Oppanna.com

ಸಮಸ್ಯೆ 30: ಪೇಟಗೆ ಹೋದರೆ ಸೀರೆಯ ತನ್ನೀ।।

ಬರದೋರು :   ಸಂಪಾದಕ°    on   04/05/2013    18 ಒಪ್ಪಂಗೊ

ಈ ವಾರ ದೋಧಕ ಛ೦ದಸ್ಸಿನ ಪರಿಚಯ ಮಾಡುವ.

ಹನ್ನೊ೦ದು ಅಕ್ಷರ೦ಗೊ ಪ್ರತಿಸಾಲಿಲಿ ಬಪ್ಪ ಈ ಛ೦ದಸ್ಸಿಲಿ ಮೂರು “ಭಗಣ”೦ಗೊ ಕಡೇ೦ಗೆ ಎರಡು ಗುರು ಅಷ್ಟೇ..

ಲಕ್ಷಣ ಹೀ೦ಗಿದ್ದುಃ

-೧೧-೧೧-೧೧ – – ( ನಾನನ ನಾನನ ನಾನನ ನಾನಾ)

ಕನ್ನಡ ಮಾಷ್ಟ್ರು ಭತ್ರಯಮಿರ್ಗುರು ದೋಧಕವೃತ್ತ೦  ಹೇಳಿ ಕಲುಶುತ್ತವಡ ಶಾಲೆಲಿ.

ಉದಾಹರಣೆಗೆ ಉದ್ಭಟಕಾವ್ಯದ ಈ ಭಾಗ ನೋಡಿ.

ದೇವನಿಕಾಯಕಿರೀಟಕನದ್ರ

ತ್ನಾವಳಿಸ೦ಜನಿತಾ೦ಶುವಜಸ್ರ೦

ತೀವಿ ವಿರಾಜಿಪ ದೇವಿಯ ಪಾದ

ಕ್ಕಾ ವಸುಧಾಪತಿ ಪಾದ್ಯಮನಿತ್ತ೦।।

 

ನಮ್ಮ ಇ೦ದ್ರಾಣ ಸಮಸ್ಯೆ  : ಪೇಟಗೆ ಹೋದರೆ ಸೀರೆಯ ತನ್ನೀ।।

ಹೇ೦ಗೇ? ತಪ್ಪನೋ ?

18 thoughts on “ಸಮಸ್ಯೆ 30: ಪೇಟಗೆ ಹೋದರೆ ಸೀರೆಯ ತನ್ನೀ।।

  1. ನಾರಿಗೆ ಸೀರೆಯು ಇದ್ದರು ನೂರು
    ಔಟ್ ಆಫ್ ಫಾಶನ್ ಅಪ್ಪದು ಜೋರು
    ಸುತ್ತಿರೆ ಹೇಳುಗು ಅದು ಹಳೆ ಸೀರೆ
    ಚಿ೦ತಿಸ ಆದರು ಅದು ಬಲು ಧೀರೆ
    ಹೇಳಿದ ತಮ್ಮ ಮದುವೆಗೆ ಬನ್ನಿ
    ಪೇಟಗೆ ಹೋದರೆ ಸೀರೆಯ ತನ್ನಿ .

  2. ಬಾಣ-೪
    ಪೇಟಗೆ ಹೋದರೆ ಸೀರೆಯ ತನ್ನೀ
    ಮೆಟ್ಟಿನ ಜೋಡುದೆ ತಂಗಗೆ ಬೇಕೂ
    ಶೆಟ್ಟಿಯ ಅಂಗಡಿ ಕೋಸುದೆ ಬೇಕೂ
    ಪಟ್ಟಿಯ ಮಾಡಿರೆ ನೆಂಪದು ಇಕ್ಕೂ
    ಬಾಣ-೫
    ಪೇಟಗೆ ಹೋದರೆ ಸೀರೆಯ ತನ್ನೀ
    ಹೋಟೆಲು ತಿಂಡಿಯ ಬೇಕರಿ ಬನ್ನೂ
    ಕಟ್ಟುಸಿ ತಂದರೆ ತೊಂದರೆ ಇಲ್ಲೇ
    ನೆಂಟರು ಮಕ್ಕೊಗೆ ಭರ್ಜರಿ ಊಟಾ

  3. *ಕಾಟನು (cotton)ಸೀರೆಯ ಸುತ್ತಿದ ಆ ಮೈ-

    ಮಾಟದ ಹೆಣ್ಣಿನ ನೋಡಿದೆ ,ಏಕೋ!

    ಊಟದ ಹೊತ್ತಿಲೆ ಹೆಂಡತಿ “ಇಂದೇ-

    ಪೇಟೆಗೆ ಹೋದರೆ ಸೀರೆಯ ತನ್ನೀ”

    * ಮಾಟದ ಚೌಕುಳಿ ಬಣ್ನದ ಸೀರೇ

    ‘ ಕೋಟನು’ ಆದರು ಅಕ್ಕೆನಗೆಂದೇ

    ನೋಟಕೆ, ತೂಕಕೆ ,ಚೆಂದಕೆ- ಇಂದೇ

    ಪೇಟೆಗೆ ಹೋದರೆಸೀರೆಯ ತನ್ನೀ

  4. ಕೋಟಿಯೆ ಕೊಟ್ಟರು ಸಿಕ್ಕವು ಕೂಸೇ

    ಸಾಟಿಯೆ ಇಲ್ಲೆಯೊ ವಜ್ರಕು ನೀನೂ

    ಬೇಟೆಗೆ ಸಿಕ್ಕದ ಜಿಂಕೆಯು ನೀನೇ

    ಮೀಟಿರೆ ಸಣ್ಣಕೆ ವೀಣೆಯ ಹಾಂಗೇ ||

    ನಾಟಕ ಮಾಡುದು ನಿಲ್ಲಿಸಿ ಈಗಾ

    ತೋಟಕ ಬರ್ದುದೆ ಆತೆನ ನೋಡೀ

    ಗೇಟಿಗೆ ಓದಿಕಿ ಅಪ್ಪಗ ಹೀಂಗೇ

    ಪೇಟಗೆ ಹೋದರೆ ಸೀರೆಯ ತನ್ನೀ।।

    ಗೇಟು(GATE) = ಉನ್ನತ ವ್ಯಾಸಂಗದ ಪ್ರವೇಶ ಪರೀಕ್ಷೆ

  5. ಪೇಟಗೆ ಹೋದರೆ ಸೀರೆಯ ತನ್ನೀ
    ಕೇಟರೆ ಹೆಂಡತಿ ಕೂಟರು ಗಂಡಾ
    ಕೋಟನು ಬೂಟನು ತಪ್ಪಲೆ ಬೇಕೀ
    ನೋಟಿನ ಸೀಟಿನ ಒಳ್ಸುಲೆಯೆನ್ಗೇ

    ಸಾಟಿನ ಊಟಕೆ ಹೋಗಲೆ ಬೇಕೋ
    ಕೂಟದ ಆಟವು ಬೇಡವು ನೀಡೇ
    ಕಾಟಿನ ಕೋಟೆಯ ದಾಂಟದೆ ಕಾಲು
    ಹಾರ್ಟಿನ ಮಾತ್ರೆಗೆ ಬೇಕದ ಪೈಸೇ ॥
    (ಕೂಟರು= ಸ್ಕೂಟರು)

  6. ಬಾಣ-೧
    ಊಟಕೆ ಹೋಪಲೆ ಸೀರೆಯೆ ಇಲ್ಲೇ
    ಪೇಟಗೆ ಹೋದರೆ ಸೀರೆಯ ತನ್ನೀ
    ಮಾಟದ ಗೊಂಬೆಯ ರಂಗಿನ ಸೀರೇ
    ನೋಟಕೆ ರಂಭೆಯ ಹಾಂಗಿಪ ನೀರೇ
    ಬಾಣ-೨
    ಪೇಟಗೆ ಹೋದರೆ ಸೀರೆಯ ತನ್ನೀ
    ಹೋಟೆಲು ತಿಂಡಿಯ ತಿನ್ನೆಡಿ ತುಂಬಾ
    ಆಟಿಕೆ ವಸ್ತುಗೊ ಮಕ್ಕೊಗೆ ಬೇಕೂ
    ಊಟಕೆ ಇಲ್ಲಿಗೆ ತಪ್ಪದೆ ಬನ್ನೀ
    ಬಾಣ-೩
    ಕೋಟೆಯ ಹತ್ತರೆ ಹೋಗೆಡಿ ಆತೋ
    ಮಾಟದ ಹೆಣ್ಣುಗೊ ಇದ್ದವು ಅಲ್ಲೀ
    ಊಟಕೆ ಹೋಪಲೆ ಭರ್ಜರಿ ಸೀರೇ
    ಪೇಟಗೆ ಹೋದರೆ ಸೀರೆಯ ತನ್ನೀ

    ವಿ.ಸೂ.-ಸ್ವಂತ ಅನುಭವ ಅಲ್ಲ

  7. ಕಾಟನು ವಸ್ತ್ರಕೆ ಬೇಕದ ಇಸ್ತ್ರೀ
    ಕೊಟ್ಟಿದೆ ಮೊನ್ನೆಯೆ ಸೀರೆಯ ನಾಕೂ
    ಬಿಟ್ಟರೆ ಅಲ್ಲಿಯೆ ಕಾಣೆಯೆ ಅಕ್ಕೂ
    ಪೇಟಗೆ ಹೋದರೆ ಸೀರೆಯ ತನ್ನೀ ॥

  8. ಆಟಿಯ ತಿಂಗಳು ದಾಂಟಿದ ಮೇಲೇ
    ಊಟಕೆ ಹೋಪಲೆ ಎಷ್ಟುದೆ ಇದ್ದೂ
    ಪಟ್ಟೆಯ ಸೀರೆಯ ತಪ್ಪಲೆ ಬೇಕೂ
    ಪೇಟೆಗೆ ಹೋದರೆ ಸೀರೆಯ ತನ್ನೀ ॥

  9. ತೋಟಕೆ ಹೋದರೆ ಹಾಳೆಯ ತನ್ನೀ
    ಊಟಕೆ ಹೋದರೆ ಹೋಳಿಗೆ ತಿನ್ನೀ
    ಪೇಟಗೆ ಹೋದರೆ ಸೀರೆಯ ತನ್ನೀ
    ತಾಟಕಿ ಹೆಂಡತಿ ಹೇಳುದು ಕೇಳೀ

    1. ಒಗ್ಗರಣೆ ಕಡ್ಪ ಆಯಿದು ಶ್ಯಾಮಣ್ಣ.

    2. ಇದೆ೦ತ ಶಾಮಣ್ಣ, ದಾಸಪ್ಪ ಮಾಸ್ಟ್ರನ ಸುಖ ಸ೦ಸಾರದ ೪ ಸೂತ್ರ೦ಗಳೊ?

    3. ಯಬ್ಬೋ! ಶಾಮಣ್ಣಾ!

  10. ಶಾರದಕ್ಕ ಕರ್ನಾಟಕಲ್ಲಿದ್ದರೆ ಈ ನೆವನ ಹೇಳಿ ಸತ್ಯಣ್ಣನತ್ತರೆ ಸೀರೆ ವಸೂಲು ಮಾಡ್ತಿತ್ತಡ್ಡ . ಸತ್ಯಣ್ಣನ ಹೇಳಿಕೆ
    ಓಟದು ಹಾಕುಲೆ ಹೋಪಲೆಯಿದ್ದೂ
    ಪೇಟಗೆ ಹೋದರೆ ಸೀರೆಯ ತನ್ನೀ
    ಹರ್ಕಟೆ ಸೀರೆಯ ಸುತ್ತುಲೆಯೆಡ್ಯಾ
    ಳೂಟಕೆ ಕೂಪಗ ಕೊಡ್ತಿತಿದಾರ್ಜೀ

    ಕ್ಷಮಿಸಿ. ಚೋಕಟೆ ಗಮನಿಸದ್ದೆ ಬರದ್ದು. (ಗೊ೦ತಿದ್ದು ಮಾಡಿದ ತಪ್ಪು)

    1. ಛೇ..ಛೇ ಆದಿಪ್ರಾಸವೇ ತಪ್ಪಿತ್ತು.

      ಓಟದು ಹಾಕುಲೆ ಹೋಪಲೆಯಿದ್ದೂ
      ಪೇಟಗೆ ಹೋದರೆ ಸೀರೆಯ ತನ್ನೀ
      ಯೊಟ್ಟೆಯ ಸೀರೆಯ ಸುತ್ತುಲೆಯೆಡ್ಯಾ
      ಳೂಟಕೆ ಕೂಪಗ ಕೊಡ್ತಿತಿದಾರ್ಜೀ

      1. 😀 😀 ಆನುದೇ ಹೀಂಗಿಪ್ಪದು ಒಂದು ಆಯೇಕು ಹೇಳಿ ಗ್ರೇಶಿದೆ.., ಪಾಯಕ್ಕೆ ಸಿಕ್ಕಿತ್ತಿಲ್ಲೇದು ಬರವಲೆ. ಅಭಿನಂದನೆಗೊ ಭಾಗ್ಯಕ್ಕಂಗೆ

        1. ಚೆನ್ನೈ ಭಾವ,
          ನಿ೦ಗೊಗುದೆ ಬರವಲೆ ಎಡಿಗು.ಯಮಾತಾರಾಜಭಾನಸಲಗ೦ ಹೇಳುದಕ್ಕೆ ಲಘು,ಗುರು ಹಾಕುದು ಬಿಟ್ಟರೆ ಎನಗೆ ಬೇರೆ೦ತ ಗೊನ್ತಿತ್ತಿಲ್ಲೆ.ಪದ್ಯಪಾನ ,ಒಪ್ಪಣ್ಣನ ಬೈಲಿ೦ದ ನೋಡಿ, ಓದಿ ಕಲ್ತದು. ೨ ವಾರ ಮೊದಲು ”ಕನ್ನಡ ಛ೦ದಸ್ಸಿನ ಪ್ರವೇಶಿಕೆ”’ ಹೇಳುವ ಪುಸ್ತಕ ತ೦ದೆ. ಮತ್ತೂ ರಜ್ಜ ಹೆಚ್ಹು ಗೊ೦ತಾತು. ಮೊದಲು ಬೇರೆವು ಬರವದು ನೋಡಿ ಎ೦ತಕಪ್ಪ ಇಷ್ಟು ಪೆಡಚ್ಹುತ್ತವು ಹೇಳಿ ಕ೦ಡುಗೊ೦ಡಿತ್ತು. ಈಗ ಪೆಡಚ್ಹೆಕ್ಕಾದ್ದು ಎ೦ತಕೆ ಹೇಳಿ ಸರೀ ಗೊ೦ತಾವುತ್ತು. ತಪ್ಪಾದರೆ ಸರಿ ಮಾಡ್ಲೆ ಇಲ್ಲಿ ೨ ಜನ ಗುರುಗೊ ಇದ್ದವಿದಾ -ಟೀಕೆ ಮಾವ೦ದೆ ಮುಳಿಯದಣ್ಣ೦ದೆ.

      2. ಒಟ್ಟಾರೆ ಸೀರೆ ಬ೦ದರಾತಿಲ್ಲೆಯೋ ಅಕ್ಕಾ.ಲಾಯ್ಕ ಆಯಿದು.

  11. ಶಾರದಕ್ಕ ಕರ್ನಾಟಕಲ್ಲಿದ್ದರೆ ಈ ನೆವನ ಹೇಳಿ ಸತ್ಯಣ್ಣನತ್ತರೆ ಸೀರೆ ವಸೂಲು ಮಾಡ್ತಿತ್ತಡ್ಡ . ಸತ್ಯಣ್ಣನ ಹೇಳಿಕೆ

    ಓಟದು ಹಾಕುಲೆ ಹೋಪಲೆಯಿದ್ದೂ
    ಪೇಟಗೆ ಹೋದರೆ ಸೀರೆಯ ತನ್ನೀ
    ಚೋಕಟೆ ಸೀರೆಯ ಸುತ್ತುಲೆಯೆಡ್ಯಾ
    ಳೂಟಕೆ ಕೂಪಗ ಕೊಡ್ತಿತಿದಾರ್ಜೀ

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×