Oppanna.com

ಕಡಲಿನಲೆಗೆದುರಾ(ಗಿ) ಹುಲುಮನುಷ್ಯ

ಬರದೋರು :   ತೆಕ್ಕುಂಜ ಕುಮಾರ ಮಾವ°    on   05/02/2014    7 ಒಪ್ಪಂಗೊ

ತೆಕ್ಕುಂಜ ಕುಮಾರ ಮಾವ°

ಆಫೀಸಿಂದ ಯೇವತ್ತರಾಣ ಹೊತ್ತಿಂಗೆ ಬಂದಪ್ಪದ್ದೆ ಪಾರು ವಿಚಾರ್ಸಿತ್ತು ಯೇವತ್ರಾಣ ಹಾಂಗೆ,”ತಿಂಬಲೆ ಎಂತಕ್ಕು, ನಿಂಗೊಗೆ? ಚಾ ಮಾಡ್ತೆ ಹೇಂಗೂ”
“ಉದಿಯಪ್ಪಗಾಣ ದೋಸೆ ಎರದ್ದದು ಎರಡು ಒಳುದ್ದು, ಅದನ್ನೇ ತಿನ್ನಿ.ಬೇಕಾರೆ ರಜ್ಜ ತುಪ್ಪ ಹಾಕಿ ಬೆಶಿ ಮಾಡ್ತೆ” ಹೇಳಿತ್ತು. ಎನ್ನ ಅಭಿಪ್ರಾಯಕ್ಕೂ ಕಾಯ್ದಿಲೆ, ಇಂದು.
“ಹ್ಮ್ಮ್..ಬೆಶಿ ಮಾಡಿರೆ ಹಪ್ಪಳದಾಂಗಕ್ಕು.ತಣ್ಕಟೆ ಲಾಯ್ಕ ಆವುತ್ತಿಲೆ.ಬೇರೆ ಎಂತ್ಸೂ ಇಲ್ಲೆಯೋ.?”
“ಬೇರೆ ಎಂತ್ಸರ..? ದೋಸೆ ಲಾಯಿಕಿದ್ದು.ಉದಿಯಪ್ಪಗ ಮಾಡಿದ್ದು ರುಚೀ ಇತ್ತು ಹೇಳ್ಯೊಂಡು ತಿಂದಿದೀ.?ಮೊಸರು ಉಪ್ಪಿನಕಾಯಿಯೊಟ್ಟಿಂಗೆ ತಿಂದರೆ ಹೊಟ್ಟೆ ತಂಪಕ್ಕು.ಇರುಳಿಂಗೆ ಹೇಂಗೂ ಉಂಬಲಿದ್ದನ್ನೆ”
“ಇರುಳಿಂಗೆ ಎಂತ್ಸರ ಇಂದು,ಅಂಬಗ?”.ಪುಲಾವು,ಪರೋಟ ಹೇಳಿ ಕೆಲವು ವಿಶೇಷ ಅಡಿಗೆ ಮಾಡ್ತ ಆಲೋಚನೆಲಿಕ್ಕು ಗ್ರೇಶ್ಯೊಂಡು ಕೇಳಿದೆ.
” ನಿನ್ನೆ ಮಾಡಿದ ಸಾಂಬಾರುದೆ ಮನ್ನೆ ಮಾಡಿದ ಸಾರುದೆ ಇದ್ದು ಫ್ರಿಜ್ಜಿಲಿ.ಎರಡನ್ನೂ ಸೇರ್ಸಿ ‘ಸಾರುಂಬಾರು’ಮಾಡಿ ಬಳುಶುವೆ, ಇಂದಿರುಳಿಂಗೆ”ಹೇಳಿತ್ತು.
ಅಯ್ಯೋ..ಅಯ್ಯೋ.!!! ಇಂದೆಂತ ಆಯಿದು ಈ ಪಾರುಗೆ ಹೇಳಿ ಆನು ಮೋರೆ ನೋಡಿದ್ದಲ್ಲೇ ಬಾಕಿ ಆದೆ.ಬಿಟ್ಟ ಬಾಯಿಂದ ಶಬ್ಧ ಹೆರಡ.!
ಯೇವಗಳೂ ಹೊತ್ತೋಪಗ ಆನು ಬರೆಕ್ಕಾರೆ ಮಗ ಶಾಲೆಂದ ಬಂದಿರ್ತ. ಅವಂಗೆ ತಿಂಬಲೆ ಯೇನಾರು ಒಂದು ಮಾಡಿ ಕೊಟ್ಟು ಹಾಲು ಕುಡುಶಿ ಆ ದಿನಾಣ ಶಾಲೆ ಕೆಲಸ ಮಾಡ್ಸುಲೆ ಕೂಪದು ಪಾರುವ ದಿನಚರಿಯ ಭಾಗವೇ ಆಗಿ ಹೋಗಿತ್ತು.ಮತ್ತೆ ಆನು ಮನೆಗೆತ್ತಿಯಪ್ಪದ್ದೆ ಚಾದೊಟ್ಟಿಂಗೆ ಬಾಯಿ ಆಡ್ಸಲೆ ಏನಾರೊಂದು ಮಾಡಿ ಕೊಡುಗು.ಅವಲಕ್ಕಿ ಚಟ್ನಿಯೋ,ಸಜ್ಜಿಗೆಯೋ ಮಾಡುಗು.ಕೆಲವು ದಿನ ಎಣ್ಣೆಲಿ ಹೊರುದ ತಿಂಡಿಯೂ ಇಕ್ಕು.ಚಟ್ಟಂಬಡೆ,ಗೋಳಿಬಜೆ ಮಗಂಗೆ ಇಷ್ಟ ಹೇಳಿ ಮಾಡಿರೆ ಆನು ಬಪ್ಪದ್ದೆ ಎನಗೂ ಬೆಶಿ ಬೆಶಿ ಮಾಡಿ ಕೊಡುಗು.ಇದ್ಯಾವುದೂ ಇಲ್ಲದ್ದರೆ ಉದಿಯಪ್ಪಗಾಣ ದೋಸೆ ಹಿಟ್ಟಿನ ಎರಡು ಬೆಶಿ ಬೆಶಿ ಎರದು ಕೊಡುಗು.  ಪಾರುದೆ ಒಂದು ಕೈಲಿ ಚಾ ಹಿಡ್ಕೊಂಡು ಇನ್ನೊಂದು ಕೈಲಿ ಅದಕ್ಕಿಪ್ಪ ತಿಂಡಿಯನ್ನೂ ತೆಕ್ಕೊಂಡು ಎನ್ನೊಟ್ಟಿಂಗೆ ಕೂರುಗು.
ಇಂದ್ರಾಣದ್ದಿದು ಯೇವತ್ರಾಣ ಹಾಂಗಿಲ್ಲೆನ್ನೆ,!
ಇದೆಲ್ಲ ಆಗಿ ಅಡಿಗ್ಗೊಳದಿಕ್ಕೆ ಪಾತ್ರ ತೊಳದು ಎಲ್ಲ ಒತ್ತರೆ ಮಾಡಿಕ್ಕಿ ಬಂದು ಕೂರುಗು,ಒಂದು ಸಣ್ಣ ಪಂಚಾತಿಕೆಯೂ ಶುರುವಕ್ಕು.ಮತ್ತೆ ಎದ್ದರೆ ಅದರ ಮುಂದಾಣ ಕೆಲಸಲ್ಲಿ ತೊಡಗ್ಗು.ದೇವರ ದೀಪ ಹೊತ್ತುಸಿ ನಿತ್ಯ ಪಾರಾಯಣವ ಮುಗುಶಿ ಇರುಳಾಣ ಅಡಿಗೆ ಶುರು ಮಾಡುಗು.
“ತೊಂಡೆಕಾಯಿ ತಂದದಿದ್ದು.ಮೇಲಾರ ಮಾಡೆಕ್ಕೋ,ಅಲ್ಲ ಸಾಂಬಾರು ಅಕ್ಕೋ.?”ವಿಚಾರ್ಸುಗು.”ಮೇಲಾರ ಮಾಡಿರೆ ಈ ಸಣ್ಣವ ಉಣ್ಣ.ಅಂಬಗ ಟೊಮೆಟೊ ನೀರುಳ್ಳಿ ಸೇರ್ಸಿ ಒಂದು ತಾಳ್ಳು ಮಾಡ್ತೆ” ಹೇಳಿ ಶುರು ಮಾಡುಗು.ಎಡೆಲಿ “ನಿಂಗೊ ಎನಗೆರಡು ನೀರುಳ್ಳಿ ಕೊರದು ಕೊಡುವಿರೋ.?” ಕೇಳುಗು.ಎಲ್ಲ ತಯಾರಾದ ಮತ್ತೆ “ಹಪ್ಪಳ ಹೊರಿಯೆಕ್ಕೊ,ಅಲ್ಲ ಸೆಂಡಗೆಯೂ ಬೇಕಕ್ಕೊ” ಹೇಳಿ ಎರಡನ್ನೂ ಹೊರುದು ಮಡಗ್ಗು. ದಿನಾಗಿಳೂ ಒಂದೊಂದು ರುಚಿ,ಒಂದೊಂದು ನಮುನೆ ಮಾಡಿ ಬಳುಶುಗು.ಕೆಲವು ದಿನ ಮಗ ಕೇಳ್ತ ಹೇಳಿ ಪುಲಾವನ್ನೋ,ಲೆಮನ್ ರೈಸನ್ನೋ ಮಾಡುಗು.ಒಂದೊಂದರಿ ಚಪಾತಿ ಲಟ್ಟುಸುಗು.
ಇಂದ್ರಾಣದ್ದಿದು ಯೇವತ್ರಾಣ ಹಾಂಗಿಲ್ಲೆನ್ನೆ,!
“ಅಲ್ಲ…ತರಕಾರಿ ಮುಗುದ್ದು ಹೇಳಿ ಆದರೆ ಚಾ ಕುಡುದ ಮತ್ತೆ ಹೊಗಿ ತಪ್ಪಲಕ್ಕು.ಎಂತ ಹೇಳ್ತೆ..?”
“ಮನೆಲಿಪ್ಪದರ ಮದಾಲು ಉಪಯೋಗ ಮಾಡೆಕ್ಕು.ಯೇವುದನ್ನೂ ಹರೂಪ ಮಾಡ್ಲಾಗ.ಪೈಶೆ ಖರ್ಚಪ್ಪದರ ನಾವು ಎಷ್ಟು ಒಳುಶುತ್ತೋ,ಅಷ್ಟು ಸಂಪಾದನೆ ಮಾಡಿದ ಹಾಂಗೆ. ಸಂಪಾದನೆ ಹೇಳಿರೆ ಅಷ್ಟು ಸುಲಭವೋ. ಮುಖ್ಯ ವಿಷಯ ಎಂತ ಹೇಳಿರೆ, ಒಬ್ಬನೇ ಸಂಪಾದನೆ ಮಾಡೊದು,ಒಬ್ಬನೇ ಉಳಿತಾಯ ಮಾಡೊದು ಎಲ್ಲ ಅಪ್ಪಲಾಗ.ನಾವೆಲ್ಲೋರುದೆ ಸೇರೆಕ್ಕು.ಸಣ್ಣವಂಗೂ ಇದರ ಈಗಳೇ ತಿಳುಶಿ ಕೊಡೆಕ್ಕು ನಾವು. ಹಾಂಗೆ ಒಳುಶಿದ್ದರ ಸರಿಯಾಗಿ ವಿನಿಯೋಗುಸುತ್ತ ನಮುನೆಲಿ ಒಂದು ಏರ್ಪಾಡು ಮಾಡಿಗೊಳ್ಳೆಕ್ಕು ನಾವು.  ಹಾಂಗೆ ಆದರೇ ನವಗೆ ಏಳಿಗೆ.ನಮ್ಮ ಏಳಿಗೆ ಆದರೆ ಕುಟುಂದೋರ ಏಳಿಗೆಯೇ ಅಲ್ಲದೋ.? ಒಟ್ಟಾರೆ ನಮ್ಮ ಈಗಿಪ್ಪ ವೆವಸ್ತೆಯನ್ನೇ ಸರಿ ಮಾಡೆಕ್ಕು.”
ಇದೆಂತ ಕತೆ ಹೇಳಿ ಎನಗೆ ಗೊಂತಾಯ್ದಿಲೆ. ಎನ್ನ ತಿಳುವಳಿಕೆಲಿ ಪಾರು ಇದುವರೆಗೆ ಎಲ್ಲಿಯೂ ಭಾಷಣ ಮಾಡಿದ್ದದಿಲ್ಲೆ, ಯೇವುದೆ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದೂ ಇಲ್ಲೆ.
“ಅದಿರಳಿ,ಉಳಿತಾಯ ಮಾಡಿದ್ದರ ನವಗೆ ಉಪಕಾರಕ್ಕೆ ಸಿಕ್ಕುತ್ತ ಹಾಂಗೆ ವಿನಿಯೋಗಿಸುಲೆ ನಿನ್ನದೆಂತ ಏರ್ಪಾಡು.?”
“ಅದಕ್ಕೆಲ್ಲ ಸುಮ್ಮನೆ ತಲೆಬೆಶಿ ಮಾಡೆಡಿ. ಯೇವಾಗಳೇ ಆನು ನಿಘಂಟು ಮಾಡಿದಾಂಗೆ ಚಿನ್ನಕ್ಕೆ ರೇಟು ಮತ್ತೂ ಏರೆಕ್ಕಾರೆ ಮದಲು ಒಂದು ಚೈನು ಮಾಡಿರೆ ಆತನ್ನೆ”
ಶ್ಯೆಲಾ  ಕರ್ಮವೇ.! ಹೀಂಗಿರ್ತ ಹೊಸ ಹೊಸ ಆಲೋಚನೆಗೊ ಪಾರುವ ಸ್ವಂತದ್ದಾಗಿರ. ಡಿಲ್ಲಿಲಿ ಹೊಸ ಗೋರ್ಮೆಂಟು ಬಂದ ಲಾಗಯ್ತು ದಿನಲ್ಲಿ ನಾಕು ನಾಕು ಸರ್ತಿ ಹಿಡಿ ತೆಕ್ಕೊಂಡು ಉಡುಗುದರ ಆನು ಗಮನಿಸಿದ್ದೆ.ಅದು ಬಿಟ್ರೆ ಬೇರೆಂತ ವೆತ್ಯಾಸ ಎನ್ನ ಗಮನಕ್ಕೆ ಬಯಿಂದಿಲೆ.
“ಆನು ಎಂತ ಹೇಳ್ತಾ ಇಪ್ಪದು ಅದರ ಕೇಳಿ.ಎಡೆಲಿ ಬಾಯಿ ಹಾಕೆಡಿ ನಿಂಗೊ.ಮುಖ್ಯ ವಿಶಯ ಎಂತ ಹೇಳಿರೆ ಎನ್ನ ಹಾಂಗೆ ಪ್ರತಿಯೊಬ್ಬನೂ ಮಾಡೆಕ್ಕು.ಎಲ್ಲೋರು ಉದ್ಧಾರ ಆಯೆಕ್ಕು.ಸ್ತ್ರೀ ಶಕ್ತಿಗೆ ಎಷ್ಟು ಬಲ ಇದ್ದು ಹೇಳೊದರ ತೋರ್ಸೆಕ್ಕು’
“ಸ್ತ್ರೀ ಶಕ್ತಿ ಹೇಳಿರೆ ಎಂತ್ಸರ,ಎನಗೆ ಗೊಂತಾಯಿದಿಲ್ಲೆ.”
“ಎನಗೂ ಗೊಂತಾಯಿದಿಲ್ಲೆ.ಹಾಂಗಿರ್ತ ಪ್ರಶ್ನೆ ಕೇಳೆಡಿ.ಇದೆಂತ ಚರ್ಚಾಕೂಟವೋ ನಿಂಗಳ ಪ್ರಶ್ನೆಗೆಲ್ಲ ಉತ್ತರ ಕೊಡ್ಲೆ. ಆನು ಹೇಳಿದ್ದರ ಕೇಳಿರೆ ಸಾಕು, ಹ್ಹು.”
“ಅದಪ್ಪು,ಇಂದು ಆಫೀಸಿಲಿ ಎಂತ ಮಾಡಿದಿ.? ಎಂತೆಲ್ಲ ಕೆಲಸ ಇತ್ತು.ಎಷ್ಟು ಮೀಟಿಂಗು ಇತ್ತು..?”ಪಾರುದು ಹೊಸ ವರಸೆ,ಇದುವರೆಗೆ ಇತ್ತಿಲೆ.
“ಯೇವತ್ರಾಣ ಕೆಲಸವೇ ಇಂದುದೆ.ವಿಶೇಷ ಎಂತ್ಸೂ ಇಲ್ಲೆ.ಹಾಂಗೆ ವಿಶೇಷ ಏನಾರಿದ್ದರೆ ಹೇಳ್ತೆನ್ನೆ ನಿನಗೆ.”
“ಅಲ್ಲ, ದಿನಾಗಿಳೂ ಉದಿಯಪ್ಪಗಳೇ ಹೋವುತ್ತಿ.ಎಂಟು ಘಂಟೆ ಹೊತ್ತು ಆಫೀಸಿಲಿರ್ತಿ.ವಿಶೇಷ ಅಲ್ಲದ್ದರೂ ಕೆಲಸ ಇರ್ತನ್ನೆ,ಅದರ ಬಗ್ಗೆ ಹೇಳಿರಾತಪ್ಪ.ವಿಶಯ ಎಂತ ಹೇಳಿರೆ ನಿಂಗಳ ಕೆಲಸ ಕಾರ್ಯದ ಬಗ್ಗೆ ಮನೆಲಿಯೂ ಮಾಹಿತಿ ಇರೆಕ್ಕಪ್ಪದು ಮುಖ್ಯ.”
ಸ್ತ್ರೀ ಶಕ್ತಿ – ವೆವಸ್ತೆ – ಮಾಹಿತಿ !!!.ಇದೆಲ್ಲ ಆ ಹಳೆ ಪಾರ್ಟಿಯ ಹೊಸ ಲೀಡರಿನ ಹೇಳಿಕೆಯ ಹಾಂಗಿದ್ದನ್ನೆ.!
ಅಫೀಸಿಂದ ಬಂದವಂಗೆ ಒಂದು ಮುಕುಳಿ ಆಸರಿಂಗೆ ಸಿಕ್ಕದ್ದೆ ಅಸಬಡಿವ ಹಾಂಗಾತು.ಚಳಿಗಾಲದ ಮುಸ್ಸಂದಿಲಿ ಬೀಸುತ್ತ ಗಾಳಿಗೆ ಕಣ್ಣುಮುಚ್ಚಿ ಕೂದವಂಗೆ ಎಲ್ಲಿಯೋ ಸಮುದ್ರ ಕರೆಲಿ ಬಂದು ನಿಂದ ಹಾಂಗೆ ಅನಿಸಿತ್ತು. ದೊಡ್ಡ ಸಮುದ್ರದ ಕರೆಲಿ ನಿಂದೊಂಡು ಕಂತುತ್ತ ಸೂರ್ಯನನ್ನೆ ನೋಡೊಗ ದೊಡ್ದದೊಂದು ಉಸುಲು ಹೆರಟತ್ತು. ಬೆಶಿಲಿಂಗೆ ಕಾದ ಹೊಯ್ಗೆಂದಾಗಿ ಕಾಲಿನಡಿ ಸುಡ್ಲೆ ಶುರುವಾತು.  ತಂಪು ಗಾಳಿಯೊಟ್ಟಿಂಗೆ ಬೆನ್ನು ಬೆನ್ನಿಂಗೆ ಬತ್ತಾ ಇಪ್ಪ ಅಲೆಗೊ ಎತ್ತರಕ್ಕೆ ಏರಿ ತೀರಕ್ಕೆ ಬಡುದು ಹಿಂದೆ ಹೋಪಗ ಮುಂದೆ ಮುಂದೆ ಹೆಜ್ಜೆ ಹಾಕಿದೆ. ಶುರು ಶುರುವಿಂಗೆ ಎತ್ತರಕ್ಕೆ ಏರಿ ಬತ್ತ ಅಲೆಗಳೊಟ್ಟಿಂಗೆ ಮೇಲೆ ಏರಿ ಹೋಪಗ ಕೊಶಿ ಆತು.ಅಕೇರಿಗೆ ತೆರೆಗಳ ಬಡಿತವ ಎದುರ್ಸಿ ನಿಂಬಲೆ ಎಡಿಗಾಯಿದಿಲೆ. ಹಿಂದಂತಾಗಿ ಬಪ್ಪಲೆ ಕಾಲುಗೊ ಹೊಯಿಗೆಲಿ ಹುಗುದಿತ್ತು. ಮನಸ್ಸು ಘಟ್ಟಿ ಮಾಡಿರೂ ಸಣ್ಣಕ್ಕೆ ಮೈ ಬೆಗರಿತ್ತು. ತೆರೆಗಳ ಬಡಿತಂದಾದ ನಿಶ್ಯಕ್ತಿ ಅನುಭವಕ್ಕೆ ಬಂದಪ್ಪಗ ಬಾಯಿಂದ ಹೆರಟದು ‘ಆ…ಹೋಯ್!’ ಉದ್ಗಾರ. ಹತ್ತರೆ ಇತ್ತಿದ್ದ ಜೆನ ಕೈ ಹಿಡುದು ಎಳದ ಹಾಂಗಾತು.
“ಓಯಿ…! ಏಳಿ ಏಳಿ.ಕನಸು ಬಿದ್ದತ್ತಾಯಿಕ್ಕು.” ಹೇಳಿ ಪಾರು ಎನ್ನ ಭುಜ ಕುಲ್ಕಿಸಿ ಎಬ್ಬಿಸಿತ್ತು. ಆನು ಮಗ್ಗಲು ಬದಲ್ಸಿದೆ.ಇರುಳು ತುಂಬ ಹೊತ್ತು ಟಿ.ವಿ. ನೋಡ್ಯೊಂಡು ಕೂರೆಡಿ ಹೇಳಿರೆ ಕೇಳ್ತಿಲಿ.ಈಗ ಒರಕ್ಕು ಕೆಟ್ಟತ್ತದ ಹೇಳಿ ಪರಂಚಿಗೊಂಡದು ಎನ್ನ ಕೆಮಿಗೆ ಬಿದ್ದತ್ತು.
ನಿನ್ನೆ ಇರುಳು ಅಸ್ಸಮಯಲ್ಲಿ ‘ಈ ಸಮಯ’ ಚಾನೆಲಿನ ಒಂದು ಸಂದರ್ಶನ ಕಾರ್ಯಕ್ರಮ ನೋಡಿತ್ತಿದ್ದೆ. ಬೀಚಿಯ ಕಾದಂಬರಿ ಓದಿಕ್ಕಿ ಇರುಳು ನರಸಿಂಹ್ಹಯ್ಯನ ಪತ್ತೆದಾರಿ ಕಾದಂಬರಿಯ ಭಯಾನಕ ಚಿತ್ರವ ಕನಸಿಲಿ ಕಂಡ ಹಾಂಗಾತಿದು.! ಹೊತ್ತೋಪಗ ಒಟ್ಟಿಂಗೆ ಚಾ ಕುಡಿವಗ  ಪಾರು ಎನ್ನ ಕನಸಿನ ಬಗ್ಗೆ ವಿಚಾರ್ಸಿತ್ತು. ಎಲ್ಲ ಸಂಗತಿ ಹೇಳಿದೆ. ಅದೇ ಸಂದರ್ಶನವ ಬಾಕಿ ಚಾನೆಲ್ಲಿನವೂ ತೋರ್ಸಿತ್ತಿದ್ದವಡ.
“ಮದಲಿಂಗೆ ಅದ್ಯಾವುದೊ ಒಂದು ಶಾಲೆಲಿ, ಕನ್ನಡ ಪರೀಕ್ಷೆಲಿ ಪ್ರಬಂಧ ಪ್ರಶ್ನೆಗೆ ಬರವಲೆ ‘ತೆಂಗಿನ ಮರ’ ಬಗ್ಗೆ ಕಲ್ತು ಬಂದ ಹುಡುಗ ‘ದನ’ದ  ವಿಷಯ ಬಂದಪ್ಪಗ, ಎರಡೇ ಗೆರೆಲಿ ಬರದು ನಿಲ್ಲುಸಿತ್ತಡ.ಮೂರ್ನೆ ಗೆರೆಲಿ ಅದೇ ದನವ ಎಳದು ತಂದು ಒಂದು ತೆಂಗಿನ ಮರಕ್ಕೆ ಕಟ್ಟಿಕ್ಕಿ ಮತ್ತೆ ಕಲ್ತು ಬಂದದರನ್ನೆ ಬರದು ಪುಟ ತುಂಬುಸಿತ್ತಡ. ಆ ಸಂದರ್ಶನ ನೋಡಿ ಎನಗಿದು ನೆಂಪಾತು.ಆದರೆ,ಅಷ್ಟಕ್ಕೇ ನಿಂಗೊಗೆ ಹೀಂಗಿರ್ಸ ಕನಸು ಬಿದ್ದದು ಸಾಕು.”
ಹ್ಹ…ಹ್ಹ..ಹ್ಹ.!
ಪಾರು ನೆಗೆ ಮಾಡಿದ್ದು ಆ ಟಿ.ವಿ. ಕಾರ್ಯಕ್ರಮವ ಗ್ರೇಶಿಯೋ,ಎನ್ನ ಕನಸಿನ ಕತೆ ಕೇಳಿಯೋ ಗೊಂತಾಯ್ದಿಲೆ.

~~~<>~~~

7 thoughts on “ಕಡಲಿನಲೆಗೆದುರಾ(ಗಿ) ಹುಲುಮನುಷ್ಯ

  1. ಕುಮಾರ ಭಾವನ ಹರಟೆಯ ಒಳ ಇಪ್ಪ ರಾಜಕೀಯ ವಿದಂಬನೆ ಮಾರ್ಮಿಕವಾಗಿತ್ತು. ಬರವ ಶೈಲಿ ತುಂಬಾ ಇಷ್ಟ ಆತು.

  2. ಓದಿ ಒಪ್ಪ ಕೊಟ್ಟ ಎಲ್ಲೋರಿಂಗೆ ಧನ್ಯವಾದಂಗೊ.

  3. “ಸರಸ ಸಲ್ಲಾಪ” ಇಂದೆಂತ “ವಿರಸ”ದ ಹೊಡೇಂಗೆ ಮಗರಿತ್ತನ್ನೆ ಹೇಳಿ ಗ್ರೇಶುವಷ್ಟರಲ್ಲಿ, ಸುಖಾಂತ್ಯ ಆದ್ದದು ಕಂಡು ಕೊಶಿ ಆತು. ಕನಸಿಲ್ಲಿ ಬಂದ ಸಮುದ್ರದ ಅಲೆ, ಕಡೆಂಗೆ ಪ್ರೀತಿಯ ಹೊನಲಾಗಿ ಆತನ್ನೆ. ಕುಮಾರ ಭಾವಯ್ಯನ ಹೊಸರೂಪದ ಶುದ್ದಿ ಲಾಯಕಿತ್ತು.

  4. [ಇಂದ್ರಾಣದ್ದಿದು ಯೇವತ್ರಾಣ ಹಾಂಗಿಲ್ಲೆನ್ನೆ,! ] – ಅಪ್ಪು….. ಓದ್ಯೊಂಡೋಪಗ ಎನಗೂ ಹಾಂಗೇ ಅನಿಸಿತ್ತು. ಮತ್ತಲ್ಲದೋ ಕತೆ ಇದು ಬೇರೆಯೇ ಹೇದು ಗೊಂತಾದ್ದು !!.
    ಲಾಯಕ ಆಯ್ದು ಮಾವ. ಹರೇ ರಾಮ

  5. ಮಾವ… ನಿಂಗೊಗೆ ಆ ಸಮಯಲ್ಲಿ ಶ್ಯಾಮಣ್ಣನ ಚೈನು ನೆಂಪಾಯಿದಿಲ್ಲೆಯೋ… ಲಾಯ್ಕಾಯಿದು

  6. ಅಂತೂ ತೆರೆಗಳ ಬಡಿತಂದ ‘ಪಾರು’ ಮಾಡಿದವನ್ನೆ! ಸಂತೋಷ.ಕಥನ ಲಾಯ್ಕಾಯಿದು ತೆಕ್ಕುಂಜ ಮಾವ.

  7. “ಚಿನ್ನಕ್ಕೆ ರೇಟು ಏರೆಕ್ಕಾರೆ ಮದಲು ಚೈನು ಮಾಡ್ಸಲೆ” ಯೋಚನೆ ಮಾಡಿ ಮನುಗಿದ್ದಕ್ಕೇ ಈ ಕನಸು ಬಿದ್ದಿರೆಕು. ಹರೇ ರಾಮ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×