ಗಡಿಬಿಡಿ ಎಡೆಲಿ ಚೂರು ಹೊತ್ತು ಅಪ್ಪಂಗೆ ಕೊಡ್ಲೆಡಿಗೊ…..?

December 15, 2013 ರ 10:00 amಗೆ ನಮ್ಮ ಬರದ್ದು, ಇದುವರೆಗೆ 15 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಗಡಿಬಿಡಿ ಎಡೆಲಿ ಚೂರು ಹೊತ್ತು ಅಪ್ಪಂಗೆ ಕೊಡ್ಲೆಡಿಗೊ…..?

ನಿಂಗೊ ಅಕೇರಿಗೆ ಅಪ್ಪನತ್ರೆ ಮಾತಾಡಿದ್ದು ಯಾವಾಗ?ನಿನ್ನೆಯೊ….?ಮೊನ್ನೆಯೊ….?ಅಲ್ಲ,ಒಂದು ವಾರ ಆತೋ…? ಆತಾಯಿಕ್ಕು.ಈ ಗಡಿಬಿಡಿ ಎಡೆಲಿ ಆರಿಂಗೆ ನೆಂಪಿರ್‍ತು.ಮಾತಾಡೆಕ್ಕರೆ ಪುರುಸೊತ್ತಾಯೆಕನ್ನೆ.ಅಮ್ಮ ಆದರೆ ಫೋನು ಮಾಡದ್ದರೆ ಇತ್ಲಾಗಿ ಮಾಡಿ ಬೈತ್ತು.ಅಪ್ಪ ಹಾಂಗೆಂತು ಮಾಡ್ತವಿಲ್ಲೆ ಇದ.ಹಾಂಗಾಗಿ ಪುರುಸೊತ್ತು..ಆವುತ್ತಿಲ್ಲೆ.
ನವಗೆ ಯಾವತ್ತುದೆ ಹಾಂಗೇ ಅಪ್ಪಂದ್ರ ಮರದೇ ಹೋಪದು.ಅದೇ ಅಪ್ಪಂಗೆ ಆಸ್ತಿ ಪಾಲು ಮಾಡುವಗ ನಮ್ಮ ಮರದು ಹೋದರೋ?ಅದು ಹೇಂಗೆ ಅಪ್ಪಂಗೆ ಮರದು ಹೋಪಲಾಗನ್ನೆ?ಮರದು ತಿಂಬ ಹಕ್ಕು ನವಗೆ ಮಾಂತ್ರ ಇಪ್ಪದು ಅಲ್ಲದೋ?
ನಾವು ಸಣ್ಣ ಇಪ್ಪಗ ನಮ್ಮ ಎಷ್ಟು ಸರ್ತಿ ಹೆಗಲಿಲ್ಲಿ ಹೊತ್ತು ತೋಂಪಟ…ತೋಂಪಟ…ಮಾಡಿಕ್ಕು ಈ ಅಪ್ಪ.ಜಾತ್ರೆಲಿ ಚಾಮಿದೇವರ ನೋಡ್ಲೆ ಅಪ್ಪನ ತಲೆಮೇಗೆ ಕಾಲುಮಡುಗಿ ನಿಂದಿದಿಲ್ಲೆಯ ನಾವು.ನಮ್ಮ ಹೊಟ್ಟೆ ತುಂಬುಸಲೆ,ನವಗೆ ಕಲುಶಲೆ ಹೇಳಿಂಡು ಎಷ್ಟು ಸರ್ತಿ ಹೆಗಲು ಮುರಿತ್ತಾಂಗೆ ಕೆಲಸ ಮಾಡಿಕ್ಕು ಈ ಅಪ್ಪಂದ್ರು.ಗೋಣಿ…ಗೋಣಿ…ಅಕ್ಕಿ,ಬೇಳೆ ಎಲ್ಲ ಹೆಗಲಿಲ್ಲಿ ಹೊತ್ತೊಂಡು ಬಂದಿಕ್ಕು.ಗಾಡಿಗೆ ಕೊಡ್ತ ಪೈಸೆಲಿ ನವಗೊಂದು ಒಪ್ಪ ಅಂಗಿಯೊ,ಮಿಠಾಯಿಯೋ ತೆಗವಲಕ್ಕನ್ನೆ ಹೇಳಿ.ಹಾಂಗಿಪ್ಪ ಅಪ್ಪಂಗೆ ಈಗ ಕಾಲುಬೇನೆ ಆಗಿಯೋ,ಸೊಂಟ ಉಳುಕ್ಕಿಯೋ ನೆಡವಲೆಡಿಯದ್ದರೆ ಹೆಗಲು ಕೊಟ್ಟು ನೆಡಶಲೆ ನವಗೆ ಗಡಿಬಿಡಿ ಬಿಡ್ತಿಲ್ಲೆ.ಅಪ್ಪಂಗೆ ಒಳ್ಳೆ ಗಡಿಬಿಡಿ ಇಪ್ಪ ಸಮಯಲ್ಲಿಯೇ ಆಯಿಕ್ಕು ನಾವು ಅಪ್ಪನ ಮಟ್ಟೆಲಿ ಹತ್ತಿ ಕೂದೊಂಡು ಉಣುಶಲೊ ಮತ್ತೊ ಹಠ ಮಾಡ್ತದು.ಗಡಿಬಿಡಿ ಹೇಳಿ ಅಪ್ಪ ಎಂತೂ ನಮ್ಮ ಇಳುಶಿಕ್ಕಿ ಕೆಲಸಮಾಡ್ಲೆ ಓಡಿದ್ದವಿಲ್ಲನ್ನೆ.ನವಗೆ ಮಾಂತ್ರ ಕಾಲಿಂಗೆ ಚಕ್ರ ಕಟ್ಟಿಂಡು ಓಡುವದರ ಎಡೆಲಿ ಅಪ್ಪನತ್ರೆ ಉಂಡಿರೋ….?ಹೇಳಿ ಕೇಳ್ಲೆ ಪುರುಸೊತ್ತಿಲ್ಲದ್ದದು.
ದೂರದ ನೆಂಟ್ರಲ್ಲಿಗೊ ಮತ್ತೊ ಹೋಪಗ ನೆಡವಲಿದ್ದರೆ ಅಪ್ಪ ನಮ್ಮ ನೆಡಶವು ನೆಗ್ಗಿಂಡೆ ಹೋಕಷ್ಟೆ.ಎಡೇಲಿ ಎಲ್ಲಿಯಾದರು ಕೈ ಬಚ್ಚಿ ಕೈ ಬದಲುಸಲೆ ನೋಡಿರೆ,ನಾವು ತರ್ಕ ಮಾಡಿ ಆ ಕೈಲಿಯೇ ಕರಕ್ಕೊಂಬ ಹಾಂಗೆ ಮಾಡಿದ್ದು ನೆಂಪಿಕ್ಕು ನಿಂಗೊಗೆ.ಈಗ ನಮ್ಮ ಹೊಸಾ ಕಾರಿಲ್ಲಿಯೊ…?ಬೈಕ್ಕಿಲ್ಲಿಯೋ…?ಎಷ್ಟು ಸರ್ತಿ ಕರಕ್ಕೊಂಡು ಹೋಯಿದು ನಾವು ಅಪ್ಪನ…?
ಮನೆವಕ್ಕೆಲ್ಲ ಅಂಗಿ,ವಸ್ತ್ರ ತೆಗವಗಳೂ ಅಪ್ಪ ಅವಕ್ಕೆ ಬೇಕಾಗಿ ಒಂದು ಹೊಸ ಅಂಗಿಯೂ ತೆಗೆಯವು.ಅದೇ ಹಳತ್ತು ನೀರಕರೆ ಆದ ವಸ್ತ್ರವೊ,ಹೊಲಿಗೆ ಹಾಕಿದ ಅಂಗಿಯೂ ಹಾಕಿಂಡು ತಿರುಗುಗು.ನಾವು ಫ್ರೆಂಡುಗಳೊಟ್ಟಿಂಗೆ ಪೇಟೆಲಿ ಕುಶಾಲು ಮಾಡುವಗ,ಇದೇ ಅಪ್ಪ ಹಳೇ ಅಂಗಿ ಹಾಕಿಂಡು,ಒಂದು ಹರ್ಕು ಚೀಲವೂ ಹಿಡ್ಕೊಂಡು ನಮ್ಮ ಕಂಡಪ್ಪಗ ಆ ಕಡ್ಲೆ ಹೊರಿತ್ತದರ ಹತ್ರಾಂದ ಐದ್ರುಪಾಯಿ ಕಡ್ಲೆ ಕಟ್ಟುಸಿಯೊಂಡು ತಂದು ಕೊಟ್ಟ್ರೆ ಫ್ರೆಂಡುಗಳ ಹತ್ರೆ ಇದೆನ್ನ ಅಪ್ಪ ಹೇಳ್ಲೆ ನವಗೆ ನಾಚಿಗೆ ಆವ್ತು.
ಅಪ್ಪನ ಹೊಸಾ ಲೆಕ್ಕ ಪುಸ್ತಕದ ಒಂದು ಪುಟವೂ ಬಿಡದ್ದೆ ಗೀಚಿ ಹಾಕಿದ ನವಗೆ,ಇಂದು ಅಪ್ಪ ಒಂದು ಅಭಿಪ್ರಾಯ ಹೇಳಿರೊ,ಬೈಕ್ಕು ಮೆಲ್ಲಂಗೆ ಓಡ್ಸು ಹೇಳಿರೊ ತಡವಲೆಡಿಯದ್ದ ಕೋಪ ಬತ್ತು.
ಇನ್ನಾದರುದೇ ಗಡಿಬಿಡಿ ಎಡೆಲಿ ದಿನಕ್ಕೆ ಹತ್ತು ನಿಮಿಷ ಆದರುದೇ ಅಪ್ಪನತ್ರೆ ಮಾತಾಡುವೊ.ಹೇಂಗಿದ್ದಿ..?ಉಂಡಾತೋ…?ಎಂತಾರು ಬೇಕೋ…?ಹೇಳಿ ಕೇಳುವೊ.ಒಂದೊದರಿ ಆದರೂ ಅವರ ಕಾಲುಹಿಡುದು ಆಶೀರ್ವಾದ ತೆಕ್ಕೊಂಬೊ?ನವಗೆ ಬೇಕಾಗಿ ಅವು ಮಾಡಿದ್ದದರ ನೂರರಲ್ಲಿ ಒಂದಂಶ ಆದರೂ ತಿರುಗುಸಿ ಕೊಡ್ಲೆ ಪ್ರಯತ್ನ ಮಾಡುವೊ.
ಅಪ್ಪ ನಮ್ಮ ಬಿಟ್ಟಿಕ್ಕಿ ಹೋದ ಮತ್ತೆ ಅವರ ಹೆಸರಿಲ್ಲಿ ತಾಜುಮಹಲು ಕಟ್ಸುವದರಿಂದ ಅವು ಇಪ್ಪಗಳೇ ಅವರ ಚೆಂದಕೆ ನೋಡಿಯೊಂದು,ಮನಗೆ ಹೋಪಗ ಅವಕ್ಕೇ ಹೇಳಿ ಗಿಸೆಂದ ಒಂದು ಹತ್ತ್ರುಪಾಯಿ ಕರ್ಚು ಮಾಡಿ ವಸ್ತ್ರವೊ,ಬೇನಗೆ ಮುಲಾಮೋ ತೆಕ್ಕೊಂಡು ಹೋದರೆ ನಮ್ಮ ಗೆಂಟೆಂತೂ ಹೋಗ.ದೇವರು ನವಗೆ ಅದರ ನೂರು ಪಾಲು ಕೊಡುಗು.
ಈಗಳೇ ಅಪ್ಪಂಗೆ ಫೋನು ಮಾಡಿ ಮಾತಾಡಿ.ಅವಕ್ಕೆಷ್ಟು ಕುಶಿ ಆವ್ತು.ನಿಂಗಳ ಮನಸ್ಸಿಂಗೆಷ್ಟು ಸಂತೋಷ ಆವ್ತು ಹೇಳಿ ನೋಡಿ.

~~~~

 

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 15 ಒಪ್ಪಂಗೊ

 1. durgasharma korikkar

  prabuddha baraha…

  [Reply]

  VA:F [1.9.22_1171]
  Rating: +1 (from 1 vote)
 2. ಯಮ್.ಕೆ.

  ಎನ್ನಾ0ಗಿರುತ್ತವಕ್ಕೆ ಹೀ0ಗೆ ಬೈಲಿಲಿ ಜಿಪಿಎಸ್ಸು -ಚಿಪ್ಪು ಮಡಗಿ ಬರೆತ್ತವು ಹೇಳಿ ಗೊ0ತ್ತಿ ಇತ್ತಿಲ್ಲೆ.

  [Reply]

  VA:F [1.9.22_1171]
  Rating: +1 (from 1 vote)
 3. ಶ್ರುತಿ ದೊಡ್ಡಮಾಣಿ
  ಶ್ರುತಿ ದೊಡ್ಡಮಾಣಿ

  ಆನು ಬರದ್ದದರ ಇಷ್ಟು ಪ್ರೀತಿಲಿ ಓದಿ,ಇನ್ನುದೇ ಬರವಲೆ ಎನಗೆ ಪ್ರೋತ್ಸಾಹ ಮಾಡಿದ್ದಕ್ಕೆ ಎಲ್ಲೋರಿಂಗೂ ಧನ್ಯವಾದಂಗೊ..

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಹಳೆಮನೆ ಅಣ್ಣವಿದ್ವಾನಣ್ಣಪೆಂಗಣ್ಣ°ವೇಣೂರಣ್ಣಚುಬ್ಬಣ್ಣಡಾಮಹೇಶಣ್ಣಮಾಷ್ಟ್ರುಮಾವ°ಪ್ರಕಾಶಪ್ಪಚ್ಚಿವೆಂಕಟ್ ಕೋಟೂರುಪುಣಚ ಡಾಕ್ಟ್ರುಕೆದೂರು ಡಾಕ್ಟ್ರುಬಾವ°ಶೀಲಾಲಕ್ಷ್ಮೀ ಕಾಸರಗೋಡುಶರ್ಮಪ್ಪಚ್ಚಿಎರುಂಬು ಅಪ್ಪಚ್ಚಿವಾಣಿ ಚಿಕ್ಕಮ್ಮಮುಳಿಯ ಭಾವಸಂಪಾದಕ°ಬಂಡಾಡಿ ಅಜ್ಜಿಕಾವಿನಮೂಲೆ ಮಾಣಿಜಯಗೌರಿ ಅಕ್ಕ°ದೇವಸ್ಯ ಮಾಣಿಕೊಳಚ್ಚಿಪ್ಪು ಬಾವದೊಡ್ಮನೆ ಭಾವಪಟಿಕಲ್ಲಪ್ಪಚ್ಚಿಪುತ್ತೂರಿನ ಪುಟ್ಟಕ್ಕಚೆನ್ನೈ ಬಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್

ಬೆಣಚ್ಚಿಪ್ಪಲ್ಲಿ ಹುಡ್ಕಲೆ