Oppanna.com

ಕಾಶೀ ವಿಶ್ವನಾಥಾಷ್ಟಕಮ್

ಬರದೋರು :   ಬಟ್ಟಮಾವ°    on   28/07/2011    14 ಒಪ್ಪಂಗೊ

ಬಟ್ಟಮಾವ°

ಆದಿ ಗುರು ಶಂಕರಾಚಾರ್ಯರು, ಕಾಶೀ ಕ್ಷೇತ್ರಕ್ಕೆ ಭೇಟಿ ನೀಡಿದ ಸಂದರ್ಭಲ್ಲಿ ಗಂಗಾನದೀ ದಂಡೆಲಿಪ್ಪ ವಾರಣಾಸಿ ಶ್ರೀ ವಿಶ್ವನಾಥನ ಬಣ್ಣಿಸಿ ಬರದ ಕೃತಿಯೇ ವಿಶ್ವನಾಥಾಷ್ಟಕಮ್.
ಶಿವನ ನಿರ್ಗುಣರೂಪವ ಈ ಸ್ತೋತ್ರಲ್ಲಿ ವರ್ಣನೆ ಮಾಡಿದ್ದವು.
ಈ ಸ್ತೋತ್ರದ ಪಠಣ ಮಾಡಿದರೆ ವಿದ್ಯೆ, ಬುದ್ಧಿ, ಆಯುರಾರೋಗ್ಯ, ಕೀರ್ತಿ, ಎಲ್ಲವೂ ಇಹಲ್ಲಿ ಸಿಕ್ಕಿ ಪರಲ್ಲಿ ಮೋಕ್ಷಕ್ಕೆ ಕಾರಣ ಆವುತ್ತು ಹೇಳಿ ಇದರ ಫಲಶ್ರುತಿಲಿ ಹೇಳ್ತವು.

ಶ್ರೀ ಶಂಕರಾಚಾರ್ಯ ವಿರಚಿತ ಕಾಶೀ ವಿಶ್ವನಾಥಾಷ್ಟಕಮ್ :

ಗಂಗಾತರಂಗ-ರಮಣೀಯ-ಜಟಾಕಲಾಪಂ
ಗೌರೀನಿರಂತರ-ವಿಭೂಷಿತ-ವಾಮಭಾಗಮ್ |
ನಾರಾಯಣಪ್ರಿಯಮನಂಗಮದಾಪಹಾರಂ
ವಾರಾಣಸೀಪುರಪತಿಂ ಭಜ ವಿಶ್ವನಾಥಮ್ ||1||

ವಾಚಾಮಗೋಚರಮನೇಕಗುಣಸ್ವರೂಪಂ
ವಾಗೀಶ-ವಿಷ್ಣು-ಸುರಸೇವಿತ-ಪಾದಪೀಠಮ್ |
ವಾಮೇನ ವಿಗ್ರಹವರೇಣ ಕಲತ್ರವಂತಂ
ವಾರಾಣಸೀಪುರಪತಿಂ ಭಜ ವಿಶ್ವನಾಥಮ್ ||2||

ಭೂತಾಧಿಪಂ ಭುಜಗ-ಭೂಷಣ-ಭೂಷಿತಾಂಗಂ
ವ್ಯಾಘ್ರಾಜಿನಾಂಬರಧರಂ ಜಟಿಲಂ ತ್ರಿಣೇತ್ರಮ್ |
ಪಾಶಾಂಕುಶಾಭಯ ವರಪ್ರದ ಶೂಲಪಾಣಿಂ
ವಾರಾಣಸೀಪುರಪತಿಂ ಭಜ ವಿಶ್ವನಾಥಮ್ ||3||

ಶೀತಾಂಶು-ಶೋಭಿತ-ಕಿರೀಟ-ವಿರಾಜಮಾನಂ
ಭಾಲೇಕ್ಷಣಾನಲ-ವಿಶೋಷಿತ-ಪಂಚಬಾಣಮ್ |
ನಾಗಾಧಿಪಾ-ರಚಿತ-ಭಾಸುರ-ಕರ್ಣಪೂರಂ
ವಾರಾಣಸೀಪುರಪತಿಂ ಭಜ ವಿಶ್ವನಾಥಮ್ ||4||

ಪಂಚಾನನಂ ದುರಿತಮತ್ತಮತಂಗಜಾನಾಂ
ನಾಗಾಂತಕಂ ದನುಜಪುಂಗವ-ಪನ್ನಗಾನಾಮ್|
ದಾವಾನಲಂ ಮರಣ-ಶೋಕ-ಜರಾಟವೀನಾಂ
ವಾರಾಣಸೀಪುರಪತಿಂ ಭಜ ವಿಶ್ವನಾಥಮ್ ||5||

ತೇಜೋಮಯಂ ಸಗುಣ-ನಿರ್ಗುಣಮದ್ವಿತೀಯಮ್
ಆನಂದಕಂದಮಪರಾಜಿತಮಪ್ರಮೇಯಮ್ |
ನಾದಾತ್ಮಕಂ ಸಕಲ-ನಿಷ್ಕಲಮಾತ್ಮರೂಪಂ
ವಾರಾಣಸೀಪುರಪತಿಂ ಭಜ ವಿಶ್ವನಾಥಮ್ ||6||

ಆಶಾಂ ವಿಹಾಯ ಪರಿಹೃತ್ಯ ಪರಸ್ಯ ನಿಂದಾಂ
ಪಾಪೇ ರತಿಂ ಚ ಸುನಿವಾರ್ಯ ಮನಃ ಸಮಾಧೌ |
ಆದೌ ಸ್ವಹೃತ್ಕಮಲಮಧ್ಯಗತಂ ಪರೇಶಂ
ವಾರಾಣಸೀಪುರಪತಿಂ ಭಜ ವಿಶ್ವನಾಥಮ್ ||7||

ರಾಗಾದಿದೋಷರಹಿತಂ ಸ್ವಜನಾನುರಾಗಂ
ವೈರಾಗ್ಯಶಾಂತಿನಿಲಯಂ ಗಿರಿಜಾಸಹಾಯಮ್ |
ಮಾಧುರ್ಯ-ಧೈರ್ಯ-ಸುಭಗಂ ಗರಲಾಭಿರಾಮಂ
ವಾರಾಣಸೀಪುರಪತಿಂ ಭಜ ವಿಶ್ವನಾಥಮ್ ||8||

ಫಲಶ್ರುತಿಃ :

ವಾರಾಣಸೀ ಪುರಪತೇ ಸ್ತವನಂ ಶಿವಸ್ಯ
ವ್ಯಾಖ್ಯಾತಮಷ್ಟಕಮಿದಂ ಪಠತೇ ಮನುಷ್ಯ|
ವಿದ್ಯಾಂ ಶ್ರಿಯಂ ವಿಪುಲಸೌಖ್ಯಮನಂತ ಕೀರ್ತಿಮ್
ಸಂಪ್ರಾಪ್ಯ ದೇಹವಿಲಯೇ ಲಭತೇ ಚ ಮೋಕ್ಷಮ್ ||

ವಿಶ್ವನಾಥಾಷ್ಟಕಮಿದಂ ಯಃ ಪಠೇತ್ ಶಿವ ಸನ್ನಿಧೌ |
ಶಿವಲೋಕಮವಾಪ್ನೋತಿ ಶಿವೇನ ಸಹ ಮೋದತೇ ||

ಸೂ:
ಇದೇ ಶ್ಲೋಕವ ಎಸ್ಪೀಬಾಲಣ್ಣಬಾವ ರಾಗಲ್ಲಿ ಹೇಳ್ತರ ಕೇಳೇಕಾರೆ ಇಲ್ಲಿದ್ದು:

14 thoughts on “ಕಾಶೀ ವಿಶ್ವನಾಥಾಷ್ಟಕಮ್

  1. ಪದ್ಯ ರಾಗ ಇದ್ದು ಬಟ್ಟಮಾವ.

    { ಮಾಧುರ್ಯ-ಧೈರ್ಯ-ಸುಭಗಂ… }
    ಈ ಶ್ಲೋಕ ಬರವಗಳೇ ಸುಬಗಣ್ಣ ಇದ್ದಿದ್ದನಾ?
    ಎನ್ನ ಹೆಸರಿಪ್ಪ ಶ್ಲೋಕ ಯಾವಗ ಕೊಡ್ತಿ ಬೈಲಿಂಗೆ? 😉

  2. ಬಟ್ಟಮಾವ°,

    ಅಷ್ಟಕ ಲಾಯ್ಕಾತು ಬೈಲಿಲಿ ಬಂದದು. ಶಂಕರಾಚಾರ್ಯರ ಅಪೂರ್ವ ಕೃತಿಗಳಲ್ಲಿ ಇದುದೇ ಒಂದಲ್ಲದಾ!!
    ಶಿವನ ರೂಪವ ಎಷ್ಟು ವಿಧಲ್ಲಿ ಆಚಾರ್ಯರು ವರ್ಣಿಸಿದ್ದವು. ಪ್ರತಿಯೊಂದರಲ್ಲಿಯೂ ನವಗೆ ಅವನ ಬೇರೆ ಬೇರೆ ರೂಪವೇ ಕಂಡ ಹಾಂಗೇ ಆವುತ್ತು.

    ಕೇಳುಲೆ ಒಟ್ಟಿಂಗೆ ಕೊಟ್ಟ ಕಾರಣ ಆನು ಅಷ್ಟಕವ ‘ಹೇಳೆಕ್ಕು’ ಹೇಳಿ ಇಲ್ಲೆ ಅಲ್ಲದಾ? 😉 😉

  3. ಬಟ್ಟಮಾವ೦ಗೆ ಧನ್ಯವಾದ..ಈ ಅಷ್ಟಕವ ಭರತನಾಟ್ಯಲ್ಲಿ ಮಾಡುದರ ಎನ್ನ ಗುರುಗೊ ಹೇಳಿಕೊಟ್ಟಿತ್ತಿದ್ದವು. ಭಾರಿ ಖುಶಿಯಾಗಿತ್ತಿದ್ದು..ಈಗ ಅದೇ ಅಷ್ಟಕವ ಇಲ್ಲಿ ಓದಿ, ಕೇಳಿ ಅಷ್ಟೇ ಖುಶಿ ಆತು.ಅ೦ದು ಕಲ್ತದು ನೆನಪ್ಪಾತು

  4. ಕಾಶೀ ವಿಶ್ವನಾಥಾಷ್ಟಕಂ ಓದಿ ಬೈಲಿನವರಿಂಗೆಲ್ಲೋರಿಂಗುದೇ ಆಯುರಾರೋಗ್ಯ ಕೀರ್ತಿ ಸಿಕ್ಕಲಿ ಹೇಳಿ ಆಶೀರ್ವಾದ ಮಾಡಿ ಭಟ್ಟಮಾವ.

  5. ಬಟ್ಟಮಾವ೦ಗೆ ಇಲ್ಲಿ೦ದಲೇ ಕಾಲು ಹಿಡಿತ್ತೆ..
    ಧನ್ಯವಾದ೦ಗೊ

  6. ಈ ಸ್ತೋತ್ರ ” ಸ್ತವಕುಸುಮಾಂಜಲಿ”( ಶ್ರೀ ರಾಮಕ್ರಷ್ಣ ಆಶ್ರಮ, ಮೈಸೂರು – ಪ್ರಕಟಣೆ) ಪುಸ್ತಕಲ್ಲಿ ಇದ್ದು, ಆದರೆ ಕ್ರತಿಕಾರನ ಹೆಸರು ” ವ್ಯಾಸ” ಹೇಳಿ ಬರದ್ದವು ! ಬಟ್ಟಮಾವ ಹೇಳಿದ ಹಾಂಗೆ ಇದು ಶಂಕರಕ್ರತಿಯೇ.
    ಈ ಪುಸ್ತಕಲ್ಲಿ ಸುಮಾರು ತೊಂಬತ್ತು ಸ್ತೋತ್ರಂಗೆ ಕನ್ನಡ ಅನುವಾದ ಸಹಿತ ಇದ್ದು – ಆಸಕ್ತರಿಂಗೆ ಸಂಗ್ರಹ ಯೊಗ್ಯ ಪುಸ್ತಕ.

  7. ತುಂಬಾ ತುಂಬಾ ಧನ್ಯವಾದಂಗೊ…ಎನ್ನ ಅತ್ಯಂತ ಪ್ರಿಯ ಅಶ್ಟಕ

  8. ಒಂದು ಅಪರೂಪದ ಅಷ್ಟಕವ, ಅದರೊಟ್ಟಿಂಗೆ ಎಸ್ಪೀಬಿಯ ಧ್ವನಿಯನ್ನೂ ಕೊಟ್ಟ ಭಟ್ಟ ಮಾವಂಗೆ ಧನ್ಯವಾದಂಗೊ

  9. ಬೈಲಿಂಗೆ ಅಷ್ಟಕವ ಕೊಟ್ಟ ಬಟ್ಟಮಾವಂಗೆ ಧನ್ಯವಾದಂಗೊ.

  10. ಇದು ಅಮೂಲ್ಯ ಸಂಗ್ರಹವೇ ಅಪ್ಪು. ಬಟ್ಟಮಾವಂಗೆ ಧನ್ಯವಾದ.

  11. ಬೈಲಿನ ಅಮೂಲ್ಯ ಸಂಗ್ರಹಕ್ಕೆ ರಮಣೀಯ ಮಣಿಯೊಂದು ಪೋಣಿಸಿದ ಹಾಂಗೆ ಆತಿದಾ. ಬಟ್ಟಮಾವಂಗೆ ಧನ್ಯವಾದ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×