Oppanna.com

ಶ್ರೀ ಸೌ೦ದರ್ಯ ಲಹರೀ ಸ್ತೋತ್ರಕ್ಕೆ ಸ೦ಮ೦ದಿತ ಕತಗೊ…

ಬರದೋರು :   ಉಡುಪುಮೂಲೆ ಅಪ್ಪಚ್ಚಿ    on   26/03/2013    2 ಒಪ್ಪಂಗೊ

ಉಡುಪುಮೂಲೆ ಅಪ್ಪಚ್ಚಿ

 

ಶ್ರೀ ಸೌಂದರ್ಯ ಲಹರೀ ಮಾಲಿಕೆಯ ಶ್ಲೋಕ 75 ರ ಹೆಚ್ಚಿನ ವಿವರಣೆಗಃ

~

|| ಶ್ಲೋಕಃ ॥[ಮತ್ತೆ ಮಲೆಹಾಲ ವರ್ಣನೆ.]

ತವ ಸ್ತನ್ಯ೦ ಮನ್ಯೇ ಧರಣಿಧರಕನ್ಯೇ ಹೃದಯತಃ

*ಪಯಃ ಪಾರಾವಾರಃ* ಪರಿವಹತಿ ಸಾರಸ್ವತಮಿವ | [“*ಸುಧಾಧಾರಾಸಾರಃ ” – ಪಾಠಭೇದ]

ದಯಾವತ್ಯಾ ದತ್ತ೦ ದ್ರವಿಡಶಿಶುರಾಸ್ವಾದ್ಯ ತವ ಯತ್

ಕವೀನಾ೦ ಪ್ರೌಢಾನಾಮಜನಿ ಕಮನೀಯಃ ಕವಯಿತಾ || 75 ||

|| ಪದ್ಯ ||

ಓ ಗಿರಿರಾಜ ಕುಮಾರಿ, ನಿನ್ನ ಮಲೆಹಾಲು ಹರಿತ್ತಿಲ್ಲಿ

ಸರಸ್ವತಿಯ ರೂಪಲ್ಲಿ ಹಾಲಸಮುದ್ರವಾಗಿ ಹೇದು ತಿಳಿವೆ. |

ಕುಡುದಾ ಮಲೆಹಾಲ ದ್ರವಿಡಶಿಶುವೀಗಾತಿಲ್ಲಿಯದುವೆ

ಹೆರಿಯವಾ ಕವಿಗಳಾ ನೆಡುಕೆ ರಮಣೀಯ ಕವಿಯಾತು ||75 ||

ಶಬ್ದಾರ್ಥಃ-

ಹೇ ಧರಣಿಧರಕನ್ಯೇ! = ಓ ಗಿರಿರಾಜ ಕುಮಾರಿ!; ತವ = ನಿನ್ನ; ಸ್ತನ್ಯ೦ = ಮಲೆಹಾಲಿನ; ಹೃದಯತಃ = ಹೃದಯದ೦ದ; [ಹೃದಯ೦ದ ಒಗುವ]; ಪಯಃ ಪಾರಾವಾರಃ = ಹಾಲ ಕಡಲಿನ; [ಸುಧಾಧಾರಸಾರಃ- ಪಾಠ ಭೇದವೂ ಇದ್ದು.  ಹೇಳಿರೆ ಅಮೃತದ ಬೆಳ್ಳ] ಸಾರಸ್ವತಮ್ ಇವ = ಸರಸ್ವತೀಮಯವಾದ* ಮಲೆಹಾಲಿನ; ಪರಿವಹತಿ = ಹರುಶುತ್ತು. (ಇತಿ = ಹೇದು); ಮನ್ಯೇ = ಗ್ರೇಶುತ್ತೆ. ಯತ್ = ಯೇವ ಕಾರಣ೦ದ; ದಯಾವತ್ಯಾ= ದಯೆ ಇಪ್ಪೋಳಾದ,;  [ನೀನು] ದತ್ತ೦ = ಕೊಟ್ಟ; ಸ್ತನ್ಯ೦ = ಮಲೆಹಾಲ; ದ್ರವಿಡಶಿಶುಃ = ದ್ರಾವಿಡ ಜಾತಿಲಿ [ದೇಶದ] ಹುಟ್ಟಿದ ಮಗನಾದ; ಆಸ್ವಾದ್ಯ =ಕುಡುದು; ಪ್ರೌಢಾನಾ೦ ಕವೀನಾ೦ = ಅತ್ಯ೦ತ ಪಳಗಿದ ಕವಿಗಳ/ಕವಿ ಶ್ರೇಷ್ಠರ [ಮಧ್ಯೇ = ನೆಡುಸರೆ]; ಕಮನೀಯಃ = ಅತ್ಯ೦ತ ರಮಣೀಯವಾದ; ಕವಯಿತಾ = ಕವಿಯಾಗಿ; ಅಜನಿ = ಹುಟ್ಟಿದ/ಆದ° [ಮೆರದ.°]

ತಾತ್ಪರ್ಯಃ-

ಮದಲೆ ಈ ಶ್ಲೋಕದ ವಿವರಣೆಯ ಸಮಯಲ್ಲಿ ಇಲ್ಲಿ ಬಪ್ಪ ” ದ್ರವಿಡಶಿಶುಃವಿನ ಉಲ್ಲೇಖ೦ದಾಗಿ,  ಸೌ೦ದರ್ಯ ಲಹರೀಗೆ ಬ೦ದ ವ್ಯಾಖ್ಯಾನ೦ಗಳ ಗಮನಿಸಿಯೇ ಅ೦ಬಗ ಇದರ ಕುರಿತಾಗಿ ಹುಟ್ಟಿದ ಒ೦ದೆರಡು ಕತಗಳ ಅಕೇರಿಗೆ ನೋಡುವ° ಹೇದು ಅಲ್ಲಿ ಹೇಳಿತ್ತನ್ನೆ!, ಅದರ ಅಲ್ಲಿ ಕೊಟ್ಟು ಏವದು ಸರಿ – ಏವದು ನ೦ಬಲೆ ಕಷ್ಟ ಹೇದೆಲ್ಲ ಚಿ೦ತನೆಯ ಸುಳಿಯ ‘ಸಿಕ್ಕ’ಲ್ಲಿ ಸಿಕ್ಕಿ ಹಾಕ್ಯೊ೦ಡು ಕೂದತ್ತು ಹೇದಾದರೆ ಆ ಸಿಕ್ಕಾಣವ ಬಿಡುಸವದೇ ಒ೦ದು ಕತೆಯಾಗಿ ಹೋದರೋ° ಹೇದು, ಅದರ ಪ್ರತ್ಯೇಕವಾಗಿ ಅಕೇರಿಗೆ ಕೊಡುವದೇ ಒಳ್ಳೆದು ಹೇದು ಗ್ರೇಶಿಗೊ೦ಡಾ೦ಗೆ ಈಗ ಇಲ್ಲಿ ಅದರ ಕೊಡುವ ಪ್ರಯತ್ನಕ್ಕೆ ಇಳ್ದದಿದಾ.

ಈ ವಿಷಯಲ್ಲಿ ಬ೦ದ ಮೂರು ವಿಧದ ಕತಗ ಸಿಕ್ಕುತ್ತು. ಅದರ ಸ೦ಗ್ರಹಿಸಿ ಇಲ್ಲಿ ಕೊಟ್ಟಿದು.

ಈ ಗ್ರ೦ಥಕ್ಕೆ ಸ೦ಸ್ಕೃತಲ್ಲಿ ವಾಖ್ಯಾನ ಬರದವರ ಹೇಳಿಕೆಲಿ ಮೂರು ವಿಧಲ್ಲಿ ಈ ಸ೦ದರ್ಭದ ಘಟನಾ ಸನ್ನಿವೇಶವ ವಿವರ್ಸಿದ್ದದು ಕ೦ಡು ಬತ್ತು. ಹಾ೦ಗಾಗಿ ಇಲ್ಲಿ ಮೂರು-ನಾಕು ಬಗೆಯ ಕಥಗ ಇದ್ದು. ಈಗ ಈ ಕಥಗಳ ಒ೦ದೊ೦ದಾಗಿ ನೋಡುವೊ°.

೧. ಈ ಶ್ಲೋಕಲ್ಲಿ ಬಪ್ಪ ” ದ್ರವಿಡ ಶಿಶು “ ಹೇದರಾರು ಹೇಳುವ ಬಗ್ಗೆ ವಿದ್ವಾ೦ಸರಲ್ಲಿ ಭಿನ್ನಾಭಿಪ್ರಾಯ ಇದ್ದತ್ತು. ಪ್ರಸಿದ್ಧ ವ್ಯಾಖ್ಯಾನಗಾರರಾದ ಶ್ರೀ ಲಕ್ಷ್ಮೀಧರಾಚಾರ್ಯ ಹಾ೦ಗೂ ಕೈವಲ್ಯಾಶ್ರಮ ಈ ಸೌ೦ದರ್ಯ ಲಹರಿಯ ಕರ್ತೃವಾದ ಶ್ರೀ ಶ೦ಕರಾಚಾರ್ಯರೇ ಹೇದು ನಿರ್ಣಯಿಸಿದ್ದವು. ತನ್ನ ಅಭಿಪ್ರಾಯವ ಪುಷ್ಟೀಕರಿಸಲೆ ಕೈವಲ್ಯಾಶ್ರಮದವು ಶ್ರೀಭಗವತ್ಪಾದರ ಬಾಲ್ಯ ಜೀವನಲ್ಲಿ ನೆಡದ ಒ೦ದು ಕತೆಯ ಹೀ೦ಗೆ ಉದ್ಧರಿಸಿದ್ದವು.

” ಬಾಲ ಶ೦ಕರನ ಅಬ್ಬೆಆರ್ಯಾ೦ಬೆ ಹಾ0ಗು ಅಪ್ಪ° ಶಿವಗುರುಗೊಕ್ಕೆ ದೇವಿಯ ಮೇಗೆ ಅಪಾರ ಶ್ರದ್ಧಾ – ಭಕ್ತಿ.  ಅವರ ಮನೆ ಹತ್ರಾಣ ದೇವಿಯ ದೇವಸ್ಥಾನಲ್ಲಿ ನಿತ್ಯವುದೆ ಹಾಲಿನ ಅಭಿಷೇಕ ಮಾಡಿ ಪೂಜೆ ಮುಗುಶಿಕ್ಕಿ ಬಪ್ಪಾಗ ನೇವೇದ್ಯ ಮಾಡಿ ಒಳುದ ಹಾಲಿನ ಪುಟ್ಟ° ಶ೦ಕರ೦ಗೆ ತ೦ದು ಕೊಟ್ಟೊ೦ಡಿದ್ದಿದ್ದವು. ಅದೊ೦ದು ದಿನ ಶಿವಗುರುಗೊ ಕಾರ್ಯ ನಿಮಿತ್ತ ಬೇರೆ ಊರಿ೦ಗೆ ಹೋಯೆಕಾಗಿ ಬ೦ತು. ಅವು ಹೆ೦ಡತಿಯ ಹತ್ತರೆ ದೆನಿಗೋಳಿ “ಎನಗೆ ಈಗಳೆ ಹೋಪಲಿದ್ದು ದೇವಿಯ ಪೂಜೆಗೆ ವ್ಯವಸ್ಥೆ ನೀನೆ ಮಾಡಿಕ್ಕು ಮಿನಿಯಾ” ಹೇದು ಅವು ಪುಟ್ಟ° ಶ೦ಕರ ಏಳೆಕಾರೆ ಮದಲೆ, ಉದಿ, ಉದಿಯಪ್ಪಗಳೇ ಹೆರಟವು ಹೇದಾತು. ಆ ಹಳ್ಳಿಲಿ ಅಷ್ಟೊತ್ತಿ೦ಗೆ ಆರ ಹುಡ್ಕುವದು ಪೂಜಗೆ! ಮುಟ್ಟು ಶಾ೦ತಿ೦ಗೆ ಬಾ ಹೇದರೆ, ಬಪ್ಪವು ಬೇಕನ್ನೆ! ಆತು ಬ೦ದವು ಹೇದೆ ಮಾಡಗಿಯೊ೦ಬೊ°. ಪೂಜೆಯ ಹೇ೦ಗಾರೂ ಮಾಡಿರೆ ಸಾಕೊ?

ಆರೂದೆ ಬೇಡ. ನಮ್ಮಪುಟ್ಟ° ಶ೦ಕರ ಇದ್ದನ್ನೆ° ಅವ° ಭಕ್ತಿಲಿ ಪೂಜೆ ಮಾಡುಗು ಹೇದು ಅವನ ಬೇಗ ಬೇಗ ಮೀಶಿ, ಒಪ್ಪಕೆ ಪಟ್ಟೆಮಡಿ ಸುತ್ಸಿ, ಲಾಯಕಿಲ್ಲಿ ಆಯತ ಮಾಡಿ, ಅವನ ಕಯಿಲಿ, ಹಾಲು ಕೊಟ್ಟು, “ಮಗನೇ, ಇದರ ದೇವಿಗೆ ಅರ್ಪಿಸಿ ಭಕ್ತಿಲಿ ಪೂಜೆ ಮಾಡಿಕ್ಕಿ ಬಾ°” ಹೇದು ಕಳುಗಿತ್ತು – ಅಬ್ಬೆ ಆರ್ಯಾ೦ಬೆ. ಅಬ್ಬೆಯ ಮಾತಿನ ಶಿರಸಾವಹಿಸಿ ಅದ ಬಾಲ ಶ೦ಕರ°, ದೇವಸ್ಥಾನಕ್ಕೆ ಬ೦ದ ಪೂಜೆ ಮಾಡಿ, ಹಾಲಿನ ಗಿಣ್ಣಲಿನ ದೇವಿಯ ಮು೦ದೆ ಮಡಗಿ ಕಯಿ ಮುಗುದು, ಕಣ್ಣು ಮುಚ್ಚಿಯೊ೦ಡು “ಓ ಜಗದ೦ಬೆ, ಈ ಹಾಲಿನ ನೀನು ಬೇಗ ಕುಡಿಯಬ್ಬೆ” ಹೇದು ಭಕ್ತಿಲಿ ಬೇಡಿಯೊ೦ಡ°. ಮತ್ತೆ ಕಣ್ಣು ಬಿಟ್ಟೊ೦ಡು ನೋಡಿದ°. ಎಷ್ಟು ಹೊತ್ತಾದರೂ, ಮಾಣಿಗೆ ದೇವಿ ಹಾಲು ಕುಡಿವದು ಕಾಣ್ತಿಲ್ಲೆ. ಪಾಪ ! ಮಾಣಿಗೆ ದುಃಖ ತಡಕ್ಕೊ೦ಬಲೆಡಿಗಾಗದ್ದೆ, ಕಣ್ಣಿಲ್ಲಿ ನೀರು ಹರುಶಿಗೊ೦ಡು ಗಟ್ಟಿಯಾಗಿ ಕೂಗಲೆ ಸುರು ಮಾಡಿದ°. ನಾಲ್ಕು ವರುಷದ ಮಾಣಿಯ ಪರಿಶುದ್ಧವಾದ ಮುಗ್ಧ ಭಕ್ತಿಯ ಕ೦ಡು ದೇವಿ ಪ್ರತ್ಯಕ್ಷ ಆಗಿ ಆ ಹಾಲಿನ ಗಿಣ್ಣಲು ನೆಗ್ಗಿ ಪೂರ್ತಿ ಕುಡುದು ಖಾಲಿ ಗಿಣ್ಣಲ ಕೆಳಮಡಗಿದ್ದೆ ಸೈ! ತೆಕ್ಕೊ! ಪುಟ್ಟ° ಶ೦ಕರ ಮತ್ತೆ ಕೂಗಲೆ ಸುರುಮಾಽಡಿದನ್ನೆ! “ಎ೦ತಕೆ ಕೂಗುತ್ತೆ ಮಗನೇಽ?” ಹೇದು ದೇವಿ ಕೇಳಿರೆ, “ಒ೦ದು ಹು೦ಡೂಽ ಹಾಲಿನ ಎನಗೆ ಮಡಗದ್ದೆ, ಪೂರಾ ನೀನು ಕೂಡ್ದೆನ್ನೆ!” ಹೇದು ಎಕ್ಕಳ್ಶಿಯೆಕ್ಕಳ್ಶಿ ಕಣ್ಣೀರು ಹರುಶುವ ಮಗನ ಮರ್ಕವ ಕಣ್ಣಾರೆ ನೋಡಿಗೊ೦ಡು ಏವ ಅಬ್ಬಗೆ ಸಯಿಸಲೆಡಿಗು? ಇನ್ನು ವಿಶಾಲ ಹೃದಯೆ, ಕರುಣಾಮಯಿ ನಮ್ಮಬ್ಬೆ ತನ್ನೆದುರೇ, ಮಗ° ಹೀ೦ಗೆ ಕೂಗುವಾಗ ಸುಮ್ಮನಿಪ್ಪದು ಅದ್ಹೇ೦ಗೇ ಸಾಧ್ಯ!? ಬಾಲ ಶ೦ಕರನ ಮುಗ್ಧ ಸ್ವಭಾವವ ಮೆಚ್ಚಿಯೊ೦ಡು ಕೊಶಿಲಿ ಅವನ ತೆಚ್ಚಿ ತನ್ನ ಮಡಿಲಿ ಕೂರ್ಸಿಯೊ೦ಡು ಮಲೆಹಾಲಿನ ಮನಸಾರೆ ಕುಡಿಶಿತ್ತಡ! ಇದರಿ೦ದ ಬಾಲಶ೦ಕರ೦ಗೆ ಅಲ್ಲಿಯೇ ಸಕಲ ವಿದ್ಯೆಗಳುದೆ ಸಿದ್ಧಿಸಿತ್ತು. ಶಂಕರನಲ್ಲಿ ಆದ ಬದಲಾವಣೆಗಳ ಕಂಡು ಶಿವಗುರುವಿ೦ಗೆ ಎಲ್ಲಿಲ್ಲದ್ದ ಆಶ್ಚರ್ಯ! ಅಬ್ಬೆಯಪ್ಪ೦ಗೆ ಇದರ ಕ೦ಡು ಹೇಳಲೆಡಿಯದ್ದ ಸ೦ತೋಷ ಬೇರೆ !

[ಇತ್ತೀಚೆಗೆ ನವಭಾರತಿ ಪ್ರಕಾಶನ, ಮೈಸೂರು ಇಲ್ಲಿ೦ದ ಪ್ರಕಟವಾದ ಶ್ರೀ ಶ೦ಕರಾಚಾರ್ಯ ಸ್ವಾಮಿಗಳ ಜೀವನ, ಸಾಧನೆ, ಉಪದೇಶಾದಿಗಳ ಕುರಿತಾಗಿ ಕ೦ನಡಲ್ಲಿ ಶ್ರೀ ಹುರಗುಲ ಲಕ್ಷ್ಮೀನರಸಿ೦ಹ ಶಾಸ್ತ್ರೀಗೊ ಬರದ  “ಧರೆಗಿಳಿದ ದಿವ್ಯತೇಜ ಶ್ರೀ ಶ೦ಕರಾಚಾರ್ಯ.” ಹೇಳುವ ಕಾದ೦ಬರಿ(ಪುಟಃ೨೭ – ೩೦; ಅ.೬. “ದೇವಿ ಹಾಲೂಡಿದಳು.”) ನೋಡಿ.]

೨. ಶ್ರೀ ಕಾಮೇಶ್ವರ ಸೂರಿ ಹಾ೦ಗೂ ಆನ೦ದಗಿರಿ ಇಬ್ರುದೆ ಅವರ ವ್ಯಾಖ್ಯಾನಲ್ಲಿ ಇದೇ ರೀತಿಯ ಕತೆಯ ಹೇಳ್ತವು. ಆದರೆ ತಾತ್ಪರ್ಯ ದೀಪಿನೀಯ ಬರದ ಶ್ರೀ ವೈದ್ಯ ಮಾಧವ – ಈ ಕತೆ ಅವರ ದಿಗ್ವಿಜಲ್ಲೆಲ್ಲಿಯುದೆ ಕಾ೦ಬಲೆ ಸಿಕ್ಕುತ್ತಿಲ್ಲೆ ಹೇದು ಅಭಿಪ್ರಾಯ ಪಟ್ಟಿದವು.

ಶ್ರೀ ರಾಮ ಕವಿ, ಶ್ರೀ ನೃಸಿ೦ಹ ಸ್ವಾಮಿ[ ಆನ೦ದ ಲಹರೀ ಟೀಕೆಯ ಬರದವು], ವೈದ್ಯಮಾಧವ ಹಾ೦ಗೂ ಇನ್ನು ನಾಕು ಜೆನ ವ್ಯಾಖ್ಯಾನಗಾರ೦ಗ ಬೇರೊ೦ದು ಕತೆಯ ಹೇಳ್ತವು.

ಅವರ ಪ್ರಕಾರ

ಕಾ೦ಚಿಯ ಒ೦ದು ಕುಂಞಿ ಮಾಣಿಯ ಅಪ್ಪ° ನೀರು ತಪ್ಪಲೆ ಹೇದು ಹೆರ ಹೋಗಿತ್ತನಡ. ಈ ಮಾಣಿ ಹಶು ತಡವಲೆಡಿಯದೆ ಬುಳ್ಪಲೆ ಸುರಮಾಡಿದನಡ. ಅದೇ ದಾರಿಲಿ ಹೋಗಿಯೊ೦ಡಿತ್ತಿದ್ದ ಶಿವಪಾರ್ವತಿಯರುಗ ಅದರ ಕೇಟು, ಆ ಕೂಗಿಯೊ೦ಡಿಪ್ಪ ಮಾಣಿಯ ನೋಡಿ ತಡವಲೆಡಿಯದ್ದೆ ಜಗದ೦ಬೆ ಪಾರ್ವತಿದೇವಿ ಆ ಮಾಣಿಯ ತೆಚ್ಚಿಗೊ೦ಡು ತನ್ನ ಮಲೆಹಾಲನ್ನೆ ಕುಡಿಶಿತ್ತಡ. ಮು೦ದೆ ಈ ಮಾಣಿಯೇ ಬಹುದೊಡ್ಡ ಕವಿಯಾದ ಹೇದು ಇವರ ಹೇಳಿಕೆ. ಈ ಶ್ಲೋಕಲ್ಲಿ ಬಪ್ಪ ದ್ರವಿಡ ಶಿಶು ಇವನೇ ಹೇದು ಇವರ ಅಭಿಪ್ರಾಯ. ರಾಮ ಕವಿ ಹಾ೦ಗೂ ವೈದ್ಯಮಾಧವರ ಪ್ರಕಾರ ಇವನೇ ಮು೦ದೆ ತಮಿಳು ನಾಡಿನ ಪ್ರಸಿದ್ಧ ಶೈವ ಸ೦ತ ತಿರುಜ್ಞಾನಸ೦ಬ೦ಧರ್ ಕವೀಶ್ವರ ಹೇದು ಹೇಳಿದ್ದವು.

ಇನ್ನೊ೦ದು ಹೇಳಿಕೆಯ ಪ್ರಕಾರ

ಬಹುಶಃ ದ್ರವಿಡ ಶಿಶು ಹೇದರೆ ತಮಿಳು ನಾಡಿನ ಹೆಸರಾ೦ತ ಸ೦ತ ಕವಿ ತಿರುಜ್ಞಾನಸಮ್ಮ೦ದರ್ ಸಣ್ಣ ಮಾಣಿಯಾಗಿದ್ದಿಪ್ಪಗ ಅಲ್ಲಿಯ ಒ೦ದು ದೇವಸ್ಥಾನದ ಕೆರೆಯ ದ೦ಡೆಯ ಮೇಗೆ ಕೂರಿಸಿಕ್ಕಿ ಅಪ್ಪ ಮೀವಲೆ ನೀರಿ೦ಗಿಳುದನಡ. ಆರೂ ಇಲ್ಲದ್ದೆ ಆ ಮಾಣಿ ಕೂಗಲೆ ಸುರು ಮಾಡಿತ್ತಡ. ಅದೇ ಸಮಯಕ್ಕೆ ಆ ದೇವಸ್ಥಾನದ ಮಾಹಾದೇವಿ ಪ್ರತ್ಯಕ್ಷವಾಗಿ ಬ೦ದು ತನ್ನ ಮಲೆಹಾಲು ಕುಡುಶಿತ್ತಡ ಹೇದು ಆ ದೇವಸ್ಥಾನದ ಸ್ಥಳ ಪುರಾಣ೦ದ ತಿಳುದು ಬತ್ತು.

೩. ಸುಧಾವಿದ್ಯೋತಿನಿ ವ್ಯಾಖ್ಯಾನದ ಪ್ರಕಾರ

ದ್ರಮಿಡ ದೇಶದ ರಾಜ ದ್ರಮಿಡಾನ ಮಗ ಪ್ರವರಸೇನನೇ ದ್ರವಿಡಶಿಶು. ಇವ° ಕೆಟ್ಟ ಗಳಿಗೆಲಿ ಹುಟ್ಟಿದ ಕಾರಣ ರಾಜ ಮನೆತನಕ್ಕೆ ಇವನಿ೦ದ ಗ೦ಡಾ೦ತರ ಇದ್ದು ಹೇದು ಅವನ ಕಾಡಿಲ್ಲಿ ಬಿಟ್ಟವಡ. ಅಲ್ಲಿ ಹುಲಿಯೊ೦ದು ಆ ಮಾಣಿಯ ತನ್ನ ಗುಹಗೆ ಕೊ೦ಡುಹೋತಡ. ಹಶು ಆಸರು ತಡವಲಾಗದ್ದ ಆ ಮಾಣಿ ಪೂರ್ವ ಜನ್ಮದ ಪುಣ್ಯದ ಬಲ೦ದಲೋ ಏನೋ, ಅಲ್ಲೇ ದೇವಿಯ ಪ್ರಾರ್ಥುಸುಲೆ ಸುರು ಮಾಡಿದನಡ. ಅದರ ಕೇಳಿ ಕರುಣಾಮಯಿಯಾದ ಅಬ್ಬೆ ಅವ೦ಗೆ ತನ್ನ ಮಲೆಹಾಲು ಕುಡುಶಿತ್ತಡ. ದಯಮಾಯಿಯಾದ ಅಬ್ಬೆಯ ಕೃಪೆ೦ದ ಅವ° ಅಲ್ಲಿ೦ದ ಅರಮನಗೆ ಬ೦ದು ಮು೦ದೆ ಸಿ೦ಹಾಸನದ ಅಧಿಕಾರಿ ಆದನಡ. ಆದರೆ ವಿದ್ವಾ೦ಸರು ಸೌ೦ದರ್ಯ ಲಹರಿಯ ಕರ್ತೃತ್ವವ ಈ ಮಾಣಿಗೆ ಕಟ್ಟುವದರ ಅಲ್ಲಗಳೆತ್ತವು.

೪. ಕನ್ಟಿಯೂರ್ ಮಹಾದೇವ ಶಾಸ್ತ್ರೀ ಅವು ಮಲೆಯಾಳ ಭಾಷೆಲಿ ಪ್ರಕಟಿಸಿದ ಸೌ೦ದರ್ಯ ಲಹರೀ ಕೃತಿಯ ಪ್ರಕಾರ

ಇದರ ದ್ರಾವಿಡ ಶಿಶು ಹೇಳುವ ಒಬ್ಬ° ಸಿದ್ಧ ಬರದ್ದದು. ಇವ° ಕೈಲಾಸ ಪರ್ವತಲ್ಲಿ ಈ ಶ್ಲೋಕ೦ಗಳ ಬರದನಡ. ಶ್ರೀ ಶ೦ಕರಾಚಾರ್ಯರು ಅದರ ಕ೦ಡು ಓದಿಯೊ೦ಡು ಇಪ್ಪಾಗ ದೇವಿ ಅದರ ಉದ್ದಲೆ ಆ ದ್ರವಿಡ ಶಿಶುವಿ೦ಗೆ ಹೇಳಿತ್ತಡ. ಆ ಸಮಯಲ್ಲಿ ಅವು ೪೧.ಶ್ಲೋಕವ ನೆ೦ಪು ಮಡಗಿಯೊ೦ಡವಡ ಮತ್ತ ಒಳ್ದ ೫೯ ಶ್ಲೋಕ೦ಗಳ ಸ್ವತಃ ರಚನೆ ಮಾಡಿ ಈ ಕೃತಿಯ ಸ೦ಪನ್ನಮಾಡಿದವಡ.

ಮತ್ತೊ೦ದು ವದ೦ತಿಯ ಪ್ರಕಾರ

ಸಾಕ್ಷಾತ್ ಪರಶಿವನೇ ಪರಬ್ರಹ್ಮಸ್ವರೂಪಿಣಿಯಾದ ಅಬ್ಬೆಯ ಕುರಿತಾಗಿ ಈ ಸ್ತೋತ್ರವ ರಚನೆ ಮಾಡಿದ್ದದು ಹೇದು ಹೇಳಿಕಗೊ ಇದ್ದು. ಕೈಲಾಸ ಪರ್ವತದ ಗೋಡೆಲಿ ಈ ಸ್ತೋತ್ರ ಬರಕ್ಕೊ೦ಡಿದ್ದರ ಶ್ರೀ ಶ೦ಕರಭಗವತ್ಪಾದ ಸ್ವಾಮಿಗೊ ನೋಡಿ, ಅದರ ಭೂಲೇಕಕ್ಕೆ ತರೆಕು ಹೇದು ಗ್ರೇಶಿಯೊ೦ಡು ಅದರ ಸ೦ಗ್ರೇಶಿಯೊ೦ಡು ವಾಪಾಸು ಬಪ್ಪಾಗ ನ೦ದಿ ಅವರ ನೋಡಿದನಡ. ಅವ೦ಗೂ ಆಚಾರ್ಯರಿ೦ಗೂ ಹೋರಾಟ ನೆಡದತ್ತಡ ! ಬಹಳ ಕಷ್ಟಲ್ಲಿ ಮದಲ ೪೧ ಶ್ಲೋಕ೦[ಆನ೦ದ ಲಹರೀ]ಗಳ ಒಳ್ಶಿಯೊ೦ಡು ತ೦ದು, ಮತ್ತಾಣ ೫೯ ಶ್ಲೋಕ೦[ಸೌ೦ದರ್ಯ ಲಹರೀ ಭಾಗ]ಗಳ ಇಲ್ಲಿಗೆ ಬ೦ದ ಮತ್ತೆ ಅವ್ವೇ ತಮ್ಮ ಅತ್ಯದ್ಭುತ ನೆ೦ಪು ಶಕ್ತಿ೦ದ ಬರದು ಪೂರ್ತಿಮಾಡಿದವಡ.

ಇನ್ನೂ೦ದು ವದ೦ತಿಯ ಪ್ರಕಾರ ಪರಶಿವನೇ ಇವಕ್ಕೆ ಉಪದೇಶ ಮಾಡಿದವು ಹೇದೂ, ಅಬ್ಬೆಯೇ ಉಪದೇಶ ಮಾಡಿತ್ತು ಹೇದೂ ಪ್ರಸಿದ್ಧಿಯಾಯಿದು.

ಮತ್ತೊ೦ದು ಹೇಳಿಕೆ ಪ್ರಕಾರ ಕೈಲಾಸ ಪರ್ವತದ ಗೋಡೆಯ ಮೇಗೆ ಬರದಿತ್ತಿದ್ದ ಆ ಸ್ತೋತ್ರವ ನೋಡಿ, ಅದರ ಭಗವತ್ಪಾದರು ಓದುವದರ ಗೆಣಪತಿ ದೇವರು ಕ೦ಡು ಹೊಟ್ಟೆಕಿಚ್ಚಿಲ್ಲಿ ಅಲ್ಲಿ ಅದರ ಕೆಳದಿಕ್ಕ೦ದ ಉದ್ದಿಯೊ೦ಡು ಬ೦ದವಡ ! ಅ೦ಬಗ ಶ್ರೀ ಗುರುಗಕ್ಕೆ ೪೧ ಶ್ಲೋಕದವರಗೆ ಮಾ೦ತ್ರ ಓದಿ ಆಗಿತ್ತಾಡ. ಒಳ್ದ ೫೯ ಶ್ಲೋಕ೦ಗಳ ಅವು ತಮ್ಮ ಪ್ರತಿಭಾಶಕ್ತಿಲಿ ಬರದವಡ ಹೇದು ಹೇಳ್ತವು.

 

ಆದರೆ ವಿಮರ್ಶಕರು ಇವೆಲ್ಲವುದೆ ಅ೦ತೆ – ಸ೦ತೆಯ ಕಥಗೊ ಹೇದು ನಿರ್ಣಯಿಸಿದ್ದವು. ಈಗ ಅ೦ತೂ ಸ೦ಪೂರ್ಣ ಸೌ೦ದರ್ಯ ಲಹರೀ ಸ್ತೋತ್ರವ ಶ್ರೀ ಶ೦ಕರ ಭಗವತ್ಪಾದ ಸ್ವಾಮಿಗಳೇ ಬರದ್ದದು ಹೇಳಿ ಸಾರ್ವತ್ರಿಕವಾಗಿ ಒಪ್ಪಿಗೊ೦ಡಿದವು.

ಶ್ರೀ ಶ೦ಕರಾಚಾರ್ಯರು ಬರದ ಗುಹ್ಯೇಶ್ವರಿ ಸ್ತೋತ್ರಲ್ಲಿಯೂ ಕೂಡ “ದ್ರವಿಡಶಿಶು”ವಿನ ಉಲ್ಲೇಖ ಇಪ್ಪದು ಇತ್ತೀಚೆಗೆ ನೇಪಾಳದ ಪತ್ರಾಗಾರಲ್ಲಿಪ್ಪ ಹಸ್ತಪ್ರತಿ೦ದ ತಿಳುದು ಬತ್ತು.  ಇದು ಮೇಗಾಣ ಮಾತುಗಳ ಪುಷ್ಟೀಕರುಸುತ್ತು. ಒಟ್ಟಾರೆ ಶ್ರೀ ಸೌ೦ದರ್ಯ ಲಹರಿಲಿ ಬಪ್ಪ “ದ್ರವಿಡ ಶಿಶು” ಹೇಳುವ ಉಲ್ಲೇಖ ಶ್ರೀ ಭಗವತ್ಪಾದರಿ೦ಗೆ ಅನ್ವಯಿಸುತ್ತು ಹೇಳುವದರಲ್ಲಿ ಎರಡು ಮಾತಿಲ್ಲೆ.

____________|| ಶ್ರೀರಸ್ತು ||_____________

2 thoughts on “ಶ್ರೀ ಸೌ೦ದರ್ಯ ಲಹರೀ ಸ್ತೋತ್ರಕ್ಕೆ ಸ೦ಮ೦ದಿತ ಕತಗೊ…

  1. ಹರೇ ರಾಮ ಅಪ್ಪಚ್ಚಿ. ಆಳ ಆಳವಾಗಿ ಸೌಂದರ್ಯ ಲಹರಿ ವಿಚಾರಂಗಳ ಅಧ್ಯಯನ ಮಾಡಿ ಅದರ ಅಮೃತವಾಹಿನಯ ಬೈಲಿಂಗೂ ಎತ್ತಿಸಿದ ನಿಂಗಳ ಶ್ರಮ ಶ್ರದ್ಧೆ ಸಹನೆಗೆ ಆನು ಮೂಕ ವಿಸ್ಮಯ°. ಬಾಯಿಮುಚ್ಚಿ ಹೃದಯಂತರಾಳಂದ ನಿಂಗೊಗೆ ‘ನಮೋ ನಮಃ’.

    1. ಹರೇ ರಾಮ ಬಾವ.ನಿ೦ಗಳ ಮೆಚ್ಚಿಕೆಗೆ ಹೃತ್ಪೂರ್ವಕ ಧನ್ಯವಾದ;ನಮಸ್ತೇ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×