ಎಲಿಯಿಂದಲೇ ಮಾರ್ಜಾಲದ ಕಗ್ಗೊಲೆ … !

May 26, 2011 ರ 4:59 pmಗೆ ನಮ್ಮ ಬರದ್ದು, ಇದುವರೆಗೆ 32 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ತಲೆಬರಹ ನೋಡಿ ಇದೇವದೋ ಹಳದಿ ಪೇಪರಿನ ಹಳಸಲು ಕತೆ ಹೇಳಿ ಗ್ರೇಶೆಕು ಹೇಳಿ ಇಲ್ಲೆ.   ಹಿಂದೆ ಅಂದು ಒಂದು ದಿನ ಪುಚ್ಚಗೆ ಗಂಟೆ ಕಟ್ಳೆ ಒಳ್ಳೆ ಪ್ಲಾನು ಮಾಡಿ,  ನೆಂಟರಿಷ್ಟರ ಎಲ್ಲಾ ದೆನಿಗೇಳಿ ಒಂದು ಕಾಪಿಯೂ ಕೊಡದ್ದೆ ಮೀಟಿಂಗು ಮಾಡಿ, ಗಂಟೆ ಕಟ್ಟುತ್ತದು ಆರು ಹೇಳಿ ತಲೆ ಬೆಶಿ ಮಾಡಿ ಪುಸ್ಕ ಆದ ಎಲಿ ಇದಲ್ಲ.  ಇದು ಕಲಿಕಾಲದ ಕಲ್ತ ಎಲಿ.  ಆಧುನಿಕ ಕಾಲಕ್ಕೆ ಹೊಂದೆಂಡು,  ಹೊಸ ಸಂಶೋಧನೆಗಳ ಎಲ್ಲ ಅರದರದು ಕುಡುದು ಪೂರ್ತಿ ಅಪ್-ಟು-ಡೇಟ್ ಆದ ಮೋಡರ್ನ್ ಎಲಿ,  ತನ್ನ ಬುದ್ದಿವಂತಿಕೆ, ಮಾಯಾಜಾಲಲ್ಲಿ ಅದರ ಆಜನ್ಮ ವೈರಿ ಮಾರ್ಜಾಲವ ಬಲಿ ತೆಗದ ನೈಜ ಕಥೆ.  ಇದು ಕಥೆ ಅಲ್ಲ, ನಿಜ ಜೀವನದ ಸತ್ಯ ಘಟನೆ.

ಎನಗೆ ಸಣ್ಣಗಿಪ್ಪಗಳೇ ಎಲಿಗಳ ಒಟ್ಟಿಂಗೆ ಎಂತೊ ಒಂದು ರೀತಿಯ ಸಂಬಂಧ.  ಹಳ್ಳಿಯ ಮನೆಗಳಲ್ಲಿ ಎಲಿ, ಹೆಗ್ಗಣಂಗಳ ಕಾಟ ನಿಂಗೊಗೆಲ್ಲ ಗೊಂತಿದ್ದ ಹಾಂಗೆ ಸರ್ವೇ ಸಾಮಾನ್ಯ.   ಕೃಷಿಕರಿಂಗೆ, ಎಲಿಗೊ ಹೇಳಿರೆ ಪರಮ ಮಿತ್ರನುದೆ ಅಪ್ಪಾಡ.  ಹಾಂಗೆ ಎಲಿಗಳ ಸಂಖ್ಯೆ ಹೆಚ್ಚಾದರೆ, ಪರಮ ಶತ್ರುದೆ ಅಕ್ಕು.  ಬೆಳೆಗವಕ್ಕೆ ತೊಂದರೆ ಕೊಡ್ತ ಕ್ರಿಮಿಕೀಟಂಗಳ ಮುಗುಶಲೆ ಎಲಿಗೊ ಬೇಕೇ ಬೇಕು.  ಕೆಲವೊಂದರಿ ಕುಟುಂಬ ಯೋಜನೆ ಹೇಳ್ತದಿಲ್ಲದ್ದೆ,  ಎಲಿಗಳ ಸಂತತಿ ಬೆಳದರೆ ಅದರಷ್ಟು ಪೊದ್ರ ಬೇರೆ ಇಲ್ಲೆ. ಏವ ಕಿಂದರಿ ಜೋಗಿ ಬಂದರುದೆ ಎಲಿಗಳ ನಿಯಂತ್ರಣ ಮಾಡ್ಳೆ ಅದಕ್ಕೆಡಿಯ.

ಆನು ಇಷ್ಟುದ್ದ ಇಪ್ಪಗಳೇ ಎಲಿಗಳ ದರ್ಶನ ಸೌಭಾಗ್ಯವ ತೆಕ್ಕೊಂಡವ.  ಅಟ್ಟದ ಮೂಲೆಲಿ ಕತ್ತಲೆಲಿ ಎಲ್ಲೋ ಎಲಿಗೊ ಮಡಗಿದ, ಇನ್ನೂ ಕಣ್ಣು ಬಿಡದ್ದ, ಕೆಂಪು ಕೆಂಪು ಎಲಿ ಕುನ್ನಿಗೊ.  ಮೈಲಿ ಒಂದಿಷ್ಟೂ ರೋಮ ಇಲ್ಲದ್ದೆ,  ಪೇಟೆಲಿ ಸಿಕ್ಕುವ ಗೋಬಿ ಮಂಚೂರಿ ಹಾಂಗೆ ಮೆತ್ತ  ಮೆತ್ತಗಿನ ಮೈಯ ಇಲಿ ಕುಂಞಗೊ. ನೋಡ್ಳೆ ಎಷ್ಟು ಚೆಂದ.  ಅವುಗಳ ಕೊಲ್ಲಲುದೆ ಆರಿಂಗು ಮನಸ್ಸು ಬಾರ.    ಆದರೆ,  ಅವುಗಳ ಅಪ್ಪ/ಅಮ್ಮ/ಅಜ್ಜಂದ್ರು ಕೊಡ್ತ ಪೊದ್ರವ ಮನಸ್ಸಿಲ್ಲೇ  ಗ್ರೇಶಿಕೊಂಡರೆ..   ಯಬ್ಬಾ.  ಅದೆಷ್ಟು ಅಮೂಲ್ಯ ಪುಸ್ತಕಂಗೊ, ಅಪರೂಪಕ್ಕೆ ಎನ್ನ ಅಪ್ಪ ಎನಗೆ ತಂದ ಬಣ್ಣ ಬಣ್ಣದ ಚೆಂದದ ಅಂಗಿ ಚಡ್ಡಿ,  ಅಬ್ಬೆ ಎಂಗೊಗೆ  ಮಾಡಿ ಮಡಗಿದ  ಸಿಹಿತಿಂಡಿ, ಚಕ್ಕುಲಿಗೊ,  ಶೇಖರುಸಿ ಮಡಗಿದ ಬತ್ತಕಾಳು ಎಲ್ಲವುದೆ ಅವುಗಳ ಬಾಯಿಗೆ ರಸಗವಳ ಆಗಿ ಆಹುತಿ ಆಗೆಂಡು ಇದ್ದತ್ತು.  ಬಾಳೆ ಬುಡ, ಕೆಸವಿನ ಬುಡ, ತರಕಾರಿ ಸಾಲುಗೊ ಎಲ್ಲ ಎಲಿ ಹೆಗ್ಗಣಂಗಳ ಸಾಮ್ರಾಜ್ಯ ಆಗಿತ್ತು.  ಇದರ ಎಲ್ಲ  ಮನಸ್ಸಿಲ್ಲಿ  ಗ್ರೇಶೆಂಡು,  ಮನಸ್ಸಿಲ್ಲಿ ಕೋಪ ತರುಸೆಂಡು,    ಹರುದ ವಸ್ತ್ರದ ಎಡೆಲಿ ಸುಖವಾಗಿ ಮನುಗೆಂಡಿದ್ದ,  ಎಂತೂ ಅರಡಿಯದ್ದ  ಎಲಿಗಳ ಆ ಸಣ್ಣ ಕಂದಮ್ಮಂಗಳ ಕಣ್ಣುಗವಕ್ಕೆ ಕೋಲಿಲ್ಲಿ ಕುತ್ತಿ ಕುತ್ತಿ, ಮತ್ತೇವತ್ತುದೆ ಅವು ಕತ್ತು ಎತ್ತದ್ದ ಹಾಂಗೆ ಮಾಡೆಂದು ಇದ್ದಿದ್ದೆಯೊ.  ಅವುಗಳ ನೀರಿನ ಬಾಲ್ದಿಗೆ ಹಾಕಿ,  ಮುಳುಂಗುಸಿ ಕೊಂದೊಂಡು ಇದ್ದಿದ್ದೆಯೊ.  ಅದರಲ್ಲೇ ಎಂತದೋ ವಿಕೃತ ಆನಂದ.  ಆ ಸಂದರ್ಭಲ್ಲಿ, ಕಂಸ ಮಹಾರಾಜನ ಅಪರಾವತಾರ ಎಂಗಳದ್ದಾಗಿತ್ತು. ಎಲಿಗಳ ಹಿಡಿಯಲೇ ಬೇಕಾಗಿ ವಿಶೇಷವಾಗಿ ತಯಾರಾದ ಬೋನುಗೊ, ವಿಷ ವಸ್ತುಗೊ ಎಲ್ಲ ಮನೆಲಿ ಏವತ್ತುದೆ ಇಕ್ಕು.

ಈಗ ಜವ್ವನಿಗರೆಲ್ಲ ಹಳ್ಳಿ ಬಿಟ್ಟು ಪೇಟಗೆ ವಲಸೆ ಹೋವ್ತಾ ಇದ್ದದು ಸರ್ವೇಸಾಮಾನ್ಯ ಆಗಿ ಬಿಟ್ಟಿದು.  ಅವು ಒಳ್ಳೆ ಉದ್ಯೋಗವ ಹುಡುಕ್ಕೆಂಡು ಪಟ್ಟಣಂಗಳ  ಸೇರುತ್ತಾ ಇದ್ದವು.  ಕೃಷಿಭೂಮಿಗೊ ಎಲ್ಲ ನಾಶ ಆವ್ತಾ ಇದ್ದು.  ಇದೇ ರೀತಿ ಈಗ, ಈ ಎಲಿಗವಕ್ಕುದೆ ಪೇಟೆಯ ವ್ಯಾಮೋಹ ಬಯಿಂದೋ ಹೇಳಿ ಅನಿಸುತ್ತಾ ಇದ್ದು.   ಕೃಷಿಭೂಮಿ ಖಾಲಿ ಆಗಿ ಅಪ್ಪಗ, ಎಲಿಗಳ ಸಂಖ್ಯೆಯುದೆ ಜಾಸ್ತಿ ಅಪ್ಪಗ,  ಎಲಿಗೊ ಪೇಟಗೆ ಹೋಗದ್ದೆ ಎಂತ ಮಾಡ್ತವು ? ಹಳ್ಳಿಯ ಭತ್ತ,  ಕಾಳು ಹೊಟ್ಟು,  ಕೀಟಂಗಳ ತಿಂದು ತಿಂದು ಬೇಜಾರು ಆಗಿ, ಪೇಟೆಯ ಸಿಹಿತಿಂಡಿ, ಬರ್ಗರು,  ರೆಡೀ ಟು ಈಟ್ ಆಹಾರಂಗಳ ಆಕರ್ಷಣೆ ಅವಕ್ಕುದೆ ಬಂದಿಪ್ಪಲೂ ಸಾಕು.  ಎಲಿಗೊ ಎಲ್ಲ ಪಟ್ಟಣಕ್ಕೆ ಬಂದು,  ಇಲ್ಲೇ ಮನೆಗಳಲ್ಲಿ ,  ಬಾಡಿಗೆಯುದೆ ಕೊಡದ್ದೆ (!)  ಬಿಡಾರ ಮಾಡಿ, ವಂಶೋದ್ಧಾರ ಮಾಡೆಂಡಿದವು. ಅವುಗಳ ಮಕ್ಕೊ  ಮರಿಗೊ ಎಲ್ಲ ಬೆಳದು ಪೇಟೆಯ ಮಕ್ಕಳೇ ಆಗಿ ಹೋಯಿದವು.  ಅವಕ್ಕೆ, ಹಳ್ಳಿಯ ಗೆಣಂಗು, ಭತ್ತ,  ಮುಂಡಿ ಗೆಂಡೆ,  ಸೆಡ್ಕಂಗೊ ಹೇಳಿರೆ ,  ನರ್ಸರಿ ಮಕ್ಕೊ ಹೇಳ್ತ ಹಾಂಗೆ ,  I don’t know ಹೇಳಿ ಆಯಿದು !   ಬುದ್ದಿವಂತಿಕೆಯುದೆ ಸಾಕಷ್ಟು ಬೆಳದ್ದು.  ಪೇಟೆಯ ಎಲಿಗಳ ಜೀವನ ಶೈಲಿಯುದೆ ಪೇಟೆಗೆ ಬೇಕಾದ ಹಾಂಗೆ ಬದಲಾಯಿದು.

ಹಿಂದಾಣ ಕಾಲಲ್ಲಿ ಆದರೆ, ಸಾಮಾನ್ಯ ದರ್ಜೆಯ ಸಿನಿಮಾ ಟಾಕೀಸಿಲ್ಲಿ ಮಾಂತ್ರ ಎಲಿಗೊ ಕಾಂಬಲೆ ಸಿಕ್ಕೆಂಡು ಇತ್ತು.  ಬದಿಯಡ್ಕದ ದೇವಿ ಟಾಕೀಸು, ಕಾಸರಗೋಡಿನ ಮುಳಿ ಹಾಕಿದ ಗೀತಾ ಟಾಕೀಸಿಂಗೆ ಹೋದರೆ,  ಸಿನೆಮಾ ಆವ್ತ ಎಡಕ್ಕಿಲ್ಲಿ ಇವರ ಕಾರ್ಬಾರುದೆ ಕಾಂಬಲೆ ಸಿಕ್ಕುಗು.  ಆ ಕತ್ಲೆಲಿಯುದೆ ಎಲಿಗಳ ಪಿಳಿ ಪಿಳಿ ಕಣ್ಣುಗೊ ಹೊಳಗು.  ಈಗಾಣ ಎಲಿಗವಕ್ಕೆ, ಮಲ್ಟಿಪ್ಲೆಕ್ಸ್ ಥಿಯೇಟರುಗಳೆ ಆಯೆಕು !  ಏಸಿಲಿ ಕೂಲಾಗಿ ಓಡಾಡೆಂಡು, ಇಂಗ್ಳಿಷು ಪಿಕ್ಚರ್ ನೋಡ್ತಾ, ಪೈಸೆಕ್ಕಾರಂಗಳ ಮಕ್ಕೊ,  ಯುವಜೋಡಿಗೊ ಇಡುಕ್ಕಿದ ತಿಂಡಿ ಚೂರುಗಳ ತಿಂಬದರಲ್ಲಿ ಇಪ್ಪ ಮಜಾ, ಹಳೆ ಟಾಕೀಸುಗಳಲ್ಲಿ ಬೀಡಿ ವಾಸನೆಯ ಬೆಶಿ ಬೆಶಿ ವಾತಾವರಣಲ್ಲಿ ಎಲ್ಲಿ ಇಕ್ಕು ಹೇಳಿ. ಗೋಡೌನ್ ಗಳಿಂದ ಬಜಾರುಗಳೇ ಅವಕ್ಕೆ ಇಷ್ಟ.  ಕಂಪ್ಯೂಟರಿಂಗುದೆ ಎಲಿಗವಕ್ಕುದೆ ಇದ್ದ ಸಂಬಂಧ ನಿಂಗೊಗೆಲ್ಲ ಗೊಂತಿದ್ದು.  ಮದಲಾಣ ಹಾಂಗೆ ಈಗ ಮೌಸು ಇಲ್ಲದ್ದ ಗಣಕಯಂತ್ರವ ಊಹಿಸಲೂ ಎಡಿಯ.  ಎಲಿ, ಗಣಪತಿ ಚಾಮಿಯ ವಾಹನವುದೆ ಅಪ್ಪು. ಹಾಂಗಾಗಿ ಈ ಎಲಿಗವಕ್ಕೆ ರಜಾ ಹಾಂಕಾರ ಜಾಸ್ತಿ ಆಯಿದು ಹೇಳ್ತ ಅಭಿಪ್ರಾಯ ಎನ್ನದು.

ಎಂಗಳ ಬ್ಯಾಂಕಿನ ಐಟಿ ವಿಭಾಗಲ್ಲಿಯುದೆ ಕೆಲವೊಂದು ಸರ್ತಿ ಎಲಿಗಳ ಕಾರ್ಬಾರು ನೆಡೆತ್ತು.  ಇರುಳಿಡೀ ಕಂಪ್ಯೂಟರು ಮೌಸಿನ ಒಟ್ಟಿಂಗೆ,  ಈ ಎಲಿಗಳ ಸರಸ ಸಲ್ಲಾಪ ! ಉದಿಯಪ್ಪಗ ಎಂಗೊ ಬಂದು ನೋಡಿರೆ, ಎಂಗಳ ಕಂಪ್ಯೂಟರಿನ ಕೀ ಬೋರ್ಡ್ ಹತ್ರೆ , ಮೇಜಿನ ಮೇಲೆ ಎಲ್ಲ ಕಾಗದ ಚೂರುಗೊ, ಎಲಿಪಿಟ್ಟೆಗೊ.  ಕ್ಲೀನು ಮಾಡ್ತ ಕೆಲಸ ಎಂಗಳದ್ದು.  ಕೆಲವೊಂದರಿ ವಯರುಗಳುದೆ ಕಟ್.  ಅದು ಹೇಂಗೆ access card ಇಲ್ಲದ್ದೆ,  ಸೆಕ್ಯೂರಿಟಿಯವರನ್ನೂ ದಾಂಟೆಂಡು ಬತ್ತೋ ದೇವರಿಂಗೆ ಗೊಂತು !

ಕ್ರೈಂ ಸ್ಟೋರಿ ಹೇಳ್ತೆ ಹೇಳಿ ಹೆರಟ ಈ ಬೊಳುಂಬು ಮಾವನ ಪೀಠಿಕೆಯೇ ಮುಗುದ್ದಿಲ್ಲೇನೆ ಹೇಳಿ ಮುಳಿಯ ಭಾವ ಹೇಳ್ತನಾಯ್ಕು.  ಚೆಂಡೆ ಪೆಟ್ಟು ಇಲ್ಲದ್ದೆ, ಸ್ತ್ರೀ ವೇಷ, ಪುಂಡು ವೇಷ ಎಲ್ಲ ಬಾರದ್ದೆ ಯಕ್ಷಗಾನ ಹೇಂಗೆ ಸುರು ಆವ್ತದು ? ನಿಂಗಳೇ ಹೇಳಿ. ಕಥೆಗೆ ಉಪಕಥೆ ಇದ್ದರೇ ಚೆಂದ, ಎಂತ ಹೇಳ್ತಿ ?

ಪೇಟೆಯ ಎಂಗಳ ಮನೆಲಿಯುದೆ ಹಾಂಗೇ ಆತು. ಅದೊಂದು ಅಪರ ರಾತ್ರಿ ಪಾತ್ರೆ ಒಂದು ಟಣ್ಣ್ ಹೇಳಿ ಕೆಳ ಬಿದ್ದಪ್ಪಗ ಪಕ್ಕನೆ ಎಚ್ಚರಿಕೆ ಆತು. ಹೋಗಿ ನೋಡಿರೆ, ಎನ್ನ ಕಣ್ಣ ಎದುರಲ್ಲೇ ದಪ್ಪ ಮೈಯ ಕಪ್ಪಿನ ಎಲಿಯೊಂದು ರಪ್ಪನೆ ಓಡಿ ಹೋತು.  ಮರುದಿನ ಉದಿಯಪ್ಪಗ ಎದ್ದು ನೋಡಿರೆ, ಮುನ್ನಾ ದಿನವೇ ಹೆಚ್ಚಿನ ಪೈಸೆ ಕೊಟು ತಂದಿದ್ದ ರಸಪೂರಿ ಬಾಳೆಹಣ್ಣು ಅರ್ಧಕ್ಕರ್ಧ ಎಲಿಯ ಪಾಲಾಗಿತ್ತು.   ಅದರ ಮರದಿನ, ಮಗನ ಹುಟ್ಟುಹಬ್ಬಕ್ಕೆ ಪ್ರೀತಿಲಿ ಎನ್ನ ಹೆಂಡತ್ತಿ ಮಾಡಿ ಮಡಗಿದ ಪಪ್ಪಾಯಿ ಹಲ್ವಾ ಎಲಿಯ ಬಾಯಿ ಸೇರಿತ್ತು.  ಒಡದು ಹೆರ ಮಡಗಿದ ತೆಂಗಿನಕಾಯಿ, ಗಣಪಸಖಂಗೆ ನೈವೇದ್ಯ ಆಗಿತ್ತು. ಮೇಲಾಣ ಕೋಣೆಲಿ ಮಡಗಿದ್ದ ಪುಸ್ತಕದ ಕಟ್ಟುಗಳ ಒಳ,  ರಾತ್ರೆ ಇಡೀ ಗಡಿಬಿಡಿಲಿ ಓಡುತ್ತಾ ಎಲಿಗೊ ಮಾಡ್ತ ಪರ ಪರ ಶಬ್ದಕ್ಕೆ ಮಗನ ಒರಕ್ಕೇ ದೂರ ಓಡಿತ್ತು.   ಮೀಯಲಿಪ್ಪ ಸೋಪಿನ ಮೇಲುದೆ ಎಲಿ ಹಲ್ಲಿನ ಗುರುತು ಕಂಡು ಬಂದು, ಇನ್ನು ಸಹಿಸುತ್ತರಲ್ಲಿ ಏವ ಅರ್ಥವುದೆ ಇಲ್ಲೇ ಹೇಳಿ ಗ್ರೇಶಿದೆ.

ಎಂತಾರು ಮಾಡಿ ಈ ಇಲಿರಾಯಂಗೆ ಒಂದು ದಾರಿ ಕಾಣುಸೆಕು ಹೇಳಿ,  ಆ ದಿನ ಮಧ್ಯರಾತ್ರಿ, ಎಲ್ಲೋರು ಮನಿಗೆಂಡು ಇಪ್ಪಗ, ಮೆಲ್ಲಂಗೆ ಅಡುಗೆ ಕೋಣೆಗೆ ಹೊಕ್ಕೆ. ಲೈಟು ಹಾಕಿದೆ.  ಎನ್ನ ಎದುರೇ ದೊಡ್ಡ ಎಲಿಯೊಂದು ಕವಾಟಿನ ಮೇಲೆ ಗಾಂಭೀರ್ಯಲ್ಲಿ ಕೂದೊಂಡು ಕಂಡಪ್ಪಗ ಎನಗೆ ತಡದ್ದಿಲ್ಲೆ.  ಮೆಲ್ಲಂಗೆ ದೊಣ್ಣೆ ಒಂದರ ತೆಕ್ಕೊಂಡೆ.  ಸ್ಟವ್ ಮಡಗಿದ ಜಾಗ್ಗೆ ಹತ್ತಿದೆ.  ದೊಣ್ಣೆ ನೆಗ್ಗಿದೆ.  ಎಲಿಯ ಮಂಡಗೆ ಎರಡು ಕೊಡ್ತ ಐಡಿಯ ಎನ್ನದು.   ಕೈಗೆ ಸಿಕ್ಕಿದ ಒನಕೆ ಹಿಡಿದನು, ದುರ್ಗಿಯನ್ನು ಮನದಲ್ಲಿ ನೆನದನು, ಯಾರವರು … ಪದ್ಯ ನೆಂಪಾತದ. ಬಡಿಯಲೆ ನೋಡ್ತೆ. ಅದು ಅಲ್ಲಿ ಇದ್ದರೆ ತಾನೆ ? ಹೀಂಗೆ ಮಾಡಿರೆ ಆಗ ಹೇಳಿ ತಳಿಯದ್ದೆ ಬಂದು ಮನುಗಿ ಒರಗಿದೆ.

ಮರದಿನ ಉದಿಯಪ್ಪಗ ಅಂಗಡಿಗೆ ಹೋಗಿ ಇದ್ದರಲ್ಲಿ ಚೀಪೆಸ್ಟ್ ಪೆಸ್ಟ್ ಕಂಟ್ರೋಲ್ ಪೌಡರ್ ತಂದೆ.  ಚೀಪ್ ಆದರೂ  ಚೀಪೆ ಇದ್ದೋ ನೋಡಿಕ್ಕಲೆಡಿಯಾನೆ !  ಕೇವಲ ಎರಡು ರೂಪಾಯಿಯ ಆ ಪಚ್ಚೆಹೊಡಿಲಿ ಎನ್ನ ಕಾರ್ಯ ಕೈಗೂಡೆಕು ಹೇಳ್ತ ಅಭಿಲಾಶೆ ಎನ್ನದು.  ಬಂಡಾಡಿ ಅಜ್ಜಿ ಮಾಡ್ತ ಹಾಂಗೆ ತೆಂಗಿನಕಾಯಿಯ ಚೆಂದಕೆ ತುರುದು, ಗಮ್ಮನೆ ಪರಿಮಳ ಬತ್ತ ಹಾಂಗೆ ಕರಂಡಿಲಿ ಹೊರುದೆ. ತುಪ್ಪ ಹಾಕಿದ್ದಿಲ್ಲೆ !  ಒಗ್ಗರಣೆ ಕೊಟ್ಟ ಎಣ್ಣೆಯೆ ರಜಾ ಅದರಲ್ಲಿತ್ತು.  ಬಾಳೆಲೆಯ ಚೆಂದಕೆ ಬಾಡುಸಿ, ನಾಲ್ಕು ಸಣ್ಣ ತುಂಡುಗಳ ಮಾಡಿದೆ.  ತೆಂಗಿನ ತುರಿಯ ಎಲ್ಲ ಬಾಳೆಲೆಗುದೆ ಹಾಕಿ, ಪಚ್ಚೆ ಹೊಡಿಯ ಅದಕ್ಕೆ ಬೆರುಸಿದೆ.  ನೈವೇದ್ಯಕ್ಕೆ ಪಂಚಕಜ್ಜಾಯ ರೆಡಿ ಆಗಿತ್ತು ! ಎಲಿಯ ಗಮನ ಸರಿಯಾಗಿ ಬೀಳುವಲ್ಲಿ ನಾಲ್ಕು ಕಡೆ ಮಡಗಿ, ಆರಾಮಲ್ಲಿ ಮನುಗಿದೆ.  ಒರಕ್ಕೂದೆ ಬಂತು.

ಏವತ್ರಾಣಂದ ಬೇಗನೆ ಅಂದು ಉದಿಯಪ್ಪಗ ಎದ್ದೆ.  ಹೋಗಿ ನೋಡಿರೆ, ಪಂಚಕಜ್ಜಾಯದ ಒಂದೇ ಒಂದು ಕಣವುದೆ ಅಲ್ಲಾಡಿದ್ದಿಲ್ಲೆ.  ಆನು ಹೇಂಗೆ ಮಡಗಿದ್ದನೋ ಹಾಂಗೇ ಇತ್ತು.  ಬಾಳೆ ಹಣ್ಣು ಮಾಂತ್ರ, ಅರ್ಧ ಕಾಣೆ ಆಗಿತ್ತು !  ಎಷ್ಟಾದರೂ ಪೇಟೆಯ ಎಲಿ ಅಲ್ಲದೊ ? ಎನ್ನ ಮೋರೆಗೆ ಸರಿಯಾಗಿಯೇ ಎಲಿ ಮಂಗಳಾರತಿ ಮಾಡಿತ್ತು.  ವಿಷವ ಬಿಟ್ಟು ಸರಿಯಾಗಿ ಅದಕ್ಕೆ ಬೇಕಾದ್ದನ್ನೇ ಆರುಸೆಂಡಿತ್ತು.  ಮರದಿನ ಪುನ: ಅಂಗಡಿಗೆ ಹೋದೆ.  ಪಚ್ಚೆ ಹೊಡಿಗೆ ಗ್ಯಾರೆಂಟಿ ಎಂತುದೆ  ಅಂಗಡಿ ಜೆನ ಕೊಡದ್ದ ಕಾರಣ ಎಂತ ಮಾತಾಡ್ಳೆ ಇಲ್ಲೆ.  ಅಂಗಡಿ ಜೆನದ ಹತ್ರೆ ಇನ್ನೊಂದರಿ ಎಲಿ ವಿಷವ ಕೇಳಲೆ ಎಂತೋ ಮನಸ್ಸಿಂಗೆ ಗೊಂದಲ ಆತು. ಪ್ರತಿದಿನ  ಇವ,  ಎಲಿವಿಷ ಬೇಕು ಹೇಳಿ ಬತ್ತಾ ಇದ್ದ. ಎಂತ ಇವನ ವಹಿವಾಟು ಹೇಳಿ ಅಂಗಡಿ ಜೆನ ಗ್ರೇಶಿರೆ ! ಅದಕ್ಕೆ ಬೇಕಾಗಿ ಎಲಿಂದ ಬಂದ ತೊಂದರೆಯ ಅವಂಗೆ ವಿವರುಸಿದೆ.  ಆ ದಿನ ಮತ್ತೊಂದರಿ ಎನ್ನ “ಕಾರ್ಯಾಚರಣೆ” ಮುಂದುವರುದತ್ತು. ಅದೇ ಬ್ರೇಂಡಿನ ಪಂಚಕಜ್ಜಾಯ,  ಆದರೆ, ಈ ಸರ್ತಿ ಲೊಕೇಶನ್ ಚೇಂಜ್ ! ಸಿನೆಮಾದವು ಮಾಡ್ತ ಹಾಂಗೆ ! ಮತ್ತೊಂದು ಪ್ರಯತ್ನ ಎನ್ನದು.  ಆರೋ ಕಿಸಕ್ಕನೆ ನೆಗೆ ಮಾಡಿದ ಹಾಂಗೆ ಆತು.  ಎಲಿಯೇ ಎನ್ನ ಅವಸ್ಥೆ ನೋಡಿ ನೆಗೆ ಮಾಡಿತ್ತಾಯ್ಕು.  ಮರದಿನ,  ಉಹೂಂ…  ಏವದೇ ಪ್ರಯೋಜನ ಆಯಿದಿಲ್ಲೆ.  ಎಲಿಗೆ ಮಡಗಿದ ಬಾರಣೆ ಊಟ ಹಾಂಗೇ ಇತ್ತು.  ಎಲಿಯ ಕಾರ್ಬಾರು ಹಾಂಗೇ  ಸಾಗಿತ್ತು.

ಆ ದಿನ ನಾಚಿಕೆ ಬಿಟ್ಟು ಅಂಗಡಿಯವನ ಪುನ: ಕಂಡೆ.  ಇನ್ನು ಪೈಸೆ ವಿಷಯಲ್ಲಿ ಅನಗತ್ಯ ಲೆಕ್ಕಾಚಾರ ಮಾಡ್ತದು ಸರಿಯಲ್ಲ ಹೇಳಿ ಗ್ರೇಶಿ,  ಇದ್ದರಲ್ಲಿ ಹೆಚ್ಚಿನ ಕ್ರಯದ ವಿಷವನ್ನೇ ತೆಕೊಂಡೆ (ಹೇಳಿರೆ,  ಕ್ರಯಕೊಟ್ಟು ಪರ್ಚೇಸ್ ಮಾಡಿದೆ ಹೇಳಿ ! ಅಪಾರ್ಥ ಮಾಡಿಕ್ಕೆಡಿ !)  ಅದು ನೆಲಕಡ್ಳೆ ಚಿಕ್ಕಿ ಹಾಂಗಿರುತ್ತ ಕೇಕು.  ವಿಧವಿಧದ ಧಾನ್ಯ, ಜೋಳ, ಗೋಧಿ, ಬೇಳೆಕಾಳುಗೊ, ಬೆಲ್ಲ ಎಲ್ಲ ಉಪಯೋಗಿಸಿ ಮಾಡಿದ ಒಳ್ಳೆ ಪೌಷ್ಟಿಕಾಂಶ ಇಪ್ಪಂತಹ ಉತ್ತಮ ಗುಣದ ಕೇಕು ಅದು.    ಕಂಪೆನಿಯವುದೆ, ಮಾಡರ್ನ್ ಎಲಿಗಳ ಮಾನಸಿಕ ಮಟ್ಟವ ಅಧ್ಯಯನ ಮಾಡಿ, ಅದರ ತಯಾರಿಸಿಕ್ಕು.  ಈ ಕೇಕಿನ ಮನಗೆ ತಂದು,  ಜಾಗ್ರತೆಗೆ ಬೇಕಾಗಿ ಎನ್ನ ಸಣ್ಣ ಮಗನ ದಿನಿಗೇಳಿ, ಈ  ವಿಷದ ವಿಷಯವ ಸರಿಯಾಗಿ  ತಿಳುಸಿಕೊಟ್ಟೆ.   ಮಕ್ಕೊ ತಿಂಬ ಹಾಂಗಿಪ್ಪ ಕೇಕು ಇದಾ. ಜಾಗ್ರತೆ ಬೇಕೋ ಬೇಡದೊ !?

ಇರುಳು ಊಟ ಆದ ನಂತರ, ಚಿಕ್ಕಿಯ ಮುರುದು ನಾಲ್ಕೈದು ತುಂಡುಗಳಾಗಿ ಮಾಡಿ, ಇಲಿಗಳ ಒಳ್ಳೆ ಬಿಸಿನೆಸ್ ನಡೆತ್ತಲ್ಲಿ ಪ್ರತಿಷ್ಟಾಪನೆ ಮಾಡಿದೆ. (ಎಂಗಳ ಬ್ಯಾಂಕಿನ ATM ಸ್ಥಾಪನೆ ಮಾಡ್ತದುದೆ ಹೀಂಗೆಯೇ ! ಅದು ಮಾಂತ್ರ ಮನುಷ್ಯರಿಂಗೆ) .  ಎಲಿ, ಹಿಡನ್ ಕೆಮರಾಲ್ಲಿ ಎನ್ನ ನೋಡಿತ್ತೋ ಹೇಳಿ ಎನಗೆ ಗೊಂತಿಲ್ಲೆ ! ಇರಳಿ.   ಒಳ್ಳೆಯ ನಿದ್ರೆ ಮುಗುಶಿ, ಉದಿಯಪ್ಪಾಗ ಎದ್ದು ನೋಡಿರೆ, ಎಂತ ಆಶ್ಚರ್ಯ … ! ಐದು ತುಂಡುಗಳಲ್ಲಿ, ನಾಲ್ಕು ಖಾಲಿ.  ಎನಗೆ ಸಂತೋಷವೋ ಸಂತೋಷ.  ಅಂತೂ ಆಪರೇಶನ್ ಸಕ್ಸೆಸ್ … ! ಪೈಸೆ ಕೊಟ್ಟದಕ್ಕೆ ಸಾರ್ಥಕ ಆತು. ಇನ್ನು ಆ ಕರಿ ಎಲಿಯ ಕಿರಿಕಿರಿ ಇಲ್ಲೇನೆ.  ಮನೆಲಿ ಎಲ್ಲ ಕೊಶಿಯೇ ಕೊಶಿ.  ಮುಚ್ಚಿ ಮಡಗೆಂಡಿದ್ದ ಹಣ್ಣುಹಂಪಲು, ತರಕಾರಿ ಎಲ್ಲ ಹೆರ ಮಡಗಲೆ  ಸುರು ಮಾಡಿದೆಯೊ.  ಎಲಿಯ ಪೂರ್ತಿ ಮರತೇ ಬಿಟ್ಟೆಯೊ°.

ಎಂಗೊ ಮರದರುದೆ, ಎಲಿ ಎಂಗಳ ಮರೆಕಾನೆ ?!  ಮರೆಲಿ ಹುಗ್ಗಿ ಕೂದು, ಮೆರಕ್ಕೊಂಡು ಇಪ್ಪ ಎಲಿ ಮರದಿನ ಇರುಳು ಯಥಾ ಪ್ರಕಾರ, ಅದರ ಚಾಕಚಕ್ಯತೆಯ ತೋರುಸಲೆ ಸುರುಮಾಡಿತ್ತು.  ಅಬ್ಬಾ.  ಹೋದೆಯಾ ಪಿಶಾಚಿ, ಹೇಳಿರೆ, ಬಂದೆ ಕಿಂಡಿಯಲ್ಲಿ ಹೇಳಿ ಹೇಳಿತ್ತು ಎಲಿ.  ಕೇಕೆಂತೋ   ಖಾಲಿ ಆಗಿತ್ತು.   ಎಲಿ, ಕೇಕೆ ಹಾಕಿ ನೆಗೆ ಮಾಡೆಂಡಿತ್ತು.  ಕೇಕಿನ ಕೆಲವು ತುಂಡುಗೊ ಅಲ್ಲೆ ಬಿದ್ದಿದ್ದತ್ತು.  ಎನ್ನ ಪ್ರಕಾರ, ಬುದ್ಧಿವಂತ ಎಲಿ,  ಎನ್ನ ಮಂಗ ಮಾಡ್ಳೆ ಬೇಕಾಗಿ,  ಕೇಕಿನ ಬಾಯಿಂದ ಮುಟ್ಟದ್ದೆ, ಕೈಲಿ ಮೆಲ್ಲಂಗೆ ತೆಗದು ಬೇರೆ ಕಡೆ ಇಡುಕ್ಕಿತ್ತಾಯ್ಕು.  ಅಂತೂ ಇಂತು, ಎಂಗೊ ಮತ್ತೆ ಮೋಸ ಹೋದೆಯೊ°.

ಒಂದೆರಡು ದಿನ ಕಳದತ್ತು.  “ತ್ರೀ ಈಡಿಯೆಟ್ಸ್” ಸಿನೆಮಾ ಸೆಂಟ್ರಲ್ಲಿಂಗೆ ಬಯಿಂದು, ಹೋಪೊ° ಹೇಳಿ ಮಗ ಹಟ ಮಾಡೆಂಡು ಇದ್ದಿದ್ದ°.  ಏವತ್ತೂ ರಿಪೇರಿ ಆಗದ್ದ, ಮಂಗಳೂರಿನ ಮಾರ್ಗಂಗಳ  ದೆಸೆಂದಾಗಿ ಧೂಳು ಬತ್ತು,  ಧೂಳು ಹಿಡಿತ್ತು ಹೇಳಿ ಕಾರಿಂಗೆ ಕವರು ಮಾಡೆಂಡು ಇದ್ದಿದ್ದೆಯೊ°.  ಸಿನೆಮಕ್ಕೆ ಹೋಪೊ ಹೇಳಿ, ಹೆರಟು, ಕಾರಿನ ಹೊದಕ್ಕೆ ತೆಗೆತ್ತದೇ ತಡ, ಗಮ್ಮನೆ ವಾಸನೆ ಮೂಗಿಂಗೆ ಬಡುದತ್ತು …! ಓಹ್.   ಎಲಿ ಸತ್ತು ಹೋಗಿರೆಕು, ಕಾರಿನ ಅಡಿಲಿ ಇದ್ದಾಯ್ಕು ಹೇಳಿ ಬಗ್ಗಿ ನೋಡಿರೆ, ಅಲ್ಲೆಂತರ … !

ನೋಡಿರೆ, ಒಂದು ಬೆಳಿ ಪುಚ್ಚೆ,  ಕಣ್ಣುಗಳ ದೊಡ್ಡದಾಗಿ ಒಡದು,  ಸತ್ತು ಹೆಣವಾಗಿ ಅಲ್ಲಿ ಬಿದ್ದೊಂಡು ಇತ್ತು. ಅದರ ಮೈ  ಒಂದೆರಡು ಕಡೆ ಕೊಳವಲೂ ಸುರುವಾಗಿತ್ತು.   ಮನೆಯ ಸುತ್ತ ಮುತ್ತ ಏವತ್ತೂ  ಓಡೆಂಡು ಇದ್ದಿದ್ದ ಬೆಕ್ಕು,  ಪ್ರಾಣವ ಕಳಕ್ಕೊಂಡು ಇಲ್ಲಿ ಬಿದ್ದಿತ್ತು.   ಆರದ್ದೋ ನೆರೆಕರೆಯವರ ಪುಚ್ಚೆ ಅದು.  ಅಲ್ಲ,  ಪುಚ್ಚೆ ಹೇಂಗೆ ಸತ್ತು ಹೋತು ?!!   ಆಲೋಚನೆ ಮಾಡ್ತಾ, ಮಾಡ್ತಾ ಇಪ್ಪ ಹಾಂಗೆ, ಮಗ° ಹೇಳಿದ°.  ಅಪ್ಪಾ, ಇದು ಬೆಕ್ಕಿನ ಕೊಲೆ,  ಕ್ಲೀನ್ ಮರ್ಡರ್ …. !!

ಎಲಿಗೆ ಮಡಗಿದ ವಿಷದ ಕೇಕಿನ ತೆಕೊಂಡು, ಅದು ಮನೆಂದ ಹೆರ ಹೋಯಿದು.  ತನಗೆ ಏವತ್ತೂ ತೊಂದರೆ ಕೊಟ್ಟೊಂಡಿದ್ದಿದ್ದ ಪುಚ್ಚೆ ಓಡಾಡುತ್ತಲ್ಲಿ ಮಡಗಿದ್ದು.  ಬುದ್ದಿವಂತ ಎಲಿಯ ಪ್ಲಾನಿನ ಎದುರು, ಬುದ್ದು ಬೆಕ್ಕು ಸೋತು ಹೋಯಿದು. ರುಚಿ ರುಚಿಯಾದ ಕೇಕಿನ, ಬೆಕ್ಕು ತಿಂದಿದು.    ಅದರ ಒಟ್ಟಿಂಗೆ ಇಹಲೋಕದ ವ್ಯಾಪರವನ್ನುದೆ ಮುಗುಶಿದ್ದು.  ಎಲಿ ನಿರ್ದಯವಾಗಿ,  ಯುಕ್ತಿಲಿ, ತನ್ನ ಆಜನ್ಮ ವೈರಿಯ ಹತ್ಯೆ ಮಾಡಿದ್ದು.    ಪೋಲೀಸರಿಂಗೆ ಸುದ್ದಿ ಕೊಡದ್ದ ಕಾರಣ ಏವ ಟಿವಿ ಚಾನ್ಯಲ್ಲಿನವುದೆ, ಪೇಪರಿನವುದೆ ಬಯಿಂದವಿಲ್ಲೆ.  ಅಷ್ಟೆ.  ಸತ್ತ ಪುಚ್ಚೆಗೆ ಎನ್ನ ಕೈಯಾರೆ, ಆನು ಸದ್ಗತಿಯ ತೋರುಸಿದೆ.  ಮನಸ್ಸು ತುಂಬಿ ಬಂದಿತ್ತು.   ಎಷ್ಟೇ ಆದರೂ,  ಅದರ ಮರಣಕ್ಕೆ, ಪರೋಕ್ಷವಾಗಿ ಆನೇ ಕಾರಣ ಅಲ್ಲದೊ ?

ಈಗ ಎಲಿ ಬೋನಿನ ಕನಸೇ ಕಾಣ್ತಾ ಇದ್ದೆ.  ಎಲಿಯ ಬೋನುಗೊ ಎಲ್ಲಿಯಾದರೂ ಬಾಡಿಗಗೆ ಎಂತಾರು ಇದ್ದರೆ ತಿಳುಸಿ ಆತೊ ? ಬೈಲಿಲ್ಲಿ ಆರತ್ರಾದರೂ ಇದ್ದರೆ ಒಂದೆರಡು ಇರುಳಿಂಗೆ ಕೊಟ್ಟಿಕ್ಕಿ.

ಬೊಳುಂಬು ಗೋಪಾಲ ಮಾವ.

ಎಲಿಯಿಂದಲೇ ಮಾರ್ಜಾಲದ ಕಗ್ಗೊಲೆ ... !, 4.8 out of 10 based on 4 ratings
ಶುದ್ದಿಶಬ್ದಂಗೊ (tags): , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 32 ಒಪ್ಪಂಗೊ

 1. ಒಪ್ಪಣ್ಣ

  ಮಾವಾ°..
  ಬೊಳುಂಬು ಬೆಡಿ ಹೊಟ್ಟುದು ಅಪುರೂಪ ಆದರೂ, ಆ ಅಲೆ ಸುಮಾರು ಸಮಯ ಇರ್ತು ಬೈಲಿಲಿ.
  ಮದಲಿಂದಲೇ ಹಾಂಗೆ.

  ಈ ಸರ್ತಿಯೂ ಕತೆ ಪಷ್ಟಾಯಿದು.
  ಎಲಿಕುಂಞಿ ವಿವರಣೆ ಭಾರೀ ಕೊಶಿ ಆತು. ಗೋಬಿಮಂಚೂರಿ ಹೇಳಿದ ಕಾರಣ ಗುಣಾಜೆಕುಂಞಿಗಂತೂ ಇನ್ನೊಂದರಿ ಕಂಡ್ರೆ ತಿನ್ನೇಕು – ಹೇಳಿಯೇ ಕಂಡತ್ತೋ ಏನೋ! 😉

  ಎಲಿ ಉಪದ್ರಂಗೊ, ಹಳ್ಳಿ-ಪೇಟೆ ಎಲಿಗಳ ಬುದ್ದಿವಂತಿಗೆ, ಬೇಂಕಿನ ಒಳವೂ ಎಲಿ ಪಂಚಾತಿಗೆಗೊ, ಹಿಡಿವಲೆ ಮಾಡಿದ ಯೋಜನೆಗೊ, ಪಂಚಕಜ್ಜಾಯ, ಕಟ್ಳೀಸು ತಂದದು, ಮಗಂಗೆ ಜಾಗ್ರತೆ ಹೇಳಿದ್ದು – ಎಲ್ಲವುದೇ ಪಷ್ಟಾಯಿದು.

  ಪುಚ್ಚೆ ಸತ್ತದು ಗ್ರೇಶಿ ಬೆಚ್ಚ ಆತೊಂದರಿ! ಮೇನಕಗಾಂದಿಯ ಕೇಸು ಎಳಾದು ಬೀಳನ್ನೆ? 😉
  ಜಾಗ್ರತೆ ಮಾವ°, ಹೇಳಿದ್ದಿಲ್ಲೇಳಿ ಬೇಡ, ಹಾಂ! 😉

  ಬೈಲಿಂಗೆ ಕೊಶಿಕೊಟ್ಟ ಚೆಂದದ ಶುದ್ದಿಗೊಂದೊಪ್ಪ!

  [Reply]

  ಬೊಳುಂಬು ಮಾವ°

  ಬೊಳುಂಬು ಮಾವ Reply:

  ಇಲ್ಲದ್ದರ ಇದ್ದ ಹಾಂಗೆ ಹೇಳಿ ಬರವಲೆ ಸ್ಪೂರ್ತಿ ಕೊಟ್ಟ ಒಪ್ಪಣ್ಣಂಗೆ ಧನ್ಯವಾದ ! ನಿನಗೆ ಕೊಶಿ ಆದರೆ ಮತ್ತೆಂತ ಬೇಕೆನಗೆ ? ಒಪ್ಪಣ್ಣ, ಈ ಪುಚ್ಚೆಯ ಕೊಂದರೆ ತಲೆ ಆಡ್ಳೆ ಸುರು ಆವುತ್ತು ಹೇಳ್ತ ಒಂದು ಸಂಗತಿ ಇದ್ದಾಡ. ನಿಜವೊ ಒಪ್ಪಣ್ಣ ? ಮೇನಕಾ ಗಾಂಧಿಯ ಹೆದರಿಕೆಂದ ಜಾಸ್ತಿ ಈ ಹೆದರಿಕೆ ಸುರು ಆಯಿದು.

  [Reply]

  VA:F [1.9.22_1171]
  Rating: +1 (from 1 vote)
 2. ಶ್ರೀಅಕ್ಕ°

  ಬೊಳುಂಬು ಮಾವ°,

  ತುಂಬಾ ಲಾಯ್ಕ ಬರದ್ದಿ. ನಿಂಗಳ ಶುದ್ದಿಯ ತಲೆಬರಹ ನೋಡಿ ಅಪ್ಪಗ ಕಲಿ ಕಾಲ ಬಂತೋ ಅಂಬಗ ಹೇಳಿ ಆತಿದಾ. ಕತೆ ಓದಿ ಅಪ್ಪಗ ಇಲ್ಲದ್ದರೂ ಕಲ್ಜುಗವೇ ಬಂತಪ್ಪಾ ಹೇಳಿ ಆತು. ಎಲಿ ಅದರ ವೈರಿಯ ಕೊಲ್ಲುಲೆ ನಿಂಗಳ ಉಪಾಯವನ್ನೇ ಮಾಡಿತ್ತು ಅಪ್ಪೋ!!! ಈ ಎಲಿ ಅಂಬಗ ಕಂಪ್ಯೂಟರ್ ನ ಹತ್ತರೆ ಕೂದು ನೋಡಿಯೇ ಎಲ್ಲ ಕಲ್ತತ್ತಾ ಬುದ್ಧಿವಂತಿಕೆಯ!!! ನಿಂಗೋ ಅದಕ್ಕೆ ಎಂತೆಲ್ಲ ಮಾಡ್ತಿ ಹೇಳಿ ನೋಡಿ ಅದು ಪುಚ್ಚೆಗೆ ಅದೇ ಪ್ರಯೋಗ ಮಾಡಿಗೊಂಡಿತ್ತೋ ಎಂತೋ!!!!

  ಏನೇ ಆಗಲಿ! ಕತೆ ಪಷ್ಟಾಯಿದು. ಈಗಾಣ ಕಾಲಲ್ಲಿ ಎಷ್ಟು ಕಲ್ತರೂ ಸಾಲ ಹೇಳಿ ತೋರ್ಸಿ ಕೊಟ್ಟಿ ಮಾವಾ°. ನಿಂಗಳ ಉಪಮೆಗ ಎಲ್ಲ ಲಾಯ್ಕಾಯಿದು.

  [Reply]

  ಬೊಳುಂಬು ಮಾವ°

  ಬೊಳುಂಬು ಮಾವ Reply:

  ಶ್ರೀ ಅಕ್ಕನ ಕಾಣದ್ದೆ ತುಂಬಾ ಸಮಯ ಆತದ. ಕರೆಲಿ ಕೂದೊಂಡು ಎಲ್ಲಾ ನೋಡ್ತಾ ಇರ್ತಿರಾಯ್ಕು. ಒಪ್ಪ ಕೊಟ್ಟದಕ್ಕೆ ಧನ್ಯವಾದ.

  [Reply]

  ಶ್ರೀಅಕ್ಕ°

  ಶ್ರೀಅಕ್ಕ° Reply:

  ಬೊಳುಂಬು ಮಾವ°, ಬೈಲಿಂಗೆ ಇಳಿಯೆಕ್ಕು ಹೇಳಿ ಗ್ರೇಶಿ ಇಳುದಪ್ಪಗ ಆಚ ಹೊಡೆಂದ ಇನ್ನೊಂದು ಕೆಲಸ ದಿನಿಗೆಳ್ತಿದಾ.. ಅಂಬಗ ಅದರ ಮಾಡದ್ದೆ ಕಳಿಯನ್ನೇ!!! ಅಲ್ಲಿಯಾಣ ಕೆಲಸ ಒತ್ತರೆ ಮಾಡಿ ಈ ಹೊಡೆಂಗೆ ಬಪ್ಪಗ ಇಲ್ಲಿ ಪುಟ ಎರಡು ಮೊಗಚ್ಚುತ್ತು… :-( :-(
  ಈಚ ಮೂಲೆಲಿ ಕೂದು ಬಾಕಿ ಅಪ್ಪಲಾಗನ್ನೆ!! ಮನೆಲಿದ್ದರೂ ತೋಟಲ್ಲಿ ಒಂದು ಕಣ್ಣು ನಮ್ಮದಿರ್ತಿಲ್ಲೆಯಾ ಹಾಂಗೆ ಬೈಲಿಲೂ ರಜ್ಜ ಕರೆಂದ ನೋಡ್ತಾ ಇಪ್ಪದು ಮಾವ°.

  [Reply]

  VN:F [1.9.22_1171]
  Rating: 0 (from 0 votes)
 3. srikumar

  Enna 1 patient kooda helittu- Kaliyuga akerige heenge aavuttu heli. Eg deepa melanda kelange hottuttu. Sanna prani doddadara kondu thintu ithyadi. Idu ade salili battu.

  [Reply]

  ಬೊಳುಂಬು ಮಾವ°

  ಬೊಳುಂಬು ಮಾವ Reply:

  ಕಲಿಯುಗಲ್ಲಿ ನಮ್ಮ ಕಣ್ಣೆದುರಲ್ಲಿ ಇನ್ನು ಎಂತೆಂತದೆಲ್ಲ ಕಾಂಬಲಿದ್ದೊ ಅಂಬಗ. ಉತ್ತರಿಸಿದ್ದಕ್ಕೆ ಧನ್ಯವಾದ.

  [Reply]

  VA:F [1.9.22_1171]
  Rating: 0 (from 0 votes)
 4. ಸುಕೇಶ ನೇರೊಳು

  ಪ್ರಾಣಿ ದಯಾ ಸ೦ಘದವು ಆರುದೆ ಭೇಟಿ ನೀಡಿದ್ದವಿಲ್ಲೆಯ ಮಾವ.. ಇದು ಬಹಳ ಅನ್ಯಾಯ.. ಛೆ!! 😉 ಃ)

  [Reply]

  VN:F [1.9.22_1171]
  Rating: 0 (from 0 votes)
 5. ಮುಳಿಯ ಭಾವ
  ರಘು ಮುಳಿಯ

  ಬೊಳು೦ಬು ಮಾವಾ,
  ‘ಸಮಗ್ರ ಎಲಿಪುರಾಣ’ ಓದುಸಿಗೊ೦ಡು ಹೋತು. ಪೀಟಿಕೆ೦ದ ಹಿಡುದು,ಮುಕ್ತಾಯದ ವರೆಗೆ ಓದಿಯಪ್ಪಗ ಪಾಪದ ಪುಚ್ಚೆ ಸತ್ತತ್ತನ್ನೇ ಹೇಳಿ ಬೇಜಾರಾತು.
  ಈಗಾಣ ಪುಚ್ಚೆಗಳೂ ಎಲಿ ಹಿಡಿವದರ್ಲಿ ಹಿ೦ದೆಯೇ,ಅಲ್ಲದೋ?

  [Reply]

  ಬೊಳುಂಬು ಮಾವ°

  ಬೊಳುಂಬು ಮಾವ Reply:

  ಅಪ್ಪಪ್ಪು. ಇತ್ತೀಚೆಗೆ ಪುಚ್ಚೆಗೊ ಎಲ್ಲ ಬಡ್ಡಂಗೊ ಆಯಿದವು. ಕೆಲವು ಜಾತಿಯ ನಾಯಿಗಳುದೆ ಹಾಂಗೇ ಅಲ್ಲದೊ ? ಅತ್ಲಾಗಿ ಕೊರಪ್ಪಲೂ ಅರಡಿಯ, ಹೆದರುಸಲೂ ಅರಡಿಯ. ಅವುಗಳ ಎದುರ ಕದ್ದೊಂಡು ಹೋದರು ಮಾತಾಡದ್ದೆ ಕೂರುಗತ್ತೆ. ಪ್ರೀತಿ ಮಾಡಿದ್ದದು ಜಾಸ್ತಿ ಆದರೆ ಹಾಂಗೇ ಅಲ್ಲದೊ ? ಉತ್ತರಕ್ಕೆ ಧನ್ಯವಾದ.

  [Reply]

  VA:F [1.9.22_1171]
  Rating: +2 (from 2 votes)
 6. ಬೊಳುಂಬು ಕೃಷ್ಣಭಾವ°
  ಬೊಳುಂಬು ಕೃಷ್ಣಭಾವ°

  ಶೋಷಿತವರ್ಗದ ಪ್ರತಿನಿಧಿಯಾಗಿಂಡಿಪ್ಪ, ಕೇವಲ ಒಂದು ಪುಚ್ಚೆ ಹೇಳಿ ಎಲ್ಲೋರೂ ತಿಳುದ ಮಾರ್ಜಾಲದ ಬಗ್ಗೆಯುದೇ ನಿಂಗಳ ಅಂತಃಕರಣವ ಬಿಡುಸಿತೋರುಸಿದ್ದು ಮೇಲುವರ್ಗದ ದಬ್ಬಾಳಿಕೆಯ ನಿಂಗಳದ್ದೇ ಆದ ರೀತಿಲಿ ವಿರೋಧುಸುವ ಬಗೆ ಹೇಳಿ ಆನು ತಿಳುಕ್ಕೊಂಡಿದೆ. ಇಲ್ಲದ್ದದರ ಇಪ್ಪ ಹಾಂಗೆ ವಿವರುಸಿದ್ದರ ಒಟ್ಟಿಂಗೆ ಮಾನವಿಕ ಕಳಕಳಿಯನ್ನೂ ಪ್ರಕಟಪಡುಸಿದಿ. [ಚುಬ್ಬಣ್ಣ ಮೋರೆಪುಟಲ್ಲಿ ಹಾಕಿದ ಗಿಂಡಿಯ ಪಟ ನೋಡಿಯಪ್ಪಗ ಗಿಂಡಿಮಾಣಿಯ ನೆಂಪಾತು. :)]

  ನಿಂಗೊ ಉತ್ತಮ ಸಮಾಜಕ್ಕಾಗಿ ಕೆಲಸಮಾಡುವ ಚೆನೆಲುಗಳತ್ರೆ ಹೇಳುತ್ತಿತ್ತರೆ ಮತ್ತೊಂದು ‘ಹೀಂಗೂ ಉಂಟೆ’ ನೋಡುಲೆ ಆವುತ್ತಿತ್ತು.

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಅನುಶ್ರೀ ಬಂಡಾಡಿಸುವರ್ಣಿನೀ ಕೊಣಲೆವೇಣಿಯಕ್ಕ°ಪವನಜಮಾವಶ್ರೀಅಕ್ಕ°ಜಯಗೌರಿ ಅಕ್ಕ°ದೊಡ್ಡಮಾವ°ಬಟ್ಟಮಾವ°ಕಜೆವಸಂತ°ಶ್ಯಾಮಣ್ಣಸಂಪಾದಕ°ತೆಕ್ಕುಂಜ ಕುಮಾರ ಮಾವ°ಶಾಂತತ್ತೆಪುಣಚ ಡಾಕ್ಟ್ರುದೇವಸ್ಯ ಮಾಣಿಬೋಸ ಬಾವಅಡ್ಕತ್ತಿಮಾರುಮಾವ°ಶಾ...ರೀಮಾಲಕ್ಕ°ಪೆರ್ಲದಣ್ಣಅಕ್ಷರದಣ್ಣಅಕ್ಷರ°ಪೆಂಗಣ್ಣ°ಗಣೇಶ ಮಾವ°ಡೈಮಂಡು ಭಾವವಸಂತರಾಜ್ ಹಳೆಮನೆ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ