ಸಮಸ್ಯೆ : 33 ” ಹೋಳಿಗೆಯ ಬಳುಸಿತ್ತು ಬಾಳಗೆ ಮಾವಗಳ ಮಗಳು”

ಅಕ್ಷರವೃತ್ತ೦ಗಳ ಪರಿಚಯದ ಎಡಕ್ಕಿಲಿ ಈ ವಾರ ಒ೦ದು ಭಾಮಿನಿ ಷಟ್ಪದಿಯ ಪ್ರಯತ್ನ ಮಾಡಿರೆ ಹೇ೦ಗೇ?

ಸಮಸ್ಯೆ:

“ಹೋಳಿಗೆಯ ಬಳುಸಿತ್ತು ಬಾಳಗೆ ಮಾವಗಳ ಮಗಳು”

ಮೂರನೆ ಅಥವಾ ಆರನೇ ಸಾಲಿಲಿ ಈ ಸಾಲು ಬಪ್ಪ ಹಾ೦ಗೆ ರಚನೆ ಮಾಡುವ°,ಆಗದೋ?

ಸೂ:

 • ಈ ಸಮಸ್ಯೆ “ಭಾಮಿನಿ ಷಟ್ಪದಿಲಿ” ಇದ್ದು.
  ಮೂರು ನಾಲ್ಕರ ಎರಡು ಗುಚ್ಛ ಮೊದಲೆರಡು ಸಾಲುಗಳಲ್ಲಿ,
  ಮೂರ್ನೇ ಸಾಲಿಲಿ ಮೂರು ಗುಚ್ಛ, ಕೊನೆಗೊಂದು ಗುರು.
 • ಹೆಚ್ಚಿನ ಮಾಹಿತಿಗೆ:

ಸಂಪಾದಕ°

   

You may also like...

26 Responses

 1. ರಘುಮುಳಿಯ says:

  ತಾಳಿ ಕಟ್ಟುವ ಶುಭಮುಹೂರ್ತವು
  ನಾಳೆಗೊ೦ದೇ ತಿ೦ಗಳಿಪ್ಪಗ
  ಹೇಳಿಕೆಯ ಸಮಗಟ್ಟು ತಿದ್ದುವ ಹೆಳೆಲಿ ಮದ್ಮಾಯ।
  ಓಳಿ ಕರೆಲಿಯೆ ನೆಡದು ಬೀಸಕೆ
  ಗಾಳ ಹಾಕುಲೆ ಬ೦ದು ಕೂದರೆ
  ಹೋಳಿಗೆಯ ಬಳುಸಿತ್ತು ಬಾಳಗೆ ಮಾವಗಳ ಮಗಳು ॥

  • ಬೊಳುಂಬು ಗೋಪಾಲ says:

   ಏ ಕೆಣಿಯಾ, ಹೇಳಿಕೆ ಕಾಗದ ತಿದ್ದುವ ಹೆಳೆಲಿ ಮಾವನ ಮನಗೆ ಮಾವನ ಮಗಳ ಕಾಂಬಲೆ ಬಂದದು ಫಸ್ಟ್ ಆಯಿದು.

   • ರಘುಮುಳಿಯ says:

    ಬೊಳು೦ಬು ಮಾವಾ,
    “ಹೋಳಿಗೆಯು ಜಾರಿತ್ತು ತುಪ್ಪಕೆ ಬಿಡುಸಿ ಹೇಳೆಕ್ಕೋ?”

  • ಬಾಲಣ್ಣ (ಬಾಲಮಧುರಕಾನನ) says:

   ಭಾಮಿನಿಯ ಬಗ್ಗೆ ಭಾಮಿನಿಲಿ ಬರದ್ದು ಲಾಯಕ್ಕಾಯಿದು ಮುಳಿಯದಣ್ಣಾ.

 2. ಬಾಲಣ್ಣ (ಬಾಲಮಧುರಕಾನನ) says:

  ಕೇಳುದೆಂತರ ! ನೋಡುದೆಂತರ !
  ಬಾಳಗೆರಡರ ಲೆಕ್ಕ ಬಡುಸೆಕು
  ಬೋಳುಬಯಲಿನ ಭಾವ ಹೇಳುಗು ಹೀಂಗೆ ಏವತ್ತೂ/
  ಕೋಲು ಊರುವ ಅಜ್ಜ ಕೂಡಾ
  ‘ಏಳು’ ಹೇಳೊಗ ಎನಗೆ ನಾಕೇ
  ಹೋಳಿಗೆಯ ಬಳುಸಿತ್ತು ಬಾಳಗೆ ಮಾವಗಳ ಮಗಳು/

 3. ಬಾಲಣ್ಣ (ಬಾಲಮಧುರಕಾನನ) says:

  ಶಾಲು ಚೆಂದಕೆ ಹೊದದು ಅಳಿಯ ಕು-
  ಶಾಲಿನರಸನೆ ಬಂದು ಮನೆ ಮೊಗ-
  ಸಾಲೆಲಿಯೆ ಕೂದಂಡು ಹೇಳಿದ “ಭಾರಿ ಹಶುವಾವ್ತು”/
  ಸೇಲೆ ದುಗ್ಗಿಯೊ! ಸೀರೆ ಸುತ್ತಿದ
  ಶಾಲಿನಿಯೆ ಇಡಿ ಕೆರುಶಿಲಿಪ್ಪಾ
  ಹೋಳಿಗೆಯ ಬಳುಸಿತ್ತು ಬಾಳಗೆ ಮಾವಗಳ ಮಗಳು/

  • ಭಾಗ್ಯಲಕ್ಶ್ಮಿ says:

   ಹಾ೦ಗಾಗಿ ನಾಕೇ (ಕೆರುಶಿಲಿಪ್ಪಾ) ಹೋಳಿಗೆ ಬಳುಸಿದ್ದ್ದಾಯಿಕ್ಕು ಬಾಲಣ್ಣ೦ಗೆ ಃ)

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *