ಸಮಸ್ಯೆ : 43 ರಾಮ-ಹನುಮರ ಭೇಟಿ

ಈ ವಾರ ಒ೦ದು ಹೊಸ ಪ್ರಯತ್ನ ಮಾಡುವ.

ಋಷ್ಯಮೂಕ ಪರ್ವತದ ಬುಡಲ್ಲಿ  ಸೀತಾದೇವಿಯ ಹುಡುಕ್ಕುತ್ತಾ ಬ೦ದ ರಾಮಲಕ್ಷ್ಮಣರ ಮತ್ತೆ ವಟುರೂಪಿ ಹನುಮ೦ತನ ಭೇಟಿಯ ಸನ್ನಿವೇಶವ ಕವನ ರೂಪಲ್ಲಿ ಏವದಾರು ಛ೦ದಸ್ಸಿಲಿ  ಬರೆಯಿ.

ಸಂಪಾದಕ°

   

You may also like...

56 Responses

 1. ಶ್ಯಾಮಣ್ಣ says:

  ಅಪ್ಪನಾಡಿದ ಮಾತು,
  ಅಮ್ಮನ ಅಣತಿ ಪಾಲಿಸಿ
  ಕಾಡುಮೇಡಿಲಿ ಅಲೆದು ನಲ್ಲೆಯ
  ಕಳೆದು ಕೊಂಡವ
  ಹುಡುಕಿ ಬಂದನೋ
  ಸೌಮಿತ್ರಿಯಣ್ಣನೇ
  ಶ್ಯಾಮಸುಂದರನು?

  ಹಣೆಗೆ ಗಂಧ ವಿಭೂತಿ ಕುಂಕುಮ
  ಎಡದ ಹೆಗಲಿನ ನೂಲಿನೆಳೆ
  ಯಜ್ಞೋಪವೀತದ ಸೊಬಗು ಕಂಡೆಯ…
  ಮಂತ್ರ ಹೇಳುವ ಮಾಣಿ ನೋಡಾ
  ಗಾಳಿ ಪುತ್ರನೆ
  ದಾರಿ ಅಡ್ಡಕೆ ನಿಂದಿದದ
  ಸುಕುಮಾರ ಸುಂದರನೋ?

  ಮಹರ್ಷಿ ಮೌನಿಯ ಬೆಟ್ಟ ಸಾಕ್ಷಿಗೆ
  ಸಹರ್ಷ ಸಮ್ಮಿಲನ
  ——————-
  ಶ್ಯಾಮಸುಂದರ=ರಾಮ
  ಸುಂದರ=ಹನುಮ (ಸುಂದರ ಕಾಂಡ ಇಡೀ ಹನುಮಂತಂದಲ್ಲದಾ?)
  ಮಹರ್ಷಿ ಮೌನಿಯ ಬೆಟ್ಟ=ಋಷ್ಯಮೂಕ ಪರ್ವತ

  • ತೆಕ್ಕುಂಜ ಕುಮಾರ ಮಾವ° says:

   ” ಪೆನ್ಸಿಲು” ಓಡಿದ ಹಾಂಗೆ ಇದು ಓಡಿದ್ದಿಲೆ ಭಾವ.

 2. ಅದಿತಿ says:

  ತುಂಬಾ ಲಾಯ್ಕಾಯ್ದು 🙂 ಕುಶಿಯಾತು.

  • ಭಾಗ್ಯಲಕ್ಶ್ಮಿ says:

   ಮಹರ್ಷಿ ಮೌನಿಯ ಬೆಟ್ಟ ಸಾಕ್ಷಿಗೆ –ಈ ಸಾಲುಗೊ ಕೊಶಿಯಾತು ಶ್ಯಾಮಣ್ಣ

 3. ಶೈಲಜಾ ಕೇಕಣಾಜೆ says:

  ದಿಕ್ಕು ದಕ್ಷಿಣ ಹೊಡೆಲಿ ರಾವಣ
  ಬಿಕ್ಕಿ ಕೂಗುವ ಸೀತೆಯೊಯ್ವಗ
  ಕುಕ್ಕಿ ಕೊಕ್ಕಿಲಿ ಕೊಂದ ಪುಷ್ಪಕ ಯಾನ ಸಾರಥಿಯ
  ಸಿಕ್ಕ ಹಕ್ಕಿ ಜಟಾಯು ಶುದ್ದಿಯು
  ತಕ್ಕ ಮಟ್ಟಿನ ದಾರಿ ತಿಳುಶಿದ
  ದುಕ್ಕ ತೀರಿ ಕಬಂಧ ಮೋಕ್ಷವ ಪಡೆದು ರಾಮಂಗೆ ||

  ಆದರದರಾತಿಥ್ಯ ಮುಗುಶಿಯೆ
  ಕಾದ ಶಬರಿಗೆ ಮೋಕ್ಷ ಕರುಣಿಸಿ
  ಮೇದಿನಿಲಿ ಹರಿವ ಪಂಪಾ ತೀರ ತಲುಪುವಗ
  ಗಾದಿ ಹಸುರಿಲಿ ಕಂಗೊಳಿಪ ಸಿರಿ
  ಬಾದಿಯಾಯಿದೊ ಹೇಳ್ವ ರೀತಿಲೆ
  ಸೀದ ಕಂಡದು ಋಷ್ಯ ಮೂಕದ ಶೈಲಗಳ ಶೃಂಗ ||

  ಅಟ್ಟಿನಳಗೆಯ ರಾಶಿ ಕೊಟ್ಟಿಗೆ
  ಯಟ್ಟಿ ಮಡುಗಿದ ಹಾಂಗೆ ಕಾಂಬದು
  ಮುಟ್ಟದಷ್ಟೆತ್ತರಕೆ ಹಬ್ಬಿದ ಶಿಖರ ತಪ್ಪಲುಗೊ
  ಮೊಟ್ಟಮೊದಲಿಲಿ ಕಂಡನನುಜರ
  ಸುಟ್ಟ ಕಾಲಿಲಿ ಹುಗ್ಗಿ ವಾಲಿಗೆ
  ಜಟ್ಟಿಯಾದರು ಹೆದರಿದಾ ಕಪಿರಾಜ ಸುಗ್ರೀವ ||

  ತನ್ನ ಮೆಚ್ಚಿನ ಮಂತ್ರಿ ಹನುಮನ
  ಭಿನ್ನವಿಸಿ ಕಳುಸಿದರವರ ರಜ
  ಹಿನ್ನಲೆಯ ತಿಳಿವಲೆ ಕೆಣಿಲಿದ ವಿಪ್ರ ವೇಷಲಿಯೆ
  ಹೊನ್ನಕಲಶದ ಸೇವೆನಿಷ್ಠೆಲಿ
  ತನ್ನತನವಿಡಿ ತೋರ್ಸಿ ಬೆಳಗುಲೆ
  ಸನ್ನೆ ಮಾರುತಿ ಕಂಡನಲ್ಲಿಯೆ ದಿವ್ಯ ದರುಶನಲಿ ||

  (ಹನುಮನ ಸ್ವಾಮಿನಿಷ್ಠೆಯ ಲೋಕ ಅರಿವಲೆ ರಾಮ ನೆಪ ಮಾತ್ರ)

  • ಅದಿತಿ says:

   ಶೈಲಜಕ್ಕ,
   ತುಂಬಾ ಲಾಯ್ಕಾಯ್ದು.
   “ಅಟ್ಟಿನಳಗೆಯ ರಾಶಿ ಕೊಟ್ಟಿಗೆ” – ಒಳ್ಳೆ ಕಲ್ಪನೆ.

  • ರಘುಮುಳಿಯ says:

   ಭಾರೀ ಲಾಯ್ಕ ಆಯಿದು ಶೈಲಜಕ್ಕಾ.
   ಎರಡು ಜಾಗೆಲಿ ತಿದ್ದೆಕ್ಕು.
   ೧. ಮೇದಿ/ನಿಲಿ ಹರಿ/ವ ಪಂ/ಪಾ ತೀ/ರ ತಲು/ಪುವಗ – ಇಲ್ಲಿ ಯತಿಭ೦ಗ ಆಯಿದು. ವ ಪ೦ ಹೇಳ್ತಲ್ಲಿ ಓದುಲೆ ಕಷ್ಟ .ಮಾತ್ರೆ ಲೆಕ್ಕ ಕಮ್ಮಿ ಇದ್ದು.
   ೨. ಹಿನ್ನ/ಲೆಯ ತಿಳಿ/ವಲೆ ಕೆ/ಣಿಲಿದ ವಿ/ಪ್ರ ವೇ/ಷಲಿಯೆ – ಇಲ್ಲಿ ಣಿಲಿದ ವಿ ಹೇಳುವಲ್ಲಿ ಐದು ಮಾತ್ರೆಗೊ ಬ೦ತು,ವಾಕ್ಯಲ್ಲಿ ಮಾತ್ರೆ ಲೆಕ್ಕ ಕಮ್ಮಿ ಇದ್ದು.

   • ಶೈಲಜಾ ಕೇಕಣಾಜೆ says:

    ಅಣ್ಣಾ …ಧನ್ಯವಾದಂಗೋ…
    ನದಿ ಹೇಳ್ವ ಶಬ್ದ ಟೈಪು ಮಾಡ್ವಗ ಬಿಟ್ಟುಹೋದ್ದು…..

    ದಿಕ್ಕು ದಕ್ಷಿಣ ಹೊಡೆಲಿ ರಾವಣ
    ಬಿಕ್ಕಿ ಕೂಗುವ ಸೀತೆಯೊಯ್ವಗ
    ಕುಕ್ಕಿ ಕೊಕ್ಕಿಲಿ ಕೊಂದ ಪುಷ್ಪಕ ಯಾನ ಸಾರಥಿಯ
    ಸಿಕ್ಕ ಹಕ್ಕಿ ಜಟಾಯು ಶುದ್ದಿಯು
    ತಕ್ಕ ಮಟ್ಟಿನ ದಾರಿ ತಿಳುಶಿದ
    ದುಕ್ಕ ತೀರಿ ಕಬಂಧ ಮೋಕ್ಷವ ಪಡೆದು ರಾಮಂಗೆ ||
    ಆದರದರಾತಿಥ್ಯ ಮುಗುಶಿಯೆ
    ಕಾದ ಶಬರಿಗೆ ಮೋಕ್ಷ ಕರುಣಿಸಿ
    ಮೇದಿನಿಲಿ ಹರಿವ ನದಿ ಪಂಪಾ ತೀರ ತಲುಪುವಗ
    ಗಾದಿ ಹಸುರಿಲಿ ಕಂಗೊಳಿಪ ಸಿರಿ
    ಬಾದಿಯಾಯಿದೊ ಹೇಳ್ವ ರೀತಿಲೆ
    ಸೀದ ಕಂಡದು ಋಷ್ಯ ಮೂಕದ ಶೈಲಗಳ ಶೃಂಗ ||
    ಅಟ್ಟಿನಳಗೆಯ ರಾಶಿ ಕೊಟ್ಟಿಗೆ
    ಯಟ್ಟಿ ಮಡುಗಿದ ಹಾಂಗೆ ಕಾಂಬದು
    ಮುಟ್ಟದಷ್ಟೆತ್ತರಕೆ ಹಬ್ಬಿದ ಶಿಖರ ತಪ್ಪಲುಗೊ
    ಮೊಟ್ಟಮೊದಲಿಲಿ ಕಂಡನನುಜರ
    ಸುಟ್ಟ ಕಾಲಿಲಿ ಹುಗ್ಗಿ ವಾಲಿಗೆ
    ಜಟ್ಟಿಯಾದರು ಹೆದರಿದಾ ಕಪಿರಾಜ ಸುಗ್ರೀವ ||
    ತನ್ನ ಮೆಚ್ಚಿನ ಮಂತ್ರಿ ಹನುಮನ
    ಭಿನ್ನವಿಸಿ ಕಳುಸಿದರವರ ರಜ
    ಹಿನ್ನಲೆಯ ತಿಳಿದರಿವ ಕೆಣಿಲಿದ ವಿಪ್ರ ವೇಷಲಿಯೆ
    ಹೊನ್ನಕಲಶದ ಸೇವೆನಿಷ್ಠೆಲಿ
    ತನ್ನತನವಿಡಿ ತೋರ್ಸಿ ಬೆಳಗುಲೆ
    ಸನ್ನೆ ಮಾರುತಿ ಕಂಡನಲ್ಲಿಯೆ ದಿವ್ಯ ದರುಶನಲಿ ||
    (ಹನುಮನ ಸ್ವಾಮಿನಿಷ್ಠೆಯ ಲೋಕ ಅರಿವಲೆ ರಾಮ ನೆಪ ಮಾತ್ರ)

    • ಬಾಲಣ್ಣ (ಬಾಲಮಧುರಕಾನನ) says:

     ಶೈಲಕ್ಕಾ,ಲಾಯಕಕೆ ಬರದ್ದಿ

     *ಅಟ್ಟಿನಳಗೆಯ……ಶಿಖರ ತಪ್ಪಲುಗೊ-ಕೊಶಿಯಾತು.

     *ಸುಟ್ತ ಕಾಲಿಲಿ ಹುಗ್ಗಿ….ಎಂತದು ಗೊಂತಾತಿಲ್ಲೆನ್ನೆಪ್ಪಾ!

     • ಶೈಲಜಾ ಕೇಕಣಾಜೆ says:

      ಧನ್ಯವಾದಂಗೋ ಮಾವ…
      ಅಣ್ಣ ವಾಲಿಯ ಹತ್ತರೆ ಯುದ್ಧ ಮಾಡಿ ಕಾಲು ಸುಟ್ಟುಗೊಂಡು ಸ್ಥೈರ್ಯ ಇಲ್ಲದ್ದೆ ಆರಿಂಗೂ ಗೊಂತಾಗದ್ದ ಹಾಂಗೆ ಹುಗ್ಗಿ ಕಿಷ್ಕಿಂಧೆಲಿಪ್ಪದರ ಹೀಂಗೆ ಹೇಳಿದ್ದು

     • ಭಾಗ್ಯಲಕ್ಶ್ಮಿ says:

      ಲಾಯಿಕ ಆಯಿದು ಶೈಲಕ್ಕ.ದೊಡಾ ಅಟ್ಟಿನಳಗೆ , ಅದರಲ್ಲಿ ತು೦ಬ ಕೊಟ್ಟಿಗೆ ,ವಿಶೇಷ ಕಲ್ಪನೆ !

 4. ಅದಿತಿ says:

  ಸ್ಫರ್ಧೆಗೆ ಬಿದ್ದ ಹಾಂಗೆ ಎಲ್ಲೋರು ಬರವದು ನೋಡಿ ತುಂಬಾ ಕುಶಿಯಾತು.

  • ತೆಕ್ಕುಂಜ ಕುಮಾರ ಮಾವ° says:

   ಈ ಸ್ಪರ್ಧೆ ಎವತ್ತೂ ನಿಲ್ಲದ್ದೆ ಮುಂದುವರಿಯಲಿ, ಅಲ್ಲದೋ ಅಕ್ಕ.

 5. ರಘುಮುಳಿಯ says:

  ಕಲ್ಲು ಮರ ಬಳ್ಳಿಗಳೆ ಸೀತೆಯ
  ಸೊಲ್ಲು ಕೇಟಿರೊ ಕ೦ಡಿದಿರೊ ನೀ
  ನೆಲ್ಲಿ ಹೋದೆಯೊ ಜನಪನಾತ್ಮಜೆ ಹೇಳುತಸಬಡುದು।
  ಮೆಲ್ಲ ತಮ್ಮನ ಕೈಹಿಡುದು ಹೋ
  ಪಲ್ಲಿ ಬಿದ್ದ ಜಟಾಯು ಹಾರಾ
  ಟಲ್ಲಿ ರಾವಣ ಕದ್ದ ಶುದ್ದಿಯನೊಪ್ಪುಸಿದ ಮೇಲೇ||

  ಅಬಲೆ ಸೀತೆಯ ಹುಡುಕಿ ಕಾಡಿಲಿ
  ಶಬರಿಯೆ೦ಜಲ ಹಣ್ಣ ರುಚಿ ಸವಿ
  ದಬುಜ ಬ೦ಧುವ ವ೦ಶ ಬೆಳಗಿದ ರಾಮಚ೦ದ್ರಮನು।
  ಸೊಬಗ ಪ೦ಪಾಕರೆಲಿ ನೋಡಿದ°
  ಕೊಬಳಿಳಿವ ವರವಿಪ್ರನಾಕೃತಿ
  ಸಬಲನಪ್ಪೀ ಬಾಲವಟುವಿವ° ಯೇವ ಗೋತ್ರಜನೋ ||

  ಅಕ್ಷಿಗಳ ಮುಚ್ಚದ್ದೆ ಮನಸಿಲೆ
  ದಕ್ಷನಪ್ಪೀ ಜವ್ವನಿಗನಿವ°
  ರಕ್ಷಿಸುವ ನೆರಳಕ್ಕು ಮು೦ದ೦ಗೆ೦ಬ ಯೋಚನೆಲೇ।
  ದಕ್ಷಿಣಕೆ ನೆಡೆತ೦ದವಕೆ ಪ್ರ
  ದಕ್ಷಿಣೆಯ ಮಾಡಿಕ್ಕಿ ಕೈ ಮುಗಿ
  ದಕ್ಷರದ ಮುತ್ತುಗಳ ಮಾಲೆಯನರ್ಪಿಸಿದ ಹನುಮ°||

  ದೇವ ನಿನ್ನಯ ಪಾದಯುಗಳವ
  ಸೇವೆ ಮಾಡುವೆ ನೋಡು ಜೀವನ
  ನಾವೆಯಾ ದುಷ್ಟಾತ್ಮ ವಾಲಿಯು ಮುಳುಗುಸಿದನಯ್ಯೋ।
  ಬಾ ವರವ ನೀಡೆನ್ನ ಹೆಗಲಿನ
  ಸಾವಕಾಶಲ್ಲೇರು ದಿನದಿನ
  ಸಾವ ಕಿಷ್ಕಿ೦ದಾಧಿಪನ ತಮ್ಮ೦ಗೆ ಬದುಕು ಕೊಡು||

  ಆ ರವಿಯ ವರವ೦ಶ ಸ೦ಭವ°
  ಮಾರುತಿಯ ಮಾತುಗಳ ಕೇಳಿದ°
  ಭಾರ ಮನಸಿಲಿ ಸೂರ್ಯಪುತ್ರನ ಕಷ್ಟಕತೆಯಿಡಿಕ।
  ನೂರು ವಾಲಿಗಳಡ್ಡ ಬ೦ದರು
  ತೋರುಸುವೆ ನಿಜಧರ್ಮಮಾರ್ಗವ
  ಹಾರು ಹನುಮನೆ ಋಷ್ಯಮೂಕದ ಗುಡ್ಡೆಕೊಡಿ ಸೇರು||

  • ಇಂದಿರತ್ತೆ says:

   ಅವರಿಬ್ಬರ ಭೇಟಿಯ ಕರೇ…ಲಿ ನಿಂದು ನೋಡಿದ ಹಾಂಗಿದ್ದನ್ನೆ- ಅದ್ಭುತ !

  • ಬಾಲಣ್ಣ (ಬಾಲಮಧುರಕಾನನ) says:

   ಆಹಾ….! ಅಕ್ಷರದ ಮಾಲೆಯನರ್ಪಿಸಿದ … ,ಕಿಷ್ಕಿಂಧಾಧಿಪನ ತಮ್ಮಂಗೆ ಬದುಕು ಕೊಡು.., ತೋರುಸುವೆ ನಿಜ ಧರ್ಮ ಮಾರ್ಗವ …. , ಮುಳಿಯದಣ್ಣಾ, ಎಂತಾ ಮಾತುಗಳ ಮಾಲೆ ಕಟ್ಟಿದಿರಪ್ಪಾ… , ಕವಿಗೆ ಕವಿ ಮಣಿವಂ, ಮಣಿದೆಂ.

 6. ಇಂದಿರತ್ತೆ says:

  ವೇಷ ಮರೆಸಿದ ಹನುಮನಿಳುದೂ
  ಕೋಸಲ ದೊರೆಯ ಬಂದು ನೋಡಿರೆ
  ಪಾಶವೆಳದತು ದೇವದರ್ಶನವಾದ ಮಾರುತಿಗೆ ।
  ಈಶನಿವನೆನ್ನೊಡೆಯನೆಂದವ°
  ತೋಷ ಹೆಚ್ಚಿಯೆ ಬಿದ್ದ ಪಾದಕೆ
  ದಾಸನಾಗಿಯೆ ದೇವರಾದವ° ಪೂಜ್ಯ ಹನುಮಂತ ॥

 7. ಅದಿತಿ says:

  ಲಂಕೆಯಧಿಪತಿ ಹೊತ್ತ ಸೀತೆಯ
  ತೆಂಕು ದಿಕ್ಕಿನ ತನ್ನ ರಾಜ್ಯಕೆ
  ಮಂಕು ಕವಿದತು ರಾಮ ಮನಸಿಗೆ ಸತಿಯ ಕಾಣದ್ದೆ
  ಕಂಕಣವ ತೊಟ್ಟ ಜನಕನಳಿಯ
  “ಶಂಕೆ ಬೇಡಾರಿಂಗು ರಾವಣ
  ನಂಕದ ಪರದೆಯೆಳದು ಪತ್ನಿಯ ಮರಳಿ ಕರೆತತ್ತೆ”

  ಪೆಟ್ಟುಗುಟ್ಟಿಲಿ ಸೋತ ವಾನರ
  ಬಿಟ್ಟು ಪಟ್ಟಣ ಕಾಡು ಸೇರಿದ
  ದಟ್ಟ ಕಾಡೊಳ ಹುಡುಕಿದವವನ ರಾಮ ಲಕ್ಷ್ಮಣರು
  ಗಟ್ಟಿಯಪ್ಪಲೆ ಕಪಿಗಳರಸನು
  ರಟ್ಟೆ ಸಾಧನೆ ಮಾಡ್ವ ಸಮಯಲಿ
  ನೆಟ್ಟ ನೋಟದ ಪುರುಷ ರೂಪರ ನಡಿಗೆ ಕಂಡತ್ತು

  “ಪೀಡೆ ವಾಲಿಯ ಪ್ರೀತಿ ಬಂಟರೊ
  ಚಾಡಿಕೋರರೊ ದಾಳಿಕೋರರೊ
  ನೋಡು ಮಾರುತಿ” ಹೇಳಿ ಸುಗ್ರೀವಾಜ್ಞೆ ಹೊರಡಿಸಿದ
  “ಜೋಡಿ ಮನುಜರ ನಡೆಯ ನೋಡಿರೆ
  ಕಾಡುಲೆಂಗಳ ಬಂದದಾಗಿರ
  ಕಾಡು ದಾರಿಲಿ ಬಂದದೆಂತಕೊ ಹೋಗಿ ನೋಡಲ್ಲಿ”

  ಚೆಂದ ವಟುವಿನ ರೂಪ ಹಾಕಿದ
  ನಿಂದ ರಾಮನೆದುರಿಲಿ ಸುಂದರ
  “ಬಂದದೆಲ್ಲಿಂದಾವ ಹೊಡೆ” ಕೇಳಿದ ವಿನಯಿ ಹನುಮ
  “ತೊಂದರೆ ಕಳವ ರಘುಕುಲ ತಿಲಕ
  ಮುಂದೆಯಿಪ್ಪದು ಧನ್ಯ” ಹೇಳಾ
  ನಂದ ಭಾಷ್ಪಲಿ ಪಾದಕಂಜನೆಯಮಗ ಶರಣಾದ

  • ಭಾಗ್ಯಲಕ್ಶ್ಮಿ says:

   ಲಾಯಿಕಾಯಿದು ಅದಿತಿಯಕ್ಕ. ಸುಗ್ರೀವಾಜ್ಞೆ — ಮತ್ತೂ ಒೞೆದಾಯಿದು.

 8. ಭಾಗ್ಯಲಕ್ಶ್ಮಿ says:

  ಕೇಳಾಣ ೩ ಪಾದಲ್ಲಿ ಆದಿ ಪ್ರಾಸ ವ್ಯತ್ಯಾಸ ಅಗಿತ್ತು. ಇಲ್ಲಿ ಸರಿ ಮಾಡಿದೆ.
  ಮಾರು ವೇಷಲಿ ಹೋದ
  ಮಾರುತನ ಚತುರ ಸುತ
  ನೇರ ಮಾತಿಂಗಿಳಿದ ನಯವಿನಯಲಿ
  ಆರು ನಿಂಗಾರು ? ಯಾ
  ವೂರು ?ಜಟೆಯ ಮುನಿಗಳೋ ?
  ಊರು ಬಿಟ್ಟರಸರೋ ?ರವಿಸೋಮರೋ ?
  ದೂತಾನು ಕಾರ್ಯಲ್ಲಿ
  ಮಾತಿಲ್ಲೆ ಮುಚ್ಚುಮರೆ
  ಈ ತರದ ವೇಷವಿದು ಅರಸನಾಜ್ಞೆ
  ಕಾತರಲಿ ಕಾಯ್ಗೆನ್ನ
  ಎತ್ತರದ ಶಿಖರಲ್ಲಿ
  ಆತುರಲಿ ಸೇರುವನೊ ಸುಗ್ರೀವನಾ
  ದೂತನಿವ ಪ್ರಾಜ್ಞನೇ
  ಮಾತದೆಂತಾ ಮಧುರ
  ಆತುರದ ಗಳಿಗೆಲ೦ಜದ್ದ ವಟುವು
  ಈತನೊಡೆಯನು ಧನ್ಯ !
  ಸೋತು ಸುಣ್ಣಾದ ನ
  ಮ್ಮಾತುಮ ಕತೆಯಿವಂಗೆ ಗೊ೦ತು ಮಾಡು
  ಹಿರಿಯ ತಮ್ಮನ ವರದಿ
  ಲರರೆ! ಕುಂಡಲ ಕಂಡ
  ಪರಮಪುರುಷನು ಕೇಳಿದ ಹೆಸರೇoಗೆ
  ಕರಗಿ ಹೋತದ ಶಾಪ
  ವೊರಗಿದಾ° ಪಾದಲ್ಲಿ
  ಹರುಶದಾ ಮೊರೆಯದುವೆ ರಾಮ ! ರಾಮ !

 9. ತೆಕ್ಕುಂಜ ಕುಮಾರ ಮಾವ° says:

  ರೈಸಿತ್ತೋ..ರೈಸಿತ್ತು. !

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *