ಸಮಸ್ಯೆ 13 :” ಕೋಲು ತೆಕ್ಕೊಂಡಬ್ಬೆ ಬಪ್ಪಗಳೆ ಹುಳಿಮೋರೆ ಮಾಡ್ಯೊಂಡು ಓಡೋಡಿದ° ||”

January 5, 2013 ರ 7:00 amಗೆ ನಮ್ಮ ಬರದ್ದು, ಇದುವರೆಗೆ 20 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಈ ವಾರದ ಸಮಸ್ಯೆ:

“ಕೋಲು ತೆಕ್ಕೊಂಡಬ್ಬೆ ಬಪ್ಪಗಳೆ ಹುಳಿಮೋರೆ ಮಾಡ್ಯೊಂಡು ಓಡೋಡಿದ° ||”

ವಾರ್ಧಕ ಷಟ್ಪದಿ

ಸೂ:

ಈ ಸಮಸ್ಯೆ ವಾರ್ಧಕ ಷಟ್ಪದಿಲಿ ಇದ್ದು.
ಐದೈದು ಮಾತ್ರೆಯ ನಾಕು ಗುಂಪು – ಮೊದಲೆರಡು ಗೆರೆಲಿ.
ಐದು ಮಾತ್ರೆಯ ಆರು ಗುಂಪು, ಕೊನೆಗೊಂದು ಗುರು – ಮೂರ್ನೇ ಗೆರೆಲಿ.ಹೆಚ್ಚಿನ ಮಾಹಿತಿಗೆ:
http://oppanna.com/oppa/shara-kusuma-bhoga-bhamini-shatpadi
http://padyapaana.com

ಇದುವರೆಗೆ ಪ್ರಕಟ ಆದ ಸಮಸ್ಯಾಪೂರಣಂಗೊ:

 1. ಭಾಮಿನೀ: “ಗುರುಗೊ ಚಾತುರ್ಮಾಸ್ಯ ದೀಕ್ಷೆಯ ಪೀಠವೇರಿದವು”
 2. ಭೋಗ: “ನಾಕು ಲಾಡು ಬಳುಸಿ ಎನ್ನ ಮೋರೆ ನೋಡಿದಾ”
 3. ಕುಸುಮ: “ಹೂಗಿನೊಳ ಕುಸುಮವೇ ಇಪ್ಪ ಹಾಂಗೆ”
 4. ಶರ: “ಆಟಿಯ ತಿಂಗಳ ಮಳೆಗಾಲ”
 5. ಪರಿವರ್ಧಿನೀ: “ಸಣ್ಣಾದಿಪ್ಪಗ ಮಾಡಿದ ಕೀಟಲೆ ನೆಂಪುಗೊ ಹಸಿಯಿಕ್ಕು”
 6. ವಾರ್ಧಕ: “ಉರಿಬೆಶಿಲು ಬಂತಲ್ಲ ಸುಗ್ಗಿಮಳೆಗಾಲಲ್ಲಿ ಹೇಂಗಪ್ಪ ಬೆಳೆ ಬೆಳೆಶುದು”
 7. ಶರ: “ಕೆಸವಿನ ಪತ್ರೊಡೆ ರುಚಿಯಕ್ಕು”
 8. ಕುಸುಮ: “ನೆರೆಕರೆಯ ಹರಸಿದವು ನಮ್ಮ ಗುರುಗೊ”
 9. ಭೋಗ: “ಯೋಗವೊಲುದು ಬಪ್ಪ ಹಾ೦ಗೆ ಬದುಕು ನೆಡೆಶುವೊ”
 10.  ಭೋಗ: “ಹಾರಿತುತ್ತರಕ್ಕೆ ನೆಲವ ಬಿಟ್ಟು ಬೇಗನೆ”
 11. ಭಾಮಿನಿ : “ಹಸಿಯ ತರಕಾರಿಗಳ ತಿ೦ದರೆ ತು೦ಬಿದಾರೋಗ್ಯ”
 12. ಪರಿವರ್ಧಿನಿ: ” ನೆತ್ತರು ಹಾರಿಸಿ ಸುತ್ತಲಿ ನೆರದವು ಶಾ೦ತಿಯ ಸಾರಿದವು”
ಶುದ್ದಿಶಬ್ದಂಗೊ (tags): , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 20 ಒಪ್ಪಂಗೊ

 1. ಕುಂಟಿಕಾನ ಭಾವ
  ಕುಂಟಿಕಾನ ಭಾವ

  ಇದ ಭಾವ, ಎನ್ನದೊ೦ದು ಸಣ್ಣ ಪ್ರಯತ್ನ..

  ಆಲದೆಲೆಮೇಲೊರಗಿ ಕಾಲ ಚೀಪುವ ಬಾಲ
  ನೀಲಾ೦ಬುದಶ್ಯಾಮ, ಭವವ ದಾ೦ಟುಸುವ ಹರಿ-
  ಗೋಲಿನ೦ಬಿಗ° ಸಕಲ ಜೀವಕುಲಪರಿಪಾಲ ಹಾಲಿಲಿಯೆ ಮನುಗಿಪ್ಪವ° |
  ಹಾಲಾಹಲದ ಕಾಳಹಾವಿನ ಹೆಡೆಲಿ ಕೊಣುದ
  ಲೀಲಾಮಯಿಯು ಬೆಣ್ಣೆ ಹಾಲ ಕದ್ದಿದ° ಹೇಳಿ
  ಕೋಲು ತೆಕ್ಕೊಂಡಬ್ಬೆ ಬಪ್ಪಗಳೆ ಹುಳಿಮೋರೆ ಮಾಡ್ಯೊಂಡು ಓಡೋಡಿದ° ||

  [Reply]

  ಮುಳಿಯ ಭಾವ

  raghumuliya Reply:

  ಏ ಭಾವಾ…ಎಲ್ಲಿ ಹುಗ್ಗಿ ಕೂದ್ದದು ಇಷ್ಟು ದಿನ?ಭಾರೀ..ಭಾರೀ..ಲಾಯ್ಕ ಆಯಿದು.ವರ್ಣನೆ ಅಮೋಘ.ಇನ್ನೂ ಬರಳಿ ನೋಡುವ°.

  [Reply]

  VA:F [1.9.22_1171]
  Rating: +3 (from 3 votes)
  ಮಂಗ್ಳೂರ ಮಾಣಿ

  ಮಂಗ್ಳೂರ ಮಾಣಿ Reply:

  ಯಬ…!! ಸೂಪರ್ :)

  [Reply]

  VA:F [1.9.22_1171]
  Rating: 0 (from 0 votes)
  ಡೈಮಂಡು ಭಾವ

  ಡೈಮಂಡುಭಾವ Reply:

  ಕುಂಟಿಕಾನ ಭಾವಂಗೆ ಸ್ವಾಗತ… ಚೊಕ್ಕ ಆಯಿದು… ಕೊಶಿ ಆತು

  [Reply]

  VA:F [1.9.22_1171]
  Rating: 0 (from 0 votes)
 2. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ ಮಾವ°

  ಕುಂಟಿಕಾನ ಭಾವಂಗೆ ಸ್ವಾಗತ.ಬಾಲಕೃಷ್ಣನ ಬಾಲಲೀಲೆಯ ವರ್ಣುಸುವ ತುಂಬ ಚೆಂದದ ಪದ್ಯದೊಟ್ಟಿಂಗೆ ಬೈಲಿಂಗೆ ಇಳುದ್ದದು ಸಂತೋಷ.

  [Reply]

  VN:F [1.9.22_1171]
  Rating: 0 (from 0 votes)
 3. ಗಣೇಶ ಪೆರ್ವ
  ಗಣೇಶ ಪೆರ್ವ

  ಕು೦ಟಿಕಾನ ಭಾವನ ಪದ್ಯ ಅಮೋಘ ಆಯಿದನ್ನೆ!!! ಸೂಪರ್ ಆಯಿದು..

  ಆನು ಸಣ್ಣಾಗಿಪ್ಪಗ ಒಬ್ಬ ಸಣ್ಣಮಾಣಿ ತು೦ಬ ಲೂಟಿ ಮಾಡಿ೦ಡು ಮಾರ್ಗಕ್ಕೆ ಇಳುದು ಹೋಪದರ ತಡವಲೆ ಅವನ ಅಮ್ಮ ಅವನ ಮೇಜಿನ ಕಾಲಿ೦ಗೆ ಕಟ್ಟಿ ಹಾಕಿದ್ದು ಕ೦ಡ ನೆ೦ಪಾತು..

  ಕಾಲುಗಳ ಬಳ್ಳಿಯಲಿ ಕಟ್ಟಿ ಹಾಕಿದರು ಬಾ-
  ಗಿಲಿನೆಡಕ್ಕಿಲಿ ಮೋರೆ ತೋರಿ ಬೇಡುವನಮ್ಮ
  ಬಾಲ! ಪಾಪನೆ ಕ೦ಡು ಬಿಡುಸಿ ಬಿಟ್ಟರೆ ನೋಡು ಲೂಟಿ ಮಾಡುವ ಪೋರನಾ
  ಹಾಲು ಮೊಸರನೆ ಮೆದ್ದು ಹೊಟ್ಟೆ ತು೦ಬಿದ ಮೇಲೆ
  ಎಲುಬಿನೆಡಕಿಲಿ ನಿನಗೆ ಕುತ್ತುತ್ತೊ ಕೇಳ್ಯೊ೦ಡು
  ಕೋಲು ತೆಕ್ಕೊಂಡಬ್ಬೆ ಬಪ್ಪಗಳೆ ಹುಳಿಮೋರೆ ಮಾಡ್ಯೊಂಡು ಓಡೋಡಿದ°

  ಎ೦ತಾರು ಹೆಚ್ಚುಕಮ್ಮಿ ಆಗಿದ್ದರೆ ತಿಳುಸಿಕ್ಕಿ ಆತೋ..

  [Reply]

  ಮುಳಿಯ ಭಾವ

  ರಘು ಮುಳಿಯ Reply:

  ಪೆರ್ವದಣ್ಣ,
  ಲಾಯ್ಕ ಆಯಿದು ಪ್ರಯತ್ನ.
  ಎರಡನೆ ಮತ್ತೆ ಐದನೆ ಸಾಲುಗಳ ಸುರುವಾಣ ಅಕ್ಷರ ದೀರ್ಘ ಆದರೆ ಪ್ರಾಸಬದ್ಧ ಆವುತ್ತು.

  [Reply]

  VA:F [1.9.22_1171]
  Rating: 0 (from 0 votes)
 4. ಚೆನ್ನೈ ಬಾವ°
  ಚೆನ್ನೈ ಭಾವ°

  ಜಾಲಕೊಡಿ ಹೊಡಿಮಣ್ಣ ನೋಡಿದಾ ಮಾಣಿಯದ
  ಬಾಲತನದಿ ಹೆರಬಂದು ಬಡಿಗೆಯನೆ ತೆಕ್ಕೊಂಡು
  ಗಲಗಲನೆ ನೆಗೆಮಾಡಿ ಗರ್ಪಿದನದರಲ್ಲಿ ಭಾರಿಕೊಶಿ ಆತದವಂಗೇ ।

  ಕಲಸಿರೇ ಲಾಯಕ್ಕು ಹೇಳುತಲಿ ಸೇರುಸಿದ
  ಜಲವನ್ನೆ ಕಾಲುಕೈ ಕೂಡಿಯೇ ಕೊಣುದನದ
  ಕೋಲು ತೆಕ್ಕೊಂಡಬ್ಬೆ ಬಪ್ಪಗಳೆ ಹುಳಿಮೋರೆ ಮಾಡ್ಯೊಂಡು ಓಡೋಡಿದ° ॥

  [Reply]

  ಮುಳಿಯ ಭಾವ

  ರಘು ಮುಳಿಯ Reply:

  ಚೆನ್ನೈಭಾವ. ಶುರುವಾಣ ಅಕ್ಷರ ದೀರ್ಘ ಆದರೆ ಪ್ರಾಸ ರೈಸುಗು.ಎರಡ್ನೇ ಸಾಲಿಲಿ ಒ೦ದು ಮಾತ್ರೆ ಹೆಚ್ಚಿದ್ದು.
  ಉದಾಃ
  ಜಾಲಕೊಡಿ ಹೊಡಿಮಣ್ಣ ನೋಡಿದಾ ಮಾಣಿಯದ
  ಬಾಲಕಿಟ್ಟನ ಹಾ೦ಗೆ ಬಡಿಗೆಯನೆ ತೆಕ್ಕೊಂಡು
  ಸೇಲೆಲಿಯೆ ನೆಗೆಮಾಡಿ ಗರ್ಪಿಯಪ್ಪಗ ಭಾರಿ ಕೊಶಿಯಾಗಿ ಲೂಟಿ ಹೆಚ್ಚೀ ।

  [Reply]

  ಚೆನ್ನೈ ಬಾವ°

  ಚೆನ್ನೈ ಭಾವ° Reply:

  ಧನ್ಯವಾದ ಭಾವಯ್ಯ. ನಿಜವಾಗಿ ಈ ಪದ್ಯ ರಚನೆ ನವಗರಡಿಯದ್ದ ಕೆಲಸ. ಅಂದರೂ ನಮ್ಮ ಬೈಲು ಅಲ್ದೋಳಿ ಒಂದು ಟ್ರೈ ಮಾಡಿದ್ದು ತಪ್ಪಿದ್ದರ ತಿದ್ದಿ ಹೇಳ್ಳೆ ನಿಂಗೆಲ್ಲ ಸಹಕಾರ ಇದ್ದಿ ಹೇಳ್ವ ಪ್ರೀತಿ ಧೈರ್ಯಲ್ಲಿ. ರಜಾರಜಾ ತಪ್ಪಿದ್ದರೂ ಅಡ್ಡಿ ಇಲ್ಲೆ. ಪ್ರಯತ್ನುಸುಲೆ ನಾಚಿಗೆ ಮಾಡಿರೆ ಹೇಂಗಲ್ಲದೊ.

  ಎಂಗಳ ಒಬ್ಬ° ಮಾಷ್ಟ್ರ° ಇದ್ದವು. ನಿಂಗೊ ಎಂತದೇ ಹೇಳಿ.., ತಪ್ಪೇ ಆಗಲಿ,.. ಅವರ ಪ್ರಥಮ ಪ್ರತಿಕ್ರಿಯೆ – “ಉತ್ತಮಂ”. ಅದರ ಮತ್ತೆ ಎಲ್ಲಿ ಎಲ್ಲಿ ತಪ್ಪಾಯ್ದು , ಹೇಂಗೆ ಮಾಡಿರೆ ಸರಿ ಆವ್ತು ಹೇಳಿ ತಿದ್ದಿಕೊಡ್ತವು. ಆ ಗುಣ ಎಲ್ಲೋರಲ್ಲಿ ಇದ್ದರೆ ಎಷ್ಟೊಂದು ಲಾಯಕ ಇಕ್ಕಲ್ಲದಾ.

  [Reply]

  VN:F [1.9.22_1171]
  Rating: 0 (from 0 votes)
 5. ಕುಂಟಿಕಾನ ಭಾವ
  ಕುಂಟಿಕಾನ ಭಾವ

  ಇನ್ನೊ೦ದು ಅರ್ಥಲ್ಲಿ ತೆಕ್ಕೊ೦ಡರೆ,

  ಕಾಲಿಲೊದ್ದರು ಕೊಶಿಲಿ ನಗುನಗುತ ಕ೦ದಗೆದೆ
  ಹಾಲುಣಿಸಿ ತಾ ಬೆಳೆಸಿ ಗುರುವಾಗಿ ಅಕ್ಷರದ
  ಮಾಲೆಯ೦ ಕಲುಶಿ ಶಾಲೆಗೆ ಕಳುಸಿ ಆ ಮಗನ ದೊಡ್ಡಜೆನ ಮಾಡಿತ್ತಡ |
  ಕೋಲಮಾಡುವರ ಸ೦ಕೋಲೆ ಸೇರಿದ ಮಗನೊ
  ಮೂಲೆಲೆಡಿಯದ್ದೆ ಬೇಜಾರ ಮಾಡ್ಯೊ೦ಡು ಊ-
  ರ್ಗೋಲು ತೆಕ್ಕೊಂಡಬ್ಬೆ ಬಪ್ಪಗಳೆ ಹುಳಿಮೋರೆ ಮಾಡ್ಯೊಂಡು ಓಡೋಡಿದ° ||

  [Reply]

  ಮುಳಿಯ ಭಾವ

  ರಘು ಮುಳಿಯ Reply:

  ಆ೦ಟಿ ನಿ೦ದಿದು ಸುತ್ತ ಎ೦ಟಾಳಿನೆತ್ತರಕೆ
  ದ೦ಟ ದಾರಿಲಿ ನಮ್ಮ ಭಾಶೆ ಸೆಸಿಗಳ ಸಾಲು
  ಕು೦ಟಿಕಾನ೦ದಲೇ ಪುರುಸೊತ್ತು ಮಾಡ್ಯೊ೦ಡು ಬಾ ಭಾವ ಮಾತಾಡುಲೇ|
  ಕು೦ಟು ನೆವ ಹೇಳ್ಯೊ೦ಡು ತಪ್ಪುಸೆಡ ಷಟ್ಪದಿಯ
  ನೆ೦ಟ ನೀ ಬೈಲಿ೦ಗೆ ಮೋರೆ ತೋರುಸು ದಿನವು
  ದ೦ಟು ಹಿಡಿಯೆಕ್ಕಕ್ಕು ಪ್ರೀತಿಲಿಯೆ ಬಾರುಸುವೆ ನೀನಿನ್ನು ಬಾರದ್ದರೇ||

  [Reply]

  VA:F [1.9.22_1171]
  Rating: +1 (from 1 vote)
  ಬೊಳುಂಬು ಮಾವ°

  ಗೋಪಾಲ ಬೊಳುಂಬು Reply:

  ಕುಂಟಿಕಾನ ಭಾವನ ಎರಡು ಪದ್ಯಂಗಳುದೆ ರೈಸಿತ್ತು. ಒಂದರಲ್ಲಿ ಕಿಟ್ಟ ಚಾಮಿಯ ತುಂಟತನ ಕಂಡರೆ, ಇನ್ನೊಂದರಲ್ಲಿ ದಾರಿ ತಪ್ಪಿದ ಮಗನ ಕಂಡತ್ತು. ಸೊಗಸಾಗಿ ಬಯಿಂದು. ಬೈಲಿಲ್ಲಿ ಬಂದ ಹಳತ್ತು ಪದ್ಯ ಪೂರಣಂಗಳನ್ನು ಪೂರ್ತಿ ಮಾಡು ಭಾವಯ್ಯ, ಹೊಸ ನಮುನೆಯ ಪದ್ಯಂಗೊ ಬರಳಿ.

  [Reply]

  VA:F [1.9.22_1171]
  Rating: 0 (from 0 votes)
 6. ಜಯಶ್ರೀ ನೀರಮೂಲೆ
  jayashree.neeramoole

  ಹಾಲು ಕುಡಿಯದ್ರೆ ಶಕ್ತಿಯು ಬಾರ,ತೋರಾಗೆ
  ನಾಲಕು ವರುಷದ ಮಗನಾ ಜೋರು ಮಾಡ್ಯೊಂಡು
  ಹೋಲುಸೀತಬ್ಬೆ ತೋರದೆರಡು ವರುಷದ ಮಗಳಾ ಬಾಚಿ ತಬ್ಬಿಗೊಂಡು |
  ‘ಚೋಲಿ ಹೋಪಾಂಗೆ ಪೆಟ್ಟುದೆ ಕೊಡುವೆ ನಿನಗಿನ್ನು
  ಹೇಳಿದರು ಕೇಳದ್ದೆ ಗೆಂಟು ಮಾಡುವ ಮಾಣಿ’
  ಕೋಲು ತೆಕ್ಕೊಂಡಬ್ಬೆ ಬಪ್ಪಗಳೆ ಹುಳಿಮೋರೆ ಮಾಡ್ಯೊಂಡು ಓಡೋಡಿದ° ||

  [Reply]

  VA:F [1.9.22_1171]
  Rating: +1 (from 1 vote)
 7. ಮುಳಿಯ ಭಾವ
  ರಘು ಮುಳಿಯ

  ಅಕ್ಕಾ, ಮಾತ್ರೆ ಸರಿ ಇದ್ದು ಆದರೆ ಮೂರನೇ ಸಾಲಿಲಿ ಸುಮಾರು ಲಘು ಒಟ್ಟಿ೦ಗೆ ಬ೦ದು ರಜಾ ಡ೦ಕುತ್ತು.

  “ಹೋಲುಸಿತ್ತಬ್ಬೆ ತ೦ಗೆಯ ನೋಡಿ ಕಲಿ ಮಾಣಿ ಹೇಳೆಕ್ಕದೆಷ್ಟು ಸರ್ತಿ?”
  ಹೇಳಿ ಮಾಡ್ಲಕ್ಕು.

  [Reply]

  VA:F [1.9.22_1171]
  Rating: 0 (from 0 votes)
 8. ಮುಳಿಯ ಭಾವ
  ರಘು ಮುಳಿಯ

  ಜಾಲ ಕೊಡಿಲಿಪ್ಪ ಮಾವಿನ ಮರದ ಗೆಲ್ಲಿ೦ಗೆ
  ನೇಲಿ ಮೆಡಿಗಳ ಕೊಯ್ದು ಕಚ್ಚೊಗಳೆ ಕೇಟತ್ತು
  ಮೇಲೆ ಕ೦ಡತ್ತೀಗ ಮಾಣಿಯೋದುವ ಮಟ್ಟು ಮೇಲೆಬಿದ್ದರೆ ಪುಣ್ಯವೇ|
  ಬೀಲ ಬಿಚ್ಚಿರೆ ಹಾಕುವೆರಡು ಪೊಳಿ ಬೆನ್ನಿ೦ದ
  ಚೋಲಿ ಜಾರುವ ಹಾ೦ಗೆ ಬೀಸುತ್ತೆ ಹೇಳ್ಯೊ೦ಡು
  ಕೋಲು ತೆಕ್ಕೊಂಡಬ್ಬೆ ಬಪ್ಪಗಳೆ ಹುಳಿಮೋರೆ ಮಾಡ್ಯೊಂಡು ಓಡೋಡಿದ° ||

  [Reply]

  VA:F [1.9.22_1171]
  Rating: +2 (from 2 votes)
 9. ಮುಳಿಯ ಭಾವ
  ರಘು ಮುಳಿಯ

  ಹಾಲಿನೊಲೆಕಟ್ಟೆ೦ದಲಿಳುಗುವಗಳೇ ಬ೦ದು
  ನೇಲಿ ಸೆರಗಿನ ಕೊಡಿಯ ಹದಿ ಕೇಳಿದಾ ಮಗನ
  ಮೇಲೆ ಚಿಟ್ಟೆಯಕರೆಲಿ ನೆಗ್ಗಿ ಹೆರಟತ್ತಾಗ ಕೆಪ್ಪಟೆಗೆ ಮುದ್ದು ಕೊಟ್ಟು|
  ನೂಲು ಶೆಕ್ಕರೆಪಾಕಕದ್ದಿದ ಜಿಲೇಬಿ ಸ೦
  ಕೋಲೆ ಹಾಕಿಯೆ ಜಡುದೆಯುಗ್ರಾಣದೊಳವೆ ತಾ
  ಕೋಲು ತೆಕ್ಕೊಂಡಬ್ಬೆ ಬಪ್ಪಗಳೆ ಹುಳಿಮೋರೆ ಮಾಡ್ಯೊಂಡು ಓಡೋಡಿದ° ||

  ಒಯ್,ಜಿಲೇಬಿಗೆ ಮೊಸರು ತೋರುಸುತ್ತವು ಅಲ್ಲದೊ? ಹಾ೦ಗೆ ಇವ° ಮೋರೆ “ಹುಳಿ ಹುಳಿ” ಮಾಡಿದ್ದು !

  [Reply]

  VA:F [1.9.22_1171]
  Rating: +2 (from 2 votes)
 10. ಕೋಳ್ಯೂರು ಕಿರಣ

  ಸೇಲೆಮಾಡುವ ಸುಬ್ಬಿಯೊಟ್ಟಿಂಗೆ ತಿರುಗುವಾ
  ಬಾಲ ಇಲ್ಲದ್ದಿಪ್ಪ ಮಂಗನಾಂಗಿಪ್ಪವನ
  ಜಾಲಿಲಿಯೆ ಬಡುದಬ್ಬೆ ಬೈದಿತ್ತು ಸರಿಯಾಗಿ ನೆನಪಾತು ನಮ್ಮೂರ ಮಾಣಿಗೆ
  ಕಾಲವಿದು ಸರಿಯಲ್ಲ, ಹೊತ್ತು ಮೀರಿತ್ತಲ್ಲ
  ಲೀಲನಾ ಸುದ್ಧಿಯೂ ಸಿಕ್ಕಿದರೆ ಗತಿ ಎಂತ?
  ಕೋಲು ತೆಕ್ಕೊಂಡಬ್ಬೆ ಬಪ್ಪಗಳೆ ಹುಳಿಮೋರೆ ಮಾಡ್ಯೊಂಡು ಓಡೋಡಿದ.

  (ತಪ್ಪಿದ್ದರೆ ಹೇಳಿ)

  [Reply]

  ಚೆನ್ನೈ ಬಾವ°

  ಚೆನ್ನೈ ಭಾವ° Reply:

  ತಪ್ಪಿದ್ದು- ‘ನಿಂಗೊ ಬೈಲಿಂಗೆ ಅಪರೂಪ ಆದ್ದು’.

  [Reply]

  VA:F [1.9.22_1171]
  Rating: 0 (from 0 votes)
  ಮುಳಿಯ ಭಾವ

  ರಘು ಮುಳಿಯ Reply:

  ರೈಸಿದ್ದು ಭಾವ.
  “ಜಾಲಿಲಿಯೆ ಬಡುದಬ್ಬೆ ಬೈದಿತ್ತು ಸರಿಯಾಗಿ ನೆನಪಾತು ನಮ್ಮೂರ ಮಾಣಿಗೆ” – ಈ ಸಾಲಿಲಿ ಮಾತ್ರೆಗೊ ಹೆಚ್ಚಿದ್ದು.
  “ಜಾಲಿಲಿಯೆ ಬಡುದಬ್ಬೆ ಬೈದಿತ್ತು ಸರಿಯಾಗಿ ನೆನಪಾತದಾ ಮಾಣಿಗೆ ” ಹೇಳಿ ಮಾಡ್ಲಕ್ಕು.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಪವನಜಮಾವನೀರ್ಕಜೆ ಮಹೇಶಕಳಾಯಿ ಗೀತತ್ತೆತೆಕ್ಕುಂಜ ಕುಮಾರ ಮಾವ°ಅನುಶ್ರೀ ಬಂಡಾಡಿನೆಗೆಗಾರ°ವಸಂತರಾಜ್ ಹಳೆಮನೆಅಜ್ಜಕಾನ ಭಾವಬೊಳುಂಬು ಮಾವ°ವಿದ್ವಾನಣ್ಣಪ್ರಕಾಶಪ್ಪಚ್ಚಿಒಪ್ಪಕ್ಕದೊಡ್ಮನೆ ಭಾವಡೈಮಂಡು ಭಾವಶೀಲಾಲಕ್ಷ್ಮೀ ಕಾಸರಗೋಡುದೊಡ್ಡಮಾವ°ದೇವಸ್ಯ ಮಾಣಿಚೆನ್ನಬೆಟ್ಟಣ್ಣಮುಳಿಯ ಭಾವವಾಣಿ ಚಿಕ್ಕಮ್ಮvreddhiಶುದ್ದಿಕ್ಕಾರ°ಹಳೆಮನೆ ಅಣ್ಣಅನಿತಾ ನರೇಶ್, ಮಂಚಿಪೆರ್ಲದಣ್ಣಗಣೇಶ ಮಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?
ಹಸ್ತೋದಕ ಕೊಟ್ಟಪ್ಪದ್ದೆ ಸಾರಿನ ಕವಂಗ ನೆಗ್ಗಿ ಆತು
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ