ಓ..ಹ್ಹೋ. ಕಣ್ಣೀರೋ..!

“ಅಟ್ಟಿನಳಗೆ”ಯ ಕೈಲಿ ಹಿಡ್ಕೊಂಡು ಓದುದಲ್ಲೇ ಮಗ್ನ ಆಗಿತ್ತು, ಪಾರು. ಆನು ಈಚಿಕೆ ಸೋಫಲ್ಲಿ ಕೂದೊಂಡು ಲೇಪ್ಟೋಪಿಲಿ ಗುರುಟಿಗೊಂಡಿತ್ತಿದ್ದೆ.ರಜ್ಜ ಹೊತ್ತಪ್ಪಗ “ ಹ್ಹೆ…ಹ್ಹೆ..ಹ್ಹೆ ..”  ಹೇಳಿ ನೆಗೆ  ಸ್ಪೋಟವೇ ಶುರುವಾತು. ಪಕ್ಕನೆ ನಿಂದಿದೂ ಇಲ್ಲೆ. ಅಕೇರಿಗೆ ಕಣ್ಣು ಪಸೆ ಆಪ್ಪನ್ನಾರವೂ ನೆಗೆ ಮಾಡಿ, “ನಿಂಗೊಗೆ ಚಾ ಮಾಡೆಕ್ಕೋ…” ಕೇಳಿಗೊಂಡು ಎದ್ದತ್ತು .

“ಹ್ಮು..ಮಾಡು. ಅದಿರಳಿ, ನೀನೆಂತ ಹಾಂಗೊಂದು ನೆಗೆ ಮಾಡಿದ್ದು.?”

“ಎಂತ್ಸೂ ಇಲ್ಲೆ…ಇದಾ, ಚಾ ಕುಡಿರಿ” ಹೇಳಿ ಕೊಟ್ಟತ್ತು.

ನೆಗೆ ಬರ್ಸಿದ ಆ ಪ್ರಸಂಗವ ಪೂರ್ತಿ ಅನುಭವಿಸಿ ಮುಗಿವನ್ನಾರ ಸಂಗತಿ ಎಂತ ಹೇಳಿ ಪಾರು ಹೇಳ. ಆನು ಎನ್ನಷ್ಟಕ್ಕೆ ಚಾ ಕುಡಿವಲೆ ಶುರು ಮಾಡಿದೆ.

“ಅಲ್ಲ, ನಮ್ಮ ಅಡಿಗೆ ಸತ್ಯಣ್ಣನ ಯೆಜಮಾಂತಿ ಶಾರದೆ ಮನೆಲಿ ಸಂಸ್ಕೃತ ಅಭ್ಯಾಸ ಮಾಡ್ಲೆ ಪುಚ್ಚೆಯತ್ರೆ ಮಾತಾಡುದಡ. ಪಾಪ ಅದಕ್ಕೆ ಒಂದು ಪುಚ್ಚೆ ಆದರೂ ಸಿಕ್ಕಿತ್ತು. ಇಲ್ಲಿ ಆನು ಗೋಡೆಯತ್ರೇ… ಮಾತಾಡೆಕ್ಕಟ್ಟೆ.!” .

“ಹೇಂ…ಅದೆಂತ ಹಾಂಗೆ.ಈಗ ನೀನು ಮಾತಾಡ್ತದು ಆರತ್ರೆ? ಗೋಡೆಯ ಹಾಂಗೆ ಕಾಣ್ತನೋ ಆನು..?”

“ಹಾಂಗಲ್ಲ, ಆನು ಹೇಳಿದ್ದು.”

“ಮಾತು ಮುತ್ತಿನ ಸರದ ಹಾಂಗಿರೆಕಡ.ಇನ್ನು ಚಿನ್ನಲ್ಲಿ ಮಾಡ್ಸಿದ್ದಾದರೆ ಈಗಂತೂ ಎಕ್ಕಸಕ್ಕ ರೇಟು.”

“ಊಂ…ಊಂ…ಮಾತು   ಬೆಳ್ಳಿ- ಮೌನ ಬಂಗಾರ ಹೇಳಿಯೂ ಇದ್ದು. ನಿಂಗೊ ಹೆಂಡತ್ತಿಗೆ ಚಿನ್ನ ಮಾಡ್ಸಿ ಹಾಕುದಾಯಿಕ್ಕು, ಹೀಂಗುದೆ. ಬರೇ ಪ್ರಶ್ನೆ ಕೇಳಿದ್ದಕ್ಕೆ ಮಾಂತ್ರ ಉತ್ತರ ಕೊಟ್ಟರೆ ಸಾಕೋ..? ಒಂದು ಗಳಿಗೆ ಕೂದೊಂಡು ಮಾತುಕತೆ, ಪಂಚಾತಿಕೆ ಎಲ್ಲ ಏನೂ ಬೇಡದೋ ? ದೊಡ್ಡೋನೂ ಹಾಂಗೆ… ಶಾಲೆಲಿ  ಎಂತಾತು, ಏನೆಲ್ಲ ಸಂಗತಿ, ಊಹೂಂ…ಒಂದೂ ಗೊಂತಪ್ಪಲಿಲ್ಲೆ. ಈಗೀಗ ಸಣ್ಣೋನೂ ಶುರು ಮಾಡಿದ್ದ. ಮದಲೆಲ್ಲ ‘ಅಮ್ಮ…ಅಮ್ಮ’ ಹೇಳ್ಯೊಂಡು ಬಂದುಗೊಂಡಿತ್ತಿದ್ದ° .ಈಗ ಅದೂ ಇಲ್ಲೆ. ಒಂದು ಗಳಿಗೆ ಅಂತೇ ಕೂದು ಪಟ್ಟಾಂಗ ಹೊಡೆಯೆಕ್ಕಾರೆ,ಆನು ಗೋಡೆಯತ್ರೆ ಮಾತಾಡೆಕ್ಕಟ್ಟೆ, ಹ್ಹುಂ.!

“ಓ ಹಾಂಗೆ. ಅಲ್ಲ ಪಾರು, ದಿನಾಗಿಳೂ ಕೂದೊಂಡು ಪಂಚಾತಿಕೆ ಹೊಡವಲೆ ಅಪ್ಪಲಿದ್ದೋ.ಎಂತ್ಸರ ಹೇಳಿ ಬೇಕನ್ನೆ.ಮಾತಾಡಿದ್ದನ್ನೇ ಮಾತಡುದೋ , ನ್ಯೂಸ್ ಚಾನೆಲಿಲಿ ಶುದ್ದಿ ತೋರ್ಸಿದ ಹಾಂಗಕ್ಕು.”

“ದಿನಲ್ಲಿ ಅಷ್ಟಾದರೂ ಮಾತಾಡಿರೆ ಸಾಕೆನ್ನೆ.ನಿಂಗೊ ಆಫೀಸಿಂದ ಬಂದಿಕ್ಕಿ ಲಾಪ್ಟೋಪು ಬಿಡುಸಿ ಕೂದರೆ ಬೋಂಬು ಹೊಟ್ಟಿರೂ ಗೊಂತಾವುತ್ತಿಲೆ. ನಿಂಗಳ ಆ ಚೆಂಞಾಯಿಗಳೊಟ್ಟಿಂಗೆ ಎಷ್ಟೂ ಲೊಟ್ಟೆ ಬಿಡ್ತಿ, ಆನು ಎಂತಾರು ಮಾತಾಡಿರೆ ಒಂದೇ ಶಬ್ದಲ್ಲಿ ಉತ್ತರ ಕೊಟ್ಟು ಮುಗುಶುತ್ತಿ, ಹ್ಹುಂ.!”

ಎಂತ ಉತ್ತರ ಕೊಡೆಕ್ಕು ಹೇಳಿಯೇ ಗೊಂತಾಯಿದಿಲ್ಲೆ ಎನಗೆ.ಪಾರು ಹೇಳಿದ್ದು ತಪ್ಪೋ ಸರಿಯೋ. ಎನಗರಡಿಯ.!

ಆನು ಲೇಪ್ಟೋಪಿನ ಮುಚ್ಚಿ,ಉದಿಯಪ್ಪಗ ಓದಿ ಮಡಗಿದ ಪೇಪರಿನ ಕೈಲಿ ಹಿಡ್ಕೊಂಡು ಕೂದೆ.”ಏ ಪಾರೂ…ಇದಾ, ಚಿನ್ನಕ್ಕೆ 31000 ಆಯಿದಡ, ನೋಡಿದ್ದೆಯೋ.?”  ಬೇರೆ ಯೇವ ವಿಷಯ ಶುರು ಮಾಡೆಕ್ಕು ಹೇಳಿ ಎನ್ನ ತಲೆಗೆ ಹೋಯಿದಿಲೆ.”ನೆಂಪಿದ್ದೋ.? ನಾವು ಬೊಂಬಾಯಿಲಿಪ್ಪಗ ನಾಕುವರೆ ಸಾವಿರವೇ ಇದ್ದದು.”

“ಅಪ್ಪುದೆ.ಆವಗ ಚಿನ್ನ ಬೇಡ ಹೇಳಿ ತೆಗದ್ದಿಲೆ ನಾವು.ಈಗ ಬೇಕು ಹೇಳಿರೆ ತೆಗವಲೆಡಿಯ, ಛೆ.!”

“ಅದು ಹೋಗಲಿ, ಆವಗ ಪೆಟ್ರೋಲಿಂಗೆ ಎಷ್ಟು..?36 ರುಪಾಯಿ, ಈಗ…ಡಬ್ಬಲ್ ಆಯಿದು.ಎನಗೆ ಸರೀ ನೆಂಪಿದ್ದು.  ಎಲ್ಲದಕ್ಕೂ ರೇಟ್ ಏರಿದ್ದು. ನೀರುಳ್ಳಿಗೆ ಎಪ್ಪತ್ತು ರುಪಾಯಿ.ಎಂತ್ಸರ ತಿಂಬದು ಹೇಳಿ ಬೇಕನ್ನೆ.?”

ಎನ್ನ ಪೀಠಿಕೆ ಸರೀ ಆತು ಹೇಳಿ ಗ್ರೇಶಿದೆ.ಪಾರುವೇ ಮುಂದುವರಿಸಿತ್ತು.

“ಅದು ಬಿಡಿ, ಮಕ್ಕಳ ಶಾಲೆ ಬಸ್ಸಿಂಗೆ ನಾವು ಬಂದ ಶುರುವಿಲಿ 800 ಕೊಟ್ಟುಗೊಂಡಿದ್ದದು, ಈಗ..? 1700 ಕೊಡ್ತಿಲೆಯಾ.?”

“ಅಂದು ಆನು ಹುಶಾರಿಲ್ಲದ್ದಿಪಗ ನೋಡ್ಲೆ ಹೇಳಿ ಆಫೀಸಿಂದ ಬಂದಿತ್ತಿದ್ದ° ಅಲ್ಲದೋ ಆನಂದ್ ಹೇಳ್ತವ°, ಅವನ ಹೆಂಡತ್ತಿ ಹೆತ್ತಿದಡ. ಅವಳಿ-ಜವಳಿ ಮಕ್ಕೋ.”  ಆನು ವಿಷಯ ಬದಲ್ಸಿದೆ.

“ಹೋ…! ಅಪ್ಪೋ ? ಕೂಸುಗಳೋ  … ಮಾಣ್ಯಂಗಳೊ.?”

“ಇಬ್ರುದೇ ಕೂಸುಗಳೆ. ಎಲ್ಲ ಹುಶಾರಿದ್ದವಡ.”

“ಮತ್ತೆ, ಆ ಬಿಹಾರಿ ಹುಡುಗನ ಮದುವೆ ಕಳುತ್ತೋ..?”

ಎನಗೆ ಅರ್ಥ ಆತು. ಹೊತ್ತೋಪಗ ಮನೆ ಕೆಳ ಹೆಮ್ಮಕ್ಕೊ ಒಟ್ಟು ಸೇರುತ್ತವು. ಪಾರು ಹೋಪ ಕ್ರಮ ಇಲ್ಲೆ. ಆ ಹೊತ್ತಿಲಿ ಅದರ ಪಾರಾಯಣ, ಜೆಪ ಶುರು ಆವುತ್ತು. ಅಲ್ಲಿ ಕೆಲಸಕ್ಕೆ ಹೋವುತ್ತ  ಹೆಮ್ಮಕ್ಕಳೂ ಸೇರಿಗೊಳ್ತವು.ಅವರವರ ಆಫೀಸಿಲಿ ಆದ ಸಂಗತಿಗೊ,ನ್ಯೂಸ್ ಪೇಪರಿಲಿ ಬಂದ ಮುಖ್ಯ ಸಮಾಚಾರದ ವಿಶ್ಲೇಷಣೆ,ಅವು ನೋಡ್ತ ಟೀವಿ ಸೀರಿಯಲಿನ  ಚರ್ಚೆ ಎಲ್ಲ ಆವುತ್ತು.ಆನು ಕೂದೊಂಡು ಇಷ್ಟೆಲ್ಲ ಪಟ್ಟಾಂಗ ಹೊಡವಲಿದ್ದೊ.? ಆನು ಕಲ್ತರೂ ಎಡಿಗಾಗ.

ಹೆಚ್ಚು ಹೊತ್ತು ಹೀಂಗೆ ಮುಂದುವರುಸುಲೆ ಎನ್ನಂದ ಎಡಿಗಾಗ ಹೇಳಿ ಕಂಡತ್ತು.ತಾಳ್ಮೆಯೂ ಬೇಕನ್ನೆ…?

ಸಣ್ಣ ಮಗನ ದೆನುಗೇಳಿ  “ನೋಡೊ°…ಇಂದ್ರಾಣ ನಿನ್ನ ಡೈರಿ ತೋರ್ಸು. ಮೇಡಮ್ ಏನಾರು ನೋಟ್ ಕೊಟ್ಟಿದವೋ ಹೇಂಗೆ ?” ಕೇಳಿಗೊಂಡು ಮಕ್ಕಳ ಕೋಣೆಗೆ ಬಂದೆ.

ಮರದಿನ ಹೊತ್ತೋಪಗ ಆಫೀಸಿಂದ ಬಂದವಂಗೆ ಕೂರ್ಸಿ ಚಾ ತಿಂಡಿ ಕೊಟ್ಟು ವಿಚಾರ್ಸಿತ್ತು, ಪಾರು.  “ಇಂದೆಂತ ವಿಶೇಷ.?”

“ಹೇಳ್ತಾಂಗೆ ಎಂತ್ಸೂ ಇಲ್ಲೆ”

“ಆನಂದನ ಹೆಂಡತ್ತಿಗೆ ನೋರ್ಮಲ್ ಡೆಲಿವರಿಯೋ, ಸಿಸೇರಿಯನ್ನೋ.?”

“ಹ್ಹುಂ. ಆನು ಕೇಳಿದ್ದಿಲೆ” ಲೊಟ್ಟೆ ಹೇಳಿದ್ದಲ್ಲ ಆನು.

“ನಿಂಗಳೊಟ್ಟಿಂಗೆ ಇಪ್ಪ ಕನ್ನಡದವ°…ಅವನ ಹೆಸರೆಂತ…?”

“???”

“ಅವನ ಮಗನ ಮೈಸೂರಿಲಿ ರಾಮಕೃಷ್ಣ ಹೋಸ್ಟೆಲಿಂಗೆ ಸೇರ್ಸುತ್ತವೋ…?”

“ಉಮ್ಮ…ಗೊಂತಿಲೆ” ಸತ್ಯವನ್ನೇ ಹೇಳಿದೆ.

ಎನ್ನ ಉತ್ತರ ಕೇಳಿಯೇ ಪಾರುಗೆ ಸಾಕಾತೋ ಏನೋ.?ಎನ್ನ ಮೋರೆ ಒಂದರಿ ನೋಡಿಕ್ಕಿ ಒಳ ನಡದತ್ತು.

ಪಾರು ಇರುಳಾಣ ಅಡಿಗೆ ತಯಾರಿ ಶುರು ಮಾಡ್ಯೊಂಡಿತ್ತು.ನೆಟ್ಟಿಕಾಯಿ ಕೊರದು ಹಾಕಿ, ನೀರುಳ್ಳಿಯ ಸೊಲುದು ಕೊರವಲೆ ಬಾಕಿ. ಎಲ್ಲ ಅಪ್ಪಗ ಪಾರುವ ಕೆಪ್ಪಟೆವರೇಗೆ ನೀರು ಇಳ್ಕೊಂಡು ಕಂಡತ್ತು.

“ಶ್ಯೆಲಾ…! ನೀರುಳ್ಳಿ ಕ್ರಯ ಏರಿದ್ದಕ್ಕೆ ಕಣ್ಣೀರು ಹಾಕುದೋ ನೀನು.?”  ಎಂತರನ್ನಾರು ಮಾತಾಡೆಕ್ಕನ್ನೆ ಹೇಳಿ ಶುರು ಮಾಡಿದೆ, ಆನು.

“ಕಿಲೋವಿಂಗೆ ಏಳು ರುಪಾಯಿ ಇಪ್ಪಗಳೂ ಇಷ್ಟೇ ನೀರು ಬಂದುಗೊಂಡಿತ್ತು. ಈಗ ಎಪ್ಪತ್ತು ರುಪಾಯಿ ನೀರುಳ್ಳಿಲಿಯೂ ಅಷ್ಟೇ ಕಣ್ಣೀರು ಬತ್ತು. ಅದಲ್ಲಿ ಎಂತ ವೆತ್ಯಾಸ ಆಯಿದಿಲೆ ಬಿಡಿ. ಅದಿರಳಿ,ಬಾಕಿ ಇಪ್ಪ ತರಕಾರಿ ಸಾಮಾನುಗೊಕ್ಕುದೇ ಕ್ರಯ ಏರಿದ್ದನ್ನೆ,ಆ ಶುದ್ದಿ ಎಲ್ಲಿಯೂ ಇಲ್ಲೆ,ಅದೆಂತ.?”

ಅದು ಸರಿ.! ಪಾರು ಹೇಳಿದ ವಿಷಯ ಇದುವರೆಗೆ ಎನ್ನ ತಲೆಗೆ ಹೊಳದ್ದಿಲೆ. ಅದೆಂತ ಹಾಂಗೆ…?ಎನಗರಡಿಯ.

ಇದು ಪಾರುವ ಸಮಸ್ಯೆ.ಉದಿಯಪ್ಪಗ ಆನು ಆಫೀಸಿಂಗೆ ಹೋಪಲಾತು.ಮಕ್ಕೊ ಶಾಲೆಗೆ. ಅ ಸಮಯಲ್ಲಿ ಮನೆಲಿ ಒಬ್ಬನೇ ಗೋಡೆ ನಡುಕೆ ಇಪ್ಪಗ ಮಾತಾಡ್ಲೆ ಒಬ್ಬ ಇರೆಕ್ಕಾತು ಹೇಳಿ ಪಾರು ಜಾನ್ಸೋದು ಇದ್ದು.ಈಗ ದೊಡ್ಡೋನು ಕೊಲೇಜಿಂಗೆ ಹೋಪಲೆ ಶುರು ಮಾಡಿದ್ದ°. ದೂರ ಹೋಸ್ಟೆಲಿಲಿ ಇಪ್ಪದು.ಎರಡು ದಿನಕ್ಕೊಂದರಿ ಅವನ ಫೋನು ಬತ್ತು, ಹೆಚ್ಚಾಗಿ ಪಾರುವೇ ಮಾತಾಡುದು.   ” ಅಮ್ಮಾ…ಹೇಂಗಿದ್ದೆ ?” ಹೇಳಿ ಸಹಜವಾಗಿಯೇ ವಿಚಾರ್ಸಿಗೊಂಡು ಶುದ್ದಿ ಎಲ್ಲ ಮಾತಾಡ್ತ°. “ಇಷ್ಟು ಸಮಯಲ್ಲಿ ನೀನು ಹೇಂಗಿದ್ದೆ ಹೇಳಿ ವಿಚಾರ್ಸದ್ದ ಗಿರಾಕಿ  ಈಗ ಶುರು ಮಾಡಿದ್ದ° ” ಹೇಳಿ ಪಾರುವ ಕಮೆಂಟು. ಈ ವಿಷಯವ ಇದರ ಫ್ರೆಂಡು, ರವಿಯ ಹೆಂಡತ್ತಿಯತ್ರೆ ಫೋನಿಲಿ ಹೇಳಿ ನೆಗೆ ಮಾಡಿಯೂ ಆಯಿದು.

ರವಿಯೂ ಆನೂ ಒಂದೇ ಊರಿನೋರು.ಎಂಗಳ ಮಾವುಗಳೂ ಅವರ ಊರಿಲಿ ನೆರೆಕರೆ. ಹಾಂಗಾಗಿ ಈಗ ಊರು ಬಿಟ್ಟು ದೂರ ದೂರ ಇಪ್ಪದಾದರೂ ನಾವು ಹತ್ತರೆಯೇ. ಅತ್ತಿತ್ತ ಹೋಕು ಬರ್ಕು ಯೇವತ್ತಿಂಗೂ ಇಪ್ಪದೇ.

ಮನ್ನೆ ಶನಿವಾರ ಪಾರು ನೆಂಪು ಮಾಡ್ಸಿತ್ತು, “ನಾವು ಅವರಲ್ಲಿಗೆ ಹೋಗದ್ದೆ ಸಮಯ ಆತು ಅಲ್ಲದೋ.?”

“ನಾಳೆ ಮನೆಲಿ ಇರ್ತವೋ ವಿಚಾರ್ಸು.ಹೊಗಿ ಬಪ್ಪೋ°, ಎಂತಾಯೆಕ್ಕು.?” ಪಾರುಗೆ ಸುಮಾರೆಲ್ಲ ಬಾಕಿ ಪಟ್ಟಾಂಗ ಮುಗುಶುಲಿಕ್ಕು ಗ್ರೇಶಿ ಆನು ಒಪ್ಪಿದೆ.

“ಇನ್ನು ಅಲ್ಲಿ ಎಂಗೊ ಮಾತಾಡ್ಯೊಂಡಿಪ್ಪಗ ಬಂದು ಚೆರೆಪೆರೆ ಹೇಳೆಡಿ. ಬೇಕಾರೆ ನಿಂಗೊ ಅಲ್ಲಿ ಚಾವಡಿಲಿ ಕೂದು ಎಷ್ಟೂ ಲೊಟ್ಟೆ ಹೊಡೆರಿ, ಎಂತ?”

ಮೌನಂ ಸಮ್ಮತಿ ಲಕ್ಷಣಂ ಹೇಳಿ ಆನು ತಳೀ…ಯದ್ದೆ ಕೂದೆ.

ಒಂದು ಆಸರಿಂಗೆ ಕುಡುದು,ರವಿಯನ್ನೂ ಕರಕ್ಕೊಂಡು ಪಂಜಾಜೆ ಮಾವನಲ್ಲಿಗೆ ಹೆರಟೆ. ಕೂದೊಂಡು ನಾಕು ಲೊಟ್ಟೆ ಹೊಡವ ಛಾನ್ಸು ಬಿಡುದೆಂತ್ಸಕೆ.!

ಹೊಟ್ಟೆ ತುಂಬ ಲೊಟ್ಟೆ ಹೊಡದಿಕ್ಕಿ ವಾಪಾಸು  ಮನೆಗೆ ಬಪ್ಪಗ ಇಲ್ಲಿ ಈ ಹಳೆ ಗಿರಾಕಿಗಳದ್ದು ರೈಸಿಗೊಂಡಿದ್ದತ್ತು. ನೆಗೆ ,ಅಬ್ಬರ ಎಲ್ಲ ಈಗಷ್ಟೆ ನಿಲ್ಸಿದ ಲಕ್ಷಣ ಕಂಡತ್ತು ಇಬ್ರ ಕಣ್ಣಿಲಿಯೂ.

“ಹೋ.ಹ್ಹೋ.ಹ್ಹೋ.!ಇದೆಂತ ಇಬ್ರ ಕಣ್ಣಿಲಿಯೂ ನೀರು?.ಸಂಕಟಂದಲೋ,ಸಂತೋಷಕ್ಕೆಯೋ.? ಅಲ್ಲ ಇದು ಮೊಸಳೆ ಕಣ್ಣೀರೋ…?” ರವಿ ವಿಚಾರ್ಸಿದ.

ಇದು ಮೂರೂ ಅಲ್ಲ ಹೇಳ್ತದು ಎನ್ನ ಘಟ್ಟಿ ನಂಬಿಕೆ. ಆಚಿಕೆ ಉಂಬ ಮೇಜಿಲಿ ನೀರುಳ್ಳಿ ಕೊರದು ಮಡಿಕ್ಕೊಂಡು ಕಂಡತ್ತು.

“ಯೇವದೂ ಅಲ್ಲ, ಇದು ನೀರುಳ್ಳಿ ಕಣ್ಣೀರು”

ಬಾ..,ನಾವು ಚಾವಡಿಗೆ ಹೋಪೊ ಹೇಳಿ ಎನ್ನ ಹೆರ ದೆನುಗೇಳಿದ ರವಿ. ಇನ್ನಾಣ ಪ್ರತಿಕ್ರಿಯೆ ಹೇಂಗಿಕ್ಕು ಹೇಳ್ತ ಚೋದ್ಯಕ್ಕೆ ಸಮಾನ ಮನಸ್ಕರಾದ ಎಂಗಳೊಳ ಭಿನ್ನಾಭಿಪ್ರಾಯವೇ ಇತ್ತಿಲೆ.

~~~<>~~~

ತೆಕ್ಕುಂಜ ಕುಮಾರ ಮಾವ°

   

You may also like...

5 Responses

 1. ಚೆನ್ನೈ ಭಾವ° says:

  ಹ ಹ್ಹಾ ಹಾ… ರೈಸಿದ್ದು ಮಾವ ಈ ಪಜೀತಿ. ಇದರಿಂದ ಹೆಚ್ಚಿಗೆ ಇಲ್ಲಿ ಬರದಿಕ್ಕಲೆ ಗೊಂತಿಲ್ಲೆ. ಎಲ್ಯಾರು ಬರದ ಮೇಟರ್ ನಮ್ಮ ಮನಗೆ ಎತ್ತಿರೆ …!!

 2. ಎ೦ .ಎಸ್ says:

  ಎಲ್ಲಾಕಡೆ ಪಾರುಪತ್ಯ
  ಅ- ಸಮಾನ್ಯವೆ
  ಹೇಳೋದು ,
  ಸಮಾನಮನಸ್ಕರ
  ಅಭಿಪ್ರಾಯ ಹೇಳೋದು ಬೈಲಿಲಿ ಕೇಳಿತ್ತು.

 3. ಇಂದಿರತ್ತೆ says:

  ಮಾವ, ನಿಂಗಳ ಪಚೀತಿ ಲಾಯ್ಕ ಆಯಿದು- ಆದರೆ ನಿಂಗಳ ಬಗ್ಗೆ ಕರುಣೆಬತ್ತಿಲ್ಲೆ- ಎಂತಕೆ ಹೇಳಿರೆ ಎನ್ನದೂ ರೆಜಾ ಪಾರುಅತ್ತೆಯ ಕಥೆಯೇ. ಇಡೀದಿನ ಉದಿಯಂದ ಕಸ್ತಲೆವರೆಂಗೂ ಒಬ್ಬನೇ ಇದ್ದು ಬೊಡುದಿರುತ್ತು- ಹಾಂಗೆ ಆಫೀಸಿಂದ ಬಂದಕೂಡ್ಳೆ ಎನಗೆ ಮಾತಾಡುವ ಏವ್ರ! ಅವಕ್ಕೆ ಬಚ್ಚಿ ಸಾಕಾಗಿರ್ತು ಹೇಳಿ ನೆಂಪೇ ಆವುತ್ತಿಲ್ಲೆ. ಪ್ರಶ್ನೆ ಕೇಳಿಯಪ್ಪಗ ಉತ್ತರ ಬಾರದ್ದರೆ ಬಿಪಿ ಏರಿ ಪರಂಚಾಣವೂ ಸುರುವಾವುತ್ತು. ಕೋಪ ಮತ್ತೆ ಬೇಜಾರದ ನಡುವಾಣ ಸ್ಥಿತಿಗೆ ಎತ್ತಿಯಪ್ಪಗ ಪರಿಸ್ಥಿತಿ ಗಂಭೀರ ಆವುತ್ತು ಹೇಳುದು ಅವಕ್ಕೂ ಅರ್ಥ ಆಗಿ ಉತ್ತರಂಗೊ ಬೇಗಬೇಗ ಬತ್ತು.
  ಮತ್ತೆ ಈಗ ಅಂಗಡಿಂದ ನೀರುಳ್ಲಿ ತೆಕ್ಕೊಂಬಾಗಳೇ ಕಣ್ಣೀರು ಬಂದಾವುತ್ತು- ಇನ್ನು ಕೊರದರೆ ಕೇಳೆಕ್ಕಾ?

 4. ಎಸ್.ಕೆ.ಗೋಪಾಲಕೃಷ್ಣ ಭಟ್ಟ says:

  ನೈಜ ಕತೆಯ ವಿವರಣೆಯ ಹಾಂಗೆ ಇದ್ದು. ಮನೆಲಿ ಇಪ್ಪವರ ಹತ್ತರೆ ರಜಾ ಆದರೂ ಮಾತಾಡೆಕಾದ್ದು ಸರಿ. ಕನಿಷ್ಟಪಕ್ಷ ಅವು ಹೇಳುದರ ಕೇಳುವಷ್ಟು ಪುರುಸೊತ್ತಾದರೂ ಮಾಡಿಕೊಳೆಕ್ಕು. ಇಲ್ಲದ್ದರೆ ಅವರ ಮಾನಸಿಕ ಆರೋಗ್ಯವೇ ಹಾಳಕ್ಕು.

 5. maya says:

  appu..
  manelippavakke heraana suddigala
  kelekkuli appadu….

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *