ಸಮಸ್ಯೆ 06: “ಉರಿಬೆಶಿಲು ಬಂತಲ್ಲ ಸುಗ್ಗಿಮಳೆಗಾಲಲ್ಲಿ ಹೇಂಗಪ್ಪ ಬೆಳೆ ಬೆಳೆಶುದು”

ಸಮಸ್ಯಾಪೂರಣ ತುಂಬಾ ಲಾಯಿಕಲ್ಲಿ ಓಡ್ತಾ ಇದ್ದು.
ಇದುವರೆಗೆ ನಾವು ಶರ, ಕುಸುಮ, ಭೋಗ, ಭಾಮಿನಿ, ಪರಿವರ್ಧಿನೀ – ಷಟ್ಪದಿಗಳ ಸಮಸ್ಯೆಗಳ ನೋಡಿದ್ದು.
ಇದೀಗ ಷಟ್ಪದಿಗಳಲ್ಲೇ ಹೆರಿಯೋನು – ವಾರ್ಧಕ ಷಟ್ಪದಿ” ನೋಡ್ತ ಕಾಲ.
ಎಲ್ಲೋರುದೇ “ಐದೈದು ಮಾತ್ರೆ”ಯ ತೆಕ್ಕೊಂಡು ಉಶಾರಿ ಆಯೇಕು ಹೇದು ಕೇಳಿಗೊಂಬದು.

ಈ ವಾರದ ಸಮಸ್ಯೆ:

ವಾರ್ಧಕ ಷಟ್ಪದಿ

ಉರಿಬೆಶಿಲು ಬಂತಲ್ಲ ಸುಗ್ಗಿಮಳೆಗಾಲಲ್ಲಿ ಹೇಂಗಪ್ಪ ಬೆಳೆ ಬೆಳೆಶುದು..?

(ಈಗಾಣ ಆಟಿಮಳೆಗಾಲಲ್ಲಿ ಒಳ್ಳೆ ಮಳೆ ಬತ್ತಾ ಇದ್ದರೂ, ಈ ಸಮಸ್ಯೆ ಪ್ರಸ್ತುತ ಕಾಲಕ್ಕೆ ಸೂಚ್ಯವಾಗಿಪ್ಪದು, ಅಷ್ಟೆ.)

ಸೂ:

 • ಈ ಸಮಸ್ಯೆ ವಾರ್ಧಕ ಷಟ್ಪದಿಲಿ ಇದ್ದು.
  ಐದೈದು ಮಾತ್ರೆಯ ನಾಕು ಗುಂಪು – ಮೊದಲೆರಡು ಗೆರೆಲಿ.
  ಐದು ಮಾತ್ರೆಯ ಆರು ಗುಂಪು, ಕೊನೆಗೊಂದು ಗುರು – ಮೂರ್ನೇ ಗೆರೆಲಿ.
  ( ಉರಿಬೆಶಿಲು | ಬಂತಲ್ಲ | ಸುಗ್ಗಿಮಳೆ | ಗಾಲಲ್ಲಿ | ಹೇಂಗಪ್ಪ | ಬೆಳೆ ಬೆಳೆಶು| ದು )
 • ಆದಿಪ್ರಾಸಕ್ಕೆ ಸಲಹೆ:
  ಸುರುವಾಣ ಅಕ್ಷರ ಲಘು; ದ್ವಿತೀಯಾಕ್ಷರ “ರ”ಕಾರ.
  ಹರಿ, ಸುರು, ಮರ, ನೊರೆ, ಚೆರು, ಚೊರಿ, ಗುರು, ಸುರು, ಇತ್ಯಾದಿ.
 • ಹೆಚ್ಚಿನ ಮಾಹಿತಿಗೆ:

ಸಂಪಾದಕ°

   

You may also like...

19 Responses

 1. ಗೋಪಾಲ ಬೊಳುಂಬು says:

  ಕರಿಕರಿಯ ಮುಗಿಲೆಲ್ಲ ಬಾನಲ್ಲಿ ಒಟ್ಟಾಗಿ
  ಪಿರಿಪಿರಿಯ ಮಳೆಯಾಗಿ ಬರೆಕಾತು ಊರಿಂಗೆ
  ಕಿರಿಕಿರಿಯು ನವಗಾಗ ಗೆದ್ದೆತೋಟದನಾವು ಕೃಷಿಯಲ್ದೊ ನಮಜೀವನ ।

  ಪರಿಪರಿಯ ಹರಕೆಗಳ ಸೇವೆಗಳ ಮಾಡಿದರು
  ಸೊರುಗಿದರು ಪೈಸೆಯಾ ದೇವರಿನ ಹೆಸರಿಲ್ಲಿ
  ಉರಿಬೆಶಿಲು ಬಂತಲ್ಲ ಸುಗ್ಗಿಮಳೆಗಾಲಲ್ಲಿ ಹೇಂಗಪ್ಪ ಬೆಳೆ ಬೆಳೆಶುದು..?

  (ಉರಿಬೆಶಿಲು ಬಂತಾನೆ ಸುಗ್ಗಿಮಳೆಗಾಲಲ್ಲಿ ಹೇಂಗಪ್ಪ ಬೆಳೆ ಬೆಳೆಶುದು .. ?? ಹೇಳಿ ಕಡೇಣ ಗೆರೆಯ ಮಾಡ್ಳಕ್ಕು ಹೇಳಿ ಎನ್ನ ಭಾವನೆ)

  • ದೇವರಿಂಗೆ ಹರಕ್ಕೆ ಹೇಳಿರೂ ಬಾರದ್ದ ಸಂಗತಿ ಲಾಯಿಕಾಯಿದು ಬೊಳುಂಬುಮಾವ!
   ಬಂತಾನೆ, ಬಂತಲ್ಲ – ಯೇವದಾರೂ ಸಮ. ಹೇಂಗೆ ತೆಕ್ಕೊಂಡ್ರೂ ಮಾತ್ರೆ ಹೆಚ್ಚುಕಮ್ಮಿ ಆಗ ಮಾವ! 🙂

   ಬೈಲಿನ ಸಮಸ್ಯೆಲಿ ಮಾತ್ರೆದೇ ಚಿಂತೆ; ಮಾರ್ಕಿಂದಲ್ಲ. ಹಾಂಗಾಗಿ ತೊಂದರೆ ಇಲ್ಲೆ ಇದಾ! 🙂

 2. ಚೆರುವಿಂಗೆ ಮಡುಗಿದ್ದೆ ಕಿಚ್ಚುದೇ ಹಾಕಿದ್ದೆ
  ಕರಟವೇ ಇದ್ದರುದೆ ಇಲ್ಲೆ ಪ್ರಯೋಜನವು
  ಸುರುವಿಂಗೆ ಹನ್ಕಿದಾ ಮಳಗದಾ ಒಣಮಡಲು ಕೊತ್ತಳಿಗೆ ಚಂಡಿಯಾತು ।
  ಪರರಿಂಗೆ ಬೇಡದ್ದರೂ ನವಗೆ ಬೇಕನ್ನೆ
  ಬರೆಕೆರೆಶಿ ಗೆದ್ದೆಯಿಡಿ ಹೊಡಿಮಾಡಿ ಮಡಗಿರೂ
  ಉರಿಬೆಶಿಲು ಬಂತಲ್ಲ ಸುಗ್ಗಿಮಳೆಗಾಲಲ್ಲಿ ಹೇಂಗಪ್ಪ ಬೆಳೆ ಬೆಳೆಶುದು ॥

  • ಗೋಪಾಲ ಬೊಳುಂಬು says:

   ಭಾವಯ್ಯ, ಚೆರುವಿಂಗೆ ಕಿಚ್ಚು ಹಾಕಲೆ ಗೋವಿಂದ ಭಾವನ ಗೇಸು ಅಂಡೆ ಇದ್ದಾನೆ. ಗೆದ್ದೆ ರೆಡೀ ಮಾಡಿ ಮಡಗಿರು ಮಳೆ ಬಾರದ್ದೆ ಕಷ್ಟ ಆತು. ಪದ್ಯ ಪಷ್ಟಾಯಿದು.

  • ರಘು ಮುಳಿಯ says:

   ಕೊಬೆ ಚೆ೦ಡಿ ಅಪ್ಪಷ್ಟೆ ಮಳೆ ಬ೦ದರೆ ಹೇ೦ಗಪ್ಪಾ !!

  • ಛೇ, ಗೆದ್ದೆ ಇಡೀ ಹೊಡಿ ಮಾಡಿ ಮಡಗಿರೂ ಮಳೆಬಾರದ್ದು ಭಾರೀ ಬೇಜಾರವೇ ಭಾವ.
   ಪದ್ಯ ಪಷ್ಟಾಯಿದು.

 3. ಬಾಲಣ್ಣ (ಬಾಲಮಧುರಕಾನನ) says:

  ಬರೆಕಾತು ತೋಟಕ್ಕೆ ಮದ್ದು ಬಿಡುವಾ” ಎಂಕು”

  ಇರೆಕಾತು ಪಂಪಿಂಗೆ ಗಾಳಿಹಾಕುವ” ಅಂದು”

  ಕೊರೆಕಾತು ಉಪ್ಪು ಸೊಳೆ, ಮಂಡಗೆಯ ಹೆರತೆಗದು ಹುಳಿಬೆಂದಿ ಮಾಡೆಕಾತು।

  ಅರರೆ! ಮಳೆಯೇ ಇಲ್ಲೆ ,ಬಂದರೂ ಹನುಕು ಮಳೆ

  ಬಿರುದತ್ತೊ ಮುಗಿಲಡ್ಡ ಹಾದತ್ತೊ! ಗೊಂತಿಲ್ಲೆ,

  ಉರಿಬೆಶಿಲು ಬಂತನ್ನೆ ಸುಗ್ಗಿಮಳೆಗಾಲಲ್ಲಿ ಹೇಂಗಪ್ಪ ಬೆಳೆಬೆಳೆಶುದು?।

  (ಒಟ್ಟಿಂಗೆ ಕರೆಂಟುದೇ ಇಲ್ಲೆ ಹೇಳಿ ಆದರೆ, ನುಸಿಯ ಟುಂಯಿ ಟುಂಯಿ ಸಂಗೀತವ ಕೇಳಿಯೊಂಡು ಇರುಳು

  ಒರಗಲೆ ಭಾರೀ ಕೊಶಿ ಅಲ್ಲದೋ?)

  ಒರಗಲೆ

  • ಗೋಪಾಲ ಬೊಳುಂಬು says:

   ಮದ್ದು ಬಿಡುವ ಎಂಕು, ಗಾಳಿಹಾಕುವ ಅಂದುಕ್ಕನ ನೆಂಪು ಮಾಡಿದ್ದು ಲಾಯಕಾಯಿದು, ಬಾಲಣ್ಣ.
   ಹಳತ್ತೆಲ್ಲ ಒಂದರಿ ನೆಂಪಾತು. ಪದ್ಯ ಲಾಯಕಾಯಿದು.
   ಎಂಕು, ಐತಪ್ಪು, ರಾಮು, ಚನಿಯ ತಲೆಕುಚ್ಚಿ ತೆಗವ ಕಿಟ್ಣ ಎಲ್ಲೋರು ಈಗ ಇದ್ದವೊ ?

   • ಅಂದು, ಎಂಕುಗಳ ದೆಸೆಲಿ ಇನ್ನು ಎಡಿಯಲೇ ಎಡಿಯಪ್ಪ.
    ಅದರೊಟ್ಟಿಂಗೆ ಮಳೆಯೂ ಕೈಕೊಟ್ಟತ್ತೋ!

    ಬೈಲಿನ ಹೆಸರುಗೊ ಕಂಡಪ್ಪಗ ಕೊಶೀ ಆತು. ಪದ ಪಷ್ಟಾಯಿದು.

 4. ತೆಕ್ಕುಂಜ ಕುಮಾರ ಮಾವ° says:

  ಬೊಳುಂಬು ಮಾವ, ಚೆನ್ನೈಭಾವ, ಬಾಲಣ್ಣ ಬರದ ಪೂರಣಂಗೊ ಒಂದರಂದ ಒಂದು ಲಾಯ್ಕಿದ್ದು, ವಾಸ್ತವದ ವರ್ಣನೆಯೊಟ್ಟಿಂಗೆ ಬರದ್ದದು ಪಷ್ಟಾಯಿದು.
  ಕವಿ ರಾಘವಾಂಕ ವಿರಚಿತ ‘ಹರಿಶ್ಚಂದ್ರ ಕಾವ್ಯ’ ವಾರ್ಧಕ ಷಡ್ಪದಿಲಿ ಬರದ ಅಮೋಘ ರಚನೆ. ಹೈಸ್ಕೂಲಿಲಿದ್ದಿಪ್ಪಗ ಅದರ ಕೆಲವು ಪದ್ಯಂಗೊ ಪಾಠಕ್ಕೆ ಇತ್ತು. ಕನ್ನಡ ಪಂಡಿತರು(ತೆಕ್ಕುಂಜ ದಾಮೋದರ ಭಟ್) ಕ್ಲಾಸಿಲಿ ಚಂದ್ರಮತಿಯ ರೋದನದ(ಮಗ ರೋಹಿತಾಶ್ವ ಸತ್ತಪ್ಪಗ) ವರ್ಣನೆಯ ಪದ್ಯವ ಚೆಂದಕ್ಕೆ ಗಮಕಲ್ಲಿ ವಾಚಿಸಿ ವಿವರಿಸಿದ್ದು ಈಗಳೂ ನೆಂಪಿದ್ದು. ಅದರ ಒಂದು ಪದ್ಯ ಹೀಂಗಿದ್ದು ಃ
  ಲಲನೆ ಮೂಗಿನೊಳುಸುರನಳ್ಳೆಯೊಳು ಹೊಯ್ಲನುಗು
  ರೊಳು ರಜವನೆದೆಯೊಳಲ್ಲಾಟಮಂ ಕೈಯ ಮೊದ
  ಲೊಳು ಮಿಡುಕನಂಗದೊಳು ನೋವನಕ್ಷಿಯೊಳು ಬೆಳ್ಪಂ ಭಾಳದೊಳು ಬೆಮರನು ।
  ಲಲಿತಕಂಠದೊಳುಲುಕನಂಘ್ರಿಯೊಳು ಬಿಸಿಯನಂ
  ಗುಳಿಗಳೊಳು ಚಿಟುಕನುಂಗುಟದೊಳರುಣಾಂಬುವಂ
  ಸಲೆ ನಾಲಗೆಯೊಳಿಂಪ ರೋಮದೊಳು ಬಲ್ಪನಾರಯ್ದು ಕಾಣದೆ ನೊಂದಳು ॥

  • ಗೋಪಾಲ ಬೊಳುಂಬು says:

   ನಿಜವಾಗಿಯೂ ಮನಸ್ಸಿನ ತಟ್ಟುತ್ತ ಹಾಂಗಿಪ್ಪ ಪದ್ಯ.
   ಇದರ ಎದುರು ನಮ್ಮ ಪದ್ಯಂಗೊ ಎಲ್ಲ ಎಲ್ ಕೇ ಜಿ ತರಗತಿ.

  • ರಘು ಮುಳಿಯ says:

   ತೆಕ್ಕು೦ಜ ಮಾವಾ,
   ‘ಚ೦ದ್ರಮತಿಯ ಪ್ರಲಾಪ’ ಆರನೇ ಕ್ಲಾಸಿಲಿ ಇದ್ದದು ಹೇಳಿ ನೆ೦ಪು. ಎ೦ಗೊಗೆ ಟೀಚರು ಆ ಘಟನೆಯ ವಿವರಿಸೊಗ ತಡೆಯದ್ದೆ ಕೂಗಿದ ನೆನಪ್ಪು ಹಸಿಯಾಗಿದ್ದು.

 5. ಎಸ್.ಕೆ.ಗೋಪಾಲಕೃಷ್ಣ ಭಟ್ಟ says:

  ಕೆರೆಯು ಸಮಲಿದ್ದಿಲ್ಲೆ, ಕುರೆನೀರು ಹೋಯ್ದಿಲ್ಲೆ
  ಮರೆಯ ಕಟ್ಟಿದ್ದಿಲ್ಲೆ ಮನೆಯ ಹೆರಚಿಟ್ಟೆಯಾ
  ಕರೆಲಿ,ಹಾಕಿದ ನೇಜಿ ಹಾಳಾಗಿ ಹೋತನ್ನೆ ದೇವರೇ, ನೊಗನೇಗಿಲ
  ತರಿಸಿಗೋಣವ ಹೂಡಿರೂ ಗುಣವು ಸಿಕ್ಕ ನಮ
  ಗರಡಿಯಪ್ಪಾಯೀವರುಷದ ಕಾಲಂಪಾಡು
  ಉರಿಬೆಶಿಲು ಬಂತನ್ನೆ ಸುಗ್ಗಿಮಳೆಗಾಲಲ್ಲಿ ಹೇಂಗಪ್ಪ ಬೆಳೆಬೆಳೆಶುದು?

  • ವಾಹ್! ಭಾರೀ ಪಷ್ಟಾಯಿದು ಗೋಪಾಲಣ್ಣ.
   ಎಂತಾ ಅಕ್ಷರಜೋಡಣೆಗೊ, ಎಂತಾ ಕಲ್ಪನೆಗೊ.

   ತುಂಬಾ ಕೊಶಿ ಆತು.

  • ತೆಕ್ಕುಂಜ ಕುಮಾರ ಮಾವ° says:

   ತುಂಬ ಚೆಂದದ ವಾರ್ಧಕ.!
   ಗೋಪಾಲಣ್ಣನ ಪೂರಣಲ್ಲಿ ಒಂದಲ್ಲ ಒಂದು ಹೊಸ ಶಬ್ದಂಗಳ ಹಾಕುತ್ತವು, ಈ ಸರ್ತಿಲಿ “ಕಾಲಂಪಾಡು” ಪ್ರಯೋಗ ಒಳ್ಳೆ ಸಮಯೋಚಿತವಾಗಿ ಬಯಿಂದು.

 6. ವಾರ್ಧಕ ಷಟ್ಪದಿ ಕಷ್ಟ ಆದರೂ, ಇಷ್ಟಪಟ್ಟು ಪದಬರದು ಕೊಟ್ಟ ನೆರೆಕರೆ ನೆಂಟ್ರಿಂಗೆ ಒಪ್ಪಂಗೊ.
  ಇಲ್ಲಿಗೆ ಷಟ್ಪದಿಗಳ ಒಂದು ಸುತ್ತ ಪೂರ್ಣ ಆತು. ನೆರೆಕರೆಯೋರಿಂಗೆ ಅಭ್ಯಾಸ ಆಗಲಿ ಹೇದು, ಪುನಾ ಇನ್ನೊಂದು ಸರ್ತಿ ಷಟ್ಪದಿಗಳನ್ನೇ ತೆಕ್ಕೊಂಬೊ, ಅಲ್ಲದೋ?

  ಎಂತ ಹೇಳ್ತಿ?

  • ತೆಕ್ಕುಂಜ ಕುಮಾರ ಮಾವ° says:

   ಆಗಲಿ, ಇದರ ನಿಲ್ಲುಸುದು ಬೇಡ. ಅಭ್ಯಾಸ ಮುಂದುವರಿಸಿರೆ ಕಲಿವಲೆ ಒಳ್ಳೆದು, ಹೇದು ಎನ್ನ ಅಭಿಪ್ರಾಯ.

 7. ಬಾಲಣ್ಣ (ಬಾಲಮಧುರಕಾನನ) says:

  ಗುರಿಕ್ಕಾರ್ರೆ ನಮಸ್ಕಾರ.ಆನು ಬೈಲಿಂಗೆ ಬಂದದೇ ತಡವಾಗಿ .ಎನಗೆ ಈ ಯಂತ್ರಲ್ಲಿ ” ಅಚ್ಹಡಿ” ಮಾಡಲೆ ರೆಜಾ ಅಭ್ಯಾಸ ಆತು ,ಪದ್ಯ ಬರವಲೂ ಕೂಡಾ.ಒಳೊಳೆ ವಿಶಯಂಗೊ ಕೊಡಿ.ಹೀಂಗೆ ಮುಂದುವರಿಯಲಿ. ನಮಸ್ಕಾರ.

 8. ರಘು ಮುಳಿಯ says:

  ಹೊ,ನಾವು ಬೆಶಿಲಿನ ಗಾವಿಲಿ ಸಮಸ್ಯೆಯ ಹೊಡೇ೦ಗೆ ತಲೆ ಹಾಕದ್ದೆ ಬಾಕಿಯಾತು !

  ಅರೆಮಡಲ ನೆರಳಿನಡಿ ನಿ೦ದು ನೋಡಿರೆ ಸುತ್ತ
  ಗಿರಗಿರನೆ ತಿರುಗಿತ್ತು ತಲೆಯೊ೦ದರಿಯೆ,ಒಣಗಿ
  ಬಿರುದತ್ತು ಪಟ್ಟಪಸೆಯಿಲ್ಲದ್ದೆ ಬೈಲಿನಾ ಗೆದ್ದೆಗಳ ನೋಡುಲೆಡಿಯಾ।
  ಹೊರಿವಾ೦ಗೆ ಬಾಣಲೆಲಿ ಸೆಕೆಗೆಡಿಯ ಬೆಗರ ನೀ
  ರರುದತ್ತು ಈ ಸರ್ತಿ ವರುಷವಿಡಿ ವೈಶಾಖ
  ಉರಿಬೆಶಿಲು ಬಂತನ್ನೆ ಸುಗ್ಗಿಮಳೆಗಾಲಲ್ಲಿ ಹೇಂಗಪ್ಪ ಬೆಳೆಬೆಳೆಶುದು?।।

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *