ಸಮಸ್ಯೆ 59 : ಚಿತ್ರಕ್ಕೆ ಪದ್ಯ

ಓ ಮನ್ನೆ ದಾರಿಲಿ ಹೋಪಗ ಹೀ೦ಗೊ೦ದು ದೃಶ್ಯ ಕ೦ಡತ್ತು.
ಬೈಲಿನ ಕವಿಗೊ ಇದರ ನೋಡಿರೆ ಕಲ್ಪನಾಲೋಕಲ್ಲಿ ಕೈಯಾಡುಸಿ ಏನೆಲ್ಲಾ ಹೆರ ತೆಗಗೋ ಹೇಳ್ತ ಕುತೂಹಲಲ್ಲಿ ಅ೦ಬ್ರೇಪಿಲಿ ಕೆಮರದೊಳ ಹಿಡುದ್ದದು.

ಪದ್ಯ ಕಟ್ಟುವ° ಬನ್ನಿ.

ಎತ್ತ ಕಡೆಗೆ ಪೋಪುದಯ್ಯ??

ಎತ್ತ ಕಡೆಗೆ ಪೋಪುದಯ್ಯ??

ಸಂಪಾದಕ°

   

You may also like...

25 Responses

 1. ಶ್ಯಾಮಣ್ಣ says:

  ಪೋಪ್ಯುಲಾರು ಮಟನು ಶಾಪು
  ಕಟ ಕಟಾ ಕಟಾ
  ಕೊಚ್ಚಿ ಕೊಂದ ಕುರಿಯ ಎಲುಬು
  ಟಕ ಟಕಾ ಟಕಾ
  ಅಕಟ ಅಕಟ ಎಂತ ವಿಕಟ
  ಶಕಟ ಮೇಲೆ ಬೆಳಿಯ ನಾಯಿ
  ಎತ್ತ ಕಡೆಗೆ ಪೋಪುದಯ್ಯ
  ಪಟ ಪಟಾ ಪಟಾ

  • ರಘುಮುಳಿಯ says:

   ಇದು ರೈಸಿದ್ದು ಶ್ಯಾಮಣ್ಣ.

   ತಾಟಿ ಬಡುದೆ ಶಬ್ದ ಬ೦ತೊ?
   ಪಟ ಪಟಾ ಪಟಾ..

  • ತೆಕ್ಕುಂಜ ಕುಮಾರ ಮಾವ° says:

   ಅಕಟ ವಿಕಟ ಶಕಟ ಹೇಳಿ ಬೆಳಿ ನಾಯಿ ತಟಪಟ ಮಾಡಿತ್ತೋ..?ಅಕಟಕಟಾ..!!!

 2. shylaja kekanje says:

  ಮಿಸಿರಿ ಮಾಲೆ ಹಾಕಿ ನಿ೦ದ
  ಮಸರಿಲದ್ದಿ ತೆಗದ ನಾಯಿ
  ದೆಸೆಯೆ ಬದಲಿದಾ೦ಗೆ ಬಯ್ಕ ಮು೦ದೆ ಕೂಯಿದು
  ಕಸವು ಕೆಸರು ಹತ್ತುಸದ್ರು
  ಗಸಣಿ ದಾರಿ ಮಾ೦ಸ ಬೇಕು
  ನೊಸಲ ಬರಹ ಡೊ೦ಕು ಬೀಲ ಹೊಟ್ಟೆ ಹೊರವಲೆ /

 3. ಇಂದಿರತ್ತೆ says:

  ಅಣ್ನ ಹೆರಟನು ಪೇಟೆ ಸುತ್ತುಲೆ
  ಬಣ್ನ ಮಾಸಿದ ಪೇಂಟು ಸಿಕ್ಕಿಸಿ
  ಬೆಣ್ನೆ ನೊಂಪಿನ ಸಣ್ನ ಗಾತ್ರದ ಶುನಕ ಬಂತೋಡಿ ।
  ಮಣ್ಣು ಕಾಣದ ಮುದ್ದು ನಾಯಿಯು
  ಠಣ್ಣನೇರಿತು ಬೈಕ ಮೇಲೆಯೆ
  ಕಣ್ಣು ಮುಚ್ಚಿರು ಮೂಗು ಹೇಳುಗು ಮಾಂಸದಂಗಡಿಯಾ ॥

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *