Oppanna.com

ಶಿವಪೂಜೆಲಿ ಕರಡಿ ಬಿಟ್ಟ ಹಾಂಗೆ…

ಬರದೋರು :   ಮುಣ್ಚಿಕಾನ ಭಾವ    on   07/10/2012    10 ಒಪ್ಪಂಗೊ

“ಶಿವಪೂಜೆಲಿ ಕರಡಿ ಬಿಟ್ಟ ಹಾಂಗೆ” – ಇದು ನಮ್ಮ ಸಮಾಜಲ್ಲಿ ರೂಢಿಲಿ ಇಪ್ಪ ಒಂದು ಮಾತು. ಆದರೆ ಶಿವಪೂಜೆಗೂ ಕರಡಿಗೂ ಎಂತ ಸಂಬಂಧ ಹೇಳುವ ಪ್ರಶ್ನೆ ಸುಮಾರು ಸಮಯಂದ ಎನ್ನ ಮನಸ್ಸಿಲಿ ಕಾಡ್ತಾ ಇತ್ತು.
ಓ ಮೊನ್ನೆ ಒಂದು ಜೆಂಬ್ರಲ್ಲಿ ಒಬ್ಬರ ಹತ್ತರೆ ಮಾತನಾಡುವಾಗ ಈ ಮಾತಿನ ಸರಿಯಾದ ಉಗಮದ ಬಗ್ಗೆ ಎನಗೆ ಗೊಂತಾತು. ಅದರ ಸಣ್ಣ ವಿವರ ಕೆಳ ಕೊಟ್ಟಿದೆ.

“ಲಿಂಗಾಯತ” ಹೇಳುವ ಪಂಗಡದವು ಯಾವಾಗಲೂ ಅವರ ಸೊಂಟಲ್ಲಿ ಒಂದು ಕರಡಿಗೆ ಕಟ್ಟಿಕೊಂಡು ಇರ್ತವಡ. ಆ ಕರಡಿಗೆಲಿ ಒಂದು ಶಿವಲಿಂಗ ಇರ್ತಡ.
ಲಿಂಗಾಯತರು ಆ ಶಿವಲಿಂಗಕ್ಕೆ ಮಾತ್ರ ಪೂಜೆ ಮಾಡುಗಡ. ಹಾಂಗೆ ಅವು ಇನ್ನೊಂದು ಮನೆಗೆ ಪೂಜೆಗೆ ಹೋಪಗ ಅವರವರಲ್ಲಿ ಇಪ್ಪ ಶಿವಲಿಂಗದ ಕರಡಿಗೆಯನ್ನೂ ಕೊಂಡುಹೋಗದ್ದರೆ ಎಂತ ಪ್ರಯೋಜನ ಇಲ್ಲೆಡ.
ಇದರಿಂದಾಗಿ “ಶಿವಪೂಜೆಲಿ ಕರಡಿಗೆ ಬಿಟ್ಟು ಬಂದ ಹಾಂಗೆ” ಹೇಳುವ ಒಂದು ಮಾತು ಚಾಲ್ತಿಗೆ ಬಂತಡ.

ಇದೇ ಮಾತು ಮುಂದೆ ಕಾಲಾಂತರಲ್ಲಿ “ಶಿವಪೂಜೆಲಿ ಕರಡಿ ಬಿಟ್ಟ ಹಾಂಗೆ” ಹೇಳಿ ಬದಲಾಗಿ ಬೇರೆ ಅರ್ಥಲ್ಲಿ ಉಪಯೋಗಿಸುಲೆ ಶುರು ಮಾಡಿದವಡ.

ನಿಂಗಳ ಅನಿಸಿಕೆ ತಿಳಿಶಿ..

10 thoughts on “ಶಿವಪೂಜೆಲಿ ಕರಡಿ ಬಿಟ್ಟ ಹಾಂಗೆ…

  1. ಶಿವಪೂಜೆ ನಡೆಯಬೇಕಾದರೆ ಕರಡಿಯೇ ಬರಬೇಕು ಎಂತಿಲ್ಲ. ನಿಮ್ಮದು ಸರಿಯಾಗಿಯೇ ಇದೆ. ಅದು ನಿಜವಾದ ಅರ್ಥದಲ್ಲಿ ಕರಡಿಗೆ ಎಂಬ ಶಬ್ದವೇ ಸೂಕ್ತ. ಶಿವಪೂಜೆಗೆ ಕರಡಗಿ… ಇಲ್ಲವೇ ಕರಂಡಕ ಎಂದರೆ ಸಂಪುಟವೆಂದೇ ಅರ್ಥ. ಆದರೆ ಶಿವಲಿಂಗದ ಕರಡಿಗೆ ಅಲ್ಲ; ಇದು ವಿಭೂತಿಯ ಕರಂಡಕ( ಅದು ಕರಡಿಗೆ) ಶಿವಪೂಜೆಗೆ ಹೋಗಬೇಕಾದರೆ ಶಿವಾಲಯಕ್ಕೆ ಹೋಗಬೇಕು. ಆದರೆ ನೀವು ಹೇಳಿದ ಹಾಗೇ ಇಷ್ಟಲಿಂಗದ ಅರ್ಥವಲ್ಲ. ಶಿವಪೂಜೆಗೆಂದು ಶಿವಾಲಯಕ್ಕೆ ಹೋಗಬೇಕಾದರೆ ವಿಭೂತಿ ಪ್ರಿಯನಾದ ಶಿವನಿಗೆ ಹಚ್ಚಲು(ಧಾರಣ ಮಾಡಲು) ತರಬೇಕಿದ್ದ ಕರಂಡಕವನ್ನೇ ಬಿಟ್ಟು ಹೋದರೆ… ಎಂಬರ್ಥದಲ್ಲಿ ಬಳಸಲಾಗಿದೆ.
    ಹೀಗಾಗಿ ಶಿವಪೂಜೆಗೆ ಕರಡಿಗೆ ಬಿಟ್ಟು ಹೋದರಂತೆ….. ವರನನ್ನೇ ಬಿಟ್ಟು ಮದುವೆಗೆ ಹೋದರಂತೆ….
    ಉಪ್ಪೇ ಇಲ್ಲದೇ ಅಡುಗೆ ಮಾಡಿದರಂತೆ ಎಂಬರ್ಥದಲ್ಲಿ ಈ ಗಾದೆ ಮಾತನ್ನು ಬಳಸಲಾಗುತ್ತದೆ.
    ರೂಢಿಯಲ್ಲಿ ಬದಲಾದದ್ದು ಅಜ್ಞಾನದಿಂದ. ಸೂಕ್ತ ತಿಳಿವಳಿಕೆ ಇಲ್ಲದ್ದು, ಶಿವಪೂಜೆಯಲ್ಲಿ ಕರಡಿ ಬದಲಾಗಿ ಹುಲಿ ಬಂದರೆ ಪೂಜೆ ಕೆಡುವದಿಲ್ಲವೇ… ಒಂದು ಕೆಲಸವನ್ನು ಕೆಡಿಸುವ ಅರ್ಥದಲ್ಲಿ ಈಗ ಬಳಸಲಾಗುತ್ತಿರುವದೂ ತಪ್ಪೇ ಆಗಿದೆ.

  2. ಓ..ಹೋ … ಹಾಂಗೂ ಅಗಿರ್ಲಕ್ಕು, ಈ ಕಥೆ ಎನಗೆ ಗೊತ್ತಿತ್ತಿಲ್ಲೇ…
    ಈ ಮಾಹಿತಿ ಕೊಟ್ಟ ಮುಣ್ಚಿಕಾನ ಭಾವಂಗೆ ಧನ್ಯವಾದ ತಿಳಿಸಲೇ ಬಯಸ್ತಿ …

  3. ಭಾವ ಹೇಳಿದ್ದು ನಿಜ ಆಗಿಕ್ಕು ಹೇಳಿ ಕಾಣ್ತು. ಆದರೆ, ಈಗ ಈ ಗಾದೆ ಮಾತಿನ ಅರ್ಥ ಬೇರೆ ರೀತಿ ತಿರುಗಿದ್ದು. ಒಳ್ಳೆ ಮಾಹಿತಿ.

  4. ಆಗಿಪ್ಪಲೂ ಸಾಕು, ಹೇಳುಲೆಡಿಯ. ಆದರೂ, “ಕರಡಿಗೆ ಬಿಟ್ಟು ಬಂದ ಹಾಂಗೆ” ಇಪ್ಪದು “ಕರಡಿ ಬಿಟ್ಟ ಹಾಂಗೆ” ಹೇಳಿ ಅಷ್ಟೊಂದು ಬದಲಾವಣೆ ಹೇಂಗೆ ಆತು. ಬೇರೆ ಯೇನಾರೂ ಕಥೆ/ಹಿನ್ನೆಲೆ ಇಪ್ಪಲೂ ಸಾಕು.

    1. ಎನ್ನ ಪ್ರಕಾರ, ಬಾಯಿಂದ ಬಾಯಿಗೆ ಬಪ್ಪಗ “ಕರಡಿಗೆ ಬಿಟ್ಟು ಬಂದ ಹಾಂಗೆ” ಇಪ್ಪದು “ಕರಡಿ ಬಿಟ್ಟ ಹಾಂಗೆ” ಹೇಳಿ ಬದಲಾವಣೆ ಆಗಿಪ್ಪಲೂ ಸಾಕು. ಬೇರೆ ಏನಾರು ಕಥೆ/ಹಿನ್ನೆಲೆ ಗೊಂತಿಪ್ಪವು ಇದ್ದರೆ ತಿಳಿಸಿದರೆ ಒಳ್ಳೆಯದಿತ್ತು.
      ಒಪ್ಪಕ್ಕೆ ಧನ್ಯವಾದಂಗೊ 🙂

  5. ಆಗಿಕ್ಕು.ಆನೂ ಈ ಕತೆ ಕೇಳಿದ್ದೆ.
    ಮತ್ತೆ ನಮ್ಮಲ್ಲೂ ಸಾಲಿಗ್ರಾಮ,ರುದ್ರಾಕ್ಷಿ ಎಲ್ಲಾ ಸಂಪುಟಲ್ಲಿ [ಕರಡಿಗೆ] ಹಾಕಿ ಮಡುಗುದಲ್ಲದೊ?

    1. ಅಪ್ಪು ಎಸ್.ಕೆ. ಮಾವ.. ಆದರೆ ನಾವು ಕರಡಿಗೆಯ ಜೆನಿವಾರಲ್ಲಿ ಕಟ್ಟಿಕೊಂಡು ಹೋವುತ್ತಿಲ್ಲೆ ಅಷ್ಟೆ.
      ಒಪ್ಪಕ್ಕೆ ಧನ್ಯವಾದಂಗೊ.

  6. ಉತ್ತಮ ಮಾಹಿಥಿ, ಆಗಿಪ್ಪಲೂ ಸಾಕು…

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×