Oppanna.com

ಸಮಸ್ಯೆ -03: “ಹೂಗಿನೊಳ ಕುಸುಮವೇ ಇಪ್ಪ ಹಾಂಗೆ”

ಬರದೋರು :   ಸಂಪಾದಕ°    on   21/07/2012    47 ಒಪ್ಪಂಗೊ

ಕಳುದ ಎರಡುವಾರದ ಸಮಸ್ಯೆಗೊಕ್ಕೆ ಭರ್ಜರಿಯಾದ ಪ್ರತಿಕ್ರಿಯೆ ಕಂಡು ಬೈಲಿನೋರಿಂಗೆ ತುಂಬಾ ಕೊಶಿ ಆತು.
ದೊಡ್ಡ ಮಕ್ಕೊ ಸಣ್ಣಮಕ್ಕೊಗೆ ಕ್ರಮ ಕಲುಶಿದ ಹಾಂಗೆ ಕೆಲವು ಜೆನ ಪಳಗಿದೋರು ಹೊಸ ಪ್ರಯತ್ನದ ಬೈಲಿನೋರಿಂಗೆ ಕಲಿಶುದು ಕಾಂಬಗ ಸಂತೋಷ ಆವುತ್ತು.
ಇದೀಗ ಮೂರ್ನೇ ವಾರದ ಸಮಸ್ಯೆಯ ಸಮಯ:

ಈ ವಾರದ ಸಮಸ್ಯೆ:

“ಹೂಗಿನೊಳ ಕುಸುಮವೇ ಇಪ್ಪ ಹಾಂಗೆ”

ಎಲ್ಲೋರುದೇ ಪ್ರಯತ್ನಪಡಿ, ಚೆಂದದ ಒಪ್ಪ ಕೊಡಿ.
~

ಕುಸುಮ ಷಟ್ಪದಿ

ಸೂ:

  • ಈ ಸಮಸ್ಯೆ “ಕುಸುಮ” ಷಟ್ಪದಿಲಿ ಇದ್ದು.
  • ಐದು ಐದರ ಎರಡು ಗುಚ್ಛ ಮೊದಲೆರಡು ಸಾಲುಗಳಲ್ಲಿ,
    ಮೂರ್ನೇ ಸಾಲಿಲಿ ಮೂರು ಗುಚ್ಛ, ಕೊನೆಗೊಂದು ಗುರು.
    (ಹೂಗಿನೊಳ | ಕುಸುಮವೇ | ಇಪ್ಪ ಹಾಂ | ಗೆ | )
  • ಆದಿಪ್ರಾಸಕ್ಕೆ ಸಲಹೆ:
    ಪ್ರಥಮಾಕ್ಷರ ಗುರು, ಎರಡ್ಣೇ ಅಕ್ಷರ “ಗ”ಕಾರ.
    ನಾಗ, ಮಾಗು, ಮೂಗು, ಮುಂಗೆ, ಮಂಗ, ಸಾಗು, ಸೀಗೆ, ರಾಗ..
    ತ್ಯಾದಿ
  • ಷಟ್ಪದಿಗಳ ಬಗ್ಗೆ ಇಲ್ಲಿ ಓದಲಕ್ಕು: ಸಂಕೊಲೆ
  • ಹೆಚ್ಚಿನ ಮಾಹಿತಿಗೆ:
    http://padyapaana.com

47 thoughts on “ಸಮಸ್ಯೆ -03: “ಹೂಗಿನೊಳ ಕುಸುಮವೇ ಇಪ್ಪ ಹಾಂಗೆ”

  1. ಎ೦ತೆ೦ಥಾ ಆಲೋಚನೆಗೊ..ಹ..ಹ್ಹಾ…

    ಮೂಗಿನೊಳ ನೆಳವಿದ್ದ
    ರೀಗ ಬಾಜಾರಿ೦ದ
    ಬೇಗಾನು ಸ್ಪ್ರೇ ತ೦ದ ಬೋದಾಳನ
    ಮೇಗೆ ನೋಡ್ಯೊ೦ಡಿಪ್ಪ
    ಆ ಗೆಣಪ ಕಾಯೆಕ್ಕು
    ಹೂಗಿನೊಳ ಕುಸುಮವನೆ ಕಾದ ಹಾ೦ಗೆ

    1. ಹು..ನೆಗೆ ಎಡಕ್ಕಿಲಿ ಮಾತ್ರೆ ತಟಪಟ !

      ಮೂಗಿನೊಳ ನೆಳವಿದ್ದ
      ರೀಗ ಬಾಜಾರಿ೦ದ
      ಬೇಗಾನು ತೆಕ್ಕೊ೦ಡ ಬೋದಾಳನ
      ಮೇಗೆ ನೋಡ್ಯೊ೦ಡಿಪ್ಪ
      ಆ ಗೆಣಪ ಕಾಯೆಕ್ಕು
      ಹೂಗಿನೊಳ ಕುಸುಮವನೆ ಕಾವ ಹಾ೦ಗೆ

  2. ಮೂಗಿನೊಳ ಹೊಕ್ಕ ಹುಳುವಿನ ಕೊಲ್ಲುಲೆ ಬೇಗಾನು ಬಿಡುದೋ..? ಅಯ್ಯಯ್ಯೋ..!

  3. ಮೂಗಿಂಗೆ ಹೊಕ್ಕತ್ತು
    ‘ಈಗ’ದಾ ಮರಿಕುಃನಿ
    ಮೂಗಿನೊಳ ಕುಸುಮವೇ ಹೊಕ್ಕ ಹಾಂಗೆ

    ಬೇಗಾನು ತಾಬೇಗ (ಕೊಲ್ಲುವ)
    ಹೋಗಿ ಸೇರಲಿ ಹಳ್ಲ (=ಚರಂಡಿ)
    ಹೂಗಿನೊಳ ಕುಸುಮವೇ ಇಪ್ಪ ಹಾ೦ಗೆ

    ಉಹ್ಹಹ್ಹಹ್ಹಹ್ಹಾ…..

    1. ಓಹೋ.. ಹಾಂಗಾರೆ:

      ಮೂಗಿನೊಳ ನೆಳವೂಳಿ
      ಬೀಗ ಕೀ ಹೊಕ್ಕಿಸೆಡಿ
      ಬಾಗಿಲಿನ ಲಾಕಿಂಗೆ ಹೊಕ್ಸಿದಾಂಗೆ

      ಬೀಗಿ ಅರಳುಗು ಮೂಗು
      ಕಾಂಗು ತುಂಬಿಸಿದಾಂಗೆ
      ಹೂಗಿನೊಳ ಕುಸುಮವೇ ಇಪ್ಪ ಹಾ೦ಗೆ

      🙂

  4. ವಾಹ್ !!! ಬಣ್ಣದ ವೇಷ ಬಂದೇ ಬಿಟ್ಟತ್ತಾನೆ ! ಅದ್ಭುತ ಭಾವಯ್ಯ, ಅಧ್ಭುತ. ಅರ್ಥ, ಪದ ಜೋಡಣೆ, ಪ್ರಾಸ ಎಲ್ಲವುದೆ. ಮುಳಿಯ ಭಾವಯ್ಯಂಗೆ ಮುಳಿಯ ಭಾವಯ್ಯನೇ ಸಾಟಿ ಎಂತ ಹೇಳ್ತಿ.

  5. ಈ ಸಮಸ್ಯಾಪೂರಣಲ್ಲಿ ಬತ್ತಾ ಇಪ್ಪ ಪ್ರತಿ ಕವಿತೆಯೂ ನಮ್ಮ ಬೈಲಿನ ಬ೦ಧುಗಳ ಕಲ್ಪನಾಶಕ್ತಿಯ ತೋರುಸುತ್ತಾ ಇದ್ದು.ಒ೦ದರಿ೦ದ ಒ೦ದು ಚೆ೦ದ.ಹೀ೦ಗೆಯೇ ಕವಿತಾ ಸುಧೆ ಮು೦ದರಿಯಲಿ ಬೈಲಿನೊಳ ಕವಿತೆಗಳು ಹೂಗಿನೊಳ ಕುಸುಮವೇ ಇಪ್ಪ ಹಾ೦ಗಾಗಲಿ..

    ಬೇಗ ಬಾ ಮಳೆ,ಬೆಶಿಲ
    ಬೇಗೆ ನಾಟದ್ದಿರಲಿ
    ಪೂಗವನ ಹಸುರಾಗಿ ತರವಾಡಿಲಿ
    ಮೇಗೆ ಸೊ೦ಪಾಗಿರಲಿ
    ಸೋಗೆಯೊಳ ಸಿ೦ಗಾರ
    ಹೂಗಿನೊಳ ಕುಸುಮವೇ ಇಪ್ಪ ಹಾ೦ಗೆ
    *********************
    ರಾಗಲ್ಲಿ ಪದವು ಅನು
    ರಾಗಲ್ಲಿ ದಾ೦ಪತ್ಯ
    ಸಾಗಿದರೆ ರುಚಿ ಹಾಲುಜೇನಿನಾ೦ಗೆ
    ಯೋಗವೇ ಸಜ್ಜನಿಗ
    ರಾಗಿ ಭೂಮಿಯ ಬದುಕು
    ಹೂಗಿನೊಳ ಕುಸುಮವೇ ಇಪ್ಪ ಹಾ೦ಗೆ
    **********************
    ಆಗದೋ° ಮಗನೆ ಮೇ
    ಲೋಗರವ ಸುರುದು೦ಡು
    ತೇಗಿದರೆ ಮಿತಿಮೀರಿ ಜೀವನಲ್ಲಿ
    ರೋಗ ಶಮನಕೆ ಬೇಕು
    ಜಾಗರಣೆ ಉಪವಾಸ
    ಹೂಗಿನೊಳ ಕುಸುಮವೇ ಇಪ್ಪ ಹಾ೦ಗೆ
    **********************

    1. ಅಬ್ಬಬ್ಬ…! ರೈಸಿತ್ತು.

  6. ತಂಗಾಳಿ ಬೀಸುತ್ತು
    ಆಗಸವು ಕಪ್ಪಾತು
    ಮುಂಗಾರು ಮಳೆ ಜೋರು ಇರಲಿ ಹೀಂಗೆ

    ಬೆಂಗಾಡು ಫಲವತ್ತು
    ಭೂಗೋಳ ಚೆಂದಾತು
    ಹೂಗಿನೊಳ ಕುಸುಮವೇ ಇಪ್ಪ ಹಾಂಗೆ

    1. ಪೆರ್ಲದಣ್ಣಾ.ಎರಡೂ ಭರ್ಜರಿ.

  7. ಈಗ ಸರಿ ಆವ್ತ ನೋಡುವ..

    ’ಈಗ’ ಹೇ-ಳುವ ಸಿನೆಮ
    ಹೋಗಿ ನೋ-ಡಿದೆ ಈಗ
    ಹೇಂಗೆ ಮಾ-ಡಿದವೊ ಆ -ನೆಳವು ಚಿ-ತ್ರ!

    ಡೋಂಗಿ ನೆಳ-ವಡ! ಗೊಂತೆ
    ಆಗ ಅದು – ಕಾಗದದ
    ಹೂಗಿನೊಳ ಕುಸುಮವೇ ಇಪ್ಪ ಹಾಂಗೆ

  8. ತ್ಯಾಗಲ್ಲಿ ಪ್ರೀತಿಯೂ
    ಯಾಗಲ್ಲಿ ಭಕ್ತಿಯೂ
    ಹೂಗಿನಲಿ ಕುಸುಮವೂ ಇಪ್ಪ ಹಾಂಗೆ ।

    ಹಾಗಲದಿ ಕೈಕ್ಕೆಯೂ
    ಕೋಗಿಲೆಯು ಮೆಡಿಯೊಳಾ
    ಬಾಗದಾ ಜೆತೆಜೆತೆಗೆ ಎಸರಿಪ್ಪದೇ !!
    (ಸಾಗುವಿನ ಪಾಚದಲಿ ಸೀವಿಪ್ಪದೇ )

    ಇನ್ನೊಂದು ಪದ್ಯ ಹೀಂಗೆ ಬರವೋ ಹೇಳಿ ಕಂಡತ್ತು.

    ಬೇಗಿನೊಳ ಪೈಸೆಯೂ
    ಬೇಗಡೆಲಿ ಮಾತ್ರೆಯೂ
    ಹೂಗಿನೊಳ ಕುಸುಮವೂ ಇಪ್ಪ ಹಾಂಗೆ ।

    ಬಂಗುಡೆಲಿ ವಾಸನೆಯು
    ಇಂಗಿಲ್ಲಿ ಪರಿಮಳವು
    ರಂಗು ಹೊಡಿ ಯಲಿ ಅಲ್ಪ ವಿಷವಿಪ್ಪದೇ ॥

    1. ಎಲ್ಲಿ೦ದ ಎಲ್ಲಿಗೆ ಎತ್ತಿತ್ತು! ಅದ್ಭುತ ಬೊಳು೦ಬು ಮಾವ.

      1. ಎಂತ ಅದ್ಭುತವೋ ?! ಸುಮ್ಮನೆ, ಸಜ್ಜಿಗೆ ಬಜಿಲು ಹೇಳ್ತವಿಲ್ಲೆಯೊ, ಹಾಂಗೆ ಭಾವಯ್ಯಾ !!

    2. ರೈಸಿತ್ತಯ್ಯ…ರೈಸಿತ್ತು.

  9. ರಾಗಲ್ಲಿ ಹಾಡುತ್ತ
    ಬೇಗಲ್ಲಿ ಓಡುತ್ತ
    ಯೋಗಲ್ಲಿಯೂ ಇದ್ದು ಸಾಮರ್ಥಿಗೆ ।

    ತೂಗಿನೋಡುವಗ ಇವ
    ಸಾಗರದ ಹಾಂಗಿದ್ದ
    ಹೂಗಿನೊಳ ಕುಸುಮವೇ ಇಪ್ಪ ಹಾಂಗೆ ॥

    1. ಸುಬ್ರಾಯಣ್ಣ, ನಮ್ಮ ಒಪ್ಪಣ್ಣನ ಬಗ್ಗೆ ಹೇಳ್ತಾ ಇದ್ದಿರೊ ಹೇಂಗೆ ? ಕವನ ಲಾಯಕಾಯಿದು.

    2. ತುಂಬ ಲಾಯಕದ ಪೂರಣ.

  10. ನಮಸ್ಕಾರ ರಾಮಚಂದ್ರಣ್ಣ,
    ನಿಂಗಳೇ ಹೇಳಿದ ಮತ್ತೆ ವ್ಯಾಕರಣದ ತೊಡಕಿನ ಸರಿ ಮಾಡುವ ಪ್ರಯತ್ನ ಎನ್ನದು –
    ಕಾಗದದೊಳಡಕಾದ – ಇಪ್ಪದರ “ಕಾಗದದೊಳದಿಕಿಪ್ಪ” ಹೇಳಿ ಸರಿ ಮಾಡ್ತೆ.
    ಮತ್ತೆ, ತ್ಯಾಗದೊಳು, ರಾಗದೊಳು ಹೇಳುವ ಕನ್ನಡ ಶಬ್ದಂಗಳ – ತ್ಯಾಗದೊಳ, ರಾಗದೊಳ ಹೇಳಿ ಮಾಡಿದರೆ ಹವ್ಯಕ ಆತು. ಎಂತ ಹೇಳ್ತಿ…?

  11. ತ್ಯಾಗದೊಳು ಯೋಗಿದ್ದು
    ರಾಗದೊಳು ಭೋಗಿದ್ದು
    ಕಾಗದದೊಳಡಕಾದ ಪತ್ರವಿದ್ದು |
    ವೇಗದೊಳ ಬಿರುಸಾಂಗೆ
    ಮಾಗಿದೆದೆ ಒಲವಾಂಗೆ
    ಹೂಗಿನೊಳ ಕುಸುಮವೇ ಇಪ್ಪ ಹಾಂಗೆ ||

    [ಬಿರುಸಾಂಗೆ = ಬಿರುಸ್ಹಾಂಗೆ, ಒಲವಾಂಗೆ = ಒಲವ್ಹಾಂಗೆ – ಹವ್ಯಕ ಭಾಷೆ ಉಚ್ಚಾರಣೆಲಿ ಹೇಂಗೆ ಬತ್ತೊ ಹಾಂಗೆ ಬರದ್ದೆ. ವ್ಯ್ಯಾಕರಣದ ತೊಡಕಿದ್ದಿಕ್ಕು ಅಂಬಾಂಗೆ ಕಾಣ್ತು]

  12. ಭೋಗ ಭಾಮಿನಿ ಅತು

    ಬೇಗ ತೆಗೆ ಕುಸುಮ; ಶರ

    ವೇಗಲ್ಲೀ ಬಕ್ಕೀಗ ಸರಿ ಆಯೆಕು (ರೆಡಿ ಮಾಡೆಕು)
    ಮಾಗಿದಾ ಪದವೊ ಹದ

    ವಾಗಿ ಶಟುಪದಿಲಿರಲಿ

    ಹೂಗಿನೊಳ ಕುಸುಮವೇ ಇಪ್ಪಹ್ಹಾಂಗೆ

    1. “ಬೇಗ ತೆಗೆ ಕುಸುಮ ಶರ ” ರೈಸಿತ್ತು ಬಾಲಣ್ಣ.
      ಒಳ್ಳೊಳ್ಳೆ ಕವನ೦ಗೊ ಬತ್ತಾ ಇಪ್ಪದು ಕೊಶಿಯ ವಿಷಯ.

  13. ಹೂಗು – ಕುಸುಮ ಬೇರೆ ಬೇರೆ ಹೇಳಿ ಆದರುದೆ ಎರಡೂ ಪದಂಗಳ ಅರ್ಥ ಒಂದೇ !!

    ಹೇಂಗಿರೆಕು ಸುಜೀವನ?
    ಆಗಿರೆಕು ಹೂಗವನ
    ರಾಗಕನುರಾಗ ಸರಿ ಸೇರಿ ಇರೆಕು ।
    ತೂಗಿ ಮನಸಿನೊಳ-ಮನ (ಮನಸೊಳ ಸುಮನ)
    ಸಾಗುಸೆಕು ಬದುಕಿನಾ
    ಹೂಗಿನೊಳ ಕುಸುಮವೇ ಇಪ್ಪ ಹಾಂಗೆ ॥

    1. ರಾಗ ಅನುರಾಗ ಶ್ರುತಿ ಎಲ್ಲ ಸೇರಿದ ಮಹೇಶಣ್ಣನ ಸುಮಧುರ ಜೀವನದ ಕವನ ಚೆಂದಕೆ ಬಯಿಂದು.

    2. ಮಹೇಶಣ್ಣನ ಪರಿಕಲ್ಪನೆ ಅಮೋಘ.! ಬರೆ ಹವ್ಯಕ ಶಬ್ದಂಗಳ ಉಪಯೋಗಿಸಿ ಬರದ ಪೂರಣವೂ ಲಾಯಿಕ್ಕಾಯಿದು.

  14. ಬಿಜೆಪಿಗೆ:

    ನಗದು ಹೆಂಡವ ಹಿಡುದು
    ಜಗಳ ಜಾತಿಯ ವರೆಗು
    ಕಾಗದದ ತಾವರೆಯೆ ಆವ್ತ ಹೇಂಗೆ?

    ಮಂಗನಾಟವ ಬಿಟ್ಟು
    ನಿಂಗೊಗಿಪ್ಪಲೆ ಎಂತ
    ಹೂಗಿನೊಳ ಕುಸುಮವೇ ಇಪ್ಪ ಹಾಂಗೆ?

    1. ಅಪ್ರೂಪಲ್ಲಿ ಬ೦ದ ಪೆರ್ಲದಣ್ಣ ಲಾಯ್ಕಕೆ ಕಾಯ್ಸಿದವು.ಶುರುವಾಣ ಎರಡು ಗೆರೆ ದೀರ್ಘಾಕ್ಷರ ಆದರೆ ಪರಿಪೂರ್ಣ ಅಕ್ಕು.

      1. ನಗದು ಹೆಂ – ಡವ ಹಿಡುದು
        ಜಗಳ ಜಾ – ತಿಯ ವರೆಗು

        5-5 ಇದ್ದಲ್ದ? ಹೇಂಗೆ ಬರೆಕ್ಕಾತು ಅದು?

        1. ಪೆರ್ಲದಣ್ಣ ನಮಸ್ಕಾರ.
          ಮಾತ್ರೆ ಲೆಕ್ಕ ಸರಿ ಇದ್ದು. ರಘು ಭಾವ ಹೇಳಿದ ವಿಷಯ ಆದಿ ಪ್ರಾಸದ ಬಗ್ಗೆ. ಮೇಲೆ ಹೇಳಿದ ಹಾಂಗೆ ಇರೇಕು.
          “ಪ್ರಥಮಾಕ್ಷರ ಗುರು, ಎರಡ್ಣೇ ಅಕ್ಷರ “ಗ”ಕಾರ.
          ನಾಗ, ಮಾಗು, ಮೂಗು, ಮುಂಗೆ, ಮಂಗ, ಸಾಗು, ಸೀಗೆ, ರಾಗ.. ಇ
          ತ್ಯಾದಿ ”
          ನಿಂಗಳ ಈ ಕಲ್ಪನೆ ಹೊಸತ್ತು, ಪ್ರಚಲಿತ ವಿದ್ಯಾಮಾನವ ವಿಡಂಬಿಸಿ ಸಮಸ್ಯೆಯ ಬಗೆಹರಿಸಿದ್ದು ವಿಶೇಷ. ಲಾಯಿಕಾಯಿದು.

          1. ಪ್ರಥಮಾಕ್ಷರ ಗುರು ಹೇಳ್ತದರ ಗಮನಿಸಿತ್ತಿಲ್ಲೆ ಮಾವ.. ಈಗ ಗೊಂತಾತು, ಧನ್ಯವಾದ.

  15. ಹರೇ ರಾಮ, ಒಳ್ಳೆ ಕಲ್ಪನೆ.
    ಶುರುವಾಣ ಪದ್ಯದ ಮೂರನೆ ಪಾದಲ್ಲಿ ಸಣ್ಣ ತಪ್ಪಿದ್ದು – ಐದು ಮಾತ್ರಾ ಗಣ ಮೂರು ಆದ ಮತ್ತೆ ಒಂದು ಗುರು ಅಥವಾ ಒಂದು ಲಘು ಇರೆಕ್ಕು, ಎರಡು ಲಘು ಬಪ್ಪಲಾಗ.
    ಹಾಂಗೆ, “ಸಮಾಜಕೆ” ಹೇಳ್ವಲ್ಲಿ ಲಗಂ ಬಂತನ್ನೆ.
    ಹೀಂಗೆಯೆ ಬರಕ್ಕೊಂಡಿರಿ ಜಯಕ್ಕ, ನಿಂಗಳ ಕಲ್ಪನೆಗೊ ತುಂಬ ಚೆಂದ ಇರ್ತು.

    1. ಹರೇ ರಾಮ… ಧನ್ಯವಾದ ಮಾವ… ಹೀಂಗೆ ಸರಿ ಮಾಡಿರೆ ಅಕ್ಕ?

      ಹೋಗುತಲಿ ರಾಮಕಥೆ
      ಬಾಗುತಲಿ ಗುರುಚರಣ
      ನೀಗುತಲಿ ಮನದ ಸಂಶಯ ಭಾವನೆ|
      ಬೇಗೆಯಲಿ ನೊಂದವಕೆ
      ಕೂಗುವಾ ಜನರಿಂಗೆ
      ಹೂಗಿನೊಳ ಕುಸುಮವೇ ಇಪ್ಪಹಾಂಗೆ ॥

      1. ಸರಿ ಇದ್ದು, ತುಂಬ ಲಾಯಕದೆ ಆಯಿದು.
        ( ಆನು ನೋಡುವಾಗ ತಡವಾತು)

      2. ತು೦ಬಾ ಲಾಯ್ಕ ಆಯಿದು.ಅಭಿನ೦ದನೆಗೊ ಅಕ್ಕಾ.

  16. ಹೋಗುತಲಿ ರಾಮಕಥೆ
    ಬಾಗುತಲಿ ಗುರುಚರಣ
    ನೀಗುತಲಿ ಮನದ ಸಂಶಯ ಭಾವಗಳ|
    ಬೇಗೆಯಲಿ ನೊಂದವಕೆ
    ಕೂಗುವಾ ಸಮಾಜಕೆ
    ಹೂಗಿನೊಳ ಕುಸುಮವೇ ಇಪ್ಪಹಾಂಗೆ ॥

    ತೂಗಿದರೆ ಬಾದಿಯಿದು
    ತಾಗಿದರೆ ಲಾಭವಿದು
    ಹೋಗಿಯೇ ಸವಿಯೇಕು ಮಕರಂದವ|
    ಆಗರವು ಸಕಲಕಲೆ
    ಸಾಗರವು ರಸಿಕರಿಗೆ
    ಹೂಗಿನೊಳ ಕುಸುಮವೇ ಇಪ್ಪಹಾಂಗೆ ॥

    ನೇಗಿಲಿಗೆ ನೊಗವಾಗಿ
    ಬಾಗಿಲಿಗೆ ಅಗುಳಾಗಿ
    ಯೋಗಿಯಾ ಜೊತೆ ಹಲವು ಕಲಾವಿದರು |
    ತೇಗುವಾ ಅಸುರರಿಗೆ
    ಬೀಗುವಾ ಅಧರ್ಮಕೆ
    ಹೂಗಿನೊಳ ಕುಸುಮವೇ ಇಪ್ಪಹಾಂಗೆ ॥

    ಮಂಗಗಳ ಸೇನೆಯಿದು
    ಕಂಗಳಲಿ ರಾಮಾಶ್ರು
    ತಂಗಾಳಿಯಲಿ ರಾಮನಾಮ ತೇಲಿಸಿ |
    ಡಂಗುರವ ಸಾರುತಲಿ
    ಹೊಂಗನಸ ಬೆಳೆಸುತಲಿ
    ಹೂಗಿನೊಳ ಕುಸುಮವೇ ಇಪ್ಪಹಾಂಗೆ ॥

    ರಾಗವದು ಕಿವಿಗಿಂಪು
    ತೂಗುತಲಿ ಕುಂಚವನು
    ಸಾಗುವಾ ರಾಮಕಥೆ ಮನಕೆ ತಂಪು|
    ಹೀಂಗೆ ಬೇರೊಂದಿಲ್ಲೆ
    ಹೇಂಗೆ ಹೇಳಲಿ ಸವಿಯ
    ಹೂಗಿನೊಳ ಕುಸುಮವೇ ಇಪ್ಪಹಾಂಗೆ ॥

    1. ಜಯಕ್ಕಾ!
      ಒಂದು ಷಟ್ಪದಿ ಬರವಲೇ ಬಂಙ ಆವುತ್ತು ನವಗೆಲ್ಲ, ಅಂತದ್ದರ್ಲಿ – ಯೋಪ!
      ಹೂಗಿನೊಳ ಕುಸುಮ ಇಪ್ಪ ವಿಶಯಲ್ಲಿ, ಎಲೆಯ ಎಡಕ್ಕಿಲಿದ್ದಿದ್ದ ಹಣ್ಣು ಹೆರ ಕಂಡತ್ತು ಬೈಲಿಂಗೆ 🙂

      ತುಂಬಾ ಕೊಶಿ ಆತು.

    2. ಓಹ್, ಜಯಶ್ರೀ ಅಕ್ಕನದ್ದು ಬರಾಬರಿ ಐದು ಪದ್ಯಂಗೊ. ರಾಮಕಥೆಯ ತೆಕ್ಕೊಂಡು ಹೊಂದುಸಿ ಬರದ್ದದು ಲಾಯಕಾತು. ಸುರೂವಾಣ ಪದ್ಯಲ್ಲಿ ರಜಾ ತಾಳ ತಪ್ಪಿದ್ದು, ಈಗ ಅದುದೆ ಸರಿ ಆತು.

    3. ಬೈಲಿನ ಎಲ್ಲೋರ ಪ್ರೋತ್ಸಾಹಕ್ಕೆ ಚಿರಋಣಿ… ಗುರುಚರಣಗಳಿಗೆ ಅನಂತ ಪ್ರಣಾಮಗಳು…

  17. ಎಲ್ಲ ಛಂದೋ ಬದ್ದ ಪದಂಗಳ ರಾಗ,ತಾಳ ಹಾಕಿ ಹಾಡಿರೆ ಸಿಕ್ಕುವ ಆಸ್ವಾದ ಹೇಂಗಿರ್ತು ಹೇಳ್ತ ಕಲ್ಪನೆಲಿ ಬರದ್ದದು –
    ಮೂಗಿನೊಳ ಮೂಗುತಿಯು
    ಬಾಗಿಲಿಲಿ ತೋರಣವು
    ಮೇಘದೊಳದಿಕ್ಕಿಪ್ಪ ಹನಿಯ ಹಾಂಗೆ ।
    ರಾಗ ತಾಳವು ಸೇರಿ
    ಭೋಗ ಭಾಮಿನಿ ಛಂದ
    ಹೂಗಿನೊಳ ಕುಸುಮವೇ ಇಪ್ಪ ಹಾಂಗೆ ॥

    1. ಕುಮಾರ ಮಾವನ ಕೈಲಿ ಕುಸುಮ ಚೆಂದಕೆ ಅರಳಿದ್ದು. ವಿಮರ್ಶೆ ಮಾಡಿ ಎನ್ನ ಪದ್ಯವ ಸರಿ ಮಾಡ್ಳೆ ಸಕಾಯ ಮಾಡಿದ್ದಕ್ಕೆ ಧನ್ಯವಾದಂಗೊ.

  18. ಹೊಸ ಆಲೋಚನೆ ಬರಳಿ, ಮತ್ತೆ ನೋಡುವೊ. ಈಗಾಣದ್ದುದೆ ಮೊಸ ಇಲ್ಲೆ.
    ನಾಕು ಮತ್ತೆ ಐದನೆ ಪಾದ ಪೋರ್ಚೆ ಮಾಡಿರೆ ಹೇಂಗಕ್ಕು..? ಮೂರನೆ ಪಾದಲ್ಲಿಯೂ ಸಣ್ಣ ತಿದ್ದುಪಡಿ ಹೀಂಗೆ ಮಾಡ್ಲಕ್ಕೋದು..
    …………
    ಮಾಗಿಯದು ಆತನ್ನೆ ಕೆಂಪು ತೊಂಡೆ
    ತಾಗದ್ದ ಹಾಂಗದರ
    ಆಗಾಗ ನೋಡ್ಯೊಂಡೆ
    ಹೂಗಿನೊಳ…..

  19. ಮೂಗಿನೊಳ ಕುರುವೊಂದು
    ಬೇಗೆಯಲಿ ಮೂಡಿತ್ತು
    ಮಾಗಿಯದು ಆತಾನೆ ಕೆಂಪು ತೊಂಡೆ ।
    ಆಗಾಗ ನೋಡೊಂಡೆ
    ತಾಗಾದ ಹಾಂಗದರ
    ಹೂಗಿನೊಳ ಕುಸುಮವೇ ಇಪ್ಪಹಾಂಗೆ ॥

    ಅರ್ಥದ ಬಗ್ಗೆ ಹೆಚ್ಚು ತಲೆ ಬೆಶಿ ಮಾಡದ್ದೆ ಸುರೂವಿಂಗೆ ಆನೇ ಬೇಟು ಹಿಡುದು ಆಡ್ಳೆ ಬಯಿಂದೆ. ಹೊಸ ಆಲೋಚನೆ ಬಂದರೆ ಮತ್ತೆ ನೋಡುವೊ.

    1. ಮೂಗಿನಾ ಕಲ್ಪಿಸಿಯೆ
      ಕಾಂಗಲ್ಲಿ ಹಲವುಪದ;
      ಹಾಂಗೆಯೇ ಕಲ್ಪಿಸಿ ಬೊಳುಂಬುಮಾವ
      ಹೀಂಗೆಯೇ ಬರದಿರೋ?
      ಹೇ೦ಗಾರು ಮೂಡಿದ್ದು
      ಹೂಗಿನೊಳ ಕುಸುಮವೇ ಇಪ್ಪಹಾಂಗೆ ॥

      ಬೊಳುಂಬು ಮಾವ ಸುರು ಬೇಟು ಹಿದುದ್ದದಕ್ಕೆ ಸಾರ್ಥಕ ಆತು ಹೇಳಿ ಅನ್ನಿಸಿತ್ತು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×