ಎಮ್ಮೆಗಳು, ಆನು ಮತ್ತು ಕೆಸರು ಹೊಂಡ

December 9, 2013 ರ 6:00 amಗೆ ನಮ್ಮ ಬರದ್ದು, ಇದುವರೆಗೆ 17 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಬಾಲ್ಯದ ವೈವಿಧ್ಯಮಯ ನೆನಪುಗಳ ಮೆರವಣಿಗೆ ! ಬಾಲ್ಯದ ನೆನಪುಗಳೇ ಹಾಂಗೆ ! ಸಮುದ್ರದ ಅಲೆಗಳಂಗೆ ಮತ್ತೆ ಮತ್ತೆ ಬತ್ತಾ ಇರ್ತವು. ಸಣ್ಣಾಗಿಪ್ಪಗ ಆ ಘಟನೆಗಳೆಲ್ಲ ವಿಶೇಷ ಹೇಳಿ ಅಂಬಗ ಅನಿಸಿದ್ದೆ ಇಲ್ಲೆ. ಈಗ ನೆನಸಿಕೊಂಡು, ಅದಕ್ಕೊಂದಿಷ್ಟು ಹಾಸ್ಯದ ಲೇಪ ಹಚ್ಚಿ ನೋಡಿಯಪ್ಪಗ “ಎಂಥ ಅದ್ಭುತ ಬಾಲ್ಯ ನನ್ನದು !” ಹೇಳಿ ಖುಷೀ ಅಪ್ಪದು. ಅದರ ಹಂಚಿಕೊಂಬಲೆ ಒಂದಿಷ್ಟು ಸಮಾನಮನಸ್ಕ ಹೃದಯಗಳು, ಮನಸ್ಸುಗಳು ಸಿಕ್ಕಿಬಿಟ್ಟರೆ ? ……….
ಎನ್ನ ಹುಟ್ಟೂರು ಕಮ್ಮಕ್ಕಿ. ತೀರ್ಥಹಳ್ಳಿ-ಕೊಪ್ಪ ಗಡಿಲಿ ಬಪ್ಪ, ಕೊಪ್ಪ ತಾಲ್ಲೂಕಿಗೆ ಸೇರಿದ ಪುಟ್ಟ ಹಳ್ಳಿ. (ಕುವೆಂಪುವಿನ ಕುಪ್ಪಳಿಯಿಂದ 5 ಕಿ.ಮೀ ದೂರ). ಶುದ್ಧ ಮಲೆನಾಡು. ಜೀವನದ ಕನಿಷ್ಟ ಸವಲತ್ತು ಮಾಂತ್ರ ಇಪ್ಪ, ಹಚ್ಚ ಹಸುರಿನ ಊರು.  ಅಂಬಗಿನ ಸಮಯಲ್ಲಿ ಎಂಗಳ ಮನೆಲಿ ಇದ್ದ ಕಥೆ ಪುಸ್ತಕ ಹೇಳಿರೆ ಒಂದು ರಾಮಾಯಣ, ಮತ್ತೊಂದು ಮಹಾಭಾರತ. ಅದೂದೆ ಹೈಸ್ಕೂಲ್ ಓದುವ ಅಕ್ಕಂದಿರಿ೦ಗೆ ಪರೀಕ್ಷೆ ಕಟ್ಟುಲೆ ತರಿಸಿ ಕೊಟ್ಟದು !.
ಶಾಲೆಗೆ ರಜೆ ಇಪ್ಪಗ,  ಕುಟುಂಬದ ದೊಡ್ಡೋವೆಲ್ಲ ತೋಟದ್ದೋ, ಗದ್ದೆಯದ್ದೋ ಕೆಲಸಕ್ಕೆ ಹೋದವು ಹೇಳಿಯಾದರೆ, ಸಣ್ಣವಾದ ಎಂಗಳ ಕೆಲಸ ಎಂಥ ಗೊಂತಿದ್ದಾ ? ಎಮ್ಮೆ ಕಾವದು. ಎನ್ನ ಒತ್ತಿನ ಅಕ್ಕ ಮತ್ತೆ ಆನು, ಬೆಳಿಗ್ಗೆ ಎಮ್ಮೆಗಳ ಮೇವಲೆ ಗುಡ್ಡೆಗೆ ಹೊಡಕೊಂಡು ಹೋಪದು. ಹೊತ್ತಪ್ಪಗ ವಾಪಾಸ್. ಗುಡ್ದದ ಮೇಲ್ಭಾಗಲೆ ಅವು ಮೇಯೆಕ್ಕು. ಗುಡ್ಡೆ ಇಳುದರೆ ಅಲ್ಲಿ ಬೇರೆಯವರ ಗದ್ದೆಗೆ ನುಗ್ತವು. ಇಲ್ಲದ್ರೆ ಕೆಸರು ಹೊಂಡಲಿ ಹೋಗಿ ಮನಗುತ್ತವು. ಅವು ಹಾಂಗೆ ಮಾಡದ್ದಂಗೆ ಕಾವಲೆ ನಾವು ಎಮ್ಮೆ ಹಿಂದೆ ಹೋಪದು. ಉದ್ಯೋಗ ಅಷ್ಟೆ !
ಬೇಸಿಗೆ ರಜೆಲಿ ಮತ್ತೆ ದಸರಾ ರಜೆಲಿ ಎಮ್ಮೆ ಕಾಯುವಗ ಕೈಲಿ ಒಂದೋ ರಾಮಾಯಾಣ, ಇಲ್ಲದ್ರೆ ಮಹಾಭಾರತ, ಸರತಿ ಪ್ರಕಾರ. ಆ ರಜೆಲಿ ಆ ಪುಸ್ತಕ ಓದಿ ಆಯೆಕ್ಕು. ಅದು 3ನೇ ತರಗತಿಯಿಂದ 7ನೇ ತರಗತಿಯ ವಯಸ್ಸು. ಆ ವಯಸ್ಸಿಗೇ ಹಾಂಗಿದ್ದ ಪುಸ್ತಕ ಓದುಲೆ ಸಿಕ್ಕಿತನ್ನೆ. ಅದೂ ಸತತ 4 ವರ್ಷ. ಇದೇ ಈಗ ತಾಳಮದ್ದಳೆ ಅರ್ಥ ಹೇಳುಲೆ ಉಪಯೋಗ ಆದ್ದು ಕಾಣ್ತು. ಈಗ ನಮ್ಮ ಮಕ್ಕೋ ಕನ್ನಡ ಓದುಲೆ ಭಯಂಕರ ಬಂಙ ಬೀಳ್ತವು ! ಒಂದು ಪುಸ್ತಕ ಹಿಡಿದು (ಈಗಣ ಐಟಿ ಉದ್ಯೋಗಿಗಳು ಮನೆಂದಲೇ ಐಡಿ ಕಾರ್ಡ್ ಹಾಕಿಗೊಂಡು ಹೆರಡುವಾ೦ಗೆ) ಹೆರಟತ್ತು ಹೇಳಿ ಕ೦ಡರೆ ಎಂಥ ಗತ್ತು ಗೊಂತಿದ್ದಾ ?
ಜನಮೇಜಯರಾಯ ಸರ್ಪಯಜ್ಞ ಎಂಗಳ ಎಮ್ಮೇಗುಡ್ಡಲ್ಲೇ ಮಾಡ್ತಾ ಇದ್ದ°– ಹೇಳಿ ಕಾ೦ಬಷ್ಟರ ಮಟ್ಟಿ೦ಗೆ ಪುಸ್ತಕದಲ್ಲಿ ಮುಳುಗಿ ಹೋಗಿರುತ್ತಿದ್ದೆಯೋ°. ಸುತ್ತಮುತ್ತಲಣ ಬೆಟ್ಟ-ಗುಡ್ಡೆಗ ದೂರಂದ ಎಂಗೊಗೆ ಕುರುಕ್ಷೇತ್ರದ ಕೌರವ, ಪಾಂಡವ ಸೇನೆಗಳಂತೆ ಕಂಡುಗೊಂಡಿತ್ತಿತ್ತು. ಬೆಟ್ಟದ ಮಧ್ಯೆ ಸ್ವಲ್ಪ ಎತ್ತರವಾಗಿ ಬೆಳೆದ ಮರ- ಅರ್ಜುನನ ರಥ. ಅದರ್ಲಿ ಕೃಷ್ಣ ಗೀತೋಪದೇಶ ಮಾಡ್ತಾ ಇಪ್ಪ ಕಲ್ಪನೆ ! ಅಭಿಮನ್ಯು ಸತ್ತರೆ ಎಂಗಳಲ್ಲಿ ಸೂತಕದ ಛಾಯೆ ! ಎಂಗಳ ಎಮ್ಮೆಗಳೇ ಆನೆಗಳ ಹಾ೦ಗೆ, ಪಕ್ಕದ ಮನೆಯ ದನಗಳೇ ಕುದುರೆಗಳ ಹಾ೦ಗೆ. ಊರಿನ ದೊಡ್ಡ ಎತ್ತು ಅಶ್ವಮೇಧದ ಕುದುರೆಯ ಹಾ೦ಗೆ ಕ೦ಡುಗೊ೦ಡಿತ್ತು. ಪ್ರತೀ ವರ್ಷ ಅದೇ ಪುಸ್ತಕ ಓದಿರೂ, ಅದು ಮತ್ತೆ ಹೊಸತ್ತಾಗಿಯೇ ಕಂಡುಕೊಂಡಿತ್ತು. ಎಂಥಹಾ ಅದ್ಭುತ ಕಲ್ಪನಾ ಪ್ರಪಂಚ ! ಅದರ ಭಂಗಗೊಳುಸುವ ಹಾ೦ಗಿರ್ತ ಯಾವುದೇ ದೃಶ್ಯ ಮಾಧ್ಯಮ ಇತ್ತಿಲ್ಲೆನ್ನೆ. ಒಳ್ಳೆದೇ ಆತು.
ಕೆಲವು ಸರ್ತಿ ಎಂಗೊ ಇಲ್ಲಿ ಕತೇಲಿ ಮುಳುಗಿಪ್ಪಾಗಲೇ ಎಮ್ಮೆಗೊ ಎಂಗಳ ಕಣ್ತಪ್ಪಿಸಿ, ಗುಡ್ಡೆ೦ದ ಕೆಳ ಇಳುದು ಕೆಸರು ಹೊಂಡಲ್ಲಿ ಮನುಗಿ ಎಂಜೊಯ್ ಮಾಡಿಗೋ೦ಡು ಇಕ್ಕು. ಇನ್ನೂ ಕೆಸರು ಹೊ೦ಡ ತಲುಪಿದ್ದಿಲ್ಲೆ ಹೇಳಿರು, ಗುಡ್ಡೆಯ ಮೇಲಿಂದ “ಥೈ ಥೈ ಥೈ ಥೈ ಬಂಗಾರಿ ….. ಬೆಟ್ಟಾದ ಮೇಲಿಂದ ಓಡೋಡಿ ಬಂದಂತ ಸಿಂಗಾರೀ….” ಸ್ಟೈಲಿಲಿ ಓಡಿಗೊ೦ಡು “ವಾಂಯ್……….”  ಗುಟ್ಟಿಗೊಂಡು, ಉಳಿದೊವಕ್ಕೂ ಆಹ್ವಾನ ಕೊಟ್ಟುಗೋಂಡು, ಬಂದುಗೋ೦ಡಿಕ್ಕು. ಆ ಎಮ್ಮೆಗೊಕ್ಕೆ ಎಂಗಳ ಲಕ್ಕಿ ಕೋಲಿನ ಪೆಟ್ಟು ಮುಟ್ಟುಗಾ ? ಕೆಸರು ಹೊಂಡ ಈ ಎಮ್ಮೆಗೆ ಅದೆಂಥ ಆಕರ್ಷಣೆಯೋ ಗೊಂತಿಲ್ಲೆಪ್ಪಾ. ಸುತ್ತ ಐವತ್ತು ಅಡಿ ವ್ಯಾಪ್ತಿಲಿ ಅವಕ್ಕೆ ನಮ್ಮ ಪೆಟ್ಟಿನ ಹೆದರಿಕೆ ರಜ್ಜವುದೆ ಇರ್ತಿತ್ತಿಲ್ಲೆ.  ಇನ್ನು ಈ ಎಮ್ಮೆಗಳ  ಆ ಹೊ೦ಡ೦ದ ಏಳುಸೊದು ಹೇಂಗಪ್ಪಾ ? ಎಷ್ಟು ಸರ್ತಿ ಕೋಲಿಲಿ ಬಡುದರೂ ಅವಕ್ಕೆ ಪೆಟ್ಟು ನಾಟುತ್ತಿಲ್ಲೆ ! ಕೆಸರು ಮೆತ್ತಿದ ಎಮ್ಮೆ ಎಂಗಳ ಮನೆದೆ ಅಪ್ಪಾ.. ? ಅಲ್ಲದಾ..?  ನೋಡಿಗೊಂಡು ಮನೆಗೆ ಹೋಗಿ ದೊಡ್ಡೋರಿಂಗೆ ಹೇಳಿದರೆ “ಎಮ್ಮೆ ಕಾಯುಲೆ ಹೇಳಿ ಕಳಿಸಿದ್ರೆ, ಎಮ್ಮೆ ಕಾಯೋದು ಬಿಟ್ಟು, ಅದೆಂಥ ಮಾಡಿಗೊಂಡು ಕೂದ್ದದು ? ಎಮ್ಮೆ ಕಾವಲುದೆ ನಾಲಾಯಕ್  ಈ  ಮಕ್ಕಳು ” ಹೇಳ್ತ ಬೈಗುಳು. ಅವರ ಕರಕ್ಕೊ೦ಡು ಹೋಗಿ, ಎಮ್ಮೆಗಳ ಏಳ್ಸಿ, ಮನೆಗೆ ಹೊಡಕ್ಕೊ೦ಡು ಹೋಪಷ್ಟೊತ್ತಿಂಗೆ ಸಾಕಪ್ಪಾ.. ಸಾಕು….!. ಅಲ್ಲಿ ಅಮ್ಮನ ಕೈ೦ದಲೂ ಬೈಗುಳು ” ಎಮ್ಮೆ ಮೈಗೆಲ್ಲ ಕೆಸರು ಮೆತ್ತಿಸಿಗೊ೦ಡು ಬೈ೦ದಿರನ್ನೇ, ಆರು ತೊಳೆತ್ತವು. ಒಂದು ಸರಿಯಾಗಿ ಎಮ್ಮೆ ಕಾಯಲುದೆ ಬತ್ತಿಲ್ಲೆ”. ತೋಟದ ಬಾವಿಂದ ನೀರು ಹೊತ್ತು ತಂದು, ಅವಕ್ಕೆ ಸ್ನಾನ ಮಾಡ್ಸೆಕ್ಕದಾ. ಅಮ್ಮನ ಹಿಂದೆ ಕೊಡಪ್ಪಾನ ಹಿಡುಕ್ಕೊ೦ಡು ತೋಟದ ಬಾವಿಗೆ ನೀರು ತಪ್ಪಲೆ ಹೋಪದೆಯಾ……….. ಮಾಡಿದ್ದು ತಪ್ಪನ್ನೆ. ಬಾಯಿ ಮುಚ್ಚಿ ಹೋಪದೆ ಬೇರೆ ದಾರಿ ಇಲ್ಲೆ !
ಅರ್ಜುನ ಬೀಷ್ಮಂಗೆ ನೀರು ತರಿಶಿ ಕೊಟ್ಟಾಂಗೆ ಆನುದೆ ಬಾಣ ನೆಲಕ್ಕೆ ಹೊಡೆದು ನೀರು ಬರಿಸುವಂಗೆ ಇದ್ದಿದ್ರೆ ………………?
 ಕಲ್ಪನೆ ಕಲ್ಪನೆಯೇ. ನಿಜ ಆಪ್ಪಲಿದ್ದಾ ?
ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 17 ಒಪ್ಪಂಗೊ

 1. ಕೆ.ನರಸಿಂಹ ಭಟ್ ಏತಡ್ಕ

  ಶುದ್ದಿ ಪಷ್ಟಾಯಿದು.ಎಮ್ಮೆಗೊ ಆನೆಗಳ ಹಾಂಗೆ ಕಂಡದು ಮಾಂತ್ರವೋ?ಅದರ ಮೇಗೆ ಸವಾರಿ ಮಾಡಿದ್ದಿರೋ?ರಾಜಕುಮಾರನ ಹಾಂಗೆ ‘ಯಾರೇ ಕೂಗಾಡಲಿ,ಊರೇ ಹೋರಾಡಲಿ,ಎಮ್ಮೇ ನಿನಗೆ ಸಾಟಿಯಿಲ್ಲ’ಪದ್ಯ ಹೇಳಿಯೊಂಡು.

  [Reply]

  ಸುರೇಖಾ ಚಿಕ್ಕಮ್ಮ

  ಸುರೇಖ ಚಿಕ್ಕಮ್ಮ Reply:

  ‘ಯಾರೇ ಕೂಗಾಡಲಿ’ ಹಾಡು ರೆಡಿಯೋದಲ್ಲಿ ಕೇಳಿತ್ತಿದ್ದೆಯೋ°. ಹಾಂಗೊಂದು ಸವಾರಿ ಮಾಡ್ಲೆ ಬಕ್ಕು ಹೇಳಿ ಗೊಂತಿತ್ತಿಲ್ಲೆ ! ಗೊಂತಿತ್ತಿದ್ರೆ ಒಂದು ಕೈ ನೋಡ್ಲಾವ್ತಿತ್ತು ! ರಾಜಕುಮಾರನ ಸಿನೆಮಾ ಕಾಂಬಲೆ ಸಿಕ್ಕಿದ್ದು ಐದಾರು ವರ್ಷದ ಮತ್ತೆ ಟಿ.ವಿ.ಲಿ ಚಿತ್ರಮಂಜರಿಲಿ ಬಂದಪ್ಪಗ ! ಒೞೆ ಛಾನ್ಸ್ ಮಿಸ್ ಆತನ್ನೆ ! ಈಗಿನ ಎನ್ನ ಭಾರ ಹೊತ್ತುಗೊಂಬಲೆ ರಿಯಲ್ ಆನೆಯೇ ಆಯೆಕಷ್ಟೆ !………………

  [Reply]

  VA:F [1.9.22_1171]
  Rating: +1 (from 1 vote)
 2. ಚೆನ್ನೈ ಬಾವ°
  ಚೆನ್ನೈ ಭಾವ°

  ಎಮ್ಮೆ ಚರ್ಮ ಹೇಳ್ತದು ಇದಕ್ಕೇ ಅಪ್ಪೋ.. ಆ ಕೆಸರ್ಲಿ ಬಿದ್ದು ಬಿದ್ದು ಮೈಗೆ ಅಷ್ಟು ಕೆಸರು ಮೆತ್ತಿರೆ ಮತ್ತೆ ಚರ್ಮ ದಪ್ಪ ಆಗದ್ದೆ ಇಕ್ಕೋ ಅಲ್ಲದ !

  ಅದು ಸರಿ…, ಕೃಷ್ಣನ ಕೊಳಲ ನಾದಕೆ ಹಸುಗಳೆಲ್ಲ ಓಡಿ ಬಂದೊಂಡಿತ್ತವಡ. ಹಾಂಗೇ ನಿಂಗೊ ಏನಾರು ಒಂದು.. ಬಿಗಿಲಿನ ನಾದಕ್ಕೆ ಅಥವಾ ಬಡಿಗೆಯ ನೋಟಕ್ಕೆ ಹೇಳಿ ಏನಾರು ಮಾಡಿಕ್ಕಲಾವ್ತಿತ್ತಪ್ಪೋ.

  ಅಬ್ಬ!!!! ಅರ್ಜುನ ಒಂದೇ ಬಾಣದಲ್ಲಿ ಬೋರ್ ವೆಲ್ ತೆಗದಾಂಗೆ ನಿಂಗಳೂ…. – ಲಾಯ್ಕ ಆಯ್ದು ಕಲ್ಪನೆ

  [Reply]

  ಸುರೇಖಾ ಚಿಕ್ಕಮ್ಮ

  ಸುರೇಖ ಚಿಕ್ಕಮ್ಮ Reply:

  ಕೆಸರು ಮೆತ್ತಿದ ಎಮ್ಮೆಗೆ ಮೀಸುವಷ್ಟು ನೀರು ತೋಟದ ಬಾವಿಂದ ತಪ್ಪಲ್ಲಿವರೇಂಗೆ ಎಂಗೋಗೆ ಕಾಪಿಯು ಸಿಕ್ಕ …! ಎಮ್ಮೆಗೆ ಮಿಂದು ಅಪ್ಪಲ್ಲಿವರೆಗೆ ಅದಕ್ಕೆ ಕೊಟ್ಟಿಗೆ ಒಳ ಪ್ರವೇಶವುದೆ ಸಿಕ್ಕ…. !

  ಗದ್ದೆ ಆಚೆ ಕಡೆ ಮನೆಯ ಗೋಪಾಲ ಹಾಂಗೆ ಒಂದು ಕೊಳಲು ಊದಿಕೊಂಡಿತ್ತಿದ್ದ. ಅದು ಹೇಂಗಿತ್ತು ? ಹೇಂಗೆ ಮಾಡಿದ್ದು ? ಕಾಂಬಲೆ ಸಿಕ್ಕಿದ್ದಿಲ್ಲೆ. ಎಂತಕ್ಕೆ ಹೇಳಿರೆ- ಎಂಗೋಗೆ ಬೇರೆ ಮನೆ ಹುಡುಗರೊಟ್ಟಿಂಗೆ ಮಾತಾಡ್ಲಾಗ ಹೇಳಿ ನಿಷೇಧ ಇದ್ದತ್ತು ! ವಾಟೆ ಗಳಕ್ಕೆ ತೂತು ಮಾಡಿ ಟ್ರೈ ಮಾಡಿದ್ದಪ್ಪು. ಅದ್ರಿಂದ ಸ್ವರ ಹೆರಟಿದ್ದೆ ಇಲ್ಲೆ !!!!

  [Reply]

  VA:F [1.9.22_1171]
  Rating: +1 (from 1 vote)
 3. ಕೆ. ವೆಂಕಟರಮಣ ಭಟ್ಟ

  ಹರೇ ರಾಮ.

  [Reply]

  ಸುರೇಖಾ ಚಿಕ್ಕಮ್ಮ

  ಸುರೇಖ ಚಿಕ್ಕಮ್ಮ Reply:

  ನಿಂಗೋ ಎಲ್ಲ ಓದುತ್ತಿರಿ ಹೇಳುವ ವಿಷಯವೇ ಎನ್ನ ಮುಂದಿನ ಲೇಖನಕ್ಕೆ ಉಮೇದಿ ! ಒಪ್ಪ ಕೊಡದ್ರೆ ಹೇಂಗೆ ಗೊಂತಪ್ಪದು ಆರಾರು ಓದುತ್ತವ ಇಲ್ಲದಾ ಹೇಳಿ ! ಅಲ್ಲದಾ ? ಹರೇ ರಾಮ.

  [Reply]

  ಕೆ. ವೆಂಕಟರಮಣ ಭಟ್ಟ Reply:

  ನಿಂಗೊ ಹೇಳಿದ್ದು ಸರಿ. ಓದುಗರಿದ್ದರೇ ಬರವವಕ್ಕೆ ಉತ್ಸಾಹ. ಲೇಖನವ ಎಷ್ಟು ಜೆನ ಓದಿದ್ದವು ಹೇಳಿ ಗೊಂತಪ್ಪಾಂಗೆ ಮಾಡಿರೆ ಒಳ್ಳೇದು. ಹರೇ ರಾಮ.

  [Reply]

  ಸುರೇಖಾ ಚಿಕ್ಕಮ್ಮ

  ಸುರೇಖ ಚಿಕ್ಕಮ್ಮ Reply:

  ಬರೆಯೋವಿದ್ದರೆ ಸುದ್ದಿಲೊಂದು ಸ್ವಾರಸ್ಯ !
  ಓದೋವಿದ್ದರೆ ಲೇಖನಕ್ಕೋಂದು ಸಾರ್ಥಕ್ಯ !
  ಲೇಖನ ಬರೆದು-ಓದಿ ಆದ ಮತ್ತೆ
  ಒಂದಿಷ್ಟು ಒಪ್ಪ ಸಿಕ್ಕಿದರೆ
  ಬೈಲಿಂಗೆ ಬಂದದ್ದಕ್ಕೆ ಸಾರ್ಥಕ !!!!!!

  VA:F [1.9.22_1171]
  Rating: 0 (from 0 votes)
 4. ಯಮ್.ಕೆ.

  ಹೊತ್ತುಗೊಂಬಲೆ ರಿಯಲ್ ಆನೆಯೇ,———

  ಒಹೋ ಬೈಲ ದಸರಾಕ್ಕೆ ಉತ್ತಮ ಆಕರ್ಷಣೆ ಆವುತ್ತಿತ್ತು.

  [Reply]

  ಸುರೇಖಾ ಚಿಕ್ಕಮ್ಮ

  ಸುರೇಖ ಚಿಕ್ಕಮ್ಮ Reply:

  ಆಹಾ ! ಬೈಲ ದಸರಾಕ್ಕೆ ಆನೆ ಸವಾರಿ ! ಅಂಬಾರಿ ವ್ಯವಸ್ಥೆ ಇದ್ದಲ್ಲದಾ ?

  [Reply]

  ಯಮ್.ಕೆ. Reply:

  ಎಲ್ಲಾ ಇದ್ದು. ಆದರೆ ಊಟ ಮಾತ್ರ ಬಫೆಲಿ

  [Reply]

  ಸುರೇಖಾ ಚಿಕ್ಕಮ್ಮ

  ಸುರೇಖ ಚಿಕ್ಕಮ್ಮ Reply:

  ಕಿಟ್ಟಣ್ಣಜ್ಜ ಬಫೆಲಿ ಉಂಡದು(ಶ್ರುತಿ ದೊಡ್ಡಮಾಣಿ) ಕಥೆ ಆಗ ಅಲ್ಲದಾ ? ಮೊಸರನ್ನ ಬೇಕಾದವಕ್ಕೆ ಬೇಕಾದಷ್ಟು ಸಿಕ್ಕಲಿ ಹೇಳುವ ಆಶಯ !

  VA:F [1.9.22_1171]
  Rating: 0 (from 0 votes)
  ಸುರೇಖಾ ಚಿಕ್ಕಮ್ಮ

  ಸುರೇಖ ಚಿಕ್ಕಮ್ಮ Reply:

  ಮೈಸೂರಿನ ಬೆೞಿ ಅಂಬಾರಿ ಸದ್ಯಕ್ಕೆ ಫ್ರೀ ಇದ್ದು. ಬುಕ್ ಮಾಡ್ಲಕ್ಕಾ ಹೇಳಿ ……(ದತ್ತು ಸ್ವೀಕಾರ ಆದ ಮತ್ತೆ ಎಂತ ಕತೆ ಗೊಂತಿಲ್ಲೆ ! (ಚಿನ್ನದ್ದಲ್ಲ. ಅದು ಚಾಮುಂಡೇಶ್ವರಿಗೆ)

  [Reply]

  VA:F [1.9.22_1171]
  Rating: 0 (from 0 votes)
 5. ಶರ್ಮಪ್ಪಚ್ಚಿ
  ಶರ್ಮಪ್ಪಚ್ಚಿ

  ಬಾಲ್ಯದ ಅನುಭವ ಕಹಿ ಆದರೂ ಅದರ ನೆನಪು ಯಾವಗಲೂ ಮಧುರವೇ. ಲಾಯಿಕ ನಿರೂಪಣೆ.

  [Reply]

  ಸುರೇಖಾ ಚಿಕ್ಕಮ್ಮ

  ಸುರೇಖ ಚಿಕ್ಕಮ್ಮ Reply:

  ಹೀಂಗಿಪ್ಪ ನೆಂಪೇ ಎಲ್ಲರಿಂಗು ಇದ್ರುದೆ, ಎಲ್ಲರಿಂಗು ಅದುನ್ನ ನೆನೆಶಿ ಖುಷಿ ಪಡ್ಲೆ ಟೈಮ್ ಇರ- ಮನಸ್ಸುದೆ ಇರ !. ಎನ್ನ ಅಕ್ಕನ ಅನುಭವ ಇದೇ ಇದ್ರುದೆ ಆನು ನೋಡುವ ದೃಷ್ಟಿಯೇ ಬೇರೆ, ಅದು ನೋಡುವ ದೃಷ್ಟಿಯೇ ಬೇರೆ. ಅದು ಎನ್ನನ್ನ ಬೈತು ” ನಿಂಗೆ ಬೇರೆ ಕೆಲಸ ಇಲ್ಲೆ ! ” ಹೇಳಿ….

  [Reply]

  VA:F [1.9.22_1171]
  Rating: +1 (from 1 vote)
 6. ಲಕ್ಷ್ಮಿ ಜಿ.ಪ್ರಸಾದ

  ಸಣ್ಣಾದಿಪ್ಪಗಣ ಅನುಭವ ಅಮ್ಬಗ ಸಿಹಿ ಆಗಿದ್ದರೂ ಕಹಿ ಆಗಿದ್ದರೂ ದೊಡ್ಡ ಆದ ಮೇಲೆ ಅದರ ನೆನಪ್ಸಿಕೊಂಬದು ಸಿಹಿಯೇ ಆಗಿರ್ತು ಅಲ್ಲದ ?ಸುರೇಖ ಚಿಕ್ಕಮ್ಮ
  ಬರಹ ತುಂಬಾ ಲಾಯ್ಕ ಆಯಿದು

  [Reply]

  ಸುರೇಖಾ ಚಿಕ್ಕಮ್ಮ

  ಸುರೇಖ ಚಿಕ್ಕಮ್ಮ Reply:

  ಸಣ್ಣಾದಿಪ್ಪಗಣ ನೆಂಪು ಕಹಿ ಆದರೆಂತ ? ಅದನ್ನ ಸಿಹಿ ಮಾಡಿ, ನೆಂಪು ಮಾಡಿಕೊಂಬ ಶಕ್ತಿ ಬೆಳೆಸಿಕೊಂಬ. ಅಲ್ಲದಾ ? ಬಾಲ್ಯದ ಕಹಿ ಬಾಲ್ಯಕ್ಕೆ ಇರಳಿ. ನೆನಪುಗಳಿಗೇಕೆ ಕಹಿಯ ಲೇಪ ?
  ಕನ್ನಡ ಪ್ರಭದಲ್ಲಿ ನಿಂಗಳ ಬೆಳ್ಳಾರೆ ಲೇಖನ ಓದಿದೆ.

  [Reply]

  VA:F [1.9.22_1171]
  Rating: +1 (from 1 vote)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಶರ್ಮಪ್ಪಚ್ಚಿಮುಳಿಯ ಭಾವಪುಣಚ ಡಾಕ್ಟ್ರುಬೋಸ ಬಾವಚುಬ್ಬಣ್ಣಅನು ಉಡುಪುಮೂಲೆಪಟಿಕಲ್ಲಪ್ಪಚ್ಚಿಅಕ್ಷರ°ಬಂಡಾಡಿ ಅಜ್ಜಿಅನುಶ್ರೀ ಬಂಡಾಡಿವಾಣಿ ಚಿಕ್ಕಮ್ಮಅಡ್ಕತ್ತಿಮಾರುಮಾವ°ಶೀಲಾಲಕ್ಷ್ಮೀ ಕಾಸರಗೋಡುಹಳೆಮನೆ ಅಣ್ಣಡೈಮಂಡು ಭಾವಚೆನ್ನೈ ಬಾವ°ದೇವಸ್ಯ ಮಾಣಿವೆಂಕಟ್ ಕೋಟೂರುಗಣೇಶ ಮಾವ°ಮಂಗ್ಳೂರ ಮಾಣಿವಸಂತರಾಜ್ ಹಳೆಮನೆಕಳಾಯಿ ಗೀತತ್ತೆಅಜ್ಜಕಾನ ಭಾವಸರ್ಪಮಲೆ ಮಾವ°ಸಂಪಾದಕ°ಕಜೆವಸಂತ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್

ಬೆಣಚ್ಚಿಪ್ಪಲ್ಲಿ ಹುಡ್ಕಲೆ