿಲ್ಲೆ
  ಬದುಕೇ ಭಾರವಾದತ್ತು ॥೧॥
  ಏನಾರೂ ಸಂಭವಿಸಲಿ ನಮ್ಮ ಬಾಳಿಲಿ
  ಬಗ್ಗದ್ದೆ ನೇರ ನಿಲ್ಲೆಕ್ಕು
  ಯಾವುದೋ ಮೂಲೆಂದ ಮುಗಿಲೆದ್ದು ಮಳೆ ಬಂದು
  ಪಚ್ಚೆಯ ಕೊಡಿ ಚಿಗುರೆಕ್ಕು ॥೨॥
  ಅಮವಾಸ್ಯೆ ಕಳೆದರೆ ಮತ್ತೊಮ್ಮೆ ಹುಣ್ಣಮೆ
  ಬೇಸಗೆ ಮತ್ತೆ ಮಳೆಗಾಲ
  ಹಾಂಗಾಗಿ ಬೇಗೆಗೆ ಬೇಗುದಿಪಡಲಿಲ್ಲೆ
  ಕಾದರೆ ಬಕ್ಕೊಳ್ಳೆ ಕಾಲ! ॥೩॥

  [Reply]

  ಮುಳಿಯ ಭಾವ

  ರಘುಮುಳಿಯ Reply:

  ಆಶಾವಾದ ತು೦ಬಿ ಹರಿವ ಕವನ ಲಾಯ್ಕಾಯ್ದು ಗೋಪಾಲಣ್ಣ.

  [Reply]

  VA:F [1.9.22_1171]
  Rating: 0 (from 0 votes)
 2. ಇಂದಿರತ್ತೆ
  ಇಂದಿರತ್ತೆ

  ನೀಲಿ ಬಾನಿಲಿಯರುಣನುದಯಕೆ
  ಕಾಲು ಕಿತ್ತವು ತಾರೆಯೆಲ್ಲವು
  ಜೋಲು ಮೋರೆಯ ಮಾಡಿ ನಿಂದನು ಮಸುಕು ಚಂದಿರನೂ ।
  ಬಾಲ ಸೂರ್ಯನು ಬಪ್ಪ ಹೊತ್ತಿಲಿ
  ಬೋಳು ಮರವನೆಯೆತ್ತಿ ಹಿಡ್ದದು
  ಕೋಲ ಕಬರಿಲಿ ತಡದು ನಿಲ್ಸುಲೆ ಚಂದ್ರ ಮುಳುಗುದರಾ ॥

  [Reply]

  ಮುಳಿಯ ಭಾವ

  ರಘುಮುಳಿಯ Reply:

  ಇ೦ದಿರತ್ತೆಯ ಕಲ್ಪನೆ ಲಾಯ್ಕಿದ್ದು.ಇದನ್ನೇ ಚ೦ದ್ರನ ಮಾತಿಲಿ ಹೇಳೊದಾದರೆ,

  ಒ೦ದು ಹೊಡೆಯಟ್ಟುಸುವ ರವಿ ಮ
  ತ್ತೊ೦ದು ಹೊಡೆ ಕಬೆಯಡ್ಡ ನಿ೦ದಿದು
  ಕು೦ದಿತಿ೦ದಾಸಕ್ತಿ ನೆಡವಲೆ ನೀಲ ಜಾಲಿನೊಳ।
  ನಿ೦ದರಾ ಹುಲಿ ನು೦ಗುಗೀ ಕ್ಷಣ
  ಹ೦ದುಲೇ ಬಿಡದೊತ್ತಕೀ ದರೆ
  ಚ೦ದಮಾಮ೦ಗಡಕೆಕತ್ತರಿಯೆಡೆಲಿ ಬೊಡುದತ್ತು।।

  [Reply]

  VA:F [1.9.22_1171]
  Rating: +2 (from 2 votes)
 3. ಇಂದಿರತ್ತೆ
  ಇಂದಿರತ್ತೆ

  ಆಹಾ ! ಪಸಂದಾಯಿದನ್ನೇ ಕವನ ! ಚಂದಮಾಮನ ಪಜೀತಿಯೇ !

  [Reply]

  VA:F [1.9.22_1171]
  Rating: 0 (from 0 votes)
 4. ಮುಳಿಯ ಭಾವ
  ರಘುಮುಳಿಯ

  ಬೇರು ನೀರಿನ ಸೆಲೆಯ ಹುಡುಕೊಗ
  ಳೇರಿ ಗೆಲ್ಲುಗೊ ಬಾನಿನೆತ್ತರ
  ಚೂರು ಮಳೆಹನಿಗಳನೆಯಿಳುಸುಲೆ ಮುಗಿಲುಗಳ ತಳ್ಪೀ।
  ಆ ರವಿಯ ಶಾಖಕ್ಕದಾ ಹೌ
  ಹಾರಿ ಬೆತ್ತಲೆಯಾಗಿ ನಿ೦ದವು
  ಸೋರುಗೋ ತಿ೦ಗಳಿನ ತ೦ಪಿನ ಸುಧೆಯು ಹಗಲಿಲಿಯೇ?।।

  [Reply]

  VA:F [1.9.22_1171]
  Rating: +1 (from 1 vote)
 5. ಕೆ.ನರಸಿಂಹ ಭಟ್ ಏತಡ್ಕ

  ರೀತಿ-೧-ನೀತಿ-೧
  ಪಕ್ಷ ಬದಲಪ್ಪದಕ್ಕೆ ಹೊಂದಿ
  ಕಕ್ಷೆಲಿ ತಿರುಗಿಯೊಂಡು ಶಶಿ ವೃ
  ದ್ಧಿ ಕ್ಷಯದಸಹಜ ದೋಷ ಮೀರಿ ಗುಣಂದ ಪೊರೆತ್ತ
  ಭಕ್ಷಕರ ತಪ್ಪುಸುಲೆ ಬಯಲ್ಲಿ
  ರಕ್ಷಕ ಋತುವಿನ ಕಾದೊಂಡೆ
  ವೃಕ್ಷ ಹೊಸ ಚಿಗುರು ಬಂದಪ್ಪಗಳೆ ಆವುತ್ತಮರ
  ರೀತಿ-೨-ನೀತಿ ಅದೇ
  ವೃದ್ಧಿ ಕ್ಷಯದಸಹಜ ದೋಷಂದ ಮೆರೆವ
  ಕಳಾಧರ ಕಳೆಗುಂದಿರು ಗುಣಂದ ಪೊರೆವ
  ವಸಂತನ ನಿರೀಕ್ಷೆಲಿ ಬಯಲ್ಲಿಪ್ಪ ಮರ
  ಬೋಳಾದರೂ ಹೊಸ ಚಿಗುರು ಬಂದರಮರ

  [Reply]

  VA:F [1.9.22_1171]
  Rating: +1 (from 1 vote)
 6. ಶೈಲಜಾ ಕೇಕಣಾಜೆ

  ನೀಲ ಬಾನಿಲಿ
  ಜಾಲ ಚಾಚಿಹ
  ಕೋಲ ಕೋಲವಯಣಕಿ ನೋಟಲ್ಲೇ

  ಬಾಲ ಚಂದಿರ
  ಕಾಲ ನೇಮದ
  ಬೀಲ ಬಿಚ್ಚಿದ ಸೂರ್ಯನುದಯಲ್ಲೇ॥

  [Reply]

  VA:F [1.9.22_1171]
  Rating: +2 (from 2 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣವಿನಯ ಶಂಕರ, ಚೆಕ್ಕೆಮನೆಅಕ್ಷರದಣ್ಣಮುಳಿಯ ಭಾವಕೇಜಿಮಾವ°vreddhiಪುಣಚ ಡಾಕ್ಟ್ರುವೇಣೂರಣ್ಣಅನಿತಾ ನರೇಶ್, ಮಂಚಿಶೀಲಾಲಕ್ಷ್ಮೀ ಕಾಸರಗೋಡುಡೈಮಂಡು ಭಾವಚುಬ್ಬಣ್ಣವಿದ್ವಾನಣ್ಣಮಾಷ್ಟ್ರುಮಾವ°ಸುವರ್ಣಿನೀ ಕೊಣಲೆಕಳಾಯಿ ಗೀತತ್ತೆಪ್ರಕಾಶಪ್ಪಚ್ಚಿಶೇಡಿಗುಮ್ಮೆ ಪುಳ್ಳಿಒಪ್ಪಕ್ಕಬಟ್ಟಮಾವ°ಪಟಿಕಲ್ಲಪ್ಪಚ್ಚಿಕೆದೂರು ಡಾಕ್ಟ್ರುಬಾವ°ಯೇನಂಕೂಡ್ಳು ಅಣ್ಣಶರ್ಮಪ್ಪಚ್ಚಿಮಾಲಕ್ಕ°ಕೊಳಚ್ಚಿಪ್ಪು ಬಾವಪುಟ್ಟಬಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ