ಆನು, ಅವ° ಮತ್ತೆ……..

September 30, 2013 ರ 5:06 pmಗೆ ನಮ್ಮ ಬರದ್ದು, ಇದುವರೆಗೆ 18 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ನಿ೦ಗೊಗೆ ಸುರೇಖ ಚಿಕ್ಕಮ್ಮನ ಗೊ೦ತಿದ್ದೋ? ಬೆ೦ಗಳೂರಿಲಿ ಕೋಣನಕು೦ಟೆಯ ಶ್ರೀ ರಾಮ ಕಲಾ ಸ೦ಘದ ಯಕ್ಷಗಾನ ತಾಳಮದ್ದಲೆ ನೋಡಿದ್ದರೆ ನಿ೦ಗೊಗೆ ಖ೦ಡಿತಾ ಗೊ೦ತಿಕ್ಕು. ” ಅಪ್ಪು,ಅಪ್ಪು ” ಹೇಳುಗು ಮುಳಿಯ ಭಾವ°.

ಭೀಮಗುಳಿ ಶ್ಯಾಮ ಭಟ್ ರ ಧರ್ಮಪತ್ನಿ ಸುರೇಖ ಚಿಕ್ಕಮ್ಮ ತನ್ನ ಇಬ್ರು ಮಕ್ಕೊಗೂ ಯಕ್ಷಗಾನಲ್ಲಿ ನಾಟ್ಯ ಕಲಿವ ಹಾ೦ಗೆ ಪ್ರೋತ್ಸಾಹ ಮಾಡ್ತಾ ಇದ್ದವು. ಬೈಲಿನ ಚಟುವಟಿಕೆಗಳ ನೋಡಿ, ಬರವ ಉಮೇದು ತೋರ್ಸಿ ಬೈಲಿ೦ಗೆ ಶುದ್ದಿ ಕಳುಸಿದ್ದವು.ಬನ್ನಿ, ಸುರೇಖ ಚಿಕ್ಕಮ್ಮನ ಶುದ್ದಿಗಳ ಓದಿ ಪ್ರೋತ್ಸಾಹ ಕೊಡುವ°.~ ಗುರಿಕ್ಕಾರ°.

 

ಆನು,ಅವ° ಮತ್ತೆ…

ಎನ್ನ ಬಾಳಲ್ಲಿ ಅವನ ಪ್ರವೇಶ ಅಪ್ಪಗ ಎನಗೆ ಭರ್ತಿ ಮೂವತ್ತು ವರ್ಷ ಕಳ್ದಿತ್ತು. ”ನಿಂಗೊಗಿಬ್ಬರಿಂಗು ಜೋಡಿ ಸರಿ ಬಾರ ‘‘ ಹೇಳಿ ಎಲ್ಲೋರು ಹೇಳಿದವು. ಎನಗುದೇ ಹಾಂಗೇ ಅನ್ನಿಸಿಕೊಂಡಿತ್ತು. ಅದರೆ ಎಂಥ ಮಾಡುದು ಹೇಳಿ ಗೊಂತಾಯ್ದಿಲ್ಲೆ. ಆನು ಬಿಟ್ರೂ ಅವ° ಬಿಡ. ಹಾಂಗೂ ಹೀಂಗೂ ಬ೦ಙ ಪಟ್ಟುಕೊಂಡು ಹತ್ತು ವರುಷ ಇವನೊಟ್ಟಿಂಗೇ ಇತ್ತಿದ್ದೆ. ಇವನೊಟ್ಟಿಂಗೆ ಆನು ಇದ್ದೆ ಹೇಳಿ ಗೊಂತಾಗದ್ದಂಗೆ. ಆದ್ರೆ ಎಷ್ಟು ದಿನ ಹೀಂಗೇ ನೆಡ್ಡೆತ್ತು ?

ಎನ್ನದೇ ಪರಿಸ್ಥಿತಿಯಲ್ಲಿಪ್ಪ, ಕದ್ದು ಮುಚ್ಚಿ ಸಂಧಾನ ಮಾಡಿಕೊಂಡಿಪ್ಪ, ಎನ್ನ ಜೊತೆಯವನ್ನ ನೋಡಿಯಪ್ಪಗ, ಆನುದೇ ಹೀಂಗೇ ಇದ್ದುಬಿಡ್ಲಕ್ಕನ್ನೇ ?  ಹೇಳಿ ಕಾಣ್ತು. ಈಗಾಗ್ಲೇ ರಾಜಿಯಾಗಿಪ್ಪ ಗೆಳತಿಯರು ಹೇಳ್ತವು   ” ನೀನು ನಮ್ಹಾಂಗೆ ಆಗೆಡ, ಯಾವ ವಿಷ್ಯನ್ನು ಮುಚ್ಚಿ ಮಡುಗೆಡ. ಹೇಂಗೆ ಇರ್ತೋ ಹಾಂಗೆ ಒಪ್ಪಿಗೊ, ಇಲ್ಲದ್ರೇ ನಮ್ಮ ಹಾಂಗೆ ಆವುತ್ತು, ಎಂಗೋ ಹಿಂತಿರುರಿ ಬಾರದ್ದಷ್ಟು ಮುಂದೆ ಹೋಗಿ ಆಯ್ದು“. ಅವರ ಮಾತುದೆ ಸರಿ ಹೇಳಿ ಕಾಣ್ತು. ಅಪ್ಪು….  ಅವ° ಎನ್ನ ಪೂರ್ತಿ ಆವರಿಸೊದರ ಮೊದೂಲೆ ಹೆರ ಪ್ರಪಂಚಕ್ಕೆ ಎನ್ನ-ಅವನ ಸಂಬಂಧ ಹೇಂಗಿದ್ದು ಹೇಳಿ ಹೇಳಿಬಿಡೆಕ್ಕು…………

ಮೊನ್ನೆ ಮೊನ್ನೆ ಆನು ಆ ದಿಕ್ಕಿಲಿ ಒಂದು ಹೆಜ್ಜೆ ಮುಂದಿಟ್ಟದ್ದು ಅಪ್ಪು. ಆದರೇ ಅದ್ರಿಂದ ಎಷ್ಟು ಉಪದ್ರ ಆತು ಗೊಂತಿದ್ದಾ………….?

ಎನ್ನ ಈ ಪ್ರಯತ್ನದಿಂದ ಎನ್ನ ಮಕ್ಕೊಗೆ ತುಂಬಾ… ಕಿರಿಕಿರಿ ಆಯ್ದು. ಅವರ ದೋಸ್ತಿಗೊ ಎಲ್ಲೋರೂ ಎನ್ನ ಬಗ್ಗೆಯೇ ಮಾತಾಡಿದ್ರೆ ಉಪದ್ರ ಆಗದ್ದೆ ಇಕ್ಕಾ ? ಆದ್ರೇ… ಮಕ್ಕೋಗೆ ಉಪದ್ರ ಅವುತ್ತು ಹೇಳಿ ಆನು ಕಳ್ಳರಂಗೆ ಎಷ್ಟು ದಿನ ಇಪ್ಪಲೆಡಿತ್ತು ? ಎನ್ನ ಹಾಂಗೆ  ತೊಂದರೆಯಲ್ಲಿ ಇಪ್ಪ ೯೦ % ಜೆನ ಮಾಡುತ್ತಾ ಇಪ್ಪ ಹಾ೦ಗೆ, ಆನುದೆ ಕಳ್ಳರಾ೦ಗೆ ಇದ್ದು ಬಿಡೆಕ್ಕ ?

ಎನ್ನ ಮಕ್ಕಳ ಗೆಳೆಯರಿಂಗೆ ಎಷ್ಟು ಸೊಕ್ಕು ಗೊಂತಿದ್ದ ? ನೇರಕ್ಕೇ ಎನಗೇ ಆ ವಿಷ್ಯದ ಪ್ರಶ್ನೆ ಕೇಳ್ತವು……….. ಎಂತ ಉತ್ತರ ಕೊಡೆಕ್ಕು ಅವಕ್ಕೆ ?

ಎನ್ನ ಹಾಂಗೆ ಕಳ್ಳ ಜೀವನ ಮಾಡ್ತಾ ಇಪ್ಪ, ಎನಗಿಂತ ವಯಸ್ಸಿಲಿ ದೊಡ್ಡೊವು, ಎನ್ನ ಚುಚ್ಚಿ ಮಾತಾಡ್ತವು.

ಅಥವಾ ಎನಗೆ ಹಾಂಗೆ ಕಾಂಬದಾ ? ಗೊಂತಿಲ್ಲೆ.

ಎನ್ನ ಹಣೆ ಬರಹಕ್ಕೆ ಎಲ್ಲಿಗೆ ಹೋದ್ರುದೆ ಅವನ ಬಗ್ಗೆಯೇ ಮಾತಾಡ್ತವು. ಮೊನ್ನೆ ಒಂದು ಜಂಬ್ರಕ್ಕೆ ಹೊಗಿತ್ತಿದ್ದೆಯೊ°. ಅಲ್ಲಿಗೆ ಎತ್ತಿ ಇನ್ನು ಎರಡು ನಿಮಿಷವೂ ಆಗಿತ್ತಿಲ್ಲೆ. ಅವನ ಬಗ್ಗೆಯೇ ಪ್ರಶ್ನೆ ಕೇಳಿದವು. ಮತ್ತೆ ಕೆಲವ್ರು  ಆನು ಕೇಳದ್ರೂ ಸಲಹೆ ಕೊಡ್ತವು. ಇವರೆಲ್ಲರ ಎಂತ ಹೇಳಿ ಕರೆಯಕ್ಕು ? ಹತ್ತಿರದ ನೆಂಟ್ರನ್ನೇ ? ಬಿಡುಲೆಡಿಯ. ಎನ್ನ ನಿರ್ಧಾರಕ್ಕೆ ದೃಢವಾಗಿ ಅಂಟಿಕೊಂಬಲೆ ಬಿಡದ್ದ ಇವರ ’ ಹಿತ ಶತ್ರುಗಳು’ ಹೇಳೆಕಷ್ಟೆ ! ಅಲ್ಲದೋ ?

ಎನ್ನ ಮುಂದೆ ಎರಡೇ ಆಯ್ಕೆ ಇಪ್ಪದು. ಒಂದು ಕಳ್ಳರೊಟ್ಟಿಂಗೆ ಕಳ್ಳರ ಹಾ೦ಗೆ ಇದ್ದು ಬಿಡೆಕ್ಕು. ಸಾಯುವವರೆಗೆ ಕಳ್ಳನಾಂಗೆ ಜೀವನ ! ಇನ್ನೊಂದು ಆರು ಎಂತಾ ಹೇಳ್ತವು ನೋಡದ್ದೆ ಎನ್ನ-ಇವನ ಸಂಬಂಧವ ಬಹಿರಂಗವಾಗಿ ಒಪ್ಪಿಕೊಂಡು ಬಿಡೆಕ್ಕು. ಆಗ ಈ ಹತ್ತು ವರ್ಷದ ಕಳ್ಳ ಬಾಳಿ೦ಗೆ ಒಂದು ಮುಕ್ತಾಯ ಹೇಳಿ ಆವುತ್ತು. ಮುಂದಾದ್ರು ಅರಾಮಾಗಿ ಇಪ್ಪಲಾವುತ್ತನ್ನೆ ! ನಿರ್ಧಾರ ಮತ್ತೆ ಎನಗೇ ಬಿಟ್ಟದ್ದು ಅಲ್ಲದೋ ? ಇನ್ನಾದರೂ ಪ್ರಾಮಾಣಿಕಳಾಗಿ ಇರೆಕ್ಕು ಹೇಳಿ ನಿರ್ಧಾರ ಮಾಡಿದ್ದೆ. ಎನ್ನ ಆಸೆಗೆ ನಿಂಗಳ ಸಹಕಾರ- ಪ್ರೊತ್ಸಾಹ ಕೊಡ್ತಿರನ್ನೆ ?

ಎಂತ ಇವಳ ಕಥೆ ?

ಮರ್ಲರ ಹಾಂಗೆ ಮಾತಾಡ್ತಾ ಇದ್ದಲ್ದಾ ? ಹೇಳಿ ತಲೆ ಬೆಶಿ ಮಾಡಿಕೊಂಡಿರೋ ಹೇಂಗೆ ? ಆನು ರಾಜಿ ಅಪ್ಪಲಿಪ್ಪದು ಬೇರೆ ಆರೊಟ್ಟಿ೦ಗೂ ಅಲ್ಲಪ್ಪ……….. ಎನ್ನ ಪ್ರಬುದ್ಧತೆಯ ( ????) ಸಂಕೇತವಾಗಿರೋ “ಬೆಳಿ ಕೂದಲ” ಜೊತೆಯಲ್ಲಿ ಮಾರಾಯ್ರೆ………….?

ಗೊಂತಾತನ್ನೆ ?

ಇನ್ನು ನಿಂಗಳುದೆ ತಲೆ ಕೂದಲಿಂಗೆ ಬಣ್ಣ ಹಾಕದ್ದೆ, ಎನಗೆ ಪ್ರೋತ್ಸಾಹ ಕೊಡೆಕ್ಕದಾ(!!!! ????).. ಎನ್ನ ಪಕ್ಷಕ್ಕೆ ಸೇರೆಕ್ಕದಾ… ಅಕ್ಕಾ ?

ಆನು, ಅವ° ಮತ್ತೆ........, 8.0 out of 10 based on 1 rating
ಶುದ್ದಿಶಬ್ದಂಗೊ (tags): , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 18 ಒಪ್ಪಂಗೊ

 1. ಯಮ್.ಕೆ.

  ಸರಿ ಹಾ೦ಗೇ ಆಗಲಿ.
  ಎಲ್ಲಿ ಆದರೂ ಹೋತ್ತೋಪಗಣ ಆಟ ಆಗಿದ್ದರೆ
  ಇಲ್ಲಿ ಹೇಳಿಕೆ ಹಾಕಿ. ಆದರ ದೂರಲ್ಲೇ ನಿ೦ದು,
  ಮ೦ಥರೇಯ ಸ್ವಾಗತ ಎಲ್ಲ ನೋಡಿ, ಸೋಜಿ ಕುಡಿವುಲೆ
  ನಾವಗೆ ಒ೦ದು ಅವಕಾಶವೂ ಆಗಲಿ.

  [Reply]

  VA:F [1.9.22_1171]
  Rating: 0 (from 0 votes)
 2. ಮಂಗ್ಳೂರ ಮಾಣಿ

  ಲಾಯ್ಕಾಯಿದು :)

  [Reply]

  ಸುರೇಖಾ ಚಿಕ್ಕಮ್ಮ

  ಸುರೇಖಾ Reply:

  ಧನ್ಯವಾದಂಗೊ. ಕಲ್ಪನೆಗಿಂತ ಅನುಭವ ಯಾವತ್ತು ಲಾಯ್ಕ. ಅಲ್ಲದೊ ?

  [Reply]

  VA:F [1.9.22_1171]
  Rating: 0 (from 0 votes)
 3. Surekha akka, aanude ide nirdhaara maduva andajilittidde. NingaLa lekhana nodi kushi aathu, sphoortide sikkittu..

  [Reply]

  ಸುರೇಖಾ ಚಿಕ್ಕಮ್ಮ

  ಸುರೇಖಾ Reply:

  ಬಾ… ಬಾ… ಒಟ್ಟಿಂಗೆ ಹೋಪ.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಚೂರಿಬೈಲು ದೀಪಕ್ಕಅನಿತಾ ನರೇಶ್, ಮಂಚಿಪುಣಚ ಡಾಕ್ಟ್ರುದೊಡ್ಮನೆ ಭಾವವಸಂತರಾಜ್ ಹಳೆಮನೆಉಡುಪುಮೂಲೆ ಅಪ್ಪಚ್ಚಿಚುಬ್ಬಣ್ಣಬಂಡಾಡಿ ಅಜ್ಜಿಪುತ್ತೂರಿನ ಪುಟ್ಟಕ್ಕರಾಜಣ್ಣದೊಡ್ಡಭಾವವೇಣಿಯಕ್ಕ°ಅಡ್ಕತ್ತಿಮಾರುಮಾವ°ಪೆಂಗಣ್ಣ°ಪವನಜಮಾವಕೇಜಿಮಾವ°ವೇಣೂರಣ್ಣಕಜೆವಸಂತ°ಶ್ರೀಅಕ್ಕ°ಕೊಳಚ್ಚಿಪ್ಪು ಬಾವಶೀಲಾಲಕ್ಷ್ಮೀ ಕಾಸರಗೋಡುದೇವಸ್ಯ ಮಾಣಿಪ್ರಕಾಶಪ್ಪಚ್ಚಿವೆಂಕಟ್ ಕೋಟೂರುಬಟ್ಟಮಾವ°ಜಯಶ್ರೀ ನೀರಮೂಲೆ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ