ಇಷ್ಟು ಸೂತ್ರಂಗಳ ಜಾರಿಗೆ ತಂದರೆ ನಮ್ಮ ದೇಶ ಹೇಂಗಕ್ಕು???

March 5, 2011 ರ 11:00 amಗೆ ನಮ್ಮ ಬರದ್ದು, ಇದುವರೆಗೆ 14 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಇಷ್ಟು ಸೂತ್ರಂಗಳ ಜಾರಿಗೆ ತಂದರೆ ನಮ್ಮ ದೇಶ ಹೇಂಗಕ್ಕು:

 1. ದೇಶಲ್ಲಿಪ್ಪ ಎಲ್ಲಾ ರಾಜ್ಯಂಗಳ ಬರ್ಖಾಸ್ತುಗೊಳಿಶಿ ಅಖಂಡ ಭಾರತದ ನಿರ್ಮಾಣ ಮಾಡೆಕ್ಕು
 2. ದೇಶಲ್ಲಿಪ್ಪ ಎಲ್ಲಾ ರಾಜಕೀಯ ಪಕ್ಷಂಗಳ ತೆಗದು ಏಕ ಪಕ್ಷದ ಸ್ಥಾಪನೆ ಮಾಡೆಕ್ಕು.
 3. ಮೀಸಲಾತಿ ಹೇಳುವ ಕೆಟ್ಟ ಪದ ಇಪ್ಪಲೇ ಆಗ, ಅದರ ತೆಗದು ಹಾಕೆಕ್ಕು.
 4. ಯಾವ ಸರ್ಕಾರವೇ ಬರಲಿ,ಅವು ಜನಂಗಳ ಮೂಲಭೂತ ಸೌಕರ್ಯ ಕಲ್ಪ್ಸಕ್ಕೇ ಹೊರತು ಅವರ ಧಾರ್ಮಿಕ ವಿಚಾರಂಗವಕ್ಕೆ ತಲೆ ಹಾಕುಲಾಗ.
 5. ನಮ್ಮ ದೇಶ ಬೇರೆ ದೇಶಂಗಳ ಕಂಪೆನಿಗೆ ಕೊಡುವ ಆದ್ಯತೆಯ ನಮ್ಮ ದೇಶದ ಸಂಸ್ಕೃತಿ ಉಳಿಶಿ-ಬೆಳೆಶುವ ಗುಡಿ ಕೈಗಾರಿಕೆಗವಕ್ಕೆ ಕೊಟ್ರೆ ಜನಂಗವಕ್ಕೆ ಉದ್ಯೋಗ ಕೊಟ್ಟ ಹಾಂಗು ಆವ್ತು.
  ತೆರಿಗೆ ಕಟ್ಟುದೂ ತಪ್ಪುತ್ತು.

ಈ ಕೆಲಸಂಗ ಇಂದಿಂದ ನಾಳೆಗಾಗ. ಆದರೆ ಮನಸ್ಸು ಮಾಡ್ರೆ ನಮ್ಮಂದ ಹೇಳಿರೆ ದೇಶಲ್ಲಿಪ್ಪ ಮಾಣಿ-ಕೂಸುಗಂದ ಆಗದ್ದ ಕೆಲಸ ಇಲ್ಲೆ.
ಅಲ್ಲದೋ?
ನಿಂಗಳ ಅಭಿಪ್ರಾಯ ತಿಳಿಶಿ.

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 14 ಒಪ್ಪಂಗೊ

 1. ಚೆನ್ನೈ ಬಾವ°
  ಚೆನ್ನೈ ಭಾವ

  1.ದೇಶಲ್ಲಿಪ್ಪ ಎಲ್ಲಾ ರಾಜ್ಯಂಗಳ ಬರ್ಖಾಸ್ತುಗೊಳಿಶಿ ಅಖಂಡ ಭಾರತದ ನಿರ್ಮಾಣ ಮಾಡೆಕ್ಕು – ಎನಗೂ ಹೀಂಗೇ ಆಯೇಕು ಹೇಳಿ ಇದ್ದು ಕಿಟ್ಟಣ್ಣ. ಜೆಂಬಾರಲ್ಲಿ ಕೂದು ಮಾತಾಡಲೆ ಲಾಯಕ ಆವ್ತಪ್ಪೋ ಅಪ್ಪಚ್ಚಿಯ ‘ಮನುಷ್ಯಂಗೆ ಬೀಲ ಬಂದರೆ’ ಕಥೆ ಹಾಂಗೆ.

  2.ದೇಶಲ್ಲಿಪ್ಪ ಎಲ್ಲಾ ರಾಜಕೀಯ ಪಕ್ಷಂಗಳ ತೆಗದು ಏಕ ಪಕ್ಷದ ಸ್ಥಾಪನೆ ಮಾಡೆಕ್ಕು.- ಏಕ ಪಕ್ಷದ ಸರಕಾರ ಅಯೇಕು ಹೇಳಿ ಹೇಳುದಲ್ಲದ ನಿಂಗೊ. ಮದಾಲು, ಸಾಕಷ್ಟು ಬಲ ಇಲ್ಲದ ಪಕ್ಷಂಗೊ ಓಟಿಂಗೆ ನಿಂಬಲಾಗ , ಮಿತ್ರಪಕ್ಷ , ಕೂಟಣಿ ಹೇಳಿ ಒಪ್ಪಲೆಡಿಯ ಹೇಳಿ ಕಾನೂನು ತಿದ್ದುಪಡಿ ಮಾಡೆಡಡಾ.

  3.ಮೀಸಲಾತಿ ಹೇಳುವ ಕೆಟ್ಟ ಪದ ಇಪ್ಪಲೇ ಆಗ, ಅದರ ತೆಗದು ಹಾಕೆಕ್ಕು. – ಒಟಿಂಗೆ ನಿಂಬಲೆಡಿಗೋ, ನಿಂದರೂ ಡಿಪೋಸಿಟ್ ಸಿಕ್ಕುಗೋ.

  4.ಯಾವ ಸರ್ಕಾರವೇ ಬರಲಿ,ಅವು ಜನಂಗಳ ಮೂಲಭೂತ ಸೌಕರ್ಯ ಕಲ್ಪ್ಸಕ್ಕೇ ಹೊರತು ಅವರ ಧಾರ್ಮಿಕ ವಿಚಾರಂಗವಕ್ಕೆ ತಲೆ ಹಾಕುಲಾಗ. – ಧರ್ಮಕ್ಕೆ ಪೈಸೆ ಮಾಡ್ಲೆ ಎಡಿತ್ತರೆ ಧರ್ಮಕ್ಕೆ ಬಿಡ್ಲೆ ಮನಸ್ಸು ಬಕ್ಕೋ.
  5.ನಮ್ಮ ದೇಶ ಬೇರೆ ದೇಶಂಗಳ ಕಂಪೆನಿಗೆ ಕೊಡುವ ಆದ್ಯತೆಯ ನಮ್ಮ ದೇಶದ ಸಂಸ್ಕೃತಿ ಉಳಿಶಿ-ಬೆಳೆಶುವ ಗುಡಿ ಕೈಗಾರಿಕೆಗವಕ್ಕೆ ಕೊಟ್ರೆ ಜನಂಗವಕ್ಕೆ ಉದ್ಯೋಗ ಕೊಟ್ಟ ಹಾಂಗು ಆವ್ತು. – ಅಂಬಗ ಎನ್ನ ಕಂಪ್ಯೂಟರಿಂಗೆ ಕೆಲಸ ಇಲ್ಲೆ ಅಕ್ಕನ್ನೆ. ಸ್ಪೇನರ್ ಹಿಡ್ಕೊಂಡು ಬೋಲ್ಟ್ ತಿರುಗುಸ್ಕ್ಕಟ್ಟೆಯೋ ಇನ್ನು. ಹೇಳಿದಾಂಗೆ ಸ್ವಿಸ್ ಬ್ಯಾಂಕ್ ಮರದತ್ತೋ ನಿಂಗೊಗೆ.
  ತೆರಿಗೆ ಕಟ್ಟುದೂ ತಪ್ಪುತ್ತು – ತೆರಿಗೆ ಕಟ್ಟದ್ರೆ ಸರಕಾರ ನಡಸ್ಸುತ್ತೆಲ್ಲಿಂದ!

  ಕಿಟ್ಟಣ್ಣ, ಮೇಗೆ ಪೀಂಟಿದ್ದು ಅಂತೆ ಮಿನಿಯ. ನಿಂಗಳ ವಿಚಾರಕ್ಕೆ ಎನ್ನದೂ ಸಹಮತ. ಭಾರತಲ್ಲಿ ಇನ್ನೊಂದು ಸ್ವಾತಂತ್ರ್ಯ ಹೋರಾಟ ನಡೆಯದ್ದೆ ಎಡಿಯಲೇ ಎಡಿಯ ಇನ್ನೀಗ. – ‘ರಾಜಕಾರಣಿಗಳೇ ರಾಜಕೀಯ ಬಿಟ್ಟು ತೊಲಗಿ’. ಆರ ಹಿಡ್ಕೊಂಡು ಸುರುಮಾಡೋದು. ಇದಾ ಎನ್ನ ಕೈ ತೋರ್ಸಿಕ್ಕೇಡಿ. ನಾವು ಬೇಕಾರೆ ಒಟ್ಟಿನ್ಗೆ ಬಕ್ಕು.

  [Reply]

  VA:F [1.9.22_1171]
  Rating: 0 (from 0 votes)
 2. ಗೋಪಾಲಣ್ಣ
  Gopalakrishna BHAT S.K.

  ಏಕಪಕ್ಷ ಬೇಡ.ಅದರಿಂದ ಪ್ರಜಾಪ್ರಭುತ್ವ ಒಳಿಯ.
  ಮೀಸಲಾತಿ ಈಗ ಶಾಶ್ವತವಾಗಿ ಇಪ್ಪ ಹಾಂಗೆ ಕಾಣುತ್ತು.ಆದರೆ,ಅದು ಹಲವು ವರ್ಷದ ಅನಂತರ ಹೋಕು.
  ರಾಜ್ಯಂಗೊ ಆಡಳಿತಸೌಕರ್ಯಕ್ಕೆ ಬೇಕು.ಎಲ್ಲಾ ಒಂದೇ ಹಾಂಗೆ ಇರೆಕ್ಕು ಕಾಶ್ಮೀರಕ್ಕೆ ಕೊಟ್ಟ ಹಾಂಗೆ ವಿಶೇಷ ಸ್ಥಾನ ಬೇಡ.

  [Reply]

  VA:F [1.9.22_1171]
  Rating: +1 (from 1 vote)
 3. ಕಿಟ್ಟಣ್ಣ ಪಿ.ಐ

  ಗೋಪಾಲಣ್ಣ..ಪ್ರಜಾಪ್ರಭುತ್ವಕ್ಕೆ ಅದರಂದ ಧಕ್ಕೆ ಬಾರ..ಒಂದು ಆಡಳಿತ ಪಕ್ಷ ಇದ್ದರೆ ಅದರ ವಿರೋಧುಸುಲೆ ವಿರೋಧ ಪಕ್ಷದವು ಇಪ್ಪದು.ಅವು ಸರ್ಕಾರ ಮಾಡಿದ ಒಳ್ಳೆ ಕೆಲಸಂಗವಕ್ಕೆದೆ ಸಹಕಾರ ನೀಡದ್ರೆಆರಾರು ಎಂಥ ಮಾಡುದು?ಇತ್ಲಾಗಿ ಅಭಿವೃದ್ಧಿ ಆಪಲುದೆ ಬಿಡ್ತವಿಲ್ಲೆ.ನಾವೇ ನೋಡ್ತಾ ಇದ್ದಲ್ದಾ?
  ಮೀಸಲಾತಿ ಹೋಯಕ್ಕಾರೆ ನಾವು ಮುಚ್ಚಿಕೊಂಡು ಕೂಪಲೆ ಆಗ..
  ಎಲ್ಲ ರಾಜ್ಯಂಗದೆ ಇರಲಿ ಹೇಳಿ ನಿಂಗೊ ಹೇಳ್ತಾ ಇದ್ದಿ.
  ಉದಾ:ಕರ್ನಾಟಕ ತಮಿಳುನಾಡಿನ ನಡುಗೆ ಹಲವಾರು ಸಮಸ್ಯೆಗೊ ಇದ್ದು.ಈ ಬೆಳಗಾಂ ಸಮಸ್ಯೆ ನವಗುದೆ ಮಹಾರಾಷ್ಟ್ರಕ್ಕುದೆ ಇದ್ದು.ನಮ್ಮ ದೇಶದ ಒಳವೇ ಇಷ್ಟು ಪೆಟ್ಟಾಯ್ಕೊಂಡು ಇದ್ದರೆ ಬೇರೆ ದೇಶದವು ನಮ್ಮ ಮೇಲೆ ಯುದ್ಧಕ್ಕೆ ಬಂದರೆ ನಾವು ಒಮ್ಮತಲ್ಲಿ ಹೋರಾಡ್ಲೆ ಎಡಿಗ.ನಮ್ಮೊಳವೆ ಸರಿ ಇಲ್ಲದ್ರೆ ಹೇಂಗೆ?ಶುರುವಿಂಗೆ ಭಾರತೀಯರೆಲ್ಲಾ ಒಂದೇ ಹೇಳುದರ ತೋರ್ಸಿಕೊಡೆಕ್ಕು.ಇಲ್ಲದ್ರೆ ಚಃರು ಸಮಯಲ್ಲಿ ಭಾರತ ದೇಶಲ್ಲಿಪ್ಪ ಎಲ್ಲಾ ರಾಜ್ಯಂಗೊದೆ ಪುಟ್ಟ-ಪುಟ್ಟ ದೇಶಂಗೊ ಆಗಿರ್ತು.

  [Reply]

  VN:F [1.9.22_1171]
  Rating: 0 (from 0 votes)
 4. ಡಾಮಹೇಶಣ್ಣ
  ಮಹೇಶ

  ರಾಜ್ಯದ ವಿ೦ಗಡಣೆ ಇಪ್ಪದು ಆಡಳಿತ ಸುಲಭ ಅಪ್ಪಲೆ. ಆಡಳಿತದ ಕೇ೦ದ್ರ ಒ೦ದೇ ಆದರೆ–ಅದು ಒಳ್ಳೆದಿದ್ದರೆ ಒಳ್ಳೆದಕ್ಕು, ಹಾಳಾದರೆ ಸ೦ಪೂರ್ಣ ಹಾಳಕ್ಕು. ಭಾರತಲ್ಲಿ ವೈವಿಧ್ಯತೆ ಇಷ್ಟು ಇಪ್ಪಗ ಡೆಲ್ಲಿಲ್ಲಿಪ್ಪ ಕೇ೦ದ್ರಕ್ಕೆ ಪ್ರತಿಯೊ೦ದು ಮೂಲೆಯ ಸಮಸ್ಯೆ ಅರ್ಥ ಆಗ. ಅಧಿಕಾರದ ವಿಕೇ೦ದ್ರೀಕರಣ ತು೦ಬಾ ಅಗತ್ಯ ಇದ್ದು.

  [Reply]

  VA:F [1.9.22_1171]
  Rating: 0 (from 0 votes)
 5. ಮಂಗ್ಳೂರ ಮಾಣಿ

  ಕಿಟ್ಟಣ್ಣಾ,
  ೧. ನಿಂಗಳ ಈ ಮಾತಿಂಗೆ ಮಹೇಶಣ್ಣನ ಉತ್ತರಕ್ಕೆ ಎನ್ನ ಸಹಮತ ಇದ್ದು.
  ೨. ಏಕ ಪಕ್ಶ ಹೇಳಿ ಸ್ಥಾಪನೆ ಮಾಡಿರೆ, ಈಗ ಬೇರೆ ಬೇರೆ ಆಗಿ ತಿಂತಾ ಇಪ್ಪವಕ್ಕೆ ಒಟ್ಟಿಂಗೆ ಕೊಟ್ಟ ಹಾಂಗೆ ಆವುತ್ತಷ್ಟೆ. ಅದರ ಬದಲು ಈಗ ಇಪ್ಪದೇ ಸರಿ. ಒಬ್ಬ ತಪ್ಪಿರೆ ಇನ್ನೊಬ್ಬ ತಿದ್ದುತ್ತ ಹೇಳಿಪ್ಪ ಆಶೆ ಆದರೂ ಇದ್ದು.
  ೩. ಮೀಸಲಾತಿ ಹೇಳಿಪ್ಪದು ನಮ್ಮ ದೇಶಲ್ಲಿ ಮಾತ್ರ ಇಪ್ಪದಲ್ಲನ್ನೆ??? ಜಾತಿ ಆಧಾರಿತ ಮೀಸಲಾತಿಯ ಬದಲು ನಿಜವಾಗಲೂ ಯೋಗ್ಯತೆ ಇಪ್ಪವಕ್ಕೆ ಕೊಟ್ಟರೆ ಅಕ್ಕು. ( ಬೇಕಾರೆ ಮೀಸಲಾತಿ ಹೇಳಿಪ್ಪ ಶಬ್ದ ಇಡುಕ್ಕಿ, ಪ್ರೋತ್ಸಾಹ ಹೇಳಿ ಮಡುಗುವೊ).
  ೪. ಸರಕಾರಕ್ಕೆ ಸರ್ವಾಧಿಕಾರ ಇರಲೇಬೇಕಲ್ಲದೋ? ಇಲ್ಲದ್ದರೆ ಅದು ಸರಕಾರ ಹೇಂಗಪ್ಪದು?
  ೫. ಬೇರು ಗಟ್ಟಿ ಇರೆಕು ನಿಜ ಕಿಟ್ಟಣ್ಣಾ, ಹಾಂಗೆ ಹೇಳಿ ಎಲೆಗೊಕ್ಕೆ ರೋಗ ಬಾರದ್ದ ಹಾಂಗೂ ನೋಡೆಕಲ್ಲದೋ. ಗುಡಿ ಕೈಗಾರಿಕೆಗೆ ಆದ್ಯತೆ ಬೇಕೇ ಬೇಕು. ಆದರೆ ಇನ್ನೊಂದು ದೇಶದೊಟ್ಟಿಂಗೆ ಹೆಗಲಿಂಗೆ ಹೆಗಲು ಕೊಟ್ಟು ನೆಡವಲೂ ಗೊಂತುಬೇಕಲ್ಲದಾ?

  ಇದೆಲ್ಲ ಎನ್ನ ಮನಸ್ಸಿಂಗೆ ಈಗ ಕಂಡದಶ್ಟೆ ಆತೋ ತಪ್ಪಿದ್ದರೆ ಬೇಜಾರು ಮಾಡಿಕ್ಕೆಡ.
  ನಿನ್ನ ಲೇಖನದ ಕಾಳಜಿ ನಿಜವಾಗಲೂ ಮನಸ್ಸಿಂಗೆ ತಟ್ಟಿತ್ತು.
  ರಾಜಕಾರಿಣಿಗೊ ಸರಿ ಆದರೆ ಎಲ್ಲ ಸರಿ ಆವುತ್ತಪ್ಪು. ಅವರ ಚುನಾಯಿಸುದು ನಾವೇ ಆದ ಕಾರಣ ಮೊದಲು ನಮ್ಮ ನಮ್ಮ ನಾವು ನಾವು ನಾವು ಸರಿ ಮಾಡಿಗೊಂಡರೆಂತ?

  ಮತದಾನ ಕಡ್ಡಾಯವಾಗಲಿ – ಎಲ್ಲ ಸರಿ ಅಕ್ಕು. ಆಗಲೇ ಬೇಕು.

  [Reply]

  VA:F [1.9.22_1171]
  Rating: 0 (from 0 votes)
 6. ಚೆನ್ನೈ ಬಾವ°
  ಚೆನ್ನೈ ಭಾವ

  ಅಪ್ಪು ಮಹೇಶಣ್ಣನ ಮಾತು ಆನೂ ಅನುಮೊದುಸುತ್ತೆ. ಅಧಿಕಾರ ವಿಕೇಂದ್ರೀಕರಣ ಮಾಡದ್ರೆ ಮೂಲೆ ಮೂಲಯ ಆರ್ಥಿಕ ಪರಿಸ್ಥಿತಿ ಗೊಂತಪ್ಪದು ಕಷ್ಟ. ಏವ ಏವ ಮೂಲೆಂದ ಎಷ್ಟು ಹಾಕಿ ಎಷ್ಟು ಬಾಚುವದು ಹೇಳಿ ಅಂದಾಜು ಸಿಕ್ಕ.

  ಮಂಗ್ಳೂರ ಮಾಣಿ ಹೇಳ್ತಾಂಗೆ, ಏಕ ಪಕ್ಷ ಹೇಳಿ ಮಾಡಿರೆ ಒಬ್ಬನೇ ಕೂದು ತಿಂದಪ್ಪಗ ಬಾಕಿದ್ದವಕ್ಕೂ ಹೊಟ್ಟೆ ಕುತ್ತಲೆ ಸುರುವಕ್ಕು. ನಾವೂ ಒಬ್ಬನೇ ಕೂದು ತಿಂಬದಕ್ಕಿಂತ ೪ ಜೆನರ ಒಟ್ಟಿಂಗೆ ಕೂದು ಹಂಚಿ ತಿಂಬದರಲ್ಲಿ ಅಲ್ಲದೋ ಮಜಾ. ಇಲ್ಲದ್ರೆ ಹೊಗಳುಭಟ್ರ ತಯಾರು ಮಾಡುತ್ತೆಂಗೆ.

  ಸರಕಾರಕ್ಕೆ ಸಮಸ್ಯೆ ಪರಿಹರುಸಲೆ ಸರ್ವಾಧಿಕಾರ ಬೇಕೇ ಹೊರತು ಎಲ್ಲಾ ಸ್ವಾಹ ಮಾಡ್ಲೆ ಅಲ್ಲ.

  ದೇಹಕ್ಕೆ ಎಲ್ಲಾ ಅಂಗಂಗಳೂ ಹೇಂಗೆ ಅಗತ್ಯವೋ ಎಲ್ಲಾ ಕ್ಷೇತ್ರಾಭಿವೃದ್ಧಿ ಖಂಡಿತಾ ಅಗತ್ಯ. ಅಲ್ಲದ್ರೆ ಗಡಿಲಿ ಅದಾ ಎಲ್ಲೋದಿಕ್ಕೆ ಕಾದೊಂಡಿದ್ದವದಾ.ಅವು ಬೇಡಿ ತೆಗವಾಗ ನಾವೆಂತರ ಕೊತ್ತಳಿಕೆ ಹುಡುಕ್ಕುತ್ಸೋ.

  ರಾಜ ಕಾರಣಿಗೊ ಸರಿಯಪ್ಪದೋ! ನಡವಲಿದ್ದೋ?? ಎಂತರ ಇದು ಯಕ್ಷಗಾನ ಪ್ರಸಂಗವೊ – ನಾರದನೈತಂದ ವೈಕೊಂಟಕ್ಕೆ ಬಲಿ ಬಂದ ಪರಮಾತ್ಮ ಅವತಾರ ಎತ್ತಿದ ಹೇಳಿ ಅಪ್ಪಲೆ?!! ಅಂತೇ ನಾವೂ ಸರಿ ಆಯೆಕು ಆಯೇಕು ಹೇಳಿರೆ ಸಾಕೋ?. ಗುಂಪು – ಸಂಘ ಕಟ್ಟಿ ಹೋರಾಟ ಸುರುವಾಯೆಕು – ಆಂದ್ರಂದಲೂ ಬಲ, ಈಜಿಪ್ತಿಂಗೂ ಸಮ ಹೇಳ್ತಾಂಗೆ. ‘ಉತ್ತಿಷ್ಟ ಜಾಗ್ರತ ,……. ‘ ವಿವೇಕಾನಂದರ ಮಾತು ಪ್ರತಿಯೊಬ್ಬಂಗೂ ಗುಂಯ್ ಗುಟ್ಟೇಕು. ಕಡ್ಡಾಯ ಮತದಾನ ಹೇಳಿ ಮಾಡಿರೆ ಎಲ್ಲಾ ಸರಿ ಅಪ್ಪದು ಹೇಂಗೆ? ಮತ್ತೂ ಹಾಕೆಕ್ಕಪ್ಪದು ಬಂದು ನಾವೂ ಇದೇ ಖದೀಮಂಗೊಕ್ಕೆ ಅಲ್ಲದೋ ವೋಟು !! ಮದಾಲು ಅರ್ಹ ಉಮೇದುದಾರನ ನಿಲ್ಲಿಸಿ. ರಾಜಕೀಯ ಪಕ್ಷ ಕಟ್ಟಿ ನಿಂಬ ಬದಲು ಸ್ವತಂತ್ರನಾಗಿ ಚುನಾವಣೆ ನಿಲ್ಲುತ್ತಾಂಗೆ ಆಯೇಕು. ಇಲ್ಲದ್ರೆ ಪಾರ್ಟಿ ಲೆಕ್ಕಲ್ಲಿ ವೋಟು ಹಾಕಿ ಏವ ಪುರುಷಾರ್ಥ .

  ಎಲ್ಲಾ ಸರಿ ., ಆರು ಮಾಡುತ್ತು?? ! ಎನ್ನ ಬಗ್ಗೆ ಆಗಳೆ ಹೇಳಿದ್ದೆ ಹಾಂ.

  [Reply]

  ಮಂಗ್ಳೂರ ಮಾಣಿ

  ಮಂಗ್ಳೂರ ಮಾಣಿ... Reply:

  ಹೆ ಹೆ.. ಭಾವಾ….
  ಲಾಯಕ ಬರದ್ದಿ.
  ಆನು ಹೇಳಿದ ಮತದಾನ ಕಡ್ಡಾಯ ಅಪ್ಪಗ, negetive voting ಹೇಳ್ತದೊಂದು ಬೇಕು.
  ಓ ಅಂದೊಂದರಿ ಈ ಬಗ್ಗೆ ಎನ್ನ ಬ್ಲೊಗಿಲ್ಲಿ ೨ ಸಾಲು ಬರದಿತ್ತಿದ್ದೆ.
  ಓ ಇಲ್ಲಿಕ್ಕು.
  http://manglurmani.wordpress.com/2011/01/07/%E0%B2%B0%E0%B2%BE%E0%B2%9C%E0%B2%95%E0%B3%80%E0%B2%AF/

  [Reply]

  VA:F [1.9.22_1171]
  Rating: 0 (from 0 votes)
 7. ಕಿಟ್ಟಣ್ಣ ಪಿ.ಐ

  ಆನು ಹೇಳ್ತಾ ಸಾರ ಒಂದೇ..ನಮ್ಮ ದೇಶಲ್ಲಿಪ್ಪ ರಾಜಕಾರಣ್ ವ್ಯವಸ್ಥೆಗೊ,ಕೆಲವು ಕಾನೂನುಗೊ ಸರಿ ಇಲ್ಲೆ.ಅದರ ಸರಿ ಮಾಡೆಕ್ಕು ಹೇಳಿ.
  ವಾಜಪೇಯಿ,ನರೇಂದ್ರ ಮೋದಿ,ಸುರೇಶ್ ಕುಮಾರ್, ಇವರ ಬಗ್ಗೆ ಮಾತಾಡ್ಲೆ ಆರಿಂಗಾಋಉ ದಮ್ ಇದ್ದ್ ನಮ್ಮ ದೇಶಲ್ಲಿ.?ಇಲ್ಲೆ.ಏಕೆ?ಇವು ಸರಿಯಾಗಿದ್ದವು.ಹೀಂಗಿಪ್ಪವಕ್ಕೆ ಸರ್ವಾಧಿಕಾರ ಸಿಕ್ಕಿರೆ ದೇಶ ಹಾಳಕ್ಕ?..ಎನ್ನ ಅಭಿಪ್ರಾಯಲ್ಲಿ ಆಗ.

  [Reply]

  ಮಂಗ್ಳೂರ ಮಾಣಿ

  ಮಂಗ್ಳೂರ ಮಾಣಿ... Reply:

  ಖಂಡಿತಾ ಕಿಟ್ಟಣ್ಣಾ,
  ಆದರೆ ಸರ್ವಾಧಿಕಾರ ವ್ಯಕ್ತಿಗಲ್ಲ – ಸರಕಾರಕ್ಕೆ.

  [Reply]

  VA:F [1.9.22_1171]
  Rating: 0 (from 0 votes)
 8. ಬಾಲಣ್ಣ

  ಇದೆಲ್ಲಾ ಮಾತಾದ್ಲೆ ಒಟ್ಟಿಂಗೆ ಪುಳಿಂಕ್ಕೊಟ್ಟೇ ಬಿತ್ತು .. ಸರೀ ಹೊರುದ್ದದು.. ಬೇಕು ! ಹಾಂ .. ಅಲ್ಲ್ದೋ ಚೆನ್ನೈ ಭಾವಾ !

  ಕುರೆಯಂಗೊ ಕುರೆ ಮಾದ್ಲೆ ಕಾರಣ ನಾವು (ಆನೂ ಸೇರಿ) , ರಾಜಕೀಯ ಪ್ರವೇಶ ಮಾದ್ಲೆ ಹಿಂದೆ ನಿಂದದರಿಂದ !
  If the intellectuals of a country do not take active part in politics, they will be ruled by fools…” ಹೀಂಗೆಂತದೋ ಪ್ಲುತೋ ಮಹಾಶಯ ಹೇಳಿದ್ದು ಹೇಳಿ ಆನೂ ಭಾಶ್ಣ ಮಾಡ್ದ್ದೆ !

  ನಾವು ಸಣ್ಣ ಸಣ್ಣ ಕೆಲಸಂಗಳೆ ಈಗಲೇ ಮಾಡಲೆ ಸುರು ಮಾಡುವೋ …ತಪ್ಪದ್ದೇ ಓಟು ಹಾಕುವೋ.. ನಮ್ಮ ಪರಿಚ್ಯದವು, ಪೇಟೆಗಳಲ್ಲಿ ಇಪ್ಪವು.. ವೋಟು ಹಾಕದ್ದೇ ಇಪ್ಪವರ ರಜಾ ಕುಟ್ಟುವೊಂ .. ಸರಿಯಪ್ಪ್ಲೂ ಸಾಕು.!

  [Reply]

  ಮಂಗ್ಳೂರ ಮಾಣಿ

  ಮಂಗ್ಳೂರ ಮಾಣಿ... Reply:

  ಖಂಡಿತಾ ಖಂಡಿತಾ… ಒಪ್ಪಿಗೆ.

  [Reply]

  VA:F [1.9.22_1171]
  Rating: 0 (from 0 votes)
 9. ಮುಣ್ಚಿಕಾನ ಭಾವ

  ಚರ್ಚೆ ಮಾಡುಲೆ ಒಳ್ಳೆಯ ವಿಷಯ. ಆದರೆ ಜಾರಿಗೆ ತಪ್ಪದು ಅಷ್ಟು ಸುಲಭ ಇಲ್ಲೆ. “ಪುಸ್ತಕದ ಬದನೆಕಾಯಿ” ಹೇಳ್ತವಲ್ಲದ… ಹಾಂಗೆ… :-)
  ಒಪ್ಪಂಗಳೊಟ್ಟಿಂಗೆ…

  [Reply]

  ಮಂಗ್ಳೂರ ಮಾಣಿ

  ಮಂಗ್ಳೂರ ಮಾಣಿ... Reply:

  ಅಪ್ಪು ಪ್ರದೀಪಣ್ಣ. ಪುಸ್ತಕಲ್ಲಿ ಇದ್ದರೇ ಚೆಂದ.
  ಆದರೆ ಕಾನೂನು ಪುಸ್ತಕಲ್ಲಿ ಇಪ್ಪಗ ಪಾಲನೆ ಮಾಡಲೇಬೇಕಾವ್ತು.

  [Reply]

  VA:F [1.9.22_1171]
  Rating: 0 (from 0 votes)
 10. ಮುಳಿಯ ಭಾವ
  ರಘುಮುಳಿಯ

  ಒಳ್ಳೆ ವಿಚಾರಧಾರೆ.
  ಬಾಲಣ್ಣನ ಮಾತು ನಿಜ.ಬದಲಾಯೆಕ್ಕಾದ್ದದು ನಾವು.ನಮ್ಮ ಎದುರು ಕಾ೦ಬ ಭ್ರಷ್ಟಾಚಾರವ ತಡವ ಪ್ರಯತ್ನ ಮಾಡೆಕ್ಕು.ಚುನಾವಣೆಲಿ ಭಾಗವಹಿಸಿ ಯೋಗ್ಯರ ನಮ್ಮ ಪ್ರತಿನಿಧಿಯಾಗಿ ಆಯ್ಕೆ ಮಾಡೆಕ್ಕು.
  ಕಿಟ್ಟಣ್ಣ ಹೇಳಿದ ಪ೦ಚಸೂತ್ರಲ್ಲಿ ಕೆಲವು ಸರಿಯಾಗಿದ್ದು.

  ೧. ಒ೦ದನೆಯದು ಸಾಧ್ಯ ಇಲ್ಲೆ.ಮಹೇಶ ಹೇಳಿದ ಹಾ೦ಗೆ ಅಧಿಕಾರದ ವಿಕೇ೦ದ್ರೀಕರಣ ಇರೆಕ್ಕನ್ನೇ.
  ೨.ಮೂರರಿ೦ದ ಹೆಚ್ಚು ರಾಜಕೀಯ ಪಕ್ಷ ಇಪ್ಪಲಾಗ.
  ೩. ಆರ್ಥಿಕವಾಗಿ ಹಿ೦ದೆ ಇಪ್ಪೋರಿ೦ಗೆ ಮೀಸಲಾತಿ ಇರಳಿ.ಇದು ಶಿಕ್ಷಣಲ್ಲಿ ಮುಖ್ಯವಾಗಿರಳಿ.
  ೪.ಸರಿಯಾದ ಮಾತು.ಪಕ್ಷದ ಮುಖ್ಯಸ್ಥರು ದೇಶ ಒಳ್ಳೆದಾಯೆಕ್ಕು ಹೇಳಿ ಪ್ರಯತ್ನ ಮಾಡುವವು ಆದರೆ ಯೋಗ್ಯರನ್ನೇ ಚುನಾವಣೆಗೆ ನಿಲ್ಲುಸುಗು,ಅಲ್ಲದೋ?
  ೫.ಕಷ್ಟವೇ.ಆದರೆ ಆಡಳಿತಲ್ಲಿ ಸ್ವಹಿತ೦ದ ದೇಶಹಿತವ ಬಯಸುವ ದಿನ ಬ೦ದಪ್ಪಗ ನಾವು ಏಳಿಗೆ ಕಾ೦ಗು.
  ನಮ್ಮ ದೇಶ ಅನೇಕತೆಲಿ ಏಕತೆ ಹೇ೦ಗೆ ಸಾಧ್ಯ ಇದ್ದು ಹೇಳಿ ಲೋಕಕ್ಕೆ ತೋರುಸುವ ಏಕೈಕ ವೆವಸ್ಥೆ.ಆದರೆ ಭ್ರಷ್ಟ ಆಳ್ವಿಕೆ೦ದಾಗಿ ಏಳಿಗೆ ಕಾಣುತ್ತಾ ಇಲ್ಲೆ,ಅಷ್ಟೆ.ಕೃಷಿಗೆ ಸಿಕ್ಕೆಕ್ಕಾದ ಪ್ರಾಮುಖ್ಯತೆ ಇನ್ನೆಲ್ಲಿಗೋ ಹೋಯಿದು,ಕಡೆ೦ಗೆ ಪೈಸೆಯ ತಿ೦ಬಲೆಡಿತ್ತಿಲ್ಲೆ ಹೇಳಿ ಗೊ೦ತಪ್ಪಗ ತಡವಕ್ಕು.
  ನಮ್ಮ ಪ್ರತಿನಿಧಿಗೊಕ್ಕೆ ಪೆಟ್ಟಿನ ಹೆದರಿಕೆ ಬೇಕು.
  ಇ೦ದು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಹೋದರೂ ವೇದಿಕೆಲಿ ಈ ರಾಜಕಾರಣಿಗಳನ್ನೇ ಕಾ೦ಬದು,ಅವಕ್ಕೆ ಭಾಷೆಯೂ,ಇಲ್ಲೆ,ಸಾಹಿತ್ಯವೂ ಇಲ್ಲೆ.ಅಯೋಗ್ಯ೦ಗೊಕ್ಕೆ ನಾಚಿಕೆ ಮರ್ಯಾದೆ ಮದಲೇ ಇಲ್ಲೆ.ಇದರ ನಾವು ವಿರೋಧಿಸೆಕ್ಕು.ನಮ್ಮದೆಲ್ಲಾ ಮಾತಿಲಿಯೇ ಆತು,ಕಾರ್ಯರೂಪಕ್ಕೂ ಬರೆಕ್ಕು,ಇದೆಲ್ಲಾ.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಶೀಲಾಲಕ್ಷ್ಮೀ ಕಾಸರಗೋಡುದೊಡ್ಮನೆ ಭಾವಮುಳಿಯ ಭಾವಪೆರ್ಲದಣ್ಣಕೊಳಚ್ಚಿಪ್ಪು ಬಾವಉಡುಪುಮೂಲೆ ಅಪ್ಪಚ್ಚಿಸುಭಗಹಳೆಮನೆ ಅಣ್ಣವಿಜಯತ್ತೆಜಯಗೌರಿ ಅಕ್ಕ°ಶಾ...ರೀಪೆಂಗಣ್ಣ°ದೊಡ್ಡಮಾವ°ನೆಗೆಗಾರ°ಪುಟ್ಟಬಾವ°ರಾಜಣ್ಣಅಜ್ಜಕಾನ ಭಾವಕಳಾಯಿ ಗೀತತ್ತೆಅಕ್ಷರ°ಬಟ್ಟಮಾವ°ದೊಡ್ಡಭಾವನೀರ್ಕಜೆ ಮಹೇಶಬಂಡಾಡಿ ಅಜ್ಜಿದೀಪಿಕಾವಸಂತರಾಜ್ ಹಳೆಮನೆಕೇಜಿಮಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ