ಸಮಸ್ಯೆ 23 : ನೆಗೆಮಾಣಿಯ ಬೈದರೆ ಕೂಗುಗವಾ°॥

March 16, 2013 ರ 6:00 amಗೆ ನಮ್ಮ ಬರದ್ದು, ಇದುವರೆಗೆ 51 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಈ ವಾರ ಅಕ್ಷರ ವೃತ್ತಲ್ಲಿ ಒ೦ದು ಪ್ರಯತ್ನ ಮಾಡುವ°.

ಛ೦ದಸ್ಸಿನ ಹೆಸರು ತೋಟಕ ವೃತ್ತ.

ಚೌಪದಿಯ ಹಾ೦ಗೆ ನಾಲ್ಕು ಸಾಲುಗಳಲ್ಲಿ ದ್ವಿತೀಯಾಕ್ಷರ ಪ್ರಾಸ ( ಆದಿಪ್ರಾಸ) ನಿಯಮವ ಪಾಲುಸಿಗೊ೦ಡು ಈ ಸಮಸ್ಯೆಯ ಪರಿಹಾರ ಮಾಡುವ°, ಬನ್ನಿ.
ನಾಲ್ಕರಲ್ಲಿ ಒ೦ದು ಸಾಲು ಹೀ೦ಗಿದ್ದು.

ನೆಗೆಮಾಣಿಯ ಬೈದರೆ ಕೂಗುಗವಾ°॥

ಮತ್ತೆ ನಿ೦ಗಳ ಕಲ್ಪನೆಲಿ ಬೇಕಾದ ಹಾ೦ಗೆ ಮು೦ದುವರಿಸಿ.

ಪೋಕ್ರಿ ಮಾಡಿ ಬೈಗಳು ತಿಂಬಲೆ ತಯಾರು!!
ಪೋಕ್ರಿ ಮಾಡಿ ಬೈಗಳು ತಿಂಬಲೆ ತಯಾರು!!

ಸೂ:

ಇದರ ಲಕ್ಷಣ ಹೇ೦ಗೆ ಹೇಳಿರೆ:

೧೧- ೧೧- ೧೧- ೧೧-

ಒಂದು ಗೆರೆಲಿ  – ಸಲಗಂ – ಲಘು, ಲಘು, ಗುರು – ಒಳಗೊಂಡ ಸಗಣ ನಾಲ್ಕು ಗುಂಪು ಬರೆಕ್ಕು. ಅದಕ್ಕೇ ಶೇಡ್ಯಮ್ಮೆ ಗೋಪಾಲಣ್ಣ ಸೂತ್ರವ ಹೀಂಗೆ ಹೇಳುಗು – ‘ಇರೆ ತೋಟಕಮೀರೆರಡಾ ಸಗಣಂ’.
ಕವಿಗಳ ಭಾಷೆಲಿ – ಸಗಣ೦ಗಳು ನಾಲ್ಕಿರೆ ತೋಟಕವೈ.

ತೋಟಕವೃತ್ತದ ಕೆಲವು ರಚನೆಗೊ:

 • ಬೈಲಿಲಿ ಬಟ್ಟಮಾವ° ಹಾಕಿದ  ಆದಿಗುರುಗಳ ಪ್ರಿಯ ಶಿಷ್ಯ ತೋಟಕಾಚಾರ್ಯರ ತೋಟಕಾಷ್ಟಕಮ್ (ಇವರಿಂದಾಗಿಯೇ ಇದಕ್ಕೆ ತೋಟಕ ವೃತ್ತ ಹೇಳಿ ಹೆಸರುಬಂದದಾಡ)
  ಸಂಕೊಲೆ: http://oppanna.com/gurugo/totakashtakam
 • ಭಾರತರತ್ನ ದಿ.ಸುಬ್ಬಲಕ್ಷ್ಮಿ ಹಾಡಿದ, ನಿತ್ಯ ಹಸಿರಾದ ವೆ೦ಕಟೇಶ್ವರ ಸುಪ್ರಭಾತಲ್ಲಿ ” ಕಮಲಾಕುಚ ಚೂಚುಕ ಕು೦ಕುಮತೋ” ಇದೇ ಛ೦ದಸ್ಸಿಲಿ ಇಪ್ಪ ಭಾಗ.
  ಸಂಕೊಲೆ: ಇಲ್ಲಿದ್ದು
 • ನಮ್ಮ ಬೈಲಿನ ನೆಗೆಮಾಣಿ ಬರದ ನೆಗೆಸುಪ್ರಭಾತ
  ಸಂಕೊಲೆ: http://oppanna.com/nege/nege-suprabhata

 ~*~

ಶುದ್ದಿಶಬ್ದಂಗೊ (tags): , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 51 ಒಪ್ಪಂಗೊ

 1. ಮುಳಿಯ ಭಾವ
  raghumuliya

  ಮಗುಭಾವನ ಮಾವಿನ ಗೆಲ್ಲ ಕೊಡೀ
  ಹಗಲಾದರೆ ತುರ್ಕನೆ ಹತ್ತುಗವಾ°
  ಚೊಗರಾದರು ಚೂ೦ಟಿದರಾ ಮೆಡಿಯಾ
  ನೆಗೆಮಾಣಿಯ ಬೈದರೆ ಕೂಗುಗವಾ°॥

  ಮೆಡಿ ಕೊಯ್ಯೆಡ ಪೋಕುರಿ ಹೇಳಿದರೇ
  ನೆಡಗೊ೦ದರಿ ಮೋರೆಯ ಪೀ೦ಟುಸಿಯೇ
  ಚಡವಿ೦ದಲೆ ಓಡುಗು ತೋಡಕರೇ
  ಸೆಡವಿ೦ದಲೆ ಹೊಯ್ಗೆಲಿ ಜಾರುಗವಾ°॥

  ಸೆಸಿತೋಟದ ತೆ೦ಗಿನ ಕೊತ್ತಳಿಕೇ
  ಹೊಸಗೆದ್ದೆಯ ದ೦ಡೆಲಿ ಒಯ್ಶಿದರೇ
  ಕಿಸೆಗೊ೦ದರಿ ಪಕ್ಕನೆ ಕೈಯಿಳುಶೀ
  ಮಸಿಮಾಡುಗು ಕಿಚ್ಚಿನ ಪೆಟ್ಟಿಗೆಲೀ॥

  ಹಳೆ ಹಟ್ಟಿಯ ನೋಡಿರೆ ಬೈಪ್ಪಣೆಯಾ
  ಒಳ ಹುಲ್ಲಿನ ಕಟ್ಟವ ಬಿಡ್ಸುಗವಾ°
  ಮಳೆ ಬ೦ದರೆ ಮಾಡಿನ ಓಡ ಬುಡಾ
  ಚಳಿಯಾದರು ನೀರಿಲಿ ಹಾರುಗವಾ°॥

  ಹೆಗಲಿ೦ಗೆ ಕುಳಿ೦ಪನು ಕಚ್ಚಿದರೂ
  ಬೆಗರಿ೦ಗುದೆ ಬಚ್ಚದ ಪೋಕ್ರಿಯವಾ°
  ಪೊಗರಿದ್ದರು ದೊಡ್ಡಕೆ ದೊ೦ಡೆಲಿಯೇ
  ನೆಗೆಮಾಣಿಯ ಬೈದರೆ ಕೂಗುಗವಾ°॥

  [Reply]

  ಇಂದಿರತ್ತೆ

  ಇಂದಿರತ್ತೆ Reply:

  ಪೋಕ್ರಿ ಮಾಣಿಯ ಲೂಟಿಗೊ ಸ್ವಂತ ಅನುಭವದ್ದಾ ಹೇಂಗೆ ? ಬಾಲ್ಯದ ಸವಿನೆನಪುಗೊ ರಸಪಾಕವಾಗಿ ಬಯಿಂದು. ಪಾಪ ಬೈವದು ಬೇಡ ಮಾಣಿಯ ಲೂಟಿಮಾಡಿಗೊಂಡಿರಲಿ.

  [Reply]

  VA:F [1.9.22_1171]
  Rating: +1 (from 1 vote)
  ಬೊಳುಂಬು ಮಾವ°

  ಬೊಳುಂಬು ಗೋಪಾಲ Reply:

  ಭಾವಯ್ಯ ಬೆಸ್ಟಾಯಿದು. ಅಪರೂಪದ ಹವ್ಯಕ ಶಬ್ದ ಪ್ರಯೋಗ ನೋಡುವಗ ಕೊಶಿ ಆವ್ತು.

  [Reply]

  VA:F [1.9.22_1171]
  Rating: 0 (from 0 votes)
  ದೊಡ್ಡಭಾವ

  ದೊಡ್ಡಭಾವ° Reply:

  ರಘು ಭಾವಾ,
  ಸೂಪರ್ ಆಯಿದು ಇದು.
  ಹಾಡುಲೆ ಅಂತೂ ತುಂಬಾ ಕೊಶಿ ಆವ್ತು, ನೆಗೆ ಬತ್ತು.

  [Reply]

  VA:F [1.9.22_1171]
  Rating: 0 (from 0 votes)
 2. ಕೆ.ನರಸಿಂಹ ಭಟ್

  ಮಗನೇ ಹಟ ಮಾಡೆಡ ನೀ ಬೆಶಿಸೇ
  ಮಗೆ ಕಾಯಲು ಬೇಕೆನಗೀಗ ಕೊಡೂ
  ಹೊಗೆ ವಾಸನೆ ಬತ್ತದು ಬೇಡ ಬಿಡೂ
  ನೆಗೆ ಮಾಣಿಯ ಬೈದರೆ ಕೂಗುಗವಾ

  [Reply]

  ಮುಳಿಯ ಭಾವ

  raghumuliya Reply:

  ಮಾವ,ಹೊಗೆ ವಾಸನೆ ಆದರೆ ಎ೦ತ ಸೇಮಗೆ ಸೇಮಗೆಯೇ..ರುಚಿಕರ ಆಯಿದು.

  [Reply]

  VA:F [1.9.22_1171]
  Rating: 0 (from 0 votes)
 3. ಶೈಲಜಾ ಕೇಕಣಾಜೆ

  ಭಗದತ್ತ ಕೊದಂಟಿಯೊ ಹೋಂಟ ಫಕೀ
  ರಗಮಾರನೊ ಬೋಸುಡಿ ಪಿರ್ಕಿಯೊ ಮೈ
  ತಗಡೆಮ್ಮೆಯೊ ದರ್ವೆಶಿ ಹೇಳಿ ವಿನಾ
  ನೆಗೆಮಾಣಿಯ ಬೈದರೆ ಕೂಗುಗವಾ :(

  [Reply]

  ಮುಳಿಯ ಭಾವ

  raghumuliya Reply:

  ಹ.ಹಾ.. ಶೈಲಜಕ್ಕ ”ಬೈಗಳು” ಅ೦ಕಣ ಸುರು ಮಾಡಿದ್ದವೋ ಹೇ೦ಗೆ? ಇಷ್ಟು ಬೈಗಳಿನ ಜಡಿಮಳೆ ಬ೦ದರೆ ನೆಗೆಮಾಣಿ ಕೂಗದ್ದೆ ಇಕ್ಕೊ? ಲಾಯ್ಕ ಆಯಿದು.

  [Reply]

  VA:F [1.9.22_1171]
  Rating: 0 (from 0 votes)
  ತೆಕ್ಕುಂಜ ಕುಮಾರ ಮಾವ°

  ತೆಕ್ಕುಂಜ ಕುಮಾರ ಮಾವ° Reply:

  ನೆಗೆಮಾಣಿಯ ನೆಗೆ ಎಲ್ಲ ಗುಡ್ಡೆ ಹತ್ತುಗೋ ಶೈಲಜಕ್ಕ…ಪಾಪ ನೆಗೆಮಾಣಿ.

  [Reply]

  VN:F [1.9.22_1171]
  Rating: 0 (from 0 votes)
 4. ಶೈಲಜಾ ಕೇಕಣಾಜೆ

  :) ಛೇ… ನಿಜವಾಗಿ ಹೀಂಗೆಲ್ಲ ಬೈವಲಾಗಪ್ಪ…. ಸುಮ್ಮನೆ ಪದ್ಯ ಬರವಲಕ್ಕಷ್ಟೆ….ಮಕ್ಕೊ ಎಷ್ಟೇ ದೊಡ್ಡ ಲೂಟಿ ಮಾಡಿರೂ ತಿದ್ದುದು, ಹೀಂಗೆಲ್ಲಾ ಬೈವಲಾಗನ್ನೇ……… ಅಲ್ಲದೊ?

  [Reply]

  VA:F [1.9.22_1171]
  Rating: 0 (from 0 votes)
 5. ಅದಿತಿ

  ಉರಿ ಬೇಸಗೆ ಕೆಂಡವು ಸುಡ್ತದು ಮೈ
  ಸರಿ ಚಾಮರ ಬೀಸಿಯೆ ಬೇನೆಯು ಕೈ
  ಹರುದೋಡುವ ತೋಡದು ಕಂಡರೆ ಬೈ
  ದರು ಯೋಚನೆ ಮಾಡದೆ ಹಾರುದೆ ಸೈ

  ಎನ ಬೊಬ್ಬೆಯ ಹೊಡ್ಸೆಡ ಏ ಮಗನೇ
  ಮನೆ ಚಾವಡಿ ಮೂಲೆಲಿ ಆಡುವಿಯೋ
  ದಿನ ಹೀಂಗೆಯೆ ಲೂಟಿಯ ಮಾಡಿರೆ ನೀ
  ನಿನ ಬೆನ್ನಿಗೆ ಬೀಳುಗು ಜಾಗ್ರತೆ ಹ್ಞಾ

  ಉದಿಯಪ್ಪಗ ಮಾಡಿದ ತೆಳ್ಳವು ಆ
  ಗದೆ ಮೋರೆಯ ಉಬ್ಬಿಸಿ ನಡ್ದವಿವೂ
  ಇದ ಬೇಕೆನ ಚೂರೆಡೆ ಹೊಂದಿಕೆ ಮಾ
  ಡದೆ ಗೆಂಟಿನ ಹಾಕುದು ಎಂತದಕೋ

  ಧಗೆ ಇದ್ದರೆ  ಪೇಟೆಗೆ ಹೋಗೆಡಿ ನಿಂ 
  ಗೊಗೆ  ಬಚ್ಚಿರೆ ಎಂಗೊಗೆ ಬೈಗುಳವೂ 
  ಬೆಗರಿಳ್ಸುವ ಬೇಗೆಲಿ ಮಂಡೆಯ ಬೇ 
  ನೆಗೆ ಮಾಣಿಯ ಬೈದರೆ ಕೂಗುಗವಾ 

  [Reply]

  ಮುಳಿಯ ಭಾವ

  raghumuliya Reply:

  {ಮಂಡೆಯ ಬೇನೆಗೆ }
  ಅದಿತಿ ಅಕ್ಕನ ಪರಿಹಾರ ಈ ವಾರದ ಸಮಸ್ಯೆಗೆ ಹೊಸ ದಾರಿಯ ತೋರುಸಿದ್ದು.ಭಾರೀ ಲಾಯ್ಕ ಆಯಿದು

  [Reply]

  ತೆಕ್ಕುಂಜ ಕುಮಾರ ಮಾವ°

  ತೆಕ್ಕುಂಜ ಕುಮಾರ ಮಾವ° Reply:

  ಅದಿತಿ ಅಕ್ಕಂದು ಹೊಸ ವಿನೂತನ ಪರಿಹಾರ. ಪಷ್ಟಾಯಿದು ಅಕ್ಕ.

  [Reply]

  VN:F [1.9.22_1171]
  Rating: 0 (from 0 votes)
 6. ಶೈಲಜಾ ಕೇಕಣಾಜೆ

  ಅಕ್ಕಾ, ಎನಗೆ ಶ್ಯಾಮಣ್ಣನ ದಾಸಪ್ಪ ಮಾಸ್ಟ್ರನ ಕತೆ ನೆಂಪಾತು…. :) ಲಾಯ್ಕ ಆಯಿದಾತ….

  [Reply]

  VA:F [1.9.22_1171]
  Rating: 0 (from 0 votes)
 7. ನೆಗೆಗಾರ°

  ಹೋ! ಎಲ್ಲೋರು ಸೇರಿ ನೆಗೆಮಾಣಿಯ ಕೂಗುಸಿ ಆತೋ?
  ಪದ್ಯಂಗೊ ಲಾಯ್ಕಾಯಿದು; ಸಂಶಯವೇ ಇಲ್ಲೆ.
  ಆದರೆ ಕೂಗಿದ್ದರ್ಲಿ ಸಂಶಯ ಇದ್ದು. 😉

  [Reply]

  VA:F [1.9.22_1171]
  Rating: +1 (from 1 vote)
 8. ನೆಗೆಗಾರ°

  ನೆಗೆಮಾಣಿ ಅಲ್ಲ; ಈ ಸರ್ತಿ ಬೋಚಬಾವ° ಕೂಗುದು. ಎಂತಗೆ?

  ರಘುಭಾವನ ಕಂಡರೆ ಬೈಲಿನೊಳಾ
  ನೆಗೆ ಜಾರುಗು ಬೋಚನ ಮೋರೆಲಿಯೇ!
  ಹೆಗಲಾಗಿಯೆ ಬಿಂಗಿಲಿ ಸೇರುವ – ಆ
  ನೆಗೆಮಾಣಿಯ ಬೈದರೆ ಕೂಗುಗವಾ°! | :-( |

  ನೆಗೆಮಾಣಿಗೆ ಆರಾರು ಬೈದರೆ ಬೋಚಬಾವಂಗೆ ಕೂಗಲೇ ಬಕ್ಕು. ಗೊಂತಾತೋ? 😉

  [Reply]

  ತೆಕ್ಕುಂಜ ಕುಮಾರ ಮಾವ°

  ತೆಕ್ಕುಂಜ ಕುಮಾರ ಮಾವ° Reply:

  ಅಕ್ಕು..ಅಕ್ಕು. ಹೀಂಗೇ ಲೊಟ್ಟೆ ಹೇಳಿಗೊಂಡು ಕಾಲ ಕಳೆ. ಆಚಿಕೆ ಬೋಚಭಾವ ಬಿದ್ದು ಬಿದ್ದು ನೆಗೆ ಮಾಡ್ತದರ ಪೆಂಗಣ್ಣ ಕಂಡಿದನಡ.
  ಯೇನೆ ಆಗಲಿ, ಇಲ್ಲೀಗ ಮಾತ್ರೆ, ಪ್ರಾಸ, ವೃತ್ತ ಎಲ್ಲ ಸರಿ ಆಯಿದು. ಮಾಷ್ಟ್ರು ಮಾವನಲ್ಲಿ ಇಂಗ್ಲೀಷಿನೊಟ್ಟಿಂಗೆ ಇದನ್ನೂ ಕಲ್ತದು ಗೊಂತಾವುತ್ತು. ಎನ್ನದೆಂತ ಟೀಕೆ ಇಲ್ಲೆಪ್ಪ.

  [Reply]

  VN:F [1.9.22_1171]
  Rating: +1 (from 1 vote)
 9. ಶರ್ಮಪ್ಪಚ್ಚಿ
  ಶರ್ಮಪ್ಪಚ್ಚಿ

  ಈ ಸಮಸ್ಯಾ ಪೂರಣಕ್ಕೆ ಬಂದ ಕವನಂಗಳ ನೋಡಿರೆ ಭಾರೀ ಕೊಶೀ ಆವ್ತು (ನೆಗೆ ಮಾಣಿ ಕೂಗುತ್ತ ಹೇಳಿ ಕೊಶೀ ಆದ್ದು ಅಲ್ಲ ).
  ನಮ್ಮವರಲ್ಲಿಪ್ಪ ಪ್ರತಿಭೆಯ ಹೆರ ಹಾಕಲೆ ಇದು ತುಂಬಾ ಸಹಕಾರಿ ಆಯಿದು ಹೇಳ್ತಲ್ಲಿ ಯಾವ ಸಂಶಯವೂ ಇಲ್ಲೆ.
  ಇದೆಲ್ಲಾ ನೋಡಿ ನೆಗೆ ಮಾಣಿಗೆ ನೆಗೆ ಬಯಿಂದು ಹೇಳಿ ಇದರ ಮೇಗಿಪ್ಪ ಪಟ ನೋಡಿರೇ ಗೊಂತಾವ್ತು.

  [Reply]

  VA:F [1.9.22_1171]
  Rating: +1 (from 1 vote)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಸುಭಗಬೊಳುಂಬು ಮಾವ°ವಿನಯ ಶಂಕರ, ಚೆಕ್ಕೆಮನೆವೆಂಕಟ್ ಕೋಟೂರುಡಾಗುಟ್ರಕ್ಕ°ಅನು ಉಡುಪುಮೂಲೆಸುವರ್ಣಿನೀ ಕೊಣಲೆಚೆನ್ನಬೆಟ್ಟಣ್ಣದೊಡ್ಮನೆ ಭಾವಡೈಮಂಡು ಭಾವಜಯಶ್ರೀ ನೀರಮೂಲೆಚುಬ್ಬಣ್ಣಮಾಲಕ್ಕ°ಒಪ್ಪಕ್ಕಮುಳಿಯ ಭಾವಪ್ರಕಾಶಪ್ಪಚ್ಚಿಬೋಸ ಬಾವಪುಣಚ ಡಾಕ್ಟ್ರುನೀರ್ಕಜೆ ಮಹೇಶಪಟಿಕಲ್ಲಪ್ಪಚ್ಚಿನೆಗೆಗಾರ°ತೆಕ್ಕುಂಜ ಕುಮಾರ ಮಾವ°ಮಾಷ್ಟ್ರುಮಾವ°vreddhiಅಜ್ಜಕಾನ ಭಾವಅನಿತಾ ನರೇಶ್, ಮಂಚಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ