ಅವನ ಕಂಡ್ರೆ ಆವ್ತಿಲ್ಲೆ ಎನಗೆ. , ಎರಡ್ಡು ಮಡುಗೆಕು.

March 16, 2011 ರ 7:30 amಗೆ ನಮ್ಮ ಬರದ್ದು, ಇದುವರೆಗೆ 15 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಅವನ ಕಂಡ್ರೆ ಆವ್ತಿಲ್ಲೆ ಎನಗೆ. , ಎರಡ್ಡು ಮಡುಗೆಕು – ನಾವೂ ಹೆಚ್ಚಾಗಿ ಕೇಳ್ತ ಮಾತು. ನಿಂಗೊ-“ ಇಲ್ಲೆ, ‘ಕೇಳಿದ್ದಿಲ್ಲೆನ್ನೇ’” ಹೇಳ್ತೀರೋ? – ಅದಕ್ಕೆ ಆನು ಜನ ಅಲ್ಲ.

ಕೇಳಿದ್ದೆ ಹೇಳಿಯೇ ಮಡಿಕ್ಕೊಳ್ಳಿಪ ಈಗ.

ಸರಿ., ಮುಂದೆ ಎಂತರೀಗ?

ನಮ್ಮ ಬಗ್ಗೆ ಹಿಂದಂದ ಆರೋ ಒಬ್ಬ ಎಂತದೋ ಹೇಳಿದ°, ದೂರಿದ° ಹೇಳಿ ನಮ್ಮ ಕೆಮಿಗೆ ಬಿದ್ದ ಕೂಡ್ಲೇ ನವಗೆ ಕಾಂಬದು ಇದು. ಎಂತಾರು ಅವಂಗೆ ಇನ್ನು ಎರಡು ಒಗೇಕು ಹೇಳಿ ಅಪ್ಪದು. ಗಡಿಬಿಡಿ ಮಾಡಿ ನಿಂಗೊ ಇದರ ಮಾಡಿದಿರೋ ಮತ್ತೆ ‘ಕೆಟ್ಟತ್ತನ್ನೆ ಮುಕುಟ’ ಅಕ್ಕು.

ನಮ್ಮ ಹಾಂಗೇ ಇತರರು ಹೇಳಿ ನಾವೂ ಎಂದಿಂಗೆ ತಿಳ್ಕೊಳ್ಳುತ್ತೋ ಅಂಬಗ ಅದು ‘ಬೇಡ’ ‘ತಪ್ಪು’ ಹೇಳಿ ಕಾಂಗು. ನಾವೂ ಎಂತ ‘ಬರ್ಕತ್ತೋ’? . ನಾವೂ ಕೂದೊಂಡು ಇನ್ನೊಬ್ಬನ ಬಗ್ಗೆ ದೂರುತ್ತಿಲ್ಲ್ಯೋ , ಮಾತಡ್ತಿಲ್ಯೋ – ‘ಅವ° ಹಾಂಗೇ ಮಾಡೆಕ್ಕಾತು, ಹೀಂಗೆ ಮಾಡಿದ್ದು ತಪ್ಪು’ ಹೇದು. ಅವನ ವಿಮರ್ಶೆ ಮಾಡೆಕ್ಕಾದ ಅಗತ್ಯ ಎಂತ ಇದ್ದು ನವಗೆ?. ನಮ್ಮ ಕಾರ್ಯ ಹೇಂಗೆ ಸರಿ ಮಾಡುತ್ತು ಹೇಳಿ ನವಗೆ ಅರಡಿಯದ್ದೆ ಹಸಬಡುದು ಹಲವು ದಿಕ್ಕೆ ಸೋತದ್ದು ಇಲ್ಯೋ?. ನಾವೆಂತ ಮಾಡಿದ್ದು?- ‘ಇದು ಸರಿ’ ಹೇಳಿ ಅಂಬಗ ನವಗೆ ಕಂಡತ್ತು , ‘ಹಾಂಗೇ’ ಮಾಡಿತ್ತು.

ಎಂತರ ಚೆರಪ್ಪುತ್ತು ಇದು ಹೇಳಿ ಕೇಳ್ತೀರೋ?

‘ಲೋಕೋ ಭಿನ್ನ ರುಚಿ:’ – ಒಬ್ಬೊಬ್ಬಂಗೆ ಒಂದೊಂದು ಸಮ ಹೇಳಿ ಕಾಂಬೋದು. ಅದು ಅವನ ಸ್ವಾತಂತ್ರ್ಯ.

ಒಬ್ಬ° ಹೇಳಿದ , ಕೇಳಿದ , ಹೇಳಿಗೊಂಡು ತಿರುಗುತ್ತ ಹೇಳಿ ನಾವು ಕೇಳಿಗೊಂಡು ಅವನ ಮೇಗೆ ಕಾರಿರೆ ಆಗ. ಎಡಿಗಾರೆ ಅವನ ದೆನಿಗೊಳಿ – ‘ಇದಾ, ಇದು ನೀನು ಹೀಂಗೆ ಮಾಡುತ್ತು ತಪ್ಪು , ಹೀಂಗೆ ಮಾಡ್ಲಾಗ’ ಹೇಳಿ ಅವನ ಮನಸ್ಸಿನ್ಗೆ ಮನದಟ್ಟು ಮಾಡಿ ಅವನ ಹೃದಯ ಪರಿವರ್ತನೆ ಮಾಡೆಕು. ದಟ್ಟಿಸಿಯೋ , ಬಡುದೋ ಅಲ್ಲ. ಮನಸ್ಸು ಗೆದ್ದು ಹೃದಯ ಪರಿವರ್ತನೆ ಆಗಿ ಇಬ್ಬರಲ್ಲೂ ಅನ್ಯೋನ್ಯ ಭಾವನಾತ್ಮಕ ಐಕ್ಯತೆ ಉಂಟಾಯೇಕು. (ಭಾವಾ.. ಹೇಳುವಾಗ ಈ ಭಾವನ ಭಾವ ಆ ಭಾವನ ಭಾವನಗೆ ತಟ್ಟೆಕು). ಎಡಿತ್ತಿಲ್ಲ್ಯೋ, ಕೇಳ್ತಾ ಇಲ್ಲ್ಯೋ – ಬಿಟ್ಟಿಕ್ಕಿ. ನಿಂಗೊ ದೂರ ಇರಿ. ನಿಂಗಳ ಮನಸ್ಸು ಅದರಿಂದ ದೂರ ಮಾಡಿಕ್ಕಿ. ಲಡಾಯಿಗೋ , ಕಚ್ಚ್ಚಿ ಬೀಳ್ಲೋ, ಜೆಪ್ಪಲೋ, ನಾಕು ಜೆನರ ಎದುರು ಹಂಗುಸಲೋ ಹೋಗೆಡಿ. ಮನುಷ್ಯರ ನಾವೂ ಹೃದಯ ಪೂರ್ವಕ ಗೆಲ್ಲುವೋ. ದಾರ್ಷ್ಟಿಯಂದಲ್ಲ. ರಾಮ ರಾಜ್ಯ ಕನಸು ಕಾಂಬ ನಾವೇ ರಾವಣ ಅಪ್ಪಲಕ್ಕೋ.!!

ಇದು ಬರೇ ಮಾತಿನ ವಿಷಯಲ್ಲಿ ಮಾತ್ರ ಅಲ್ಲ. ಇತರ ನಿತ್ಯ ವ್ಯವಹಾರಲ್ಲಿಯೂ ಕೂಡ. ಒಬ್ಬನ ವ್ಯವಹಾರಕ್ಕೆ ಇನ್ನೊಬ್ಬ ಅಡ್ಡಗಾಲು ಹಾಕುತ್ತ ಹೇಳಿ ಅವನ ಕಾಲು ಮುರಿವೆ ಹೇಳಿ ಹೆರಡೋದು, ಎನ್ನ ಜಾಗೆಯ ಅವ ಅಕ್ರಮ ಸ್ವಾಧೀನ ಮಾಡಿದ್ದ ಅವನ ಸೊಂಟ ಮುರಿವೆ ಹೇಳಿ ಏಳೋದು ಕೂಡ ಅಂತೇ ಬಲ ಪ್ರದರ್ಶನ ಮಾಡ್ಳಕ್ಕಷ್ಟೆ. ಕಾನೂನು ಮೂಲಕ ಬಗೆ ಹರಿಸಿಯೊಂಡರೆ ವಿನಾ ಬಾಯಿ ಮಾತು, ಹರಕೆ ಹಾಡೂ ತಪ್ಪುತ್ತು. ಇಂದಿಂಗೆ ಆನು ಗೆದ್ದೇ ಹೇಳಿ ಕಂಡರೂ ಮುಂದಂಗೆ ನಮ್ಮ ಕರ್ಮ ಸ್ಥಾನಲ್ಲಿ ದೋಷವಾಗಿಯೇ ಉಳಿತ್ತು. ಆಪತ್ತುಕಾಲಲ್ಲಿ ಜೋಯಿಸನೆದುರು ಕೂಬಗ ಅಲ್ಲದೋ ಅಂದು ನೀ ಹಾಂಗೆ ಮಾಡಿದ್ದೇ , ಹೀಂಗೇ ಆಡಿದ್ದೇ ಹೇಳಿ ಸಿಕ್ಕಿ ಬಿದ್ದು ಪಶ್ಚಾತ್ತಾಪ ಪಟ್ಟುಕೊಂಬದು.

ಇನ್ನೊಬ್ಬನ ಕೆಟ್ಟತನವ ಮರೆತು ಒಳ್ಳೆತನವ ಮೆರೆಶುವೋ. ‘.. .. … ಪರಗುಣ ಪರಮಾಣೂನ್ ಪರ್ವತೀ ಕೃತ್ಯ ನಿತ್ಯಂ ನಿಜಹೃದಿ ವಿಕಸಂತಃ ಸಂತಿ ಸಂತಃ ಕಿಯಂತಃ’.

ಹರೇ ರಾಮ.  ‘ಲೋಕಾ ಸಮಸ್ತಾಃ ಸುಖಿನೋ ಭವಂತು’.

ಎಂತಾ..? ಇವಂಗೆ ಎರಡ್ದು ಮಡುಗುವನೋ ಹೇಳಿ ಕಾಣುತ್ತೋ ಈಗ?.  ಬನ್ನಿ ಬನ್ನಿ., ಸಿಕ್ಕಿ ಬೇಕನ್ನೇ ಆನು ನಿಂಗಳ ಕೈಗೆ !!.

ಅವನ ಕಂಡ್ರೆ ಆವ್ತಿಲ್ಲೆ ಎನಗೆ. , ಎರಡ್ಡು ಮಡುಗೆಕು., 5.0 out of 10 based on 1 rating
ಶುದ್ದಿಶಬ್ದಂಗೊ (tags): , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 15 ಒಪ್ಪಂಗೊ

 1. ಮುಣ್ಚಿಕಾನ ಭಾವ

  ಅದೆಲ್ಲ ಸಮಯ ದೋಷಂದ ಹಾಂಗೆ ತೋರುದು ಅಷ್ಟೆ… “ಕೋಪಲ್ಲಿ ಕೊಯ್ದ ಮೂಗು” ಪುನಃ ಸರಿ ಮಾಡುಲೆ ಎಡಿಯ ಅಲ್ಲದ…. ಅದಕ್ಕೆ ನಾವು ಯಾವಾಗಲೂ ರಜ್ಜ ತಾಳ್ಮೆ ತೆಕ್ಕೊಂಡರೆ ಎಲ್ಲಾ ಸರಿ ಆವುತ್ತು. ಕೋಪ ಬಪ್ಪಗ ೧೦ರಿಂದ ೧ರ ವರೆಗೆ ಎಣುಸಿದರೆ ಆತು ಹೇಳಿ ದೊಡ್ಡವು ಹೇಳುತ್ತವು… :-)
  ಒಪ್ಪಂಗಳೊಟ್ಟಿಂಗೆ…

  [Reply]

  ಚೆನ್ನೈ ಬಾವ°

  ಚೆನ್ನೈ ಭಾವ Reply:

  ೧೦ರಿಂದ ೧ ಸಾಕಾವ್ತಿಲ್ಲ್ಯೋ ಹೇದು ಭಾವ. ರಜಾ ಹೆಚ್ಚಿಗೆ ಮಾಡೆಕಕ್ಕೋ. ಉಮ್ಮಾ ಅವ್ವವ್ವು ಹೇಳ್ತ ಸ್ಪೀಡ್ ಹೊಂದಿಯಂಡು ಆದಿಕ್ಕು ಅಲ್ಲದೋ. ‘ಕೊಪಲ್ಲಿ ಕೊಯ್ದ ಮೂಗು ‘- ಒಪ್ಪ ಆತಿದ.

  [Reply]

  ಮುಣ್ಚಿಕಾನ ಭಾವ

  ಪ್ರದೀಪ್ ಮುಣ್ಚಿಕಾನ Reply:

  {೧೦ರಿಂದ ೧ ಸಾಕಾವ್ತಿಲ್ಲ್ಯೋ ಹೇದು ಭಾವ.}
  ಹಾಂಗಾರೆ ೧೦೦ರಿಂದ ೧ರ ವರೆಗೆ ಎಣಿಸುವ… 😉
  {ಅವ್ವವ್ವು ಹೇಳ್ತ ಸ್ಪೀಡ್ ಹೊಂದಿಯಂಡು ಆದಿಕ್ಕು}
  ಅಪ್ಪು… ಈಗ ಎಲ್ಲರಿಂಗುದೇ ರಜ್ಜ ಸ್ಪೀಡು ಜಾಸ್ತಿ. ಕಂಪ್ಯೂಟರು ಯುಗ ಅಲ್ಲದ… :-)
  ಹಾಂಗಾಗಿ ಕೋಪವುದೇ ಬೆರಳ ಕೊಡಿಲಿ ಇಕ್ಕು… ನವಗರಡಿಯ….

  [Reply]

  VA:F [1.9.22_1171]
  Rating: 0 (from 0 votes)
 2. papadava

  ನರನ ಕೋಪ ಸ್ಥಿತಿ ಅವನನ್ನು ನರಕೋಪಸ್ಥಿತನನ್ನಾಗಿ ಮಾಡುತ್ತದೆ

  [Reply]

  ಚೆನ್ನೈ ಬಾವ°

  ಚೆನ್ನೈ ಭಾವ Reply:

  ಅಪ್ಪು. ಗೋವಿಂದಣ್ಣ ಹೇಳಿದ್ದಲ್ಲದೋ. ನಿಂಗೊ ಇಲ್ಲಿ ಹೇಳಿ ಚೊಕ್ಕ ಆತಿದ. ಧನ್ಯವಾದ.

  [Reply]

  VA:F [1.9.22_1171]
  Rating: 0 (from 0 votes)
 3. drmahabala
  dr mahabala sharma

  eega rubberingu rate olleta iddu,jaagegude demaand iddu.
  hangippaga avange gontilladange avana jaageya aanu ola haakire entaa heli obba herata.ruber netaa,tapping suru maadida,
  mattobba avange eradu madugale herata .
  idu kathe alla bhavaa,
  ondu oorili nadatta ippa real story/reelu story.

  [Reply]

  ಚೆನ್ನೈ ಬಾವ°

  ಚೆನ್ನೈ ಭಾವ Reply:

  ‘ವಿನಾಶ ಕಾಲೇ ವಿಪರೀತ ಬುದ್ಧಿಹಿ’

  ಬ್ರಾಹ್ಮರೂ ಹೀಂಗೇ ಮಾಡ್ತವನ್ನೇ ಹೇಳಿ ಹೆರಾಣವಕ್ಕೆ ನೆಗೆ ಮಾಡ್ಲೆ ಸಿಕ್ಕುವ ಚಾನ್ಸ್ ಇದೆಲ್ಲ.

  [Reply]

  VA:F [1.9.22_1171]
  Rating: 0 (from 0 votes)
 4. ಗೋಪಾಲಣ್ಣ
  Gopalakrishna BHAT S.K.

  ಸರಿ.ರಾಜಕೀಯಲ್ಲೂ ಅವರ ಕೈ ಕತ್ತರಿಸಿ-ಹೇಳುವ ಕ್ರಮ ಇದ್ದಲ್ಲದೊ?
  ಅದೆಲ್ಲಾ ಸರಿಯಾದ ಕ್ರಮ ಅಲ್ಲ.
  ಆರಿಂಗೆ ಅವರ ಭಾವನೆಯ ಮೇಲೆ ಹತೋಟಿ ಇಲ್ಲೆಯೊ,ಅಂಥವು ಹೀಂಗೆ ಹೇಳುತ್ತಾ ಇಕ್ಕು.
  ಆದರೆ ಕೋಪವ ತೋರಿಸೆಕ್ಕಾದ ಅಗತ್ಯ ಬಂದ ಸಂದರ್ಭಲ್ಲಿ ಹೀಂಗೆ ಹೇಳುದು [ಮಾಡೆಕ್ಕು ಹೇಳಿ ಇಲ್ಲೆ] ಅಗತ್ಯ ಇಕ್ಕು.

  [Reply]

  VA:F [1.9.22_1171]
  Rating: 0 (from 0 votes)
 5. ಚೆನ್ನೈ ಬಾವ°
  ಚೆನ್ನೈ ಭಾವ

  ಆಪತ್ಕಾಲಲ್ಲಿ ಏನೂ ಆವ್ತು. ಆದರೇ ಅಧರ್ಮ ಎಂದೂ ಶಾಶ್ವತ ಅಲ್ಲನ್ನೇ.

  [Reply]

  VA:F [1.9.22_1171]
  Rating: 0 (from 0 votes)
 6. ಲಕ್ಶ್ಮಿ ಅಕ್ಕ

  ‘ಲೋಕೋ ಭಿನ್ನರುಚಿ: ‘ ಹೇಳುವ ಮಾತಿನ ಅರ್ಥಮಾಡಿಗೊಂದು ಚೆನ್ನೆಇ ಭಾವನ ಲೇಖನಕ್ಕೆ ಎನ್ನದೊಂದು ಒಪ್ಪ

  [Reply]

  VA:F [1.9.22_1171]
  Rating: 0 (from 0 votes)
 7. ಚೆನ್ನೈ ಬಾವ°
  ಚೆನ್ನೈ ಭಾವ

  ಅಕ್ಕಂಗೆ ಧನ್ಯವಾದ ಹೇಳಿತ್ತಿಲ್ಲಿಂದ.

  [Reply]

  VA:F [1.9.22_1171]
  Rating: 0 (from 0 votes)
 8. ಒಪ್ಪಣ್ಣ

  ಚೆನ್ನೈಭಾವನ ಹರಟೆಯೇ ಅಲ್ಲದ್ದ “ಹರಟೆ”ಕಂಡು ಕೊಶಿ ಆತು!
  ಒಳ್ಳೆ ಚಿಂತನೆಯ ಬೈಲಿಂಗೆ ಬಿಟ್ಟಿದಿ…

  ಭಾವಾ.. ನಿಂಗಳ ಭಾವ ಒಪ್ಪಣ್ಣನ ಭಾವಕ್ಕೆ ತಟ್ಟಿತ್ತು! :-)
  ಇನ್ನೊಬ್ಬನ ಆತ್ಮಾಭಿಮಾನಕ್ಕೆ ತೊಂದರೆ ಆಗದ್ದ ನಮುನೆ ವೆವಹಾರ ಮಾಡ್ತರ ನಾವು ಮರವಲಾಗ – ಹೇಳ್ತರ ಬೈಲಿಲಿ ನೆಂಪುಮಾಡಿದ್ದಕ್ಕೆ ವಂದನೆಗೊ.. :-)

  [Reply]

  VA:F [1.9.22_1171]
  Rating: 0 (from 0 votes)
 9. ಚೆನ್ನೈ ಬಾವ°
  ಚೆನ್ನೈ ಭಾವ

  ‘ಭಾವ’ ಎತ್ತಿ ತೋರ್ಸಿದ್ದಿ ಭಾವ. ಧನ್ಯವಾದಂಗೊ

  [Reply]

  VA:F [1.9.22_1171]
  Rating: 0 (from 0 votes)
 10. ಮುಳಿಯ ಭಾವ
  ರಘುಮುಳಿಯ

  ಚೆನ್ನೈಭಾವನ ಲೇಖನ ಲಾಯಿಕಾಯಿದು.
  ನಮ್ಮ ಕೋಪ ಇನ್ನೊಬ್ಬನಲ್ಲಿ ಸರಿಯಾದ ಮಾರ್ಗಕ್ಕೆ ಪರಿವರ್ತನೆಗೆ ದಾರಿಯಾಗಿರೆಕ್ಕೇ ಹೊರತು,ನಮ್ಮ ದರ್ಪದ ಪ್ರದರ್ಶನ ಅಪ್ಪಲಾಗ.ಎದುರಾಣವನ ದೃಷ್ಟಿಕೋನಲ್ಲಿ ಒ೦ದು ಘಳಿಗೆ ಯೋಚನೆ ಮಾಡಿರೆ ಎಷ್ಟೋ ಲಡಾಯಿಗೊ ಕಮ್ಮಿ ಅಕ್ಕು.
  ಹು೦,ಆವಗ ನ೦ಬ್ರ೦ಗಳೇ ಇಲ್ಲದ್ದರೆ ಕೋರ್ಟಿ೦ಗೆ ಬೀಗ ಜಡಿಯೆಕ್ಕಕ್ಕೋ?

  [Reply]

  ಚೆನ್ನೈ ಬಾವ°

  ಚೆನ್ನೈ ಭಾವ Reply:

  “.. ಕೋರ್ಟಿ೦ಗೆ ಬೀಗ ಜಡಿಯೆಕ್ಕಕ್ಕೋ?” – ಬೇಡಪ್ಪಾ ., ವಕೀಲ ಭಾವಂದ್ರು , ಜೆಡ್ಜ್ ಮಾವಂಗೊಕ್ಕೆ ಬಾಕಿ ಹೆಗ್ಳನ ಬೇಗ ಬೇಗ ನೋಡ್ಲಕ್ಕನ್ನೆ. ಸಂಧಾನ ವಿಫಲವಾದ ಬಾಕಿ ದಾವಗೊ ಇರುಗು ಹರುಶೋದರ ಮದಲೆ ಸುರುಮಾಡ್ಳಕ್ಕದಾ.

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಬಟ್ಟಮಾವ°ಶೀಲಾಲಕ್ಷ್ಮೀ ಕಾಸರಗೋಡುಕೇಜಿಮಾವ°ಪುಟ್ಟಬಾವ°ಚುಬ್ಬಣ್ಣಸುಭಗಅಜ್ಜಕಾನ ಭಾವಉಡುಪುಮೂಲೆ ಅಪ್ಪಚ್ಚಿರಾಜಣ್ಣಜಯಶ್ರೀ ನೀರಮೂಲೆನೀರ್ಕಜೆ ಮಹೇಶಶುದ್ದಿಕ್ಕಾರ°ಮಾಲಕ್ಕ°ಕೊಳಚ್ಚಿಪ್ಪು ಬಾವಪುತ್ತೂರುಬಾವಹಳೆಮನೆ ಅಣ್ಣಅನುಶ್ರೀ ಬಂಡಾಡಿಚೂರಿಬೈಲು ದೀಪಕ್ಕಶ್ರೀಅಕ್ಕ°ನೆಗೆಗಾರ°ಜಯಗೌರಿ ಅಕ್ಕ°ತೆಕ್ಕುಂಜ ಕುಮಾರ ಮಾವ°ಒಪ್ಪಕ್ಕದೊಡ್ಮನೆ ಭಾವಶೇಡಿಗುಮ್ಮೆ ಪುಳ್ಳಿದೇವಸ್ಯ ಮಾಣಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ