Oppanna.com

ರಕ್ಷಾ ಬಂಧನದ ದಿನ ಶಿಷ್ಯರಿಂಗೆ ಗುರುಗಳ ಅಭಯ ರಕ್ಷೆ

ಬರದೋರು :   ಮಂಗ್ಳೂರ ಮಾಣಿ    on   28/08/2014    3 ಒಪ್ಪಂಗೊ

ಮಂಗ್ಳೂರ ಮಾಣಿ
ರಕ್ಷಾ ಬಂಧನದ ದಿನ ಶಿಷ್ಯರಿಂಗೆ ಗುರುಗಳ ಅಭಯ ರಕ್ಷೆ

ಬೈಲಿನ ಎಲ್ಲೋರಿಂಗೂ ನಮಸ್ಕಾರಂಗೊ. ಮಠದ ಸಂಪರ್ಕ ಆದ ಸರ್ತಿಂದ, ಚಾತುರ್ಮಾಸ್ಯಕ್ಕೆ ಹೋಪದು ಒಂದು ಕ್ರಮವೇ ಆಯಿದು. ಹೋಪಲೆ ಎಡಿಗಾಗದ್ರೆ ಭಾರೀ ಬೇಜಾರು ಅಪ್ಪಲಿದ್ದು. ಈ ಸರ್ತಿ ಹಾಂಗಾಯಿದಿಲ್ಲೆ.  ಓ ಮೊನ್ನೆ ನೂಲಹುಣ್ಣಿಮೆಗೆ ಕೆಕ್ಕಾರಿಂಗೆ ಹೋಗಿ ಬಂದೆ. ಹಿರೇ ಬಂಡಾಡಿಯ ರಾಕೇಶನೂ, ರವೀಶನೂ ಮತ್ತೆ ಮಾಣಿಯೂ ಸೇರಿ ಕೆಕ್ಕಾರಿಂಗೆ ಹೋಪದು ಹೇಳಿ ೧೫ದಿನ ಮದಲೇ ನಿಘಂಟು ಮಾಡಿಯೊಂಡಿತ್ತಿದೆಯೊ°. ಆ ಪ್ರಕಾರ, ೧೫ರ ಹೊತ್ತೋಪಗಳೇ ರವೀಶ ಮಂಗ್ಳೂರಿಂಗೆ ಬಂದಿತ್ತಿದ್ದ°. ಅವು ಅಣ್ಣನೂ ತಮ್ಮನೂ ಮರದಿನ ಉದೆಗಾಲಕ್ಕೇ ಮಾಣಿಯ ಮನೆಗೆ ಎತ್ತಿದವು. ಒಂದು ಸಣ್ಣಕೆ ಚಾಯ ಕುಡುದು, ದಾರಿ ಖರ್ಚಿಂಗೆ ಬುತ್ತಿ ಕಟ್ಟಿಯೊಂಡು ಹೆರಟೆಯೊ ರೈಲಿಲ್ಲಿ.

ಮಂಗ್ಳೂರಿಂದ ಗೋವಾಕ್ಕೆ ಹೋಪ ರೈಲಾದ ಕಾರಣ ಜೆನ ಭರ್ತಿ ಇತ್ತಿದ್ದು, ರೈಲಿಲ್ಲಿ ಜಾಗೆ ಹುಡ್ಕಿ ಕೂದ್ದಾತು. ಎದುರಾಣ ಹೊಡೆಲಿ ಕೆಲವು ಜೆನ ‘ನಮ್ಮ ಭಾಷೆಲಿ’ ಮಾತಾಡಿಯೊಂದಿತ್ತಿದ್ದವು. ನಮ್ಮದೇ ಭಾಶೆ ಅಪ್ಪಗ ಕೆಮಿ ಕೊಟ್ಟು ಹೋತು. ಅದರಲ್ಲಿ ಒಬ್ಬ, ನಮ್ಮ ಗುರುಗಳನ್ನೂ ಮಠವನ್ನೂ ಸುಮಾರು ಬೈಕ್ಕೊಂಡು  ಇತ್ತಿದ್ದ°. ಆಧಾರವೇ ಇಲ್ಲದ್ದ ಮಾತುಗೊ, ಮಠ ಪೈಸೆಗೆ ಮಾತ್ರ ಇಪ್ಪದು – ಆರಿಂಗಾಗು ಉಪಯೋಗ ಆದ್ದಿದ್ದಾ ಮಠಂದ? ನಮ್ಮವ್ವು ಕಷ್ಟಲ್ಲಿ ಇದ್ದರೆ ಮಠ ಬತ್ತಾ? ಆ ಅಶೋಕೆಲಿ ಮಠ ಕಟ್ಟುಲೆ ನಾವೆಂತಕೆ ಪೈಸೆ ಕೊಡೆಕು?  ಹೇಳಿ ಎಲ್ಲ ಸುಮಾರು ಬೇಡಂಕಟೆ ಹೇಳಿಯೊಂಡು ಇತ್ತಿದ್ದ°. ಅವನ ಮಾತಿಂಗೆ ತಾಳ ಹಾಕುಲೆ ಮತ್ತೆರಡು ಜೆನ ಇತ್ತವಲ್ಲಿ. ಪಿಸುರು ಎಳಗಿತ್ತು ಮಾಣಿಗೆ! ಅಷ್ಟಪ್ಪಗ ಅವನ ಅಪ್ಪನ ಪ್ರಾಯದ ಒಬ್ಬರು ಅವಂಗೆ ಹೇಳಿದವು, “ನೀನು ಹಾಂಗೆಲ್ಲ ಮಾತಾಡ್ಳಾಗ, ಮಠ ನವಗೆ ಎಂತ ಮಾಡಿದ್ದು ಕೇಳುದಲ್ಲ – ಏಕೆ ಹೇಳರೆ ಮಠಕ್ಕೆ ನಾವು ಬೇಡ ಮಠ ನವಗೆ ಬೇಕಿಪ್ಪದು. ನಿನಗೆ ಮಠದ ಕಾರ್ಯಕ್ರಮಂಗಳ ಸರಿಯಾದ ತಿಳುವಳಿಕೆ ಇದ್ದ ಹಾಂಗೆ ಕಾಣ್ತಿಲ್ಲೆ. ನೀನೊಂದರಿ ಮಠದ ಒಳ ಹೋಗಿ ನೋಡು, ಎಷ್ಟು ಜೆನ ಇಂದು ಮಠಂದಾಗಿ ಒಳುಕ್ಕೊಂಡಿದವು, ಎಷ್ಟು ಜೆನರ ಮಠದ ರಾಮದೇವರು  ನೋಡಿಗೊಳ್ತಾ ಇದ್ದ ಹೇಳುದು ನಿನಗೆ ಗೊಂತಕ್ಕು. ಮಠ ನಮ್ಮದು, ನವಗೇ ಹೇಳಿಯೇ ಅದು ಇಪ್ಪದು, ಮೂಲ ಮಠವೂ ನವಗೇ ಹೇಳಿಯೇ ಗುರುಗೊ ಕಟ್ಟುಸುತ್ತಾ ಇಪ್ಪದು.” ಹೇಳಿ ಸುಮ್ಮನೆ ಕೂದವು. ಅಷ್ಟಪ್ಪಗ ಅವಂಗೆ ರಜ್ಜ ಮರ್ಯಾದಿ ಹೋದ ಹಾಂಗೆ ಆತೋ ಏನೋ, “ಅಪ್ಪಪ್ಪ! ಅಂಬಗ ಮಠ ಏಕೆ ಪ್ರತೀ ವರ್ಷ ೧೦೦ ರೂಪಾಯಿ ತೆಕ್ಕೊಂಬದು? ವೇದ ಪಾಠ ಶಾಲೆಗೆ ಆನೆಂತಕೆ ಪೈಶೆ ಕೊಡೆಕು? ಮಠಲ್ಲಿ ಇಪ್ಪೋರೆಲ್ಲಾ ಪೈಶೆ ತಿಂಬೋರೇ..” ಹೇಳಿ ಬೊಬ್ಬೆ ಹೊಡವಲೆ ಶುರು ಮಾಡಿದ. ಅಷ್ಟಪ್ಪಗ ಆ ಅಜ್ಜ, “ನೀನು ಕೊಡುವ ೧೦೦ ರೂಪಾಯಿಂದ ಮಠ ನಡವದಲ್ಲ, ಅದು ನಿನ್ನ ಮಠ ಹೇಳಿವ ಭಾವನೆ ನಿನಗೆ ಬರಳಿ ಹೇಳುದು ಪೈಶೆ ತೆಕ್ಕೊಂಬದರ ಹಿಂದಿನ ಉದ್ದೇಶ”  ಹೇಳಿ ರಜ್ಜ ಜೋರಿಲ್ಲೇ ಹೇಳಿದವು. “ಓಹೋ, ಆ ಮಾಣಿ ಮಠಕ್ಕೆ ಹೋಗಿ ನೋಡಿ, ಒಬ್ಬ ದಾನಿಯ ಫಟ ಹಾಕಿದ್ದವು, ಅವ° ಪೈಶೆ ಸಂಪಾದನೆ ಮಾಡಿದ್ದು ಊರವಕ್ಕೆಲ್ಲ ಪಿಗ್ಮಿಲಿ ಮೋಸ ಮಾಡಿ ಹೇಳುದು ಎಲ್ಲೋರಿಂಗೂ ಗೊಂತಿದ್ದು, ಮತ್ತೆ ಅವನ ಕೈಂದ ಗುರುಗೊ ಪೈಶೆ ತೆಕ್ಕೊಂಡದೆಂತಕೆ? ಅವನ ಫಟ ಹಾಕಿದ್ದೆಂತಕೆ? ಓ ಮೊನ್ನೆ ಒಬ್ಬ, ಇನ್ನು ಎನ್ನ ಕೈಲಿ ಎಂತ ಎಡಿತ್ತಿಲ್ಲೆ, ಎನ್ನ ಮಕ್ಕಳ ಮಠ ನೋಡಿಗೊಂಗೋ ಹೇಳಿ ಕೇಳಿಯಪ್ಪಗ, ಮಠದ ಒಬ್ಬ ದೊಡ್ಡವ – ‘ನಿನ್ನ ಆಸ್ತಿಯ ಎಲ್ಲ ಮಠಕ್ಕೆ ಬರದು ಕೊಡು ನಿನ್ನ ಜೀವನದ ಖರ್ಚಿನ ಮಠ ನೋಡಿಗೊಂಗು’ ಹೇಳಿದಡ, ಎಂತಕೆ ಅವನ ಮಕ್ಕಳನ್ನೂ ಮನೆ ಇಲ್ಲದ್ದ ಹಾಂಗೆ ಮಾಡ್ಳೋ?” ಹೇಳಿ ಉರುದು ಬಿದ್ದ. ಅಷ್ಟಪ್ಪಗ ಅಜ್ಜನ ತಾಳ್ಮೆ ತಪ್ಪಿತ್ತು, “ಇದಾ! ಈ ಘಟನೆಗೊ ಒಂದುವೇಳೆ ನಿಜವಾಗಿಯೂ ಆಗಿದ್ದರೆ, ಅದು ಗುರುಗಳ ಗಮನಕ್ಕೆ ಬಂದಿಕ್ಕು ಹೇಳಿ ಎನಗೆ ಅನ್ಸುತ್ತಿಲ್ಲೆ. ಅವಕ್ಕೆ ಗೊಂತಾಗಿದ್ದರೆ, ಹಾಂಗೆ ಆವುತಿತ್ತೂ ಇಲ್ಲೆ. ಆರದ್ದಾರು ಫಟ ಹಾಕಿದ್ದು ಎನಗೆ ಗೊಂತಿಲ್ಲೆ, ಒಂದು ವೇಳೆ ಅವ ಮೋಸ ಮಾಡಿ ಸಂಪಾದನೆ ಮಾಡಿದ್ದೇ ಆದರೆ, ನಿನ್ನ ಹಾಂಗೆ ಹತ್ತುಜೆನ ಮೋಸ ಹೋದವು ಒಟ್ಟು ಸೇರಿ ಗುರುಗಳ ಹತ್ತರೆ ಹೇಳಿ, ಅವ್ವು ಸರಿ ಮಾಡುಗು. ಅದಲ್ಲದ್ದೆ, ಸುಮ್ಮನೆ ಗುರುಗಳ ದೂರುದು ಶ್ರೇಯಸ್ಸಲ್ಲ” ಹೇಳಿ ಘಟ್ಟಿಲಿ ಹೇಳಿಯಪ್ಪಗ, ಅವ ಟೆಟ್ಟೆಟ್ಟೆ.

ರಾಕೇಶನತ್ರೆ ಎನಗೆ ಕೇಳಿ ಹೋತು, “ಅಲ್ಲ! ಗುರುಗೊ ದಿನಕ್ಕೆ ಒಂದು ರೂಪಾಯಿ ತೆಗದು ಮಡುಗು – ಎಡಿಯದ್ದೋರಿಂಗಾತು, ನಿಂಗೊ ಉಂಬ ಊಟಲ್ಲಿ ಒಂದು ಮುಷ್ಟಿ ಕಷ್ಟಲ್ಲಿಪ್ಪೋರಿಂಗೆ ತೆಗದು ಮಡುಗು, ದಿನಕ್ಕೆ ಎರಡು ಹೊತ್ತು ಜೆಪ ಮಾಡು ಹೇಳಿರೆ ಹೆಚ್ಚಿಗೆ ಕಾಣುತ್ತು ಇವಕ್ಕೆ – ಫೈವ್’ಸ್ಟಾರ್ ಹೋಟ್ಲಿಂಗೆ ಹೋಗಿ ಒಂದು ಘಂಟೆ ಕಾದು, ತುಂಬ ಅಂತೊಂಡು ರಜ್ಜ ತಿಂದು, ಸುಮಾರು ಬಿಲ್ಲು ಕೊಡುವಾಗಳೂ ಇಷ್ಟೇ ಮಾತಾಡಿಕ್ಕೋ ಮಾರಾಯ?” “ ಗುರುಗೊ ಹೇಳಿದ್ದದೇ ಅರ್ಥ ಆಯಿದಿಲ್ಲೆ ಅವಕ್ಕೆ, ಇನ್ನು ನಾವು ಹೇಳಿರೆ ಅಕ್ಕೋ? ಇಂಥವರ ಸುಮಾರು ನೋಡಿ ಆಯಿದು ಬಿಡು ಮಾರಾಯ” ಹೇಳಿದ ರಾಕೇಶ. “ಇವ್ವು ಎಂತ ಬೇಕಾರು ಹೇಳಿಯೊಂಡು ಹೊಳೆಗೆ ಹಾರಲಿ – ಇವರ ಮಾತು ಕೇಳಿ ಏನೂ ಗೊಂತಿಲ್ಲದ್ದ ಇನ್ನೊಬ್ಬ ದಾರಿ ತಪ್ಪುಲಾಗ ಹೇಳುದು ಮಾತ್ರ ಎನ್ನ concern ” ಹೇಳಿದೆ. “ಬೇಡಂಕಟೆ ಮಾಡುವವ್ವು ಮಾತ್ರ ಗುರುಗಳ ಬೈವದು – ಸರಿ ಇಪ್ಪವಕ್ಕೆ ಹಾಂಗೆ ಕಾಣ್ತಿಲ್ಲೆ” ಹೇಳಿದ ರವೀಶ. ಅಪ್ಪು ಹೇಳಿ ಕಂಡತ್ತು.

ಬುತ್ತಿಲಿ ಇದ್ದ ಪತ್ರೊಡೆ, ರೈಲಿಲ್ಲಿ ಮಾರಿಗೊಂಡು ಬಂಡ ಕಟ್ಲೀಸು ಎಲ್ಲ ತಿಂದಪ್ಪಗ ಘಂಟೆ ೧೧ ಆತು, ಕುಮಟಾಕ್ಕೂ ತಲುಪಿತ್ತು. ರೈಲ್ವೇ ಸ್ಟೇಶನಿಂದ ಕುಮಟಾ ಸರ್ಕಲ್ಲಿಂಗೆ ನೆಡದು, ಅಲ್ಲಿಂದ ಸರ್ವೀಸು ಟೆಂಪೋಲ್ಲಿ ರಘೂತ್ತಮ ಮಠಕ್ಕೆತ್ತುವಾಗ ಘಂಟೆ ಹನ್ನೆರಡು. ಹೋದಾಂಗೆ ಉಂಡಿಕ್ಕಿ, ಸಭೆಗೆ ಹೋಗಿ ಕೂದೊಂಡೆಯೊ. ಗುರುಗೊ ಪೀಠಕ್ಕೆ ಬಪ್ಪಗ ಘಂಟೆ ನಾಲ್ಕಾಯಿದು. ಮತ್ತೆ ಪುಸ್ತಕ ಬಿಡುಗಡೆ, ಗುರುಗಳ ಆಶೀರ್ವಚನ, ಆಗಿ ಮಂತ್ರಾಕ್ಷತೆ. ಸಾಲಿನ ಕಡೇಲಿ ಸೇರಿಗೊಂಡೆ. ರಾಕೇಶಂಗೂ ರವೀಶಂಗೂ ಮರದಿನ ಬೆಳ್ಳಿ ಕಡಗ ಮಾಡ್ಸುಲೆ ಇದ್ದ ಕಾರಣ ಅವು ಮರದಿನಕ್ಕೆ ಕಾದವು. ಮಂತ್ರಾಕ್ಷತೆ ಕೊಡುವಾಗ – ಮೋರೆ ನೋಡಿ, ಬೈಲ ಮಾಣಿ ಹೇಳಿ ಕಣ್ಣಿಲ್ಲೇ ಗುರ್ತ ಹಿಡುದು ನೆಗೆಮಾಡಿ, ತಲೆ ಮುಟ್ಟಿ ಪ್ರೀತಿಲಿ ಆಶೀರ್ವಾದ ಮಾಡಿಯಪ್ಪಗ, ಮಾಣಿಯ ಮನಸ್ಸು ತುಂಬಿ ಬಂತು. ಅಲ್ಲಿಯೇ ಅಭಾವ ಸಿಕ್ಕಿ ಬೈಲಿನ ಲೆಕ್ಕದ ಪಾದ ಪೂಜೆ ೩೧ಕ್ಕೆ ಇಕ್ಕು ಹೇಳಿವ ಶೂ ಶುದ್ದಿ ಕೊಟ್ಟ. ಭರೀ ಖುಶಿ ಆತು. 🙂

ಇರುಳಿಂಗೆ ಮಠದವ್ವೇ ವ್ಯವಸ್ಥೆ ಮಾಡಿಕೊಟ್ಟವು. ಮಾಣಿ ಮಠದಷ್ಟು ಜಾಗೆ ಇಲ್ಲದ್ರೂ, ಅಲ್ಲಿಯಾಣ ಜನರ ಪ್ರೀತಿಯ ಎದುರು ಅದೊಂದು ಕೊರತೆ ಹೇಳಿ ಕಾಣ್ತೇ ಇಲ್ಲೆ.ಇರುಳು ದೋಸೆ, ಚಪಾತಿ, ಊಟ ಹೇಳಿ ಇದ್ದ ಬಗೆ ಎಲ್ಲ ತಿಂದಪ್ಪಗ ರಾಕೇಶನ ದೋಸ್ತಿಗಳೂ ಬಂದು ಸೇರಿಗೊಂಡವು ಕೆಕ್ಕಾರಿಲ್ಲಿ. ಹಸೆ ಹಿಡುಕ್ಕೊಂಡು ಒರಗುಲೆ ಹೆರಾಟಪ್ಪಗ ನಾರಾಯಣ ಹೇಳುವವ ಒಬ್ಬ ಸಿಕ್ಕಿದ. ಮಾಣಿ ಗೋಕರ್ಣಕ್ಕೆ ರುದ್ರ ಹೇಳುಲೆ ಹೋಗಿಪ್ಪಗ ಆದ ಪರಿಚಯ. ಮತ್ತೆ ಸಿಕ್ಕಿ ಖುಶಿ ಆತು, ಏನು ಒಳ್ಳೇದು ಎಲ್ಲ ಕೇಳಿದ ಮತ್ತೆ, ಮಾತು ಗುರುಗಳ ಏಕಾಂತದ ವಿಷಯಕ್ಕೆ ಬಂತು. ನಾರಾಯಣ° ಭಾರೀ ಬೇಜಾರಿಲ್ಲಿತ್ತಿದ್ದ, ಆಘಾತ ಅಪ್ಪ ವಿಷಯವೇ, ಗುರುಗ, ಚಾತುರ್ಮಾಸ್ಯ ಕಳುದ ಕೂಡ್ಳೇ ಏಕಾಂತಕ್ಕೆ ಹೋವುತ್ತವಡ ಹೇಳುದು ಯಾವುದೇ ಗುರುಭಕ್ತಂಗೂ ಒಂದರಿ “ಅಯ್ಯೋ ರಾಮಾ! ಇನ್ನಾರು ಗತಿ?” ಹೇಳಿ ಕಾಂಬಂತಂದ್ದೆ. ನಾರಾಯಣಂಗೂ ಅದೇ ಬೆಶಿ. “ನಾರಾಯಣಣ್ಣ, ಏಕೆ ಚಿಂತೆ ನಿನಗೆ? ಗುರುಗೊ ಏಕಾಂತಂದ ಪುನಹ ಬತ್ತೆಯೊ ಹೋಳಿ ಹೇಳಿದ್ದವಲ್ಲದ, ಮತ್ತೆಂತ?” ಕೇಳಿದರೆ, “ಗುರುಗೊ ಇಲ್ಲದ್ದರೆ ಹೇಂಗಿಪ್ಪದು ಮಾರಾಯ? ಛೇ ಎನಗೆ ಗ್ರೇಶುಲೇ ಎಡಿತ್ತಿಲ್ಲೆ” ಹೇಳಿದ.

“ಅದಪ್ಪು ನಾರಾಯಣಣ್ಣಾ. ಗುರುಗೊ ಎಂತದೇ ನಿರ್ಧಾರ ಮಾಡಿರೂ ಅದರಲ್ಲಿ ಸಮಾಜದ ಉಧ್ಧಾರವೇ ಧ್ಯೇಯ ಆಗಿಕ್ಕಷ್ಟೇ. ಈ ಏಕಾಂತದ ಹಿಂದೆಯೂ ಅದೇ ಇಕ್ಕು. ಈಗ ನೋಡು, ಬೇರೆ ಬೇರೆ ಶಂಕರಾಚಾರ್ಯರುಗಳ ಮೇಲೆ ಆವುತ್ತಾ ಇಪ್ಪ ಆಘಾತಂಗೊ, ದೇಶಲ್ಲಿ ಆವುತ್ತಾ ಇಪ್ಪ ಅನಾಹುತಂಗೊ ಎಲ್ಲ ನೋಡಿರೆ – ನಮ್ಮ ಗುರುಗಳ ತಪಸ್ಸಲ್ಲದ್ದೆ ಬೇರೆಂತಾರು ಮದ್ದು ಕಾಣ್ತೋ ನಿನಗೆ? ಗುರುಗೊ ಏಕಾಂತಕ್ಕೆ ಹೋಪದೂ ನಮ್ಮ ಒಳ್ಳೇದಕ್ಕೇ ಆಗಿಕ್ಕಷ್ಟೇ. ಅವ್ವು ನಮ್ಮ ಮಂಕಾಡುಸುಲೆ ಯಾವುದೇ ಕಾರಣ ಹೇಳಲಿ, ನಾವು ಅವು ಹೇಳಿದ್ದರ ಒಪ್ಪಿಗೊಂಡು ಅವಕ್ಕೆ ತಕ್ಕ ಹಾಂಗೆ ಇರೆಡದೋ?  ಅವರ ಅನುಪಸ್ಥಿತಿ ಹೇಳುದು ಮಠಲ್ಲಿ ಇಪ್ಪಲೇ ಇಲ್ಲೆ, ನಮ್ಮ ಮನಸ್ಸಿಂದ ಗುರುಗೊ ಏವತ್ತಾದರೂ ಹೋಪದು ಹೇಳಿದ್ದೋ?” ಹೇಳಿ ಸಮಾಧಾನ ಮಾಡಿದೆ. ಮತ್ತೆ ಭಜಗೋವಿಂದಂ ನ ಮೇಲೆ ಗುರುಗಳ ಪ್ರವಚನ ಕೇಳಿಯೋಡು ಒರಗಿದೆಯೊ°. ಇರುಳು ಪಷ್ಟ್ಕ್ಲಾಸು ಒರಕ್ಕು. ಉದೆಗಾಲಕ್ಕೆ ಬೇಗ ಎದ್ದು, ಮಿಂದು ಜೆಪ ಮಾಡಿ, ಜೆನಿವಾರ ಧಾರಣೆಗೆ ಹೋದೆಯೊ° ಎಲ್ಲೋರೂ. ಅಲ್ಲಿ ಜೆನಿವಾರ ಬದಲ್ಸಿ, ಪುನಹ ಗಾಯತ್ರಿ ಮಾಡಿ, ಗುರುಗಳ ಉದಿಯಪ್ಪಗಾಣ ಪೂಜೆಗೆ ಕೂದೆಯೊ. ಶ್ರೀಕರಾರ್ಚಿತ ಪೂಜೆ ನೋಡುದೇ ಒಂದು ಭಾಗ್ಯ – ಅದಕ್ಕೆ ಸ್ವರ ಸೇರುಸುಲೆ ಸಿಕ್ಕೆರೆ ಮಹಾಭಾಗ್ಯ.ಹಾಂಗೇ ಖುಶೀಲಿ ಪೂಜೆ ಕಳುದತ್ತು. ಮಧ್ಯಾಹ್ನ ಉಂಡು, ಗುರುಗಳ ಉಪಸ್ಥಿಯ ಸಭೆಲಿ ಕೂದುಗೊಂಡೆಯೊ.

“ನಾವೆಲ್ಲ ವೇದದ ಪರಂಪರೆಯವ್ವು ಹೇಳುದರ ನಾವು ಮರವಲಾಗ. ಇದರ ಮುಂದುವರಿಸಿಯೊಂಡು ಹೋಪ ಜವಾಬ್ದಾರಿ ನಮ್ಮೆಲ್ಲರ ಮೇಲೆ ಇದ್ದು. ತಪ್ಪು ದಾರಿಗೆ ಹೋಗದ್ದ ಹಾಂಗೆ ಒಂದೋ ಶಿಕ್ಷೆ ಇಲ್ಲದ್ರೆ ರಕ್ಷೆ. ಎರಡ್ರಲ್ಲಿ ಒಂದು ಇರೆಕು. ಶಿಷ್ಯಂಗೆ ಗುರುವಿನ ರಕ್ಷೆ, ಸಮಾಜಕ್ಕೆ ರಾಮನ ರಕ್ಷೆ ಸದಾ ಇರೆಕು” ಹೇಳಿ ಆಶೀರ್ವಚನಲ್ಲಿ ಗುರುಗೊ ಹೇಳಿದವು. ಆ ಗುರುಗೊಕ್ಕೆ ನಮ್ಮ ಮೇಲಿಪ್ಪ ಪ್ರೀತಿಯ ಯಾವುದರಲ್ಲೂ ತೂಗಿ ಅಳತೆಮಾಡಿ ‘ಇಂತಿಷ್ಟು’ ಹೇಳ್ಲೆಡಿಯ, ಹಾಂಗಿಪ್ಪಗ ನಮ್ಮ ರಕ್ಷಣೆ-ಶಿಕ್ಷಣಕ್ಕೆ ಹೇಳಿಯೇ ಬದುಕುತ್ತಾ ಇಪ್ಪ ಗುರುಗಳ ಬಗ್ಗೆ ಹಗುರವಗಿ ಮಾತಾಡುವವ್ವು ಜೀವನ ಇಡೀ ನಮ್ಮ ಕಣ್ಣಿಂಗೆ ಹಗುರವಾಗಿಯೇ ಕಾಂಗಷ್ಟೇ. ಗುರುಗಳ ಏಕಾಂತ ಶಿಷ್ಯರಿಂಗೆ ಶಿಕ್ಷೆ ಅಲ್ಲ ನಿಜವಾದ ರಕ್ಷೆ ಹೇಳಿ ಕಂಡತ್ತು. ರಾಕೇಶನೂ ರವೀಶನೂ ಗುರುಗಳಿಂದ ಬೆಳ್ಳಿ ಕಡಗದ ರಕ್ಷೆ ಮಂತ್ರಾಕ್ಷತೆಯೊಟ್ಟಿಂಗೆ ಸ್ವೀಕರಿಸಿದವು. ಮತ್ತೆ ಇರುಳು ಉಂಡಿಕ್ಕಿ, ರಜ್ಜ ಒರಗಿದೆಯೊ. ಇರುಳು ರೈಲ್ವೇಷ್ಟೇಶನಿಂಗೆ ಹೋಪಲೆ ಒಂದು ೧೫-೨೦ ಜೆನ ಇತ್ತಿದ್ದೆಯೊ. ಹಾಂಗಾಗಿ ಮಠದವ್ವೇ ಟೆಂಪೋದ ವ್ಯವಸ್ಥೆ ಮಾಡಿದವು. ಇರುಳು ೨ ಘಂಟೆಯ ರೈಲು ಹತ್ತಿ, ಉದೆಗಾಲಕ್ಕೆ ೬ ಘಂಟೆಗೆ ಮಂಗ್ಳೂರು ತಲುಪಿದೆಯ. ಅಲ್ಲಿಂದ ಮತ್ತೆ ಏವತಿನ ಹಾಂಗೇ ಆಪೀಸು.

ಮಠಕ್ಕೆ ಹೋಪದೂ ಹೇಳಿರೇ ಖುಶಿ ಮಾಣಿಗೆ, ಅದೂ ಇನ್ನೊಂದರಿ ಹೋಪಲೆ ಸಿಕ್ಕುತ್ತೂ – ಬೈಲಿನವ್ವೆಲ್ಲ ಬತ್ತವು ಹೇಳುದು ಮತ್ತೂ ಖುಶಿ. ಆ ದಿನಕ್ಕೆ ಕಾಯ್ತಾ ಇದ್ದೆ. 🙂

ಮಠಲ್ಲಿ ಕಾಂಬೊ° 🙂

3 thoughts on “ರಕ್ಷಾ ಬಂಧನದ ದಿನ ಶಿಷ್ಯರಿಂಗೆ ಗುರುಗಳ ಅಭಯ ರಕ್ಷೆ

  1. ಗೆಜಳುತ್ತಡ ಅಲ್ಲ್ದಾ- ಗುಡ್ ವರ್ಡ್ i

  2. “ಈಗ ನೋಡು, ಬೇರೆ ಬೇರೆ ಶಂಕರಾಚಾರ್ಯರುಗಳ ಮೇಲೆ ಆವುತ್ತಾ ಇಪ್ಪ ಆಘಾತಂಗೊ”
    ನಮ್ಮ ಗುರುಗಳ ಮೇಲೂ ಆಘಾತ ಶುರು ಮಾಡಿದ್ದವನ್ನೇ….. 🙁

    1. ಶ್ಯಾಂ ಮಾವಾ°,
      ರೋಗಕ್ಕೆ ಮದ್ದು ಕೊಟ್ಟರೆ, ಗುಣ ಅಪ್ಪಂದ ಮದಲು ಒಂದರಿಯಂಗೆ ಗೆಜಳುತ್ತಡ ಅಲ್ಲ್ದಾ?
      ಹಾಂಗೇ ಆದಿಕ್ಕು ಇದುದೇ. ಎಂತ ಹೇಳ್ತಿ?

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×