ತೋಟಕಾಚಾರ್ಯರ ಆರಾಧನೆ

July 20, 2011 ರ 6:30 amಗೆ ನಮ್ಮ ಬರದ್ದು, ಇದುವರೆಗೆ 11 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಗುರು ಶಂಕರಾಚಾರ್ಯರ ಮಹಿಮೆ ಎಷ್ಟು ಹೇಳುದರ ವರ್ಣಿಸುವ ತೋಟಕಾಷ್ಟಕವ ಬರದದ್ದು ತೋಟಕಾಚಾರ್ಯರು.
ಆ ತೋಟಕಾಚಾರ್ಯರ ಆರಾಧನೆ ಇಂದ್ರಾಣ ಗುರುಪಂಚಮಿ ದಿನ.
ಆ ಪ್ರಯುಕ್ತ, ಶ್ರೀಅಕ್ಕ ಬರದ ವಿಶೇಷ ಶುದ್ದಿ, ನಮ್ಮ ಬೈಲಿಲಿ.

ಆಚಾರ್ಯ ಶಂಕರರು ಧರ್ಮ ಸಂಸ್ಥಾಪನೆಗೆ ಇಡೀ ದೇಶ ಸುತ್ತುತ್ತಾ , ಪುನಃ ಶೃಂಗೇರಿಗೆ ಬತ್ತವು.
ಅಲ್ಲಿ ಆನಂದಗಿರಿ ಹೇಳುವ ಮಾಣಿ ಅವರ ಸೇವೆಗೆ ನಿಲ್ಲುತ್ತ°. ಆಚಾರ್ಯರೊಟ್ಟಿಂಗೆ ಇಪ್ಪ ಎಲ್ಲ ಶಿಷ್ಯರುದೇ ಅವರವರ ಜಪತಪ, ಗ್ರಂಥರಚನೆ, ಅಧ್ಯಯನ, ಅಧ್ಯಾಪನ ಮಾಡ್ತವು. ಆಚಾರ್ಯರು ನಿತ್ಯವೂ ಎಲ್ಲೋರಿಂಗುದೆ ಭಾಷ್ಯಪಾಠ ಮಾಡಿಗೊಂಡಿತ್ತಿದ್ದವು.
ಎಲ್ಲೋರೂ ಅವರವರ ಸಂಶಯ ಕೇಳಿಗೊಂಡು ಅದರ ಪರಿಹರಿಸಿಗೊಂಡು ಇತ್ತಿದ್ದವು. ಆದರೆ ಗಿರಿ ಮಾತ್ರ ಏನನ್ನೂ ಕೇಳದ್ದೆ ಮೌನವಾಗಿ ಹೇಳಿದ್ದದರ ಕೇಳಿಗೊಂಡು ಗುರು ಸೇವೆಲಿ ಮಗ್ನ ಆಗಿತ್ತಿದ್ದ°.
ಹೀಂಗೆ ಒಂದೆರಡು ವರ್ಷ ಕಳುದಪ್ಪಗ, ಒಂದು ದಿನ, ಮಧ್ಯಾಹ್ನದ ಭಾಷ್ಯ ಪ್ರವಚನಕ್ಕೆ ಗಿರಿಯ ಬಿಟ್ಟು ಎಲ್ಲೋರೂ ಕೂದವು.
ಏಕೆ ಗಿರಿ ಬಯಿಂದಾ° ಇಲ್ಲೇ ಹೇಳಿ ಕೇಳುವಾಗ ಅವ° ವಸ್ತ್ರ ಒಗವಲೆ ಹೋದವ° ಬರೆಕ್ಕಷ್ಟೇ ಹೇಳಿದವು ಕೆಲವು ಶಿಷ್ಯರು.
ಅಂಬಗ ಒಳುದವ್ವು “ಗಿರಿ ಇದ್ದರೂ ಒಂದೇ ಇಲ್ಲದ್ದರೂ ಒಂದೇ!! ಅವ° ಎರಗಿ ಕೂಪ ಕಂಬ ಇದ್ದನ್ನೇ ಅದು ಸಾಕು” ಹೇಳಿ ಹೇಳಿದವು.

ಇದರ ಕೇಳಿ ಆಚಾರ್ಯರಿಂಗೆ ತುಂಬಾ ಬೇಜಾರಾವುತ್ತು.
ಗಿರಿ ಸ್ವಭಾವತಃ ಮೌನಿ. ಪ್ರಶ್ನೆಗಳ ಕೇಳುತ್ತನಿಲ್ಲೇ, ಆದರೆ ವಿದ್ವಾಂಸ, ವೇದ ಶಾಸ್ತ್ರಂಗಳ ಅಧ್ಯಯನ ಮಾಡಿದವ°.
ಅವನ ಯೋಗ್ಯತೆಯ ಗೊಂತುಮಾಡಿಗೊಳ್ಳದ್ದೆ ಅವನ ಹಾಸ್ಯ ಮಾಡಿದವಲ್ಲದಾ ಹೇಳಿ ಆಚಾರ್ಯರಿಂಗೆ ಬೇಜಾರಾವುತ್ತು.
ಗಿರಿ ಗುರುಸೇವೆ ಎಷ್ಟು ತನ್ಮಯನಾಗಿ ಮಾಡಿಗೊಂಡಿತ್ತಿದ್ದ° ಹೇಳಿದರೆ, ಉದೆಕಾಲಕ್ಕೆ ಎದ್ದು, ಆಚಾರ್ಯರಿಂಗೆ ಬೇಕಾದ ಎಲ್ಲವನ್ನೂ ಒದಗಿಸಿ ಕೊಟ್ಟು, ಮಧ್ಯಾಹ್ನದ ಭಿಕ್ಷೆಗೂ ವೆವಸ್ಥೆ ಮಾಡಿ, ಪ್ರವಚನಕ್ಕೆ ಕೂಪಗ ಮಣೆ, ವ್ಯಾಸಪೀಠ, ಆ ದಿನದ ಗ್ರಂಥ ಎಲ್ಲ ತಂದು ಮಡಗಿ, ಇರುಳು ಆಚಾರ್ಯರು ಮನಿಗಿ ಅಪ್ಪಗ ಬಾಗಿಲ ಕರೆಲಿಯೇ ಕಾವಲಿದ್ದು ಮರದಿನ ಪುನಾ ಉದೆಕಾಲಕ್ಕೆ ತಯಾರಾಗಿಯೊಂಡಿದ್ದ ಮಾಣಿ.
ಇಷ್ಟು ಶ್ರದ್ಧೆಲಿ ಮಾಡುವವನ° ಏನೂ ಗೊಂತಿಲ್ಲದ್ದವ° ಹೇಳಿದವಲ್ಲದಾ ಹೇಳಿ ಆಚಾರ್ಯರು ಗಿರಿಯ ಕೂದಲ್ಲಿಂದಲೇ ಮನಸಾ ಸ್ಮರಿಸಿ ಆಶೀರ್ವಾದ ಮಾಡಿದವು.
ಅವನಲ್ಲಿ ಸುಪ್ತವಾಗಿದ್ದ, ಗುಪ್ತ ಆಗಿದ್ದ ಜ್ಞಾನ ಹೆರ ಬಂದು ಪ್ರಕಾಶಿಸುವ ಹಾಂಗೆ ಆಶೀರ್ವಾದ ಮಾಡಿದವು.

ತನ್ನಷ್ಟಕ್ಕೆ ತನ್ನ ಕೆಲಸ ಮಾಡಿಗೊಂಡು ಬಂದ ಗಿರಿ ಆಶ್ರಮಕ್ಕೆ ಬತ್ತಾ ಇಪ್ಪಗ ಬಾಯಿಲಿ ಸ್ತೋತ್ರ ಸ್ಮರಣೆ ಮಾಡುದು ನೋಡಿ ಎಲ್ಲೋರೂ ದಂಗಾವುತ್ತವು.
ಆಚಾರ್ಯರು ಸಂಪ್ರೀತರಾಗಿ ಗಿರಿಯನ್ನೇ ನೋಡ್ತವು. ಗಿರಿ ಯಾವುದೇ ಗಮನ ಇಲ್ಲದ್ದೆ ತಾನು ಹೇಳುತ್ತಾ ಇಪ್ಪದರ ಪೂರ್ತಿಯಾಗಿ ಹೇಳಿ “ಭವ ಶಂಕರ ದೇಶಿಕ ಮೇಶರಣಂ” ಹೇಳಿ ಸಾಷ್ಟಾಂಗ ಪ್ರಣಾಮ ಮಾಡಿ ಕೂರ್ತ°.

ನಡುಗುತ್ತ ಇಪ್ಪ ಅವನ ಶರೀರಲ್ಲಿ, ಕಣ್ಣುಗಳಲ್ಲಿ ಹೊಸಾ ಪ್ರಕಾಶ ಇದ್ದತ್ತು. ಅವ ಪುನಾ ಪುನಾ “ಭವ ಶಂಕರ ದೇಶಿಕ ಮೇಶರಣಂ” ಹೇಳಿಗೊಂಡಿತ್ತಿದ್ದ°.

ನಿನಗೆಂತ ಬೇಕು ಹೇಳಿ ಆಚಾರ್ಯರು ಕೇಳಿ ಅಪ್ಪಗ ಅವ°,

ಭಗವನ್ಮುಧಧೌ ಮೃತಿ ಜನ್ಮ ಜಲೇ
ಸುಖದುಃಖ ಜುಷೇ ಪತಿತಂ ವೃಥಿತಮ್ |
ಕೃಪಯಾ ಶರಣಾಗತಮುದ್ಧರಮಾ
ಮನುಶಾಧ್ಯುಪಸನ್ನಮನನ್ಯಗತಿಮ್ ||

(“ಭಗವಂತನೇ, ಹುಟ್ಟು ಸಾವು ಹೇಳುವ ಈ ಸಂಸಾರ ಸಮುದ್ರಲ್ಲಿ ಬಿದ್ದು, ಸುಖ ದುಃಖ ಹೇಳುವ ಬೆಂಕಿಲಿ ಬೇಯ್ತಾ ಇದ್ದೆ. ನೀನೆ ಎನಗೆ ಅನನ್ಯ ಗತಿ ಹೇಳಿ ಬಯಿಂದೆ ಕೃಪೆ ತೋರಿ ಎನಗೆ ಉಪದೇಶ ಮಾಡಿ ಉದ್ಧಾರ ಮಾಡಿ” ಹೇಳಿ ಹೇಳ್ತ.)

ಆಚಾರ್ಯರು, ಗಿರಿಗೆ ನಾಲ್ಕು ಶ್ಲೋಕಲ್ಲಿ ಪರಮತತ್ವವ ಉಪದೇಶ ಮಾಡ್ತವು.
ಮತ್ತೆ ಕೆಲವು ದಿನಲ್ಲಿ ಶೃಂಗಗಿರಿಯ ಆನಂದಗಿರಿ ಶರ್ಮಂಗೆ ಸಂನ್ಯಾಸ ದೀಕ್ಷೆ ಕೊಟ್ಟು “ಶ್ರೀ ತೋಟಕಾಚಾರ್ಯ” ಹೇಳಿ ನಾಮಕರಣ ಮಾಡ್ತವು.
ಸಂನ್ಯಾಸ ಸ್ವೀಕರಿಸಿದ ಮೇಲೆದೇ ಅವು ಗುರು ಸೇವೆಯ ಮೊದಲಾಣ ಹಾಂಗೆ ಮಾಡ್ತಾ ಇರ್ತವು.
ಇದು ಅವರ ಗುರು ಭಕ್ತಿಗೆ ಸಾಕ್ಷಿ.

ಶಂಕರಾಚಾರ್ಯರ ಪಾದದೆತ್ತರ ಬೆಳದ ತೋಟಕಾಚಾರ್ಯರು ನವಗೆಲ್ಲರಿಂಗೂ ಮಾರ್ಗದರ್ಶಿ ಆಗಲಿ..
| ಹರೇರಾಮ |

ವಿ.ಸೂ: ಬೈಲಕರೆಲಿ ಬಟ್ಟಮಾವ° ಸಿಕ್ಕಿಅಪ್ಪಗ ಒಂದು ದಿನ ತೋಟಕಾಚಾರ್ಯರ ಸ್ತೋತ್ರದ ಶುದ್ದಿ ಬಂದಪ್ಪಗ ಆನು ಬಟ್ಟಮಾವನ ಹತ್ತರೆ ಅದರ ಹಿಂದೆ ಇಪ್ಪ ಕತೆ ಕೇಳಿದೆ. ಅಂಬಗ ಅವು ಹೇಳಿದ ಕತೆಯ ಇಲ್ಲಿ ಎನಗೆ ಅರಡಿಗಾದ ಹಾಂಗೆ ಹೇಳಿದ್ದೆ. ಎಂತಾದರೂ ಲೋಪದೋಷ ಇದ್ದಲ್ಲಿ ಅದು ಆ ಮಹಾಗುರುವಿನ ಪದತಲಕ್ಕೆ ಸಮರ್ಪಣೆ.
ಸೂ:

ತೋಟಕಾಚಾರ್ಯರ ಆರಾಧನೆ, 5.0 out of 10 based on 2 ratings
ಶುದ್ದಿಶಬ್ದಂಗೊ (tags): , , , , , , , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 11 ಒಪ್ಪಂಗೊ

 1. ಗಣೇಶ ಪೆರ್ವ
  ಗಣೇಶ

  ಆನು ಇ೦ದು ಮಲಯಾಳದ ‘ಕೈರಳಿ ವಿ’ ಚಾನೆಲಿಲ್ಲಿ ಒ೦ದು ಸಿನೆಮಾ ನೋಡಿದೆ – ‘ಆದಿ ಶ೦ಕರಾಚಾರ್ಯ’ ಹೇಳಿ. ಇದು ಸ೦ಸ್ಕೃತ ಭಾಷೆಲಿ ಬ೦ದ ಸುರೂವಿನ ಚಿತ್ರ. ನಿರ್ದೇಶನ – ಜಿ ವಿ ಅಯ್ಯರ್. ಭಾರೀ ಲಾಯ್ಕಲ್ಲಿ ತೆಗೆದ್ದವು ಈ ಚಿತ್ರ. ಎಡಿಗಾರೆ ಎಲ್ಲೋರುದೆ ನೋಡೆಕಾದ ಚಿತ್ರ. ಯೂ ಟ್ಯೂಬಿಲ್ಲಿ ಇದ್ದು. ೧೬ ಭಾಗಒಗೊ ಆಗಿ ಇದ್ದು. ಸ೦ಸ್ಕೃತ ತೀರಾ ಅರ್ಥ ಆಗದ್ದವಕ್ಕೆ ಆದರೆ ಇ೦ಗ್ಳೀಷಿಲ್ಲಿ ಸಬ್ ಟೈಟಲ್ ಕೂಡಾ ಇದ್ದು. ಸ೦ಸ್ಕೃತ ಅಲ್ಲದ್ದೆ ಮಲಯಾಳ೦, ತುಳು ಕೂಡಾ ಚೂರು ಚೂರು ಬತ್ತು. ಆನು ಸುರೂವಿ೦ಗೆ ನೋಡ್ತಾ ಇಪ್ಪದು.
  ಪುರುಸೊತ್ತು ಇಪ್ಪಗ ಎಲ್ಲೋರುದೆ ನೋಡಿ. ಒಳ್ಳೇದಾಯಿದು.

  [Reply]

  VA:F [1.9.22_1171]
  Rating: +1 (from 1 vote)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಮಂಗ್ಳೂರ ಮಾಣಿಪುಣಚ ಡಾಕ್ಟ್ರುಅನಿತಾ ನರೇಶ್, ಮಂಚಿಕಳಾಯಿ ಗೀತತ್ತೆವಸಂತರಾಜ್ ಹಳೆಮನೆಡಾಗುಟ್ರಕ್ಕ°ತೆಕ್ಕುಂಜ ಕುಮಾರ ಮಾವ°ಅಡ್ಕತ್ತಿಮಾರುಮಾವ°ಶಾ...ರೀಅಕ್ಷರದಣ್ಣಶೀಲಾಲಕ್ಷ್ಮೀ ಕಾಸರಗೋಡುಹಳೆಮನೆ ಅಣ್ಣಕೆದೂರು ಡಾಕ್ಟ್ರುಬಾವ°ಉಡುಪುಮೂಲೆ ಅಪ್ಪಚ್ಚಿಯೇನಂಕೂಡ್ಳು ಅಣ್ಣಪುತ್ತೂರಿನ ಪುಟ್ಟಕ್ಕಪೆರ್ಲದಣ್ಣಶರ್ಮಪ್ಪಚ್ಚಿಬಟ್ಟಮಾವ°ದೊಡ್ಮನೆ ಭಾವಶ್ರೀಅಕ್ಕ°ಗಣೇಶ ಮಾವ°ಕಾವಿನಮೂಲೆ ಮಾಣಿಅಜ್ಜಕಾನ ಭಾವಪುತ್ತೂರುಬಾವಚೆನ್ನೈ ಬಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ