Oppanna.com

ಸಮಸ್ಯೆ 51 : ಸುಳಿವ ಮುಗಿಲಿನೋಟಕೊ೦ದು ಉಪಮೆ ಕಟ್ಟುವ°

ಬರದೋರು :   ಸಂಪಾದಕ°    on   19/10/2013    29 ಒಪ್ಪಂಗೊ

ಒರಿಸ್ಸಾ ಕರಾವಳಿಗೆ ಚ೦ಡಮಾರುತ ಬಡುದು,ಮುಗಿಲುಗಳೋಡಿ ಮಳೆ ಬ೦ದು ಈಗ ನಿಧಾನಲ್ಲಿ ಜನಜೀವನ ಮತ್ತೆ ಸಾಮಾನ್ಯ ಸ್ಥಿತಿಗೆ ಬತ್ತಾ ಇದ್ದು.
ಈ ವಾರ ಭೋಗ ಷಟ್ಪದಿಲಿ

” ಸುಳಿವ ಮುಗಿಲು ”

ಗಳನ್ನೆ ಆದಿಪ್ರಾಸ ಮಾಡಿಗೊ೦ಡು ಮುಗಿಲಿನ ಓಟದ ಮೇಲೆ ಒ೦ದು ಉಪಮಾಲ೦ಕಾರ ಇಪ್ಪ ಷಟ್ಪದಿ ಕಟ್ಟುವ°, ಹೊಸ ಹೊಸ ಕಲ್ಪನೆಗೊ ಬೈಲಿಲಿ ಸುಳಿಯಲಿ,ಆಗದೋ?
 
 

29 thoughts on “ಸಮಸ್ಯೆ 51 : ಸುಳಿವ ಮುಗಿಲಿನೋಟಕೊ೦ದು ಉಪಮೆ ಕಟ್ಟುವ°

  1. ತಿಳಿಯ ನೀಲ ಬಾನ ತುಂಬ
    ಸುಳಿವ ಮುಗಿಲು ಬಂದರಂಬ
    ಗಳೆ ಯಶೋದೆಯಲ್ಲಿ ಕಾಣ್ತು ತನ್ನ ಕಂದನ ।
    ಬೆಳಿಯ ಮೋಡ ರಾಶಿಯೊಳದಿ
    ಕಳಗೆ ಬೆಣ್ಣೆಯೆತ್ತಿ ತಂದು
    ಗೆಳೆಯರೊಡನೆ ಹಂಚಿ ತಿಂದ ಕೃಷ್ಣ ಕಂಡನೊ !!
    ಕೃಷ್ಣ ಗೊಕುಲವ ಬಿಟ್ಟುಹೋದ ಮೇಲೆ ಯಶೋದೆಗೆ ಎಲ್ಲೆಲ್ಲಿಯುದೆ ಕೃಷ್ಣನೇ ಕಂಡಹಾಂಗಪ್ಪದು ಸಹಜವೇ ಅಲ್ಲದಾ.ಹಾಂಗೆ ನೀಲಿ ಆಕಾಶಲ್ಲಿ ಬೆಳಿಮೋಡ ಕಂಡಪ್ಪಗ ನೀಲಮೇಘಶ್ಯಾಮ ಬೆಣ್ನೆ ಕದ್ದುತಿಂಬಗ ಮೋರೆಗಿಡೀ ಮೆತ್ತಿಗೊಂಡದು ಯಶೋದೆಗೆ ನೆಂಪಾತಡ. ಹೀಂಗೆ ಕಲ್ಪಿಸಿಗೊಂಡು ಬರದ್ದು.

    1. ಅದ್ಭುತ ಕಲ್ಪನೆ ಅತ್ತೆ.
      ಮಗ ದೂರಾದರೆ, ನಿಜಕ್ಕೂ ಅಮ್ಮ೦ಗೆ ಎಲ್ಲೆಲ್ಲಿಯೂ ಮಗನನ್ನೇ ಕಾ೦ಗು.
      ಒೞೆಯ ಪದ್ಯ.

      1. ಅಪ್ಪಪ್ಪು…. ಎಲ್ಲೋರ ಎಲ್ಲಾ ಪದ್ಯಂಗಳೂ ಅದ್ಭುತವಾಗಿ ಮೂಡಿದ್ದು…

  2. ಮುಳಿಸಿಗೊಂಡ ಬಾನಿನಜ್ಜ°
    ನೆಳೆದನಜ್ಜಿ ಜುಟ್ತ ಹಿಡುದು
    ಸೆಳದು ಕೊಟ್ಟನೆರಡು ಗುದ್ದಿನಜ್ಜಿ ಬೆನ್ನಿಲಿ ।
    ಗಾಳಿದೇವನೋಡಿ ಬಂದ°
    ಸುಳಿವ ಮುಗಿಲು ಅಡ್ಡ ತಡದ
    ರಿಳುದು ಬಂತು ನೀರ ಧಾರೆಯಜ್ಜಿ ಕಣ್ಣಿಲಿ ।।
    ಎಳೆಯ ಕಂದ ಲೂಟಿ ಮಾಡೆ
    ಹಳೆಯ ಅಸ್ತ್ರವಬ್ಬೆ ಬಿಡುಗು
    ಬಳಿಗೆ ಬಕ್ಕು ಗುಮ್ಮ ನೋಡು ಒರಗದಿದ್ದರೆ ।
    ತಿಳಿಯ ನೀಲ ಬಾನಿನೊಳವೆ
    ಸುಳಿವ ಮುಗಿಲ ಕಂಡು ಹೆದರಿ
    ಎಳದು ಹೊದಕೆ ಗುಡಿಯ ಹೆಟ್ಟಿ ಕಣ್ಣು ಮುಚ್ಚಿದ° ॥

  3. ಮುಳಿಯದಣ್ಣ ಮೇಲಾಣ ಪೂರಣವ ಚೂರು ಬದಲಿಸಿದರೆ ಇನ್ನೂ ಒಳೆದಕ್ಕು ಹೇಳಿ ಸಲಹೆ ಕೊಟ್ಟಿದವು. ಸಲಹೆಗೆ ಧನ್ಯವಾದ ಹೇಳ್ತಾ ಬದಲುಸುತ್ತೆ.
    ”ಬೆಳಿಯ ಜಾಲ್ಲಿ ಎನ್ನದಾಟ”
    ಕಳವ ಸುತ್ತುವರಿದು ಸುತ್ತ
    ಸುಳಿವ ಮುಗಿಲ ಕಪ್ಪು ಹೊದಕೆ ಸೂರ್ಯ ದೂಡುದೊ?
    ಬಳುದ ಹಸಿರು ಬಣ್ಣಲಿಪ್ಪ
    ಇಳೆಯ ಬಸಿರ ಬೆಳೆಯ ಕಂಡು
    ತೊಳದ ವಸ್ತ್ರ ಹಿಂಡಿದಾಂಗೆ ನೀರು ಬಳಿಶುದೊ?

  4. ಎಲ್ಲ ಷಡ್ಪದಿಗೊ ಪಷ್ಟಾಯಿದು. ಓದಿ ಕೊಶಿ ಆತು.

  5. ಮೇಲೆ ಬರದ ಎಲ್ಲ ಪೂರಣoಗಳ ಓದಿ ಹೊಸ ಕಲ್ಪನೆ ಬಂದದು
    ಬೆಳಿಯ ಜಾಲ್ಲಿ ಎನ್ನದಾಟ
    ಕಳವ ಮುತ್ತ್ವ ಮೋಡ ನೋಡಿ
    ಸುಳಿವ ಮುಗಿಲ ಕಪ್ಪು ಹೊದಕೆ ಸೂರ್ಯ ದೂಡುದೊ?
    ಬಳುದ ಹಸಿರು ಬಣ್ಣಲಿಪ್ಪ
    ಇಳೆಯ ಬಸಿರ ಬೆಳೆಯ ಕಂಡು
    ತೊಳದ ವಸ್ತ್ರ ಹಿಂಡಿದಾಂಗೆ ನೀರು ಬಳಿಶುದೊ?

    1. ನವನವೀನ ಕಲ್ಪನೆ ರೈಸಿತ್ತು ಭಾಗ್ಯಕ್ಕ.

  6. ಎಲ್ಲಾ ಪೂರಣ೦ಗಳೂ ಒ೦ದರಿ೦ದ ಒ೦ದು ಲಾಯಿಕಿದ್ದು!!

  7. ಹೊಳೆಯ ಬಳೆಯ ಹಾಕಿ ಹಸುರಿ-
    ನೆಳೆಯ ಸೀರೆ ಸುತ್ತಿ ಧಾತ್ರಿ
    ಕಳೆಯ ಸೂಸಿ ಕೂದ ಚೆಂದ ಬಾನು ನೋಡಿದ
    ಸುಳಿವ ಮುಗಿಲ ಕರುಸಿ ಹೂವೆ-
    ಸಳಿನ ವೃಷ್ಟಿಗೈದ ಹಾಂಗೆ
    ಮಳೆಯ ಸುರಿಸಿ ಒಲವ ಭಿಕ್ಷೆ ತಾನು ಬೇಡಿದ

    1. ಆಹಾ..ಅದಿತಿಯಕ್ಕನ ಈ ಷಟ್ಪದಿ ಅದ್ಭುತ.
      ಮುದ್ದಣನ ”ರಾಮಾಶ್ವಮೇಧ”ಲ್ಲಿ ಒ೦ದು ಜಾಗೆಲಿ ಪ್ರಕೃತಿಯ ವರ್ಣನೆ ಹೀ೦ಗಿದ್ದು – ತಿರೆವೆಣ್ಗೆ ಮುಗಿಲ್ಸೊ೦ದಿಯೊಳ್ ಬಳ್ಳಿವರೆವ ನೇಹದಿ೦ ಬೆಳ್ಳ೦ಗೆಡೆವ ಸೊಗದಾಲಿ ನೀರೆನೆ ಪೆರ್ಚಿ ಪರಿದುದೀ ಪೊರ್ಪ೦” . ( ಭೂವನಿತೆಗೆ ಮುಗಿಲ ವಿಟನೊಟ್ಟಿ೦ಗೆ ಮು೦ದುವರಿದ ಸ್ನೇಹಲ್ಲಿ ಮೂಡಿಬ೦ದ ಸ೦ತೋಷದ ಕಣ್ಣೀರಿನ ಹಾ೦ಗೆ ಉಕ್ಕಿ ಹರುದತ್ತೀ ಹೊಳೆ).
      ಇದೇ ಧಾಟಿಲಿ ನಮ್ಮ ಭಾಷೆಲಿ ಒ೦ದು ಸಾಹಿತ್ಯ ಸೄಷ್ಟಿ ಆತು ಹೇಳಿ ಮನಸ್ಸು ತು೦ಬಿತ್ತು.ಅಭಿನ೦ದನೆಗೊ.

  8. ಹಳೆಯ ವಸ್ತ್ರ ಕರೆಲಿ ಕಳದು
    ಹೊಳವ ವೇಷ್ಟಿ ಸುತ್ತುವಾ೦ಗೆ
    ಯಳುದ ಮೇಲೆ ತಿರುಗಿ ಹುಟ್ಟು ಬಪ್ಪದಲ್ಲದೋ?
    ಸುಳಿವ ಮುಗಿಲ ಹನಿಯ ಧಾರೆ
    ಹೊಳೆಯ ಸೇರಿ ಹರುದು ಮತ್ತೆ
    ಇಳೆಯ ಬಿಟ್ಟು ಬಾನ ಸೇರಿ ತಿರುಗೊದಲ್ಲದೋ?
    ಇಲ್ಲಿ ಉಪಮೆ ಹೊಳೆ ಹಾರಿದ್ದಕ್ಕೆ ಕ್ಷಮೆ ಇರಳಿ.

  9. ಗೆಳತಿ ಜತೆಲಿ ಬಂತು ನೋಡಿ
    ಬಳೆಯ ತೊಟ್ಟ ಕೃಷ್ಣ ಚೆಲುವೆ
    ಬೆಳಿಯ ಹಲ್ಲ ಬಿಟ್ಟು ಮುಕ್ತ ನೆಗೆಯ ಮಾಡಿತು ।
    ಸುಳಿವ ಮುಗಿಲಿನೆಡೆಲಿ ಬಂದ
    ಹೊಳವ ಕೋಲು ಮಿಂಚಿನಾಂಗೆ
    ಬೆಳಗಿ ಕಾಂತಿ ತುಂಬಿಹೋತು ಸುತ್ತಮುತ್ತಲು ॥

    1. ಕೋಲ್ಮಿ೦ಚಿ೦ಗೂ ಹೊಳವ ಹಲ್ಲಿನ ಸಾಲಿ೦ಗೂ ಹೋಲಿಕೆ ! ಕಲ್ಪನೆ ಭಾರೀ ಲಾಯ್ಕ ಆಯಿದು ಇ೦ದಿರತ್ತೆ.

  10. ಸುಳಿವ ಮುಗಿಲು ಚಂದ ಮಾಮ
    ನಿಳೆಯನಿಣ್ಕಿ ನೋಡದಾಂಗೆ
    ಬೆಳೆದು ಬಾನ ಕವಿದು, ಕೊಡೆಯ ಹಿಡಿದುಕೊಂಡಿದು॥
    ಕುಳಿರುಗಾಳಿ ಮೆಲ್ಲ ಮೆಲ್ಲ
    ಸುಳಿದು, ಮುಗಿಲು ಕರಡಿ, ಬಾನ
    ತೆಳಿದು, ಚಾಮಿ ಮೋರೆ ಕಂಡು ಮಕ್ಕೊ ಕೊಣುದವು॥

    1. ಆಕಾಶರ೦ಗಲ್ಲಿ ನೆಡೆತ್ತ ನಾಟಕವ ಮಕ್ಕೊ ನೋಡಿ ಕೊಣಿವ ದೄಶ್ಯ ಕಣ್ಣಿ೦ಗೆ ಕಟ್ಟಿತ್ತು.
      ಭಾರೀ ಚೆ೦ದದ ಷಟ್ಪದಿ ಗೋಪಾಲಣ್ಣ.

  11. ಮಳೆ ಸುರಿವ ಮೊದಲು
    ======================
    ಸುಳಿವ ಮುಗಿಲು ಕಪ್ಪು ಬಳುದು
    ಬೆಳಕಿನಮಳೆಗಡ್ಡವಾಗ-
    ರಳಿಸಿ ಹಿಡುದ ದೊಡ್ಡ ಕೊಡೆಯ ಹಾಂಗೆ ನಿಂದಿದು
    ಕೆಳ ಧುಮುಕುಲೆ ನಿಂದ ಬಿಂದು-
    ಗೆಳೆಯ ಬಾಬೆ ಹಟ ಹಿಡಿವಗು-
    ರುಳುಲೆ ಕಾವ ಕಣ್ಣ ಹನಿಯ ಹಾಂಗೆ ಕಾಣ್ತದು

    1. ಎರಡು ಉಪಮೆಗಳೂ ರೈಸಿದ್ದು ಅದಿತಿಯಕ್ಕ.

  12. ಸುಳಿವ ಮುಗಿಲು ನೆಳಲ ರೀತಿ
    ಎಳೆಯ ಕಂದಗಮ್ಮನಾಂಗೆ
    ಇಳೆಗೆ ಕಾಂಬ ರವಿಯ ತರಲಿ ಕಾಲಕೆತ್ತುಗು
    ಹೊಳವ ಮಿಂಚ ತೀಕ್ಷ್ಣ ಕಾಂತಿ
    ಗಳಿಗೆಲೊಂದು ಸೆಡಿಲ ಭೀತಿ
    ಕಳಚಿ ಮೋಡ ಗಾಳಿ ತಾಗಿ ಮಳೆಯ ಸುರಿಸುಗು
    ಕಾಲ = ಸಮಯಕ್ಕೆ ಸರಿಯಾಗಿ
    ಈಗ ಹಿಂಗಾರು ಮಳೆಯ ಸಮಯ ಆದ ಕಾರಣ ಈ ಮುಗಿಲನೋಟವ ಹಿಂಗಾರು ಮಳಗೆ ಬಳಸಿಗೊಂಡದು . ಬೆಶಿಲ್ಲಿ ಬಳಲುವಗ ತಂಪು ಕೊಡುವ ನೆರಳಿನ ರೀತಿ ,ಹಿಳ್ಳೆ ಮಕ್ಕೊಗೊ ಅಮ್ಮನ ಅಗತ್ಯದಾಂಗೆ , ಕಸ್ತಲೆ ಕರಗುಸುವ ಸೂರ್ಯೋದಯದ ಹಾಂಗೆ , ಈಗಾಣ ಮುಗಿಲು ಭೂಮಿಗೆ ಮಳೆಯಾಗಿ ಸುರಿಯೆಕ್ಕಾದ ಅಗತ್ಯ ಇದ್ದು ಹೇಳಿ ಎನ್ನ ಕಲ್ಪನೆ

    1. ಮುಗಿಲು ಭೂಮಿಗೆ ಕೊಡುವ ನೆರಳು ಮಗುವಿ೦ಗೆ ಅಮ್ಮನ ಆಸರೆಯ ಹಾ೦ಗೆ.. ಭಾರೀ ಲಾಯ್ಕದ ಕಲ್ಪನೆ ಭಾಗ್ಯಕ್ಕ.

  13. ಚಂಡಮಾರುತ ಹಳತ್ತರ ತೆಗದು ಧರೆಯ ಹೊಸತನಕ್ಕೆ ಕಾರಣವಾವ್ತು.
    ಆ ದೃಷ್ಟಿಲಿ ಎನ್ನ ಪದ್ಯ.
    ತೊಳಿಲೆ ಬುವಿಯ ಸೀರೆ, ಬಾನು
    ಕಳಿಸಿ ಕೊಟ್ಟ ‘ವೀಲ್’ನ ಹಾಂಗೆ
    ಸುಳಿವ ಮುಗಿಲು ತಿರುಗಿ ಬಂತು ಭಾರಿ ಜೋರಿಲಿ
    ಹಳೆಯ ಕಲೆಗ ಮಾಸಿ ಹೋಗಿ
    ಹೊಳವ ತನ್ನ ವಸ್ತ್ರ ನೋಡಿ
    ಪುಳಕಿತ ಧರೆ ನಿಂದ ಚೆಂದ ಸಿಕ್ಕ ಮಾತಿಲಿ
    (ಪಂಜಸೀಮೆ) ತೊಳಿಲೆ = ತೊಳವಲೆ
    ಕಾಲಿಲಿ ತೊಳಿಯುದ ಹೇಳಿ ಕೇಳೆಡಿ 🙂

    1. ಏತಡ್ಕ ಮಾವ ಅಳಗೆ ತೊಳದವು,ಅದಿತಿಯಕ್ಕ ವೀಲ್ ಪೌಡರಿಲಿ ಸೀರೆಯ ಕಲೆ ತೆಗದವು..ಎ೦ಥಾ ಕಲ್ಪನೆಗೊ..ಅಬ್ಬ.

  14. ಸುಳಿವ ಮುಗಿಲು ಸುತ್ತು ಮುತ್ತು
    ಮಳೆಯು ಬಂತು ತುಂಬ ಹೊತ್ತು
    ಕೊಳದ ತೂಂಬು ಬಿಟ್ಟ ಹಾಂಗೆ ಬೆಳ್ಲ ಬಂತದಾ
    ಬಿಳುಪು ಹೊಡಿಯ ಹಾಕಿ ತೊಳದ
    ಅಳಗೆ ತುಂಬ ಹೊಳವ ಹಾಂಗೆ
    ಇಳೆಯ ಕಸವು ತೊಳದು ಹೋಗಿ ಶುಭ್ರವಾತದಾ

    1. ಮಳೆ ಸೊಯ್ಪೊದಕ್ಕೊ೦ದು ಉಪಮೆ,ಅದರ ಪರಿಣಾಮಕ್ಕೊ೦ದು ಬೋನಸ್.
      ರೈಸಿತ್ತು ಮಾವ.

  15. ಎಳದು ತಿರುಗೆ ಗಾಳಿ ಬುಗರಿ
    ತೆಳಿಲಿ ಕೊದಿವ ಬಾನಿನಶನ
    ಸೆಳೆವ ಮುಗಿಲು ತಾಡ್ಲೆ ಬಂತು ಹೋರಿ ಹಾಂಗೆಯೆ
    ಬಳುದು ವೇಷ ಹಾರಿ ಬಂದು
    ಸುಳುದು ಕೊಣಿವ ಯಕ್ಷ ರಂಗ
    ತಳುದ ಹನಿಯ ಹಾಂಗೆ ಹೋದ್ದದಾವ ಸೂಚನೆ ??

    1. ಆಕಾಶಲ್ಲಿ ನೆಡವ ರೂಪಕವೋ? ಒಳ್ಳೆ ಕಲ್ಪನೆ ಶೈಲಜಕ್ಕ.

  16. ಸೆಳೆದು ಹೊತ್ತು ಹೋಪ ಹಾಂಗೆ
    ಹೊಳೆವ ವಿಷ್ಣು ಚಕ್ರ ತರಲಿ
    ಸುಳುದು ಸುತ್ತಿ ಬೀಸಿ ಬಂತು ಗಾಳಿ ರಭಸಲಿ
    ಇಳೆಯ ಮೇಲೆ ಸೊರುಗಿತಯ್ಯ
    ಸುಳಿವ ಮುಗಿಲು ಭಾರಿ ಮಳೆಯ
    ಕೊಳೆಯೊ ಬೆಳೆಯೊ ಪೂರ ಹೋತು ಹಳ್ಳ ಬೆಳ್ಳಲಿ

    1. ಮಳೆಗಾಳಿಯ ಹೋಲಿಕೆ ವಿಷ್ಣುಚಕ್ರಕ್ಕೆ.. ಭಾರೀ ಲಾಯ್ಕ ಆಯಿದು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×