Oppanna.com

ನಮ್ಮ ಅಸ್ತಿತ್ವವ ಹೇಂಗೆ ಒಳಿಶಿಕೊಂಬದು….?

ಬರದೋರು :   ಕಿಟ್ಟಣ್ಣ ಪಿ.ಐ    on   16/01/2012    5 ಒಪ್ಪಂಗೊ

ಎನಗೆ ಈ ಅಲ್ಪ ಸಂಖ್ಯಾತರು ಹೇಳಿದ ಕೂಡ್ಲೆ ನೆಂಪಾಪದೆ ನಮ್ಮ ಮಾತ್ರ.
ದೇಶಲ್ಲಿ ೩೦% ಹೆಚ್ಚು ಬೇರಿ ಗೊ ಇದ್ದವು. ನಾವು ಅವರ ಅಲ್ಪ ಸಂಖ್ಯಾತರು ಹೇಳಿ ದಿನಿಗೇಳಕ್ಕೊ?

ಅದಲ್ಲದ್ದೆ ಇಂದು “ರಿಸರ್ವೇಶನ್” ಹೇಳುವ ಭೂತ ನಮ್ಮ ಕಾಡ್ತಾ ಇದ್ದು.
ನಮ್ಮ ಮಾಣಿಯಂಗೊ,ಕೂಸುಗೊ ಎಷ್ಟು ಮಾರ್ಕು ತೆಗದರೂ ಅದಕ್ಕೆ ಬೆಲೆ ಇಲ್ಲೆ.ಹೀಂಗಾದರೆ ನವಗೆ ಬೆಲೆ ಬಪ್ಪದು ಯಾವಾಗ?

ಇದರ ಬಗ್ಗೆ ಒಂದು ಸರ್ತಿ ನಾವೆಲ್ಲರುದೆ ಯೋಚುಸಕ್ಕು ಹೇಳಿ ಎನಗಾವ್ತು.
ಆನು ಸಿಕ್ಕಿದವರ ಹತ್ರೆ ಎಲ್ಲಾ ಈ ವಿಷಯವ ಬಿತ್ತು ಹಾಯ್ಕೊಂಡು ಬತ್ತಾ ಇದ್ದೆ.ಬಾಯಿಂದ ಬಾಯಿಗೆ ಬಿದ್ದು ನಾವೆಲ್ಲರುದೇ ಒಂದೇ ಹೇಳುದರ ಸರಕಾರದ ಗಮನಕ್ಕೆ ತರೆಕ್ಕು.
ನವಗೆ “ಅಲ್ಪ ಸಂಖ್ಯಾತರು” ಹೇಳುವ ಹಣೆಬರಹ ಬೇಡ.ಆದರೆ ಎಷ್ಟು ಮಾರ್ಕು ತೆಗದರೂ ಸಾಕಾಗದ್ರೆ ಇಂದ್ರಾಣ  ಮಾಣಿಯಂಗೊ,ಕೂಸುಗೊ ಅವರ ಅಶನ ಉಂಬದು ಹೇಂಗೆ?
ಈ ಬಗ್ಗೆ ನಾವೆಲ್ಲರುದೆ ಕೂದುಕೊಂಡು ಆಲೋಚನೆ ಮಾಡುವ, ಆಗದಾ?

5 thoughts on “ನಮ್ಮ ಅಸ್ತಿತ್ವವ ಹೇಂಗೆ ಒಳಿಶಿಕೊಂಬದು….?

  1. ನಮ್ಮ ಅಸ್ತಿತ್ವವ ಒಳಿಷೆಕ್ಕಾರೆ ತುಂಬಾ ಸುಲಭ… ನಮ್ಮತನವ ಒಳಿಷಿರೆ ಆತು…

    ಮೊದಲಿಂಗೆ ನಮ್ಮ ಮಾಣಿಯಂಗೊಕ್ಕೆ,ಕೂಸುಗೊಕ್ಕೆ “ಮಾರ್ಕು ತೆಗವದು ಹೇಳಿರೆ ಒಂದು ಸಾಧನೆ ಅಲ್ಲ…” ಹೇಳುದರ ಅರ್ಥ ಮಾಡುಸೆಕ್ಕು… ಮಾರ್ಕ್ ತೆಗವದು ಹೇಳಿರೆ ಒಂದು ಸಾಧನೆ ಹೇಳಿ ನಮ್ಮ ಮನಸ್ಸಿಲ್ಲಿ ತುಂಬಿಸಿ ವಿದ್ಯಾಭ್ಯಾಸವ ಒಂದು ದೊಡ್ಡ ಬಿಸಿನೆಸ್ ಮಾಡಿಗೊಂಡಿದವು ಅಷ್ಟೇ…

    “… ಏನಾದರೂ ಸರಿಯೇ ಮೊದಲು ಮಾನವನಾಗು…” ಹೇಳುದರ ನಮ್ಮ ಮಕ್ಕೊಗೆ ಸಣ್ಣದರಲ್ಲೇ ಕಲಿಷೆಕ್ಕು… ತನ್ನಷ್ಟಕ್ಕೆ ನಮ್ಮ ಮಕ್ಕೋ ಸ್ವಾಭಿಮಾನದ, ದೇಶಕ್ಕೆ ಕೀರ್ತಿ ತಪ್ಪಂತಹವು ಆಗಿ ಬೆಳವದರಲ್ಲಿ ಸಂಶಯ ಇಲ್ಲೇ…

  2. ನಮಗೆ ಬೇರೆಯೋರ ಅಡಿಲಿ ಕೆಲಸ ಮಾಡುಲೆ ಮಾತ್ರ ಎಡಿವದು. ರಿಸ್ಕು ತೆಕ್ಕೊಂಬಲೆ ಎಡಿಯ… ಆನುದೇ ಇದಕ್ಕೆ ಹೊರತಲ್ಲ. ನಾವು ಏನಮಾಡೀರೂ ಹೀಂಗೇ ಇಕ್ಕಷ್ಟೆಯಾ ಹೇಳಿ. ದೇಶದ ಲೆವೆಲಿಲಿ ನೋಡಿರೆ entrepreneur ಆದೋರು ಹವೀಕರು ಕಾಣ್ತವಾ?

  3. ನಮ್ಮ ಕಾಲಮೇಲೆ ನಾವು ನಿಂದೊಂಬದು,
    ರಿಸರ್ವೇಶನ್ನು ಇಲ್ಲದ್ದ ಕಡೆ ಹೋಗಿ ಗೆಲ್ಲುದು,
    ನಿಷ್ಠೆಲಿ ಇದ್ದೊಂಡು ಕಾವದು ಬಿಟ್ರೆ,
    ಬೇರೆ ದಾರಿ ಇಲ್ಲೆ.

  4. ಎನ್ನ ಅಭಿಪ್ರಾಯದ ಪ್ರಕಾರ ನಮ್ಮ ದೇಶವ ನಿಜವಾಗಿ ಆಳ್ತಾ ಇಪ್ಪದು IAS, IPS ಅಧಿಕಾರಿಗೊ. ಹಾಂಗಾಗಿ ನಮ್ಮ ಮಕ್ಕೋ IAS, IPS ಮಾಡ್ಲೆ ನಾವು ಪ್ರೋತ್ಸಾಹ ಕೊಡೆಕ್ಕು. ಆವಾಗ ದೇಶದ ಆಡಳಿತ ನಮ್ಮೋರ ಕೈಗೆ ತೆಕ್ಕೊಂಬಲಾವುತ್ತು…

  5. ಎನ್ನ ಅಭಿಪ್ರಾಯಲ್ಲಿ, ನಾವು (ಮೀಸಲಾತಿ ಇಲ್ಲದ್ದವು) ಸರಕಾರಿ ಕೆಲಸವನ್ನೇ ನ೦ಬಿಗೊ೦ಡು ಕೂಬಲಾಗ. ಮೀಸಲಾತಿ ಗಣನೆಗೆ ತೆಕ್ಕೋಳದ್ದ ಖಾಸಗಿ / ಸ್ವ ಉದ್ಯಮ ಕ್ಷೇತ್ರ೦ಗಳಲ್ಲಿ ಏಕೆ ಪ್ರಯತ್ನ ಪಡ್ಲಾಗ?
    ಸರಕಾರಿ ಉದ್ಯೋಗಕ್ಕೆ ಪ್ರಯತ್ನ ಪಡ್ತಾ ಇರೆಕು. ಎನಗೇ ಊರಿಲ್ಲಿ ಸರಕಾರಿ ಕೆಲಸ ಸಿಕ್ಕಿದ್ದು. ಆದ ಕಾರಣ ನಮ್ಮವಕ್ಕೆ ಸಿಕ್ಕಲೇ ಸಿಕ್ಕ ಹೇಳುವದೂ ಸರಿಯಲ್ಲ. ನಮ್ಮ ವ್ಯವಸ್ಥೆ ಒಳ್ಳೇದಿಲ್ಲೆ ಹೇಳಿ ಆ ವ್ಯವಸ್ಠೆಯ ಟೀಕೆ ಮಾಡುವದರ ಒಟ್ಟಿ೦ಗೆ, ನಮ್ಮ ಉನ್ನತಿಗೆ ಬೇಕಾದ ಕ್ರಿಯಾತ್ಮಕ ಪ್ರಯತ್ನ೦ಗಳನ್ನುದೆ ಮಾಡೆಕು ಹೇಳಿ ಎನ್ನ ಅಭಿಪ್ತಾಯ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×