ಸಮಸ್ಯೆ -04: “ಆಟಿಯ ತಿಂಗಳ ಮಳೆಗಾಲ”

July 28, 2012 ರ 10:00 amಗೆ ನಮ್ಮ ಬರದ್ದು, ಇದುವರೆಗೆ 27 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಹೂಗಿನ ಒಳ ಕುಸುಮ ಇಪ್ಪ ಸಂಗತಿಯ ನವಿರು ನವಿರಾಗಿ ನಮ್ಮ ಬೈಲಿನವು ವಿವರುಸಿದ್ದವು.
ತುಂಬಾ ಕೊಶಿ ಆತು. ಭಾಗವಹಿಸಿದ ಹೆರಿ-ಕಿರಿಯ ಎಲ್ಲೋರಿಂಗೂ ನಮಸ್ಕಾರಂಗೊ.
ನಾಕನೇ ಸಮಸ್ಯೆ ಯೇವದು ನೋಡುವನೋ?

ಈ ವಾರದ ಸಮಸ್ಯೆ:

“ಆಟಿಯ ತಿಂಗಳ ಮಳೆಗಾಲ”

ಎಲ್ಲೋರುದೇ ಮಳೆಗಾಲದ ವಿವರಣೆ ಮಾಡಿ, ಮಳೆಲಿ ಚೆಂಡಿ ಆಗಿ, ಶರ ಪ್ರಯೋಗ ಮಾಡಿ.
ಆತೋ?

ಶರ ಷಟ್ಪದಿ

ಸೂ:

 • ಆಟಿ = ಕರ್ಕಾಟಕ ಮಾಸ
 • ಈ ಸಮಸ್ಯೆ ಶರ ಷಟ್ಪದಿಲಿ ಇದ್ದು.
  (ಆಟಿಯ | ತಿಂಗಳ | ಮಳೆಗಾ | ಲ)
  ನಾಕು ನಾಕರ ಎರಡು ಗುಚ್ಛ – ಮೊದಲೆರಡು ಸಾಲಿಲಿ.
  ನಾಕರ ಮೂರು ಗುಂಪು, ಕೊನೆಗೊಂದು ಗುರು – ಮೂರ್ನೇ ಸಾಲಿಲಿ.
 • ಆದಿಪ್ರಾಸಕ್ಕೆ ಸಲಹೆ: (ಆಟಿ)
  ಸುರುವಾಣ ಅಕ್ಷರ ಗುರು, ಎರಡ್ಣೇ ಅಕ್ಷರ “ಟ” ಕಾರ.
  ಕಾಟಿ, ಕೋಟೆ, ಅಟ್ಟ, ಪೆಟ್ಟು, ಲೂಟಿ, ಸೂಟೆ, ಇತ್ಯಾದಿ.
 • ಹೆಚ್ಚಿನ ಮಾಹಿತಿಗೆ:
  http://oppanna.com/oppa/shara-kusuma-bhoga-bhamini-shatpadi
  http://padyapaana.com

ಈ ಶುದ್ದಿಗೆ ಇದುವರೆಗೆ 27 ಒಪ್ಪಂಗೊ

 1. ಮುಳಿಯ ಭಾವ
  ರಘು ಮುಳಿಯ

  ಈಟಿನ ಹೆಡಗೆಯ
  ತೋಟಕೆ ಹೊರುಲಾ
  ತಾಟಕಿ ಸು೦ದರಿ ಬಾರದ್ದೆ
  ಊಟಿಯ ಹೊಡೆ ತಿರು
  ಗಾಟಕೆ ಹೆರಟ
  ತ್ತಾಟಿಯ ತಿ೦ಗಳ ಮಳೆಗಾಲ
  ****************
  ಮಾಟೆಯ ಕೊರದೂ
  ಕೋಟಿಯ ಬಾಚುತ
  ಪಾಟವ ಕಲುಶಿದ ನಾಯಕರೂ
  ಓಟಿನ ಬೇಡುಲೆ
  ನೋಟಿನ ಸೊರುಗಿದ
  ರಾಟಿಯ ತಿ೦ಗಳ ಮಳೆಗಾಲ
  ****************
  ಊಟವನು೦ಬಲೆ
  ಪೇಟೆಗೆ ನೆಡವಗ
  ನೋಟಿನ ಕಿಸೆಯೊಳ ಮಡಗಿದರೆ
  ಕೂಟಲ್ಲಿಸ್ಪೇ
  ಟಾಟಕ್ಕೆಳದ
  ತ್ತಾಟಿಯ ತಿ೦ಗಳ ಮಳೆಗಾಲ
  ****************
  ಸಾಟಿನ ಕೊಟ್ಟರೆ
  ಲೂಟಿಯ ಮಾಣಿಗೆ
  ಮಾಟೆಯ ಹಲ್ಲಿನ ಕಿಸ್ಕೊ೦ಡು
  ಬಾಟುಗು ಕಾಟ೦
  ಕೋಟಿಯ ಮನೆಯೊಳ
  ಆಟಿಯ ತಿ೦ಗಳ ಮಳೆಗಾಲ
  *****************

  [Reply]

  VA:F [1.9.22_1171]
  Rating: +5 (from 5 votes)
 2. ಮುಳಿಯ ಭಾವ
  ರಘು ಮುಳಿಯ

  ಆಟದ ಚೆ೦ಡೆಗೆ
  ಕೂಟದ ಮದ್ದಳೆ
  ಸಾಟಿಯಿರದ್ದ ಪ್ರದರ್ಶನವೊ?
  ನಾಟಕ? ಜಲ ಮೈ
  ಮಾಟದ ನಾಟ್ಯವೊ
  ಆಟಿಯ ತಿ೦ಗಳ ಮಳೆಗಾಲ?

  [Reply]

  VA:F [1.9.22_1171]
  Rating: +1 (from 1 vote)
 3. ಬಾಲಣ್ಣ (ಬಾಲಮಧುರಕಾನನ)
  ಬಾಲಣ್ಣ (ಬಾಲಮಧುರಕಾನನ)

  ಮುಳಿಯದಣ್ಣ,ಇನ್ನು ಗೊಬ್ಬರದ ಹೆಡಗೆಯ ಹೊರ್ಲೆ ನಾವೇ.. .ಸುಂದರಿಯೋ ಸುಂದರನೋ ಸಿಕ್ಕಲೇ ಸಿಕ್ಕ .ಎನ್ನ ಪದ್ಯಕ್ಕೆ ನಿಂಗೊ ಒಪ್ಪಕ್ಕೆ ಒ…ಪ್ಪ ಕೊಟ್ಟಿದಿರಿ.ಧನ್ಯವಾದಂಗೊ.ಇನ್ನು ಚೆನ್ನೈ ಬಾವನ” ಎಡಕ್ಕ ಮಡಕ್ಕ”ಕ್ಕೆ — –ಎನಗೂ ಹಾಂಗೇ ಆಗಿಂಡ್ದಿದ್ದತ್ತು ಭಾವಾ, ನಾಕು ನಾಕು ಸರ್ತಿಬರದು ಬರದು, ತಿದ್ದಿ ತಿದ್ದಿ ,ಅಪ್ಪಾಗ ಒನ್ದು ನಮುನೆ ಸರಿ ಆವುತ್ತು . ನಿಂಗಳ ಪದ್ಯಲ್ಲಿ ಏನೂ ತಪ್ಪಿಲ್ಲೆ.
  ಚೂರು ಅರ್ಥ ಬದಲಿಸಿ ಬರದರೆ ಹೇಂಗೆ ಹೇಳಿ ಬರದ್ದದು. ಪದ್ಯ ಲಾಯಕ್ಕಾಅಯಿದು ದನ್ಯವಾದಂಗೊ.

  [Reply]

  VN:F [1.9.22_1171]
  Rating: +1 (from 1 vote)
 4. ಬಾಲಣ್ಣ (ಬಾಲಮಧುರಕಾನನ)
  ಬಾಲಣ್ಣ (ಬಾಲಮಧುರಕಾನನ)

  ಮುಳಿಯದಣ್ಣನ ಪದ್ಯವೂ ಸಾಟಿಯಿಲ್ಲದ್ದದೇ , “ಜಲ ಮೈಮಾಟದ ನಾಟ್ಯವೊ?” ಅದ್ಬುತ ಕಲ್ಪನೆ, ಮುಳಿಯದಣ್ಣಾ ಪದ್ಯ ಸೂ….ಪರಾಯಿದು.

  [Reply]

  VN:F [1.9.22_1171]
  Rating: +1 (from 1 vote)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಸುವರ್ಣಿನೀ ಕೊಣಲೆದೊಡ್ಡಭಾವಡಾಮಹೇಶಣ್ಣಉಡುಪುಮೂಲೆ ಅಪ್ಪಚ್ಚಿಅನಿತಾ ನರೇಶ್, ಮಂಚಿವೆಂಕಟ್ ಕೋಟೂರುಅಕ್ಷರದಣ್ಣನೀರ್ಕಜೆ ಮಹೇಶಅಜ್ಜಕಾನ ಭಾವಡೈಮಂಡು ಭಾವಎರುಂಬು ಅಪ್ಪಚ್ಚಿಗಣೇಶ ಮಾವ°ಪುಟ್ಟಬಾವ°ಬೋಸ ಬಾವರಾಜಣ್ಣಪ್ರಕಾಶಪ್ಪಚ್ಚಿಕೇಜಿಮಾವ°ಸಂಪಾದಕ°ಮಾಷ್ಟ್ರುಮಾವ°ಪವನಜಮಾವಕೊಳಚ್ಚಿಪ್ಪು ಬಾವವಿದ್ವಾನಣ್ಣಸುಭಗಮಾಲಕ್ಕ°ಡಾಗುಟ್ರಕ್ಕ°ವೇಣಿಯಕ್ಕ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ