ಮಾತಿನೆಡಕ್ಕಿನ ಗಾದೆಗೊ

ಮಾತಾಡುವಾಗ ಎಡೆಡೆಲಿ ಗಾದೆ ಸೇರುಸುತ್ತದು ಅನುಬವಸ್ಥರ ಕ್ರಮ.

ಅಂದೇ ನಾವೊಂದರಿ ಮಾತಾಡಿದ ಹಾಂಗೆ, ಬದುಕ್ಕಿ ಬೆಳದ ಪರಿಸರದ ಕೆಲವು ಆದರ್ಶ ಸಂಗತಿಗಳ ತಾತ್ಪರ್ಯಂಗಳ ಒಂದೇ ಗೆರೆಯಷ್ಟು ಸಣ್ಣ ಮಾಡಿ – ಒಂದು ಪಳಮ್ಮೆ ಮಾಡುದು.
ಅನುಭವವ ಹೊಂದಿಗೊಂಡ ಆ ಪಳಮ್ಮೆಯ ಬೇಕಾದ ಸಂದರ್ಭಕ್ಕೆ ಬೇಕಾದ ಹಾಂಗೆ ಉಪಯೋಗುಸುದು ಅವರ ಮಾತಿಂಗೆ ತೂಕ ಕೊಡ್ತು.
’ಓಡಾರಿ ಕುಡು ಹಾಕಿದ ಹಾಂಗೆ’, ’ಹೊಳೆಲಿ ಹುಳಿ ತೊಳದ ಹಾಂಗೆ’, ಅದರ ಹಾಂಗೆ, ಇದರ ಹಾಂಗೆ ಹೇಳಿ ಎಡೆಡೆಲಿ ಸೇರುಸುವಗ ಎದುರಾಣವಂಗೆ ವಿಶಯವೂ ಮನನ ಆವುತ್ತು, ಭಾವನೆಯೂ ಶುದ್ದ ಆವುತ್ತು. ಕೆಲವೆಲ್ಲ ಕೇಳಿರೆ ಅಂತೂ ಎಂತವಂಗೂ ನೆಗೆ ತಡೆಯ, ಅಷ್ಟುದೇ ತಮಾಶೆ, ಹಗುರವಾಗಿ ಮನಮುಟ್ಟುವ ಹಾಂಗೆ ಇರ್ತು.

ಶಂಬಜ್ಜನ ಕಾಲಲ್ಲಿ ಈ ಗಾದೆಗೊಕ್ಕೆ ’ಪಳಮ್ಮೆ’ ಹೇಳಿಯೂ ಹೇಳುಗು.
ಗಾದೆಯ ಹಿಂದೆ ಆರೋ ಅನುಬವಸ್ಥನ ಅಂಬೋಣವೂ ಇರ್ತು.

ನಮ್ಮ ನೆರೆಕರೆಯ ಅಜ್ಜಂದ್ರಿಂಗೆ ಕೆಲವು ಜೆನಕ್ಕೆ ಈ ಅಭ್ಯಾಸ ಇದ್ದು.
ಅಜ್ಜಂದ್ರ ಒಟ್ಟಿಂಗೆ ತುಂಬ ಒಡನಾಡಿ ಗೊಂತಿಪ್ಪವಾದರೆ ಅವರ ಬಾಯಿಲೂ ಈ ಪಳಮ್ಮೆಗೊ ತಿರುಗುಲೆ ಸುರು ಆವುತ್ತು.
ಒಪ್ಪಣ್ಣನ ಚೆಂಙಾಯಿಗಳಲ್ಲಿ ಸುಮಾರು ಜೆನಕ್ಕೆ ಆ ಬುದ್ದಿ ಇದ್ದು. ಕೇಳಿ ಕೇಳಿ ಒಪ್ಪಣ್ಣಂಗೂ ರಜ ರಜ ಶುರು ಆಯಿದೋ ಹೇಳಿ ಒಂದು ಕನುಪ್ಯೂಸು ಬಪ್ಪದು ಒಂದೊಂದರಿ! 😉

ನಮ್ಮ ಅಜ್ಜಂದ್ರ ಪಳಮ್ಮೆ ಗಾದೆಗಳ ಪುಳ್ಯಕ್ಕೊಗೆ ಎತ್ತುಸೆಕ್ಕಾದ್ದು ನಮ್ಮ ಜೆವಾಬ್ದಾರಿ. ಅಲ್ದೋ?

ಹಾಂಗೆ ಮಾಡಿದ ಸಂಗ್ರಹಂಗಳ ಎಲ್ಲ ಒಂದೊಂದೇ ಆಗಿ ಇಲ್ಲಿ ಹಾಕುತ್ತ ಯೋಚನೆ ಇದ್ದು,  ಹೇಂಗಕ್ಕು?

ನಿಂಗಳ ಸಂಗ್ರಹಲ್ಲಿ ಯೇವದಾರು ಹವ್ಯಕ ಗಾದೆಗೊ ಇದ್ದರೆ ಇಲ್ಲಿ ಹಾಕಲಕ್ಕು. ಮುಂದಾಣೋರಿಂಗೆ ಆತು. ಅಲ್ದೋ?


Admin | ಗುರಿಕ್ಕಾರ°

   

You may also like...

2 Responses

  1. Gopalakrishna BHAT S.K. says:

    Very good. I will write something.

  2. Beppa says:

    Meese bandare desha kana, male bandare nela kana!

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *