ನಮ್ಮ ಗುರುಗಳ ಅಮೃತಸತ್ವ ಯೋಜನೆ

ಅನ್ನ, ಆರೋಗ್ಯ, ಅಭಿವೃದ್ಧಿ ಹೇಳಿಗೂಂಡು ಇಂದು ಪ್ರತಿಯೊಬ್ಬ ಮನುಷ್ಯನೂ ಹಗಲಿರುಳು ಹೇಳಿ ನೋಡದ್ದೆ ದುಡಿತ್ತಾ ಇದ್ದ°.
ಆದರೆ ನಾವಿಂದು ಆದುನಿಕತೆಗೆ ಮಾರುಹೋಗಿ ಉಂಬ ಅಶನ ರಾಸಾಯನಿಕಂದ ಕೂಡಿ, ನಮ್ಮ ಆರೋಗ್ಯ ಹದಗೆಟ್ಟು ಅಭಿವೃದ್ದಿಹೇಳುದು ಮರೀಚಿಕೆ ಆಗಿ ಹೋಯಿದು.
ಅಭಿವೃದ್ದಿ ಹಾಗೂ ಲಾಭದ ಆಶೆಂದ ಕೃಷಿಕ ಇಂದು ರಾಸಾಯನಿಕಂದ ಕೂಡಿಪ್ಪ ಕೀಟನಾಶಕಂಗಳ ಹೆಚ್ಚಾಗಿ ಉಪಯೋಗಿಸಿ ಕೃಷಿಮಾಡುತ್ತ ಇದ್ದ°.
ಇದರಿಂದ ನಾವಿಂದು ತಿಂಬ ಪ್ರತಿಯೊಂದು ಆಹಾರವೂ ವಿಷಂದ ಕೂಡಿದ್ದಾಯಿದು. ಹೀಂಗೆ ಇಂದು ಅದೆಷ್ಟೋ ಜನ ವಿಷಾಹಾರ ತಿಂದು ಇಷ್ಟರವರೆಗೆ ಕೇಳದ್ದ ರೋಗಂಗಕ್ಕೆ ಸಿಕ್ಕಿ ನರಳುತ್ತಾ ಇದ್ದವು.

ಕೋಟಿಸಂಪಾದನೆ ಇದ್ದರೂ ಆರೋಗ್ಯವೇ ಇಲ್ಲದ್ದರೆ ಎಂತ ಫಲ?
ಹಾಂಗಾಗಿ ವಿಷಮುಕ್ತ ಸಾವಯವ ಆಹಾರಂದ ಮಾತ್ರ ಶರೀರ ಮನಸ್ಸು ಶುದ್ದಿ‌ಅಪ್ಪಲೆ ಮತ್ತೆ ಒಳ್ಳೆಯ ಆರೋಗ್ಯವುದೇ ಸಿಕ್ಕುಲೆ ಸಾದ್ಯ ಹೇಳುವಸತ್ಯವ ಅರ್ತುಗೊಂಬ°.
ಹೀಂಗೆ ವಿಷಮುಕ್ತ ಆಹಾರ ಸಿಕ್ಕೆಕ್ಕಾದರೆ ಸಾವಯವ ಕೃಷಿಪದ್ಧತಿಗೇ ಶರಣಾಯೆಕ್ಕಷ್ಟೆ.
ಹಾಂಗಾಗಿ ನಮ್ಮ ಗುರುಗೊ ಅಮೃತಸತ್ವ ಹೇಳುವ ಯೋಜನೆಯ ಸುರುಮಾಡಿದವು.
ಹೀಂಗೆ ಅಭಿವೃದ್ದಿ, ಪ್ರಗತಿ, ಬೆಳವಣಿಗೆ ಹೇಳಿ ಕನಸು ಕಾಂಬ ಪ್ರತಿಯೊಬ್ಬಂಗೂ ಈ ಯೋಜನೆಯಡಿಲಿ ಸಾತ್ವಿಕವಾದ ಅವಕಾಶ ಇದ್ದು.

ಗುರುಗಳ ಈ ಯೋಜನೆಯ ಉದ್ದೇಶಂಗೊ:

 1. ಸಾವಯವ ಕೃಷಿಗೆ ಅವಕಾಶ.
 2. ಹೆಚ್ಚಿನ ಕ್ರಯದ ಸಾವಯವ ಉತ್ಪನ್ನವ ಕಮ್ಮಿ ಕ್ರಯಕ್ಕೆ ಗ್ರಾಹಕಂಗೊಕ್ಕೆ ಸಿಕ್ಕುವಹಾಂಗೆ ಪ್ರಯತ್ನ.
 3. ಜನಂಗೊಕ್ಕೆ ವಿಷಮುಕ್ತ ಆಹಾರದ ಪೂರೈಕೆ.
 4. ಕೃಷಿ‌ಉತ್ಪನ್ನಂಗೊಕ್ಕೆ ನೇರಮಾರುಕಟ್ಟೆಯ ವ್ಯವಸ್ಥೆ.
 5. ಮುಖ್ಯವಾಗಿ ಗೋಸಂಪತ್ತಿನ ಬೆಳವಣಿಗೆಗೆ ಅವಕಾಶ.
 6. ಸಾವಯವ ಉತ್ಪನ್ನ, ಗೋ‌ಉತ್ಪನ್ನಂಗಳ ಮನೆಲಿಯೇ ತಯಾರುಮಾಡಿ ಮಾರುಲೆ ಅವಕಾಶ.

– ಹೀಂಗೆ ಲೋಕಕಲ್ಯಾಣಕ್ಕೆ ಈ ಯೋಜನೆಗಳ ಸಂಪೂರ್ಣ ಕಾರ್ಯರೂಪಕ್ಕೆ ತಪ್ಪಲೆ ನಮ್ಮ ಗುರುಗೊ ಈ ಸರ್ತಿಯಾಣ ಚಾತುರ್ಮಾಸ್ಯಲ್ಲಿ ಸಾವಯವ ಆಹಾರಕ್ಕೆ ಆದ್ಯತೆ ನೀಡಿದ್ದವು.
ಇದೊಂದು ಸಾವಯವ ಚಾತುರ್ಮಾಸ್ಯ ಹೇಳಿರೆ ತಪ್ಪಾಗ.

ಹಾಂಗೆ ಈ ಚಾತುರ್ಮಾಸ್ಯಲ್ಲಿ ಸಾವಯವ ಆಹಾರವ ಗುರುಗೊ ಕಡ್ಡಾಯವಾಗಿ ಅನುಷ್ಠಾನಕ್ಕೆ ತಯಿಂದವು.
ಗುರುಗಳ “ಅಮೃತ ಆಹಾರವನ್ನೇ ಉಂಡು ಆರೋಗ್ಯ ಉಳಿಸಿ” ಹೇಳುವ ಈ ಎಚ್ಚರಿಕೆಯ ಕರೆಗೆ ಶಿಷ್ಯರಾದ ನಾವು ಓಗೊಡುವ, ತಲೆಬಾಗುವ, ಪಾಲುಸುವ°.
ಹೀಂಗೆ ನಮ್ಮ ಭಾರತವ ಸಾತ್ವಿಕ ಸಾವಯವ ದೇಶ ಅಪ್ಪಹಾಂಗೆ ಮಾಡುವ°, ಆಗದ?

ಶ್ರೀಮತಿ ವಿದ್ಯಾ ರವಿಶಂಕರ್
W/o Dr Ravishankar Yelkana
Savanoor, Puttur Taluk
Dakshina Kannada
Pin-574202

You may also like...

20 Responses

 1. ಚೆನ್ನೈ ಭಾವ says:

  ಈ ಒಳ್ಳೆ ಶುದ್ದಿ ನೋಡಿ ಖುಶೀ ಆತು. ಶ್ರೀ ಗುರುಗಳ ಯೋಜನೆಗಳೇ ಅದ್ಭುತ. ಸಾಕಾರವಾಗಲಿ.

 2. Lekha atte says:

  ಇಶ್ಟ್ರವರೆಗೆ ಆಗದ್ದ ಕೆಲಸ ನಮ್ಮ ಗುರುಗಳ ಮೂಲಕ ಆಗಲಿ.. ಹರೆ ರಾಮ.

  • ವಿದ್ಯಾ ರವಿಶಂಕರ್ says:

   ಹರೇರಾಮ,
   ಅದಕ್ಕೆ ಶಿಷ್ಯರಾದ ನಾವು ಅನುಸರಿವುವ ಲೇಖತ್ತೆ.

 3. Gopalakrishna BHAT S.K. says:

  ಸಾವಯವ ಕೃಷಿ ಉತ್ತಮ,ಸರಿಯೆ.
  ಆದರೆ ಎಲ್ಲಾ ಮಣ್ಣುಗಳಲ್ಲೂ ಎಲ್ಲಾ ಪೌಷ್ಟಿಕ ಅಂಶಂಗೊ ಇಲ್ಲೆನ್ನೆ.ಅದಕ್ಕೆ ಮಣ್ಣು ಪರೀಕ್ಷೆ ಮಾಡಿ ಕೊರತೆ ಇಪ್ಪ ಅಂಶವ ತುಂಬಿಸಿರೆ ಸರಿ ಅಕ್ಕು.
  ರಸಗೊಬ್ಬರ ಹಾಕಿದರೂ ಸಾವಯವ ಗೊಬ್ಬರವನ್ನೂ ಹಾಕೆಕ್ಕು.ಇಲ್ಲದ್ದರೆ ಮಣ್ಣು ಹಾಳಕ್ಕು.
  ಬರೇ ಸಾವಯವ ಹೇಳಿ ಪ್ರಚಾರ ಮಾಡುವ ಬದಲು ,ಈ ವಿಷಯಕ್ಕೆ ಒತ್ತು ಕೊಟ್ಟು ಪ್ರಚಾರ ಮಾಡೆಕ್ಕು.

  • ವಿದ್ಯಾ ರವಿಶಂಕರ್ says:

   ಹರೇರಾಮ,
   ಒಂದೇ ಮಣ್ಣಿಲಿ ಎಲ್ಲಾ ವಿಧದ ಬೆಳೆಗಳ ಬೆಳೆಶುಲೆ ಸಾಧ್ಯ ಇಲ್ಲೆ. ಅದಕ್ಕೆ ಮಣ್ಣುಪರೀಕ್ಷೆ ಮಾಡಿ ಕೊರತೆ ಇಪ್ಪ ಅಂಶವ ರಸಗೊಬ್ಬರದ ಮೂಲಕ ತುಂಬುಸುದು ಪ್ರಕೃತಿಗೆ ವಿರುದ್ಧ ಆವುತ್ತು. ಒಂದು ಮಣ್ಣಿಲಿ ಪ್ರಾಕೃತಿಕವಾಗಿ ಯಾವ ಬೆಳೆ ಬೆಳೆಶುಲೆಡಿತ್ತೋ ಆ ಬೆಳೆಯ ದೇಶ ಕಾಲಕ್ಕೆ ಅನುಗುಣವಾಗಿ ಸಾವಯವ ಗೊಬ್ಬರ ಮಾತ್ರ ಹಾಕಿ ಬೆಳೆಶೆಕ್ಕು. ಈ ವಿಷಯಕ್ಕೆ ಮಾತ್ರ ಹೆಚ್ಹು ಒತ್ತು ಕೊಟ್ಟು ಪ್ರಚಾರ ಮಾಡುವ ಆಗದಾ?

   • Gopalakrishna BHAT S.K. says:

    ಬರೆ ಸಾವಯವ ಕೃಷಿಂದ ನಮ್ಮ ದೇಶದ ಎಲ್ಲರಿಗೂ ಬೇಕಾದಷ್ಟು ಆಹಾರ ಸಿಕ್ಕುಗೊ? ಕೃಷಿಕರ ಜೀವನ ನಡೆಗೊ?ಈ ವಿಷಯದ ಕುರಿತೂ ಚಿಂತಿಸೆಕ್ಕು. ಇಲ್ಲದ್ದರೆ ಈ ಪ್ರಚಾರ ಸುಮ್ಮನೆ ಅಕ್ಕು.

    • ನೀರ್ಕಜೆ ಮಹೇಶ says:

     ಬರೇ ಸಾವಯವ ಕೃಷಿಂದ ದೇಶದ ಎಲ್ಲರಿಂಗೂ ಬೇಕಾದಷ್ಟು ಆಹಾರ ಸಿಕ್ಕುಗಾ ಹೇಳಿ ಆರು ಹೇಳೆಕ್ಕಾದ್ದು? ಈಗ ಒಂದು ಉದಾಹರಣೆ ತೆಕ್ಕೊಳ್ಳಿ. ದೇಶದ ಎಲ್ಲರಿಂಗೂ ಬೇಕಾದಷ್ಟು ಕಂಪ್ಯೂಟರ್ ತಯಾರ್ಸುಲೆ ಎಡಿಗಾ ಹೇಳಿ ಆರು ಹೇಳೆಕ್ಕಾದ್ದು? ಕಂಪ್ಯೂಟರ್ ತಯಾರ್ಸುವ ಕಂಪೆನಿ. ಅದು ಬಿಟ್ಟು ಸರಕಾರವೇ ಅಥವಾ ಇನ್ನೊಬ್ಬ ಮೂರನೇ ವ್ಯಕ್ತಿ ಎಡಿಗಾ ಎಡಿಯದಾ ಹೇಳಿರೆ ಹೇಂಗಕ್ಕು? ಇದೇ ರೀತಿ ಆಯಿದು ಆಹಾರೋತ್ಪಾದನೆ. ಸಾವಯವ ಕೃಷಿ ಮಾಡಿದವೆಲ್ಲವೂ ಇದು ಉತ್ತಮ, ದೇಶದ ಹಸಿವು ನೀಗುಸುಲೆ ಸಾಧ್ಯ ಹೇಳಿ ಹೇಳ್ತವು. ಆದರೆ ಎಸಿ ರೂಮಿಲಿ ಕೂಪ ಪ್ಲಾನಿಂಗ್ ಕಮಿಷನ್ ಅಸಾಧ್ಯ ಹೇಳಿ ಹೇಳುತ್ತು. ಇಲ್ಲಿ ಆರು ಹೇಳುದು ಸರಿ? ಯೋಚನೆ ಮಾಡಿ.

     ಸ್ವಾತಂತ್ರ್ಯ ಸಮಯಲ್ಲಿ ಆಹಾರ ಕೊರತೆ ಇದ್ದದ್ದು ಬ್ರಿಟಿಷರ ವ್ಯಾಪಾರ ನೀತಿಗೊ ಮತ್ತೆ ಜಮೀನು ಪಟ್ಟ ವ್ಯವಸ್ಥೆಯ ಕಾರಣಂದಾಗಿಯೇ ಹೊರತು ರಾಸಾಯನಿಕ ಗೊಬ್ಬರ ಬಳಕೆ ಇಲ್ಲದ್ದರಿಂದಾಗಿ ಅಲ್ಲ.

     ಒಂದು ಮಾತ್ರ ನಿಜ, ಸಾವಯವ ಕೃಷಿಂದ ಎಲ್ಲರ ಹೊಟ್ಟೆ ಹಸಿವು ಖಂಡಿತಾ ನೀಗುಗು, ಆದರೆ ಜಿಡಿಪಿ ಹಸಿವು ನೀಗುದು ಅಸಾಧ್ಯ. ಯಾವ ಹಸಿವು ನೀಗೆಕ್ಕು ಹೇಳಿ ಮೊದಲೇ ಯೋಚನೆ ಮಾಡಿಯೊಂಬದು ಒಳ್ಳೆದು.

     • Gopalakrishna BHAT S.K. says:

      ಮೊದಲು ಆಹಾರ ಕೊರತೆ ಇದ್ದದು ನೀರಾವರಿಯ ಕೊರತೆಂದ,ಸರಕಾರಿ ಧೋರಣೆಂದ ಹೇಳುದು ಸರಿ.೬೦ರ ದಶಕಲ್ಲಿ ನಮ್ಮ ದೇಶಕ್ಕೆ ಆಹಾರಧಾನ್ಯ ಆಮದಾಗದ್ದರೆ ಕಷ್ಟ ಹೇಳುವ ಸ್ಥಿತಿ ಇತ್ತು.[ಆಗ ಬ್ರಿಟಿಷರಲ್ಲ ಆಳಿಕೊಂಡಿದ್ದದು. ]ಆ ಮೇಲೆ ಸರಕಾರದ ಕೃಷಿ ನೀತಿಂದಾಗಿ ನೀರಾವರಿ,ರಸಗೊಬ್ಬರ,ಕೀಟನಾಶಕಂಗಳ ಬಳಕೆ,ಹೊಸ ತಳಿಗಳ ಆವಿಷ್ಕಾರ ಎಲ್ಲಾ ಬಂದು ಈಗ ಜನಸಂಖ್ಯೆ ಹೆಚ್ಚಾದರೂ ಆಹಾರ ವಿಷಯಲ್ಲಿ ದೇಶ ಸ್ವಾವಲಂಬಿ ಆಯಿದು.ನಿಜ,ಇದಕ್ಕೆ ರಸಗೊಬ್ಬರ ಒಂದೇ ಕಾರಣ ಅಲ್ಲ.ಆದರೆ ಅದೂ ಒಂದು ಕಾರಣ ಹೇಳುದರ ನಾವು ಮರವಲಾಗ.ಸರಕಾರ ಜನಕಲ್ಯಾಣಕ್ಕಾಗಿ ಯೋಜನೆ ರೂಪಿಸುತ್ತು-ಅದು ಅದರ ಕೆಲಸ,ಕರ್ತವ್ಯ.ನಮಗೆ ಅದು ಸರಿ ಕಾಣದ್ದರೆ ಟೀಕಿಸಿ,ತೊಂದರೆ ಇಲ್ಲೆ. ಸಾವಯವ ಕೃಷಿಪದ್ಧತಿಲಿ ಭಾರತೀಯರು ಹಲವು ಶತಮಾನ ಕೃಷಿಲಿ ಯಶಸ್ವಿ ಆಯಿದವು ಹೇಳುವುದು ಸರಿ.ಈಗಲೂ ಕೆಲವರು ಮಾಡಿ,ಯಶಸ್ವಿ ಆಯಿದವು.ಎಲ್ಲಾ ಊರಿಲೂ ಇದರ ಪರಿಣಾಮಕಾರಿಯಾಗಿ ನಡಸಲೆ ಎಡಿಗೊ,ಎಲ್ಲಾ ಕೃಷಿಭೂಮಿಗೂ ಬೇಕಾಷ್ಟು ಸಾವಯವ ಗೊಬ್ಬರ ಸಿಕ್ಕುಗೊ,ಕೃಷಿ ಲಾಭಕರ ಅಕ್ಕೊ-ಹೇಳಿ ಯೋಚಿಸೆಕ್ಕು .ಇದರ ಬಗ್ಗೆ ಚೂರು ಯೋಚನೆ ಮಾಡಿ-ಹೇಳಿ ಎನ್ನ ವಿನಂತಿ.

     • ಮಹೇಶ ನೀರ್ಕಜೆ says:

      {ಆಗ ಬ್ರಿಟಿಷರಲ್ಲ ಆಳಿಕೊಂಡಿದ್ದದು} ಇದರ ಬಗ್ಗೆ ಮಾತಾಡುಲೆ ಎಲ್ಲಕ್ಕಿಂತ ಹೆಚ್ಚು ತಿಳುವಳಿಕೆ ಇಪ್ಪವು ಎಮ್ಮೆಸ್ ಸ್ವಾಮಿನಾಥನ್ (ಹಸಿರು ಕ್ರಾಂತಿ ಹರಿಕಾರ). ಅವರ ಮಾತುಗಳ ಇಲ್ಲಿ ಕೇಳಿ – http://blip.tv/ifad/interview-with-m-s-swaminathan-on-smallholders-biohappiness-and-sustainable-agriculture-5207748

      ಇದರಲ್ಲಿ ಸ್ಪಷ್ಟವಾಗಿ ಸಾವಯವ ಕೃಷಿ ಮತ್ತೆ ಸುಸ್ಥಿರ ಕೃಷಿ ಬಗ್ಗೆ ಹೇಳಿದ್ದವು. ನೋಡಿ. ಇದರಲ್ಲಿ ಕೊನೆಯ ಮಾತಂತೂ ಸೂಪರ್.

     • Gopalakrishna BHAT S.K. says:

      ಸಾವಯವ ಕೃಷಿ ಉತ್ತಮ ಹೇಳುದರಲ್ಲಿ ಅನುಮಾನ ಇಲ್ಲೆ-ಈ ವಿಷಯ ಆನು ಮೇಲೆ ಕಾಣುವ ಹಾಂಗೆ ಬರದ್ದೆ.ಆದರೆ ಸ್ವಾಮಿನಾಥನ್ ಹೇಳುವ ಹಾಂಗೆ ಆರ್ಥಿಕ ಮತ್ತೆ ಸಾಮಾಜಿಕ ಬೆಂಬಲವ ಸಣ್ಣ ಕೃಷಿಕರಿಂಗೆ ಕೊಡುಲೆ ಸರಕಾರಕ್ಕೆ ಸಾಧ್ಯವೊ-ಈಗಿನ ಆರ್ಥಿಕ ಪರಿಸ್ಥಿತಿಲಿ ಕೃಷಿಗೆ ಹೆಚ್ಚೆಚ್ಚು ಜನ ಉದ್ಯೋಗ ಅರಸಿ ಬಕ್ಕೊ,ಉತ್ಪಾದನೆ ಕಮ್ಮಿ ಆದರೆ ಅದರಿಂದ ಸಾಮಾಜಿಕ,ಆರ್ಥಿಕ ಕ್ಷೇತ್ರಲ್ಲಿ ಅಪ್ಪ ತಳಮಳ ಎಂತದು,ಇಂತದ್ದರ ಜಾರಿಗೆ ತಂದ ಸರಕಾರ ನಮ್ಮ ಪ್ರಜಾಪ್ರಭುತ್ವಲ್ಲಿ ಕೆಲವು ಕಾಲ ಇಪ್ಪಲೆ ಸಾಧ್ಯ ಇದ್ದೊ-ಹೇಳುದು ಪ್ರಶ್ನೆ ಆಗಿಯೇ ಉಳಿತ್ತು.

    • ಶ್ಯಾಮಣ್ಣ says:

     ಆಹಾರ ಹೇಳಿರೆ ಎಂತರ? ಕಾಲಿ ಅಕ್ಕಿ, ಗೋದಿ ಮಾಂತ್ರವಾ?… ಹಲಸಿನ ಹಣ್ಣು, ಮಾವಿನ ಹಣ್ಣು, ಬಾಳೆ ಹಣ್ಣು, ಗೆಡ್ಡೆ ಗೆಣಸು ಕೂಡಾ ಅಹಾರವರ್ಗಲ್ಲಿ ಸೇರ್ತಲ್ಲದಾ? ಇದೆಲ್ಲ ಸಾಮಾನ್ಯವಾಗಿ ಸಾವಯವವೇ ಆವ್ತಲ್ಲದಾ?

 4. ಶರ್ಮಪ್ಪಚ್ಚಿ says:

  ನಾವು ಉಂಡ ಆಹಾರವೇ ನಮ್ಮ ಎಲ್ಲಾ ರೀತಿಯ ಬೆಳವಣಿಗೆಗೆ ಸಹಾಯ ಅಪ್ಪದು.
  ಆಹಾರ ಶುದ್ಧವಾಗಿರೆಕು, ವಿಷಮುಕ್ತ ಆಗಿರೆಕು. ಇದರ ಕಾರ್ಯರೂಪಕ್ಕೆ ತಪ್ಪದರಲ್ಲಿ ಕೃಷಿಕರ ಪಾತ್ರ ತುಂಬಾ ಮುಖ್ಯ.
  ರಸಗೊಬ್ಬರ, ಕೀಟ ನಾಶಕಂಗಳ ಹಾಕಿರೆ ಒಂದರಿಯಂಗೆ ಒಳ್ಳೆ ಬೆಳೆ ಸಿಕ್ಕುತ್ತರೂ, ನಿಧಾನಕೆ ಮಣ್ಣು ವಿಷಮಯ ಅಪ್ಪದು ಮಾತ್ರ ಅಲ್ಲದ್ದೆ ಮಣ್ಣಿಲ್ಲಿ ಇಪ್ಪ ಉಪಕಾರೀ ಜೀವ ಜಂತುಗಳ ನಾಶವೂ ಆವ್ತು.
  ಸಾಧ್ಯ ಆದಷ್ಟು ಮಟ್ಟಿಂಗೆ ಅಮೃತ ಸತ್ವ ಆಹಾರ ಉಂಬೊ, ಸಾತ್ವಿಕರಪ್ಪೊ.

  • ವಿದ್ಯಾ ರವಿಶಂಕರ್ says:

   ಹರೇರಾಮ,
   ನಿಂಗ ಹೇಳಿದ್ದು ಸರಿ ಶರ್ಮಪ್ಪಚ್ಹಿ, ಇಂದ್ರಾಣ ಕಾಲಲ್ಲಿ ಎಲ್ಲಾ ದಿಕ್ಕುದೇ ಸಂಪೂರ್ಣ ಶುದ್ದ ಆಹಾರ ಸಿಕ್ಕುಲೆ ಕಷ್ಟ ಇದ್ದು. ನಮ್ಮಿಂದ ಸಾದ್ಯ ಆದಷ್ಟು ಮಟ್ಟಿಂಗೆ ಪ್ರಯತ್ನ ಪಡುವ.

 5. ವಿದ್ಯಾ,

  ಗುರುಗಳ ಚಾತುರ್ಮಾಸ್ಯದ ಸಮಯಲ್ಲಿ ಈ ಸರ್ತಿ ಅಮೃತ ಆಹಾರ ಆಯೆಕ್ಕು ಹೇಳಿ ಅಪ್ಪಣೆ ಕೊಡ್ಸಿದ ಸಮಯಲ್ಲಿಯೇ ನಮ್ಮ ಬೈಲಿಲಿ ಅದಕ್ಕೆ ಪೂರಕ ಅಪ್ಪ ಹಾಂಗೆ ನಿನ್ನ ಶುದ್ದಿ ಬಂದದು ಲಾಯ್ಕಾತು. ಸಾವಯವ ಹೇಳುವ ಶಬ್ಧವ ಸರಿಯಾಗಿ ಮನದಟ್ಟು ಮಾಡಿಗೊಂಡು ನಮ್ಮ ನಿತ್ಯ ಜೀವನಲ್ಲಿ ಅಳವಡಿಸೆಕ್ಕಾದ ಅಗತ್ಯತೆ ನಮ್ಮೆಲ್ಲರದ್ದು. ಹಾಳಾವುತ್ತಾ ಇಪ್ಪ ನಮ್ಮೆಲ್ಲರ ಆರೋಗ್ಯ ಈಗಾಗಲೇ ಎಚ್ಚರಿಕೆಯ ಗಂಟೆ ಬಾರ್ಸಿ ಆಯಿದು. ಈಗ ಗುರುಗಳ ಆದೇಶಕ್ಕಾದರೂ ಜನಂಗ ಎಚ್ಚೆತ್ತುಗೊಂಡರೆ ನಮ್ಮ ಮತ್ತೆ ನಮ್ಮ ಮುಂದಾಣೋರ ಬಾಳು ಚೆಂದಲ್ಲಿ ಬೆಳಗುಗು.

  ಈ ಸಾವಯವ ಆಹಾರ ಪದ್ಧತಿ ನಮ್ಮಲ್ಲಿ ಮೊದಲಿಂಗೆ ರೂಢಿಲಿ ಇದ್ದದು. ಮತ್ತಾಣೋರ ಕಡಮ್ಮೆ ಸಮಯಲ್ಲಿ ಹೆಚ್ಚು ಪೈಸೆ ಮಾಡುವ ಲೋಭಕ್ಕೆ ನಮ್ಮ ಭೂಮಿ ಹಾಳಾತು, ನಮ್ಮ ಪರಿಸರ ಹಾಳಾತು, ಈಗ ನಮ್ಮ ಆರೋಗ್ಯವೂ ಹಾಳಾತು. ನಮ್ಮ ಹಿರಿಯರು ನವಗೆ ಫಲವತ್ತಾಗಿ ಒಳಿಶಿ ಕೊಟ್ಟ ಈ ಭೂಮಿಯ ನಾವು ಪುನಾ ವಿಷಮುಕ್ತ ಮಾಡುಲೆ ಎಲ್ಲಾ ಪ್ರಯತ್ನ ಮಾಡುವ°. ಇದು ಒಂದು ದಿನ ಎರಡು ದಿನದ ಸಮಯಲ್ಲಿ ಅಪ್ಪದಲ್ಲ. ಮನಸ್ಸಿಲಿ ಸಂಕಲ್ಪ ಮಾಡಿದರೆ ಸಾಧುಸುಲೆ ಯಾವ ಕಷ್ಟವೂ ಇಲ್ಲೆ.

  ಗುರುಗಳ ಅಮೃತ ಆಹಾರದ ಸಂಕಲ್ಪ ಎಲ್ಲ ಮನೆಗಳಿಂಗೂ ವ್ಯಾಸ ಮಂತ್ರಾಕ್ಷತೆಯೊಟ್ಟಿಂಗೆ ಮುಟ್ಟಿ, ಎಲ್ಲ ಮನೆಗಳಲ್ಲಿ ಈ ಸಂಕಲ್ಪದ ಅಡಿಪಾಯಲ್ಲಿ ಮನೆ, ಮಣ್ಣು, ಮನಸ್ಸು, ಮನೆತನ ಎಲ್ಲವೂ ಸಾವಯವ ಆಗಲಿ..

  ಹರೇರಾಮ.

  • ವಿದ್ಯಾ ರವಿಶಂಕರ್ says:

   ಹರೇರಾಮ ಶ್ರೀಅಕ್ಕಾ,
   ಅಧೋಗತಿಗೆ ಇಳಿತ್ತಾ ಇಪ್ಪ ನಮ್ಮ ಕೃಷಿಪದ್ದತಿ, ಆಹಾರಪದ್ದತಿ ಹಾಂಗೂ ಜೀವನಶೈಲಿಯ ತಿದ್ದಿಲೆ ಶ್ರೀರಾಮಚಂದ್ರನೇ ಗುರುಗಳ ರೂಪಲ್ಲಿ ಅವತಾರ ಎತ್ತಿ ಬಂದು ಸಂಕಲ್ಪಿಸಿ ಆದೇಶಮಾಡಿ ಆಯಿದು. ಹಾಂಗಾದಕಾರಣ ಶ್ರೀರಾಮನ ಸಂಕಲ್ಪಲ್ಲಿ ಮನೆ, ಮಣ್ಣು, ಮನಸ್ಸು ಮನೆತನ ಎಲ್ಲವೂ ಸಾವಯವ ಅಪ್ಪ ಕಾಲ ದೂರ ಇಲ್ಲೆ.

 6. 🙂
  ಒಪ್ಪೆಕ್ಕಾದ ಮಾತು:)

 7. ಖಂಡಿತಾ ವಿದ್ಯಕ್ಕಾ.ಗುರುಗಳ ಯೋಜನೆಲಿ ನಾವು ಭಾಗಿ ಅಪ್ಪ.ಆ ಮೂಲಕ ಆರೋಗ್ಯ ಪರಿಸರ ವೃದ್ಧಿಯಾಗಲಿ.ಒಳ್ಳೆಯ ಮಾಹಿತಿ ಬೈಲಿಲಿ ತಿಳಿಶಿದ್ದಕ್ಕೆ ಧನ್ಯವಾದಂಗೋ….

 8. ರಾಸಾಯನಿಕ ಗೊಬ್ಬರ ಹಾಕಿ ಕ್ರಿಶಿ ಮಾಡಿದರೆ ಸಾವಯವಂದ ತುಂಬಾ ಕಮ್ಮಿ ಕರ್ಚಿಲಿ ಆವುತ್ತು…ಅಂತೇ ದನ ಸಾಂಕಿ ಕಸ್ಟ್ಟ ಬಪ್ಪದು ಎಂತಕ್ಕೆ ?ಅಂಗಡಿಂದ ಗೋಣಿಲಿ ತಂದು ಸೀದಾ ಹಾಕಿದರೆ ಆತು ತುಂಬಾ ಕೂಲಿ ಗಳೂ ಬೇಡ ಹೇಳುತ್ತ ಮನೋಸ್ತಿತಿ ಈಗ ಕ್ರಿಶಿಕರದ್ದು.. ಅದರ ತಿದ್ದುಲೆ ಬಾರೀ ಕಸ್ಟ್ಟ ಇದ್ದು..ಆನು ಬೇಜಾರಲ್ಲಿ ಹೇಳುತ್ತೆ ಬಹುಶ್ಯ ಇದರ ತಿದ್ದುಲೇ ಎಡಿಯದ್ದ ಸ್ತಿತಿಗೆ ನಾವು ತಲುಪಿದ್ದು.. 1 ಎಕ್ರೆ ಸಾವಯವ ಕ್ರಿಶಿ ಮಾಡೆಕ್ಕಾರೆ ಬೇಕಾದ ಕೂಲಿ ಗಳಂದ 90% ಕಮ್ಮಿ ಕೂಲಿ ಗಳಲ್ಲಿ ರಾಸಯನಿಕ ಕ್ರಿಶಿ ಮಾಡುಲೆ ಆಉತ್ತು..ಎಲ್ಲೋರೂ ನೋಡುದು ಲಾಭವನ್ನೆ ಹಾಂಗಿಪ್ಪಗ ವ್ಯವಹಾರಿಕವಾಗಿ ಇದು ನೆಡಗಾ ??

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *