ಸಮಸ್ಯೆ 05: “ಸಣ್ಣಾದಿಪ್ಪಗ ಮಾಡಿದ ಕೀಟಲೆ ನೆಂಪುಗೊ ಹಸಿಯಿಕ್ಕು”

ಎಲ್ಲೋರಿಂಗೂ ನಮಸ್ಕಾರ.
ಕಳುದ ನಾಕು ವಾರಂಗಳಲ್ಲಿ ಶರ, ಕುಸುಮ, ಭೋಗ, ಭಾಮಿನೀ ಷಟ್ಪದಿಗಳಲ್ಲಿ ಒಂದೊಂದು ಸಮಸ್ಯೆ ಬಿಡುಸಿದ್ದು.
ಬೈಲಿನ ಆಸಕ್ತ ಎಲ್ಲೋರುದೇ ಒಂದೊಂದು ಪ್ರಯತ್ನ ಮಾಡಿದ್ದವು.
ಈ ವಾರ, ಐದನೇ ಸಮಸ್ಯೆ – ಪರಿವರ್ಧಿನೀ ಷಟ್ಪದಿಲಿ.

ಈ ವಾರದ ಸಮಸ್ಯೆ:

” ಸಣ್ಣಾದಿಪ್ಪಗ ಮಾಡಿದ ಕೀಟಲೆ ನೆಂಪುಗೊ ಹಸಿಯಿಕ್ಕು “

ಎಲ್ಲೋರುದೇ ಸಮಸ್ಯೆ ಬಿಡುಸುವಿರಲ್ಲದೋ?

– ಈ ಸಮಸ್ಯೆ “ಪರಿವರ್ಧಿನೀ” ಷಟ್ಪದಿಲಿ ಇದ್ದು.
ನಾಕು ನಾಕರ ನಾಕು ಗುಚ್ಛ, ಮೊದಲೆರಡು ಸಾಲಿಲಿ.
ನಾಕು ಮಾತ್ರೆಯ ಆರು ಗುಚ್ಛ, ಕೊನೆಗೊಂದು ಗುರು – ಮೂರು ಮತ್ತು ಆರ್ನೇ ಸಾಲಿಲಿ.

ಹೆಚ್ಚಿನ ಮಾಹಿತಿಗೆ:
http://oppanna.com/oppa/shara-kusuma-bhoga-bhamini-shatpadi
http://padyapaana.com

ಸಂಪಾದಕ°

   

You may also like...

33 Responses

 1. ತೆಕ್ಕುಂಜ ಕುಮಾರ ಮಾವ° says:

  ಬಾಲಣ್ಣ, ಜಯಕ್ಕ ತಡವಾಗಿ ಬಂದರುದೆ, ತುಂಬ ಚೆಂದಕ್ಕೆ ಪೂರಣಂಗಳ ಕೊಟ್ಟದಕ್ಕೆ ಅಭಿನಂದನೆಗೊ.

 2. ಎಸ್.ಕೆ.ಗೋಪಾಲಕೃಷ್ಣ ಭಟ್ಟ says:

  ಮಣ್ಣಿಯ ತಿಂಬಗ ಗಿಣ್ಣಲು ಇಡ್ಕುದು
  ಸುಣ್ಣದ ನಾಮವ ಕಂಜಿಗೆ ಎಳವದು
  ಅಣ್ಣನ ಚಡ್ಡಿಯ ಬಳ್ಳಿಯ ಹಿಂದಿನ ಕಿಟಿಕಿಗೆ ಕಟ್ಟಿದ್ದು॥
  ಬೆಣ್ಣೆಯ ಮುದ್ದೆಯ ಚೂಂಟಿಯೆ ತಿಂದದು
  ಬಣ್ಣದ ಶಾಯಿಯ ಬೆಂದಿಗೆ ಹೊಯ್ದದು
  ಸಣ್ಣಾದಿಪ್ಪಗ ಮಾಡಿದ ಕೀಟಲೆ ನೆಂಪುಗೊ ಹಸಿಯಿಕ್ಕು॥
  [ಈ ತಿಮ್ರೂಟು ಆನು ಮಾಡಿದ್ದಿಲ್ಲೆ ಆತೊ. ಸುಮ್ಮನೆ ಬರದ್ದು.ನಿಂಗಳ ಹತ್ತರೆ ಮೊದಲೇ ಜಾಮೀನು ಕೇಳುತ್ತೆ]

  • ಗೋಪಾಲ ಬೊಳುಂಬು says:

   ಒಹ್ ! ಈ ಮಾಣಿಯ ತುಂಟಾಟ ಒಳ್ಳೆತ ಇದ್ದಾನೆ. ಒಳ್ಳೆ ಕಿಲಾಡಿ ಹುಡುಗ. ಪದ್ಯ ಚೆಂದ ಬಯಿಂದು.

  • ರಘು ಮುಳಿಯ says:

   {ಬಣ್ಣದ ಶಾಯಿಯ ಬೆಂದಿಗೆ ಹೊಯ್ದದು} ಇದರಿ೦ದ ದೊಡ್ದ ಲೂಟಿ ಬೇಕೊ? ಗೋಪಾಲಣ್ಣ,ಮರವಲೆಡಿಯದ್ದ ಸ೦ಗತಿಯೇ.
   ತಿಮ್ರೂಟು ಶಬ್ದದ ಅರ್ಥ ಎ೦ತರ? ಲೂಟಿಯೊ ?

  • ತೆಕ್ಕುಂಜ ಕುಮಾರ ಮಾವ° says:

   ಲೂಟಿ ಮಾಡ್ತ ಚಿತ್ರಣ ಪಷ್ಟಾಯಿದು.
   ಒಂದು ಸಂಗತಿ ಎಂತ ಹೇಳಿರೆ, (‘ ಪದ್ಯಪಾನ’ಲ್ಲಿ ಕಲ್ತದು) ಸಂಧಿ ಅಪ್ಪಲ್ಲಿ ವಿಂಗಡಿಸಿರೆ ಅದು ‘ವಿಸಂಧಿ’ ದೋಷ ಆವುತ್ತಡ. ಶುರುವಾಣ ಎರಡು ಪಾದಲ್ಲಿ “ಗಿಣ್ಣಲು ಇಡ್ಕುದು” ಮತ್ತೆ “ಕಂಜಿಗೆ ಎಳವದು” ಹೇಳ್ತಲ್ಲಿ ವಿಸಂಧಿ ಆಯಿದು. ಅದರ ತಿದ್ದಿರೆ, ( ಗಿಣ್ಣಾಲಿಡ್ಕುದು, ಕಂಜಿಗೆ ಹಾಕುದು) ತುಂಬ ಒಳ್ಳೆ ಪೂರಣ.

   • ಎಸ್.ಕೆ.ಗೋಪಾಲಕೃಷ್ಣ ಭಟ್ಟ says:

    ಸರಿ.
    ಗಿಣ್ಣಾಲಿಡ್ಕುದು
    ಮತ್ತೆ
    ಕಂಜಿಗೆಳದ್ದದು
    ಹೇಳಿ ಓದಿಕೊಳಿ.
    ಧನ್ಯವಾದ.

  • ತೆಕ್ಕುಂಜ ಕುಮಾರ ಮಾವ° says:

   ಲೂಟಿ ಮಾಡ್ತ ಚಿತ್ರಣ ಪಷ್ಟಾಯಿದು.
   ಒಂದು ಸಂಗತಿ ಎಂತ ಹೇಳಿರೆ, (‘ ಪದ್ಯಪಾನ’ಲ್ಲಿ ಕಲ್ತದು) ಸಂಧಿ ಅಪ್ಪಲ್ಲಿ ವಿಂಗಡಿಸಿರೆ ಅದು ‘ವಿಸಂಧಿ’ ದೋಷ ಆವುತ್ತಡ. ಶುರುವಾಣ ಎರಡು ಪಾದಲ್ಲಿ “ಗಿಣ್ಣಲು ಇಡ್ಕುದು” ಮತ್ತೆ “ಕಂಜಿಗೆ ಎಳವದು” ಹೇಳ್ತಲ್ಲಿ ವಿಸಂಧಿ ಆಯಿದು. ಅದರ ತಿದ್ದಿರೆ, ( ಗಿಣ್ಣಾಲಿಡ್ಕುದು, ಕಂಜಿಗೆ ಹಾಕುದು) ತುಂಬ ಒಳ್ಳೆ ಪೂರಣ.
   ತಿಮ್ರೂಟು ಶಬ್ದದ ಅರ್ಥ ಎನಗೂ ಗೊಂತಾಯಿದಿಲ್ಲೆ.

 3. ರಘು ಮುಳಿಯ says:

  ಅಣ್ಣಾ ನಿನ್ನಾ ಕ೦ಡಪ್ಪಗ ಮನ
  ತಣ್ಣ೦ಗಾತಿ೦ದೀ ಮರುಭೇಟಿಲಿ
  ಕಣ್ಣೀರಿನ ಹೊಳೆ ಕಟ್ಟವ ಕಡುದಾ೦ಗೊ೦ದರಿ ಹರುದತ್ತು|
  ಸಣ್ಣಾದೆಯ ಪರದೇಶದ ವಾಸಕೆ
  ಹಣ್ಣಾದರು ಮೈ ಮನಸಿನ ಒಳ ನಾ
  ವ್ಸಣ್ಣಾದಿಪ್ಪಗ ಮಾಡಿದ ಕೀಟಲೆ ನೆಂಪುಗೊ ಹಸಿಯಿಕ್ಕು॥

 4. ಬಾಲಣ್ಣ (ಬಾಲಮಧುರಕಾನನ) says:

  ನಮ್ಮ ಹವ್ಯಕಕವಿಗಳ ಪ್ರತಿಭೆ ಬೈಲಿಲಿ ಬೆಳಗುತ್ಸು ಕಾಂಬಗ ಭಾರೀ ಕೊಶಿ ಆವುತ್ತು. ಎಲ್ಲೋರ ಪದ್ಯಂಗಳು ಬಾರೀ ಲಾಯಕ ಆಯಿದು

  ‘ತಿಮ್ರೂಟು’=’ಪೆದಂಬು’ ಹೇಳಿ ಹೇಳಲಕ್ಕು ಹೇಳಿ ತೋರುತ್ತು , ಆದರೆ ,ಅದರಸ್ತು ಅರ್ಥ ವ್ಯಾಪ್ತಿ ಸಿಕ್ಕ ಮಿನಿಯಾ.

 5. ಬಾಲಣ್ಣ (ಬಾಲಮಧುರಕಾನನ) says:

  timrootu= ಮುರುಟು ನ್ಯಾಯವು ಬತ್ತಾ ಹೇಳಿ ಗೊಂತಿಲ್ಲೆ. ಹಳೆ ತಲೆಗಳೆ ಹೇಳೆಕ್ಕಶ್ತೆ.ಈ ಶಬ್ದದ ಬಳಕೆ ಈ ಭಾಗಲ್ಲಿ ಸಾಮಾನ್ಯ

  ವಾಗಿ ಕಾಣುತ್ತು.

  • ಎಸ್.ಕೆ.ಗೋಪಾಲಕೃಷ್ಣ ಭಟ್ಟ says:

   ಅಪ್ಪು. ಕುಂಬಳೆ ಸೀಮೆಲಿ ಚಾಲ್ತಿಲಿ ಇಪ್ಪ ಶಬ್ದ-ತಿಮ್ರೂಟು. ಉದ್ದೇಶಪೂರ್ವಕವಾಗಿ ಮಾಡುವ ಕೀಟಲೆ ಅಥವಾ ಉಪದ್ರ ಮಾಡುವ ಬುದ್ಧಿ – ಈ ಶಬ್ದಕ್ಕೆ ಚಾಲ್ತಿಲಿ ಇಪ್ಪ ಅರ್ಥ. ಇದರ ವ್ಯುತ್ಪತ್ತಿ ಹೇಂಗೆ ಹೇಳಿ ಎನಗೆ ಗೊಂತಿಲ್ಲೆ.ತಿಳಿವ ಪ್ರಯತ್ನ ಮಾಡುತ್ತೆ.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *