Oppanna.com

ಸಮಸ್ಯೆ 08: “ನೆರೆಕರೆಯ ಹರಸಿದವು ನಮ್ಮ ಗುರುಗೊ”

ಬರದೋರು :   ಸಂಪಾದಕ°    on   25/08/2012    23 ಒಪ್ಪಂಗೊ

ನೆರೆಕರೆಯ ಎಲ್ಲಾ ನೆಂಟ್ರಿಂಗೂ ನಮಸ್ಕಾರಂಗೊ.
ಬೈಲಿನ ದೃಷ್ಟಿಲಿ ನೋಡಿರೆ ಇಂದೊಂದು ವಿಶೇಷ ದಿನ.
ನೆರೆಕರೆ ನೆಂಟ್ರುಗೊ ಮತ್ತೊಂದರಿ ಭೇಟಿ ಅಪ್ಪ ದಿನ; ಬೈಲಿನ ಶುದ್ದಿಗೊ ಪುಸ್ತಕ ರೂಪಲ್ಲಿ ಪ್ರಕಟ ಅಪ್ಪ ದಿನ!
ನಮ್ಮ ಗುರುಗೊ ಬಿಡುಗಡೆ ಮಾಡಿ “ಒಳ್ಳೆದಾಗಲಿ” ಹೇದು ಹರಸುವ ಸಂತೋಷದ್ದಿನ.;
ಎಲ್ಲೋರೂ ಒಟ್ಟುಕೂಡಿಪ್ಪ ನೆರೆಕರೆಗೆ ಗುರುಗಳೇ ಭೇಟಿಕೊಡುವ ಶುಭದಿನ.
ಈ ಸನ್ನಿವೇಶಲ್ಲಿ, ಸಮಸ್ಯಾಪೂರಣಕ್ಕೆ ಅದೇ ವಸ್ತುವಾಗಿ ತೆಕ್ಕೊಂಡರೆ ಚೆಂದ ಅಲ್ಲದೋ?
ಸಮಸ್ಯಾಪೂರಣದ ಎಂಟನೇ ಕಂತು, ಕುಸುಮ ಷಟ್ಪದಿಲಿ.

ಕುಸುಮ ಷಟ್ಪದಿ

ಈ ವಾರದ ಸಮಸ್ಯೆ:

“ನೆರೆಕರೆಯ ಹರಸಿದವು ನಮ್ಮ ಗುರುಗೊ”

ಗುರುಗಳ ಹರಸುವಿಕೆ ನಿಂಗೊಗೂ ಸಿಕ್ಕಿತ್ತೋ? ಕುಸುಮ ಷಟ್ಪದಿಲಿ ತಿಳುಶಿ.

ಸೂ:

  • ಈ ಸಮಸ್ಯೆ “ಕುಸುಮ ಷಟ್ಪದಿಲಿ” ಇದ್ದು.
    ಐದು ಐದರ ಎರಡು ಗುಚ್ಛ ಮೊದಲೆರಡು ಸಾಲುಗಳಲ್ಲಿ,
    ಮೂರ್ನೇ ಸಾಲಿಲಿ ಮೂರು ಗುಚ್ಛ, ಕೊನೆಗೊಂದು ಗುರು.
    ( ನೆರೆಕರೆಯ | ಹರಸಿದವು | ನಮ್ಮಗುರು | ಗೊ )
  • ಆದಿಪ್ರಾಸಕ್ಕೆ ಸಲಹೆ:
    ಸುರುವಾಣ ಅಕ್ಷರ ಲಘು, ಎರಡ್ಣೇ ಅಕ್ಷರ “ರ”ಕಾರ.
    ಮರ, ನೊರೆ, ಹೊರೆ, ಸುರು, ಕರು, ಕುರು, ದೊರೆ ಇತ್ಯಾದಿ.
  • ಕಳುದ ಸರ್ತಿ ಕುಸುಮ ಷಟ್ಪದಿ ಸಮಸ್ಯೆ:
    https://oppanna.com/chodyango/samasye-03-hoogina-ola-kusuma
  • ಹೆಚ್ಚಿನ ಮಾಹಿತಿಗೆ:
    https://oppanna.com/oppa/shara-kusuma-bhoga-bhamini-shatpadi

    http://padyapaana.com

23 thoughts on “ಸಮಸ್ಯೆ 08: “ನೆರೆಕರೆಯ ಹರಸಿದವು ನಮ್ಮ ಗುರುಗೊ”

  1. ಮೆರೆಯೆ ಹವ್ಯಕ ಭಾಷೆ
    ಹರಿಯಲುನ್ನತ ಭಾವ
    ವರಸಂಸ್ಕೃತಿಯ ಕಾಯ್ವಲೀ ಬೈಲಿನ
    ಕರಗಳ್ಗೆ, ಮನಗಳ್ಗೆ
    ಹುರುಪು ಶಕ್ತಿಯ ಕೊಟ್ಟು
    ನೆರೆಕರೆಯ ಹರಸಿದವು ನಮ್ಮ ಗುರುಗೊ

  2. ಸಿರಿ ಪಾದ ಧೂಳಿಗಳ

    ಎರಗಿ, ನೆತ್ತಿಲಿ ಹೊತ್ತು

    ಕರಗಿ ಭಕ್ತಿಯ ಭಾವ ಮನವ ತುಂಬೀ

    “ಬರಡಲ್ಲ ಈ ಭಾಷೆ

    ಬರೆಯಿ ಮಕ್ಕಳೆ “ಹೇಳಿ

    ನೆರೆಕರೆಯ ಹರಸಿದವು ನಮ್ಮ ಗುರುಗೊ

  3. ತುಂಬಾ ಲಾಯಿಕಾಯಿದು ಭಾವ.

  4. ಬರಗಾಲದಾ ಬೆಶಿಗೆ
    ಧರೆಯೆ ಕಾದಾರಿತ್ತು
    ಕರಿಮುಗಿಲ ಮನಕರಗಿ ಸೊಯ್ಪುವಗಳೇ।
    ಬರಹ೦ಗೊ ಸುರಿಮಳೆಯ
    ತರವೆ ಹರಿಯಲಿ ಹೇಳಿ
    ನೆರೆಕರೆಯ ಹರಸಿದವು ನಮ್ಮ ಗುರುಗೊ॥

    1. ಎರಡು ಪೂರಣಂಗಳು ಏವತ್ರಾಣ ಹಾಂಗೆ ಏರುಮಟ್ಟಲ್ಲಿದ್ದು. ಬರಹಂಗಳ ರಸಧಾರೆ ಬೈಲಿಂಗೆ ಹರುದು ಬರಳಿ, ಅಲ್ಲದೊ ?

  5. ವರುಷಗಟ್ಟಲೆ ಕಾದು
    ಗುರುಪಾದದಡಿಗೆತ್ತಿ
    ಸೆರಗೊಡ್ಡಿ ಧನ್ಯತೆಲಿ ನಿ೦ದಪ್ಪಗಾ।
    ಕೆರೆಯ ನೀರಿನ ಕೆರೆಗೆ
    ಯೆರೆಯಿ ಮಕ್ಕಳೆ ಹೇಳಿ
    ನೆರೆಕರೆಯ ಹರಸಿದವು ನಮ್ಮ ಗುರುಗೊ॥

  6. ಗುರುರಾಘವೇಶ್ವರರ
    ಪರಮಪಾವನಪಾದ
    ದರುಶನವ ಪಡೆಯೆಕ್ಕು ಹೇಳಿಗೊಂಡು ।
    ಕರಮುಗುದು ಶಿರಬಾಗಿ
    ಭರಿತ ಭಕ್ತಿಲಿ ನಿಂದ
    ನೆರೆಕರೆಯ ಹರಸಿದವು ನಮ್ಮ ಗುರುಗೊ॥

    1. ತುಂಬ ಚೆಂದದ ಪೂರಣ.
      ಇಷ್ಟು ಲಾಯ್ಕಲ್ಲಿ ಬರವ ನಿಂಗೊ ಇದುವರೆಗಾಣ ಸಮಸ್ಯೆಗೊಕ್ಕೆ ಎಂತಕಪ್ಪ ಪೂರಣ ಕಳುಗದ್ದದು ಹೇಳಿ ಅನಿಸಿತ್ತು ಎನಗೆ. ಬಂದುಗೊಂಡಿರಿ.

    2. ಲ ನಾ ಭಾವಯ್ಯ ಬರದ ಪದ್ಯ ಲಾಯಕು ಬಯಿಂದು. ಕುಮಾರಣ್ಣ ಹೇಳಿದ ಹಾಂಗೆ ಎನಗೂ ಅನಿಸಿತ್ತು. ಬೈಲಿಂಗೆ ಬತ್ತಾ ಇರಿ.

    3. ಓಹೋ,ಲಾನಾ.ಮನ್ನೆ ಕ೦ಡತ್ತಿಲ್ಲೆನ್ನೆ!
      ಭಾರೀ ಲಾಯ್ಕ ಆಯಿದು ಪೂರಣ.

      1. ಧನ್ಯವಾದಂಗೊ ಮುಳಿಯಭಾವ, ಬೊಳುಂಬುಮಾವ, ಟೀ.ಕೆ ಮಾವ… ಶಾಲೆಲಿ ಷಟ್ಪದಿ ಕಲ್ತದರ ನೆಂಪು ಮಾಡಿ ಬರದ್ದು ಇದು… ಬೇರೆ ಸಮಸ್ಯಾ ಪೂರಣಂಗಳ ಪ್ರಯತ್ನ ಮಾಡ್ತೆ ಒಂದೊಂದೇ…
        ಎಲ್ಲೋರ ಪೂರಣಂಗಳೂ ಲಾಯ್ಕಾಯ್ದು….

  7. ವಾಹ್.. ಎಲ್ಲರ ರಚನೆಯೂ ಚೊಲೋ ಆಯ್ದು. ಇನ್ನೂ ಬರಲಿ 🙂

  8. ಗುರು ಸಂದೇಶದೊಟ್ಟಿಂಗೆ, ಒಳ್ಳೆ ಪೂರಣ.
    ‘ಹರನಾಮ ಸ್ಮರಣೆಯು’ ಹೇಳ್ತಲ್ಲಿ ಗಣ ವಿಭಜನೆ ಸರಿ ಆಯಿದಿಲ್ಲೆ -> ೬ + ೪ ರ ಹಾಂಗೆ ಆವುತ್ತು.(ಒತ್ತಕ್ಷರದ ಹಿಂದಾಣ ಅಕ್ಷರ ಗುರು, ಆದ ಕಾರಣ)
    ‘ಹರನಾಮ ಜೆಪವೊಂದೆ’ ಹೇಳಿ ತಿದ್ದಿರೆ ಸರಿ ಬಕ್ಕು.

    1. ಅಪ್ಪಪ್ಪು, ನಿಂಗೊ ಹೇಳಿದ್ದು ಸರಿ ಕುಮಾರಣ್ಣ. ಬೆಂಗಳೂರು ಟ್ರಿಪ್ಪು ಮುಗುಶಿ ಇಂದು ಊರಿಂಗೆ ಬಂದಿಳುದೆ. ಬೈಲಿಲ್ಲಿ ಸಮಸ್ಯಾಪೂರಣ ಕಂಡು ಲೇಟಾತಾನೆ ಹೇಳಿ ಗಡಿಬಿಡಿಲಿ ಒಪ್ಪ ಕೊಟ್ಟೆ.
      ನಿಂಗಳ ಬೆಂಗಳೂರಿಲ್ಲಿ ಮುಖತಾ ಕಂಡು ತುಂಬಾ ಕೊಶಿ ಆಗಿತ್ತು. ಕುಮಾರಣ್ಣನ ಕುಮಾರ, ಒಪ್ಪಣ್ಣನ ಕಾರ್ಡಿನ, ಸಭೆಲಿ ಪ್ರತಿಯೊಬ್ಬಂಗೂ ಹಂಚಿದ್ದು ಬಹಳ ಲಾಯಕಾಗಿತ್ತು. ನಮ್ಮ ಬೈಲಿಂಗೆ ಒಳ್ಳೆ ಪಬ್ಲಿಸಿಟಿ ಖಂಡಿತಾ ಸಿಕ್ಕಿಕ್ಕು.

  9. ಹರಿಯ ನಂಬಿದ ಭಕ್ತ
    ಕಿರಿಯ ಮಕ್ಕಳ ನೆನೆಸಿ
    ಪರಿ ಪರಿಯ ಕಥೆಗಳಾ ನವಗೆ ತಿಳುಸೀ ।
    ಹಿರಿಯರೂ ಕಿರಿಯರೇ
    ಸಿರಿರಾಮನೆದುರಲ್ಲಿ
    ಮರೆಯೆಡೀ ದೇವರನು, ನಿತ್ಯ ಜಪಿಸೀ ॥

    ಹರಟೆಲೀ ಸಮಯವಾ
    ಕರಗುಸೆಡಿ ಸುಮ್ಮನೇ
    ಹರನಾಮ ಸ್ಮರಣೆಯು ನಿತ್ಯವಿರಲೀ ।

    ಎರಟಿ ಹಣ ಮಾಡುವುದೆ
    ಗುರಿಯಾಗದಿರಲೇಳಿ
    ನೆರಕರೆಯ ಹರಸಿದವು ನಮ್ಮ ಗುರುಗೊ ॥

  10. ಗುರಿಕಾರ ಕಳುಗಿದಾ
    ಕರೆಯೋಲೆ ನೋಡಿಕ್ಕಿ
    ಗಿರಿನಗರ ಸೇರಿದವು ಬೈಲಿನೋರು ।
    ಬಿರು ಮಳೆಗೆ ತಂಪಾಗಿ
    ಕಿರು ಕೋಣೆಯೊಳ ಕೂದ
    ನೆರೆಕರೆಯ ಹರಸಿದವು ನಮ್ಮ ಗುರುಗೊ ॥

    ( ‘ಗುರಿಕ್ಕಾರ’ ವ ಮಾತ್ರೆ, ಪ್ರಾಸದ ಅನುಕೂಲಕ್ಕಾಗಿ ‘ಗುರಿಕಾರ’ ಹೇದು ತೆಕ್ಕೊಂಡಿದೆ)

  11. ಚೆನ್ನೈ ಭಾವ,
    ಎಲ್ಲೋರುದೆ – ಇಲ್ಲಿ ಒಂದು ಮಾತ್ರೆ ಹೆಚ್ಚಿಗೆ ಬಯಿಂದು. “ಎಲ್ಲೋರು” ಹೇಳಿ ಸರಿ ಮಾಡ್ಲಕ್ಕು.
    ಪೂರಣ ಲಾಯಿಕಿದ್ದು.

    1. ಹಾ° ಸಮ ಸಮ . ಗಮನಿಸಿತ್ತೀಗ. ತಿಳಿಶಿದ್ದಕ್ಕೆ ಧನ್ಯವಾದ. ಓದುವಾಗ ಅದರ ‘ಎಲ್ಲೋರು’ ಹೇಳಿ ತಿದ್ದಿಗೊಂಡು ಓದಿಗೊಂಬ.

  12. ಹಿರಿಯೋರು ಕಿರಿಯೋರು
    ಗಿರಿನಗರ ಸೇರಿದವು
    ಕರೆಯಿತ್ತು ಎಲ್ಲೋರು ಬನ್ನಿಹೇದು

    ಸುರುದತ್ತು ಘನಮಳೆಯು
    ಹರುಷವದು ನವಗಾತು
    ನೆರೆಕರೆಯ ಹರಸಿದವು ನಮ್ಮ ಗುರುಗೊ

  13. ಹಿರಿಯರೂ ಕಿರಿಯರೂ
    ಪರಿಚಯವ ಮಾಡ್ಯೊಂಡು
    ಬರೆದವದವೊಪ್ಪಣ್ಣನಾ ಬೈಲಿಲಿ
    ಗಿರಿನಗರಕೆಲ್ಲೋರು
    ಪರಮಭಕ್ತಿಲಿ ಬರಲು
    ನೆರೆಕರೆಯ ಹರಸಿದವು ನಮ್ಮ ಗುರುಗೊ
    [ಇಲ್ಲಿಂದಲೇ ವಂದನೆ ಸಲಿಸುತ್ತೆ.]

    1. ಯೇವತ್ತರಾಣ ಹಾಂಗೆ, ಗೋಪಾಲಣ್ಣನ ಪದ್ಯ ಭಾರೀ ಲಾಯಕ್ಕಯಿದು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×