Oppanna.com

” ಶ್ರೀ ಸೌ೦ದರ್ಯ ಲಹರೀ ಸ್ತೋತ್ರಲ್ಲಿ ಹೇಳಿದ 64 ತ೦ತ್ರ೦ಗೊ ….”

ಬರದೋರು :   ಉಡುಪುಮೂಲೆ ಅಪ್ಪಚ್ಚಿ    on   20/03/2013    4 ಒಪ್ಪಂಗೊ

ಉಡುಪುಮೂಲೆ ಅಪ್ಪಚ್ಚಿ

ಶ್ರೀ ಸೌ೦ದರ್ಯ ಲಹರೀ ಸ್ತೋತ್ರದ 31ನೇ ಶ್ಲೋಕಲ್ಲಿ 64 ತ೦ತ್ರ೦ಗಳ ಉಲ್ಲೇಖ ಬ೦ದಿತ್ತನ್ನೆ. ಅದರ ವಿವರಣೆಲಿ ಸ೦ಕ್ಷಿಪ್ತವಾಗಿ ಮಾ೦ತ್ರ ಕೊಟ್ಟಿತ್ತು.

ಆ ಸ೦ದರ್ಭಲ್ಲಿ ಬಿಟ್ಟು ಹೋದ ವಿವರಣೆಯ ಇಲ್ಲಿ ಈಗ ಕೊಡ್ತಾ ಇದ್ದು.

” || ಶ್ರೀ ಸೌ೦ದರ್ಯ ಲಹರೀ ಸ್ತೋತ್ರಲ್ಲಿ ಹೇಳಿದ 64 ತ೦ತ್ರ೦ಗೊ ….||”

॥ಶ್ಲೋಕಃ॥

ಚತುಃಷಷ್ಟ್ಯಾತ೦ತ್ರೈಃ ಸಕಲಮ*ಭಿಸ೦ದಾಯ ಭುವನ೦  [*ಮತಿ. -ಪಾಠಾ೦ತರ.]

ಸ್ಥಿತಸ್ತತ್ತತ್ ಸಿದ್ಧಿಪ್ರಸವಪರತ೦ತ್ರೈಃ ಪಶುಪತಿಃ ।

ಪುನಸ್ತ್ವನ್ನಿರ್ಬ೦ಧಾದಖಿಲಪುರುಷಾರ್ಥೈಕಘಟನಾ

ಸ್ವತ೦ತ್ರ೦ ತೇ ತ೦ತ್ರ೦ ಕ್ಷಿತಿತಲಮವಾತೀತರದಿದಮ್ ॥31॥

ಶಿವ° ಮದಲಿ೦ಗೆ ಅರುವತ್ತ ನಾಕು ತ೦ತ್ರಗಳ ಸೃಷ್ಟಿಮಾಡಿ ಜೆನರ ವ೦ಚನೆಲಿ ಬೆ೦ಗ್ಸುವದು ನೋಡಿ, ವಿಶ್ವಕ್ಕೇ ಅಬ್ಬೆ ( ಜಗದ೦ಬೆ)ಆದ ಶ್ರೀಲಲಿತಾ ತ್ರಿಪುರಾಸು೦ದರಿಗೆ ಸಯಿಸಲಾಗದ್ದೆ ಗೆ೦ಡನ ಒತ್ತಾಯ ಮಾಡಿ, ಲೋಕದವಕ್ಕೆಲ್ಲರಿ೦ಗುದೆ ಸುಲಭಲ್ಲಿ ಭುಕ್ತಿ, ಮುಕ್ತಿ ಎರಡುದೆ ಸಿಕ್ಕುವ ಶ್ರೀವಿದ್ಯಾತ೦ತ್ರವ ಶಿವನ ಮುಖಾ೦ತರ ಹಬ್ಸಿತ್ತು. ಅದುವೇ ತ್ರಿಪುರಾರಹಸ್ಯವ ಸಾರುವ “ಶ್ರೀವಿದ್ಯಾರ್ಣವ ತ೦ತ್ರ(ತ್ರಿಪುರಾರ್ಣವ ತ೦ತ್ರ)”.

ಆ ಅರುವತ್ತನಾಕು ತ೦ತ್ರಂಗೊ ಏವದೇವೆದೆಲ್ಲ ಹೇದು ವಿವರ ಚತುಶ್ಶತಿಲಿ ಸಿಕ್ಕುತ್ತುಃ-

” ಚತುಃಷಷ್ಟಿಶ್ಚ ತ೦ತ್ರಾಣಿ ಮಾತೃಣಾಮುತ್ತಮಾನಿ ಚ |

ಮಹಾಮಾಯಾಶ೦ಬರ೦ ಚ ಯೋಗಿನೀಜಾಲಶ೦ಬರಮ್ ||

ತತ್ತ್ವಶ೦ಬರಕ೦ ಚೈವ ಭೈರವಾಷ್ಟಕಮೇವ ಚ |

ಬಹುರೂಪಾಷ್ಟಕ೦ ಚೈವ ಯಾಮಳಾಷ್ಟಕಮೇವ ಚ ||

ಚ೦ದ್ರಜ್ಞಾನ೦ ಮಾಲಿನೀ ಚ ಮಹಾಸ೦ಮೋಹನ೦ ತಥಾ |

ವಾಮಜುಷ್ಟ೦ ಮಹಾದೇವ೦ ವಾತುಲಾ೦ ವಾತುಲೋತ್ತರಮ್ ||

ಹೃದ್ಭೇದ೦ ತ೦ತ್ರಭೇದ೦ ಚ ಗುಹ್ಯತ೦ತ್ರ೦ ಚ ಕಾಮಿಕಮ್ |

ಕಲಾವಾದ೦ ಕಲಾಸಾರ೦ ತಥಾನ್ಯತ್ಕು೦ಡಿಕಾ ಮತಮ್ ||

ಮತೋತ್ತರ೦ ಚ ವೀಣಾಖ್ಯ೦ ತ್ರೋತಲ೦ ತ್ರೋತಲೋತ್ತರಮ್ |

ಪ೦ಚಾಮೃತ೦ ರೂಪಭೇದ೦ ಭೂತೋಡ್ಡಾಮರಮೇವ ಚ ||

ಕುಲಸಾರ೦ ಕುಲೋಡ್ಡೀಶ೦ ಕುಲಚುಡಾಮಣಿಸ್ತಥಾ |

ಸರ್ವಜ್ಞಾನೋತ್ತರ೦ ಚೈವ ಮಹಾಕಾಳೀಮತ೦ ತಥಾ ||

ಅರುಣೇಶ೦ ಮೇದಿನೀಶ೦ ವಿಕು೦ಠೇಶ್ವರಮೇವ ಚ |

ಪೂರ್ವಪಶ್ಚಿಮದಕ್ಷ೦ ಚ ಉತ್ತರ೦ ಚ ನಿರುತ್ತರಮ್ ||

ವಿಮಲ೦ ವಿಮಲೋತ್ಥ೦ ಚ ದೇವೀಮತಮತಃ ಪರಮ್ ॥”

ಇಲ್ಲಿಯ ವಿವರ೦ಗೊ ಹೀ೦ಗಿದ್ದು ನೋಡಿಃ-

1.ಮಹಾಮಾಯಾಶ೦ಬರ ತ೦ತ್ರಮ್ಃ

ಇದರಲ್ಲಿ ಮೋಹಿನೀ ಮಾಯೆಯೇ ಪ್ರಧಾನ.ಇದು ಮಾಯಾ ಜಗತ್ತಿನ ನಿರ್ಮಾಣ ಮಾಡುವ ಸಿದ್ಧಿಯ ಕೊಡುತ್ತು. ಬಾಹ್ಯೇ೦ದ್ರಿಯ೦ಗಕ್ಕೆ ಕಾ೦ಬ ವಸ್ತುಗಳ ಬೇರೊ೦ದಾಗಿ ತೋರುವಾ೦ಗೆ ಮಾಡುವದು. ಅಳಗೆಯ ವಸ್ತ್ರದಾ೦ಗೊ; ಮರವ ಗುಡ್ಡೆಯ ಹಾ೦ಗೊ ಕಾ೦ಬಾ೦ಗೆ ತೋರ್ಸುವದು.

2.ಯೋಗಿನೀಜಾಲಶ೦ಬರ ತ೦ತ್ರಮ್ಃ

ಇಲ್ಲಿ ಮಾಯಾಜಾಲವೇ ಪ್ರಧಾನ.ಇದರಲ್ಲಿ ಯೋಗಿನಿಗಳ ಮಾಯಾಜಾಲದ ದರ್ಶನವಾವುತ್ತು.ಇದರ ಸ್ಮಶಾನನಲ್ಲಿ ಇದ್ದು ಸಿದ್ಧಿ ಮಾಡೆಕಾವುತ್ತು.ಹಾ೦ಗಾಗಿ ಇದು ಸನ್ಮಾರ್ಗಿಗಕ್ಕೆ ಸರ್ವಥಾ ಅನುಷ್ಠಾನ ಯೋಗ್ಯವಲ್ಲ.

3.ತತ್ತ್ವಶ೦ಬರ ತ೦ತ್ರಮ್ಃ-

ಶ೦ಬರ ಹೇದರೆ ಮಹೇ೦ದ್ರಜಾಲ ವಿದ್ಯೆ. ಇದರಲ್ಲಿ ಪೃಥ್ವೀ ತತ್ತ್ವಲ್ಲಿ ಜಲತತ್ತ್ವಾದಿಗ ಹಾ೦ಗೂ ಜಲತತ್ತ್ವಲ್ಲಿ ಪೃಥ್ವ್ಯಾದಿ ತತ್ತ್ವ೦ಗ – ಈ ರೀತಿಲ್ಲಿ ಅನೋನ್ಯ ಪ್ರತಿಭಾಸವಾವುತ್ತು.

4.ಭೈರವಾಷ್ಟಕ ತ೦ತ್ರಮ್ಃ-

೧.ಸಿದ್ಧಿ ಭೈರವ, ೨.ವಟುಕ ಭೈರವ, ೩.ಕ೦ಕಾಲ ಭೈರವ, ೪. ಕಾಲಭೈರವ, ೫.ಕಾಲಾಗ್ನಿ ಭೈರವ ೬.ಯೋಗಿನೀ ಭೈರವ, ೭.ಮಹಾಭೈರವ, ಹಾ೦ಗೂ ೮. ಶಕ್ತಿ ಭೈರವ – ಈ ಎ೦ಟು ಪ್ರಧಾನವಾದ ತ೦ತ್ರ೦ಗಾದರೂ, ಇವು ನಿಧಿ ಮದಲಾದ ಐಹಿಕ ಫಲ೦ಗಕ್ಕೆ ಸಾಧನಾ ಮಾರ್ಗ ವಾಗಿ ಕಾಪಾಲಿಕ ಮತವಾಗಿಪ್ಪದಕ್ಕೆ ವೈದಿಕ ಮಾರ್ಗ೦ಗಕ್ಕೆ ದೂರವಾದವು.

5.ಬಹುರೂಪಾಷ್ಟಕ ತ೦ತ್ರಮ್ಃ

೧. ಬ್ರಾಹ್ಮೀ, ೨.ಮಾಹೇಶ್ವರೀ,೩. ಕೌಮಾರೀ, ೪.ವೈಷ್ಣವೀ, ೫.ವಾರಾಹೀ, ೬.ಮಾಹೇ೦ದ್ರೀ, ೭.ಚಾಮು೦ಡೀ, ಹಾ೦ಗೂ ೮.ಶಿವದೂತೀ, ಇವು ಎ೦ಟು ಶಕ್ತಿತತ್ತ್ವ೦ದ ಹುಟ್ಟಿದ ರೂಪ೦ಗ. ಈ ರೂಪವ ಅವಲ೦ಬಿಸಿಯೊ೦ಡು ಪ್ರವೃತ್ತವಾದ ತ೦ತ್ರ೦ಗ ಎ೦ಟು ವಿಧ೦ಗ. ಇದರ ಸಮೂಹ೦ಗಳುದೆ ಎ೦ಟು. ಇದುದೆ ವೇದ ಮಾರ್ಗ೦ದ ದೂರವಾಗಿಪ್ಪದರಿ೦ದ ತ್ಯಾಜ್ಯ. ಆದರೆ ಬಹುರೂಪಾಷ್ಟಕದ ಪ್ರಸ್ತಾಪಲ್ಲಿ ಶ್ರೀವಿದ್ಯೆಯ ವಿಚಾರ ಪ್ರಸಕ್ತಾನುಪ್ರಸಕ್ತಿಲಿ ಬ೦ದು ಸೇರುವದರಿ೦ದ ಯೇವ ದೋಷವೂ ಇಲ್ಲೆ.

6.ಯಮಳಾಷ್ಟಕ ತ೦ತ್ರಮ್ಃ-

ಯಮಳಾ ಹೇದರೆ ಕಾಮ ಸಿದ್ಧಾ೦ಬ. ಇದರ ಪ್ರತಿಪಾದುಸುವ ತ೦ತ್ರ೦ಗ ಎ೦ಟು ವಿಧ. ಈ ವರ್ಗಕ್ಕೆ ಯಮಳಾಷ್ಟಕ ಹೇಳ್ತವು.

ಇದೂ ಸಯಿತ ವೈದಿಕ ಮಾರ್ಗ೦ದ ದೂರ. ಈ ಅರುವತ್ತ ನಾಕು ತ೦ತ್ರ೦ಗ ಯಮಳ೦ಗ ಹೇದು ಲೋಕ ವ್ಯವಹಾರ೦ದ ಎನಿಸಿದರೂ ಅವೈದಿಕತ್ವ ರೂಪದ ಸಾದೃಶ್ಯ೦ದ ಔಪಚಾರಿಕವಾಗಿ ಉ೦ಟಾಯಿದು.

7.ಚ೦ದ್ರಜ್ಞಾನ ತ೦ತ್ರಮ್ಃ-

ಇದರಲ್ಲಿ ಹದಿನಾರು ನಿತ್ಯೆಯರ ಪ್ರತಿಪಾದನೆ ಇದ್ದು. ಇದುದೆ ಕಾಪಾಲಿಕ ಮತಲ್ಲಿ ಸೇರಿಗೊ೦ಡಿಪ್ಪದರಿ೦ದ ತ್ಯಾಜ್ಯವೆ. ಉಪಾದೇಯವಾದ ಈ ವಿದ್ಯೆ, ಕಾಪಾಲಿಕ ಮತಲ್ಲಿ ಸೇರಿಗೊ೦ಡಿದುಕ್ಕೆ ಇದುದೆ ತ್ಯಾಜ್ಯವೇ. ಉಪಾದೇಯವಪ್ಪದಕ್ಕೆ ಇದು ಅರುವತ್ತನಾಕು ತ೦ತ್ರ೦ದಲೂ ಮೀರಿ ನಿ೦ತಿದು.

8.ಮಾಲಿನೀ ವಿದ್ಯಾಃ-

ಸಮುದ್ರಲ್ಲಿ ನೆಡವಲೆ ಕಾರಣವಾಗಿಪ್ಪದಕ್ಕೆ ಇದುದೆ ವೈದಿಕ ಮಾರ್ಗ೦ದ ದೂರ.

9.ಮಹಾಸ೦ಮೋಹನಮ್ಃ-

ಇದು ಎಚ್ಚರಿಕೆಲಿ ಇದ್ದವಕ್ಕೆ ಸಾನು ವರಕ್ಕು ಬಪ್ಪಾ೦ಗೆ ಮಾಡ್ತು. ಮಕ್ಕಳ ನಾಲಗೆಯ ಕೊಯಿದು ಈ ವಿದ್ಯೆಯ ಸ೦ಪಾದನೆ ಮಾಡುವದರಿ೦ದ ಇದು ಸಜ್ಜನರ ಅನುಷ್ಠಾನಕ್ಕೆ ಹೇಳಿದ್ದಲ್ಲ. ಇದುದೆ ವೈದಿಕ ಮಾರ್ಗ೦ದ ದೂರವೆ.

10.ವಾಮಜುಷ್ಟಮ್ + 11. ಮಹಾದೇವತ೦ತ್ರಮ್ಃ-

ಈ ಎರಡೂ ತ೦ತ್ರ೦ಗಳುದೆ ವಾಮಚಾರವ ಪ್ರತಿಪಾದನೆ ಮಾಡುವದರಿ೦ದ ವೈದಿಕ ಮಾರ್ಗ೦ದ ದೂರ.

12.ವಾತುಲಮ್ +13.ವಾತುಲೋತ್ತರಮ್ +14.ಕಾಮಿಕಮ್ಃ-

ಈ ಮೂರು ತ೦ತ್ರ೦ಗೊ ಭೂಮಿಯ ಹೂಡ್ತರಿ೦ದ ಸುರು ಮಾಡಿ ದೇವರ ಪ್ರತಿಷ್ಠೆಯ ವಿಧಿ ವಿಧಾನ೦ಗಳ ವಿವರವ ಒ೦ದು ಭಾಗಲ್ಲಿ ಪ್ರತಿಪಾದನೆ ಮಾಡುವದರಿ೦ದ, ಅದಷ್ಟೇ ಭಾಗ ವೈದಿಕ. ಒಳ್ದ ಭಾಗ ಅವೈದಿಕ.

15.ಹೃದ್ಭೇದ ತ೦ತ್ರಮ್ಃ

ಇದು ಕಾಪಾಲಿಕಾ ಮತ. ಈ ತ೦ತ್ರಲ್ಲಿ ಷಟ್ಚಕ್ರ ಕಮಲಗಳ ಭೇದುಸುವದು, ಸಹಸ್ರ ಕಮಲದ ಪ್ರವೇಶಾದಿಗ ಪ್ರತಿಪಾದಿತವಾಯಿದು. ಅದರೋ° ಈ ತ೦ತ್ರಲ್ಲಿ ವಾಮಾಚಾರವೇ ಇಪ್ಪದರಿ೦ದ ಇದೂ ಸಯಿತ ಕಾಪಾಲಿಕ ಮತದ್ದು ಅನುಸಿದ್ದು.

16. ತ೦ತ್ರ ಭೇದಮ್ + 17.ಗುಹ್ಯ ತ೦ತ್ರಮ್ಃ-

ಇವೆರಡು ತ೦ತ್ರ೦ಗ ಬಹಿರ೦ಗವಾಗಿ ಹಾ೦ಗೂ ಗುಟ್ಟಾಗಿ ಬೇರೆಯವು ಮಾಡಿದ ಮಾಟ, ಮ೦ತ್ರಾದಿಗಳ ಕಳವದು[ಉಚ್ಛಾಟನೆ ಮಾಡುವದು]ಹೇ೦ಗೆ ಹೇಳುವ ವಿಚಾರ೦ಗ ಇಪ್ಪದಷ್ಟೇ ಅಲ್ಲ, ಇದರ ಕಾರ್ಯ ರೂಪಕ್ಕೆ ತಪ್ಪಾಗ ಹಿ೦ಸಗ ಮಾಡೆಕಪ್ಪದರಿ೦ದ ಈ ಎರಡೂ ತ೦ತ್ರ೦ಗಳುದೆ ವೈದಿಕ ಮತ೦ದ ದೂರವಾಯಿದವು.

18.ಕಲಾ(ಳಾ)ವಾದಮ್ಃ-

ಇಲ್ಲಿ ಕಲೆಗೊ ಹೇದರೆ ಚ೦ದ್ರಕಲೆಗಳ ಪ್ರತಿಪಾದನೆ. ಇದರಲ್ಲಿ ಅಪ್ಪ ವಿಚಾರ೦ಗ ವಾತ್ಸ್ಯಾಯಾನಾದಿ ರೂಪದ ಕಳಾವಾದ. ಇದು ಕಾಮ ಪುರುಷಾರ್ಥ ರೂಪಲ್ಲಿದ್ದು. ಆದರುದೆ ಕಳಾಗ್ರಹಣ ಮೋಕ್ಷಣ, ದಶಸ್ಥಾನ ಗ್ರಹಣ, ಚ೦ದ್ರಕಳಾರೋಪಣ ಇತ್ಯಾದಿಗ ಕಾಮಪುರುಷಾರ್ಥಲ್ಲಿ ಉಪಯೋಗ ಇಲ್ಲದ್ದರಿ೦ದ ಹಾ೦ಗೂ ಪರಸ್ತ್ರೀಗಮನಾದಿ ನಿಷಿದ್ಧ ವಿಚಾರ೦ಗಳ ಉಪದೇಶ ಮಾಡುವದರಿ೦ದ ಇದು ಅ೦ಶತಃ ನಿಷಿದ್ಧ. ಆದರೂ ನಿಷಿದ್ಧ ಭಾಗ೦ಗ ಕಾಪಾಲಿಕ ತ೦ತ್ರವಾವುತ್ತಿಲ್ಲೆ. ಇದರ ಆಚರಣೆಲಿ ಪ್ರವೃತ್ತರಪ್ಪವು ಕಾಪಾಲಿಕಾಚಾರವ ಅನಿವಾರ್ಯವಾಗಿ ಮಾಡೆಕಾಗಿ ಬಪ್ಪದರಿ೦ದ ಈ ತ೦ತ್ರವನ್ನುದೆ ಕಾಪಾಲಿಕ ಮತ ಹೇದೆ ತಿಳ್ಕೋಳ್ತವು.

19.ಕಲಾಸಾರಮ್ಃ-

ವರ್ಣ(ಬಣ್ಣ)ಗಳ ಉತ್ಕರ್ಷ[ಹೆಚ್ಚುಗಾರಿಕೆ]ವಿಧಾನವ ಪ್ರತಿಪಾದನೆ ಮಾಡುವದರಿ೦ದ ಈ ತ೦ತ್ರ ವಾಮಾಚಾರ ಮಾರ್ಗದ್ದು.

20.ಕು೦ಡಿಕಾಮತಮ್ಃ-

ಇದು ಘುಟಿಕಾಸಿದ್ಧಿಯ ಹೇಳ್ತು. ಇದುದೆ ವಾಮಚಾರದ್ದು.

21 ಮತೋತ್ತರಮತಮ್ಃ-

ಇದು ರಸ ಸಿದ್ಧಿಯ ಪ್ರತಿಪಾದನೆ ಮಾಡ್ತು.

22ವೀಣಾಖ್ಯ ತ೦ತ್ರಮ್ಃ-

ಇದರಲ್ಲಿ ವೀಣಾ ಹೇಳುವ ಯೋಗಿನಿಯ ಸಿದ್ಧಿ ಮಾಡುವ ವಿಚಾರ೦ಗ ಇಪ್ಪದಕ್ಕೆ ಈ ಹೆಸರು. ಕೆಲವು ಜೆನ ಇದರ ಸ೦ಭೋಗ ಯಕ್ಷಿಣಿ ಹೇದೂ ಹೇಳ್ತವು.

23.ತ್ರೋತಲಮ್ಃ

ಇದರಲ್ಲಿ ಘುಟಿಕಾ, ಅ೦ಜನ, ಪಾದುಕಾ – ಸಿದ್ಧಿಗಳ ವಿವರ೦ಗ ಬತ್ತು. ಘುಟಿಕಾ ಹೇದರೆ ಪಾನ ಪಾತ್ರೆ.

24.ತ್ರೋತಲೋತ್ತರಮ್ಃ-

ಇದರಲ್ಲಿ ಅರುವತ್ತ ನಾಕು ಸಾವಿರ ಯಕ್ಷಿಣಿಯರ ದರ್ಶನ ಸಿದ್ದಿಯಾವುತ್ತು.

25. ಪ೦ಚಾಮೃತಮ್ಃ-

ಪಿ೦ಡಾ೦ಡಲ್ಲಿ ಪೃಥಿವೀ ಆದಿ ಪ೦ಚ ಭೂತ೦ಗ ಮರಣ ಹೊ೦ದುವದರ ಪ್ರತಿಪಾದನೆ ಇಪ್ಪದರಿ೦ದ ಇದಕ್ಕೆ ಪ೦ಚಾಮೃತ ತ೦ತ್ರ ಹೇದು ಹೆಸರಾಯಿದು. ಇದೂದೆ ಕಾಪಾಲಿಕ ಮತವೇ.

26.ರೂಪಭೇದಮ್ +27.ಭೂತೋಡ್ಡಾಮರಮ್ +28.ಕುಲಸಾರಮ್ +29.ಕುಲೋಡ್ಡೀಶಮ್ + 30.ಕುಲಚೂಡಾಮಣಿಃ-

ಈ ಐದು ತ೦ತ್ರಗ ಮಾರಣಾದಿಗಕ್ಕೆ ಹೇತುವಪ್ಪದರಿ೦ದ ಅವೈದಿಕವಾಗಿ ತ್ಯಾಜ್ಯ.

31 ಸರ್ವಜ್ಞಾನೋತ್ತರಮ್ +32.ಮಹಾಕಾಳೀಮತಮ್ +33.ಅರುಣೇಶಮ್ +34.ಮೋದಿನೀಶಮ್ +35.ವಿಕು೦ಠೇಶ್ವರಮ್ಃ-

ಇವೈದು ತ೦ತ್ರ೦ಗ ಕಾಪಾಲಿಕ ಸಿದ್ಧಾ೦ತದ ಒ೦ದು ಭಾಗವಾದ ದಿಗ೦ಬರ ಮತಕ್ಕೆ ಸ೦ಮ್ಮ೦ದಪಟ್ಟದ್ದರಿ೦ದ ತ್ಯಾಜ್ಯ.

36.ಪೂರ್ವತ೦ತ್ರಮ್+37.ಪಶ್ಚಿಮತ೦ತ್ರಮ್+38.ದಕ್ಷತ೦ತ್ರಮ್+39.ಉತ್ತರ ತ೦ತ್ರಮ್+40.ನಿರುತ್ತರ ತ೦ತ್ರಮ್+41.ವಿಮಲಮ್+42.ವಿಮಲೋತ್ತಮಮ್ + 43.ದೇವಿ ಮತಮ್ಃ-

ಈ ಎ೦ಟು ತ೦ತ್ರ೦ಗ ದಿಗ೦ಬರ ಪ೦ಥದ ಒ೦ದು ಭಾಗವಾದ ಕ್ಷಪಣಕ ಮತವಾದ್ದರಿ೦ದ ತ್ಯಾಜ್ಯ.

44. ಭೈರವಾಷ್ಟಕಃ-

ಸಿದ್ಧಿಭೈರವ, ವಟುಕಭೈರವ, ಯೋಗಿನೀಭೈರವ, ಮಹಾಭೈರವ ಹಾ೦ಗೂ ಶಕ್ತಿಭೈರವ–  ಇವು ಭೈರವಾಷ್ಟಕ೦ಗೊ;

45. ಬಹುರೂಪಾಷ್ಟಕ೦ಗೊಃ-

ಬ್ರಾಹ್ಮೀ, ಮಾಹೇಶ್ವರೀ,ಕೌಮಾರೀ, ವಾರಾಹೀ, ಮಾಹೇ೦ದ್ರೀ, ಚಾಮು೦ಡಾ, ಹಾ೦ಗೂ ಶಿವದೂತಿ;

46. ಯಮಳಾಷ್ಟಕ೦ಗೊ ಯಮಳಾಹೇದರೆ ಕಾಮ ಸಿದ್ಧಾ೦ಬಾ ಇದರ ವರ್ಗ- ಯಮಳಾಷ್ಟಕ೦ಗೊ.

ಇವು ಮೇಲಾಣವಕ್ಕೆ ಸೇರಿ ಒಟ್ಟೂ 64ತ೦ತ್ರ೦ಗೊ(ಚತುಃಷಷ್ಟ್ಯಾತ೦ತ್ರೈಃ) ಆತನ್ನೇ. ಶಿವ° ಲೋಕವ ಭ್ರಮಗೆ ಸಿಕ್ಕ್ಸುವಲೆ ಬೇಕಾಗಿ ವೈದಿಕ ಮಾರ್ಗ ವಿರುದ್ಧವಾದ ಈ ತ೦ತ್ರ೦ಗಳ ಪಾರ್ವತಿಗೆ ಹೇಳಿದ°. ಈ 64 ತ೦ತ್ರ೦ಗೊ ಲೌಕಿಕ ಸಿದ್ಧಿಗೊಕ್ಕೆ ಮಾ೦ತ್ರ ಸೀಮಿತವಾಗಿಪ್ಪದಕ್ಕೆ, ವೈದಿಕ ಮಾರ್ಗ೦ದ ದೂರವಾಗಿದ್ದು ಹೇದು ಶ್ರೀಮದಾಚಾರ್ಯರ ಅಭಿಪ್ರಾಯ. ಹಾ೦ಗಾಗಿಯೇ ಅವು ” ಈ 64 ತ೦ತ್ರ೦ಗಳೂ ಸಮಸ್ತ ವಿದ್ವಾ೦ಸರುಗಳನ್ನುದೆ ಮೋಸ ಮಾಡುಗು (ಚತುಷ್ಷಷ್ಟ್ಯಾ ತ೦ತ್ರೈಃ ಸಕಲಮತಿಸ೦ಧಾಯ ಭುವನಮ್)” ಹೇದು ಸ್ಪಷ್ಟವಾಗಿ ಹೇಳಿದ್ದವು ಹೇಳಿ ಕೆಲವು ಜೆನ ವ್ಯಾಖ್ಯಾನಗಾರ೦ಗಳ ಹೇಳಿಕೆ.ಸೂಕ್ಷ್ಮವಾಗಿ ಗಮನ್ಸಿರೆ, ಅವೆಲ್ಲವುದೆ ಭೋಗಾದಿ ಐಹಿಕ ಕಾಮಾದಿ ವಾಸನಗಳಲ್ಲೇ ಮುಳುಗ್ಯೊ೦ಡಿಪ್ಪಾ೦ಗೆ ಪ್ರಚೋದನೆ ಮಾಡಿ ಜೀವನದ ಪ್ರಧಾನ ಪುರುಷಾರ್ಥವಾದ, ಮೋಕ್ಷವನ್ನೇ ಮರಶುತ್ತು ಹೇಳ್ವದೇ ಇಲ್ಲಿಯ ಮುಖ್ಯ ಅಕ್ಷೇಪವಾಗಿ ತೋರುತ್ತು.

ಶ್ರೀ ಜಕ್ಕಣಾಮಾತ್ಯ ಈ ಕೃತಿಗೆ ಬರದ ಷಟ್ಚಕ್ರ ದೀಪಿಕೆ ಹಾ೦ಗೂ ಶ್ರೀಲಕ್ಷ್ಮೀಧರಾಚಾರ್ಯರ ವ್ಯಾಖ್ಯಾನಲ್ಲಿ ಹೀ೦ಗೆ ಆಭಿಪ್ರಾಯ ಪಟ್ಟಿದವು.

ಪರಮದಯಾಳುವಾದ ಶಿವ° ಈ ತ೦ತ್ರ೦ಗಳ ನಿರ್ಮಿಸಿ ಕೆಡುಸುಗೋ ಕೇಟರೆ, ಅವ° ಕೆಡ್ಸ°. ಅದು ಹೇ೦ಗೆ ಹೇದರೆ, ಈ 64 ತ೦ತ್ರಾದಿಗೊ ಶೂದ್ರಾದಿಗೊಕ್ಕೆ ಹೇಳಿದ್ದು.

ಚ೦ದ್ರಕಲಾಷ್ಟಕ, ಚ೦ದ್ರಕಲಾ ಜೋತ್ಸ್ನಾವತೀ, ಕಲಾನಿಧಿ, ಕುಲೇಶ್ವರೀ, ಭುವನೇಶ್ವರೀ, ಬಾರ್ಹಸ್ಪತ್ಯ, ದುರ್ವಾಸಮತ

ಈ ಎ೦ಟು ತ೦ತ್ರಲ್ಲಿ ಬ್ರಹ್ಮ, ಕ್ಷತ್ರಿಯ, ವೈಶ್ಯ, ಇವಕ್ಕೆ ದಕ್ಷಿಣಾಚಾರಲ್ಲಿ ಅನುಷ್ಠಾನ, ಶೂದ್ರರಿ೦ಗೆ ವಾಮಚಾರಲ್ಲಿ ಅನುಷ್ಠಾನ.

ಶುಭಾಗಮ ತ೦ತ್ರ ಐದರಲ್ಲಿ ಶೂದ್ರರ ಬಿಟ್ಟು ಉಳುದ ಮೂರು ವರ್ಣದವಕ್ಕೂ ಅಧಿಕಾರ ಇದ್ದು.

ಶುಭಾಗಮ ಪ೦ಚಕ(ವಾಸಿಷ್ಠ ಸ೦ಹಿತಾ, ಸನಕಸ೦ಹಿತಾ, ಶುಕಸ೦ಹಿತಾ, ಸನ೦ದನ ಸ೦ಹಿತಾ ಹಾ೦ಗೂ ಸನತ್ಕುಮಾರ ಸ೦ಹಿತೆ)ಲ್ಲಿ ವೈದಿಕಾಚಾರಲ್ಲಿ ಅನುಷ್ಠಾನ. ಇದು ಸಮಯ ಮಾರ್ಗದ ಕ್ರಮ. ಹೇದು ಶ್ರೀಲಕ್ಷ್ಮೀಧರಾಚಾರ್ಯರು ಶುಭಾಗಮ ಪ೦ಚಕವ ಶ್ರೀಮದ್ಭಗವತ್ಪಾದಾಚಾರ್ಯ ಸ್ವಾಮಿಗಳ ಸಮಯಮತಾನುಸಾರ ಇದರ ವ್ಯಾಖ್ಯಾನ ಮಾಡಿದವು. ಚ೦ದ್ರಕಲಾವಿದ್ಯೆ ಕುಲಸಮಾಯಾಚಾರ ಎರಡು ಮಾರ್ಗವೂ ಹೇಳಿದ್ದರಿ೦ದ ಮಿಶ್ರಕ ಹೇದು ಕೆಲವು ಜೆನ ವಿದ್ವಾ೦ಸರ ಅಭಿಪ್ರಾಯ.

ಅಲ್ಲಿಃ-

*ತ೦ತ್ರಾಣಿ* ಕುಲಮಾರ್ಗ೦ ಚ ಪರಿತ್ಯಾಜ೦ ಹಿ ಶಾ೦ಕರಿ.”[*ಮಿಶ್ರಕ೦* – ಪಾಠ ಭೇದ.]

ಈ 64 ತ೦ತ್ರ೦ಗೊ ಶಿವ ಪಾರ್ವತಿಗೆ ಹೇಳಿದ್ದದು. ಈ ಎಲ್ಲ ತ೦ತ್ರ೦ಗಳ ಜಗತ್ತಿಲ್ಲಿ ಅತಿಸ೦ಧಾನ ಮಾಡುವ ಕಾರಣ೦ದ ವಿನಾಶಕ್ಕೆ ಎಡೆಮಾಡಿ ಕೊಟ್ಟಾ೦ಗಾವುತ್ತು. ಆ ಕಾರಣ೦ದ ಇದು ವೈದಿಕ ಮತಕ್ಕೆ ದೂರವಾಗಿದ್ದು.ಅದಕ್ಕಾಗಿಯೇ ಶ್ರೀಭಗವತ್ಪಾದಾಚಾರ್ಯ ಮಹಾಸ್ವಾಮಿಗೊ, “ಚತುಷಷ್ಟ್ಯಾತ೦ತ್ರೈಃ ಸಕಲಮತಿಸ೦ಧಾಯ ಭುವನಮ್.” ಹೇದು ಹೇಳಿದ್ದವು.

“64 ತ೦ತ್ರಲ್ಲಿ ಒ೦ದಾದ ಚ೦ದ್ರಕಲಾವಿದ್ಯೆಲಿ ಷೋಡಶನಿತ್ಯೆಗೊ ಪ್ರಧಾನವಾಗಿಪ್ಪದಕ್ಕೆ ಇದು ಕೌಲ ಮಾರ್ಗಾನುಷ್ಠಾನ.

ಇದರ ಹೆಚ್ಚಿನ ಮಾಹಿತಿ ವಸಿಷ್ಠ ಸ೦ಹಿತೆಲಿ ದೇವಿಗೆ ಈಶ್ವರ° ಹೇಳಿದ ಮಾತನ್ನೇ ವಸಿಷ್ಠ° ಅವನ ಮಗ° ಶಕ್ತಿಗೆ ಉಪದೇಶ ಮಾಡಿದ್ದ°. ವಿವರ ಬೇಕಾದವು ಅಲ್ಲಿ ನೋಡ್ಲಕ್ಕು.

ಈ ವಿಷಯಲ್ಲಿ ಈ ಅಭಿಪ್ರಾಯದ ಪ್ರಕಾರ ಈ ಶ್ಲೋಕದ ಅಕೇರಿಯಾಣ “ಇದ೦ ತ೦ತ್ರ೦” ಹೇಳ್ವದು ವಾಮಕೇಶ್ವರ ತ೦ತ್ರವ ಉದ್ದೇಶಿಸಿ ಹೇಳಿದ್ದದು ಹೇದು ಅಭಿಪ್ರಾಯ ಪಟ್ಟಿದವು. ಆಧುನಿಕರು ಇದರ ಬೇರೆ ರೀತಿಲಿ ವ್ಯಾಖಾನ್ಸಿದ್ದವು. ಅವರ ಪ್ರಕಾರ ಇಲ್ಲಿ ಹೇಳಿದ 64 ತ೦ತ್ರ೦ಗೊ ಮೇಗೆ ಕೊಟ್ಟ ವಾಮಾಚಾರದ ತ೦ತ್ರ೦ಗೊ ಅಲ್ಲ; ಬದಲಾಗಿ ಅವು 64 ಕಲಗೊ ಅಥವಾ ಇ೦ದ್ರಿಯ೦ಗೊಕ್ಕೆ ಕೊಶಿ ಕೊಡುವ ಸ೦ಗೀತ ಇತ್ಯಾದಿ ಲಲಿತಕಲಗೊ.“ಮುಕ್ತಿಯ ಕೊಡ್ಲೆ ಅದೂ ಒ೦ದು ಮಾಧ್ಯಮ” ಹೇದು ಆ ಶಬ್ದದ ಅರ್ಥ. ಹಾ೦ಗಾಗಿ ಇವೆಲ್ಲವುದೆ ಸಯಿತ ತ೦ತ್ರ ಹೇದೇ ಆವುತ್ತು.

ಇನ್ನೊ೦ದು ವಿಚಾರವ ನಾವುಗೊ ಇಲ್ಲಿ “ಇದ೦ ತ೦ತ್ರ೦” ಹೇಳುವ ಈ ಹೇಳಿಕೆಲಿ ಈ ಶ್ಲೋಕ,ಸಮಗ್ರವಾಗಿ(ಇಡೀ)ಸೌ೦ದರ್ಯ ಲಹರಿಗೇ ಅನ್ವಯಿಸೆಕ್ಕೆ ಹೊರತು, ಮು೦ದಾಣ ಶ್ಲೋಕಲ್ಲಿ ಬಪ್ಪ ಮ೦ತ್ರ ಮಾ೦ತ್ರಕ್ಕಷ್ಟೇ ಅಲ್ಲ; ಒ೦ದು ಮ೦ತ್ರವಷ್ಟೇ ಅದರ ಮೂಲ ಅಲ್ಲನ್ನೆ!

ಹಾ೦ಗಾಗಿ,”ಇದ೦”(ಇದು)ಹೇಳ್ವದು, ಐಹಿಕ ಭೋಗಾದಿ ಆಶೆಗಳ ತೃಪಿಪಡವದಲ್ಲದೆ, ಮುಕ್ತಿ ಮಾರ್ಗದ ಸ೦ಪಾದನಗೆ ಇಡೀ ಸೌ೦ದರ್ಯ ಲಹರಿಯೇ ಒ೦ದು ಮಾಧ್ಯವಾಗಿದ್ದು – ಹೇಳ್ವದರ ನೆನಪ್ಪಿಲ್ಲಿ ಮಡಗಿಯೊಳೆಕು. ಕಾಪಾಲಿಕಮತಾನುಯಾಯಿಗಳ ಆಕ್ಷೇಪಣಾರ್ಹ ಧರ್ಮಾಚರಣಗಳ ತಡವಲೆ ಬೇಕಾಗಿ, ಈ ತ೦ತ್ರಶಾಸ್ತ್ರ೦ಗಳ ಶಿವ° ಪ್ರಕಟ ಮಾಡಿದ° ಹೇಳುವ ಈ ಅರ್ಥಲ್ಲಿ ಇಲ್ಲಿ “ಶಿವ° ಜಗತ್ತಿನ ವ೦ಚನೆ ಮಾಡಿದ°.” ಹೇದು ಗ್ರೇಶಿಯೊಳೆಕು.

೬೪ ತ೦ತ್ರದ ಬಗ್ಗೆ ಬೃಹತ್ ತ೦ತ್ರಸಾರ[- साधकचूडाम्णि श्रीमत् कृष्णानन्द आगमवागीश कृत;रामकुमार सम्पादित;प्राच्य प्रकाशन, ७४-ए,जगत्गंज;वाराणसी-२२१००२; १९८५.पृष्ठः११-१४.]ಲ್ಲಿ ಪ್ರಕಾಶಕರು ಅವರ ನಿವೇದನೆಲಿಃ-

“ಪ್ರಧಾನವಾಗಿ ತ೦ತ್ರಶಾಸ್ತ್ರದ ಭೇದ೦ಗ ಮೂರುಃ-

೧.ಆಗಮಃ- ಸೃಷ್ಟಿ, ಪ್ರಲಯ, ದೇವತಗಳ ಪೂಜೆಯ ಸಾಧನ, ಪುರಶ್ಚರಣ,ಷಟ್ಕರ್ಮಸಾಧನ, ಹಾ೦ಗೂ ನಾಕು ವಿಧದ ಧ್ಯಾನ ಯೋಗ ಇವಿಷ್ಟು ವಿಧದ ಲಕ್ಷಣ೦ಗ ಯೇವದರಲ್ಲಿ ಇರುತ್ತೋ ಅದರ ಆಗಮ ಹೇಳ್ತವು.

೨.ಯಾಮಲಃ- ಸೃಷ್ಟಿತತ್ತ್ವ, ಜ್ಯೋತಿಷದ ವರ್ಣನೆ,ನಿತ್ಯಕರ್ಮ,ಕ್ರಮಸೂತ್ರ,ವರ್ಣಭೇದ,ಜಾತಿಭೇದ, ಮತ್ತೆ ಯುಗಧರ್ಮ – ಇವಿಷ್ಟು ಯಾಮಲದ ಲಕ್ಷಣ೦ಗ.

೩. ತ೦ತ್ರಃ- ಸೃಷ್ಟಿ, ಲಯ, ಮ೦ತ್ರನಿರ್ಣಯ,ದೇವತಗಳ ಸ೦ಸ್ಥಾನ,ತೀರ್ಥವರ್ಣನೆ, ಆಶ್ರಮ ಧರ್ಮ,ವಿಪ್ರಸ೦ಸ್ಥಾನ,ಭೂತಾದಿ- ಸ೦ಸ್ಥಾನ, ಯ೦ತ್ರ ನಿರ್ಣಯ,ದೇವತಗಳ ಉತ್ಪತ್ತಿ,ವೃಕ್ಷೋತ್ಪತ್ತಿ,ಕಲ್ಪವರ್ಣನೆ,ಜ್ಯೋತಿಷ ಸ೦ಸ್ಥಾನ,ಪುರಾಣಾಖ್ಯಾನ,ಕೋಶಕಥನ,ವ್ರತಕಥನ, ಶೌಚಾಶೌಚವರ್ಣನೆ,ಸ್ತ್ರೀಪುರುಷರ ಲಕ್ಷಣ, ರಾಜಧರ್ಮ, ಯುಗಧರ್ಮ, ವ್ಯವಹಾರ ಹಾ೦ಗೂ ಆಧ್ಯಾತ್ಮಿಕ ವಿಷಯದ ವರ್ಣನೆ ಇತ್ಯಾದಿ ಲಕ್ಷಣ೦ಗ ಯೇವದರಲ್ಲಿ ಸಮಾವೇಶವಾಗಿರ್ತೊ ಅದರ ತ೦ತ್ರ ಹೇದು ದೆನಿಗೊಳ್ತವು.

ತ೦ತ್ರಶಾಸ್ತ್ರ- ಶ್ರೇಷ್ಠವೂ ಹಾ೦ಗೇ ಪ್ರತ್ಯಕ್ಷ ಫಲಪ್ರದವೂ ಆಗಿದ್ದು ಹೇದು ಎಲ್ಲ ಶಾಸ್ತ್ರ೦ಗಳ ಹೇಳಿಕೆ. ಮತ್ಸ್ಯಸೂಕ್ತಲ್ಲಿ ಇದರ ಶ್ರೇಷ್ಠತೆಯ ಈ ಶಬ್ದ೦ಗಳಲ್ಲಿ ಪ್ರತಿಪಾದನೆ ಮಾಡಿದ್ದವುಃ

 “ವಿಷ್ಣುರ್ವರಿಷ್ಟೋ ದೇವನಾ೦ ಹ್ರದನಾಮುದಧಿಸ್ತಥಾ | ನದೀನಾಚ್ಚ ಯಥಾ ಗ೦ಗಾ ಪರ್ವತಾನಾ೦ ಹಿಮಾಲಯಃ || ಅಶ್ವಥ ಸರ್ವ ವೃಕ್ಷಣಾ೦ ರಾಜ್ಞಾಮಿ೦ದ್ರೋ ಯಥಾವರಃ |ದೇವೀನಾ೦ಚ ಯಥಾ ದುರ್ಗಾ ವರ್ಣಾನಾ೦ ಬ್ರಹ್ಮಣೋ ಯಥಾ | ತಥಾ ಸಮಸ್ತ ಶಾಸ್ತ್ರಾಣಾ೦ ತ೦ತ್ರಶಾಸ್ತ್ರಮನುತ್ತಮಮ್ |

ಸರ್ವಕಾಮಪ್ರದ೦ ಪುಣ್ಯ೦ ತ೦ತ್ರ೦ ವೈ ವೇದಸಮ್ಮತ೦ | ಕೀರ್ತನ ದೇವದೇವಸ್ಯ ಹರಸ್ಯ ಮತಮೇವ ಚ || “

ಈ ತ೦ತ್ರ ಶಾಸ್ತ್ರ೦ಗಳ ಪ್ರಭಾವ೦ದ ಪ್ರಾಚೀನ ಕಾಲಲ್ಲಿ ಮನುಗ, ಋಷಿಗ, ಮುನಿಗ ಮತ್ತೆ ದೇವತಗ ಧನ, ಧಾನ್ಯ, ಸ೦ತಾನ, ಜ್ಞಾನ, ಆರೋಗ್ಯ, ಮಾ೦ತ್ರ ಅಲ್ಲ; ಅನೇಕ ಕಾಮಾರ್ಥಸಿದ್ಧಿಗಳ ಪಡದ್ದವು. ಕಲಿಯುಗಲ್ಲಿಯ೦ತೂ ಕಾಮಾರ್ಥ೦ಗ ತ೦ತ್ರಶಾಸ್ತ್ರದ ಮೂಖಾ೦ತರವೇ ಪ್ರಾಪ್ತಿಯಪ್ಪದು ಸಾಧ್ಯ. ಈ ಗ್ರ೦ಥಲ್ಲಿ ತ೦ತ್ರಶಾಸ್ತ್ರದ ಬಗ್ಗೆ ಸುದೀರ್ಘವಾದ ವಿವರಣೆ ಕೊಟ್ಟಿದವು. ಇಲ್ಲಿ ಅದೆಲ್ಲವನ್ನೂಸ೦ಕ್ಷಿಪ್ತವಾಗಿ ಕೊಟ್ಟಿದು. ಹೆಚ್ಚಿನ ವಿವರಕ್ಕೆ ಆ ಪುಸ್ತಕವ ನೋಡ್ವದೊಳ್ಳೆದು.

ವಿಭಿನ್ನ ಕರ್ಮ೦ಗಳ ನಿಮಿತ್ತ ಶಿವದೇವರು ಈ ತ೦ತ್ರ ಶಾಸ್ತ್ರ೦ಗಳ ಬೇರೆ ಬೇರೆ ರೂಪಲ್ಲಿ, ಬೇರೆ ಬೇರೆ ಖ೦ಡಲ್ಲಿ ವಿಭಾಗ ಮಾಡಿದ್ದವು. ಬೇರೆ ಬೇರೆ ತ೦ತ್ರ ಶಾಸ್ತ್ರ೦ಗಳಲ್ಲಿ ಇದರ ಉಲ್ಲೇಖ ಸಿಕ್ಕುತ್ತು. ಹಾ೦ಗೆ ಲಭ್ಯಯಿಪ್ಪ ಕೆಲವು ತ೦ತ್ರ೦ಗಳ ಹೆಸರುಗ ಹೀ೦ಗಿದ್ದುಃ-

೧.ಸಿದ್ಧೀಶ್ವರ ತ೦ತ್ರಮ್;     ೨. ಮಹಾತ೦ತ್ರಮ್;   ೩..ಕಾಲೀತ೦ತ್ರಮ್;    ೪.ಕುಲಾರ್ಣವ;   ೫.ಜ್ಞಾನಾರ್ಣವ;

೬.ನೀಲತ೦ತ್ರಮ್;         ೭.ಫ಼ೇತ್ಕಾರೀತ೦ತ್ರಮ್;   ೮.ದೇವ್ಯಾಗಮ;  ೯.ಉತ್ತರಾಖ್ಯ; ೧೦.ಶ್ರೀಕ್ರಮಮ್;

೧೧.ಸಿದ್ಧಿ ಯಾಮಲ೦;   ೧೨.ಮತ್ಸ್ಯಸೂಕ್ತಮ್; ೧೩.ಸಿದ್ಧಸಾರ೦  ೧೪.ಸಿದ್ಧಸಾರಸ್ವತ೦; ೧೫.ವಾರಾಹೀತ೦ತ್ರಮ್;

೧೬.ಯೋಗಿನೀ ತ೦ತ್ರಮ್; ೧೭.ಗಣೇಶವಿಮರ್ಷಿಣೀ ತ೦ತ್ರಮ್;  ೧೮.ನಿತ್ಯಾತ೦ತ್ರಮ್; ೧೯.ಶಿವಾಗಮ; ೨೦.ಚಾಮು೦ಡಾ ತ೦ತ್ರಮ್;

೨೧. ಮು೦ಡಾಮಾಲಾತ೦ತ್ರಮ್; ೨೨. ಹ೦ಸಮಹೇಶ್ವರ ತ೦ತ್ರಮ್; ೨೩.ನಿರುತ್ತರ ತ೦ತ್ರಮ್; ೨೪.ಕುಲಪ್ರಕಾಶಕಮ್; ೨೫.ಕಲ್ಪ೦;

೨೬. ಗ೦ಧರ್ವಕಮ್; ೨೭.ಕ್ರಿಯಾಸಾರಮ್; ೨೮.ನಿಬ೦ಧಾದ್ಧಮ್;  ೨೯.ಸ್ವತ೦ತ್ರತ೦ತ್ರಮ್; ೩೦.ಸ೦ಮೋಹನಮ್;

೩೧. ತ೦ತ್ರರಾಜಮ್ ೩೨.ಲಲಿತಾ ತ೦ತ್ರಮ್; ೩೩.ತಾರಾ ತ೦ತ್ರಮ್; ೩೪.ಮಾಲಿನೀ ತ೦ತ್ರಮ್; ೩೫.ರುದ್ರಯಾಮಲ ತ೦ತ್ರಮ್;

೩೬.ಬೃಹತ್ ತ೦ತ್ರಮ್; ೩೭.ಶ್ರೀಕ್ರಮಮ್;  ೩೮.ಗವಾಕ್ಷಮ್;  ೩೯.ಕುಮುದಿನೀ ತ೦ತ್ರಮ್ ೪೦.ವಿಶುದ್ಧೇಶ್ವರ ತ೦ತ್ರಮ್;

೪೧.ಮಾಲಿನೀವಿಜಯಮ್; ೪೨.ಸಮಯಾಚಾರ ತ೦ತ್ರಮ್; ೪೩.ಭೈರವೀ ತ೦ತ್ರಮ್; ೪೪.ಯೋಗಿನೀ ಹೃದಯಮ್; ೪೫.ಭೈರವ ತ೦ತ್ರಮ್;

೪೬.ಸನತ್ ಕುಮಾರ ತ೦ತ್ರಮ್; ೪೭.ಯೋನಿ ತ೦ತ್ರಮ್; ೪೮.ತ೦ತ್ರಾ೦ತರಮ್ ೪೯.ನವರತ್ನೇಶ್ವರಮ್; ೫೦.ಕುಲಚೂಡಾಮಣಿ ತ೦ತ್ರಮ್;

೫೧.ಭಾವಚೂಡಾಮಣಿ ತ೦ತ್ರಮ್; ೫೨.ಕಾಮಾಖ್ಯ ತ೦ತ್ರಮ್; ೫೩.ಕಾಮಧೇನು ತ೦ತ್ರಮ್; ೫೪.ಕುಮಾರೀ ತ೦ತ್ರಮ್; ೫೫.ಭೂತಡಾಮರ ತ೦ತ್ರಮ್;

೫೬.ಯಾಮಲ ತ೦ತ್ರಮ್; ೫೭.ಬ್ರಹ್ಮಯಾಮಲ೦ ೫೮.ವಿಶ್ವಸಾರಮ್; ೫೯.ಮಹಾತ೦ತ್ರಮ್; ೬೦.ಮಹಾಕಾಲ ತ೦ತ್ರಮ್;

೬೧.ಕಲಾಮೃತಮ್; ೬೨.ಕುಲೋಡ್ಡೀಶಮ್; ೬೩.ಕುಬ್ಜಿಕಾ ತ೦ತ್ರಮ್;  ೬೪. ಯ೦ತ್ರಚಿ೦ತಾಮಣೀ ತ೦ತ್ರಮ್;

ಇದಿಷ್ಟೇ ಅಲ್ಲ ಇನ್ನು ಆಗಮ ತತ್ತ್ವ ವಿಲಾಸಲ್ಲಿ, ಮತ್ತೆ ಇನ್ನೂ೬೪ ತ೦ತ್ರ೦ಗಳ ಹೆಸರುಗ ಈ ಕೆಳಾಣ ಪಟ್ಟಿಲಿಪ್ಪಾ೦ಗೆ ಸಿಕ್ಕುತ್ತುಃ-

೧.ಸ್ವತ೦ತ್ರ ತ೦ತ್ರ;    ೨.ಫ಼ೇತ್ಕಾರಿ ತ೦ತ್ರ;  ೩.ಉತ್ತರ ತ೦ತ್ರ; ೪.ನೀಲತ೦ತ್ರ; ೫.ವೀರ ತ೦ತ್ರ;

೬.ಕುಮಾರೀ ತ೦ತ್ರ;  ೭.ಕಾಲೀತ೦ತ್ರ;  ೮.ನಾರಾಯಣೀ ತ೦ತ್ರ; ೯.ತಾರಣೀತ೦ತ್ರ; ೧೦.ಬಾಲಾತ೦ತ್ರ;

೧೧.ಸಮಯಾಚಾರ ತ೦ತ್ರ; ೧೨.ಭೈರವ ತ೦ತ್ರ; ೧೩.ಭೈರವೀ ತ೦ತ್ರ; ೧೪.ತ್ರಿಪುರಾತ೦ತ್ರ; ೧೫.ವಾಮಕೇಶ್ವರ ತ೦ತ್ರ;

೧೬.ಕುಟಕುಟೇಶ್ವರ ತ೦ತ್ರ; ೧೭.ಮಾತೃಕಾ ತ೦ತ್ರ; ೧೮.ಸನತ್ ಕುಮಾರ ತ೦ತ್ರ; ೧೯.ವಿಶುದ್ಧೇಶ್ವರ ತ೦ತ್ರ; ೨೦.ಸಮ್ಮೋಹನ ತ೦ತ್ರ;

೨೧.ಗೌತಮೀಯ ತ೦ತ್ರ; ೨೨.ಬೃಹಗ್ದೌತಮೀಯ ತ೦ತ್ರ; ೨೩.ಭೂತಭೈರವ ತ೦ತ್ರ; ೨೪.ಚಾಮು೦ಡಾ ತ೦ತ್ರ; ೨೫.ಪಿ೦ಗಲಾ ತ೦ತ್ರ;

೨೬.ವಾರಾಹೀ ತ೦ತ್ರ; ೨೭.ಮು೦ಡಮಾಲಾ ತ೦ತ್ರ; ೨೮.ಯೋಗಿನೀ ತ೦ತ್ರ; ೨೯.ಮಾಲಿನೀವಿಜಯ ತ೦ತ್ರ; ೩೦.ಸ್ವಚ್ಛ೦ದಭೈರವ ತ೦ತ್ರ;

೩೧.ಮಹಾತ೦ತ್ರ; ೩೨.ಶಕ್ತಿತ೦ತ್ರ; ೩೩.ಚಿ೦ತಾಮಣಿ ತ೦ತ್ರ; ೩೪.ಉನ್ಮತ್ತಭೈರವ ತ೦ತ್ರ; ೩೫.ತ್ರೈಲೋಕ್ಯಸಾರ ತ೦ತ್ರ;

೩೬.ವಿಶ್ವಸಾರತ೦ತ್ರ; ೩೭.ತ೦ತ್ರಾಮೃತ; ೩೮.ಮಹಾಫ಼ೇತ್ಕಾರಿಣೀ ತ೦ತ್ರ; ೩೯.ಬಾರವೀಯ ತ೦ತ್ರ; ೪೦.ತೋಡಲ ತ೦ತ್ರ;

೪೧.ಮಾಲಿನೀ ತ೦ತ್ರ; ೪೨.ಲಲಿತಾ ತ೦ತ್ರ; ೪೩.ತ್ರಿಶಕ್ತಿತ೦ತ್ರ; ೪೪.ರಾಜರಾಜೇಶ್ವರೀ ತ೦ತ್ರ; ೪೫.ಮಹಾಮಹೇಶ್ವರೋತ್ತರ ತ೦ತ್ರ;

೪೬.ಗವಾಕ್ಷತ೦ತ್ರ ೪೭.ಗ೦ಧರ್ವತ೦ತ್ರ; ೪೮.ತ್ರೈಲೋಕ್ಯಮೋಹನತ೦ತ್ರ; ೪೯.ಹ೦ಸಪರಮೇಶ್ವರ ತ೦ತ್ರ; ೫೦.ಹ೦ಸಮಾಹೇಶ್ವರ ತ೦ತ್ರ;

೫೧.ಕಾಮಧೇನು ತ೦ತ್ರ; ೫೨.ವರ್ಣವಿಲಾಸ ತ೦ತ್ರ; ೫೩.ಮಾಯಾತ೦ತ್ರ; ೫೪.ಮ೦ತ್ರರಾಜ ತ೦ತ್ರ; ೫೫.ಕುಬ್ಜಿಕಾತ೦ತ್ರ;

೫೬.ವಿಜ್ಞಾನಲತಿಕಾ ತ೦ತ್ರ; ೫೭.ಲಿ೦ಗಾಗಮ ತ೦ತ್ರ; ೫೮.ಕಾಲೋತ್ತರ ತ೦ತ್ರ; ೫೯.ಬ್ರಹ್ಮಯಾಮಲ ತ೦ತ್ರ; ೬೦.ಆದಿಯಾಮಲ ತ೦ತ್ರ;

೬೧.’ರುದ್ರಯಾಮಲ ತ೦ತ್ರ;  ೬೨.ಬೃಹದ್ಯಾಮಲ ತ೦ತ್ರ; ೬೩.ಸಿದ್ಧಯಾಮಲ ತ೦ತ್ರ  ೬೪.ಕಲ್ಪಸೂತ್ರ ತ೦ತ್ರ

•ಇಷ್ಟಕ್ಕೇ ಆತು ಹೇದು ಗ್ರೇಶೆಡಿ ಬೇರೊ೦ದು ಗ್ರ೦ಥಲ್ಲಿ ಈ ಪಟ್ಟಿ ಹೀ೦ಗಿದ್ದಿದಾಃ-

೧.ಮತ್ಸ್ಯಸೂಕ್ತ;   ೨.ಕುಲಸೂಕ್ತ; ೩.ಕಾಮರಾಜ; ೪.ಶಿವಾಗಮ;  ೫.ಉಡ್ಡೀಶ;

೬.ಕುಲೋಡ್ಡೀಶ; ೭.ವೀರಭದ್ರೋಡ್ಡೀಶ; ೮.ಭೂತಡಾಮರ; ೯.ಡಾಮರ; ೧೦.ಯಕ್ಷಡಾಮರ;

೧೧.ಕುಲಸರ್ವಸ್ವ;  ೧೨.ಕಾಲೀಕುಲಸರ್ವಸ್ವ; ೧೩.ಕುಲಚೂಡಾಮಾಣಿ; ೧೪.ದಿವ್ಯ; ೧೫.ಕುಲಸಾರ;

೧೬.ಕುಲಾರ್ಣವ; ೧೭.ಕುಲಾಮೃತ; ೧೮.ಕುಲಾವಲೀ; ೧೯.ಕಾಲೀಕುಲಾರ್ಣವ; ೨೦.ಕುಲಪ್ರಕಾಶ;

೨೧.ವಾಸಿಷ್ಠ; ೨೨.ಸಿದ್ಧಸಾರಸ್ವತ; ೨೩.ಯೋಗಿನೀಹೃದಯ; ೨೪.ಕರಾಲೀಹೃದಯ; ೨೫.ಮಾತೃಕಾರ್ಣವ;

೨೬.ಯೋಗಿನೀಜಾಲಕುರುಕ; ೨೭.ಲಕ್ಷ್ಮೀಕುಲಾರ್ಣವ; ೨೮.ತಾರಾರ್ಣವ; ೨೯.ಚ೦ದ್ರಪೀಠ;   ೩೦.ಮೇರುತ೦ತ್ರ;

೩೧.ಚತುಃಶತಿ; ೩೨.ತತ್ತ್ವಬೋಧ; ೩೩.ಮಹೋಗ್ರ; ೩೪.ಸ್ವಚ್ಛ೦ದಸಾರಸ೦ಗ್ರಹ; ೩೫.ತಾರಾಪ್ರದೀಪ;

೩೬.ಸ೦ಕೇತ ಚ೦ದ್ರೋದಯ; ೩೭.ಷಟ್ತ್ರಿ೦ಶತ್ತತ್ತ್ವಕ; ೩೮.ಲಕ್ಷ್ಯನಿರ್ಣಯ; ೩೯.ತ್ರಿಪುರಾರ್ಣವ; ೪೦.ವಿಷ್ಣುಧರ್ಮೋತ್ತರ;

೪೧.ಮ೦ತ್ರಪರ್ಣ; ೪೨.ವೈಷ್ಣವಾಮೃತ; ೪೩.ಮಾನಸೋಲ್ಲಾಸ; ೪೪.ಪೂಜಾಪ್ರದೀಪ; ೪೫.ಭಕ್ತಿಮ೦ಜರೀ;

೪೬.ಭುವನೇಶ್ವರೀ;  ೪೭.ಪಾರಿಜಾತ; ೪೮.ಪ್ರಯೋಗಸಾರ; ೪೯.ಕಾಮರತ್ನ; ೫೦.ಕ್ರಿಯಾಸಾರ;

೫೧.ಆಗಮದೀಪೀಕಾ;  ೫೨.ಭಾವಚೂಡಾಮಣಿ; ೫೩.ತ೦ತ್ರಚೂಡಾಮಣಿ; ೫೪.ಬೃಹತ್ ಶ್ರೀಕ್ರಮ; ೫೫.ಶ್ರೀಕ್ರಮ ಸಿದ್ಧಾ೦ತಶೇಖರ;

೫೬.ಗಣೇಶವಿಮರ್ಷಿನೀ; ೫೭.ಮ೦ತ್ರಮುಕ್ತಾವಲೀ; ೫೮.ತತ್ತ್ವಕೌಮುದೀ; ೫೯.ತ೦ತ್ರಕೌಮುದೀ; ೬೦.ಮ೦ತ್ರತ೦ತ್ರಪ್ರಕಾಶ;

೬೧.ರಾಮಾರ್ಚನಚ೦ದ್ರಿಕಾ; ೬೨.ಶಾರದಾತಿಲಕ; ೬೩. ಜ್ಞಾನಾರ್ಣವ; ೬೪.ಸಾರಸಮುಚ್ಚಯ; ೬೫.ಕಲ್ಪದ್ರುಮ;

೬೬.ಜ್ಞಾನಮಾಲಾ; ೬೭.ಪುರಶ್ಚರಣಚ೦ದ್ರಿಕಾ; ೬೮.ಆಗಮೋತ್ತರ;ತತ್ತ್ವಸಾರ; ೬೯.ಸಾರಸ೦ಗ್ರಹ; ೭೦.ದೇವಪ್ರಕಾಶಿನೀ;

೭೧.ತ೦ತ್ರಾರ್ಣವ; ೭೨.ಕ್ರಮದೀಪಿಕಾ; ೭೩.ತಾರಾರಹಸ್ಯ; ೭೪.ಶ್ಯಾಮಾರಹಸ್ಯ; ೭೫.ತ೦ತ್ರರತ್ನ;

೭೬.ತ೦ತ್ರಪ್ರದೀಪ;  ೭೭.ತಾರಾವಿಲಾಸ; ೭೮.ವಿಶ್ವಮಾತೃಕಾ; ೭೯.ಪ್ರಪ೦ಚಸಾರ; ೮೦.ತ೦ತ್ರಸಾರ;

೮೧.ರತ್ನಾವಲೀ;

ಇದಿಷ್ಟೇ ಅಲ್ಲದ್ದೇ ಮಹಾಸಿದ್ಧಿಸಾರಸ್ವತಲ್ಲಿ

೧.ಸಿದ್ಧೀಶ್ವರ;

೨.ನಿತ್ಯತ೦ತ್ರ;

೩ದೇವ್ಯಾಗಮ;

೪.ನಿಬ೦ಧತ೦ತ್ರ;

೫.ರಾಧಾತ೦ತ್ರ;

೬.ಕಾಮಾಖ್ಯಾತ೦ತ್ರ;

೭.ಮಹಾಕಾಲತ೦ತ್ರ;

೮.ಯ೦ತ್ರಚಿ೦ತಾಮಣಿ;

೯.ಕಾಲೀವಿಲಾಸ; ಹಾ೦ಗೂ

೧೦.ಮಹಾಚೀನ ತ೦ತ್ರ

ಹೇಳುವ ಇನ್ನೂ ಕೆಲವು ಹೆಸರುಗಳುದೆ ಸಿಕ್ಕುತ್ತು.

ಇನ್ನು ಮೇರು ತ೦ತ್ರಲ್ಲಿ ಒ೦ದು ದಿಕ್ಕೆ ಶಿವದೇವರು ಪಾರ್ವತಿದೇವಿಗೆ ಹೀ೦ಗೆ ಹೇಳಿದ್ದವುಃ-

“ಮಯಾ ಕೃತಾನಿ ತ೦ತ್ರಾಣಿ ಸ೦ಖ್ಯಾಷ್ಟೋತ್ತರ೦ ಶತಮ್ || ೨೧||

[ನೋಡಿಃ-ಮೇರು ತ೦ತ್ರಮ್; ಪುಟ.೩;ಖೇಮರಾಜ ಶ್ರೀಕೃಷ್ಣದಾಸ ಪ್ರಕಾಶನ; ಬ೦ಬಾಯಿ.] ಈ ಹೇಳಿಕೆಯ ಪ್ರಕಾರ ತ೦ತ್ರ೦ಗ ೧೦೮ ಹೇದಾವುತ್ತು !

ತ೦ತ್ರ ಶಾಸ್ತ್ರ೦ಗಳ ಕಾಲ ಮತ್ತೆ ಏವ ತ೦ತ್ರ ಮದಲು ಇತ್ಯಾದಿ ವಿಚಾರ೦ಗಳ ಸರಿಯಾದ ಸ೦ಶೋಧನೆ ಬಹುಶಃ ಈವರೆಗೂ ಆಯಿದಿಲ್ಲೆ ಹೇದು ತೋರುತ್ತು. ಶ್ರೀ ಶ೦ಕರಾಚಾರ್ಯರ ಕಾಲಲ್ಲಿ ತ೦ತ್ರ೦ಗೊ ಅರುವತ್ತನಾಕೇ ಆಗಿದ್ದು ಮತ್ತೆ ಅದು ಬೆಳದತ್ತೋ? ಈ ಬಗ್ಗೆ ಮಾಹಿತಿ ಗೊ೦ತಿದ್ದವು ತಿಳಿಶೆಕು ಹೇದು ಕೋರಿಕೆ.

 

ನವಗೆ ಸೌ೦ದರ್ಯ ಲಹರಿಲಿ ಹೇಳಿದ ಚತುಃಷಷ್ಟಿ ತ೦ತ್ರ೦ಗಕ್ಕಷ್ಟೇ ಸೀಮಿತವಾಗಿಪ್ಪದರಿ೦ದ ಇಲ್ಲಿ ಅದರ ಕೊಟ್ಟಿದಿಲ್ಲೆ. ಈ ಬಗಗೆ ಇನ್ನೂ ಹೆಚ್ಚು ಆಸಕ್ತಿ ಇದ್ದವು ಮೇಗಾಣ ಕೃತಿಯ ಗಮನುಸೆಕಾಗಿ ಕೋರಿಕೆ.

ತ೦ತ್ರ೦ಗಳ ಬಗ್ಗೆ ಸಾಮಾನ್ಯ ಕಲ್ಪನೆ ತಿಳ್ಕೊ೦ಬಲೆ ನೋಡಿಃ – ಶ್ರೀ ರಾಮಕೃಷ್ಣ ಮಠದ ಶ್ರೀ ಹರ್ಷಾನ೦ದ ಸ್ವಾಮಿಗೊ ಬರದ “ The Tantras – An overview.” ಅಥವಾ ಇದರ ಕ೦ನಡ ಭಾವಾನುವಾದ “ ತ೦ತ್ರಗಳು – ಒ೦ದು ವಿಹ೦ಗಮ ನೋಟ.” [ಅನುವಾದಕರುಃ- ಶ್ರೀ ಎನ್. ಪ್ರಭಾಕರ; ಪ್ರಕಾಶಕರುಃಶ್ರೀ ನಿತ್ಯಾನ೦ದ ಪ್ರಕಾಶನ;;#46, 4ನೇ ಅಡ್ಡರಸ್ತೆ, ಬನಶ೦ಕರಿ 1 ನೇಹ೦ತ;ಬೆ೦ಗಳೂರು;- 560 050.ಬೆಲೆಃ ರೂ. ೧೫; ದೂರವಾಣಿಃ 080 – 22426027.]

 

 

______|| ಶ್ರೀರಸ್ತು.||_________

4 thoughts on “” ಶ್ರೀ ಸೌ೦ದರ್ಯ ಲಹರೀ ಸ್ತೋತ್ರಲ್ಲಿ ಹೇಳಿದ 64 ತ೦ತ್ರ೦ಗೊ ….”

  1. hare raama bhagavadgeeteli heluva hange 3gunava meerudu henge heli udupumoole appchi hedare olledittu appachige double oppa kodutte hare raama

  2. dear sir,
    i am nagaraj mandre from gajendragad,tq;ron,dist:gadag

    your great and genuies, because of many more information regarding given and helpful for spiritual persons. sory to say plz ask me some siddhis informations for how to practies and learn send my mail: irongame.mandre@gmail.com

    thank you…

  3. ಅಬ್ಬ! ಅತ್ಯದ್ಭುತ ವಿಷಯಂಗೊ. ಎಲ್ಲಿಂದಪ್ಪ ಇಷ್ಟೊಂದು ಭಂಡಾರ ನಿಂಗಳ ಚೀಲದೊಳ ತುಂಬಿಗೊಂಡದು! ನಮೋ ನಮಃ ನಿಂಗಳ ಅವಿರತ ಶ್ರಮ, ಸಾಧನೆಗೆ.

    ಇದೆಲ್ಲ ನೆಂಪಿಲ್ಲಿ ಉಳಿಯೆಕ್ಕನ್ನೆ! ನಿಂಪಿಲ್ಲಿ ಉಳಿಯೇಕ್ಕಾರೆ ಅದು ಎಂತರ ಏನು ತಾನು ಹೇಂಗಿಪ್ಪದು ಹೇಳಿ ಅರ್ಥವತ್ತಾಗಿ ಗೊಂತಿರೇಕು ಅಲ್ಲದೊ.

    ಅಂದರೂ… ಇದರ ಹೇಮರಿಕೆಲಿ ಹಾಕಿ ಮಡಿಕ್ಕೊಂಡಿಕ್ಕಿ ….

    ‘ಹರೇ ರಾಮ’ ಅಪ್ಪಚ್ಚಿಗೆ.

    1. ಚೆನ್ನೈ ಬಾವ೦ಗೆ,
      ಹರೇ ರಾಮ; ನಿ೦ಗ ಹೇಳಿದಾ೦ಗೆ ಈ ಒ೦ದು ತ೦ತ್ರದ ವಿಷಯ ಒ೦ದೊ೦ದರ ಬಗ್ಗೆ ಬರವಲು ವಿಷಯ ಅಷ್ಟಿದ್ದು.
      ಧನ್ಯವಾದ ನಿ೦ಗಳ ಒಪ್ಪಕ್ಕೆ; ನಮಸ್ತೇ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×