ಲೋಕಕಲ್ಯಾಣಕ್ಕೆ ಶ್ರೀಗುರುಗಳ ಯೋಜನೆ : “ಹಿಡಿಯಕ್ಕಿ-ಬಿಡಿಗಾಸು”

July 24, 2011 ರ 10:00 amಗೆ ನಮ್ಮ ಬರದ್ದು, ಇದುವರೆಗೆ 23 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಸುಖ ಸಮೃದ್ದಿಗಳ ಆಗರವಾಗಿಪ್ಪ ಭಾರತಲ್ಲಿ ಇಂದು ಮಿತಿಮೀರಿದ ಜನಸಂಖ್ಯೆಂದಾಗಿ ಶೇಕಡಾ 30 ರಷ್ಟು ಜೆನಂಗೊ ಒಂದು ಹೊತ್ತಿನ ಊಟಕ್ಕೂ ಗತಿಯಿಲ್ಲದ್ದೆ ಹಸಿವಿನ ಬೇಗೆ ತಡವಲೆಡಿಯದ್ದೆ ಇದ್ದವು.
ಬಡತನ ನಿರುದ್ಯೋಗಂದಾಗಿ ಎಷ್ಟೋ ಜನ ಇಂದು ನಿರಾಶ್ರಿತರಾಯಿದವು. ಇನ್ನೊಂದೆಡೆಲಿ ನಮ್ಮಲ್ಲಿಪ್ಪ ಶ್ರೀಮಂತ ಜನಂಗೊ ಅವರತ್ರೆ ಇಪ್ಪ ಆಹಾರ ಉತ್ಪನ್ನಂಗಳ ಹಾಳುಮಾಡುತ್ತಾ ಇದ್ದವು.

ಈ ನಿಟ್ಟಿಲಿ ಹಾಳಪ್ಪ ಪಾಲು ಸದುಪಯೋಗವಾಯೆಕ್ಕು, ಬಡವರ ಹಶುವಿನ ನೀಗುಸೆಕ್ಕು, ಭರತಭೂಮಿಲಿ ಜೀವಿಸುವ ಪ್ರತಿಯೊಬ್ಬನೂ ಹೊಟ್ಟೆಗೆ ಕಾಳಿಲ್ಲದ್ದೆ ಬದುಕ್ಕುಲಾಗ ಹೇಳುವ ಉದ್ದೇಶಂದ ಹಾಂಗೂ ತಾನುಗಳಿಸಿದ್ದಲ್ಲಿ ಇನ್ನೊಬ್ಬಂಗೂ ಪಾಲು ಕೊಡುವ ಮನಸ್ಸು ಪ್ರತಿಯೊಬ್ಬನಲ್ಲೂ ಮೂಡೆಕ್ಕು ಹೇಳುವ ದೃಷ್ಟಿಂದ ನಮ್ಮ ಸಂಸ್ಥಾನ ಶ್ರೀ ಶ್ರೀ ರಾಘವೇಶ್ವರ ಶ್ರೀಗೊ ಹಿಡಿಯಕ್ಕಿ(ಮುಷ್ಟಿಅಕ್ಕಿ) ಎಂಬ ಯೋಜನೆಯ ಜಾರಿಗೆ ತಂದವು.
ಈ ಹಿಡಿಯಕ್ಕಿ ಯೋಜನೆ ಹೇಳಿದರೆ, ಅಕ್ಕಿಯ ಉಪಯೋಗಿಸುವಗ ಒಂದು ಮುಷ್ಟಿಲಿ ಹಿಡಿಯುವಷ್ಟರ ಇತರರಿಂಗಾಗಿ ತೆಗದುಮಡುಗುವ ಒಂದು ವಿಶಿಷ್ಟ ಪದ್ದತಿ.
ಈ ಯೋಜನೆಯಡಿಲಿ ಸಂಗ್ರಹ ಅಪ್ಪ ಅಕ್ಕಿಯ ಬಡವರಿಂಗೆ, ನಿರ್ಗತಿಕರಿಂಗೆ, ಬಡವಿದ್ಯಾರ್ಥಿಗೊಕ್ಕೆ ಹಾಂಗೂ ಪ್ರಾಕೃತಿಕ ವಿಕೋಪಂದ ನಷ್ಟಕ್ಕೆ ಒಳಗಾದವಕ್ಕೆ ಹಂಚುತ್ತಾ ಇದ್ದವು.
ಗುರುಪೀಠಲ್ಲಿ ಭಕ್ತಿ ಇಪ್ಪವು ಇದರ ಮಡುಗುತ್ತಾ ಇದ್ದವು. ಗುರುಪೀಠದ ಪ್ರತಿಯೊಬ್ಬ ಶಿಷ್ಯನೂ ಇದರ ಮಡುಗೆಕ್ಕು ಹೇಳಿ ಗುರುಗೊ ಹೇಳ್ತವು.
ಕೆರೆಯ ನೀರನು ಕೆರೆಗೆ ಚೆಲ್ಲಿ – ಎಂಬ ಹಾಂಗೆ ಈ ರೀತಿಯಾಗಿ ಸಮಾಜಂದ ಸಂಗ್ರಹಿಸಿದ ಧಾನ್ಯ ಸಮಾಜಕ್ಕೆ ಉಪಯೋಗ ಆವ್ತಾ ಇದ್ದು.
ಒಟ್ಟಿಲಿ ಹೇಳ್ತರೆ ಶ್ರೀ ಗುರುಗಳ ಈ ಹಿಡಿಯಕ್ಕಿ ಯೋಜನೆ ತ್ಯಾಗ, ಪ್ರೇಮಕ್ಕೆ ಒತ್ತು ಕೊಡುವಹಾಂಗಿಪ್ಪ ಯೋಜನೆ.

ಶ್ರೀರಾಮನ ಮೇಲೆ ಆಣೆ!

ಈ ಹಿಡಿಯಕ್ಕಿಯ ಇನ್ನೊಂದು ರೂಪವೇ ಬಿಡಿಗಾಸು. ಇಂದು ಸಮಾಜ ಕಲ್ಯಾಣ ಆಯೆಕ್ಕಾದರೆ ಹತ್ತು ಹಲವು ಯೋಜನೆಗೊ ಕಾರ್ಯರೂಪಕ್ಕೆ ಬರ್ಲೇಬೇಕು.
ಈ ಯೋಜನೆಗಳ ಅನುಷ್ಟಾನಕ್ಕೆ ಬಂಡವಾಳ ಅಗತ್ಯ ಇದ್ದು. ಇದು ಉಳಿತಾಯಂದ ಮಾತ್ರ ಸಾದ್ಯ. ಇದಕ್ಕಾಗಿ ನಮ್ಮ ಶ್ರೀಗೊ ಬಿಡಿಗಾಸು(ಬಿಂಧು-ಸಿಂಧು) ಯೋಜನೆಯ ಕಾರ್ಯರೂಪಕ್ಕೆ ತಂದವು.
ಶ್ರೀಗಳ ಈ ಯೋಜನೆಂದ ಇಂದು ಸಾಮಾನ್ಯ ಜನಂಗಳಲ್ಲೂ ಕೂಡ ಉಳುಶಿ-ಬೆಳೆಶಿ-ಗಳಿಶಿ ಹೇಳುವ ಪ್ರಜ್ಞೆ ಮೂಡುತ್ತಾ ಇದ್ದು.
ಈ ಬಿಡಿಗಾಸು ಯೋಜನೆಲಿ ಪ್ರತಿಯೊಬ್ಬನೂ ಪ್ರತಿದಿನ ನಾಣ್ಯವೊಂದರ ಡಬ್ಬಿಲಿ ತೆಗದುಮಡುಗಿ ಅದರಿಂದಾದ ಮೊತ್ತವ ಶ್ರೀಮಠದ ಯೋಜನೆಗೊಕ್ಕೆ ಕೊಡುತ್ತಾ ಇದ್ದವು.
ಇದರಿಂದ ಪ್ರತಿಯೊಬ್ಬನೂ ಆದಾಯದ ಒಂದು ಚೂರಾದರೂ ಸಮಾಜದ ಅಭಿವೃದ್ದಿಗಾಗಿ ಉಪಯೋಗಿಸಲಿ ಹೇಳುದು ನಮ್ಮ ಗುರುಗಳ ಆಶಯ.

ಗುರುಗಳ ಈ ಎರಡೂ ಯೋಜನೆಗೊಕ್ಕೆ ಶಿಷ್ಯಸಮಾಜ ದಿನಾಗುಳೂ ಸ್ಪಂದಿಸಿದಲ್ಲಿ ಮಾಂತ್ರ ನಾವಿಂದು ಬಡತನದ ರೇಖೆಲಿಪ್ಪ ಸಮಾಜದ ಕಣ್ಣೀರೊರೆಸಿದಹಾಂಗೆ ಆವುತ್ತಲ್ಲದಾ?
ಮೂರು ಹೊತ್ತು ಸರಿಯಾಗಿ ಉಂಬ ಯಾವ ಮನುಷ್ಯಂಗೂ ಇದು ಕಷ್ಟ ಆಗ ಹೇಳಿ ಎನ್ನ ಭಾವನೆ.

ಆದ್ದರಿಂದ ಉದಾರ ಮನಸ್ಸಿಂದ ಈ ಹಿಡಿಯಕ್ಕಿ-ಬಿಡಿಗಾಸು ಯೋಜನೆಗೆ ಸ್ಪಂದಿಸುವ ಆಗದಾ?

ಲೋಕಕಲ್ಯಾಣಕ್ಕೆ ಶ್ರೀಗುರುಗಳ ಯೋಜನೆ : "ಹಿಡಿಯಕ್ಕಿ-ಬಿಡಿಗಾಸು" , 5.0 out of 10 based on 3 ratings

ಈ ಶುದ್ದಿಗೆ ಇದುವರೆಗೆ 23 ಒಪ್ಪಂಗೊ

 1. ವಿದ್ಯಾ ರವಿಶಂಕರ್
  ವಿದ್ಯಾ ರವಿಶಂಕರ್

  ಹರೇರಾಮ,

  [Reply]

  VN:F [1.9.22_1171]
  Rating: 0 (from 0 votes)
 2. ಬಲ್ನಾಡುಮಾಣಿ

  ಹರೇರಾಮ.. ಶ್ರೀಗುರುಗೊ ಶುರುಮಾಡಿದ ಹಿಂಗಿಪ್ಪ ಯೋಜನೆಗಳ ಒಳಿಶಿ ಮುಂದುವರಿಸಿಗೊಂಡು ಹೋಪದು ನಮ್ಮ ಕರ್ತವ್ಯವೇ ಅಲ್ಲದಾ! ಸಕಾಲಕ್ಕೆ ನೆನಪು ಮಾಡಿಕೊಟ್ಟಿದಿ.. ವಿದ್ಯಕ್ಕಂಗೆ ಧನ್ಯವಾದಂಗೋ!

  [Reply]

  ವಿದ್ಯಾ ರವಿಶಂಕರ್

  ವಿದ್ಯಾ ರವಿಶಂಕರ್ Reply:

  ಹರೇರಾಮ ।

  [Reply]

  VN:F [1.9.22_1171]
  Rating: 0 (from 0 votes)
 3. ಶ್ರೀಅಕ್ಕ°

  ಪ್ರೀತಿಯ ವಿದ್ಯಾ,

  ಬೈಲಿನ ಸಾವಿರದ ಒಂದನೇ ಶುದ್ದಿಯಾಗಿ ನಿನ್ನ ಶುದ್ದಿ, ಅದುದೇ ಸಾವಿರದ ಕೆಲಸ, ಸಾವಿರ ಜನಂಗ ಸೇರಿ ಮಾಡುವ ಕೆಲಸ “ಹಿಡಿಯಕ್ಕಿ-ಬಿಡಿಗಾಸು” ಬಂದದು ತುಂಬಾ ಕೊಶೀ ಆತು.

  ನಮ್ಮ ಸಮಾಜದ ಪ್ರತಿಯೊಬ್ಬನೂ ಮನಸ್ಸರ್ತು ಮಾಡೆಕ್ಕಾದ ಕರ್ತವ್ಯದ ಬಗ್ಗೆ ಚೆಂದಲ್ಲಿ ಬರದ್ದೆ.. ಈ ಗುರುಸೇವೆಯ ಎಲ್ಲೋರೂ ಚೆಂದಲ್ಲಿ ಮಾಡಲಿ ಹೇಳಿ ಮನಸ್ಸಿನಾಳದ ಹಾರೈಕೆ..

  ಬೈಲಿಂಗೆ ಒಳ್ಳೆ ಮಾಹಿತಿ ಕೊಟ್ಟದಕ್ಕೆ ಧನ್ಯವಾದಂಗೋ.

  [Reply]

  ವಿದ್ಯಾ ರವಿಶಂಕರ್

  ವಿದ್ಯಾ ರವಿಶಂಕರ್ Reply:

  ಪ್ರೀತಿಯ ಶ್ರೀಅಕ್ಕಂಗೆ ಹರೇರಾಮ.

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಅನುಶ್ರೀ ಬಂಡಾಡಿಶೇಡಿಗುಮ್ಮೆ ಪುಳ್ಳಿಮುಳಿಯ ಭಾವಪುಣಚ ಡಾಕ್ಟ್ರುಸುವರ್ಣಿನೀ ಕೊಣಲೆಕೆದೂರು ಡಾಕ್ಟ್ರುಬಾವ°ದೇವಸ್ಯ ಮಾಣಿಅಜ್ಜಕಾನ ಭಾವನೀರ್ಕಜೆ ಮಹೇಶಪೆರ್ಲದಣ್ಣಕೊಳಚ್ಚಿಪ್ಪು ಬಾವವಿದ್ವಾನಣ್ಣಮಂಗ್ಳೂರ ಮಾಣಿಸಂಪಾದಕ°ಅನು ಉಡುಪುಮೂಲೆವಾಣಿ ಚಿಕ್ಕಮ್ಮಪಟಿಕಲ್ಲಪ್ಪಚ್ಚಿಪ್ರಕಾಶಪ್ಪಚ್ಚಿಚೆನ್ನಬೆಟ್ಟಣ್ಣಪವನಜಮಾವದೊಡ್ಡಮಾವ°ಸರ್ಪಮಲೆ ಮಾವ°ಬಟ್ಟಮಾವ°ವೇಣಿಯಕ್ಕ°ಚೂರಿಬೈಲು ದೀಪಕ್ಕಎರುಂಬು ಅಪ್ಪಚ್ಚಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ