ತ೦ಗಾಳಿಯಲ್ಲಿ ನಾನು ತೇಲಿ ಬ೦ದೆ …… !!!

September 8, 2011 ರ 4:10 pmಗೆ ನಮ್ಮ ಬರದ್ದು, ಇದುವರೆಗೆ 12 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಸುಮಾರು ದಿನ೦ದ ಹೊಸ ಪುಟ  ಬರೆಯೆಕ್ಕು ಹೇಳಿ ಗ್ರಹಿಶಿಗೊಂಡಿತ್ತೆ.. ಆದರೆ ಬರದ್ದೇ ಇಲ್ಲೆ ….ಅದಕ್ಕೆ ಕಾರಣವೂ ಇದ್ದು..ರಜ್ಜ ಸಮಯದ ಕೊರತೆ(?) ಅಲ್ಲದ್ದೆ  ಅದರೊಟ್ಟಿಂಗೆ ರಜ್ಜ ಎನ್ನ ಉದಾಸೀನವೂ ಕಾರಣ..ವಿಷಯ ಬಿಟ್ಟು ಬೇರೆಂತದೋ ಹೇಳ್ತಾ ಇದ್ದೆ ಹೇಳಿ ಗ್ರಹಿಷೆಡಿ….ಮತ್ತೆ ವಿಷಯಕ್ಕೇ ಬತ್ತಾ ಇದ್ದೆ….ಮೇಲಾಣ ಪದ್ಯದ ಗೆರೆಯ ಎಲ್ಲರೂ ಕೇಳಿರುತ್ತವು…ಸುಮಾರು ಹಿ೦ದಾಣ ಕನ್ನಡ ಸಿನೆಮಾದ ಪದ್ಯ ಅದು…..ಸಾದಾರಣವಾಗಿ ಇರುಳು 12ರ ಮತ್ತೆ ವಾಹನದಲ್ಲಿ ಹೋಪಂತಹ ಎಲ್ಲರುದೇ ಒ೦ದು ಸರ್ತಿ ಆದರೂ ಈ ಪದ್ಯವ ಅವರವರ ಚಾಲನೆಯ ಅವದಿಲ್ಲಿ ಗುನುಗದೆ ಇರವು(ಮನಸ್ಸಿಲೇ)…ಎನಗ೦ತೂ ಪ್ರತೀ ಸರ್ತಿಯೂ ನೆನಪಾವುತ್ತು ಈ ಪದ್ಯ..ಅದು ಎನ್ನ ದೌರ್ಭಾಗ್ಯವೋ ಗೊಂತ್ತಿಲ್ಲೆ..ಪ್ರತಿ ಸರ್ತಿ ಎಲ್ಲಿಯಾದರು ಹೋಗಿ ವಾಪಸ್ ಬಪ್ಪಗ ತು೦ಬಾ ತಡವಾದರೆ ಈ ಪದ್ಯ ನೆನಪಾವುತ್ತಾ ಇತ್ತು…ಅಲ್ಲದ್ದೇ ಎಲ್ಲಿಯಾದರು ದೆವ್ವ-ಭೂತ ಕಾಂಬಲೆ ಸಿಕ್ಕುಗಾ…ಸಿಕ್ಕಿದರೆ ಅದು ಎಂತಮಾಡುಗು…ಹೇಳುವ ಯೋಚನೆಗ ತುಂಬಾ ಸರ್ತಿ ಎನ್ನ ಮನಸ್ಸಿನಲ್ಲಿ ಸುಳುದ್ದು ಇದ್ದು…ಸುಮಾರು ಕನ್ನಡ ಸಿನೆಮಾಂಗಳಲ್ಲಿ ದೆವ್ವ-ಭೂತಂಗ ದ್ವಿಚಕ್ರವಾಹನದ ಹಿ೦ದಾಣ ಸೀಟಿಲಿ ಕೂದು ಚಾಲಕನ ಕೊರಳು ಒತ್ತುವ ದೃಶ್ಯ ನೋಡಿದ ಮೇಲ೦ತೂ ಆನು ಎನ್ನ ವಾಹನದ ಹಿ೦ದಾಣ ಸೀಟಿನ ಮುಟ್ಟಿ-ಮುಟ್ಟಿ ನೋಡಿ ಆರೂ ಇಲ್ಲೆ ಹೇಳಿ ಖಚಿತ ಮಾಡಿಕೊಳ್ತಾ ಇತ್ತೆ..ಮೊನ್ನೆ ಕೂಡಾ ಹೀಂಗೇ ಆತು…  ಆರನ್ನೋ ಕರಕೊಂಡು ಬಪ್ಪಲೆ ಇರುಳು 12 ರ ಸುಮಾರಿಂಗೆ ವಿಟ್ಲ ಪೇಟೆಯ ಕಡೆ ಹೆರಟೆ..ಸುಮಾರು 5 ಮೈಲು ಪ್ರಯಾಣ ವಿಟ್ಲ ಪೇಟೆ ಎನ್ನ ಮನೆಂದ..ಅಲ್ಲದ್ದೆ ಮಾರ್ಗಲ್ಲಿ ಬೀದಿದೀಪದೇ ಇಲ್ಲೆ..ಹಾಂಗಿದ್ದ ಮೇಲೆ ದೆವ್ವ-ಭೂತಗಳ ಓಡಾಟ ಖ೦ಡಿತ ಇರುತ್ತು ಅಲ್ಲದಾ..ಮನೆ೦ದ ಹೆರಟ ಕೆಲವೇ ನಿಮಿಷಲ್ಲೇ ಮನಸ್ಸು ಆ ಪದ್ಯವ ಗುನುಗಲು ಸುರು ಮಾಡಿತ್ತು..ಗುನುಗುತ್ತಾ ಸುಮಾರು 2 ಮೈಲಿ ಹೋದಿಪ್ಪೆ…ಆರೋ ಶ್ವೇತ ವಸ್ತ್ರಧಾರಿ ಮಾರ್ಗದ ಕರೇಲಿ ಹೋಗಿಗೊಂಡಿಪ್ಪದು ಸುಮಾರು ದೂರ೦ದಲೇ ಕ೦ಡತ್ತು.. ಇನ್ನುದೇ ಹತ್ತರೆ ಬ೦ದಪ್ಪಗ ಆ ವ್ಯಕ್ತಿ ರಸ್ತೆಯ ಮಧ್ಯಲ್ಲಿ ಅತ್ಲಾಗಿ-ಎತ್ಲಾಗಿ ಹೋಗಿಗೊಂಡು,ಎನ್ನ ವಾಹನನಿಲ್ಲಿಸಲು ಸ೦ಜ್ಞೆ ಮಾಡಿದಾ೦ಗೆ ಕಂಡತ್ತು..ಅ೦ಗೈ ಬೆವರಲೆ ಪ್ರಾರ೦ಭ ಆತು…ಏನಾದರಾಗಲಿ ದ್ವಿಚಕ್ರ ವಾಹನ ನಿಲ್ಲಿಸುಲಾಗ ಹೇಳಿಗೊಂಡು  ಮತ್ತಷ್ಟು ವೇಗವಾಗಿ ಚಾಲನೆ ಮಾಡುವ ಪ್ರಯತ್ನ ಮಾಡಿದೆ..ಆ ವ್ಯಕ್ತಿಯ ಹತ್ತರ೦ದ ಎನ್ನ ದ್ವಿಚಕ್ರವಾಹನವ ಮು೦ದೆ ಕೊಂಡೋದಪ್ಪಗ ಆ ವ್ಯಕ್ತಿ ಎನ್ನ ವಾಹನವ ಹಿಡಿವಲೆ ಪ್ರಯತ್ನ ಮಾಡಿದ ಹಾಂಗೆ ಕ೦ಡತ್ತು..ಹೇಂಗೋ ತಪ್ಪಿಸಿಕೊ೦ಡು ಮು೦ದೆ ಹೋದಪ್ಪಗ ಎನಗೆ ಆ ವ್ಯಕ್ತಿಯ ಮುಖ ದೆವ್ವ-ಭೂತಂಗಳ ಮೋರೆಯ ಹಾಂಗೆ (?) ವಿಕಾರವಾಗಿ ಕ೦ಡತ್ತು..ಅದಲ್ಲದೆ ಅದೇ ಜಾಗಲ್ಲಿ ಸುಮಾರು 1 ತಿ೦ಗಳ ಹಿ೦ದೆ ಒಬ್ಬ ವ್ಯಕ್ತಿ ಅಪಘಾತಲ್ಲಿ ತಲೆಯೊಡದು ಸತ್ತಿತ್ತಿದ್ದ ಬೇರೆ… ರಜಾ ಮು೦ದೆ ಹೋಗಿ ಬೈಕಿಲಿ ಹಿ೦ದೆ ನೋಡುವ ಕನ್ನಡಿಲಿ ಹಿ೦ದೆ ನೋಡಿರೆ ಆ ವ್ಯಕ್ತಿ ನಾಪತ್ತೆ..ಇದು ಖ೦ಡಿತ ದೆವ್ವವೇ(?)ಹೇಳಿ ಅನಿಸಿತ್ತು..ಅಲ್ಲದ್ದೆ ಹಿ೦ತಿರುಗಿ ಹೋಗಿ ನೋಡುಲೆ ಧೈರ್ಯ ಸಾಕಾತಿಲ್ಲೆ…ಹಾಂಗೆ ಹೇಳಿ ಸುಮ್ಮನೆ ಹೆದರಿಗೊ೦ಡು ಮು೦ದೆ ಹೋಗಿ ನಾಳೆ ಆರತ್ರಾದರು ಈ ವಿಷಯ ಹೇಳಿಯಪ್ಪಗ ಅವು ಹೇಳುವ ವ್ಯ೦ಗ್ಯದ ಮಾತು ಕೇಳೆಕ್ಕಕ್ಕು ಹೇಳಿ ಭ೦ಡ ಧೈರ್ಯ ಮಾಡಿ ಹಿ೦ದೆ ತಿರುಗಿ ವಾಪಸ್ ಬಂದೆ(ಆ ಹೊತ್ತಿಂಗಪ್ಪಗ ಸುಮಾರು 2-3 ಪರ್ಲಾ೦ಗು ಮು೦ದೆ ಹೋಗಿತ್ತೆ)..ತಿರುಗಿ ಮತ್ತದೇ ಜಾಗಕ್ಕೆ ಬ೦ದರೆ ಅಲ್ಲಿ ಆರುದೇ ಇಲ್ಲೆ…ಸುತ್ತ – ಮುತ್ತ ಮಾರ್ಗಲ್ಲೆಲ್ಲಾ ಹುಡುಕಿದೆ… ಅಲ್ಲಿ ಆರುದೇ ಇತ್ತಿದವಿಲ್ಲೆ..ಏನಾದರಾಗಲಿ ಈ ವಿಷಯವ ಆರತ್ರವುದೇ ಹೇಳುಲಾಗ…ಎಂತಕೆ ಹೇಳಿರೆ ಮರ್ಯಾದೆಯ ಪ್ರಶ್ನೆ ಅಲ್ಲದಾ …ಹೇಳಿ ಗ್ರಹಿಷಿಗೊಂಡು ಮತ್ತೆ ಪೇಟೆಯ ಕಡೆಂಗೆ ವಾಹನ ತಿರುಗುಸುವ ಅಂದಾಜು ಮಾಡಿದೆ…ಅಷ್ಟಪ್ಪಗ ಕ೦ಡತ್ತು ನೋಡಿ ದೆವ್ವ… ಮಾರ್ಗದ ಕರೇಣ ಚರ೦ಡಿಲಿ..ಅದೂ ಸುಖ ನಿದ್ರಾವಸ್ತೆಲಿ…ಹೆದರೆದರಿಗೊ೦ಡೇ ಹತ್ತರೆ ಹೋಗಿ ನೋಡಿರೆ ಅದೇ ಮೋರೆ…ಜತೆಂಗೆ ಭಯ೦ಕರ ಗೊರಕೆ ಶಬ್ದ ಬೇರೆ…ಎನಗೋ ಹೋದ ಜೀವ ಬ೦ದಹಾ೦ಗಾತು…ಹಾಂಗಾರೆ ಆನು ಕ೦ಡದ್ದು ದೆವ್ವ ಅಲ್ಲ..ಅಬ್ಬಾ ಸದ್ಯ ಬದುಕಿದೆ ಹೇಳಿ ಗ್ರಹಿಷಿದೆ ..ಆರೋ ಕುಡುಕ ಕ೦ಟಪೂರ್ತಿ ಕುಡಿದು..ತೂರಡಿಗೊಂಡು ಮಾರ್ಗವ ಅಳವಲೆ ಸುರುಮಾಡಿತ್ತ..ಎನ್ನ ವಾಹನದ ಹೆಡ್ ಲೈಟುನ ಬೆಣ್ಚಿ ಅವನ ಕಣ್ಣಿಗೆ ಬಿದ್ದಪ್ಪಗ ಸಹಿಸುಲಾಗದ್ದೆ ಕೈಯಾಡ್ಸಿತ್ತ..ಅದನ್ನೇ ಆನು ದೆವ್ವ ವಾಹನ ನಿಲ್ಲಿಸುಲೆ ಮಾಡಿದ ಸ೦ಜ್ಞೆ ಹೇಳಿ ಗ್ರಹಿಷಿಗೊಂಡದು..ಆದಿನಾಣ ಘಟನೆ ನೆನೆಸಿಗೊಂಡರೆ ಈಗಲೂ ಮೈಲಿ ಬೆಗರು ಬಿಚ್ಚುತ್ತು.. ಒಟ್ಟಿಂಗೆ ನೆಗೆದೆ ಬತ್ತು..ಎಲ್ಲಿಯಾದರೂ ಅದು ನಿಜವಾದ ದೆವ್ವವೇ ಆಗಿದ್ದರೆ ( ಇದ್ದರೆ ) ಎನ್ನ ಗತಿ ಎಂತ ಆವುತ್ತಿತ್ತು?? ..ಆದರೆ ಇಲ್ಲಿವರೆಗೆ ಎನಗೆ ಒ೦ದೇ ಒ೦ದು ದೆವ್ವ ಕೂಡಾ ಸಿಗದ್ದೇ ಇಲ್ಲೆ..ಹಾ೦ಗೆ ಹೇಳಿ ಇಂದಿಂಗೂ ಇರುಳು ಎಲ್ಲಿಯಾದರೂ ಹೋಪಗ ಎನ್ನ ಆ ಪದ್ಯ ಗುನುಗುವ ಅಭ್ಯಾಸ ಮಾತ್ರ ನಿ೦ದಿದಿಲ್ಲೆ…

ತ೦ಗಾಳಿಯಲ್ಲಿ ನಾನು ತೇಲಿ ಬ೦ದೆ

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 12 ಒಪ್ಪಂಗೊ

 1. ಚೆನ್ನೈ ಬಾವ°
  ಚೆನ್ನೈ ಭಾವ

  ಸ್ವಾನುಭವ ನಿರೂಪಣೆ ಚಂದ ಆಯ್ದು. ಇದರೆಡೆಲಿ ಇದೇ ಚಿತ್ರಣ ಒಂದು ಟಿ.ವಿ.ಲಿ ಹಾಕಿತ್ತವು. ಸುರುವಿಂಗೆ ಓದಿಗೊಂಡು ಹೋಪಗ ಅದೇ ಕಥೆ ನಿಂಗೊಗೂ ಅನುಭವ ಆತೋ ಗ್ರೇಶಿದೆ. ನೆನೆಸಿಗೊಂಡರೆ ಈಗಲೂ ಮೈಲಿ ಬೆಗರು ಬಿಚ್ಚುವ ಹೀಂಗಿರ್ತ ಘಟನೆ ನಿಂಗೊ ಲಾಯಕ್ಕ ಒರಗಿಯೊಂಡಿಪ್ಪಗ ನಿಂಗಳ ಕನಸಿಲ್ಲ್ಯಾರು ಒಂದಿನ ಬಂದರೆ ಹೇಂಗಿಕ್ಕು !!

  [Reply]

  ಎರುಂಬು ಅಪ್ಪಚ್ಚಿ

  ಎರುಂಬು ಅಪ್ಪಚ್ಚಿ Reply:

  ಆ ಘಟನೆ ನಡೆದ ನಂತ್ರ ಸುಮಾರು ಸರ್ತಿ ಆ ಮಾರ್ಗಲ್ಲಿ ಬೈಂದೆ … 2-3ಸರ್ತಿ ಆ ದೆವ್ವ ಕೈ ಆಡ್ಸಿದ್ದು …

  [Reply]

  VN:F [1.9.22_1171]
  Rating: 0 (from 0 votes)
 2. ಬೋದಾಳ
  ಬೋದಾಳ

  ಎಂಗಳ ಮನೆಲಿಯೂ ಹಾಂಗೇ…. ನೆಡೀರುಳು ಅಟ್ಟಂದ ಶಬ್ದ ಕೇಳ್ತು…. ಎನಗೆ ತುಂಬಾ ಹೆದರಿಕೆ.

  [Reply]

  ಎರುಂಬು ಅಪ್ಪಚ್ಚಿ

  ಎರುಂಬು ಅಪ್ಪಚ್ಚಿ Reply:

  ಒಂದು ಪುಚ್ಚೆ ಸಾಂಕಿ … ಸರಿ ಅಕ್ಕು …

  [Reply]

  ಬೋದಾಳ

  ಬೋದಾಳ Reply:

  ಅಯ್ಯಯ್ಯೋ……. ಪುಚ್ಚೆಯಾ……..?

  [Reply]

  VA:F [1.9.22_1171]
  Rating: 0 (from 0 votes)
 3. ಗಣೇಶ ಪೆರ್ವ
  ಗಣೇಶ

  ಲಾಯ್ಕಾಯಿದು, ಒಪ್ಪ೦ಗೊ.

  [Reply]

  ಎರುಂಬು ಅಪ್ಪಚ್ಚಿ

  ಎರುಂಬು ಅಪ್ಪಚ್ಚಿ Reply:

  ಧನ್ಯವಾದ. … ಹೀಂಗಿಪ್ಪ ಅನುಭವ ನಿಂಗಗೇನಾರು ಆಗಿದ್ದರೆ ಹೇಳಿ ..

  [Reply]

  VN:F [1.9.22_1171]
  Rating: 0 (from 0 votes)
 4. ಓಣಿಯಡ್ಕ ಕಿಟ್ಟಣ್ಣ
  ಓಣಿಯಡ್ಕ ಕಿಟ್ಟಣ್ಣ

  ಎನಗೆ ನಡು ಇರುಳು ಬೆಂಗಳೂರಿನ ಹರಿಶ್ಚಂದ್ರ ಘಾಟಿನ ದಾಟಿ ಹೋಪಾಗ ಹೀಂಗೆ ಏನೆನೋ ಯೋಚನೆ ಬಯಿಂದು..

  [Reply]

  ಎರುಂಬು ಅಪ್ಪಚ್ಚಿ

  ಎರುಂಬು ಅಪ್ಪಚ್ಚಿ Reply:

  ಧನ್ಯವಾದ. … ಸಾಮಾನ್ಯವಾಗಿ 100 ರಲ್ಲಿ 90%ಜನಕ್ಕೆ ಇಂತ ಯೋಚನೆ ಬಕ್ಕು ಹೇಳಿ ಎನ್ನ ಅಂದಾಜು ..

  [Reply]

  VN:F [1.9.22_1171]
  Rating: +1 (from 1 vote)
 5. ಮುಳಿಯ ಭಾವ
  ರಘು ಮುಳಿಯ

  ಯಬ್ಬ, ಒ೦ದರಿ ಮೈ ನಡುಗಿತ್ತು..

  [Reply]

  VA:F [1.9.22_1171]
  Rating: 0 (from 0 votes)
 6. ಒಪ್ಪಣ್ಣ

  ಎರುಂಬು ಅಪ್ಪಚ್ಚೀ…
  ಶುದ್ದಿಯ ತಲೆಬರಹ ಓದುವಗಳೇ ಅಂದಾಜಿ ಮಾಡಿದೆ – ಎಂತದೋ ಹೀಂಗಿರ್ತ ಒಯಿವಾಟಿನ ಶುದ್ದಿ ಆಯಿಕ್ಕು ಹೇಳಿಗೊಂಡು.
  ವಿಚಿತ್ರ ಸನ್ನಿವೇಶ (?) ಎದುರುಸಿ, ದೆವ್ವವನ್ನೇ ಕಂಡು ಮಾತಾಡುಸಿದ ಶುದ್ದಿಯ ಓದುವಗ ಮೈ ಬೆಗರಿದ ಹಾಂಗಾತು!

  ಆಗಲಿ, ಅದು ಯೇವ ದೆವ್ವ ಹೇಳಿ ಗೊಂತಾತನ್ನೇ!? ಮೂರೂ ಹೊತ್ತುಕುಡುದು ಹೊತ್ತು ಹಾಳುಮಾಡ್ತವೇ ಪ್ರತ್ಯಕ್ಷ ದೆವ್ವಂಗೊ. ಅಲ್ಲದೋ?! 😉

  ಶುದ್ದಿ ಪಷ್ಟಾಯಿದು.

  [Reply]

  VA:F [1.9.22_1171]
  Rating: +1 (from 1 vote)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಪಟಿಕಲ್ಲಪ್ಪಚ್ಚಿಬೋಸ ಬಾವಒಪ್ಪಕ್ಕಅನು ಉಡುಪುಮೂಲೆಗಣೇಶ ಮಾವ°ಸುವರ್ಣಿನೀ ಕೊಣಲೆಗೋಪಾಲಣ್ಣಎರುಂಬು ಅಪ್ಪಚ್ಚಿಪವನಜಮಾವನೀರ್ಕಜೆ ಮಹೇಶಕಜೆವಸಂತ°ಶುದ್ದಿಕ್ಕಾರ°ಅಕ್ಷರದಣ್ಣಚೆನ್ನಬೆಟ್ಟಣ್ಣಪ್ರಕಾಶಪ್ಪಚ್ಚಿಶಾಂತತ್ತೆಅನಿತಾ ನರೇಶ್, ಮಂಚಿಕಾವಿನಮೂಲೆ ಮಾಣಿಪುಣಚ ಡಾಕ್ಟ್ರುಪೆಂಗಣ್ಣ°ವಿದ್ವಾನಣ್ಣಜಯಶ್ರೀ ನೀರಮೂಲೆಉಡುಪುಮೂಲೆ ಅಪ್ಪಚ್ಚಿಪುಟ್ಟಬಾವ°ಅಜ್ಜಕಾನ ಭಾವವಸಂತರಾಜ್ ಹಳೆಮನೆ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ