Oppanna.com

9-ಜೂನ್-2016: ಶ್ರೀ ಭಾರತೀ ಕಾಲೇಜಿಲ್ಲಿ ಶ್ರೀ ಗುರುಗೊ

ಬರದೋರು :   ಬೊಳುಂಬು ಮಾವ°    on   09/06/2016    4 ಒಪ್ಪಂಗೊ

ಬೊಳುಂಬು ಮಾವ°

ಮಂಗಳೂರು ನಂತೂರಿಲ್ಲಿಪ್ಪ ಶ್ರೀ ಭಾರತೀ ಕಾಲೇಜಿಲ್ಲಿ ಬಿ.ಎಸ್.ಸಿ.ಪದವಿ ವಿಭಾಗ ಮತ್ತೆ ಹೊಸ ಪ್ರಯೋಗಶಾಲೆಗಳ ಉದ್ಘಾಟನಾ ಸಮಾರಂಭ ಇಂದು, 09.06.2016 ರಂದು ನಮ್ಮ ಶ್ರೀಗುರುಗಳ ದಿವ್ಯ ಉಪಸ್ಥಿತಿಲಿ ನೆಡದತ್ತು.

ನಿನ್ನೆ ಕತ್ಲಪ್ಪಗ ೫.೩೦ಕ್ಕೆ ಗುರುಗೊ ಆಗಮಿಸಿದವು. ೬.೩೦ಕ್ಕೆ ಶ್ರೀ ಕರಾರ್ಚಿತ ಪೂಜೆ ನೆಡದತ್ತು. ಇರುಳು ಎಂಟುಗಂಟಗೆ ಶ್ರೀ ಗುರುಗೊ ಶ್ರೀ ಶಂಕರಾಚಾರ್ಯ ವಿರಚಿತ ಸಾಧನಾ ಪಂಚಕವ ನೆಡಶಿಕೊಟ್ಟವು. ಇದರಲ್ಲಿ ಅವು ಸತ್ಯದ ಮಹತ್ವವ ವಿಧ ವಿಧದ ತಮಾಶೆಯ ಕಥಗಳ ಮೂಲಕ ಪ್ರಸ್ತುತ ಪಡಿಸಿದವು.

ಇಂದು ಉದಿಯಪ್ಪಗ ಶ್ರೀಗುರುಪಾದುಕಾ ಪೂಜೆ, ಹತ್ತು ಗಂಟಗೆ ಶ್ರೀ ಕರಾರ್ಚಿತ ಪೂಜೆ, ಆದಿತ್ಯ ಹೃದಯ ಹವನಂಗೊ ಶಂಕರಶ್ರೀ ಸಭಾಂಗಣಲ್ಲಿ ಜರಗಿತ್ತು.

ಆಮೇಲೆ, ಭಾರತೀ ಕಾಲೇಜಿನ ಬಿಎಸ್ಸಿ, ವಿಭಾಗ ಹಾಂಗೂ ನೂತನ ಪ್ರಯೋಗಶಾಲೆಗಳ ಉದ್ಘಾಟನೆ ಶ್ರೀಗುರುಗಳ ಸಮ್ಮುಖಲ್ಲಿ ಆತು.

ಲೋಕ ಸಭಾಸದಸ್ಯ, ಶ್ರೀ ನಳಿನ್ ಕುಮಾರ್ ಕಟೀಲ್, ಮಂಗಳೂರು ವಿಶ್ವವಿದ್ಯಾನಿಲಯದ ಮಾನ್ಯ ಉಪಕುಲಪತಿ, ಪ್ರೊ.ಕೆ.ಭೈರಪ್ಪ, ಡಾ.ಕಲ್ಲಡ್ಕ ಪ್ರಭಾಕರ ಭಟ್, ಕರ್ಣಾಟಕ ಬ್ಯಾಂಕಿನ ಅಧ್ಯಕ್ಷ, ಶ್ರೀ ಜಯರಾಮ ಭಟ್, ಬೆಂಗಳೂರಿನ ಎಜುಟೆಲ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಶ್ರೀ ಹರ್ಷ ಮಹಾಬಲ ಅತಿಥಿಗಳಾಗಿ ಬಂದಿದ್ದವು.

ದೀಪ ಪ್ರಜ್ವಲನ ಮಾಡುವುದರ ಒಟ್ಟಿಂಗೆ ಕೆಮಿಸ್ಟ್ರಿ, ಫಿಸಿಕ್ಸ್ ಲ್ಯಾಬಿಲ್ಲಿ ಕೆಲವು ವಿಶೇಷ ವಿಜ್ಞಾನ ಪ್ರಯೋಗಂಗಳ ಮಾಡಿ ಉದ್ಘಾಟನೆ ಮಾಡಿದ್ದು ಎಲ್ಲೋರಿಂಗೂ ಕೊಶಿ ಕೊಟ್ಟತ್ತು.
ಪ್ರಯೋಗ ಶಾಲೆಗಳ ಪ್ರಾಯೋಜಕತ್ವವ ಕಲ್ಕತ್ತಾದ ಇಮಾಮಿ ಫೌಂಡೇಶನ್ ಅವು ವಹಿಸಿ ಕೊಂಡದರ ನೆನಸಿಕೊಂಡವು.

ಕಾಲೇಜಿನ ನಾಲ್ಕನೆ ಮಾಳಿಗೆಲಿಪ್ಪ ದೊಡ್ಡ ಸಭಾಂಗಣಲ್ಲಿ ಸಭಾ ಕಾರ್ಯಕ್ರಮ ನೆಡದತ್ತು. ಕಾಲೇಜಿನ ಆಢಳಿತ ಕಮಿಟಿಯ ಡಾ.ರಾಜೇಂದ್ರ ಪ್ರಸಾದ್, ಡಾ.ಜತ್ತಿ ಈಶ್ವರ ಭಟ್, ಶ್ರೀಕೃಷ್ಣ ಭಟ್ ನೀರಮೂಲೆ, ಶಾರದಕ್ಕ, ಗಣೇಶ್ ಮೋಹನ್ ಕಾಶೀಮಠ, ಸ್ಥಳದಾನ ಮಾಡಿದ ಶ್ರೀ ಎನ್.ಜಿ.ಮೋಹನ್ ಮೊದಲಾದವು ಉಪಸ್ಥಿತರಿದ್ದಿದ್ದವು.

ನಮ್ಮ ಮಹಾ ಸಂಸ್ಥಾನದ ಆಶ್ರಯಲ್ಲಿ ನೆಡೆತ್ತಾ ಇಪ್ಪ ನಮ್ಮದೇ ಆದ ಭಾರತೀ ಸಮೂಹ ಸಂಸ್ಥೆಗೆ ತನು ಮನ ಧನದ ರೂಪಲ್ಲಿ ನಮ್ಮ ಸಹಾಯ ಖಂಡಿತಾ ಬೇಕು.

ಆನು ತೆಗದ ಕೆಲವು ಫೊಟೋಂಗಳ ಇಲ್ಲಿ ನೇಲುಸಿದ್ದೆ. ದಯೆ ಮಡಗಿ ಒಪ್ಪಕೊಡಿ.

4 thoughts on “9-ಜೂನ್-2016: ಶ್ರೀ ಭಾರತೀ ಕಾಲೇಜಿಲ್ಲಿ ಶ್ರೀ ಗುರುಗೊ

  1. ಎಲ್ಲವೂ ಒಂದರಿಂದ ಒಂದು ಸರಿಯಾಗಿ ಬೈಂದು ತಿಳಿಸಿದ್ದಕ್ಕೆ ಧನ್ಯವಾದಗ್ಗೊ.

  2. ಚೆಂದದ ವರದಿ. ಅದಕ್ಕಿಂತ ಚೆಂದದ professional ಫೊಟೋ. ಬಾರೀ ಲಾಯಕ ಆಯಿದು

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×