ಬಸ್ಸಿಲಿ ಬಜೆಟ್ . . .

March 5, 2011 ರ 9:00 amಗೆ ನಮ್ಮ ಬರದ್ದು, ಇದುವರೆಗೆ 11 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಮೊನ್ನೆ ಹದಿನೈದು ದಿನಂದ ತುಂಬಾ ಅಜೆಂಟ್ ಕೆಲ್ಸ.
ಒಂತ್ಸತ್ತಿ ಬೈಲಿಗೆ ಬರೆಕ್ಕು ಹೇಳಿ ಗ್ರೇಸಿರುದೇ ಬಪ್ಲೇ  ಎಡಿಗಾಯಿದಿಲ್ಲೆ. ಮಾತಾಡೆಕ್ಕು ಹೇಳಿ ಹೊರಟ್ರುದೇ ಆಯಿಕೊಂಡು ಇತ್ತಿಲ್ಲೆ. ಅಂತೂ ಇಂದು ಬಂದೆ.
ಮೊನ್ನೆ ಸುಬ್ರಹ್ಮಣ್ಯದ ವೆಂಕಟೇಶಣ್ಣ, ಎಂತ ಬೈಲಿಲಿ ಕಾಣ್ತಿಲ್ಲೆ ಹೇಳಿ ಕೇಳಿರೆ , ಒಪ್ಪಣ್ಣಂದುದೇ ಆತು ಎಂತಾ ಕಾಣ್ತಿಲ್ಲೆ.
ಇಂದು ಬೈಲಿಲಿ ಒಂದು ರೌಂಡ್ ಪಟ್ಟಾಂಗ ಹಾಕೆಕ್ಕು. ವೇಷ ಕಟ್ಟಿಕೊಂಡೇ ಬಂದಿದೆ.
ವಿಷಯ ಸುಮಾರಿದ್ದು ಮಾತಾಡ್ಲೆ. ಆದ್ರೆ ಒಂದು ವಿಷಯ ಹೇಳಿ ಆನು ಇಳಿತ್ತೆ. ಮತ್ತೆ ನಾಳೆ ಬಪ್ಪುದು.
ಮೊನ್ನೆ ಬಸ್ಸಿಲಿ ಮಂಗ್ಳೂರಿಗೆ ಹೊಗ್ತಾ ಇತ್ತಿದ್ದೆ. ಬಸ್ಸಿಲಿ ಹೋಪುದು ಹೇಳಿರೇ ಅದೊಂದು ಖುಷಿ. ಯಾವಾಗ್ಲೂ ಈ ಕಾರು , ಬೈಕಿಲಿ  ಹೋಗಿ ಹೋಗಿ ಬೇಜಾರು, ಒಂಚೂರು ಆರಾಮವಾಗಿ ಹೋಯೆಕ್ಕಾರೆ ಬಸ್ಸೇ ಆಯೆಕ್ಕು.
ಇನ್ನೊಂದು ವಿಷಯ, ಕಾಲೇಜಿಗೆ ಹೋಪಗ ಈ ಬಸ್ಸಿಲಿ ಎಂತ ಮಜಾ ಇತ್ತಿದ್ದು ಹೇಳಿ ಆನು ಮತ್ತೆ ವಿವರ್ಸೆಕ್ಕು ಹೇಳಿ ಇಲ್ಲೆನೆ. ನಿಂಗೊಗೇ ಗೊತ್ತಿದ್ದನ್ನೆ.
ವಿಷಯ ಅದಲ್ಲ.
ಬಸ್ಸಿಲಿ ಹೋಪುದು ಹೇಳಿರೆ ಒಂದು ಆರಾಮ, ಇನ್ನೊಂದು ಅದು ವಿಷಯದ ಖಜಾನೆ.
ಬಸ್ಸಿಲಿ ಸುಮ್ನೆ ಕೂತ್ರೆ ಸಾಕು ಎಷ್ಟು ವಿಷಯ ಸಿಕ್ತು ಗೊತ್ತಿದ್ದ. ಮಹಿಳಾ ಸೀಟಿನ ಹಿಂದೆ ಕೂತ್ರಂತೂ ಬೇರೆ ಬೇರೆ ಮನೆಯ ವಿಷಯವೂ ಸಿಕ್ತು.
ಮೊನ್ನೆ ಆನು ಹೋಪಗ ಒಂದು ಜನ ಪೇಪರ್ ಬಿಡ್ಸಿ ಕೂತಿತ್ತಿದ್ದ. ಯಡಿಯೂರೈತಪ್ಪನ ಬಜೆಟ್‌ನ ಓದುತ್ತಾ ಇತ್ತಿದ್ದ ಅವ.
ಆನು ಆ ಜನದ ಹಿಂದೆ ಸೀಟಿಲಿ ಕೂತೆ. ಇಬ್ರು ಕೂರುವ ಸೀಟು ಅದು. ಪೇಪರ್ ಓದುವ ಜನದ ಹತ್ರ ಕೂತ ಇನ್ನೊಬ್ಬ  ಹೇಳಿದ, “ಎಂತಾ ಬಜೆಟ್ ಮಾರಾಯ್ರೆ. ಒಳ್ಳೇ ಬಜೆಟ್” ಹೇಳಿತ್ತು.
ಹೌದು ರೈತರಿಗೆ ಒಳ್ಳೇ ಸಪೋರ್ಟ್ ಮಾಡ್ತಿದಾರೆ ಹೇಳಿ ಮಾತಾಡ್ಲೆ ಸುರು ಮಾಡಿವ ಅವು ಮಾತಾಡಿದ್ದೇ ಮಾತಾಡಿದ್ದು. ಈ ಬಜೆಟಿನ ವಿಷಯದ್ದೇ ಚರ್ಚೆ.
ಹಾಂಗೇ ಎರಡು ದಿನ ಕಳ್ದ ಮೇಲೆ ಮಮತೆಯ ಬಜೆಟ್ ಬಂತು ಅದಾದ ನಂತರ ಮೂಕಜ್ಜಿಯ ಬಜೆಟ್ ಕೂಡಾ ಬಂತು.
ಈ ಬಜೆಟ್ ಹೇಳಿದ ಕೂಡಲೇ ಎಲ್ರೂ ಒಂಚೂರು ನೋಡ್ತವು. ಎಂತ ಗೊತ್ತಿದ್ದ, ನಮ್ಗೆ ಎಂತಾರು ಇದ್ದಾ?. ಹೇಳಿ ನೋಡುದು.
ನವ್ಗೆ ಎಷ್ಟು ಟ್ಯಾಕ್ಸ್ ಇದ್ದು ಹೇಳೀ ಕೆಲ್ಸಲ್ಲಿ ಇಪ್ಪವು ನೋಡಿರೆ , ಕೃಷಿಕರು ಎಷ್ಟು ಕಡಿಮೆ ಬಡ್ಡಿಲಿ ಸಾಲ ಕೊಡ್ತವು , ಯಾವುದಕ್ಕೆಲ್ಲಾ ಸಬ್ಸೀಡಿ ಇದ್ದು , ಬೆಳೆಗೆ ಬೆಂಬಲ ಬೆಲೆ ಇದ್ದಾ ಹೇಳಿ ನೋಡ್ತವು.
ಬೇರೆ ಯಾವುದಕ್ಕೂ ಹೆಚ್ಚಾಗ್ಲಿ ಅದು ಯಾವುದನ್ನೂ ನೋಡ್ತಿಲ್ಲೆ.  ಮೊನ್ನೆ ಪೆಟ್ರೋಲ್ ಬೆಲೆ ಇಳ್ಸುಲೆ ಯಾವುದೇ ಕ್ರಮ ಇತ್ತಿಲ್ಲೆ. ಹಾಂಗೇ ಹೇಳಿ ಅದ್ರ ಬಗ್ಗೆ ಯಾರೂ ಮಾತಾಡಿದ್ದವಿಲ್ಲೆ. ವಿಷಯ ಇಷ್ಟೇ.
ನಮ್ಮ ಕೈಂದ ಎಷ್ಟು ಹೋವ್ತು , ನಮ್ಗೆ ಎಷ್ಟು ಸಿಕ್ಕುತ್ತು ಅಷ್ಟೇ ನಾವು ನೋಡುದು. ಅವಂಗುದೇ ಆ ಟ್ಯಾಕ್ಸ್ ಇದ್ರೂ,  ಎನಿಗೆ ಜಾಸ್ತಿ ಎಷ್ಟು ಕಟ್ ಆವ್ತಾ ಹೇಳಿ ಮೊದ್ಲು ನೋಡುದು ಅಲ್ದಾ?.
ಅದಿರ್ಲಿ ಈಗ ಬಸ್ಸಿಗೆ ಬಪ್ಪ ,
ಅವು ಮಾತಾಡ್ತಾ ಇದ್ದಿದ್ದವು , ಈ ಬಜೆಟ್ ನಂತ್ರ ಹಳ್ಳಿಯವ್ಕೆ ಹೆಚ್ಚು ಖುಷಿಯಡ. ಯಾಕೆ ಗೊತ್ತಿದ್ದ , ಇನ್ನು ಒಂದು ಪರ್ಸೆಂಟ್ ಬಡ್ಡಿಗೆ ಸಾಲ ತೆಗಿತ್ತವು.
ಯಾಕೆ ಗೊತ್ತಿದ್ದ  ಅದೇ ದುಡ್ಡಿನ ಅದೇ ಬ್ಯಾಂಕಿನ ಫಿಕ್ಸೆಡ್ ಹಾಕಿರೆ ಏನಿಲ್ಲೆ ಹೇಳಿರೂ  6 ಪರ್ಸೆಂಟ್ ಬಡ್ಡಿ ಕೊಡ್ತವು.
ಬ್ಯಾಂಕಿದೇ ದುಡ್ಡು ಬ್ಯಾಂಕೇ ಬಡ್ಡಿ ಕೊಡುದು. ನಮ್ಮದು ಒಂದತ್ತು ಸೈನ್ , ಎರಡು ಜನ ಜಾಮೀನು.ಅಷ್ಟೇ ಕೆಲ್ಸ. ಹೇಂಗಿದ್ದು ಐಡಿಯಾ?
– ಇದೇ ವಿಷಯವ ಆ ಬಸ್ಸಿಲಿ ಮಾತಾಡ್ತಾ ಇತ್ತಿದ್ದವು. ಇದುವರೆಗೂ ಹಾಂಗೇ ಮಾಡ್ತಿದ್ದವಡ.
ಆದ್ರೆ ಈಗೀಗಂತೂ ರೈತರಿಗೆ ಬೇಕಾಗಿ ಹೆಚ್ಚು ಹೆಚ್ಚು ಹಣ ಎರಡೂ ಸರಕಾರದೇ ಕೊಡ್ತಾ ಇದ್ದವು.
ಯಾಕೆ ಗೊತ್ತಿದ್ದ , ಎಲ್ಲವೂ ಹಳ್ಳಿ ಬಿಟ್ಟು ಹಳಿ ಹತ್ತುತ್ತಾ ಇದ್ದವು. ಹಾಂಗಾಗಿ ಮತ್ತೆ ಹಳಿಂದ ಇಳಿಲೆ ಬೇಕಾಗಿ ಏನೆಲ್ಲಾ ಪ್ಲಾನ್ ಮಾಡ್ತಾ ಇದ್ದವು. ಆದ್ರುದೇ ಹಳಿ ಹತ್ತಿದವು ಕೆಳ ಇಳಿತ್ತವಿಲ್ಲೆ, ಇಳುದ್ರದೇ ವಿಮಾನ ಹತ್ತುತ್ತವು,  ಇತ್ತ ಬತ್ತವಿಲ್ಲೆ ಹೇಳಿ ಎಂತೆಲ್ಲಾ ಪ್ಲಾನ್ ಮಾಡ್ತವು.!
ಮೊನ್ನೆ ಟಿವಿಲಿ ಬತ್ತಾ ಇತ್ತಿದ್ದು 2012 ಕ್ಕೆ ಆಹಾರದ ಕೊರತೆ ಬತ್ತಡ. ಹಾಂಗೆ ಹೇಳಿ ವಿಶ್ವಸಂಸ್ಥೆ ಹೇಳಿದ್ದಡ. ಇದೆಲ್ಲಾ ವಿಷಯ ಸರಕಾರಕ್ಕೆ ಮಂಡೆಬಿಸಿ ಸುರುವಾಯಿದಡ.
ಇದಕ್ಕಾಗಿ ಸರಕಾರದ ಈಗ ಎಂತೆಲ್ಲಾ ಸರ್ಕಸ್ ಮಾಡ್ತಾ ಇದ್ದು. ಕೃಷಿ ಬಜೆಟ್ ಅಡ. ಇನ್ನು ಏನೋ ಎನೋ. ಯಾವಾಗ್ಲೂದೇ ಇನ್ನು ಕೃಷಿ ಬಜೆಟ್ ಇದ್ದಡ.

ಅಂತೂ ರೈತರಿಗೆ ಒಳ್ಳೆಯ ದಿನ ಇದ್ದು ಹೇಳಿ ಆತು. ಹಾಂಗೇ ಹೇಳಿ ಅವು ಮಾತಾಡ್ತಾ ಇತ್ತಿದ್ದವು.
ಎಲ್ಲಾ ಮಾತಾಡಿ ಆದ ಮೇಲೆ  ಜನ ಬೇಕಲ್ದಾ ? ಹೇಳುವ ಪ್ರಶ್ನೆ ನಡೂವಿಲಿ ಬತ್ತಾ ಇತ್ತು.ಇದಿಕ್ಕೆ ಮಾತ್ರಾ ಉತ್ತರ ಇತ್ತಿಲ್ಲೆ.

ವಿಷಯ ಒಂದಂತೂ ಅಪ್ಪು ಈ ಸರಕಾರದ ಬಜೆಟ್ ಹೇಳಿರೆ , ನಮ್ಮ ಉದ್ದಾರ ಮಾಡ್ಲೆ ಅಲ್ಲ.ಅದು ಸುಮ್ನೆ ಜನ್ರ ಮಂಗ ಮಾಡ್ಲೆ. ಬಜೆಟ್ ಮಾಡಿ ಬಕೆಟ್ ಹಿಡಿಲೆ.
ನಾಡ್ದು ಓಟು ಬೇಕಲ್ದಾ ಹಾಂಗೆ.
ಅಂತೂ ಆ ಒಂದು ಪೇಪರ್ , ಆ ಬಸ್ಸು ಪ್ರಯಾಣ ಭಾರೀ ಖುಷಿ ಆತು. ಮಾತು ಕೇಳಿ ಕಳಿ ಮಂಡೆತುಂಬಿ ಹೋತು,ಅಷ್ಟಪ್ಪಗ ಕಂಕನಾಡಿ ಬಂತು ಆನು ಇಳ್ದೆ.
ಬಸ್ಸಿಲಿ ಬಜೆಟ್ . . ., 3.5 out of 10 based on 2 ratings
ಶುದ್ದಿಶಬ್ದಂಗೊ (tags): , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 11 ಒಪ್ಪಂಗೊ

 1. ಅರ್ಗೆ೦ಟು ಮಾಣಿ

  ಯಡಿಯೂರಪ್ಪ ನಿಜವಾಗಿ ಒಬ್ಬ ಉತ್ತಮ ರೈತ. ಆವ ರೈತ ಎ೦ಬ ಗದ್ದೆಯ ಮೇಲೆ ತನ್ನ “ರೈತ ಬಜೆಟ್” ಎ೦ಬ ಬಿಟಿ ಜಾತಿಯ ಬೀಜ ಬಿತ್ತಿ “ಕಾ೦ಚಾಣ” ಹೇಳ್ತ ಬೆಳೆಯ ಬೆಳೆಶುಲೆ ನೋಡಿದ್ದ ಈ ಸರ್ತಿ.

  ನೋಡ್ವ “ಕಾ೦ಚಾಣ” ಸಿಕ್ಕುತ್ತೊ ಅಥವಾ ಬಪ್ಪ ಚುನಾವಣೆ ಮಳೆಲಿ ಮತ ಕಾ(೦ಚಾ)ಣ ಆವ್ತೊ ಹೇಳಿ!

  ಇ೦ತಿ ನಿಮ್ಮ ಗೆ೦ಟ.

  [Reply]

  ಪುಚ್ಚಪ್ಪಾಡಿ ಮಹೇಶ

  ಪುಚ್ಚಪ್ಪಾಡಿ ಮಹೇಶ Reply:

  ನೋಡ್ವ ಎಂತ ಆವುತ್ತು ಹೇಳಿ.

  [Reply]

  VN:F [1.9.22_1171]
  Rating: 0 (from 0 votes)
 2. ಚೆನ್ನೈ ಬಾವ°
  ಚೆನ್ನೈ ಭಾವ

  ಚೊಕ್ಕ ಆಗಿದೆ ಭಾವ ನಿಂಗೊ ಹೇಳಿದ್ದು. ಎಂತಾರು ಪುರುಸೊತ್ತಿದ್ದ್ರೆ ನಾವು ನಮ್ಮ ಕಾರು ಬೈಕ್ ಓರಗೆ ಮಡ್ಗಿ ಬಸ್ಸ ಹಿಡುದ್ರೆ ನಮ್ಮ ಬಜೆಟ್ ಯೋಚಿಸಿಗೊಮ್ಬ್ಲಾವ್ತು ಆಚವ್ನ ಬಜೆಟ್ ತಿಳ್ಕೊಮ್ಬ್ಲಾವ್ತು. ಈಚವ್ನ ಪೇಪರ್ ಕೇಳಿ ತೆಕ್ಕೊಂಡು ಓದಿ ಬಿಟ್ಟಿಕ್ಕ್ಲೂಆವ್ತು.
  ದಿನಾ ಏ ಸಿ ಕಾರ್ಲಿ ಹೋಪೋರಿಂಗೆ ಒಂದು ಚೇಂಜ್ ಹೆರಾಣ ಗಾಳಿ, ಕೆಲವು ದೃಷ್ಯನ್ಗ್ಲೂಕಣ್ಣಿಂಗೂ ಹಬ್ಬ.

  ಅಂತೂ ಪುರ್ಸೊತ್ತು ಮಾಡ್ಕ್ಯೊಂಡು ಬಂದ್ರಿ ನೋಡಿ ಬೈಲಿಂಗೆ – ಒಪ್ಪಣ್ಣನ್ಗೂ ಖುಶೀ.

  [Reply]

  ಪುಚ್ಚಪ್ಪಾಡಿ ಮಹೇಶ

  ಪುಚ್ಚಪ್ಪಾಡಿ ಮಹೇಶ Reply:

  ಅದಲ್ಲ ಚೆನ್ನೈ ಭಾವ , ಬಸ್ಸಿಲಿ ಹೋಪ್ಗ , ನಾವು ಪೇಪರ್ ಒದ್ತಾ ಇದ್ರೆ , ಒಮ್ಮೆ ಪ್ಲೀಸ್. . . ಹೇಳ್ತವಲ್ದಾ.?.

  ರಿಯಾಕ್ಷನಿಗೆ ಥ್ಯಾಂಕ್ಸ್

  [Reply]

  VN:F [1.9.22_1171]
  Rating: 0 (from 0 votes)
 3. ಡಾಮಹೇಶಣ್ಣ
  ಮಹೇಶ

  ಮಹೇಶಣ್ನ! ದಾರಿಲ್ಲಿ ಕೇಳಿದ್ದದರ ಚ೦ದಕೆ ಬರದ್ದಿ.

  {ಇನ್ನು ಒಂದು ಪರ್ಸೆಂಟ್ ಬಡ್ಡಿಗೆ ಸಾಲ ತೆಗಿತ್ತವು.
  ಯಾಕೆ ಗೊತ್ತಿದ್ದ ಅದೇ ದುಡ್ಡಿನ ಅದೇ ಬ್ಯಾಂಕಿನ ಫಿಕ್ಸೆಡ್ ಹಾಕಿರೆ ಏನಿಲ್ಲೆ ಹೇಳಿರೂ 6 ಪರ್ಸೆಂಟ್ ಬಡ್ಡಿ ಕೊಡ್ತವು.}
  ಪೈಸೆ೦ದ ಪೈಸೆ ತೆಗವ ಜೆನ೦ಗೊ ಮಾ೦ತ್ರ ಹೀ೦ಗೆ ಆಲೋಚನೆ ಮಾಡುಗು. ಆದರೆ ರೈತರಿ೦ಗೆ ಆ ಬುದ್ಧಿ (!) ಇಷ್ಟರವರೆಗೆ ಬ೦ದಿರ. ಒಬ್ಬ ಕೃಷಿಕ ಪೈಸೆ ಸಿಕ್ಕಿರೆ ಮೊದಲು ತೋಟ-ದನಗಳ ಹಿತಕ್ಕೆ ಬೇಕಾದ ಹಾ೦ಗೆ ಖರ್ಚು ಮಾಡುಗು. ಅದು ಬಿಟ್ಟರೆ ಮನೆಯ ಅತ್ಯವಶ್ಯವಾದ ಕಾರ್ಯ೦ಗಕ್ಕೆ ಉಪಯೋಗುಸುಗು.

  [Reply]

  ಪುಚ್ಚಪ್ಪಾಡಿ ಮಹೇಶ

  ಪುಚ್ಚಪ್ಪಾಡಿ ಮಹೇಶ Reply:

  ರಿಯಾಕ್ಷನಿಗೆ ಥ್ಯಾಂಕ್ಸ್

  ಅದಪ್ಪು ಮಹೇಶಣ್ಣ , ನಿಂಗೋ ಹೇಳುವ ರೈತರು ಒಂದು ಕ್ಯಾಟಗರಿ , ಇದು ಅದಲ್ಲ ಪೈಸೆ :) . . ಕೃಷಿಕರ ಕತೆ

  [Reply]

  VN:F [1.9.22_1171]
  Rating: 0 (from 0 votes)
 4. ಶರ್ಮಪ್ಪಚ್ಚಿ
  ಶರ್ಮಪ್ಪಚ್ಚಿ

  ಮಹೇಶ,
  ಎನಗೆ ಕಾಂಬದು ಈ ಬಜೆಟ್ ಹೇಳಿರೆ ಒಂದು ಪ್ರಹಸನದ ಹಾಂಗೆ.
  ಬಜೆಟಿಲ್ಲಿ ಹೇಳಿದ್ದು ಎಷ್ತು ಕಾರ್ಯಗತ ಆಯಿದು ಹೇಳಿ ಒಂದು review ಎಲ್ಲಿ ಕೂಡಾ ಕಾಂಬಲೆ ಸಿಕ್ಕುತ್ತಿಲ್ಲೆ.
  ವಿರೋಧ ಪಾರ್ಟಿಯವು ಮೊದಲೇ ನಿಶ್ಚಯ ಮಾಡಿದ ಹಾಂಗೆ ತೆಗಳುವದು, ಆಢಳಿತ ಪಾರ್ಟಿಯವು ಇಷ್ಟರ ವರೆಗೆ ಕಂಡು ಕಾಣದ್ದ ಒಳ್ಳೆ ಬಜೆಟ್ ಹೇಳಿ ಪ್ರತಿ ವರ್ಷವೂ ಪಾಠ ಒಪ್ಪುಸುವದು. ಕೇಂದ್ರದ್ದು ಅದರೂ ಅದೇ, ರಾಜ್ಯದ್ದು ಆದರೂ ಅದೇ ಗಿಳಿ ಪಾಠ.

  [Reply]

  VA:F [1.9.22_1171]
  Rating: 0 (from 0 votes)
 5. ಮುಳಿಯ ಭಾವ
  ರಘುಮುಳಿಯ

  ಏ ಭಾವ,ಒಳ್ಳೆ ವಿಚಾರ.
  ಕೃಷಿಕರ ಸಾಲಗಾರರನ್ನಾಗಿ ಮಾಡಿ ಅದೆ೦ತ ಸಾದ್ಸುತ್ತವೋ ಈ ಸರ್ಕಾರದವ್ವು.ಕೃಷಿಕರು ಬೆಳದ ಬೆಳೆಗೆ ಸರಿಯಾದ ಕ್ರಯ ಸಿಕ್ಕಿರೆ ಸಾಕಲ್ಲದೋ?ಅದು ಬಿಟ್ಟು,ಈಗಾಣ ವೆವಸ್ಥೆಲಿ ಲಾಭ ಎಲ್ಲಾ ಮಧ್ಯವರ್ತಿಗೊ ತಿ೦ಬಲಾತು.
  ಬಜೆಟು ಹೇಳಿರೆ ವರ್ಷಾವಧಿ ಹಾಸ್ಯ ಆಯಿದು ಈಗ,ಅಲ್ಲದೋ?

  [Reply]

  VA:F [1.9.22_1171]
  Rating: 0 (from 0 votes)
 6. ಗೋಪಾಲಣ್ಣ
  Gopalakrishna BHAT S.K.

  ಲಾಯ್ಕ ಆಯಿದು.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಅಡ್ಕತ್ತಿಮಾರುಮಾವ°ಮಾಲಕ್ಕ°ಪೆರ್ಲದಣ್ಣರಾಜಣ್ಣಕೆದೂರು ಡಾಕ್ಟ್ರುಬಾವ°ದೊಡ್ಡಭಾವವಸಂತರಾಜ್ ಹಳೆಮನೆಪುಣಚ ಡಾಕ್ಟ್ರುಸಂಪಾದಕ°ಶೇಡಿಗುಮ್ಮೆ ಪುಳ್ಳಿದೊಡ್ಡಮಾವ°ಒಪ್ಪಕ್ಕಅಜ್ಜಕಾನ ಭಾವಗೋಪಾಲಣ್ಣಸುಭಗನೀರ್ಕಜೆ ಮಹೇಶಮಾಷ್ಟ್ರುಮಾವ°ಜಯಶ್ರೀ ನೀರಮೂಲೆಶುದ್ದಿಕ್ಕಾರ°ಕಜೆವಸಂತ°ಜಯಗೌರಿ ಅಕ್ಕ°ಚೆನ್ನೈ ಬಾವ°ಶರ್ಮಪ್ಪಚ್ಚಿಡೈಮಂಡು ಭಾವಶ್ರೀಅಕ್ಕ°ವೆಂಕಟ್ ಕೋಟೂರು
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ