Oppanna.com

ಸಮಸ್ಯೆ 48 : ಚಿತ್ರಕ್ಕೆ ಪದ್ಯ

ಬರದೋರು :   ಸಂಪಾದಕ°    on   21/09/2013    40 ಒಪ್ಪಂಗೊ

ಈ ವಾರ ಕಾಡಿಲಿ ಕಟ್ಟಿದ ಜೇಡನ ಬಲೆಯ ವರ್ಣನೆ ಮಾಡುವನೊ?
ಚಿತ್ರಕೃಪೆ ಃ ಪವನಜ ಮಾವ

ಯಾವ ನೇಯ್ಗೆಯೋ!
ಯಾವ ನೇಯ್ಗೆಯೋ!

40 thoughts on “ಸಮಸ್ಯೆ 48 : ಚಿತ್ರಕ್ಕೆ ಪದ್ಯ

  1. ಎಂತಕೆ ಎಲ್ಲವು ಛಂದೋಬದ್ಧವಾಗಿಯೇ ಬರವದು? ಛಂದಸ್ಸು ಇಲ್ಲದ್ದೆಯೂ ಬರವಲಕ್ಕನ್ನೆ?

    1. ಸಮಸ್ಯಾಪೂರಣ ಹೇಳಿರೆ ಛಂದೋಬದ್ಧ ಕವನಂಗೊಕ್ಕಾಗಿಯೇ ಇಪ್ಪಂತಾದ್ದು.
      {ಛಂದಸ್ಸು ಇಲ್ಲದ್ದೆಯೂ ಬರವಲಕ್ಕನ್ನೆ?}
      ಖಂಡಿತಾ ಅಕ್ಕು, ಪವನಜ ಮಾವ. ನಿಂಗೊ ಪ್ರಯತ್ನ ಮಾಡಿ.
      ಅವರವರ ಆಸಕ್ತಿಲಿ ಅವ್ವವ್ವು ಬರವದಿದಾ; ಛಂದಸ್ಸಿನ ಬಗ್ಗೆ ಹೆಚ್ಚು ಒಲವು ಇಪ್ಪವು ಅದರ್ಲೇ ಬರೆತ್ತವು.
      ಪ್ರೋತ್ಸಾಹಿಸುವೊ.
      ಛಂದಸ್ಸು ಬಿಟ್ಟು ಸ್ವಚ್ಛಂದಸ್ಸಿಲಿ ಬರೆತ್ತರೆ, ಅದಕ್ಕೂ ಸ್ವಾಗತವೇ.
      ಇನ್ನೊಬ್ಬನ ತಡವದು ಬೇಡ, ಅಲ್ಲದೋ? 🙂

      1. ಎನಗೆ ಪದ್ಯ ಬರವಲೆ ತಿಳಿತ್ತಿಲ್ಲೆ.
        ಛಂದೋಬದ್ಧವಾಗಿ ಬರವವರ ತಡವಲೆ ಹೇಳಿದ್ದಲ್ಲ. ಎಲ್ಲವೂ ಛಂದೋಬದ್ಧವಾಗಿಯೇ ಬರವದು ನೊಡಿ, ಸ್ವಚ್ಛಂದವಾಗಿ ಬರವವು ಇದು ನವಗೆ ಹೇಳಿದ್ದಲ್ಲ ಹೇಳಿ ಸುಮ್ಮನೆ ಕೂಯಿದವೋಳಿ ಒಂದು ಅನುಮಾನ.

  2. ಈ ‘ಕಂದ’ನ ಕುಂಞಿ ಪದ್ಯವ ಓದಿ,ಮೆಚ್ಚಿ ಮಿಂಚಂಚೆ ದ್ವಾರಾ ಒಪ್ಪ ಕೊಟ್ಟ ಸಂಪಾದಕರಿಂಗೂ ಜಾಲತಾಣಲ್ಲಿ ಒಪ್ಪ ಕೊಟ್ಟ ಬೈಲಿನ ಬಂಧುಗೊಕ್ಕೂಎನ್ನ ಹಾರ್ದಿಕ ಕೃತಜ್ಞತೆಗೊ.ಆದಿ,ಅಂತ್ಯ ಪ್ರಾಸಂಗಳ ರಗಳೆ ಇಲ್ಲದ್ದ ಸರಳ ರಗಳೆಲಿ ಬರವಲೆ ಒಂದು ಪ್ರಯತ್ನ.
    ಓ ನೆಳವೆ ನೀನೊಂದರಿ ಬರೆಕೆನ್ನ ಮನೆಗೇ
    ಆನೆ ಖುದ್ದು ಕಟ್ಟಿದ ಹೊಸ ಬಗೆಯ ಸದನಕ್ಕೆ
    ಸಾಲಿಗನೆ ನಿನ್ನ ನೆಗೆಯ ಮುಖವಾಡವೆಂತಕೆ?
    ಎನ್ನ ಪೀಳಿಗೆಯವರ ಅಟ್ಟಿದ್ದೆ ಯಮಪುರಕೆ
    (ಸ್ಫೂರ್ತಿಃಬಾ ನೊಳವೆ,ಬಾ ನೊಳವೆ)

  3. ಅಲ್ಲ… ಆನೂ ನೋಡ್ತಲೇ ಇದ್ದೆ. ವಾರಂದ ವಾರಂದ ನಿಂಗ ಎಲ್ಲೋರು ಇಲ್ಲಿ ರೈಸುತ್ತಾ ಇದ್ದಿ. ಎನ ಕವುಂಚಿ ಮೊಗಚ್ಚಿರೂ ಒಂದು ಸಾಲು ಬರವಲೆಡಿತ್ತಿಲ್ಲೆ.
    ಅಷ್ಟಪ್ಪಗ ಅಡಿಗೆ ಸತ್ಯಣ್ಣ° ಹೇದ° – “ಕವುಂಚಿ ಮೊಗಚ್ಚಿರೆ ಎಲ್ಲ ಪದ್ಯ ಬರವಲೆ ಎಡಿಯ” – ಹೇದು. ಅಪ್ಪು ಅವ° ಹೇದ್ದು ನಿಜಾವೆ. ನವಗೆ ಇದು ಓದಿ ಗೆಬ್ಬಾಯುಸುಲೇ ಎಡಿಗಷ್ಟೇ.
    ಹೀಂಗೇ ಮುಂದುವರ್ಕೊಂಡಿರಲಿ.

  4. ಸಾಲಿಗನ ಬಲೆಯೊಂದು ತಿಂಬಲುದೆ ಕಲೆಯೊಂದು
    ಜಾಲಿಲಿಯೊ ಕಾಡಿಲಿಯೊ ಮನೆಲಿಯೂ ಬಕ್ಕು
    ಜಾಲದಾ ಕನ್ನಟಿಲಿ ಬಿಂಬದ್ದೆ ಪಡಿನೆಳಲು
    ”ಹೇಳಿ ಶಾಸ್ತ್ರವ ಗಾಳ ಹಾಕುತ್ತದೋ”?

    1. ಜಾಲ =ಅಂತರ್ಜಾಲ ,ಪಡಿನೆಳಲು =ಪ್ರತಿಬಿಂಬ ,

      1. ಚೌಪದಿಯು ಪಷ್ಟಾಯ್ದು ಭಾಗ್ಯಲಕ್ಷ್ಮೀ..!

  5. ಬಸವಳುದೆಯ ರಜ ಬೆಶಿಲಿಳಿಯಲಿ ಬಾ
    ಹಸುರೆಲೆ ಕೊಡೆಯಡಿ ಪವಡಿಸು ನೆಳವೇ
    ನಸುಕಿಲೆ ಬಸರಿನ ಒಸರಿಲಿ ಹೆಣದಾ
    ಹಸೆಯಿದ ಹೊಸಬಲೆ ಮನುಗುಲೆ ನಿನಗೇ

  6. ಗೆಡುಮರಗಳೆಡೆಯೆಡೆಲಿ ಹಸುರೆಲೆಯಾ
    ನಡುವಿಲಿ ಮಯಣದ ಬಲೆ ಹರಡುಗದಾ
    ಗಡಿಬಿಡಿಯ ನುಸಿನೆಳವುಗೊ ಹಸೆಲಿ ಕಾಲ್
    ಮಡಗಿದರೆ ಹೆರಡುಗು ಯಮನ ಮನೆಗೇ ॥
    ಜಡಬಿರುದು ಮನೆಯ ಹೆರ ಹೆರಡುವಗಾ
    ಗೆಡುಗಳ ಕೊಡಿಕೊಡಿಲಿ ಎಳೆ ಎಳೆಗಳಾ
    ಬಿಡುಸಿದ ಬಲೆಯೊಳ ಹನಿಗಳ ಸೊಬಗೂ
    ಕುಡಿಯೊಡೆಶುಗು ಮನವ ಕಲೆಯ ಬಲೆಯೂ ॥

    1. ಇನ್ನುದೇ ರಜ್ಜ ಹೆಚ್ಚು ಪ್ರಯತ್ನ ಬೇಕು ಅತ್ತೆ. ಈ ಛಂದಸ್ಸಿಲಿ ಸರ್ವ ಲಘುಗಳೇ ಬರೆಕ್ಕಾದ ಕಾರಣ ಯತಿಗೆ ಚ್ಯುತಿ ಆಗದ್ದ ಹಾಂಗೆ ಹೆಚ್ಚು ಗಮನ ಕೊಡೆಕ್ಕು ಹೇಳಿ ಎನ್ನ ಅಭಿಪ್ರಾಯ.

      1. ಥ್ಯಾಂಕ್ಸ್ ಮಾವ. ಇದರ ‘ಯತಿ ನಿಯಮ’ ಹೇಂಗೆ ತಿಳುಸುತ್ತೀರಾ? ಓದುಲೆ ಅನುಕೂಲವಾಗಿ ಮಾಂತ್ರವೋ ಅಥವಾ ‘ಹೀಂಗೇಳಿ’ ನಿಯಮ ಇದ್ದಾ?

        1. ಎನಗೆ ಗೊಂತಿಪ್ಪ ಹಾಂಗೆ ಪ್ರತ್ಯೇಕ ಯತಿ ನಿಯಮ ಇದಕ್ಕೆ ಇರ. ಓದುಲೆ ಅನುಕೂಲ ಆಗಲಿ ಹೇಳಿಯೇ ಆನು ಹಾಂಗೆ ಸೂಚಿಸಿದ್ದು. ನಿಂಗೊ ನಿಭಿಡ ಬಂಧಲ್ಲಿ ಪದ್ಯ ಬರವ ಬಗ್ಗೆ ಹೆಚ್ಚು ಗಮನ ಕೊಟ್ಟ ಕಾರಣ ಹೀಂಗೆ ಆದ್ದದಾಗಿಕ್ಕು.

  7. ಜೇಡನು ನೆಯ್ಯುವ ಮೇಣದ ನೂಲಿಲಿ
    ಮೂಡಿದವಿಬ್ಬನಿ ಮಣಿಗಳ ಜಾಲದ
    ಮೋಡಿಗೆ ಸಿಕ್ಕಿದ ಕವಿಗಳ ಮನಸಿಲಿ ಕಾವ್ಯವೆ ಹುಟ್ಟುತ್ತು ।
    ಕಾಡಿಲಿ ಹಾರುವ ಬಣ್ಣದ ಹಾತೆಗ
    ಳೋಡುವ ರಭಸಕೆ ಸಿಕ್ಕಿರೆ ಬಲೆಯೊಳ
    ಕೇಡಿಗ ಚಾಲ್ಯನು ಕೀಟವ ತಿಂಬಲೆ ಹೊತ್ತಿನ ಕಾಯುತ್ತು ॥

    1. ಅತ್ತೇ ….ಷಡ್ಪದಿಯ ನೋಡಿ ಬರದ ಷಡ್ಪದಿ ಪಷ್ಟಾಯಿದು..

  8. ಭಾಮಿನಿ ಲಾಯಿಕಾಯಿದು. ಕಂದ ಮತ್ತೂ ಚೆಂದ ಆಯೆಕ್ಕಾತು.

  9. ಎಳೆಯೆಳೆ ಸಾಲಿಗ ಬಲೆಯೋ
    ಭಳಿರೇ ಕ೦ಡಿರೊ ನಿಸರ್ಗದೀ ಮಗ್ಗ ಹಸೇ।
    ಒಳ ಬಿದ್ದರೆ ಹಾತೆಗಳೇ
    ಒಳಿವಾ ದಾರಿಯೆ ಕಳುತ್ತು ಟಾಟಾ ಬೈಬೈ।।

  10. ಏಳು ಸುತ್ತಿನ ಕೋಟೆ ಕೊತ್ತಲ
    ದೂಳಿಗವೊ ಮೂರ್ಹೊತ್ತು ಬರೆ ಕಾ
    ಲಾಳುವಿನ ನಾಟಕದ ಸಾಲಿಗನಿಲ್ಲಿ ಯಜಮಾನ।
    ಬೀಳೊಗಿರುಳಿಲಿ ಕ೦ಡರೂ ದಿನ
    ಹಾಳು ಬಾವಿಗೆ ನುಸಿಗೊ ದೊ೦ಡೆಯ
    ಗೋಳು ಕೇಳುವ ಮದಲೆ ಹೆರಡುಗು ಬಾರಣೆಗೆ ಧನಿಯು।।

  11. ಚಿತ್ರಲ್ಲಿ ಕಂಡಪ್ಪಗ ಚೆಂದಕಾಣ್ತು ಹೇಳಿ ಮನೆಯೊಳ ಕಟ್ತಿರೆ ಪಿಸುರೆಳಗದ್ದೆ ಇಕ್ಕೋ? ಮನೆಲಿ ಬಲೆ ತುಂಬಿರೆ ಆ ಮನೆಯ ಹೆಮ್ಮಕ್ಕಳ ಅಳೆತ್ತವಿಲ್ಲೆಯಾ? ಮತ್ತೆ “ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ” ಹೇಳುಗನ್ನೆ!

    1. ಅದಪ್ಪು ಅತ್ತೆ.ಆದರೆ,ಶೈಲಜಕ್ಕ ಪಿಸುರಿಲಿ ಬರದ ಹಾಂಗೆ ಕಾಣುತ್ತಿಲೆ, ಎಂತಕೆ ಹೇಳಿರೆ ಪದ್ಯ ಪಷ್ಟಾಯಿದು.

    2. ಮನೆಲಿಪ್ಪ ಹೆಮ್ಮಕ್ಕಳ ಮಾತ್ರ ಅಲ್ಲ ಅತ್ತೆ ಅಳವದು–” ಇಲ್ಲಿಪ್ಪ ಗೆ೦ಡು ಮಕ್ಕಗೊ ಮನೆಲಿ ಹೆ೦ಡತಿ , ಅಬ್ಬೆ, ಅಕ್ಕ ತ೦ಗೆಕ್ಕೊ, ಮಗಳಕ್ಕೊ ಇಲ್ಲೆಯಾ ಹೇಳಿದೆ ಕೇಳುಗು”

  12. ನೆಳವು ಹಾತೆ ತಿಂಬಲಶನ
    ಸೆಳವಲೇಳಿ ನೇಯ್ದ ಬಲೆಗೆ
    ಹೊಳವ ಚೆಂದವಿದ್ದು ನೋಡಿ ಬಿಟ್ಟಿ ಹೋಪಿರಾ?
    ಎಳದ ಬಸರಿನೊಸರ ಜಾಲ
    ಬಳುದು ಪೂರ ಸೂಡಿ ಹಿಡುದು
    ಕಳೆಯ ಮನೆಗುಪದ್ರ ಹೇಳಿ ತೆಗದೆ ಬಿಟ್ಟಿರಾ ?? 🙁
    🙂

  13. ಬಾಮಿನಿಯತ್ತೆ…ಅಲ್ಲಲ್ಲ, ಇಂದಿರತ್ತೆ ಪಷ್ಟಾಯಿದು.

  14. ಅಷ್ಟಪಾದದ ಬಲದೆ ಜೇಡವ
    ದಿಷ್ಟಪಟ್ಟೂ ನೆಯ್ದ ಜಾಲವ
    ದೆಷ್ಟು ಚೆಂದವೊ ಮೈಂದು ಹನಿಗಳ ಮುತ್ತ ಜೋಡಣೆಯು ।
    ಕಷ್ಟ ಬಂತದ ನೆಳವು ನುಸಿಗೊಕೆ
    ಮೃಷ್ಟದೂಟವು ಸಿಕ್ಕಿ ಚಾಲ್ಯಕೆ
    ತುಷ್ಟಿಯಕ್ಕದ ಸಾಲಿಗಂಗದೆ ನೇದ ಬಲೆಯೊಳವೆ ॥

    1. “ಚಾಲ್ಯಕೆ” ಮತ್ತೆ “ಸಾಲಿಗಂಗೆ” ಹೇಳ್ತ ಒಂದೇ ವಿಭಕ್ತಿಯ ಎರಡು ಶಬ್ದಂಗಳಿಂದ ರಿಪಿಟೇಷನ್ ಆದಂಗಾವುತ್ತು ಹೇಳುವ ರಘುವಿನ ಅಭಿಪ್ರಾಯವ ಒಪ್ಪಿಗೊಂಡು ತಿದ್ದುಪಡಿಮಾಡ್ತಾ ಇದ್ದೆ. ಎಷ್ಟಾದರೂ ಭಾಮಿನಿಯ ಒಲಿಸಿಗೊಂಡವ° ಈ “ಮುಳಿಯದ್ದ”ಅಣ್ಣ ಅಲ್ಲದಾ!
      ಅಷ್ಟಪಾದದ ಬಲದೆ ಜೇಡವ
      ದಿಷ್ಟಪಟ್ಟೂ ನೆಯ್ದ ಜಾಲವ
      ದೆಷ್ಟು ಚೆಂದವೊ ಮೈಂದು ಹನಿಗಳ ಮುತ್ತ ಜೋಡಣೆಯು ।
      ಕಷ್ಟ ಬಂತದ ನೆಳವು ನುಸಿಗೊಕೆ
      ಮೃಷ್ಟದೂಟವು ಸಿಕ್ಕಿ ಮೈಮನ
      ತುಷ್ಟಿಯಕ್ಕದ ಸಾಲಿಗಂಗದೆ ನೇದ ಬಲೆಯೊಳವೆ ॥

      1. ಈ ಮುತ್ತುಗೊ ಎಲ್ಲಾ ಇಷ್ಟರವರೆಗೆ ಎಲ್ಲಿ ಹುಗ್ಗಿತ್ತು ಅತ್ತೆ?

  15. ಧನ್ಯವಾದ ಭಾಲಕ್ಕ.ಆನು ಸುರುವಿಂಗೆ ಮದ ಹೇಳಿಯೇ ಬರದ್ದದು.ಉದರಂಭರಣ ಆದ ಮತ್ತೆ ಚಾಲ್ಯ ಮುದಗೊಂಡತ್ತು ಹೇಳುವ ಅರ್ಥಲ್ಲಿ ಹಾಂಗೆ ತೆಕ್ಕೊಂಡದು ಅಷ್ಟೆ.

    1. ನಿ೦ಗ ಹೇಳಿದ ರೀತಿಲಿ ಆಲೋಚನೆ ಮಾಡ್ವಗ ಹಾ೦ಗೆ ಕಾಣ್ತು ನರಸಿ೦ಹಣ್ಣ. ಇ೦ದ್ರಿಯ ಚಪಲಕ್ಕೆ ಬೇಕು ಬೇಕಾದ್ದು ಸಿಕ್ಕಿ ಅಪ್ಪಗ ಮುದ ವೇ ಅಪ್ಪದು.

  16. ಇದುವೆ ನಿಸರ್ಗದ ಕಲೆಯೋ?
    ಉದರದೊಸರಿಂದಲೆ ನೇಯ್ದು ಮಾಡಿದ ಬಲೆಯೋ?
    ಉದರಂಭರಣದ ಕೆಣಿಯೋ?
    ಮುದ ತುಂಬಿದ ಚಾಲ್ಯ ಪೋಣಿಸಿದ ಬೆಳಿ ಮಣಿಯೋ?
    (ಚಾಲ್ಯ=ಸಾಲಿಗ,ಜೇಡ)

    1. ನರಸಿ೦ಹಣ್ಣ,
      ಭಾರೀ ಲಾಯಿಕಾಯಿದು.”ಮುದ” ಹೇಳುದು ‘ಮದ” ಹೇಳಿದರೆ ಬಲಗೆ ಇನ್ನೂ ಅರ್ಥ(ಅನರ್ಥವುದೆ) ಹೆಚ್ಹು ಆವುತ್ತ್ತತ್ತು.

    2. ಅಡ್ಡಬಿದ್ದೆ ಮಾವ. ಈ ಪದ್ಯದೆದುರು ಎಂಗೊ ಎಲ್ಲ ಪುಟ್ಟು” ಕಂದ”ಂಗೊ.

    3. ಮಾವಾ,
      ಜೇಡನ ಬಲೆಗೆ ಭಾರೀ ಚೆ೦ದದ ಅಲ೦ಕಾರ. ಕ೦ದ ಪದ್ಯದ ಈ ಅದ್ಭುತ ಪ್ರಯತ್ನಕ್ಕೆ ಶರಣು.

    4. ಆದಿಯೊಟ್ಟಿಂಗೆ ಅಂತ್ಯಪ್ರಾಸವನ್ನೂ ತಂದದು ಭಾರೀ ಲಾಯ್ಕಾಯ್ದು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×