ಅಶೋಕೆಲಿ ಮರುಸೃಷ್ಟಿಯಾದ ಅಯೋಧ್ಯೆ

ಅಶೋಕೆಲಿ ರಾಮಕಥೆಲಿ ಮಂಗಳ ಆತು.
ಆ ಪ್ರಯುಕ್ತ ವಿಶೇಷ ವರದಿ ಅಶೋಕೆಂದ…

ಅಯೋಧ್ಯೆಯಾದ ಅಶೋಕೆ:

ಗೋಕರ್ಣದ ಅಶೋಕೆ ನಿನ್ನೆ ಅಕ್ಷರಶಃ ಅಯೋಧ್ಯೆ ಆಗಿದ್ದತ್ತು. ಒಂದು ಹೊಡೆಲಿ ದೇವದುಂದುಭಿ ಮೊಳಗಿಯೊಂಡಿತ್ತು.
ಇನ್ನೊಂದು ಕಡೆ ಸಿತಾರ ವಾದನದ ಮಧುರ ಸ್ವರದ ತರಂಗಂಗೋ ಅನುಸರಿಸಿಗೊಂಡಿತ್ತು. ವೀಣಾವೇಣುವಾದನದ ಝೇಂಕಾರ, ಗುಡುಗಿನ ಶಬ್ಢಕ್ಕೆ ಸರಿಸಮನಾಗಿ ಮೃದಂಗ ಮತ್ತೆ ತಬಲಾದ ನಿನಾದಂಗೋ.
ಮಂಗಗಳಕರ ಪಂಚವಾದ್ಯಂಗೋ. ಮನಸ್ಸಿಂಗೆ ಹಿತ ಕೊಡ್ತ ಸಂಗೀತಗಾನ, ಕಣ್ಣು ತುಂಬುವ ನೃತ್ಯ, ಕೋಲಾಟ, ಡಾಂಡಿಯಾ ನೃತ್ಯಂಗಳ ಸಂಗಮ.
ಐರಾವತಲ್ಲಿ ಕೂದು ಬಂದು ರಾಮಜನನಕ್ಕೆ ಪುಷ್ಪವೃಷ್ಟಿ ಮಾಡಿದ ದೇವೇಂದ್ರ. ಆಕಾಶಂದ ನಿರಂತರ ಪುಷ್ಪವೃಷ್ಟಿ. ಎಲ್ಲಾ ದಿಕ್ಕೆ ಹರಡಿದ ಸುಗಂಧಭರಿತ ಗಾಳಿ, ಪನ್ನೀರಿನ ಸಿಂಚನ. ದಶರಥನ ಸಂಭ್ರಮ.
ಅಯೋಧ್ಯೆಯ ಪ್ರಜೆಗಳ ಹಾಂಗೆ ಕಾಂಬ ಜೆನಂಗೋ. ಇದೆಲ್ಲದರ ಹಿನ್ನೆಲೆಲಿ ಸಭೆಲಿದ್ದವ್ವು ಎಲ್ಲೊರೂ ಕೊಶೀಲಿ ನರ್ತನ ಮಾಡುತ್ತಾ ಪರಸ್ಪರ ಹೂಗು ಹಾಕಿಗೊಂಡು ಶ್ರೀ ರಾಮನ ಜನ್ಮ ಸಂತಸವ ಹಂಚಿಗೊಂಡ ರೀತಿ ಇದು….!!!!!
ಇದು ನಿನ್ನೆ ಇತಿಹಾಸ ಮರುಕಳಿಸುವ ಹಾಂಗೆ ಅಶೋಕೆ ಅಯೋಧ್ಯೆಯಾದ ರೀತಿ.
ಭಾವುಕತೆಯ ಪರಾಕಾಷ್ಟೆ ಅತಿರೇಕಕ್ಕೆ ಮುಟ್ಟಿದ ಶ್ರೀ ರಾಮಕಥೆಯ ಮಂಗಳ ಮಹೋತ್ಸವಲ್ಲಿ ಭಾಗಿಯಾದ ಎಲ್ಲ ಶ್ರೀ ರಾಮ ಭಕ್ತರಲ್ಲಿ ಈ ಸಂದರ್ಭದ ಧನ್ಯತಾ ಭಾವ ತುಂಬಿ ಹರ್ಕೊಂಡಿತ್ತು.
ಜನ್ಮ ಪಾವನ ಆದ ಆ ಕ್ಷಣವ ಅವ್ವೆಲ್ಲಾ ದಿನ, ವರ್ಷಂಗ ಕಳದರೂ ಮರೆಯವು.

ಅಶೋಕೆಲಿ ಚಾತುರ್ಮಾಸ್ಯದ ಸಂದರ್ಭಲ್ಲಿ ನಡೆತ್ತಾ ಇಪ್ಪ ಶ್ರೀ ರಾಮಕಥೆಯ ಪವಿತ್ರ ಪರ್ವಂಗಳ ಮಂಗಳೊತ್ಸವದ ದಿನ ಆದ ನಿನ್ನೆ, ಶ್ರೀ ರಾಮನ ಜನನದ ಪುಣ್ಯಕಾಲಲ್ಲಿ ಪ್ರವಚನ ಮಾಡುತ್ತಾ ಶ್ರೀ ಸಂಸ್ಥಾನ..
“ಪಕ್ವ ಆಗದ್ದೆ ಹಣ್ಣು ಮರಂದ ಬೀಳ್ತಿಲ್ಲೆ. ಇಳೆಲಿ ಧಗೆ ಏಳದ್ದೆ ಮೋಡ ಕಟ್ಟಿ ಮಳೆ ಸುರಿತ್ತಿಲ್ಲೆ. ಲೋಕದ ನಿಯಮವೇ ಹೀಂಗೆ.
ಪ್ರತಿಯೊಂದಕ್ಕೂ ಅದರದ್ದೇ ಆದ ಕಾಲ ಇದ್ದು. ನವಗೆ ಬೇಕಾದಪ್ಪಗ ಸರಿಯಾದ ಸಮಯ ಒದಗಿ ಬತ್ತಿಲ್ಲೆ. ಅದಕ್ಕೆ ಕಾವದು ಅನಿವಾರ್ಯ.
ಈ ನಿಯಮಕ್ಕೆ ಭಗವಂತಂದೇ ಅಪವಾದ ಅಲ್ಲ. ವಿಶ್ವಲ್ಲಿ ಲೋಕಪೀಡಕಂಗಳ ಹಿಂಸೆ ಅತಿ ಆದಪ್ಪಗ, ಸಾಧುಗೋ, ಸತ್ಪುರುಷಂಗ ಅತ್ಯಂತ ಸಂಕಟಕ್ಕೆ ಬಿದ್ದಪ್ಪಗ, ಜಗತ್ತೇ ರಾವಣನ ಭೀತಿಲಿ ತೊಳಲಾಡಿಗೊಂಡಿಪ್ಪಗ ಮರ್ಯಾದಾ ಪುರುಷೋತ್ತಮ ಪ್ರಭು ಶ್ರೀ ರಾಮಚಂದ್ರ ಭುವಿಗೆ ಇಳುದು ಬಂದ°.
ದಿವಿ ಭುವಿಗೋಕ್ಕೆ ಧರ್ಮ ಹೇಳ್ತ ಅತ್ಯಪರೂಪದ ಸೇತುವೆ ನಿರ್ಮಾಣ ಮಾಡಿದ°.
ಶ್ರೀ ರಾಮಂದೇ ತನ್ನ ಜನನಕಾಲಕ್ಕೆ ಬೇಕಾಗಿ ಕೌಸಲ್ಯೆಯ ಪುಣ್ಯಗರ್ಭಲ್ಲಿ ಕಾದ°. ಸರ್ವಶಕ್ತ° ಆದ ಭಗವಂತಂಗೆ ತನಗೆ ಹೊಂದಿಗೊಂಬ ಹಾಂಗೆ ಇಪ್ಪ ಹೊತ್ತುವೇಳೆಯ ಹೊಂದುಸಿಗೊಂಬಲೆ ಅಸಾಧ್ಯವಾ?
ಹೇಳ್ತ ಪ್ರಶ್ನೆಯೇ ಅಸಂಬದ್ಧ. ಸಹಜತೆ ಪ್ರಕೃತಿ ಧರ್ಮ. ಅದಕ್ಕೆ ಸರಿಯಾಗಿಯೇ ಪುರುಷೋತ್ತಮನ ನಡೆ. ಲೋಕಕ್ಕೆ ಜೀವನ ಶಿಕ್ಷಣ ನೀಡುಲೆ ಹೇಳಿಯೇ ಆದ ಅವತಾರಲ್ಲಿ ಅವ°, ಯೇವಾಗಳುದೇ, ಅಮಾನುಷತ್ವವ, ದೈವಿಕತೆಯ ತೋರ್ಪಡಿಸದ್ದೆ, ಸಾಮಾನ್ಯ ಮಾನವನ ಹಾಂಗೇ ಬದುಕ್ಕಿದ.
ಅವನ ಜನ್ಮಕಾಲವೇ ಅವ° ಲೋಕೋದ್ಧಾರಕ್ಕೆ ಇಳುದು ಬಂದ ಅಸಾಮಾನ್ಯ ಶಕ್ತಿ ಹೇಳಿ ತಿಳಿಶುತ್ತು. ನಮ್ಮ ಬದುಕ್ಕಿನ ಒಳ್ಳೆದಕ್ಕೆ ಬಂದು ಅನಂತಫಲಂಗಳ ಕೊಟ್ಟ ಈ ಭಗವಂತಂಗೆ ಈ ಲೋಕಲ್ಲಿ ಸಿಕ್ಕಿದ್ದದು ವನವಾಸ, ಅಪವಾದ, ಬಾಲ್ಯದ, ಯೌವನದ ಕೆಲವು ಸಮಯದ ಸಂತಸವ ಬಿಟ್ಟರೆ,ಶ್ರೀರಾಮನ ಜೀವನಲ್ಲಿ ತುಂಬಿದ್ದು ಬೇನೆಗೋ ಮಾಂತ್ರ. ರಾಮನ ಅವತಾರ ಆದ್ದದು ಕೇವಲ ರಾಕ್ಷಸ ಸಂಹಾರಕ್ಕೆ ಮಾಂತ್ರ ಅಲ್ಲ, ಮಾನವರಾಗಿ ನಾವೆಲ್ಲ ಹೇಂಗೆ ಬಾಳ್ವೆ ಮಾಡೆಕ್ಕು, ಮಾನವಂದೇ ಸಾಧನೆಂದಲೇ ಹೇಂಗೆ ಮಾಧವತ್ವಕ್ಕೆ ಸಾಗುಲಕ್ಕು ಹೇಳುದರ ತೋರ್ಸಿಕೊಡುದು ಅವನ ಉದ್ದೇಶ ಆಗಿತ್ತು. ಶ್ರೀ ರಾಮನ ನಮ್ಮ ಹೃದಯಲ್ಲಿ ತುಂಬಿಗೊಂಡು ಆ ಆನಂದವ ಅನುಭವಿಸುದರಿಂದ ಬೇರೆ ಸುಖ ಈ ಲೋಕಲ್ಲಿ ಇಲ್ಲೆ”
ಹೇಳಿ ಹೇಳಿದವು.

ಹದಿನೆಂಟನೇ ಚಾತುರ್ಮಾಸ್ಯ ಸಂದರ್ಭಲ್ಲಿ ನಡದ ಶ್ರೀ ರಾಮಕಥೆಲಿ ವಿದ್ವಾನ್ ಸತ್ಯನಾರಯಣ ಶರ್ಮರಿಂಗೆ ಎಲ್ಲಾ ಪರ್ವಂಗಳ ಆದಿಲೂ, ಅಂತ್ಯಲ್ಲಿಯೂ ಆದಿಕಾವ್ಯವ ತನ್ನ ಶಿರಸ್ಸಿಲಿ ಧರಿಸಿ ಮೆರವಣಿಗೆಲಿ ತಪ್ಪ ಸೌಭಾಗ್ಯ ಯೋಗ ಸಿಕ್ಕಿದ್ದದು ಯೋಗ್ಯವಾಗಿಯೇ ಇತ್ತು.
ಶ್ರೀಗಳ ಪ್ರವಚನಕ್ಕೆ ತಕ್ಕ ಹಾಂಗೆ ಭಾವನೆಗಳ ಹೊಂದುಸುವ ರಾಗಂಗಳಲ್ಲಿ ಸಂಗೀತ ತಂಡದವರ ಸೇವೆ ಮುಖ್ಯವಾಗಿ ಇತ್ತು.
ತಂಡಲ್ಲಿ ಶ್ರೀಪಾದ ಭಟ್, ಪ್ರೇಮಲತಾ ದಿವಾಕರ್, ವಸುಧಾ ಶರ್ಮಾ, ಶ್ರೀಪಾದ ಭಟ್ ಇವರ ಗಾಯನ, ಪ್ರಕಾಶರ ವೇಣುವಾದನ, ನರಸಿಂಹ ಮೂರ್ತಿಯವರ ಮೃದಂಗ, ಗೋಪಾಲಕೃಷ್ಣ ಹೆಗಡೆಯವರ ತಬಲಾ ವಾದನಂಗೋ ಎಲ್ಲರ ಮನಸೂರೆಗೊಂಡಿದ್ದತ್ತು.
ಹವ್ಯಕ ಪ್ರತಿಭೆ ಶ್ರೀ ರಾಘವೇಂದ್ರ ಹೆಗಡೆಯವರ ಮರಳುಚಿತ್ರ ತುಂಬಾ ಲಾಯ್ಕಲ್ಲಿ ಬೆರಳುಗಳ ಓಡಾಟಲ್ಲಿ ಚಿತ್ತಾರ ಮಾಡಿದ್ದತ್ತು. ಪ್ರಖ್ಯಾತ ಕಲಾವಿದ° ಶ್ರೀ ಗಣಪತಿ ನೀರ್ನಳ್ಳಿಯವರ ಆಶುಚಿತ್ರಂಗೋ ರಾಮಕಥೆಗೆ ಬಣ್ಣದ ಮೆರುಗು ಕೊಟ್ಟಿದು.
ಇವರೆಲ್ಲರ ನೇತೃತ್ವ ವಹಿಸಿ ಎಲ್ಲರನ್ನೂ ಹೊಂದುಸಿ, ರಾಮಕಥೆಗೆ ಎಲ್ಲವನ್ನೂ ರೂಪಕ್ಕೆ ತಂದವ್ವು ನಮ್ಮ ವಿದ್ವಾನಣ್ಣ.
ನಾಟಕ ರೂಪಕಂಗಳ, ನಾಟ್ಯ ವೈವಿಧ್ಯಂಗಳ ವೇದಿಕೆಲಿ ಅವತರಿಸುಲೆ ಹಲವಾರು ಕಲಾವಿದರು ತುಂಬಾ ಶ್ರದ್ಧೆಲಿ ತಮ್ಮ ತಮ್ಮ ಸೇವೆ ಸಲ್ಲಿಸಿದ್ದವು. ನಾಟಕ ಅವತರಣಿಕೆ ಮಾಡುವಾಗ ಸಾಕ್ಷಾತ್ ಅದೇ ಕಾಲದ ಚಿತ್ರಣವ ಮಾಡಿ, ಸಿದ್ಧತೆಗಳ ಮಾಡಿದ್ದದು ಗಮನಾರ್ಹವೇ ಆಗಿದ್ದತ್ತು.
ವೇದಿಕೆಯ ಅಲಂಕಾರದ ಜವಾಬ್ದಾರಿ ಗುಡ್ಡೆ ದಿಂಬ ತಿಮ್ಮಪ್ಪ ತುಂಬಾ ಲಾಯ್ಕಲ್ಲಿ ಮಾಡಿದ್ದವು.

ನಿನ್ನೆ, ಹವ್ಯಕ ಮಹಾಮಂಡಲದ ಮಾತೃಶಾಖೆಯ ವತಿಂದ ಶ್ರೀಗುರುದೇವತಾಸೇವೆಯು ಸಮರ್ಪಿತ ಆತು.
ಸಾವಿರಾರು ಮಾತೆಯರಿಂದ ಸಾಮೂಹಿಕ ಕುಂಕುಮಾರ್ಚನೆ ನೆರವೇರಿತ್ತು.
ಶ್ರೀ ಮಠಲ್ಲಿ ಚಾತುರ್ಮಾಸ್ಯಲ್ಲಿ ಪೂರ್ಣಸೇವೆ ಮಾಡಿದ ಶ್ರೀಮತಿ ಗಾಯತ್ರೀಭಟ್ಟ ಕರಿಕ್ಕಳ, ಭಾರತೀ ಭಟ್ಟ ಪುತ್ತೂರು, ವಿಜಯಲಕ್ಷ್ಮಿ ಭಟ್ ಕಾಂಚನ ಮತ್ತೆ ಶ್ರಿಮತೀ ಸುಶೀಲಾ ಇವರ ಎಲ್ಲರ ಚಾತುರ್ಮಾಸ್ಯದ ಧರ್ಮಸಭೆಲಿ ಸಮ್ಮಾನ ಮಾಡಿ ಗೌರವಿಸಿದವು.
ಶ್ರೀಗುರುಗೋ ಧರ್ಮಸಭೆಲಿ ಆಶೀರ್ವಚನಮಂತ್ರಾಕ್ಷತೆಗಳ ಅನುಗ್ರಹಿಸಿದವು.

ವರದಿ: ವಿದ್ವಾನ್ ಸತ್ಯನಾರಾಯಣ ಶರ್ಮಾ
ಹವ್ಯಕಕ್ಕೆ: ಶ್ರೀಮತಿ ಶ್ರೀದೇವಿ ವಿಶ್ವನಾಥ್ (ಶ್ರೀ ಅಕ್ಕ°)

ರಾಮಕಥೆಯ ಕೆಲವು ಪಟಂಗೊ:

ಶ್ರೀಅಕ್ಕ°

   

You may also like...

12 Responses

 1. ಅಯೋಧ್ಯೆಯ ರಾಮನ ಕಥೆಯ “ರಾಮಕಥೆ”ಯಾಗಿ ಅಶೋಕೆಲಿ ತೋರುಸಿ, ಸೇರಿದ ಎಷ್ಟೋ ರಾಮಸೇವಕರಿಂಗೆ ಭಕ್ತಿಯ ಅನುಭವ ಕೊಟ್ಟ ಆ ಮಹತ್ಕಾರ್ಯಕ್ಕೆ ಮನಸಾ ನಮನಂಗೊ.
  ರಾಮಕಥೆಯ ಮೃಷ್ಟಾನ್ನ ಒಂದಿಷ್ಟೂ ಬೊಡಿಯದ್ದ ಹಾಂಗೆ ಹಲವು ಬಗೆಯ ಕಲಾಭಕ್ಷ್ಯಂಗಳನ್ನೂ ಒಟ್ಟೊಟ್ಟಿಂಗೆ ಸಂಯೋಜನೆ ಮಾಡಿದ ವೆವಸ್ಥೆ ತುಂಬ ಕೊಶಿ ಆತು.
  ಜೆನಂಗಳ ಸಹಕಾರ ಎಷ್ಟು ಲಾಯಿಕಾಯಿದು ಹೇಳ್ತ ಸಂಗತಿ – ಶುದ್ದಿಗೆ ಅಂಟುಸಿದ ಪಟಂಗಳ ನೋಡಿರೇ ಗೊಂತಾವುತ್ತು.
  ವರದಿ ಕಳುಗಿದ ಸತ್ಯನಾರಾಯಣ ಶರ್ಮರಿಂಗೂ, ಬೈಲಿಂಗೆ ಹೇಳಿದ ಶ್ರೀಅಕ್ಕಂಗೂ ವಂದನೆಗೊ.

  ಇನ್ನಾಣ ರಾಮಕಥೆಯ ನೋಡುವ ತವಕಲ್ಲಿ…

 2. ರಾಮಚಂದ್ರ ಭಟ್ಟ ಅಗ್ನಿಹೋತ್ರಿ says:

  ತಿಳಿಶಿದ ಶುದ್ದಿ ಲಾಯಕಕ್ಕೆ ಇದ್ದು.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *