Oppanna.com

ಸಮಸ್ಯೆ 59 : ಚಿತ್ರಕ್ಕೆ ಪದ್ಯ

ಬರದೋರು :   ಸಂಪಾದಕ°    on   04/01/2014    25 ಒಪ್ಪಂಗೊ

ಓ ಮನ್ನೆ ದಾರಿಲಿ ಹೋಪಗ ಹೀ೦ಗೊ೦ದು ದೃಶ್ಯ ಕ೦ಡತ್ತು.
ಬೈಲಿನ ಕವಿಗೊ ಇದರ ನೋಡಿರೆ ಕಲ್ಪನಾಲೋಕಲ್ಲಿ ಕೈಯಾಡುಸಿ ಏನೆಲ್ಲಾ ಹೆರ ತೆಗಗೋ ಹೇಳ್ತ ಕುತೂಹಲಲ್ಲಿ ಅ೦ಬ್ರೇಪಿಲಿ ಕೆಮರದೊಳ ಹಿಡುದ್ದದು.
ಪದ್ಯ ಕಟ್ಟುವ° ಬನ್ನಿ.

ಎತ್ತ ಕಡೆಗೆ ಪೋಪುದಯ್ಯ??
ಎತ್ತ ಕಡೆಗೆ ಪೋಪುದಯ್ಯ??

25 thoughts on “ಸಮಸ್ಯೆ 59 : ಚಿತ್ರಕ್ಕೆ ಪದ್ಯ

  1. ಅಣ್ನ ಹೆರಟನು ಪೇಟೆ ಸುತ್ತುಲೆ
    ಬಣ್ನ ಮಾಸಿದ ಪೇಂಟು ಸಿಕ್ಕಿಸಿ
    ಬೆಣ್ನೆ ನೊಂಪಿನ ಸಣ್ನ ಗಾತ್ರದ ಶುನಕ ಬಂತೋಡಿ ।
    ಮಣ್ಣು ಕಾಣದ ಮುದ್ದು ನಾಯಿಯು
    ಠಣ್ಣನೇರಿತು ಬೈಕ ಮೇಲೆಯೆ
    ಕಣ್ಣು ಮುಚ್ಚಿರು ಮೂಗು ಹೇಳುಗು ಮಾಂಸದಂಗಡಿಯಾ ॥

  2. ಮಿಸಿರಿ ಮಾಲೆ ಹಾಕಿ ನಿ೦ದ
    ಮಸರಿಲದ್ದಿ ತೆಗದ ನಾಯಿ
    ದೆಸೆಯೆ ಬದಲಿದಾ೦ಗೆ ಬಯ್ಕ ಮು೦ದೆ ಕೂಯಿದು
    ಕಸವು ಕೆಸರು ಹತ್ತುಸದ್ರು
    ಗಸಣಿ ದಾರಿ ಮಾ೦ಸ ಬೇಕು
    ನೊಸಲ ಬರಹ ಡೊ೦ಕು ಬೀಲ ಹೊಟ್ಟೆ ಹೊರವಲೆ /

  3. ಪೋಪ್ಯುಲಾರು ಮಟನು ಶಾಪು
    ಕಟ ಕಟಾ ಕಟಾ
    ಕೊಚ್ಚಿ ಕೊಂದ ಕುರಿಯ ಎಲುಬು
    ಟಕ ಟಕಾ ಟಕಾ
    ಅಕಟ ಅಕಟ ಎಂತ ವಿಕಟ
    ಶಕಟ ಮೇಲೆ ಬೆಳಿಯ ನಾಯಿ
    ಎತ್ತ ಕಡೆಗೆ ಪೋಪುದಯ್ಯ
    ಪಟ ಪಟಾ ಪಟಾ

    1. ಇದು ರೈಸಿದ್ದು ಶ್ಯಾಮಣ್ಣ.
      ತಾಟಿ ಬಡುದೆ ಶಬ್ದ ಬ೦ತೊ?
      ಪಟ ಪಟಾ ಪಟಾ..

    2. ಅಕಟ ವಿಕಟ ಶಕಟ ಹೇಳಿ ಬೆಳಿ ನಾಯಿ ತಟಪಟ ಮಾಡಿತ್ತೋ..?ಅಕಟಕಟಾ..!!!

  4. ಬೈಕಿನ ಮೇಲೇರಿ ಬ೦ದ ನಾಯಿಯಾ ವಿಲಾಸ,..ಎಳದು ಬಂತದ ರಾಜಯೋಗವು..ಮನೆಯ ಬಿಟ್ಟು ಕಾಡು ಸೇರಿ..ಬೆಳಿಯ ರೋಮದಂಗಿ ಹಾಕಿ..ಗಲ್ಲಿ ಗಲ್ಲಿಲಿ ಮಾಂಸದಂಗಡಿಯ ನೋಡಿದರೆ..ರೂಪತ್ತೆ ನಾಯಿ ..ಸಾಂಕುವ ಗೌಜಿಯೇವೊಂದು..ಈ ಸತ್ತಿಯಣ ಪಟ ಮತ್ತು ಹಾಡುಗ ಸೂಪರ್ !ಒಂದರಿನ್ನೊಂದು ಮೀರಿಸಿ ರೈಸಿದ್ದು ,ಎಲ್ಲೋರಿಂಗು ಅಭಿನಂದನೆಗ

  5. ಬೈಕಿನ ಮೇಲೇರಿ ಬ೦ದ ನಾಯಿಯಾ ವಿಲಾಸ
    ಥೈಕ ಥಕತ ಕೊಣುದು ಬ೦ತು ಮಾರ್ಗಲಟ್ಟಹಾಸ।
    ಉಗುರು ಗೀರಿರಕ್ಕು ವಾಹನಲ್ಲಿ ಹೊಸತು ಗೀಟು
    ನಗರ ಸುತ್ತಿ ಬಪ್ಪಲಿದ್ದು ಹೊದದು ಬೆಳಿಯ ಕೋಟು
    ಬೆಗರು ನೀರ ಹೀರುಲೊ೦ದು ವಸ್ತ್ರತು೦ಡು ಹಾಸಿ
    ಮುಗಿವೆ ಕೈಯ ಕೊಡುಸು ಮಾ೦ಸ ತು೦ಡಿನೊ೦ದು ಕಾಸಿ। ಬೈಕಿನ।

    1. ಹೊಸ ಶೈಲಿಯುದೆ ತುಂಬಾ ಲಾಯಕಾಯಿದು.

    2. ಭೄಂಗದಾ ಮೇಲೇರಿ ಬಂದ ಕಲ್ಪನಾ ವಿಲಾಸದ ಹಾಂಗೆ ಆ ಬೆಳಿ ನಾಯಿಯೂ ಬಂತೋ…. ಲಾಯ್ಕಾಯಿದು

  6. ಎಳದು ಬಂತದ ರಾಜಯೋಗವು
    ಬೆಳಿಯ ಬಣ್ಣದ ಪಮೆರಿಯನ್ನಿಗೆ
    ಗೆಳೆಯನೆನ್ನವನೆಂಬ ಹಮ್ಮಿಲಿ ಹತ್ತಿ ಕೂಯಿದದಾ ।
    ಹಳಸಿದಶನವು ಮೆಚ್ಚ ನಾಯಿಗೆ
    ಕೊಳದ ಮಾಂಸವ ಕಚ್ಚಿ ತಿಂಬಲೆ
    ನೆಳವು ಹಾರುವ ಮಟನಿನಂಗಡಿಯೆದುರು ಬಂದತ್ತು ॥

  7. ಅಬ್ಬಬ್ಬ ಎಷ್ಟೊಂದು ಕೊಂಡಾಟ ಮುದ್ದೆ
    ಬೊಬ್ಬೆ ಹಾಕುಗು ಮತ್ತೆ ಕೂರ್ಸದ್ರೆ ಮುಂದೆ
    ಹಬ್ಬದೂಟಕೆ ಹೆರಟತ್ತು ನಾಯಿಸವಾರಿ
    ಗೆಬ್ಬಯಿಸಿ ಕೂದೊಂಡು ಬೈಕಿನ ಏರಿ ॥

  8. ಭಾಗ್ಯಕ್ಕ, ಏತಡ್ಕ ಮಾವ – ರೈಸಿದ್ದು.

    1. ಕೃತಜ್ಞತೆಗೊ ತೆಕ್ಕುಂಜ ಮಾವ.

  9. ಬೆಳಿಯ ರೋಮದಂಗಿ ಹಾಕಿ
    ಹೊಳೆವ ಕಣ್ಣು ಬಿಟ್ಟುಕೊಂಡು
    ಸೆಳೆದು ನೋಟ ತನ್ನ ಕಡೆಗೆ ಹೋಪದೆಲ್ಲಿಗೆ?
    ಛಳಿಯ ಗಾಳಿ ಬೀಸುವಾಗ
    ಕೆಳದಿಕೊಂದು ವಸ್ತ್ರ ಹಾಕಿ
    ಗೆಳೆಯನೊಟ್ಟು ಮಾಡಿಕೊಂಡು ಹೆರಟದೆಲ್ಲಿಗೆ?

    1. ಅದಿತಿಯಕ್ಕನ ಪ್ರಶ್ನಗೆ, ಎನ್ನ ಕಲ್ಪಲಿ ನಾಯಿಯ ಉತ್ತರ ….. (ಆಂಜನೇಯನ ಗುಡಿಗೆ ಹೆರಟದು )
      ಮನೆಯ ಬಿಟ್ಟು ಕಾಡು ಸೇರಿ
      ಜನಕ ಸುತೆಯ ಕಳೆದು ಕೊಂಡ
      ವನಲಿ ವಾಸ ಮುಗಿಶಿ ಹೋದ ರಾಮನಲ್ಲಿಗೆ I
      ಮನಲಿ ತುಂಬಿವೊಡೆಯನನ್ನೆ
      ಘನತೆ ತಪ್ಪ ಸೇವೆ ಮಾಡಿ
      ಮಣಿಯ ಮಾಲೆ ಕಚ್ಚಿ ತಿಂದ ಭಕ್ತ ನಲ್ಲಿಗೆ II

  10. ಚೆನ್ನೈ ಭಾವ೦ಗೂ ಧನ್ಯವಾದ.

  11. 😀 😀 @ ಭಾಗ್ಯಕ್ಕ, ಏತಡ್ಕ ಮಾವ° !!

  12. ಗಲ್ಲಿ ಗಲ್ಲಿಲಿ ಮಾಂಸದಂಗಡಿಯ ನೋಡಿದರೆ
    ಅಲ್ಲಿಪ್ಪ ಜನಪ್ರಿಯತೆಗೆ ಬೇಡ ಸಾಕ್ಷಿ
    ಲಲ್ಲೆ ಮಾಡುವ ಬೊಳ್ಳು ನಾಯಿಯ ರ-
    ಥಲ್ಲಿ ಕೂರ್ಸಿರೆಂತ ಪ್ರಯೋಜನವೋ?

    1. ಏತಡ್ಕ ಮಾವ, ರೈಸಿದ್ದು . ಸಣ್ಣ ತಿದ್ದುಪಡಿ ಮಾಡಿರೆ ಓದುಲೆ ಇನ್ನೂ ಗಮ್ಮತ್ತಕ್ಕೋ ಹೇಳಿ ಕ೦ಡತ್ತು.
      ಗಲ್ಲಿ ಗಲ್ಲಿಲಿ ಮಾಂಸದಂಗಡಿಯ ನೋಡಿದರೆ
      ಅಲ್ಲಿಪ್ಪ ಜನಪ್ರಿಯತೆಗೆ ಬೇಡ ಸಾಕ್ಷಿ
      ಲಲ್ಲೆ ಮಾಡುವ ಬೊಳ್ಳು ನಾಯಿಯನೆ ಹತ್ತುಸಿ ರ-
      ಥಲ್ಲಿ ಕೂರ್ಸಿದರೆಂತ ಲಾಭವಿದ್ದೋ?

      1. ಈಗ ಸರಿಯಾತು ರಘು ಮುಳಿಯ.ಮೂರ್ನೇ ಗೆರೆಲಿ ೫ ಮಾತ್ರೆ ಕಡಮ್ಮೆ ಆಗಿತ್ತಿದ್ದು.ಧನ್ಯವಾದ.

  13. ರೂಪತ್ತೆ ನಾಯಿ ಸಾಂಕುವ ಗೌಜಿಯೇವೊಂದು
    ಕೋಪ ಬಂದರೆ ಮಾಂಸದಂಗಡಿಗದೋಡಿ
    ಹೋಪದುದೆ ,ವಾಹನದ ಮೇಲೆಮೇಲ್ ವಸನಲ್ಲಿ
    ಕೂಪದರ ಪಟ ತೆಗದ್ದಿನ್ನೊಂದಿದ II
    (ಕೂಪದರ ಮನಗೆತ್ಸುದಿನ್ನೊ೦ದಿದ –ಕಡೆಯಾಣ ಸಾಲಿನ ಹೀಂಗೂ ಬದಲ್ಸುಲಕ್ಕು )

    1. ಹ.ಹಾ.. ತು೦ಬಾ ಲಾಯ್ಕ ಆಯಿದು ಭಾಗ್ಯಕ್ಕ .

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×