Oppanna.com

ಸಮಸ್ಯೆ 36 : ಕುಸುಮದ ಕೋಮಲದೆಸಳುಗಳ ॥

ಬರದೋರು :   ಸಂಪಾದಕ°    on   29/06/2013    50 ಒಪ್ಪಂಗೊ

ಈ ವಾರ  ಶರ ಷಟ್ಪದಿಯ ಸಮಸ್ಯೆಗೆ ಪರಿಹಾರ ಕ೦ಡು ಹುಡುಕ್ಕುವ° , ಆಗದೋ ?

“ಕುಸುಮದ ಕೋಮಲದೆಸಳುಗಳ ॥”

ಶರ ಷಟ್ಪದಿಯ ಮಾತ್ರೆಗಳ ಲೆಕ್ಕಾಚಾರ ನೆ೦ಪಿದ್ದನ್ನೇ ?
ಇಲ್ಲದ್ರೆ ಸರ್ಪಮಲೆ ಮಾವ° ಬೈಲಿಲಿ ಹೇಳಿದ,

ಸುಬ್ಬರಮಣ್ಯನು
ಅಬ್ಬರದಿ೦ದಲಿ
ಗೊಬ್ಬರ ಹೊತ್ತನು ತೋಟಕ್ಕೆ॥

ನೆ೦ಪು ಮಾಡಿಗೊಳ್ಳಿ ಆತೋ..

ಹೆಚ್ಚಿನ ಮಾಹಿತಿಗೆ:

50 thoughts on “ಸಮಸ್ಯೆ 36 : ಕುಸುಮದ ಕೋಮಲದೆಸಳುಗಳ ॥

  1. ಎಲ್ಲೋರಿ೦ಗೂ ಧನ್ಯವಾದನ್ಗೊ.

  2. ಇಂದಿರಕ್ಕಂಗೆ ಧನ್ಯವಾದ.
    ಹೊದಕ್ಕೆಯ ತೆಗದು ಬದಲಿಂಗೆ ಮುಸುಕಿನ ತೆಗದೇ ಹೇಳಿ ಮಾಡ್ತೆ.

  3. ಯಬ್ಬೋ .. ಬೈಲಿಲಿ ಶರ ಸಂಧಾನವೇ! ಅಧ್ಬುತ! ಎಲ್ಲೋರಿಂಗು ಕೈ ಮುಗುದೆ .

  4. ರಘುರಾಮನ ಶರಪ್ರಯೋಗ ಆಯಿದಿಲ್ಲೆನ್ನೆ ಹೇಳಿ ಗ್ರೇಶಿಗೊಂಡಿತ್ತಿದ್ದೆ – ಇದು ರಾಮ ಬಾಣವೇ!

  5. ಎಲ್ಲ ಪೂರಣ,ಕವನ,ಕಾವ್ಯಂಗೊ ಲಾಯಿಕ್ಕಾಯಿದು. ಭಾಗ್ಯಕ್ಕನ ಪತ್ರೊಡೆ, ಅದಿತಿಯಕ್ಕನ ಅಕ್ಷರದೆಸಳುಗೊ, ರಘುವ ಪೂರಣಂಗೊ ಹೊಸ ಹೊಸ ಕಲ್ಪನೆಗಳೊಟ್ಟಿಂಗೆ ರೈಸಿದ್ದು. (ಅದಿತಿ ಅಕ್ಕ – ಎರಡನೆ ಸಾಲು ರಜ್ಜ ಒಪ್ಪ ಮಾಡೆಕ್ಕು, ಲಯ ತಪ್ಪುತ್ತು)
    ಅಭಿನಂದನೆಗೊ.

  6. ನಸುನೆಗೆ ಮೋರೆಲ
    ರಸಿ ನೆಡದತ್ತೀ
    ರಸಮಯ ಹೂಗಿನ ತೋಟದೊಳಾ
    ಮುಸುಡಿ೦ಗೆರಡೇ
    ರುಸುಗದು ಮುಟ್ಟಿರೆ
    ಕುಸುಮದ ಕೋಮಲದೆಸಳುಗಳ

  7. ಮುಸುಕಿದ ಕಸ್ತಲೆ
    ಲಸಬಡಿವಗ ರ
    ಕ್ಕಸ ವ೦ಶದ ಮನೆಹಾಳ೦ಗೊ
    ಮಸಿ ಬಳುದವು ಛೀ
    ಹಿಸುಕಿದವಯ್ಯೋ !
    ಕುಸುಮದ ಕೋಮಲದೆಸಳುಗಳ

    1. ಅಸಬಡಿವಗ, ಕಸ(ಸಮಾಜಲ್ಲಿಪ್ಪ ಕಸ) ಎರಡೇ ಪದಲ್ಲಿ ದುರ್ದೈವಿ ಕೂಸಿನ ಬಗ್ಗೆ ಅನುಕ೦ಪ ಮೂಡುತ್ತು.

  8. ಈ ಕೆಳಣ ಸಾಲುಗೊ ಉತ್ಸಾಹಲ್ಲಿ ಪಾಲ್ಗೊಂಡ ಎಲ್ಲರಿಂಗೂ:
    ಕುಶಿಲೆಲ್ಲೋರು ಮ-
    ನಸ ಭಾವದೆಳೆ ಬಿ-
    ಡಿಸಿ ನೇಯ್ದವು ಚಿತ್ರಕವನವ
    ಹೊಸ ರಂಗುಪಯೋ
    ಗಿಸದುವೆಯಕ್ಷರ
    ಕುಸುಮದ ಕೋಮಲದೆಸಳುಗಳ

  9. ವೇಣಿಅಕ್ಕ ದಂಡಿನ ಬೆಂದಿ ಮಾಡಿ , ಒಳಿಶಿದ ಕೆಸವಿನ ಸೊಪ್ಪು ಕೇಳಿ ತಂದದು — ಪದ್ಯಲ್ಲಿ ಮಾಡಿದ ಪತ್ರೊಡೆ.

    ಕೆಸರಿನ ಮಣ್ಣಿನ
    ಕೆಸವಿನ ಕೊಯಿದವು
    ಕಸವಿನ ಕೂಡೊಗ ತೋಟಲ್ಲಿ
    ಹಸುರಿನಯೆಲೆಯಾ
    ಹಸಿಹಿಟ್ಟುದ್ದಿಯೆ
    ಹಸೆಯಾಂಗುರುಳುಸಿ ಸುತ್ತಿದವು

    ಬೆಶಿಹಬೆಯೇಳುಸಿ
    ತುಸು ಕಿಚ್ಚಾಕಿಯೆ
    ಬೆಶಿ ಬೆಶಿ ಪತ್ರೊಡೆ ಬಿಡ್ಸಿದವು
    ಹೊಸ ಚೂರಿಯಯೆ
    ತ್ತಿ ಸರ ಸರ ವೊಡಾ
    ಡುಸಿ ತೆಳುವಿನ ತುಂಡಿರಿಸಿದವು

    ರಸವಾಸ್ವಾದಿಸೊ
    ರಸಿಕನು ಕೇಳಿದ°
    ಕುಸುಮದ ಕೋಮಲದೆಸಳುಗಳ?
    ತುಸು ಒಗ್ಗರ್ಸಿಯೆ
    ಹೊಸರವೆ ಸೇರುಸಿ
    ಕೆಸರಿನ ಕೆಸವಿನ ಹೊಗಳಿದವು

    ತುಸು ದಿನ ಕಳುದರೆ
    ಪಸೆಯಿಲ್ಲದ ಮರ
    ಕೆಸು ಸಿಕ್ಕುಗು ಹಳೆ ಹಲ್ಸಿಲಿಯು
    ಎಸಳೆಸಳಾಗಿಯೆ
    ಕಸವಿಲಿಯರಸುವ
    ಕುಸುಮದ ಕೋಮಲದೆಸಳುಗಳ

    ಈ ರೀತಿ ಪತ್ರೊಡೆ ಕೊಂಕಣಿಗಳಲ್ಲಿ ಹೆಚ್ಚು ಪ್ರಚಲಿತ

    1. ಪತ್ರೊಡೆ ಭಾರೀ ರುಚಿ ಆಯ್ದಕ್ಕ.
      ಹೀಂಗೆ ಬರಕ್ಕೊಂಡಿರಿ.

    2. ಕೆಸವಿನಯೆಲೆ ಕೊಯ್ಯುವಲ್ಲಿಂದಲೇ ಉತ್ಸಾಹಂದ ಭಾಗ್ಯಕ್ಕ ಹೆರಟಿಪ್ಪಗ ಪತ್ರೊಡೆ ರುಚಿ ಆಗದ್ದಿಕ್ಕೋ? ಬೆಶಿಬೆಶಿ ಪತ್ರೊಡೆಗೆ ಹೊಸರವೆಯೊಟ್ಟಿಂಗೆ ತೆಂಗಿನೆಣ್ಣೆದೆ ಸೇರ್ಸಿಗೊಂಡರೆ ಇನ್ನೂ ಲಾಯ್ಕಕ್ಕು ಅಲ್ಲದಾ?
      ಪತ್ರೊಡೆಯ ಪ್ರೋಸೆಸ್ ಪದ್ಯರೂಪಲ್ಲಿ ನೋಡ್ವಾಗ ಬಾಯಿಲಿ ನೀರುಬಂತು- ಹೊಸರೀತಿಯ ಕಲ್ಪನೆ ಮನಸಿನ ಮುದಗೊಳಿಸಿತ್ತು.

      1. ಅತ್ತೆ,
        ನಿ೦ಗೊ ತು೦ಬಾ ಸೂಕ್ಶ್ಮವನ್ನು ಗಮನಿಸಿ ಒಪ್ಪ ಕೊಡ್ತಿ. ನಿ೦ಗೊ ಯಾವ ವಿಶಯಕ್ಕೆ ಒಪ್ಪ ಬರದರೂ ಆನೊ೦ದರಿ ಓದುಲಿದ್ದು.

  10. ಬೈಲಿನ ಕವಿಹೃದಯ೦ಗೊಕ್ಕೆ ಕೈಮುಗಿತ್ತೆ.
    ಕಡೇ೦ದ ಕೊಡೀ ವರೆಗೆ,ಕೊಡೀ೦ದ ಕಡೇವರೆಗೆ, ಓದಿದಷ್ಟು ಬೊಡಿಯದ್ದ ಕೊಶಿ ಕೊಡುವ,ಮನಮುಟ್ಟುವ ,ಮನಸ್ಸಿನ ತಟ್ಟುವ ಕವಿತೆಗೊ.ಎಲ್ಲವೂ ಕೋಮಲ ಕುಸುಮ೦ಗೊ.
    ವ೦ದನೆ,ಅಭಿನ೦ದನೆ.

  11. ಕುಸುರಿಯ ಕೆಲಸದ
    ಹೊಸಹೊಸ ಜಾತಿಯ
    ಕುಸುಮದ ಕೋಮಲದೆಸಳುಗಳ
    ನಸುಕಿನ ಹೊತ್ತಿಗೆ
    ಪಸದನ ಮಾಡಿದ
    ವಸುಮತಿಯ ಬಣ್ಣಿಸಲಸದಳ
    ಪಸದನ=ಅಲಂಕಾರ,ಅಸದಳ=ಅಸಾಧ್ಯ
    ————-
    ಬಿಸಜದ ಮದಕವ
    ಕೊಸಗಿನ ಗುಡ್ಡೆಯ
    ಅಸುಗೆಯ ಹೂಗಿನ ಹಾಸಿಗೆಯ
    ಹೊದಕ್ಕೆಯ ತೆಗದು
    ವಸುಮತಿ ಸೂಡಿದ
    ಕುಸುಮದ ಕೋಮಲದೆಸಳುಗಳ
    ಬಿಸಜ=ಕಮಲ,ಕೊಸಗು=ಬೆಟ್ಟದಾವರೆ,ಅಸುಗೆ=ಅಶೋಕದ ಮರ

    1. ನರಸಿಂಹಣ್ಣ, ಕವನ ತುಂಬಾ ಲಾಯ್ಕಾಯಿದು- ನಿಜವಾಗಿಯೂ ಬಣ್ಣುಸುಲೆ ಅಸದಳವೇ.

      ಎರಡನೆದರಲ್ಲಿ ‘ಹೊದಕ್ಕೆಯ’ ಬದಲಿಸಿದ್ದರೆ ಲಾಯ್ಕಿತ್ತು – ಪ್ರಾಸಕ್ಕೆ ಬೇಕಾಗಿ.

  12. ಶರವೇಗಲ್ಲಿ ಬತ್ತಾ ಇಪ್ಪ ಕವನಂಗಳ ಆಸ್ವಾದನೆ ……ಆಹಾ…ಎಲ್ಲೋರುದೆ ಭಾರೀ ಚೆಂದಕ್ಕೆ ಬರತ್ತಾ ಇದ್ದಿ. ನಮೋ ನಮಃ

  13. ಬಾಲಣ್ಣಾ, ಯಾವತ್ರಾಣ ಹಾಂಗೆ ನಿಂಗಳ ಕವನ ಸೂಪರ್!

  14. *ಮಸಣ ನಿವಾಸಿಯೊ
    ಬಸುಮದ ಲೇಪಿಯೊ
    ಹಸಿ ತೊಗಲಿನ ಬಿಗಿ ಸುತ್ತಿದನೊ/
    ಮಸಿ ಮಾಡಿದನೋ
    ಎಸೆದನ,ಬಾಣವ-
    ಕುಸುಮದ ಕೋಮಲದೆಸಳುಗಳ ?/೧/

    *ಹಸುಗೂಸಲ್ಲದೊ!
    ಹಸೆಲಿಪ್ಪದು, ಇದ
    ಒಸದೇ ಹಿಡಿ,ಕೈ ಬೆರಳುಗಳ /
    ಕೊಶಿ ಕೊಶಿಯಿಂದಲೆ
    ನಸು ನೇವರುಸೆಕು
    ಕುಸುಮದ ಕೋಮಲದೆಸಳುಗಳ/೨/

    * ಕಸುಗಾಯಾದರೆ
    ಹಿಸುಕೆಡಿ ಮಕ್ಕಳೆ
    ಕುಸುಮದ ಕೋಮಲದೆಸಳುಗಳೊ!/
    ಹಶುವಾವುತ್ತೋ?
    ಬೆಶಿ ಅಶನವಿದಾ
    ನಸು ತಣಿಯಲಿ ಊಟಕೆ ಕೂರಿ/೩/

    *ಅಸುರರೊ!ಪಿಸುಣರೊ!
    ದೆಸೆ ಎಂತರಿಯರೊ!
    ಬಸುರಿಂದಿಳಿದವರೋ! ನಿಜಕು?/
    ಹಸಿಮೈಯನೆ ಇಡಿ
    ಹಿಸುಕಿದವೋ ಅವು
    ಕುಸುಮದ ಕೋಮಲದೆಸಳುಗಳ?/೪/

    1. ವಾಹ್..ಸೂಪರ್.

  15. ಹಶುವಿನ ಹೊಟ್ಟಗೆ
    ಬೆಶಿಬೆಶಿ ಪೋಡಿಯು
    ಕೊಶಿ ಕೊಡುಗದ ಮಳೆಗಾಲದಲಿ ।
    ನಸುಗೆಂಪನೆ ಹೊರಿ
    ಹಸಿ ಹಸಿ ಗೋಬಿಯ
    ಕುಸುಮದ ಕೋಮಲದೆಸಳುಗಳ ॥

    ಇನ್ನೊಂದು ಪದ್ಯ್ ಹೀಂಗಿದ್ದು.

    ಹಸುರೆಲೆ ಕೆಂಪಿನ
    ನಸುವರಿಶಿನದಾ
    ಕುಸುಮದ ಕೋಮಲದೆಸಳುಗಳ ।
    ಕೊಶಿ ಕೊಶಿಯಲಿಯಾ
    ರಿಸಿ ಹಾಕಿದವದ
    ನಸುನಗುತಲಿ ರಂಗೋಲಿಯನು ॥

    1. ಗೋಪಾಲಣ್ಣಾ, ಲಾಯಕ್ಕಾಯಿದು .( ಆ ಬೆಶಿ ಬೆಶಿ ಪೋಡಿ ನಾಕು ಇತ್ಲಾಗಿ ಬರಲಿ,ಎಂತರದ್ದೋ?)

    2. ಗೋಬಿಯ ಪೋಡಿ ರೈಸಿದ್ದು. ಘಮಘಮ ಇಲ್ಲಿಯವರೆಂಗೂ ಎತ್ತಿತ್ತು. ಮಳೆ ಇಲ್ಲದ್ದರೂ ಮೋಡ ಕವಿದ ವಾತಾವರಣ ಇದ್ದನ್ನೆ- ಪೋಡಿ ಹೊಡವಲಕ್ಕು.
      ವರ್ಣಮಯ ರಂಗೋಲಿ ಚೆಂದ ಆಯಿದು. ಅಭಿನಂದನೆಗೊ ಗೋಪಾಲಣ್ಣ.

    3. ಗೋಪಾಲಣ್ಣ, ಪಶ್ಟಾಯಿದು.

  16. ಪೂರಣಂಗಳ ನೋಡಿ ಭಾರೀ ಕುಶಿ ಆತು.ಎಲ್ಲಾ ಅಕ್ಕಂದ್ರೂ ಭಾರೀ ಉತ್ಸಾಹಲ್ಲಿ ಭಾಗವಹಿಸಿದ್ದಿ.ನಿಂಗೊಗೆಲ್ಲಾ ನಮೋ ನಮಃ

  17. ನೊಸಲಿಂಗೀಪುತಿ
    ಪಸರುವ ಪರಿಮಳ
    ಹೊಸವಸ್ತ್ರದ ತೋರಿಕೆ ಬೇಡ
    ನುಸುಳಿಯೆ ಮೋಸದ
    ಮಸಲತ್ತಿನೊಳದಿ-
    ಕುಸುರಿರೆ ಮಂತ್ರವ ಫಲವಿದ್ದಾ

    ಹಸಿವಿಲಿ ನರಳೊಣ-
    ಗಿಸಿರೆಯೆ ಗೆಂಟಲು
    ಜಸ ಸಿಕ್ಕುಗು ಹೇಳುದು ಸುಳ್ಳು
    ದೆಸೆಗೊಂದು ಗುಡಿಯ
    ಕಿಸೆಲಿಪ್ಪ ಕನಕ
    ಪೈಸೆಯಾಗಲಿ ದೇವನು ಕೇಳ

    ಉಸುಲಿನ ಭಕ್ತಿಯ
    ರಸದೊಳ ಮುಳುಗುಸಿ
    ಹಸನಾದ ಮನಲಿ ಧೇನಿಸು ನೀ
    ಬೆಸೆದು ಮೈಮನವ-
    ರ್ಪಿಸವಗೆ ಭಕ್ತಿಯ
    ಕುಸುಮದ ಕೋಮಲದೆಸಳುಗಳ

    ಮಸುಕಾಗದಿರಲಿ
    ಪಸೆಯಾರದಿರಲಿ
    ಬಸಿಯದ್ದಿರಲಂತಃಕರಣ
    ಕೆಸರಾಗದಿರಲಿ
    ಕಸವಾಗದಿರಲಿ
    ಹಸುರಾಗಿರಲಿ ಬುದ್ಧಿಯೆಂದೂ

    1. ಕವನ ಲಾಯ್ಕಲ್ಲಿ ಬಯಿಂದು – ಮಾತ್ರೆಯ ಡೋಸೇಜ್ ಕೆಲವು ಕಡೆ ರೆಜಾ ಹೆಚ್ಚುಕಮ್ಮಿ ಆಯಿದಾ?

      1. ಎನಗೆ ಈ ಜಾಗೆಲಿ ಮಾತ್ರ ತಪ್ಪು ಸಿಕ್ಕಿತ್ತು – “ಹಸುರಾಗಿರಲಿ ಬುದ್ಧಿಯೆಂದೂ”.
        ಬೇರೆ ಯಾವುದಾದರೂ ಎನ್ನ ಕಣ್ಣು ತಪ್ಪಿಸಿದ್ರೆ ಹೇಳಿ ಅತ್ತೆ. ಬದಲುಸ್ಲೆ ಪ್ರಯತ್ನ ಮಾಡ್ತೆ.

        1. ಅದಿತಿ, ‘ಐ’ವೊತ್ತು ಬಂದರೆ ‘ಗುರು’ ಅಲ್ಲದಾ ? ಗುರು ಹೇಳಿ ಗ್ರೇಶಿಗೊಂಡು ಆನು ಹೇಳ್ತಾ ಇಪ್ಪದು-
          ‘ಬೆಸೆದು ಮೈಮನವ’ , ಮತ್ತೆ ‘ಪೈಸೆಯಾಗಲಿ ದೇವನು ಕೇಳ’ – ಇದೆರಡು ಕಡೆ ನೋಡ್ತೀರಾ .

          1. ಓಹ್ !! ಸರಿ, ಸರಿ ನಿಂಗ ಹೇಳಿದ್ದು.
            ತಿದ್ದುಲೆ ಪ್ರಯತ್ನ ಮಾಡ್ತೆ. ತುಂಬಾ ಧನ್ಯವಾದ ಅತ್ತೆ.

      2. ಕವನದ ಆಶಯ ಲಯಿಕಿದ್ದು ಅದಿತಿಯಕ್ಕ

  18. ಒಂದು ದುಂಬಿ(ಹೆಣ್ಣು ಜೇನುಹುಳು ) ಮಕರಂದ ಹೀರುಲೆ ಹೋಪ ಸನ್ನಿವೇಶದ ಕಲ್ಪನೆ

    ಹೊಸ ಹೂಗರಸುಗು
    ತುಸು ಝೇ೦ಕರಿಸುಗು
    ರಸ ಹೀರುಲೆ ನಸುನಗೆಯೆಸಳ
    ಉಸಿರಿನ ಮರದೇ
    ಹಸುರಿನ ಸೆಸಿಗೆ ಸ
    ರಸರ ಸುಳಿಗದೋ ಗಿರಿಗಿಟಿಯೆ

    ಹೆಸರಿನ ಹೇಳೆಕೊ?
    ಎಸರಿನ ಕೊಡೆಕೋ ?
    ಕೆಸರಿಂಗೋಗಡ ನೀಯಸಳೆ
    ನಸುಗೆಂಪಿನ ಹೂ
    ತುಸುಗಂಪಿನವೂ
    ಹುಸಿ ನೆಗೆ ಮಾಡದೆ ಕೈಯೆಳಗು

    ಎಸರೇ ಕೇಳಿತು
    ಕಸಿವಿಸಿ ಮಾಡದೆ
    ಕುಸುರಿಯ ಕೆಲಸದ ಕಡು ಜಾಣೆ
    ಹೊಸಿಲಿ೦ದೆರಡೊಗ
    ಅಸುವಿನ ತೆಗೆಯದು
    ಕುಸುಮದ ಕೋಮಳದೆಸಲುಗಳ

    1. ಭಲೆ ಭಾಗ್ಯಕ್ಕ. ಒಂದು ಸುಂದರ ಕವನವನ್ನೆ ಬರದ್ದಿ.

    2. ಭಾಗ್ಯಕ್ಕ, ಮಕರಂದ ಹೀರುವ ಸನ್ನಿವೇಶ ಅಚ್ಚುಕಟ್ಟಾಗಿ ಮೂಡಿದ್ದು -ಅಭಿನಂದನೆಗೊ.

  19. ವಸುದೇವ ಸತಿಯ
    ಬಸಿರಿನ ಮಗನಿಂ
    ನುಸುಳಿತು ಹೆದರಿಕೆ ಕಂಸನೊಳಾ ।
    ಅಸುರನು ಕೊಲ್ಲುಲೆ
    ಶಿಶುವಿನ ನೆಗ್ಗಿದ
    ಕುಸುಮದ ಕೋಮಲದೆಸಳುಗಳ ॥

    ಸಾಸಿರ ನಾಲಗೆ
    ಶೇಷಗೆಯಿದ್ದರು
    ಕೂಸಿನ ಹೊಗಳುಲೆ ಸೋತನಡಾ ।
    ವಾಸುಕಿ ಕೊಡೆಯಡಿ
    ತೋಷದೆ ಹೊತ್ತನು
    ಕುಸುಮದ ಕೋಮಲದೆಸಳುಗಳ ॥

  20. ೧.
    ಹಸಿ ಹಸುರಿನಯೆಲೆ
    ತುಸು ನೆಗೆಯಾಡಿರೆ
    ಸೆಸಿ ಬಸರಿಯ ಕುಡಿ ಮೂಡುಗದಾ
    ನಸುಬಿರುದದು ಹೊಳೆ
    ಮಸರನೆ ಚೆಲ್ಲುಗು
    ಕುಸುಮದ ಕೋಮಲದೆಸಳುಗಳು ॥

    ೨.
    ಕೆಸರಿಲಿ ಬೆಳದರು
    ಹಸೆಮಣೆಯೇರಿದ
    ಕುಸುಮದ ಕೋಮಲದೆಸಳುಗಳ
    ಹೊಸಕದೆ ಮಡುಗಿರೆ
    ಮಸಣದ ಯಾತ್ರೆಗು
    ಹೆಸರಿಲಿಯೇನಿರ ಹಣೆಬರಹ ॥

    1. ಲಾಯ್ಕಾಯಿದು. ಒಳ್ಳೆ ಕಲ್ಪನೆಗೊ.

  21. ಅತ್ತೆ,
    ಕವನಗೊ ತುಂಬಾ ಲಾಯ್ಕಿದ್ದು. ಮೊದಲನೇ ಪದ್ಯ ಎರಡನೆದಕ್ಕಿಂತ ಇಷ್ಟ ಆತು.
    “ಕಿಸಲಯ” ಮತ್ತು “ಮಾಸರ” ಹೇಳುವ ಪದಗಳ ಪರಿಚಯ ಮಾಡಿಸಿದ್ದಕ್ಕೆ ಧನ್ಯವಾದ.

    1. ಅದಿತಿಯಕ್ಕ,ಭಾಗ್ಯಕ್ಕ ಮತ್ತೆ ಇಂದಿರತ್ತೆಯ ಪೂರಣಂಗೊ ಒಂದರಿಂದ ಒಂದು ರೈಸಿದ್ದನ್ನೇ……

      1. ಅಪ್ಪು, ಎನಗೂ ಹಾಂಗೆ ಅನಿಸಿತ್ತು.

  22. ನಸುನಗೆ ಬೀರುವ
    ಶಿಶುವಿನಯೆದುರಿಲಿ
    ಮಸುಕಿತು ಚಂದ್ರನ ಕಿರಣವುದೇ ।
    ಕಿಸಲಯ ಬಣ್ಣದ
    ಹಸುಳೆಯು ಹೋಲುಗು
    ಕುಸುಮದ ಕೋಮಲದೆಸಳುಗಳ ॥

    ಬೆಶಿಲಿನ ಬೇಗೆಗೆ
    ಬಸವಳಿದಪ್ಪಗ
    ಪಿಸುರದು ಬಂದೇ ಬಕ್ಕನ್ನೆ ।
    ಎಸರಿನ ಕುಡಿಯೆಕು
    ಮಾಸರ ಕಿತ್ತಳೆ
    ಕುಸುಮದ ಕೋಮಲದೆಸಳುಗಳ ॥

  23. ಅದಿತಿ, ಬೋಣಿಯ ಕವನದ ಗೊಂಚಲು ನೋಡಿ ಮನಸು ಪುಳಕಿತಗೊಂಡತ್ತು. ಲಾಯ್ಕಾಯಿದು – ಅಭಿನಂದನೆಗೊ.

  24. ಭಾಗ್ಯಕ್ಕ,

    ಮೊದಲನೇ ಪದ್ಯಲ್ಲಿ ಗಾಳಿಗೆ ಸುಗಂಧ ಪೂಸುವ ಕಲ್ಪನೆ ತುಂಬಾ ಲಾಯ್ಕಿದ್ದು.

    ಗಂಭೀರ ವಸ್ತುವಿನ ಎರಡನೇ ಪದ್ಯವೂ ಲಾಯ್ಕಾಯ್ದು. ಆದರೆ ಎರಡನೇ ಸಾಲು ಕೂಡ ಹ್ರಸ್ವಂದಲೇ ಸುರುವಾಗಿದ್ದರೆ ಒಳ್ಳೇದಿತ್ತು.

    1. ಅದ್ತಿಯಕ್ಕೆ ಹೇಳಿದ್ದು ಒೞೆದಾತು. ೨ ಸಿ೦ಹ೦ಗೊಕ್ಕೆ ಒ೦ದೊ೦ದು ಆನೆ ಕಾಲು ಕೂಡುಸಿದ್ದು ಗಮನಕ್ಕೆ ಬಯಿನ್ದಿಲ್ಲೆ.ಸರಿ ಮಾಡ್ತೆ

      ನಸುಕಿನ ಅನಿಲನು
      ಹೊಸಕುಲೆ ಹೋಗಾ°
      ಕುಸುಮದ ಕೋಮಲದೆಸಳುಗಳ
      ನಸುಗಂಪಿನ ಹೂ
      ಗೆಸಳುಗೊ ನಾಚಿಯೆ
      ರಸಪೂಸುಗಿನಿಯನಾಗಮಕೆ
      ********************** *
      ಸಣ್ಣ ಮಕ್ಕಳ(ಕೂಸು+ಮಾಣಿ ) ಮೇಲೆ ಅಪ್ಪ ಅತ್ಯಾಚಾರ , ಅನಾಚಾರ .. .
      ಅಸುರರು ಕಾಮದ
      ನಶೆಲೇ ಹಿಂಡುಗು
      ಕುಸುಮದ ಕೋಮಲದೆಸಳುಗಳ
      ಮಸುಕುಗು ಬಾಳೂ
      ಮಸಣವೆಯಕ್ಕೂ
      ಕೊಸರುಗೊ ಪಾಪಿಗೊ ಕಾನೂನಾ ?

      ಕಾಮ ಹೇಳೋದು ಬರೇ ಲೈ೦ಗಿಕ ಆಸಕ್ತಿಯಲ್ಲ

  25. ನಸುಕಿನ ಅನಿಲನು
    ಹೊಸಕುಲೆ ಹೋಗಾ°
    ಕುಸುಮದ ಕೋಮಲದೆಸಳುಗಳ
    ನಸುಗಂಪಿನ ಹೂ
    ಗೆಸಳುಗೊ ನಾಚಿಯೆ
    ಪೂಸುಗು ಪರಿಮಳ ಮಾರುತಗೆ

    ********************** *
    ಸಣ್ಣ ಮಕ್ಕಳ(ಕೂಸು+ಮಾಣಿ ) ಮೇಲೆ ಅಪ್ಪ ಅತ್ಯಾಚಾರ , ಅನಾಚಾರ .. .

    ಅಸುರರು ಕಾಮಪಿ
    ಪಾಸಗೆ ಹಿಂಡುಗು
    ಕುಸುಮದ ಕೋಮಲದೆಸಳುಗಳ
    ಮಸುಕುಗು ಬಾಳೂ
    ಮಸಣವೆಯಕ್ಕೂ
    ಕೊಸರುಗೊ ಪಾಪಿಗೊ ಕಾನೂನಾ ?

    ಕಾಮ ಹೇಳೋದು ಬರೇ ಲೈ೦ಗಿಕ ಆಸಕ್ತಿಯಲ್ಲ

    1. ಭಾಗ್ಯಕ್ಕ, ಪೂರಣದ ವಸ್ತುಗಳ ಆಯ್ಕೆ ಸಮರ್ಪಕವಾದ್ದು. ಕವನ ಮನಸ್ಸಿಂಗೆ ತಟ್ಟುತ್ತು – ಅಭಿನಂದನೆಗೊ.

    2. ಭಾಗ್ಯಕ್ಕ, ಅದಿತಿ ಅಕ್ಕ – ಇಬ್ರ ಪೂರಣಂಗೊ ಲಾಯಿಕಿದ್ದು. ಭಾಗ್ಯಕ್ಕನ ಪೂರಣದ ಕಲ್ಪನೆ+ ವಸ್ತು ತುಂಬಾ ತುಂಬಾ ಲಾಯಿಕಿದ್ದು.
      ಅಲ್ಲಲ್ಲಿ “ವಿಸಂಧಿ” ಬಂದದು ಬಿಟ್ರೆ, ಒಳ್ಳೆ ಪದ್ಯಂಗೊ.

  26. ಅಧಿತಿಯಕ್ಕಾ,

    ಪದವಿದು ಹೂಶರ
    ಓದಿದೆಯೋದಿದೆ
    ಉದಿಯಪ್ಪಗಳೇಯಾನಂದ
    ಮಧುರವೆ ಅಧರದ
    ಕೆಂದುಟಿ ಕಂದನು
    ಕದಿಗವ° ಕೂಗಿಯು ಎಲ್ಲೋರ

  27. ಹೊಸಮದ್ಮಾಳಿನ
    ನಸುಗೆಂಪಿನ ಮುಖ-
    ಕುಸುಮದ ಕೋಮಲದೆಸಳುಗಳ
    ತುಸು ಮುದ್ದಿಸಿಯವ
    ರಸಿಕತೆ ತೋರಿಸಿ
    ಪಿಸುಗುಟ್ಟಿದ ನೀನೆನಗಿಷ್ಟ

    ಸರಸಲಿ ಚೆಂದಕೆ
    ಸುರುವಾತಿಬ್ಬರ
    ಮೆರುಗಿನ ಜೀವನ ಸುಖವಾಗಿ
    ಬೆರಳಿನ ಚೀಪುವ
    ಬೆರಗಿಲಿ ನೋಡುವ
    ಸುರಮಗು ಬಂತದು ಮಡಿಲಿಂಗೆ

    ಮುಸುಕಿದ ಮೈಂದಿಲಿ
    ನಸುಕಿಲಿ ಬಿರುದಾ
    ಕುಸುಮದ ಕೋಮಲದೆಸಳುಗಳ-
    ರಸುದೇ ಸುಮ್ಮನೆ
    ನಸುನಗು ಸೂಸುವ
    ಹಸುಗೂಸಿನ ತುಟಿಯೇ ಚೆಂದ

    ಕುರುಳೋ ಗುಂಗುರು
    ಕೊರಳೋ ಕೋಗಿಲೆ
    ಹರಳಿನ ಹಾಂಗೆಯೆ ಹೊಳಪಿನ ಮೈ
    ಸರಕದು ಸಿಕ್ಕಿರೆ
    ಹರಡುಗು ಮನೆಯೊಳ
    ಸರಸರ ಹರಗವ ಪೋಕರಿಯು

    ಓಡಲಿ ಜೀವನ-
    ದೋಡವು ಸೌಖ್ಯಲಿ
    ಕಾಡದೆ ಹೋಗಲಿ ಬಿರುಗಾಳಿ
    ಮೂಡಣ ಸೂರ್ಯನು
    ಮೂಡಿಯೆ ಇರಲವ
    ಮಾಡುದು ಬೇಡವ ಕಸ್ತಲೆಯ

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×