Oppanna.com

ಮಾಣಿ ಮಠಲ್ಲಿ ಗುರುಗೊ

ಬರದೋರು :   ಮಂಗ್ಳೂರ ಮಾಣಿ    on   18/11/2011    28 ಒಪ್ಪಂಗೊ

ಮಂಗ್ಳೂರ ಮಾಣಿ

ಬೈಲಿಂಗೆ ನಮಸ್ಕಾರ. 🙂

.

ಕಾಣೆ ಆದವರ ಹೆಸರಿನೊಟ್ಟಿಂಗೆ ಎನ್ನ ಹೆಸರು ಹಾಕುವ ಮದಲೇ ಬಂದಿಕ್ಕುವೊ° ಹೇಳಿ ಆತು.
ನಿನ್ನ ಎಂತ ಕಾಣ್ತಿಲ್ಲೆ ಹೇಳಿ ಶರ್ಮಪ್ಪಚ್ಚಿಯೂ, ಡಾಮಹೇಶಣ್ಣಾನೂ ಕೇಳಿಗೊಂಡಿತ್ತಿದ್ದವು. ಪರೀಕ್ಷೆ ಎಡಕ್ಕಿಲ್ಲಿ ಬಪ್ಪಲಾಯಿದಿಲ್ಲೆ. ಕ್ಷಮೆಯಿರಲಿ,
ಈಗ ಬಂದ ವಿಷಯ ಎಂತ ಗೊಂತಿದ್ದಾ?
ನಮ್ಮ ಮಠದ ಮೇಳ ಇಂದಿಂದ ಶುರು ಇದಾ? ಹಾಂಗೆ ಇಂದು ಹೊತ್ತೋಪಗ ಹೆಜ್ಜೆ ಕಟ್ಟುದಡ.
ಇಂದು ಹೆರಟ ಮೇಳ ಮಂಗ್ಳೂರು ಮತ್ತೆ ಇನ್ನೊಂದು ಹತ್ತಿಪ್ಪತ್ತು ಊರು ತಿರುಗಿ ತಿರುಗಿ ಸುಮಾರು ದಿನ ಕಳುದು ಮತ್ತೆ ಗೆಜ್ಜೆ ಬಿಚ್ಚುದಡ. ಇರಳಿ.
.

ನಿನ್ನೆ ಹೊತ್ತೋಪಗಂಗೆ ಪರೀಕ್ಷೆಗೊ ಎಲ್ಲ ಮುಗುದತ್ತು. ನವೆಂಬರ್ ೧೫ರ ನಂತರ ಚಿಂತೆಗಳೆಲ್ಲ ದೂರವಾಗಲಿದೆ ಹೇಳಿ ವರ್ಷ ಭವಿಷ್ಯಲ್ಲಿ ಇತ್ತಿದ್ದು. ಅವಕ್ಕೆ ಹೇಂಗೆ ಗೊಂತಾತೋ ಏನೋ? ಪರೀಕ್ಷೆಗೊ ಮುಗಿತ್ತು ಹೇಳಿ..

.

ಹಾಂಗೆ ಪರೀಕ್ಷೆ ಎಲ್ಲ ಮುಗುದ ಖುಶಿಗೆ ಆನುದೇ ರಾಕೇಶ° ಹೇಳಿ ಒಬ್ಬ ದೋಸ್ತಿದೇ ಸೇರಿಂಡು ಮಾಣಿ ಮಠಕ್ಕೆ ಹೋಪದು ಹೇಳಿ ನಿರ್ಧಾರ ಮಾಡಿದೆಯ°. 🙂
ಹಾಂಗೆ, ಇಂದು ಉದಿಯಪ್ಪಗಳೇ ವಸ್ತ್ರ ಶಾಲು ತೆಕ್ಕೊಂಡು ಹೆರಟದೇ ಮಾಣಿ ಮಠಕ್ಕೆ.
ಆನು ಮಂಗ್ಳೂರಿಂದ – ಅವ° ಉಪ್ಪಿನಂಗಡಿಂದ,
ಮಾಣಿಲಿ ಇಳುದು ರಜಾ ನಡೆಕಾತು, ಮಠಕ್ಕೆ ತಿರುಗುವ ತಿರುಗಾಸಿಲ್ಲಿ ಅವ° ಸಿಕ್ಕುತ್ತೆ ಹೇಳಿತ್ತಿದ್ದ°
ಸುಮಾರು ೮.೩೦ರ ಹೊತ್ತಿಂಗೆ ಸೇರಿಯೋಂಡೆಯ°. ತಿರುಗಾಸಿಲ್ಲಿ ರಜ್ಜ ಒಳನೆಡದರೆ ಗೋಶಾಲೆ ಮತ್ತೆ ರಜಾ ಮುಂದೆ ಹೋದರೆ ನಮ್ಮ ಪೂರ್ವ ಗುರುಗಳ ಸ್ಮರಣಾರ್ಥ ಇಪ್ಪ ವೃತ್ತ, ಅದು ಕಳುದಕೂಡಲೇ ಮಠದ ಗೇಟು..

ಮಾಣಿ ಮಠದ ಗೋಶಾಲೆಲಿ
ರಜ್ಜಾ ಜೆನ ಸೇರಿತ್ತಿದ್ದವು,
ಅಲ್ಲಲ್ಲಿ ಅರಶಿನ ಶಾಲು ವಸ್ತ್ರ ಸುತ್ತಿದವು ಇತ್ತಿದ್ದವು. ಒಳಹೋಗಿ ದೇವರಿಂಗೆ ನಮಸ್ಕಾರ ಮಾಡಿ, ಅಂಗಿ ಬಿಚ್ಚಿ ಅಪ್ಪಷ್ಟರಲ್ಲಿ ಉದಿಯಪ್ಪಗಾಣ ಪೂಜೆಗೆ ಒಬ್ಬೊಬ್ಬರೇ ಕೂಪಲೆ ಸುರುಮಾಡಿಯೋಂಡಿತ್ತಿದ್ದವು. ಇನ್ನು ಮೇಲೆ ಕೆಳ ನೋಡಿಯೊಂಡಿದ್ದರೆ ಜಾಗೆ ಸಿಕ್ಕ ಹೇಳಿದ್ದು – ಹೋಗಿ ಕೂದ್ದೇ.
.
.
ಸರೀ ೯ ಗಂಟೆಗೆ ಪೂಜೆ ಸುರು.
ಅಂದು ಒಂದರಿ ಒಪ್ಪಣ್ಣ ಹೇಳಿದ್ದಿದ್ದ° ವಿರಾಟ್ ಪೂಜೆಯ ಸಮಯಲ್ಲಿ, ನೆಂಪಿದ್ದ?
ಇಂದೂ ಅದೇ ಗಾಂಭೀರ್ಯ, ಚೆಂದ.
ಪ್ರಶಾಂತ ಪರಿಸರಲ್ಲಿ, ಒಂದರಿಯಂಗೆ ಶಂಖ ಜಾಗಟೆಗಳ ಮಧುರ ಧ್ವನಿ, ಅದು ಮಾತ್ರ, ಕೇಳುತ್ತ ಇಪ್ಪವ್ವೆಲ್ಲ ಸುಶುಪ್ತಿಗೆ ಹೋಪ ಹಾಂಗೆ.
ಬಾಗಿಲು ತೆಗದವು, ಬರೇ ದೀಪದ ಬೆಣಚ್ಚಿಲಿ ಆರಾಧ್ಯ ದೇವತೆಗೊ ತುಂಬ ಚೆಂದ ಕಂಡೊಂಡಿತ್ತಿದ್ದವು.
ಭಾವಿಸಿದವಕ್ಕೆ ಒಂದರಿ ಎಲ್ಲ ೭ ಚಕ್ರಂಗೊ ತೆಗಕ್ಕೊಂಡು ಅದಮ್ಯ ಶಕ್ತಿಯ ಪ್ರವಾಹವೇ ಒಳಾ ನುಗ್ಗಿದ ಹಾಂಗೆ ಆದಿಕ್ಕು. ಬೆಶಿಯೂ – ತಂಪೂ ಒಟ್ಟಿಂಗೇ ಆದ ಹಾಂಗೆ.
ತುಂಬ ಶಾಂತಿ :):)
ಅದರ ಶಬ್ದಲ್ಲಿ ಹೇಳ್ಲೆ ಎಡಿಯ ಅಲ್ಲದೋ?
ಪೂಜೆ ಸುರು ಆತು, ಮಾಣಿಯೂ ಸ್ವರ ಸೇರ್ಸಿದ° – ಅಷ್ಟಕ್ಕೆ ತಕ್ಕ ಬತ್ತಿದಾ? 😉
ಪೂಜೆ ಇಡಿ, ಚೆಂದಕೆ ನೋಡ್ಲಾತು.
ಗುರುಗೊ ಮಾಡುವ ಅಲಂಕಾರದ ಬಗ್ಗೆ ಮಾತಿದ್ದೋ? ಭಾವ ಮಾತ್ರ . ರಾಮದೇವರು ಅಲ್ಲೇ ಇದ್ದ° ಹೇಳಿ ಆಯೆಕು, ಹಾಂಗೆ ಕಂಡೊಂಡಿತ್ತು..
.
.
ಸರೀ ೧೦ ಗಂಟೆಗೆ ಪೂಜೆ ಮುಗುತ್ತು. ಅಲ್ಲಿಂದಮತ್ತೆ ರಜ್ಜ ಮಾತಾಡಿಯೊಂಡು ಕೂದೆಯ°. ನಮ್ಮ ಮಠ, ಪೂರ್ವಾಚಾರ್ಯರು, ೨೦೧೨-೧೪-೧೮-೨೦, ಈಗಾಣ ಜೀವನ ಶೈಲಿ, ೭ ಆಮ್ ಅರಿವು ಸಿನೆಮಾ, ಇದೆಲ್ಲ ಬಂತು.. ಸರೀ ೧೨ ಗಂಟೆಗೆ ಗುರುಗೊ ಧರ್ಮಸಭೆಗೆ ಬಂದವು, ದೋಡಾ ಪೂಜೆ – ಷಷ್ಠ್ಯಬ್ದಿ ಎಲ್ಲ ಆಗಿಯೊಂಡಿತ್ತು. ಅದಕ್ಕೆಲ್ಲ ಆಶೀರ್ವಾದ ಮಾಡಿ, ಪೂರ್ಣಾಹುತಿ ಆಗಿ ಗುರುಗೊ ಪೀಠಲ್ಲಿ ಕೂದವು.
ರಾಮ ಕಥೆಯ DVD ಬಿಡುಗಡೆ ಆತು – ಶ್ರೀಮತಿ ಶಾರದಾ ಜಯಗೋವಿಂದ್ ಮಾತಾಡಿದವು, ಮತ್ತೆ ಗುರುಗಳ ಆಶೀರ್ವಚನ,
.****
” ಹರೇ ರಾಮ
ನಾಯಕತ್ವ ಮತ್ತು R.S. Hegdeಯವರ ಬಗೆಗೆ : ಮಾಣಿ ಮಠಕ್ಕೂ ಮಾತೆಯರಿಗೂ ಹನುಮಂತ ದೇವರಿಗೂ ನೇರ ಸಂಬಂಧವಿದೆ.
R.S. Hegde ಗೆ ೬೦ ತುಂಬಿತು, ೬೦ ಎಂಬುದು ಅರಳುವ – ಮರಳುವ ಸಮಯ. ಎಲ್ಲರಿಗಿಂತ ಗುರು ಹೆಚ್ಚು ಎಂಬ ಭಾವದವರು, ಹವ್ಯಕ ಮಂಡಲದ ಅಧ್ಯಕ್ಷರಾದ ಮೇಲೆ ಸಿದ್ದಾಪುರವಾದರೇನು? ಮಂಗಳೂರಾದರೇನು? ಎಂಬ ಭಾವ ಅವರದ್ದು. ಬಂಧುಗಳೆಲ್ಲಾ ಕಡೆಯೂ ಇದ್ದಾರೆ. ಇವರಿಂದಾಗಿ ಹಲವಾರು ಬದಲಾವಣೆ ಬಂದಿದೆ.

ಪೂರ್ಣಾಹುತಿ, ಶ್ರೀ ಶ್ರೀ ರಾಘವೇಶ್ವರ ಸ್ವಾಮಿಗಳವರಿಂದ
.
ಒಂದು ಕಥೆ: ” ಒಬ್ಬನಿಗೆ ಒಂದು ಹುಚ್ಚು ಬಂತಂತೆ. ಏನು ಹುಚ್ಚೆಂದರೆ, ತನ್ನ ಮಗುವಿನ ಹಣೆಯ ಬರಹ ತಾನು ಬರೆಯಬೇಕೆನ್ನುವುದು. ಹಣೆಬರಹ ಬರೆಯುವ ಆ ಹೊತ್ತಿನಲ್ಲಿ ನಾನು ಬ್ರಹ್ಮನಾಗಿರಬೇಕು ಎನ್ನುವುದು, ತಪಸ್ಸು ಮಾಡಿದ – ಬ್ರಹ್ಮ ಬಂದಾಗ ಕೇಳಿದ.
ಬ್ರಹ್ಮದೇವರು ಹೇಳಿದರು “ಬ್ಯಾಡ ನಿನಗಿದು ನೀನಂದುಕೊಂಡ ಉದ್ದೇಶ ಸಾಧನೆ ಆಗ್ಲಿಕ್ಕಿಲ್ಲ.”
“ಇಲ್ಲ ಅದೇ ಕೊಡು” ಅವನೆಂದ.
“ಸರಿ” ಬ್ರಹ್ಮದೇವರು ಕೊಟ್ಟ್ರು ವರವನ್ನು,
ಹೆಂಡತಿ ಗರ್ಭಿಣಿ, ಶಿಶು ಜನನ ಆಗಬೇಕು, ಆ ಸಮಯದಲ್ಲಿ ಬ್ರಹ್ಮ ಪಟ್ಟ ಸಿಕ್ತು. ಬ್ರಹ್ಮದೇವರು ಸಿಂಹಾಸನ ಬಿಟ್ಟು ಕೆಳಗಿಳಿದ್ರು, ಈತ ಹೋಗಿ ಕೂತು ಆ ಕಿರೀಟ ಹಾಕಿಕೊಂಡಾಗ,
ದೊಡ್ಡ ಕಷ್ಟ…!
ಏಕೆಂದರೆ ಒಂದೇ ಕ್ಷಣದಲ್ಲಿ ಸಾವಿರಾರು ಶಿಶುಗಳ ಹಣೆ ಹುಟ್ತವೆ, ಆ ಕ್ಷಣದಲ್ಲಿ ಎಷ್ಟು ಶಿಶುಗಳು ಹುಟ್ತವೋ ಅವೆಲ್ಲವೂ ಬರ್ತವೆ, ಶಿಶು ಅಂದರೆ ಬರೀ ಮಾನವರು ಮಾತ್ರ ಅಲ್ಲ, ಪ್ರಾಣಿ, ಪಕ್ಶಿ, ಕ್ರಿಮಿ, ಕೀಟಗಳೆಲ್ಲವೂ ಬರ್ತವೆ.
ಗಾಬರಿಯಾಯ್ತಂತೆ ಇವನಿಗೆ,
ಯಾರು ಯಾರೆಂದೆ ತಿಳಿಯಲಿಲ್ಲ, ಯಾರು ತನ್ನ ಮಗ ಯಾರು ಬೇರೆ ಎಂದೇ ಗೊತ್ತಾಗಲಿಲ್ಲ,
“ಇದು ಹ್ಯಾಗೆ?”
“ಇದು ಹಾಗೇ, ನಿನಗಷ್ಟ ಬಂದಂತೆ ಬರೆಯಲು ಸಾಧ್ಯ ಇಲ್ಲ, ಅವರವರ ಭಾಗ್ಯದಂತೆ ಹಣೆಬರಹ, ನಿನ್ನ ಸ್ವಂತ ಬುಧ್ಧಿ ಉಪಯೋಗಿಸಲು ಸಾಧ್ಯವಿಲ್ಲ”
ಕೊನೆಗೂ ಅವನಿಗೆ ತನ್ನ ಮಗನ ಹಣೆಯಲ್ಲಿ ಏನು ಬರೆದದ್ದೆಂದು ತಿಳಿದುಕೊಳ್ಳಾಲು ಆಗಲೇ ಇಲ್ಲ.
ಪೀಠವೆಲ್ಲವೂ ಹಾಗೇ, ಹಾಗಲ್ಲದಿದ್ದರೆ ಪೀಠಕ್ಕೆ ಶೋಭೆಯಲ್ಲ, ಮಹಾಮಂಡಲದ ಅಧ್ಯಕ್ಷ ಸ್ಥಾನವೂ ಹಾಗೆಯೇ..
ಹಾಗೇ ಆಗಲಿ,
ತ್ಯಾಗ ಮನೋಭಾವವನ್ನು ಬೆಳೆಸಿಕೊಳ್ಳಿ. ಉತ್ತಮ ಚಿಂತನೆಯ ಮೂಲಕ ಸಮಾಜದ ಸೇವಕನಾಗುವ ಮೂಲಕ ದೊಡ್ಡವರೆನಿಸಿಕೊಳ್ಳಿ; ಹಣ, ಅನುಭವ, ಅಧಿಕಾರ ಮತ್ತು ವಯಸ್ಸಿನಿಂದ ಇನ್ನೊಬ್ಬರಿರೆ ಸಂತೋಷ ಕೊಡ್ಳಿಕ್ಕೆ ಆದರೆ ಮಾತ್ರ ಅವರು ದೊಡ್ಡವರು. ಹೆಚ್ಚು ಆನಂದ ಕೊಡಲು ಆದರೆ ಅದು ದೊಡ್ಡತನ.
R.S. Hegde  ಈಗಾಗಲೇ ಆಕೆಲಸ ಮಾಡ್ತಾ ಇದ್ದಾರೆ, ಇನ್ನೂ ಮುಂದುವರೆಯಲಿ, ಅಜಾತಶತ್ರು ಈಗಾಗಲೇ ಆಗಿದ್ದರೆ ಇವರು, ಗುಂಪಿನ ನಾಯಕತ್ವ ವಹಿಸುವವರು ಹೀಗಿರಬೇಕು, ಎಲ್ಲರಿಗೂ ಸರ್ವ ಸಮ್ಮತ ವ್ಯಕ್ತಿತ್ವವಾಗಿ, ಕುಂದು ಕೊರತೆ ಇಲ್ಲದಂತೆ ಇರಬೇಕು.
.
ರಾಮ ಕಥೆಯ DVDಯ ಬಗ್ಗೆ : DVD ಯಲ್ಲಿ ತುಂಬ ಚೆನ್ನಾಗಿ ರಾಮ ಕಥೆ ಮೂಡಿ ಬಂದಿದೆ, ರಾಮಾಯಣ ಎಲ್ಲರ ಜೀವನದಲ್ಲಿ ಬರಬೇಕು. ಮೂಲ ರಾಮಾಯಣದ ಆವಿರ್ಭಾವ ಮತ್ತೆ ಮನೆ ಮನಗಳಲ್ಲಿ ಆಗಬೇಕು. ಇದು ಸಮಾಜಕ್ಕೆ ಸಿಗಬೇಕು. ಇದು ನಮ್ಮನ್ನು ಗೊತ್ತಿರದ ಲೋಕಕ್ಕೆ ಕರೆದುಕೊಂಡು ಹೋಗುತ್ತಿದೆ, ಅಥವಾ, ಗೊತ್ತಿರುವ ಲೋಕಕ್ಕೆ ಕರೆದುಕೊಂಡು ಹೋಗುತ್ತಿದೆ, ನಮ್ಮ ಜೀವನದ ಅತಿ ಮುಖ್ಯ ಘಟ್ಟ ಯಾವುದೆಂದು ಯಾರಾದ್ರೂ ಕೇಳಿದರೆ, ನಾವು ಹೇಳುವುದು ಕಳೆದ ಚಾತುರ್ಮಾಸ್ಯದ ರಾಮಕಥೆಯ ಕೊನೆಯ ದಿನವನ್ನು, ಅಂದು ಅಲ್ಲಿದ್ದವರು ಪುಣ್ಯಾತ್ಮರು ಅವರು ಅಂದು ಪಡೆದುಕೊಂಡದ್ದನ್ನು ಮತ್ತಾರೂ ಎಂದಿಗೂ ಪಡೆಯಲು ಸಾಧ್ಯವಿಲ್ಲ.
ರಾಮ ಕಥೆಯನ್ನು ಉಳಿಸಿ ಬೆಳೆಸಲು ಮತ್ತು ಇದನ್ನು ಅಂದು ಕೇಳಲಾಗದವರಿಗೆ ಇಂದು ತಲುಪಿಸಲು ಇದರಿಂದ ಸಾಧ್ಯವಾಗ್ತಾ ಇದೆ. ರತ್ನಾಕರನೆಂಬ ಬೇಡ ಎಲ್ಲರಿಗೂ ಬೇಕಾದದ್ದು ಹೇಗೆ ಎಂಬ ಕಥೆ ಇದು. ನಾವೇ ಈ ಕಥೆ-ಹಾಡು-ಸಾಹಿತ್ಯದಲ್ಲಿ ಮೈಮರೆತದ್ದುಂಟು.
ಈವತ್ತು ನಮ್ಮ ಯಕ್ಷಗಾನ ಕಲಾವಿದರು ಅಗಸ್ತ್ಯ ಮಹರ್ಶಿಗಳ ಜೀವನದ ಕೆಲವು ಘಟನೆಗಳನ್ನ ಆಡಿ ತೋರಿಸಲಿಕ್ಕಿದ್ದಾರೆ, ತುಂಬ ಅಭಿಮಾನ ದಿಂದ ಹೇಳ್ತೇವೆ, ತುಂಬ ಚಂದಕೆ ಮಾಡ್ತಾರೆ ನಮ್ಮ ಕಲಾವಿದರು.
ನಿಮ್ಮೆಲ್ಲರಿಗೂ ಶ್ರೀ ರಾಮನ ಕರುಣೆ ಇರಲಿ.”
.***
ಅದಾಗಿ ಯೇವತ್ತಿನ ಹಾಂಗೆ ಫಲಸಮರ್ಪಣೆ-ಮೌನ ಮಂತ್ರಾಕ್ಷತೆ. ಮಾಣಿಯ ಕಣ್ಣಿಲ್ಲೆ ಗುರ್ತ ಹಿಡುದು ತುಂಬು ಪ್ರೀತಿಯ ನೆಗೆ ಮಾಡಿದವು..
ಏಪುಲು ಸಿಕ್ಕಿದ್ದರ ಕೋಟಿ ಪಾಲು ಖುಶಿ ಆತು..!!
ಫಲಸಮರ್ಪಣೆ ಆಗಿ ಮಂತ್ರಾಕ್ಷತೆಗೆ ಅಪ್ಪಗ ಪಕಳಕುಂಜ ಅಪ್ಪಚ್ಚಿ ಸಿಕ್ಕಿದವು ಚೆಂದಕೆ ಮಾತಾಡುಸಿದವು, ಮರುವಳ ನಾರಾಯಣ ಮಾವ ಸಿಕ್ಕಿದವು, ದೂರಲ್ಲಿ ಪುತ್ತೂರ ಪುಟ್ಟಕ್ಕನ ನೋಡಿದಾಂಗೆ ಆತು, ಮಾಣಿ ಕೇಳ್ಲೆ ಹೋಯೊದಾ° ಇಲ್ಲೆ…
ಹಶುವಾಗಿಯೊಂಡಿತ್ತಿದಾ, ಗಂಟೆ ೨.೩೦…!
.
.
.
.
ಊಟ ಹೇಳಿರೆ ಊಟ..!
ಸೌತ್ತೆ ಉಪ್ಪಿನ ಕಾಯಿ – ಬೀಟ್ರೋಟು ತಾಳು – ಟೊಮೆಟೋ ಸಾರು – ಕೊದಿಲು – ಮೇಲಾರ.
ಯೇವದೋ ಪಾಯಸ, ರುಚೀ ಇದ್ದ ಕಾರಣ ಮರದು ಹೋತು ೨-೨  ಸೌಟು ಹಾಕಿಸಿಹೊಂಡು ತಿಂದೆ. ಹೋಳಿಗೆ – ಅದಕ್ಕೆ ತುಪ್ಪ ಕಾಯಿಹಾಲು.
ಮತ್ತೆ ಮಜ್ಜಿಗೆ.
ರುಚಿ ರುಚೀ ಇತ್ತು, A1:)
.
.
ಅಲ್ಲಿಂದ ಮತ್ತೆ, ನಿಧಾನಕ್ಕೆ ಹೆರಟತ್ತು,
ಹೊತ್ತೋಪಗ ಗೆಜ್ಜೆ ಕಟ್ಟುವ ಕಾರ್ಯಕ್ರಮ ಇತ್ತಡ, ತುಂಬ ಆಶೆ ಇದ್ದರೂ ನಿಂಬಲೆ ಆಯಿದಿಲ್ಲೆ.. 🙁
ಹೋಪದಾರಿಲಿ ಉಂಬೆಗಳ ರಜಾ ಪಟ ತೆಕ್ಕೊಂಡೆ, ನಮ್ಮ ಗೋಶಾಲೆದು.
ನಾಳೆ ಗೋಕರ್ಣಕ್ಕೆ ಹೋಪದು ಹೇಳಿ ಇದ್ದೆ. ಕೋಟಿ ರುದ್ರ ಇದ್ದಲ್ದ.. ಹಾಂಗೆ ಹೋಪಲಿದ್ದು..
ಕಾಂಬೊ° ಆಗದಾ..
.
.
ಗೋಕರ್ಣಂದ ಬಂದ ಮತ್ತೆ ಸಿಕ್ಕುತ್ತೆ. 🙂

***

***

28 thoughts on “ಮಾಣಿ ಮಠಲ್ಲಿ ಗುರುಗೊ

  1. ಲಾಯಿಕ ಬರದ್ದೆ.ಇನ್ನೂ ಕಾರ್ಯಕ್ರಮಲ್ಲಿ ಭಾವಹಿಸಿದಷ್ಟು ಕೊಶಿ ಆತು.ಇನ್ನೂ ಹೀಂಗೇ ಬರೆತ್ತಾ ಇರು…..

  2. ಮಂಗ್ಳೂರ ಮಾಣಿ…ಲಾಯ್ಕ ಆಯಿದು.. ಕಥೆ ನಿರೂಪಣೆಯೂ ಲಾಯಕ್ಕಿದ್ದು..
    ಗುರುಗಳ ಆಶೀರ್ವಚನದಲ್ಲಿ ಕಥೆಯೆ ಜೀವಾಳ. ಪ್ರತಿ ಬಾರಿ ಹೊಸ ಕಥೆ, ನಿರೂಪಣೆಯಲ್ಲಿ ವೈವಿಧ್ಯತೆ ಅದೇ ಶ್ರೀಗಳ ವಿಷೇಶ
    ಧನ್ಯವಾದ

    1. ಧನ್ಯವಾದ ಮಾವಾ,
      ಅಪ್ಪು.. ಸಣ್ಣ ಸಣ್ಣ ಕಥೆಲಿ ದೊಡ್ಡದೊಡ್ಡ ಅರ್ಥಂಗೊ :):)
      ಅದರ ಗುರುಗೊ ಹೇಳಿರಂತೂ ಅರ್ಥಂಗೊ ಅಗಾಧ.. ಎಷ್ಟು ಯೋಚುಸಿಯರೂ, ಮತ್ತೆ ಮತ್ತೆ ಹೊಸ ಹೊಸ ಅರ್ಥಂಗೊ..

  3. ಮಂಗ್ಳೂರ ಮಾಣಿ…ಶುದ್ದಿ ಲಾಯ್ಕ ಆಯಿದು.. ನಿರೂಪಣೆಯೂ ಪಷ್ಟಾಯಿದು..
    ಗುರುಗಳ ಆಶೀರ್ವಚನವ ಯಥಾವತ್‌ ಬರದ್ದೆ… ಈ ಲೇಖನವ ಓದಿಯಪ್ಪಗ ಖುದ್ದು ಮಾಣಿ ಮಠಕ್ಕೆ ಹೋದಾಂಗೆ ಆತು…
    ಗುರುಗಳ ಫೋಟೊ ಬಾರಿ ಚೆಂದ (ಪೂರ್ಣಾಹುತಿ) ಬೈಂದು..

    1. ಧನ್ಯವಾದ ಸೂರ್ಯಣ್ಣಾ..
      ಫಟ ಈ ಕನಸು.com ಇಂದ ಕದ್ದದು, ತುಂಬ ಚೆಂದ ಇದ್ದು ಫಟ :):) .. ಸಭೆಲಿ ಗುರುಗಳ ಫಟ ತೆಗವ ಧೈರ್ಯ ಬೈಂದಿಲ್ಲೆ 😉

  4. “ಏ ಸುಭಗಣ್ಣಾ..” ಹೇಳಿ ಒಂದಾರಿ ದೊಡ್ಡಕೆ ದೆನಿಗೇಳಿದ್ರೆ ಆನು ಓಕೋಳ್ತಿತ್ತೆನ್ನೆಪ್ಪಾ.. ಅಲ್ಲೇ ಮರುವಳ ನಾರಾಯಣ ಮಾವನೊಟ್ಟಿಂಗೆ ಹಿಂದೆ ಕೂದೊಂಡು ಇತ್ತಿದ್ದೆ. ಛೆ! ಮೊಕ್ತಾ ಮಾತಾಡಿಕ್ಕಲಾವ್ತಿತ್ತು.
    ಆಗಲಿ, ಅಡ್ಡಿ ಇಲ್ಲೆ- ಇನ್ನೊಂದಾರಿ ಕಾಂಬಲಕ್ಕು.

    ಶುದ್ದಿ ಭಾರೀ ಲಾಯ್ಕಾಯಿದು. ಶ್ರೀ ಗುರುಗೊ ಹೇಳಿದ ಕಥೆಯ ಯಥಾವತ್ ನಿರೂಪಣೆ ಸೂಪರ್..!

    ಹ್ಞಾ…ಪುತ್ತೂರು ಪುಟ್ಟಕ್ಕನೂ ವಿದ್ಯಕ್ಕನೂ ಗುರ್ತ ಹಿಡುದು ಮಾತಾಡ್ಸಿದವಿದಾ.. 🙂

    1. ಓ ದೇವರೇ..!! ನಿಂಗಳೂ ಇತ್ತಿದ್ದಿರಾ?
      ಛೇ..! ಮೋರೆ ಪರಿಚಯ ಇಲ್ಲದ್ದೆ ತಪ್ಪಾತನ್ನೇ.. ಅಂದು ಬೈಲಿನ ಮಿಲನಕ್ಕೆ ಬರೆಕಿತ್ತು ಹೇಳಿ ಈಗ ಅನ್ಸುತ್ತು..

      ಇನ್ನೊಂದರಿ ಖಂಡಿತಾ ಕಾಂಬೊ ಅಣ್ಣೋ.. 🙂
      ವಿದ್ಯಕ್ಕನ ಮತ್ತೆ ಶ್ವೇತನ ಮೋರೆ ಪರಿಚಯ ಇಲ್ಲದ್ದ ಕಾರಣ ಮಾತಾಡ್ಸುಲೆ ಆಯಿದಿಲ್ಲೆ 🙂

  5. ಮಂಗ್ಳೂರು ಮಾಣಿ ಬರದ ವಿವರಣೆ ಭಾರಿ ಲಾಯಕೆ ಆಯಿದು.
    ಶ್ರೀ ಗುರುಗಳ – ಪಟತೆಗದ್ದು ಭಾರಿ ಚೆ೦ದ ಆಯಿದ್ದು.

    ಧನ್ಯವಾದ.

    |ಹರೇ ರಾಮ|

    1. ಧನ್ಯವಾದ ಚುಬ್ಬಣ್ಣಾ :):):)
      ***

      ಶ್ರೀ ಗುರುಗಳ ಫಟ ತೆಗದ್ದು ಆನಲ್ಲ 🙁
      ಅದು ಈ ಕನಸು ಹೇಳುವ ಸೈಟಿಂದ, ಯಾವ ಪುಣ್ಯಾತ್ಮ ತೆಗದನೋ ಗೊಂತಿಲ್ಲೆ, ತುಂಬ ಚೆಂದ ಬೈಂದು..

  6. ಮಂಗ್ಳೂರು ಮಾಣಿ-ಮಾಣಿ ಮಠಲ್ಲಿ.
    ನಿರೂಪಣೆ ಲಾಯಿಕ ಆಯಿದು, ಹಾಂಗೆ ಪಟವೂದೆ ಚೆಂದ ಬಯಿಂದು.

  7. ಹರೇ ರಾಮ ।
    ಭಾರೀ ಲಾಯಕದ ಬೂಂದಿ ಲಾಡು ಇದ್ದತ್ತನ್ನೆ ? ಎಂಗಳ ಹಂತಿಲಿ ಬಯಿಂದು..!!

    ಅಂತೂ ಸಂಸ್ಥಾನ ಹೃಷೀಕೇಶಕ್ಕೆ ಇಲ್ಲಿಂದ ಹೆರಡಕ್ಕಾರೆ ಮೇಳದ ಮಕ್ಕೊಗೆ ಗೆಜ್ಜೆ ಕಟ್ಟಿಸಿದ್ದವು…
    ಅಬ್ಬೆ ಮಕ್ಕಳ ಬಿಟ್ಟು ದೂರಕ್ಕೆ ಹೋಪಗ ತರ್ಕ ಮಾಡುವ ಮಕ್ಕೊಗೆ ಆಟದ ಸಾಮಾನು ಕೊಟ್ಟು
    ಆಟ ಆಡಿ ಕೊಂಡಿಪ್ಪಾಂಗೆ ಮಾಡಿದಹಾಂಗೆ…….
    ಇನ್ನು ಬಪ್ಪ ವರ್ಷಕ್ಕೊರೇಗೆ (೨೦೧೨) ನಾವು ಕೊರಳುದ್ದ ಮಾಡಿ ಸಂಸ್ಥಾನದವರ ದಾರಿ ಕಾಯಕ್ಕಷ್ಟೇ..

    ಹಾಂ…. ಪ್ರತೀ ವಲಯಂದ ಇನ್ನು ತಲಾ ೪೦೦೦೦ ರುದ್ರ ಪಾರಾಯಣ ಶ್ರೀ ಗೋಕರ್ಣ ಲ್ಲಿ ಆಗದೇ ಇದ್ದರೆ
    ಕೋಟಿ ರುದ್ರದ ಸಂಕಲ್ಪಕ್ಕೆ ನಾವು ಸಹ ಸ್ಪಂದನ ಕೊಡದ್ದಹಾಂಗೆ…

    ಹೆರಡಿ… ಹೆರಡಿ ….ಶ್ರೀ ಸಂಸ್ಥಾನ ಬಂದು ವಿಚಾರಿಸೆಕ್ಕಾರೆ ಮೊದಲೇ ಈ ಸೇವೆ ನಮ್ಮೆಲ್ಲರಂದಾಯಕ್ಕು…

    ನಿಂಗಳೂ ಬತ್ತಿರನ್ನೇ…?

    1. ಧನ್ಯವಾದ ಅಪ್ಪಚ್ಚೀ..
      ಅಪ್ಪಾ…!! ಅದಾ ಎನಗೆ ಗೊಂತೇ ಆಯಿದಿಲ್ಲೆ.
      ಗೋಕರ್ಣಕ್ಕೆ ಹೆರಡುವ ಗಡಿಬಿಡಿಲಿ ಹಂತಿಲಿ ಕೂದು ಉಂಬಲೆ ಆಯಿದಿಲ್ಲೆ.. 🙁
      ಅಲ್ಲೇ ನಿಂಡೊಂಡು ನಿಂದದು.. ರಜಾ ಉಂಡಪ್ಪಗ ಆತು, “ಇಷ್ಟು ರುಚಿ ರುಚೀ ಊಟಕ್ಕೆ ಕೊಡೆಕಾದ ಮರ್ಯಾದಿ ಕೊಟ್ಟು ಉಂಡಿದ್ದರೇ ಚೆಂದ ಇತ್ತು” ಹೇಳಿ.. 🙁 🙂
      ಎಂತ ಮಾಡುದು? ಎನ್ನ ದೋಸ್ತಿ ಒಬ್ಬಂಗೂ ತಡವಾಗಿಯೊಂಡಿತ್ತು.. ಹಾಂಗೆ ಬೂಂದಿ ಲಾಡು ತಿಂಬ ಭಾಗ್ಯ ತಪ್ಪಿತ್ತು..
      ಇನ್ನಾಣಾ ಸರ್ತಿ ಗುರುಗೊ ಮಾಣಿ ಮಠಕ್ಕೆ ಬಪ್ಪಗ ಹಂತಿಲಿ ನಿಂಗಳ ಹತ್ತರೆಯೇ ಕೂರ್ತೆ ಆತಾ..
      ಇಲ್ಲದ್ದರೆ ಇನ್ನಾಣ ಸರ್ತಿ ಎಂತ ತಪ್ಪಿ ಹೋವ್ತೋ?

      ***

      “ಅಂತೂ ಸಂಸ್ಥಾನ ಹೃಷೀಕೇಶಕ್ಕೆ ಇಲ್ಲಿಂದ ಹೆರಡಕ್ಕಾರೆ ಮೇಳದ ಮಕ್ಕೊಗೆ ಗೆಜ್ಜೆ ಕಟ್ಟಿಸಿದ್ದವು…
      ಅಬ್ಬೆ ಮಕ್ಕಳ ಬಿಟ್ಟು ದೂರಕ್ಕೆ ಹೋಪಗ ತರ್ಕ ಮಾಡುವ ಮಕ್ಕೊಗೆ ಆಟದ ಸಾಮಾನು ಕೊಟ್ಟು
      ಆಟ ಆಡಿ ಕೊಂಡಿಪ್ಪಾಂಗೆ ಮಾಡಿದಹಾಂಗೆ…….
      ಇನ್ನು ಬಪ್ಪ ವರ್ಷಕ್ಕೊರೇಗೆ (೨೦೧೨) ನಾವು ಕೊರಳುದ್ದ ಮಾಡಿ ಸಂಸ್ಥಾನದವರ ದಾರಿ ಕಾಯಕ್ಕಷ್ಟೇ..”

      ಅಪ್ಪು ನಿಂಗೊ ಹೇಳಿದ್ದು.
      🙂
      ಆದರೆ ಗುರುಗಳ ರಾಮ ಕಥೆಲಿ ಒಂದು ಪದ್ಯ ಇದ್ದಲ್ದಾ? “ಮಂಗಳದ ಮುಂಬೆಳಾಕು ಬಹುದೂರವಿಲ್ಲ” ಹೇಳಿ? ಆ ಸಾಲಿನ “ಮಂಗಳದ ೨೦೧೨ ಬಹುದೂರವಿಲ್ಲ” ಹೇಳಿ ಮಾಡುವನಾ?

      ***

      ನಿನ್ನೆ ಇರುಳಷ್ಟೇ ಗೋಕರ್ಣಂದ ಬಂದೆ,
      ತುಂಬ ಇದ್ದು ಹೇಳ್ಲೆ,
      ಇನ್ನೊಂದು ಶುದ್ದಿಲಿ,
      ಹಾಂ..!! :):) ಹಾಂಗೇ ೪೪ ಏಕಾದಶ ಪೂರ್ತಿ ಆತು..
      ಶ್ರೀ ಗುರುಗಳ-ಶ್ರೀ ದೇವರ ಅನುಗ್ರಹ ಆತು 🙂

  8. ನಿರೂಪಣೆ ಭಾರೀ ಲಾಯ್ಕಾಯಿದು, ಒಪ್ಪ೦ಗೊ..

  9. ಮಂಗ್ಳೂರ ಮಾಣಿ ಮಾಣಿ ಮಠಕ್ಕೆ ಹೋಗಿ ಕಿಣಿಕಿಣಿ ಅಪ್ಪಗ ಭಕ್ತಿಲಿ ಕೂದು ಮತ್ತೆ ಹಶುವಪ್ಪನ್ನಾರ ಕಿಟಿಕಿಟಿ ಮಾಡಿಕ್ಕಿ ಮಾತಾಡುಸೆಕ್ಕಾದವರನ್ನೂ ಮಾತಾಡುಸೆಲೆ ಎಡಿಗಾಗದ್ರೂ ನೆಂಪಿಲ್ಲಿ ಇಲ್ಲಿ ನೆನಪಿಸಿ ಗೋಕರ್ಣಕ್ಕೆ ಹೆರಡುವ ಶುದ್ದಿ ಓದಿ ನವಗೂ ಖುಶೀ ಆತು ಹೇಳಿ ಹೇಳುವದು – ‘ಚೆನ್ನೈವಾಣಿ’. ಇನ್ನು ಗೋಕರ್ಣದ ಶುದ್ದಿಗೆ ನಾವು ಕಾದೊಂಡಿರ್ತು.

    1. ಧನ್ಯವಾದ ಭಾವಾ,
      ನಿನ್ನೆ ಇರುಳು ಮಂಗ್ಳೂರಿಂಗೆ ವಾಪಸ್ ಬಂದದಷ್ಟೇ..!!!
      ಮುಖತಃ ನೋಡಿ ಪರಿಚಯ ಇಪ್ಪ ಎಲ್ಲೋರನ್ನೂ ಮಾತಾಡುಸಿದ್ದೆ.. 🙂
      ಫಟ ನೋಡಿ ಪರಿಚಯ ಇಪ್ಪವರ ಮಾತಾಡ್ಸುಲೆ ಗೊಂತಾಯಿದಿಲ್ಲೆ..
      ಪಕಳಕುಂಜ ಅಪ್ಪಚ್ಚಿಯೂ ಆನೂ ಮಂತ್ರಾಕ್ಷತೆ ಸಾಲಿಲ್ಲಿ ನಿಂದೊಂಡು “ಓ ಆಕೂಸು ಪುತ್ತೂರಿನ ಪುಟ್ಟಕ್ಕ ಆದಿಕ್ಕೋ?” ಹೇಳಿ ಮಾತಾಡಿಯೊಂಡೆಯ..
      ನೇರ ಹೋಗಿ ಕೇಳ್ಲೆ ಧೈರ್ಯ ಸಾಕಾಯಿದಿಲ್ಲೆ.. 😉

  10. ಮಂಗಳೂರ್ ಮಾಣಿ ಜೂನಿಯರ್ ಒಪ್ಪಣ್ಣನೆ ಆದ ಹಾಂಗಿದ್ದು 🙂 ಲೇಖನ ತುಂಬಾ ಲಾಯಕ ಮೂಡಿ ಬಯಿಂದು… ರಾಮಕಥೆಯ DVD ಬೇಕು ಹೇಳಿ ಆಸೆ ಆವುತ್ತ ಇದ್ದು…

    1. ಜಯಕ್ಕೋ, 🙂
      ಒಪ್ಪಣ್ಣನ ರೇಂಜಿಂಗೆ ಎತ್ತೆಕಾರೆ ತುಂಬ ದೂರ ಇದ್ದು..
      🙂

      DVD ಲಾಯಿಕ ಬೈಂದಡ.. ಆನೂ ಹುಡ್ಕುತ್ತಾ ಇದ್ದೆ.. 🙂

    1. ಧನ್ಯವಾದ Y V ಅಣ್ಣಾ :):)
      ಇನ್ನಾಣ ಸರಿತ್ ಗುರುಗೊ ಮಾಣಿ ಮಠಕ್ಕೆ ಬಪ್ಪ ಸಮಯಲ್ಲಿ ಮಾತಾಡಿಯೊಂಡು ಹೋಪೊ..
      ಕಾಂಬಲಕ್ಕಿದಾ??

  11. ಅನೂ ಬಂದಿತ್ತಿದ್ದೆ. ಚೆ ಚೆ ಮಂಗ್ಳೂರು ಮಾಣಿಯ ಎನಗೆ ಕಾಂಬಲಾಯಿದಿಲ್ಲೆನ್ನೆ. ಮಾಣಿ ಹೇಳಿದಾಂಗೆ ನಿನ್ನೆಣ ಕಾರ್ಯಕ್ರಮ ತುಂಬಾ ಚೆಂದಕೆ ನಡದತ್ತು. ಗುರುಗಳ ಆಶೀರ್ವಚನ ಪ್ರತಿಯೊಬ್ಬನ ಮನಸ್ಸನ್ನೂ ತಟ್ಟುವ ಹಾಂಗಿತ್ತು.ರಾಮಕತೆ ಡಿ ವಿ ಡಿ ಬಿಡುಗಡೆಯಾದ್ದಂತೂ ನಮ್ಮ ಯೋಗ .

    1. ಧನ್ಯವಾದ ವಿದ್ಯತ್ತೆ. 🙂
      ಛೇ..!! ನಿಂಗೊ ಇದ್ದದು ಗೊಂತಿತ್ತಿಲ್ಲೆ, ಇಲ್ಲದ್ದರೆ ಕಾಂಬಲಾವುತಿತ್ತು,
      ನಿಂಗೊಗೆ DVD ಸಿಕ್ಕಿತ್ತಾ? ಎನಗೂ ಒಂದು ಬೇಕಿತ್ತು.. 🙂

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×