ಭಾರತ ಅಭಿವೃದ್ಧಿಶೀಲ ದೇಶ.

April 10, 2011 ರ 7:30 amಗೆ ನಮ್ಮ ಬರದ್ದು, ಇದುವರೆಗೆ 23 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಓ ಇದೆಂತ ಚೆನ್ನೈ ಭಾವ ಭಾರತ ಆರ್ಥಿಕತೆ ಬಗ್ಗೆ ಬರೆತ್ತಾ ಇದ್ದನೋ ಗ್ರೇಶಿದಿರೋ? . ಇವ ಏವಾಗ ಇಷ್ಟು ಉಷಾರಿ ಆದೀಕ್ಕೀದಪ್ಪಾ ಹೇಳಿ ಕಂಡತ್ತೋ.! ಇಲ್ಲೆ. ಅದೆಲ್ಲ ಬಾಲಣ್ಣ೦ಗೋ ಮಹೇಶಣ್ಣ೦ಗೋ ಇಪ್ಪದು. ನಮ್ಮ ಕೈಗೆ ಸಿಕ್ಕಿದ್ದು ಅದಲ್ಲ ಸಂಗತಿ ನೋಡಿ ಇಲ್ಲಿ.

ಎನಗೆ ಮನ್ನೆ ಓ ಅತ್ಲಾಗಿ ಹೋಪಲಿತ್ತು. ನಮ್ಮ ಮರ್ಜಿಗೆ ವಿಮಾನ ಆತಿಲ್ಲೆ. ಬಸ್ಸು ಆವ್ತಿತ್ತು ಆದರೆ ಡಬ್ಬಲು ಖರ್ಚು. ನಮ್ಮ ರೈಲೇ ಒಳ್ಳೆದು ಹೇಳಿತ್ತು, ತಿಂಗಳ ಮದಲೆ ಟಿಕೆಟೂ ಮಾಡಿತ್ತು. ಸಮಯಕ್ಕೆ ಸರೀ ನಾವೂ ಹೋತು ಸ್ಟೇಶನಿಂಗೆ. ರೈಲೂ ಬಂತು. ಏರಿ ಕೂದತ್ತು.

೧೧ವರೆಗೆ ಹೆರಡೆಕ್ಕಪ್ಪದು ೧೨ವರಗೆ ಹೆರಟತ್ತು. ಎತ್ತೋದು ಮರುದಿನ ಉದಿಯಪ್ಪಗ ಅಲ್ಲಿಗೆ. ಅಷ್ಟನ್ನಾರ ಎಂತ ಮಾಡ್ಲೂ ಎಡಿಯ. ತಿಂದತ್ತೋ ಒರಗಿತ್ತೋ ಅಷ್ಟೇ. ಓದುವ ಅಭ್ಯಾಸ ಇಪ್ಪವಂಗೆ ಅದು ಮಾಡ್ಲಾವುತಿತ್ತು. ಎನಗೆ ಅದು ಎಡಿಯ. ಕೇಳಿರೆ ಕಣ್ಣಿಂಗೆ ಒಳ್ಳೆದಲ್ಲಾ ಹೇಳುವೆ. ಎನಗಂತೂ ರೈಲಿಲಿ ಹೋವ್ತರೆ ಅಪ್ಪರ್ ಬರ್ತ್ ಆಯೇಕೆ. ಇಲ್ಲದ್ರೆ ಟಿಕೆಟೂ ಬೇಡ, ಹೋಗಲೂ ಹೋಗೆ. ಇರಲಿ ಬಿಡಿ. ರೈಲು ಹೆರಟತನ್ನೇ ಈಗ.

ನಮ್ಮದು ಯೇವತ್ತೂ ಅಪ್ಪರ್ ಬರ್ತ್. ಏವ ರಗಳೆಯೂ ಇರ್ತಿಲ್ಲೆ . ಏರಿ ಒರಗಿತ್ತಯ್ಯ. ಸೀಟ್ ಉದ್ಡೋದು ನಿಂಗಳೆ. ಸೆಕೆ ಹೇಳಿರೆ ಉರಿ ಸೆಕೆ. ಫಾನ್ ತಿರುಗುತ್ತೋ ನೋಡಿದೆ. ೩ ಇದ್ದತ್ತು – ೨ ತಿರುಗುತ್ತು. ಇನ್ನೊಂದು ಹಂದುತ್ತಿಲ್ಲೇ! ತಟ್ಟಿ ನೋಡಿದೆ. ಇಲ್ಲೆ. ಕಿಸೆಲಿಪ್ಪ ಬಾಚಣಿಗೆ ಮೆಲ್ಲಂಗೆ ರೆಂಕಗೆ ದೂಡಿ ನೋಡಿದೆ. ಹಂದಿತ್ತು. ಬಚಾವು ದೇವರೇ ಗ್ರೇಶಿ ಬಿದ್ದೊಂಡೆ. ಕಣ್ಣೆಕ್ಕಳಿಸಿ ನೋಡಿಯಪ್ಪಗ ಆ ಫಾನಿನ ಮೇಗೆ ನಮ್ಮಂದ ಮದಲಾಣವು ಕಾಪಿ ಕುಡುದು ಮಡುಗಿದ ಒಂದು ಲೋಟ, ಸೀಟಿನ ಹೊಡೆಲಿ ಕಾಗದ ಪೊಟ್ಟಣ . ! (ಅದರೊಳ ?? ಉಮ್ಮಾ, ನಾರುತ್ತು, ಆ ನೋಡ್ಲೆ ಹೊಯಿದಿಲ್ಲೆ. ಮತ್ತೆ ಬಪ್ಪವಕ್ಕೆ ಇನಾಮು ಮಡಿಗಿದ್ದದಾಯ್ಕು ಇದು ) . ಆಚ ಸೀಟಿಲ್ಲಿಪ್ಪ ಜೆನ ಟಿ ಟಿ ದೆನಿಗೊಂಡು ಕೇಳಿತ್ತು – ಬೋಂಬು ಆದಿಕ್ಕೋ ?! ಅದು ನೆಗೆ ಮಾಡಿಕ್ಕಿ ಹೋತು. ನಿಜವಾಗಿ ಬಾಂಬು ಆಗಿತ್ತಿದ್ರೋ??!! . ಹೋಗಲಿ ಬಿಡಿ. ಆನು ಮನಿಗಿದನೋ .., ಸೊಂಟ ಬೇನೆ ಅಪ್ಪಲೆ ಸುರುವಾತು. ಎದ್ದು ಕೂದು ನೋಡಿದೆ ಸೀಟಿಲ್ಲಿ ಏನಾರು ಆಯ್ದೋ. ಎಂತಾಯ್ದಿಲ್ಲೆ. ಒಳ ನೆಡೂಕೆ ಗೋಳೆ ದೋಸೆಯಷ್ಟಕ್ಕೆ!! ಹೊದಕ್ಕೆ ಇದ್ದತ್ತು ಚೀಲಲ್ಲಿ ಮಡುಸಿ ಹಾಕಿ ಮನುಗಿದೆ. ರಜಾ ಹೊತ್ತಪ್ಪಗ ಎದ್ದೆ . ಬಾಗ್ ಇದ್ದೋ ನೋಡಿದೆ. ಇದ್ದತ್ತು. ಕರೇಲಿ ಎರುಗು ಹರೆತ್ತಾ ಇದ್ದತ್ತು . ಪುಣ್ಯಕ್ಕೆ ಎನ್ನ ಚೀಲಲ್ಲಿ ಸಿಹಿ ಖಾರ ಎಂತೂ ಇತ್ತಿಲ್ಲೆ. ಮತ್ತೆಲ್ಲಿಂದ ಬಂತೋಪ!  ಶೌಚಾಲಯಕ್ಕೆ ಹೋಪನೋ ಕಂಡತ್ತು. ಹೋದೆ – ನಿಂದೆ. ನೀರು ಬತ್ತೋ ?! – ಇಲ್ಲೆ. ಆಚ ಕೋಚಿಂಗೆ ಹೋಗಿ ನೋಡಿದೆ. ಹೆರ ವಾಷ್ ಬೇಸಿನಿಲ್ಲಿ ಸಪೂರಕ್ಕೆ ಬಂದೊಂಡಿದ್ದತ್ತು. ಒಳ ಹೋಪಗ ಮತಿಯಾತು. ಮತ್ತಾಣ ಕಂಪಾರ್ಟ್ ಮೆಂಟ್ ಹೊಕ್ಕಿದೆ. ಪುಣ್ಯಕ್ಕೆ ಅಲ್ಲಿ ಬತ್ತು. ಸೈಡಿಲ್ಲಿ ಲೀಕ್ ಆಗ್ಯೊಂಡೂ ಇತ್ತು. ಇದಾ ನಿಂಗೊ ಎಲ್ಯಾರು ರೈಲ್ ಶೌಚಾಲಯಕ್ಕೆ ಹೋವ್ತರೆ ನೆಂಪು ಇರಲಿ – ನಿಂಗಳ ಕೆಲಸ ಮಾಡಿಕ್ಕಿ ಬಂದಿಕ್ಕಿ – ಅಷ್ಟೇ.!! ಶೌಚಾಲಯ ಶುಚಿ ಇಕ್ಕು ನಿಂಗಳ ಮನೇಲಿ ಮಾತ್ರ. ಒಳ ಇತ್ತು ೩ – ೪ ನೀರಿನ ಕಾಲಿ ಕುಪ್ಪಿ . ಆರು ಮಡುಗಿದ್ದೋ! ಕಣ್ಣೆತ್ತಿ ಸರ್ತ ನಿಂದು ನೋಡಿದೀ …. ಹಲವು ಚಿತ್ರ ಬರವಣಿಗೆ, ಸಂಕ್ಷಿಪ್ತ ಸಂದೇಶ. ನವ ನಾಗರೀಕ ಯುವಕರ ಕೌಶಲ್ಯ ಪ್ರೌಢಿಮೆ ಎಲ್ಲಾ ಪ್ರೀ ನೋಡ್ಳಕ್ಕು. ಯೇ ದೇವರೇ ಇವರ ಬುದ್ದಿ ವೈಕಲ್ಯವೇ!! ಮತ್ತೆ ಬಂದು ಕೂದತ್ತಯ್ಯ ನಮ್ಮ ಸೀಟಿಲ್ಲಿ. ಮೂರ್ಸಂದಿ ಆಗಿಯೊಂಡು ಬಂತು. ಈರೋಡು ತಲುಪಿತ್ತು. ಮದಲಿಂಗೆ ಒಳ್ಳೆ ಆವಿನ್ ಹಾಲು ಸಿಕ್ಕಿಯೊಂಡಿತ್ತು. ಈಗ ಇಲ್ಲೆ. (ಕೇಳಿರೆ – ಕ್ವಾಲಿಟಿ ಸರಿ ಇಲ್ಲೆ ಹೇಳಿ ರೈಲ್ವೆ ಇಲಾಖೆ ಅದರ ಅಲ್ಲಿಂದ ಓಡ್ಸಿದ್ದವಡಪ್ಪ! ) ನೀರು ಚಾಯೆ ನೀರು ಕಾಫಿ ಧಾರಾಳ ಇತ್ತು . ತಿಂಬಲೆ ಅದೇ ಮೂರು  ಬಗೆ – ಬಿರ್ಯಾಣಿ, ಚಪ್ಪಾತಿ , ಪೋರೋಟ. ಬೇರೇ ಎಂತ ಮಾಡಿರೂ ಖರ್ಚಿ ಅವ್ತಿಲ್ಲೇ , ನಷ್ಟ ಆವ್ತು.! ಸಿಕ್ಕಿದ್ದರ ತಿಂದವನೇ ಹುಷಾರಿ ಹೇಳಿ ನಾವೂ ಅನುಸರಿಸಿತ್ತು. ರೈಲು ಹೆರಟತ್ತು. ಕಾಪಿ ಚಾಯೆ , ಪೆಪ್ಸಿ , ಮಿರಾಂಡ, ಬಿಸ್ಕೆಟ್ , ಕುಕ್ಕುರೆ. – ದೇಹಕ್ಕೆ ಆರೋಗ್ಯಕ್ಕರ ಸರ್ಕಾರಿ ಆಹಾರ. ತೋಳೆ ಹರವಲೆ ಸುರುವಾತು. ಎಲಿಯೂ ಒಂದೆರಡು. ರಿಸರ್ವೇಶೇನ್ ಇಲ್ಲದ್ದವು ಹತ್ತಲಾಗ . ಹಾಂಗೆ ಮಾಡಿರೆ ಟಿ ಟಿ ಆರ್ ಬದುಕ್ಕುತ್ತ್ಸು ಹೇಂಗೆ ಅಪ್ಪೋ. ಧಾರಾಳ ಕಿಸಿಯೂ ತುಂಬಿತ್ತು. ನಿಂಗಳ ಸೀಟ್, ಬರ್ತ್ ನಿಂಗೊಗೇ ಬಿಟ್ಟು ಕೊಟ್ಟಾಯ್ದು. ಬಾಕಿಪ್ಪವು ಬಂದು ಟೊಯಿಲೆಟ್ ಬುಡಲ್ಲಿಯೋ ಕೂದೊಂಡು ಬಂದರೆ ನಿಂಗೊಗೆಂತಕೆ ತಲೆಬೆಶಿ. ಎಡೆ ದಾರಿಲ್ಲಿ ನೀರು ತುಂಬಿಸಿದ್ದವಿಲ್ಲೆಯೋ ? ಆರತ್ರ ಕೇಳುವದು. ಒಂದಾರಿ ಹೋಗಿ ಎತ್ತಿರೆ ಸಾಕು ನವಗೆ. ನಮ್ಮ ಅಗತ್ಯಕ್ಕೆ ನೀರಿನ ಕುಪ್ಪಿ ನಾವೇ ತೆಕ್ಕೊಳ್ಳೆಕ್ಕಪ್ಪ! ನಿಂಗೊಗೆ ತಿಂಬಲೆ ಕುಡಿವಲೆ ಏನೇನೂ ಕಮ್ಮಿ ಆಗ. ಬೇಕಾಷ್ಟು ಸರ್ತಿ ತೆಕ್ಕೊಂಡು ಬತ್ತವು ಭಾಷೆ ಊರು ಗೊಂತಿಲ್ಲದ – ಕಾಫಿ ಚಾಯೆ ಬಿರ್ಯಾಣಿ ಚಪ್ಪಾತಿ ಪೋರೋಟ. ಅಂತೂ ೩ ಗಂಟಗೆ ಎತ್ತೆಕ್ಕಪ್ಪದು ೫ ಗಂಟಗೆ ಎತ್ತಿತ್ತು ಎನಗೆ ಇಳಿಯೆಕ್ಕಾದಲ್ಲ್ಯಂಗೆ!.

ಏನಕಂಡತ್ತು ಅಪ್ಪೋ ಇದರಿಂದ ಹೆಚ್ಚಿಗೆ ಅವ್ವು ಹೇಂಗೆ  ಸೌಲಭ್ಯ ಕೊಡ್ಳೆ ಎಡಿಗು. ನಾವು ಕೊಡ್ತದು ವಿಮಾನಂದ , ಬಸ್ಸಿಂದ ಕಮ್ಮಿ ಪೈಸೆ – ಅದೂ ಒರಗಿಯೊಂಡು ಹೋಪಲೆ!

ನಮ್ಮದು ‘ಭಾರತ – ಅಭಿವೃದ್ದಿಶೀಲ ದೇಶ’. ಶಾಲೇಲಿ ಓದಿದ್ದು ಪುಸ್ತಕಲ್ಲಿ. ಇಂದಿನ್ಗೂ ಆ ಗೆರೆ ಬದಲಾವಣೆ ಆಯ್ದಿಲ್ಲೆ! ದಿನಕ್ಕೊಂದು ಹೊಸತು , ಬದಲಾವಣೆ ಆವ್ತಲೇ ಇದ್ದು. ಇಂದು ಬಂದದು ಸರೀ ಪಕ್ವ ಆಯೆಕ್ಕಾರೆ ಮದಲೆ ನಾಳೆ ಹೊಸತ್ತು ಒಂದು ಬಂದು ಆತು. ಎಲ್ಲದಕ್ಕೂ ಗ್ಯಾರಂಟಿ ಇಲ್ಲದ್ರೂ ವಾರೆಂಟಿ ಇದ್ದನ್ನೆ. ವಾರಂಟಿ ಕಳುದ ಮರುದಿನ ಮೂಲಗೆ ಹಾಕಿ ಹೊಸತ್ತು ಹೆರ್ಕಲಕ್ಕು. ಒಟ್ಟಾರೆ ನಮ್ಮ ಭಾರತಲ್ಲಿ ಹೆಗ್ಳ ನ್ಗೊ ಇಪ್ಪನ್ನಾರ ಎಂತ ಮಾಡ್ಲೂ ಉಪಾಯ ಇಲ್ಲೆ ಅಪ್ಪೋ.! ಏವ ಒಂದು ವಸ್ತುವೋ ಸೇವೆಯೋ ಸರಿ ಲಾಯಕ್ಕು ಹೇಳಿ ಇಪ್ಪದು ಇದ್ದೋ ಹೇಳಿ. ಸರಕಾರಿ ಸಹಕಾರಿ (ಸರಕಾರಿ ಸಾರಿಗೆ, ಸರಕಾರಿ ಆಸ್ಪತ್ರೆ, ಸಹಕಾರಿ ಸಂಘ ) ಕಳಪೆ, ಪ್ರೈವೇಟ್ ಪೈಸೆ ಇಪ್ಪವಂಗೆ ಮಾತ್ರ ಅಕ್ಕಷ್ಟೆ. ಆರತ್ರೆ ಹೋಗಿ ಹೇಳ್ವದು ! ಆ ‘ಶೀಲ’ ಏವತ್ತು ಭಾರತ ಬಿಟ್ಟು ಹೋವುತ್ತೋ ಅಂದಿಂಗೆ ಭಾರತ ಅಭಿವೃದ್ಧಿ ದೇಶ ಹೇಳಿ ಓದಲಕ್ಕಪ್ಪೋ.

ಹಜಾರೆ ಹಾಂಗಿಪ್ಪವು ಇನ್ನೂ ೪ ಜೆನ  ಮುಂದೆ ಬಂದು ಎದ್ದು ನಿಂದರೆ ಏನಾರು ಒಳ್ಳೆದಕ್ಕೋ!

ಭಾರತ ಅಭಿವೃದ್ಧಿಶೀಲ ದೇಶ., 5.0 out of 10 based on 1 rating
ಶುದ್ದಿಶಬ್ದಂಗೊ (tags): , , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 23 ಒಪ್ಪಂಗೊ

 1. mankuthimma

  MIDDLE BIRTH HENGE CHENNAI BHAVAA?

  [Reply]

  ಚೆನ್ನೈ ಬಾವ°

  ಚೆನ್ನೈ ಭಾವ Reply:

  ಅದು ನಿಂಗೊಗೇ ಇಪ್ಪದು. ಎನ್ನದಲ್ಲದ ಕಾರಣ ಕಣ್ಣು ಹಾಕಿದ್ದಿಲ್ಲೆ – ಕೈ ಮಡಿಗಿದ್ದಿಲ್ಲೇ.

  [Reply]

  VA:F [1.9.22_1171]
  Rating: 0 (from 0 votes)
 2. mankuthimma

  middlebirthli rajja gaali jaasti battu bhavaa,matte fanina baachanigeli tirugusutta kelasavu ille,megaana birthli manigidavu aa kelasava maaduttavu.

  [Reply]

  ಚೆನ್ನೈ ಬಾವ°

  ಚೆನ್ನೈ ಭಾವ Reply:

  ಅಂಬಗ ಬಾಕಿ ಇಪ್ಪದೋ?!!!!

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣದೊಡ್ಡಭಾವಕೇಜಿಮಾವ°ಶರ್ಮಪ್ಪಚ್ಚಿಡೈಮಂಡು ಭಾವವಸಂತರಾಜ್ ಹಳೆಮನೆಶೀಲಾಲಕ್ಷ್ಮೀ ಕಾಸರಗೋಡುವಿನಯ ಶಂಕರ, ಚೆಕ್ಕೆಮನೆವೇಣೂರಣ್ಣಸರ್ಪಮಲೆ ಮಾವ°ಜಯಶ್ರೀ ನೀರಮೂಲೆಪವನಜಮಾವಮಂಗ್ಳೂರ ಮಾಣಿಅಜ್ಜಕಾನ ಭಾವಅನುಶ್ರೀ ಬಂಡಾಡಿಸುಭಗಬಟ್ಟಮಾವ°ಚೆನ್ನೈ ಬಾವ°ಅನು ಉಡುಪುಮೂಲೆಶಾಂತತ್ತೆಎರುಂಬು ಅಪ್ಪಚ್ಚಿಪೆರ್ಲದಣ್ಣಶುದ್ದಿಕ್ಕಾರ°ಮುಳಿಯ ಭಾವಪುತ್ತೂರುಬಾವಶಾ...ರೀವಾಣಿ ಚಿಕ್ಕಮ್ಮ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ