ಆಟಿ ಅಮಾಸೆಯೂ – ಉಂಗಿಲ ಸಂಮಾನವೂ

ಓದುತ್ತಾ ಹೋದಾಂಗೆ ದೃಶ್ಯ ಮನಸ್ಸಿಲ್ಲಿ ಕಲ್ಪಿಸಿಗೊಳ್ಳೆಕ್ಕು… ಈಗಳೇ ಹೇಳಿದ್ದೆ.

ಈ ಭಾವಂಗೆ ಆ ಮಾವನ ಮಗಳ ಮದುವೆ ಆದ್ದಿದಾ…. ಹೋದವರ್ಷ.
ಆ ಮಾವನ ಮಗಳ ಕೊಟ್ಟ ಈ ಭಾವ ಓ ಅಲ್ಲಿ ಇಪ್ಪದಾದರೂ ಉದ್ಯೋಗಲ್ಲಿ ಇಪ್ಪದು ಓ ಆಚಿಗೆ ಪೇಟೆ ಊರ್ಲಿ.
ಉದ್ಯೋಗಲ್ಲಿ ಇರ್ತದು ಹೇಳಿದ ಮತ್ತೆ ಗ್ರೇಶಿದಾಂಗೆ ಊರಿಂಗೆ ಬತ್ತಿಕ್ಕಲೂ ಎಡಿಯ, ರಜೆ ಹಾಕಿಕ್ಕಲೂ ಎಡಿಯ.
‘ರಜೆ ಆರು ಹಾಕುತ್ತವು ಹೇಳಿ ಹದ್ದುಗಣ್ಣು ಮಡುಗಿ ನೋಡ್ತಾ ಇದ್ದವಡ’, – ಈಗಾಣ ಕಂಪ್ಯೂಟರ್ ಕೀ ಬೋರ್ಡ್ ಕುಟ್ಟುತ್ತ ಕೆಲಸಲ್ಲಿಪ್ಪೋರು ಹೇಳುಗು. ಹಾಂಗೇಳಿ ಅತ್ತಗಳ ಮನಗೆ ಮದ್ವೆ ಆದ ಮತ್ತೆ ಈ ಭಾವ° ಬೈಂದನೇ ಇಲ್ಲೆಯಾಯ್ಕು ಹೇಳಿ ನಿಂಗೊ ಗ್ರೇಶುತ್ಸು ಬೇಡ.
ವಾರಾಂತ್ಯ ರಜೆಲಿ ಬಪ್ಪದಿದ್ದಡ ಪುರುಸೊತ್ತು ಇದ್ದಾಂಗೆ. ಹಾಂಗೇಳಿ ವಿಶೇಷದಿನಕ್ಕೆ, ಅನುಪತ್ಯಕ್ಕೆ ಇತ್ಯಾದಿ ಬಪ್ಪಲೆಡಿಗಾಯ್ದಿಲ್ಲೆ ಹೇಳಿ ಒಂದು ಅಸಮಧಾನ ಅಷ್ಟೇ.
ಆ ಬಗ್ಗೆ ಈ ಭಾವಂಗೂ ಚಿಂತೆ ಇಲ್ಲೆಡ, ಆ ಮಾವಂಗೂ ಚಿಂತೆ ಇಲ್ಲೆಡ.
ಇರ್ಲಿ ಬಿಡಿ ಮತ್ತೆ., ನವಗೆಂತಕೆ ಆ ಚಿಂತೆ!

ಅಂದರೂ ಕೂಸಿನ ಮದ್ವೆ ಮಾಡಿ ಕೊಟ್ಟ ಮತ್ತೆ ಕೆಲವು ಸಂಪ್ರದಾಯಂಗ ಹೇಳಿ ಇದ್ದನ್ನೇ. ದೀಪಾವಳಿ ಸಮ್ಮಾನ, ವಿಷು ಸಮ್ಮಾನ, ಆಟಿ ಸಮ್ಮಾನ ಹೇಳಿ.
ಏವ ಸಮ್ಮಾನ ಆಗದ್ರೂ ಆಟಿ ಸಮ್ಮಾನ ಒಂದಾರು ಮಾಡದ್ರೆ ಏವ ಅತ್ತಗಳ ಮನಗೂ ಸಮಾಧಾನ ಆವ್ತಿಲ್ಲೆಡ. ಮಗಳ ಅಳಿಯನ ಮನಗೆ ಬರ್ಸಿ ಒಂದು ಪಾಚ ಸಮ್ಮಾನ, ಸಣ್ಣಕೆ ಒಂದು ಅಂಗಿ ಸೀರೆ ಸಮ್ಮಾನ…
ಎಂತಕೆ….,  ಕೆಲವು ದಿಕ್ಕೆ ಉಂಗಿಲು ಚೈನ್ ಉಡುಗೊರೆ ಸಮ್ಮಾನವೂ ಇದ್ದು. ಮದಲಿಂಗೆ ಹಾಂಗೂ ಒಂದು ಕಾಲ ಇತ್ತಡ.., – ಆಟಿ ಅಮಾಸಗೆ ಅತ್ತಗಳ ಮನೆಂದ ಉಂಗಿಲು ಸಿಕ್ಕುವ ಕುಳವಾರನ್ನೇ ಹುಡ್ಕಿ ಮದ್ವೆ ಅಪ್ಪದು.
ಇಪ್ಪೋರು ಮಾಡ್ತವು – ಬೇಕಾದವು ಮಾಡುಸುತ್ತವು. ಇದೆಲ್ಲ ರಂಗು ಮಾಡಿ ಹೇಳೇಕ್ಕಾರೆ ನವಗರಡಿಯ.
ಇರ್ಲಿ ಬಿಡಿ, ನವಗೆಂತಕೆ ಚಿಂತೆ!.

ಈ ಭಾವಂಗೆ ಆಟಿ ಅಮಾಸಗೆ ಸಿಕ್ಕಿದ ಉಂಗುರ - ಇನ್ನೂ ಸ್ಟಿಕ್ಕರ್ ಹೋಯ್ದಿಲ್ಲೆ!

ಹಾಂಗೇ, ಈ ಭಾವಂಗೆ ಮದ್ವೆ ಕಳುದು, ಹೋದವರ್ಷದ ದೀಪಾವಳಿ ಸಮ್ಮಾನ, ವಿಷು ಸಮ್ಮಾನ, ಗಣೇಶ ಗೌರಿ ಹಬ್ಬ ಸಮ್ಮಾನ, ಆಟಿ ಸಮ್ಮಾನ ಏವೂದಕ್ಕೂ ಹೋಪಲೆ ಎಡಿಗಾಯ್ದಿಲ್ಲೆ.
ದೈವಾನುಕ್ಕೂಲಕ್ಕೆ ಇದರೆಡೆಲಿ ಓ ಮನ್ನೆ ಎರಡು ದಿನಾಣ ರಜೆ ಒಟ್ಟಿಂಗೆ ಸಿಕ್ಕಿತ್ತಡ ಈ ಭಾವಂಗೆ.
ಹಾಂಗೆ ಹೆಂಡತಿಯನ್ನೂ ಕರಕ್ಕೊಂಡು ತನ್ನ ಊರಿಂಗೂ ಹೋಗಿ ಹೆಂಡತಿಯ ಅಪ್ಪನ ಮನಗೆ ಹೋದ್ದಿದಾ.
ಹೋ., ಮಗಳು ಅಳಿಯ ಬಂದವು! ಹೇಳಿ ಅತ್ತೆಗಳಿಂಗೂ ಮಾವುಗಳಿಂಗೂ ಭಾರೀ ಖುಶೀ. ಆಟಿ ಆಮಸೆಗೆ ಬಾರದ್ರೆ ಎಂತಾತು, ಇಂದೇ ಆ ಲೆಕ್ಕದ ಉಪಚಾರ ಮಾಡಿರಾತು ಹೇಳಿ ಉದಿಯಪ್ಪಗಳೇ ಸೇಮಗೆ ರಸಾಯನ, ಮಧ್ಯಾಹ್ನಕ್ಕೆ ಸ್ವೀಟು ಪಾಚ, ಇರುಳಿಂಗೆ ಸಣ್ಣಕ್ಕೊಂದು ಚಾಮಿಪೂಜೆ ಮಾಡಿ ಮಗಳಿಂಗೆ ಒಂದು ಕೊರಳಿಂಗೆ ಫಲಫಲ ಹೊಳವ ಚಿನ್ನದ ಚೈನು, ಪಟ್ಟೆಸೀರೆ, ಅಳಿಯಂಗೆ ಥಕಥಕ ಹೊಳವ ಉಂಗುರ, ಅಪೀಸಿಂಗೆ ಮರ್ಜಿಲಿ ಹೋಪ ಹಾಂಗಿಪ್ಪ ಅಂಗಿ ಪಾಂಟು ಉಡುಗೊರೆ ಮಾಡಿ ಆಶೀರ್ವದಿಸಿ ಸಂತೋಷವಾಗಿ ತೃಪ್ತಿಗೊಂಡವು ಆ ಮಾವ°-ಅತ್ತೆ.
ಇರುಳು ಉಂಡಿಕ್ಕಿ ಬಸ್ಸು ಹತ್ತಿದವಡ ಈ ಭಾವ (ಮದುಮಕ್ಕೊ). ಇಲ್ಲದ್ರೆ ಮರುದಿನ ಕೆಲಸಕ್ಕೆ ಹಾಜರಾಗೆಡದಾ. ರಜೆ ಮಾಡಿ ತಿರುಗುವದು ಹೇಳಿರೆ ಈ ಭಾವಂಗೂ ಎಲರ್ಜಿಯಡ.
ಇರ್ಲಿ ಬಿಡಿ. ನವಗೆಂತಕೆ ಚಿಂತೆ!

ಈ ಭಾವಂಗೆ ಈಗ ಭಾರೀ ಖುಶೀ. ಎಂತಕೆ.. ? ಅತ್ತಗಳ ಮನೇಲಿ ಚಿನ್ನದ ಉಂಗಿಲು ಸಿಕ್ಕಿದ್ದಕ್ಕೊ? ಅಲ್ಲಾ ಚೈನ್ ಸಿಕ್ಕಿದ್ದಕ್ಕೊ? ಅಲ್ಲಾ., ಪಟ್ಟೆಸೀರೆ, ಅಂಗಿ ಪೇಂಟು ಸಿಕ್ಕಿದ್ದಕ್ಕೋ??. ಅಲ್ಲ!, ಮಾವುಗಳ ಮನೇಲಿ ಅಷ್ಟಕ್ಕಿಪ್ಪ ತಾಕತ್ತು ಇಪ್ಪವೇ ಹೇಂಗಾರು.
ಒಂದು ಸಾಲಿನ ಹಬ್ಬಂಗೋ ಎಲ್ಲಾ ಮುಗುದರೂ ಈವಾರಿ ಮರಯದ್ದೇ ಪ್ರೀತಿಲಿ ಉಪಚಾರ ಮಾಡಿ ಉಡುಗೊರೆ ಸಹಿತ ಆಟಿಅಮಾಸೆ ಸಮ್ಮಾನ ಮಾಡಿದವು ಹೇಳಿ ಅಭಿಮಾನ.
ಅಲ್ಲದ್ದೆ ಚಿನ್ನದ ಮೇಲೆ ಆಸೆಯೋ, ಅಂಗಿ ಸೀರೆ ಮೇಲೆ ಇಪ್ಪ ಕೊದಿಯೋ ಅಲ್ಲವೇ ಅಲ್ಲ. ಚಿನ್ನದಂತ ಹೆಂಡತಿ ಇಪ್ಪಗ ಬಾಕಿ ಚಿನ್ನ ಎಲ್ಲಾ ಏವ ಲೆಕ್ಕ ಈ ಭಾವಂಗೆ.
ಯಾವ ಬಸ್ಸಿಲ್ಲಿಯೂ ಕೂದ ಕೂಡ್ಳೇ ಗಾಢನಿದ್ರೆಗೆ ಬಿದ್ದು ತೇಕು ಮರ ಸಿಗಿವ ಶಬ್ದ ಹೆರಡುಸುವ ಈ ಭಾವಂಗೆ ( ಒಂದೋದರಿ ಬಸ್ಸಿನ ಡ್ರೈವರ ಹೇಳುಗಡ – ‘ಓ ಭಟ್ರು ಬಂದಿದ್ದಾರ! ಹಾಗಾದ್ರೆ ಹಾರ್ನ್ ಹಾಕುವ ಕೆಲಸ ಇಲ್ಲ ಇವತ್ತು’ ಹೇಳಿ), ಇಂದು ಬಸ್ಸು ಘಾಟಿ ಹತ್ತುತ್ತಾ ಇದ್ದರೂ ಒರಕ್ಕೇ ಬೈಂದಿಲ್ಲೇಡಾ!. ಕಾರಣ? – ಖುಶೀ. ಗ್ರೇಶದ್ದೇ ಸಿಕ್ಕಿದ ಸಮ್ಮಾನ.
ಬಸ್ಸಿಲ್ಲಿ ಕೂದೊಂಡು ಅಭಿಮಾನಂದ ಅಂಬಗಂಬಗ ಕೈ ಬೆರಳ ನೆಗ್ಗಿ ನೆಗ್ಗಿ ನೋಡಿಗೊಂಡಿತ್ತಿದ್ದನಡ!. ಬಸ್ಸಿನ ಒಳ ಲೈಟ್ ನಂದಿಸಿರೂ ಬೇಜಾರಾಯ್ದಿಲ್ಲೆಡಾ- ಕೈಲಿಪ್ಪದು ಹೊಳೆತ್ತನ್ನೇ.! ನೆಡುಇರುಳಾದ್ರೂ ಒರಗದ್ದೆ ಅಂಬಗಂಬಗ ಕೈ ಬೆರಳ ನೆಗ್ಗಿ ನೆಗ್ಗಿ ನೋಡಿಗೊಂಡಿತ್ತದು ಬಸ್ಸಿಲ್ಲಿಪ್ಪವಕ್ಕೂ ಇದರ ಥಕಥಕ ಹೊಳಪಿಂಗೆ ಎಚ್ಚರಿಗೆ ಆಗಿ ಒಂದರಿ ಕೈ ಕಟ್ಟಿ ಕೂರಿ ಭಟ್ರೇ ಹೇಳಿ ಕೂಡ ಬಸ್ಸಿಲಿಪ್ಪೋರು ಹೇಳಿದವು ಹೇಳಿ ಒಂದು ಗೇ ಸುದ್ದಿ ಉದಿಯಪ್ಪಗ ಇತ್ತಿದ್ದು.!! ಈ ಭಾವನ ಖುಶೀ ಅವಕ್ಕೆಲ್ಲಿ ಅರ್ಥ ಅಕ್ಕು!!.
ಇರ್ಲಿ ಬಿಡಿ, ನವಗೆಂತಕೆ ಚಿಂತೆ!

ಅಂತೂ ಉದಿ ಬೆಣಚ್ಚಾಯೆಕ್ಕಾರೆ ಬಸ್ಸು ಎತ್ತಕ್ಕಾದಲ್ಯಂಗೆ ಎತ್ತಿತ್ತು. ಈ ಭಾವನೂ ಮನಗೆತ್ತಿದವು. ಉದಿಯಪ್ಪಾಣ ಕೆಲಸ ಮುಗುಷಿ ಆಪೀಸಿಲ್ಲಿ ಬಂದು ಕೂದಾತು. ಭಾವನ ಖುಶೀ ಮಾತ್ರ ಏನೂ ತಗ್ಗಿದ್ದಿಲ್ಲೆ.
ಗ್ರೇಶದ್ದೇ ಸಿಕ್ಕಿದ್ದಲ್ಲದೋ. ಅದೂ ವರ್ಷಪೂರ್ತಿ ಕಳುದು ಹಬ್ಬ ಎಲ್ಲಾ ಮುಗುದು!. ಆಪೀಸಿನ ಒಳ ಬಪ್ಪಗಳೇ ನಮಸ್ಕಾರ ಸಾರ್ ಹೇಳಿದವಕ್ಕೆ ಏವತ್ತೂ ನಮಸ್ಕಾರ ಹೇಳಿ ಸಣ್ಣಕೆ ತಲೆ ಆಡಿಸಿ ಹೇಳ್ವ ಈ ಭಾವ° ಇಂದು ನಮಸ್ಕಾರ ಹೇಳಿಯಪ್ಪಗ ಕೈ ಎತ್ತಿ ನಮಸ್ಕಾರ ಹೇಳಿ ಮುಗುಳ್ನಗೆಯಡ!.
ಹೊಸ ಉಂಗುರ ಹಾಕಿದ ಬೆರಳಿಲ್ಲಿ ಕಂಪ್ಯೂಟರ್ ಕೀ ಬೋರ್ಡ್ ಕುಟ್ಟೆಕ್ಕನ್ನೇ ಹೇಳಿ ಒಳಂದೊಳ ಏನೋ ಒಂದು ಹಿಮ್ಮನಸ್ಸು.
ಅಪೀಸಿಂಗೆ ಹೋದರೆ ಕೆಲಸ ಮಾಡದ್ದೇ ಕೂಬಲೆಡಿಯ, ಅಪೀಸಿಂಗೆ ಹೋಯೇಕ್ಕು ಹೇಳಿ ನಿನ್ನೆ ಇರುಳೇ ಮಾವುಗಳಲ್ಲಿಂದ ಹೆರಟು ಬಂದಿಕ್ಕಿ ಇಂದಿನ್ನು ರಜೆ ಹಾಕಿ ಮನೆಲಿ ಕೂದರೆ ಹೆಂಡತಿ ಎಂತ ಗ್ರೇಶುಗೊ ಹೇದು ಗೊಂದಲ ಈ ಭಾವಂಗೆ.
ಅಂಬಗಂಬಗ ಕೈ ಬೆರಳ ನೋಡಿಗೊಂಡೇ ಅಂತೂ ಕೆಲಸ ಸುರುಮಾಡಿದ ಭಾವಯ್ಯ°.
ಚಾಯಕ್ಕಪ್ಪಗ ‘ಒಂದು ಚಾಯ’ ಹೇಳಿ ಕೈ ಎತ್ತಿ ಬೆರಳೆತ್ತಿ ಹೇಳಿದನಡ ದೂರಂದಲೇ. ಅಲ್ಲಿಪ್ಪವಕ್ಕೆ ವಿಶೇಷ ಕಂಡತ್ತು. ಹತ್ರೆ ಕೂದವರತ್ರೆಯೂ  ಕೈಕರಣ ಜೋರು ಜೋರು ಸುರುವಾತು.

ಊಟಕ್ಕಪ್ಪಗ ಗಂಟೆ ಒಂದು ಹೇಳಿ ಕೈ ಬೆರಳು ತೋರ್ಸಿಗೊಂಡೇ.! ಅಷ್ಟಪ್ಪಗ ಬಾಕಿದ್ದವಕ್ಕೆ ಅಂದಾಜು ಆತು ಸಂಗತಿ ಎಂತರ ಇದು ಭಾವನದ್ದು ಹೇದು.
ಅಂದರೂ ಭಾವನ ಖುಶೀ ಇಳುದ್ದಿಲ್ಲೆ ಇದಾ. ಎರಡು ಗಂಟೆ ಮೂರು ಗಂಟೆ ನಾಕು ಗಂಟೆ ಐದು ಗಂಟೆ ಹೇಳಿ ಗಂಟೆ ಗಂಟಗೆ ಕೈ ಎತ್ತಿ ನೆಂಪು ಮಾಡಿಸಿದನಡ.
ಆಚವು ಅವರಷ್ಟಕ್ಕೇ ಮಾತ್ನಾಡಿಗೊಂಡವಡ- ‘ಹನ್ನೊಂದು ಗಂಟಗೇ ಹೇಂಗೆ ತೋರ್ಸುಗು ಹನ್ನೆರಡು ಗಂಟಗೆ ಹೇಂಗೆ ಬೆರಳಾಡುಸುಗು ಇವ°’ ಹೇಳಿ. ಈ ಭಾವನ ಖುಶೀ ಅವಕ್ಕೆಲ್ಲಿ ಅರ್ಥ ಅಕ್ಕು!!.
ಇರ್ಲಿ ಬಿಡಿ, ನವಗೆಂತಕೆ ಚಿಂತೆ!

ಅಂತೂ ಇಂದ್ರಾಣ ಆಪೀಸು ಕೆಲಸ ಮುಗುತ್ತು ಮನಗೆ ಹೋಗಿ ಸೇರಿ ಆತು. ಆರೋ ಹೇಳಿಗೊಂಡಿತ್ತಿದ್ದವು ಇವ° ಇರುಳಿಡೀ ಕೈ ಕವುಂಚಿ ಮೊಗಚ್ಚಿ ‘ತಾರಮ್ಮಯ್ಯ ..’ ಮಾಡಿಗೊಂಡಿಕ್ಕೋ ಹೇದು!.
ಇರ್ಲಿ ಬಿಡಿ, ನವಗೆಂತಕೆ ಚಿಂತೆ!

ಉದಿಯಪ್ಪಾಣ ಕಾಪಿಗೆ ಪೊಂಗಲ್ಲು ಮಾಡಿದ್ದಡ ಮನೆದೇವರು. ಈ ಭಾವಂಗೆ ಹೇಂಗೆ ತಿಂಬದು ಹೇಳಿ ಯೇಚನೆ ಸುರುವಾತಡ ಬೆರಳಿಂಗೆ ಹಿಡುದು ಉಂಗಿಲ ಹಾಳಪ್ಪಲಾಗನ್ನೇಳಿ.
ಕಾರಣ- ಉಂಗಿಲ ಹಾಕಿ ಅಭ್ಯಾಸವೂ ಇಲ್ಲೆ, ತಿರಿಗದವನೂ ಅಲ್ಲ ಇದಾ ಈ ಭಾವ. ಮತ್ತೆ ಚಮಚಲ್ಲಿ ತೆಗದು ತಿಂದನಡ!.
ಇದರ ನೋಡಿ ಮನೆದೇವರು ಬುತ್ತಿಲ್ಲಿಯೂ ಒಂದು ಚಮಚ ಸೇರ್ಸಿತ್ತಡ- ಆಪೀಸಿಲ್ಲಿ ಇನ್ನು ಆರತ್ರಾರು ಚಮಚ ಇದ್ದೋ ಹೇಳಿ ಬೆರಳು ನೀಡಿ ಕೇಳುತ್ಸು ಬೇಡ ಹೇದು.
ಅಂಬಗಿನ್ನು… ಮಿಂದಿದನೂ ಇಲ್ಯೋ ಕೇಳೆಡಿ.
ಬೆಳಿ ಬೆಳಿ ಪರಿಮ್ಮಳ ಸಬಾನು ಹಾಕಿ ಮಿಂದಿದನಡಾ – ಅವನೇ ಹೇಳಿದ್ದು! ನವಗರಡಿಯ.
ಇರ್ಲಿ ಬಿಡಿ, ನವಗೆಂತಕೆ ಚಿಂತೆ!

ಈ ಭಾವಯ್ಯನ ಬೆರಳ ತೋರುಸಾಣ ಕಂಡು ಆಚಿಗೆ ಕೂದ ಭಾವನ ಬೆರಳು ತೊರುಸಲೆ ಸುರುವಾತಡ.
ಮತ್ತೊಬ್ಬ ಅವನ ಕೈ ಬೆರಳ ನೋಡಿಗೊಂಡ – ಅವಂಗೆ ಆಟಿಗೂ, ದೀಪಾವಳಿಗೂ ಸಿಕ್ಕಿದ್ದು ., ಹಾಂಗೆ – ಎರಡು ಉಂಗಿಲ !!.
ಆರೋ ಹೇಳಿಯೊಂಡಿತ್ತವಡಾ- ‘ಬೆರಳು ತೊರುಸಿರೆ ಉಂಗುರ ಸಿಕ್ಕುವ ಯೋಗ, ಕೈ ತೊರಿಸಿರೆ ಬಳೆ , ಕೊರಳು ತೊರಿಸಿರೆ ಸರಭಾಗ್ಯ, ಕಾಲು ತೊರಿಸಿರೆ ಗೆಜ್ಜೆಯೋಗ, ಕೆಮಿ ತೊರುಸಿರೆ ಕುಂಡಲ ಯೋಗ!!’
ಉಮ್ಮಾ, ಇನ್ನು.. ಬೆನ್ನು ತೊರಿಸಿರೆ ಯಾವ ಭಾಗ್ಯ ಹೇಳಿ ಶೇಡಿಗುಮ್ಮೆ ಪುಳ್ಳಿ ಕೇಳಿರೆ ನವಗರಡಿಯ., ಅಲ್ಲಾ… ಉಮ್ಮಾ, ಓಯಿ ಹುಳು ಮತ್ತು.. ನೊರಪ್ಪಿದ್ದೋ !!
ಇರ್ಲಿ ಬಿಡಿ, ನವಗೆಂತಕೆ ಚಿಂತೆ!

ಆದರೆ ಈ ಭಾವಂಗೆ ಈಗ ಒಂದೇ ಚಿಂತೆ – ‘ಚಿನ್ನಕ್ಕೆ ಚಿನ್ನದ ಬೆಲೆ ಇಪ್ಪಗ ಇದರ ಕೈಲಿ ಹಾಕಿಯೊಂಡು ಹೋಪದೋ, ಮನೇಲಿಯೇ ಮಡುಗುದೋ, ಲಾಕರ್ಲಿ ಮಡುಗುವದೋ..?
ಚಿನ್ನವ ಲಾಕರ್ಲಿ ಮಡುಗುತ್ತರೆ ಮತ್ತೆ ಮನುಷ್ಯರು ಚಿನ್ನ ತೆಗೆತ್ತೆಂತಕೆ, ಚಿನ್ನದಂತ ಹೆಂಡತಿ ಮನೆಲಿಪ್ಪಗ ಇನ್ನು ಮನುಷ್ಯರಿಂಗೆ ಬೇರೆ ಚಿನ್ನದ ಆಶೆ ಎಂತಕೆ’.

ಚೆನ್ನೈವಾಣಿ: ನಮ್ಮ ಈ ಭಾವ ಹೇಳಿದ್ದು –‘ಚಿನ್ನದಂತ ಮನಸ್ಸಿಪ್ಪ ಮನುಷ್ಯರು ಇರೆಕೇ ಹೊರತು ಚಿನ್ನಕ್ಕೇ ಆಶೆ ಪಡುವ ಮನಸ್ಸು ಇಪ್ಪಲಾಗ..’

ಚೆನ್ನೈ ಬಾವ°

   

You may also like...

13 Responses

  1. ಉಂಡೆಮನೆ ಕುಮಾರ° says:

    {ಓದುತ್ತಾ ಹೋದಾಂಗೆ ದೃಶ್ಯ ಮನಸ್ಸಿಲ್ಲಿ ಕಲ್ಪಿಸಿಗೊಳ್ಳೆಕ್ಕು… ಈಗಳೇ ಹೇಳಿದ್ದೆ.} ವಾಹ್..ವರ್ಣನೆ, ವಿಷಯ ವಿಸ್ತರಣೆ ಪಶ್ಟಾಯಿದು..ಗ್ರೇಷಿ, ಗ್ರೇಶಿ ನೆಗೆ ಬತ್ತು..ಉಂಗಿಲು ಸಿಕ್ಕಿಸದ ಬಾವನ ಕೊಲಕ್ಕಲ್ಲ, ಚೆನ್ನೈ ಬಾವನ ವಿವರಣೆಗೆ..ಕೆಲವು ವರುಶ ಹಳತ್ತು ಶಾಲೆಗಳ ಗ್ರೂಪು ಪಟಂಗಳಲ್ಲಿ ಮಕ್ಕೊ ವಾಚು ತೋರುಸಲೆ ಕೈಕಟ್ಟಿ, ಭುಜ ನೆಗ್ಗುಸಿ ವಾಚು ತೋರುಸುವದು ಕಾಂಗು..

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *