ಸಮಸ್ಯೆ 51 : ಸುಳಿವ ಮುಗಿಲಿನೋಟಕೊ೦ದು ಉಪಮೆ ಕಟ್ಟುವ°

October 19, 2013 ರ 6:00 amಗೆ ನಮ್ಮ ಬರದ್ದು, ಇದುವರೆಗೆ 29 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಒರಿಸ್ಸಾ ಕರಾವಳಿಗೆ ಚ೦ಡಮಾರುತ ಬಡುದು,ಮುಗಿಲುಗಳೋಡಿ ಮಳೆ ಬ೦ದು ಈಗ ನಿಧಾನಲ್ಲಿ ಜನಜೀವನ ಮತ್ತೆ ಸಾಮಾನ್ಯ ಸ್ಥಿತಿಗೆ ಬತ್ತಾ ಇದ್ದು.

ಈ ವಾರ ಭೋಗ ಷಟ್ಪದಿಲಿ

” ಸುಳಿವ ಮುಗಿಲು ”

ಗಳನ್ನೆ ಆದಿಪ್ರಾಸ ಮಾಡಿಗೊ೦ಡು ಮುಗಿಲಿನ ಓಟದ ಮೇಲೆ ಒ೦ದು ಉಪಮಾಲ೦ಕಾರ ಇಪ್ಪ ಷಟ್ಪದಿ ಕಟ್ಟುವ°, ಹೊಸ ಹೊಸ ಕಲ್ಪನೆಗೊ ಬೈಲಿಲಿ ಸುಳಿಯಲಿ,ಆಗದೋ?

 

 

ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 29 ಒಪ್ಪಂಗೊ

 1. ಅದಿತಿ

  ಹೊಳೆಯ ಬಳೆಯ ಹಾಕಿ ಹಸುರಿ-
  ನೆಳೆಯ ಸೀರೆ ಸುತ್ತಿ ಧಾತ್ರಿ
  ಕಳೆಯ ಸೂಸಿ ಕೂದ ಚೆಂದ ಬಾನು ನೋಡಿದ
  ಸುಳಿವ ಮುಗಿಲ ಕರುಸಿ ಹೂವೆ-
  ಸಳಿನ ವೃಷ್ಟಿಗೈದ ಹಾಂಗೆ
  ಮಳೆಯ ಸುರಿಸಿ ಒಲವ ಭಿಕ್ಷೆ ತಾನು ಬೇಡಿದ

  [Reply]

  ಮುಳಿಯ ಭಾವ

  ರಘುಮುಳಿಯ Reply:

  ಆಹಾ..ಅದಿತಿಯಕ್ಕನ ಈ ಷಟ್ಪದಿ ಅದ್ಭುತ.
  ಮುದ್ದಣನ ”ರಾಮಾಶ್ವಮೇಧ”ಲ್ಲಿ ಒ೦ದು ಜಾಗೆಲಿ ಪ್ರಕೃತಿಯ ವರ್ಣನೆ ಹೀ೦ಗಿದ್ದು – ತಿರೆವೆಣ್ಗೆ ಮುಗಿಲ್ಸೊ೦ದಿಯೊಳ್ ಬಳ್ಳಿವರೆವ ನೇಹದಿ೦ ಬೆಳ್ಳ೦ಗೆಡೆವ ಸೊಗದಾಲಿ ನೀರೆನೆ ಪೆರ್ಚಿ ಪರಿದುದೀ ಪೊರ್ಪ೦” . ( ಭೂವನಿತೆಗೆ ಮುಗಿಲ ವಿಟನೊಟ್ಟಿ೦ಗೆ ಮು೦ದುವರಿದ ಸ್ನೇಹಲ್ಲಿ ಮೂಡಿಬ೦ದ ಸ೦ತೋಷದ ಕಣ್ಣೀರಿನ ಹಾ೦ಗೆ ಉಕ್ಕಿ ಹರುದತ್ತೀ ಹೊಳೆ).
  ಇದೇ ಧಾಟಿಲಿ ನಮ್ಮ ಭಾಷೆಲಿ ಒ೦ದು ಸಾಹಿತ್ಯ ಸೄಷ್ಟಿ ಆತು ಹೇಳಿ ಮನಸ್ಸು ತು೦ಬಿತ್ತು.ಅಭಿನ೦ದನೆಗೊ.

  [Reply]

  VA:F [1.9.22_1171]
  Rating: 0 (from 0 votes)
 2. ಭಾಗ್ಯಲಕ್ಶ್ಮಿ

  ಎಲ್ಲಾ ಪೂರಣ೦ಗಳೂ ಒ೦ದರಿ೦ದ ಒ೦ದು ಲಾಯಿಕಿದ್ದು!!

  [Reply]

  VA:F [1.9.22_1171]
  Rating: 0 (from 0 votes)
 3. ಭಾಗ್ಯಲಕ್ಶ್ಮಿ

  ಮೇಲೆ ಬರದ ಎಲ್ಲ ಪೂರಣoಗಳ ಓದಿ ಹೊಸ ಕಲ್ಪನೆ ಬಂದದು

  ಬೆಳಿಯ ಜಾಲ್ಲಿ ಎನ್ನದಾಟ
  ಕಳವ ಮುತ್ತ್ವ ಮೋಡ ನೋಡಿ
  ಸುಳಿವ ಮುಗಿಲ ಕಪ್ಪು ಹೊದಕೆ ಸೂರ್ಯ ದೂಡುದೊ?
  ಬಳುದ ಹಸಿರು ಬಣ್ಣಲಿಪ್ಪ
  ಇಳೆಯ ಬಸಿರ ಬೆಳೆಯ ಕಂಡು
  ತೊಳದ ವಸ್ತ್ರ ಹಿಂಡಿದಾಂಗೆ ನೀರು ಬಳಿಶುದೊ?

  [Reply]

  ಮುಳಿಯ ಭಾವ

  ರಘುಮುಳಿಯ Reply:

  ನವನವೀನ ಕಲ್ಪನೆ ರೈಸಿತ್ತು ಭಾಗ್ಯಕ್ಕ.

  [Reply]

  VA:F [1.9.22_1171]
  Rating: 0 (from 0 votes)
 4. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ ಮಾವ°

  ಎಲ್ಲ ಷಡ್ಪದಿಗೊ ಪಷ್ಟಾಯಿದು. ಓದಿ ಕೊಶಿ ಆತು.

  [Reply]

  VN:F [1.9.22_1171]
  Rating: +1 (from 1 vote)
 5. ಭಾಗ್ಯಲಕ್ಶ್ಮಿ

  ಮುಳಿಯದಣ್ಣ ಮೇಲಾಣ ಪೂರಣವ ಚೂರು ಬದಲಿಸಿದರೆ ಇನ್ನೂ ಒಳೆದಕ್ಕು ಹೇಳಿ ಸಲಹೆ ಕೊಟ್ಟಿದವು. ಸಲಹೆಗೆ ಧನ್ಯವಾದ ಹೇಳ್ತಾ ಬದಲುಸುತ್ತೆ.

  ”ಬೆಳಿಯ ಜಾಲ್ಲಿ ಎನ್ನದಾಟ”
  ಕಳವ ಸುತ್ತುವರಿದು ಸುತ್ತ
  ಸುಳಿವ ಮುಗಿಲ ಕಪ್ಪು ಹೊದಕೆ ಸೂರ್ಯ ದೂಡುದೊ?
  ಬಳುದ ಹಸಿರು ಬಣ್ಣಲಿಪ್ಪ
  ಇಳೆಯ ಬಸಿರ ಬೆಳೆಯ ಕಂಡು
  ತೊಳದ ವಸ್ತ್ರ ಹಿಂಡಿದಾಂಗೆ ನೀರು ಬಳಿಶುದೊ?

  [Reply]

  VA:F [1.9.22_1171]
  Rating: 0 (from 0 votes)
 6. ಇಂದಿರತ್ತೆ
  ಇಂದಿರತ್ತೆ

  ಮುಳಿಸಿಗೊಂಡ ಬಾನಿನಜ್ಜ°
  ನೆಳೆದನಜ್ಜಿ ಜುಟ್ತ ಹಿಡುದು
  ಸೆಳದು ಕೊಟ್ಟನೆರಡು ಗುದ್ದಿನಜ್ಜಿ ಬೆನ್ನಿಲಿ ।
  ಗಾಳಿದೇವನೋಡಿ ಬಂದ°
  ಸುಳಿವ ಮುಗಿಲು ಅಡ್ಡ ತಡದ
  ರಿಳುದು ಬಂತು ನೀರ ಧಾರೆಯಜ್ಜಿ ಕಣ್ಣಿಲಿ ।।

  ಎಳೆಯ ಕಂದ ಲೂಟಿ ಮಾಡೆ
  ಹಳೆಯ ಅಸ್ತ್ರವಬ್ಬೆ ಬಿಡುಗು
  ಬಳಿಗೆ ಬಕ್ಕು ಗುಮ್ಮ ನೋಡು ಒರಗದಿದ್ದರೆ ।
  ತಿಳಿಯ ನೀಲ ಬಾನಿನೊಳವೆ
  ಸುಳಿವ ಮುಗಿಲ ಕಂಡು ಹೆದರಿ
  ಎಳದು ಹೊದಕೆ ಗುಡಿಯ ಹೆಟ್ಟಿ ಕಣ್ಣು ಮುಚ್ಚಿದ° ॥

  [Reply]

  VA:F [1.9.22_1171]
  Rating: +1 (from 1 vote)
 7. ಇಂದಿರತ್ತೆ
  ಇಂದಿರತ್ತೆ

  ತಿಳಿಯ ನೀಲ ಬಾನ ತುಂಬ
  ಸುಳಿವ ಮುಗಿಲು ಬಂದರಂಬ
  ಗಳೆ ಯಶೋದೆಯಲ್ಲಿ ಕಾಣ್ತು ತನ್ನ ಕಂದನ ।
  ಬೆಳಿಯ ಮೋಡ ರಾಶಿಯೊಳದಿ
  ಕಳಗೆ ಬೆಣ್ಣೆಯೆತ್ತಿ ತಂದು
  ಗೆಳೆಯರೊಡನೆ ಹಂಚಿ ತಿಂದ ಕೃಷ್ಣ ಕಂಡನೊ !!

  ಕೃಷ್ಣ ಗೊಕುಲವ ಬಿಟ್ಟುಹೋದ ಮೇಲೆ ಯಶೋದೆಗೆ ಎಲ್ಲೆಲ್ಲಿಯುದೆ ಕೃಷ್ಣನೇ ಕಂಡಹಾಂಗಪ್ಪದು ಸಹಜವೇ ಅಲ್ಲದಾ.ಹಾಂಗೆ ನೀಲಿ ಆಕಾಶಲ್ಲಿ ಬೆಳಿಮೋಡ ಕಂಡಪ್ಪಗ ನೀಲಮೇಘಶ್ಯಾಮ ಬೆಣ್ನೆ ಕದ್ದುತಿಂಬಗ ಮೋರೆಗಿಡೀ ಮೆತ್ತಿಗೊಂಡದು ಯಶೋದೆಗೆ ನೆಂಪಾತಡ. ಹೀಂಗೆ ಕಲ್ಪಿಸಿಗೊಂಡು ಬರದ್ದು.

  [Reply]

  ಅದಿತಿ Reply:

  ಅದ್ಭುತ ಕಲ್ಪನೆ ಅತ್ತೆ.
  ಮಗ ದೂರಾದರೆ, ನಿಜಕ್ಕೂ ಅಮ್ಮ೦ಗೆ ಎಲ್ಲೆಲ್ಲಿಯೂ ಮಗನನ್ನೇ ಕಾ೦ಗು.
  ಒೞೆಯ ಪದ್ಯ.

  [Reply]

  ಶೈಲಜಾ ಕೇಕಣಾಜೆ Reply:

  ಅಪ್ಪಪ್ಪು…. ಎಲ್ಲೋರ ಎಲ್ಲಾ ಪದ್ಯಂಗಳೂ ಅದ್ಭುತವಾಗಿ ಮೂಡಿದ್ದು…

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಹಳೆಮನೆ ಅಣ್ಣಮಂಗ್ಳೂರ ಮಾಣಿಸುವರ್ಣಿನೀ ಕೊಣಲೆಮಾಷ್ಟ್ರುಮಾವ°ಬೋಸ ಬಾವವಾಣಿ ಚಿಕ್ಕಮ್ಮವಸಂತರಾಜ್ ಹಳೆಮನೆಡಾಗುಟ್ರಕ್ಕ°ಎರುಂಬು ಅಪ್ಪಚ್ಚಿದೊಡ್ಮನೆ ಭಾವಕೇಜಿಮಾವ°vreddhiಅಕ್ಷರ°ನೀರ್ಕಜೆ ಮಹೇಶಶ್ರೀಅಕ್ಕ°ಮುಳಿಯ ಭಾವವೇಣೂರಣ್ಣಬಂಡಾಡಿ ಅಜ್ಜಿದೊಡ್ಡಮಾವ°ಗಣೇಶ ಮಾವ°ಜಯಶ್ರೀ ನೀರಮೂಲೆಒಪ್ಪಕ್ಕಮಾಲಕ್ಕ°ಪೆಂಗಣ್ಣ°ಪುಟ್ಟಬಾವ°ಅನು ಉಡುಪುಮೂಲೆ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ