Oppanna.com

ಗಡಿಬಿಡಿ ಎಡೆಲಿ ಚೂರು ಹೊತ್ತು ಅಪ್ಪಂಗೆ ಕೊಡ್ಲೆಡಿಗೊ…..?

ಬರದೋರು :   ಶ್ರೀಹರ್ಷ ಭಟ್ (ಸಾಹಸಿ)    on   15/12/2013    15 ಒಪ್ಪಂಗೊ

ಗಡಿಬಿಡಿ ಎಡೆಲಿ ಚೂರು ಹೊತ್ತು ಅಪ್ಪಂಗೆ ಕೊಡ್ಲೆಡಿಗೊ…..?

ನಿಂಗೊ ಅಕೇರಿಗೆ ಅಪ್ಪನತ್ರೆ ಮಾತಾಡಿದ್ದು ಯಾವಾಗ?ನಿನ್ನೆಯೊ….?ಮೊನ್ನೆಯೊ….?ಅಲ್ಲ,ಒಂದು ವಾರ ಆತೋ…? ಆತಾಯಿಕ್ಕು.ಈ ಗಡಿಬಿಡಿ ಎಡೆಲಿ ಆರಿಂಗೆ ನೆಂಪಿರ್‍ತು.ಮಾತಾಡೆಕ್ಕರೆ ಪುರುಸೊತ್ತಾಯೆಕನ್ನೆ.ಅಮ್ಮ ಆದರೆ ಫೋನು ಮಾಡದ್ದರೆ ಇತ್ಲಾಗಿ ಮಾಡಿ ಬೈತ್ತು.ಅಪ್ಪ ಹಾಂಗೆಂತು ಮಾಡ್ತವಿಲ್ಲೆ ಇದ.ಹಾಂಗಾಗಿ ಪುರುಸೊತ್ತು..ಆವುತ್ತಿಲ್ಲೆ.
ನವಗೆ ಯಾವತ್ತುದೆ ಹಾಂಗೇ ಅಪ್ಪಂದ್ರ ಮರದೇ ಹೋಪದು.ಅದೇ ಅಪ್ಪಂಗೆ ಆಸ್ತಿ ಪಾಲು ಮಾಡುವಗ ನಮ್ಮ ಮರದು ಹೋದರೋ?ಅದು ಹೇಂಗೆ ಅಪ್ಪಂಗೆ ಮರದು ಹೋಪಲಾಗನ್ನೆ?ಮರದು ತಿಂಬ ಹಕ್ಕು ನವಗೆ ಮಾಂತ್ರ ಇಪ್ಪದು ಅಲ್ಲದೋ?
ನಾವು ಸಣ್ಣ ಇಪ್ಪಗ ನಮ್ಮ ಎಷ್ಟು ಸರ್ತಿ ಹೆಗಲಿಲ್ಲಿ ಹೊತ್ತು ತೋಂಪಟ…ತೋಂಪಟ…ಮಾಡಿಕ್ಕು ಈ ಅಪ್ಪ.ಜಾತ್ರೆಲಿ ಚಾಮಿದೇವರ ನೋಡ್ಲೆ ಅಪ್ಪನ ತಲೆಮೇಗೆ ಕಾಲುಮಡುಗಿ ನಿಂದಿದಿಲ್ಲೆಯ ನಾವು.ನಮ್ಮ ಹೊಟ್ಟೆ ತುಂಬುಸಲೆ,ನವಗೆ ಕಲುಶಲೆ ಹೇಳಿಂಡು ಎಷ್ಟು ಸರ್ತಿ ಹೆಗಲು ಮುರಿತ್ತಾಂಗೆ ಕೆಲಸ ಮಾಡಿಕ್ಕು ಈ ಅಪ್ಪಂದ್ರು.ಗೋಣಿ…ಗೋಣಿ…ಅಕ್ಕಿ,ಬೇಳೆ ಎಲ್ಲ ಹೆಗಲಿಲ್ಲಿ ಹೊತ್ತೊಂಡು ಬಂದಿಕ್ಕು.ಗಾಡಿಗೆ ಕೊಡ್ತ ಪೈಸೆಲಿ ನವಗೊಂದು ಒಪ್ಪ ಅಂಗಿಯೊ,ಮಿಠಾಯಿಯೋ ತೆಗವಲಕ್ಕನ್ನೆ ಹೇಳಿ.ಹಾಂಗಿಪ್ಪ ಅಪ್ಪಂಗೆ ಈಗ ಕಾಲುಬೇನೆ ಆಗಿಯೋ,ಸೊಂಟ ಉಳುಕ್ಕಿಯೋ ನೆಡವಲೆಡಿಯದ್ದರೆ ಹೆಗಲು ಕೊಟ್ಟು ನೆಡಶಲೆ ನವಗೆ ಗಡಿಬಿಡಿ ಬಿಡ್ತಿಲ್ಲೆ.ಅಪ್ಪಂಗೆ ಒಳ್ಳೆ ಗಡಿಬಿಡಿ ಇಪ್ಪ ಸಮಯಲ್ಲಿಯೇ ಆಯಿಕ್ಕು ನಾವು ಅಪ್ಪನ ಮಟ್ಟೆಲಿ ಹತ್ತಿ ಕೂದೊಂಡು ಉಣುಶಲೊ ಮತ್ತೊ ಹಠ ಮಾಡ್ತದು.ಗಡಿಬಿಡಿ ಹೇಳಿ ಅಪ್ಪ ಎಂತೂ ನಮ್ಮ ಇಳುಶಿಕ್ಕಿ ಕೆಲಸಮಾಡ್ಲೆ ಓಡಿದ್ದವಿಲ್ಲನ್ನೆ.ನವಗೆ ಮಾಂತ್ರ ಕಾಲಿಂಗೆ ಚಕ್ರ ಕಟ್ಟಿಂಡು ಓಡುವದರ ಎಡೆಲಿ ಅಪ್ಪನತ್ರೆ ಉಂಡಿರೋ….?ಹೇಳಿ ಕೇಳ್ಲೆ ಪುರುಸೊತ್ತಿಲ್ಲದ್ದದು.
ದೂರದ ನೆಂಟ್ರಲ್ಲಿಗೊ ಮತ್ತೊ ಹೋಪಗ ನೆಡವಲಿದ್ದರೆ ಅಪ್ಪ ನಮ್ಮ ನೆಡಶವು ನೆಗ್ಗಿಂಡೆ ಹೋಕಷ್ಟೆ.ಎಡೇಲಿ ಎಲ್ಲಿಯಾದರು ಕೈ ಬಚ್ಚಿ ಕೈ ಬದಲುಸಲೆ ನೋಡಿರೆ,ನಾವು ತರ್ಕ ಮಾಡಿ ಆ ಕೈಲಿಯೇ ಕರಕ್ಕೊಂಬ ಹಾಂಗೆ ಮಾಡಿದ್ದು ನೆಂಪಿಕ್ಕು ನಿಂಗೊಗೆ.ಈಗ ನಮ್ಮ ಹೊಸಾ ಕಾರಿಲ್ಲಿಯೊ…?ಬೈಕ್ಕಿಲ್ಲಿಯೋ…?ಎಷ್ಟು ಸರ್ತಿ ಕರಕ್ಕೊಂಡು ಹೋಯಿದು ನಾವು ಅಪ್ಪನ…?
ಮನೆವಕ್ಕೆಲ್ಲ ಅಂಗಿ,ವಸ್ತ್ರ ತೆಗವಗಳೂ ಅಪ್ಪ ಅವಕ್ಕೆ ಬೇಕಾಗಿ ಒಂದು ಹೊಸ ಅಂಗಿಯೂ ತೆಗೆಯವು.ಅದೇ ಹಳತ್ತು ನೀರಕರೆ ಆದ ವಸ್ತ್ರವೊ,ಹೊಲಿಗೆ ಹಾಕಿದ ಅಂಗಿಯೂ ಹಾಕಿಂಡು ತಿರುಗುಗು.ನಾವು ಫ್ರೆಂಡುಗಳೊಟ್ಟಿಂಗೆ ಪೇಟೆಲಿ ಕುಶಾಲು ಮಾಡುವಗ,ಇದೇ ಅಪ್ಪ ಹಳೇ ಅಂಗಿ ಹಾಕಿಂಡು,ಒಂದು ಹರ್ಕು ಚೀಲವೂ ಹಿಡ್ಕೊಂಡು ನಮ್ಮ ಕಂಡಪ್ಪಗ ಆ ಕಡ್ಲೆ ಹೊರಿತ್ತದರ ಹತ್ರಾಂದ ಐದ್ರುಪಾಯಿ ಕಡ್ಲೆ ಕಟ್ಟುಸಿಯೊಂಡು ತಂದು ಕೊಟ್ಟ್ರೆ ಫ್ರೆಂಡುಗಳ ಹತ್ರೆ ಇದೆನ್ನ ಅಪ್ಪ ಹೇಳ್ಲೆ ನವಗೆ ನಾಚಿಗೆ ಆವ್ತು.
ಅಪ್ಪನ ಹೊಸಾ ಲೆಕ್ಕ ಪುಸ್ತಕದ ಒಂದು ಪುಟವೂ ಬಿಡದ್ದೆ ಗೀಚಿ ಹಾಕಿದ ನವಗೆ,ಇಂದು ಅಪ್ಪ ಒಂದು ಅಭಿಪ್ರಾಯ ಹೇಳಿರೊ,ಬೈಕ್ಕು ಮೆಲ್ಲಂಗೆ ಓಡ್ಸು ಹೇಳಿರೊ ತಡವಲೆಡಿಯದ್ದ ಕೋಪ ಬತ್ತು.
ಇನ್ನಾದರುದೇ ಗಡಿಬಿಡಿ ಎಡೆಲಿ ದಿನಕ್ಕೆ ಹತ್ತು ನಿಮಿಷ ಆದರುದೇ ಅಪ್ಪನತ್ರೆ ಮಾತಾಡುವೊ.ಹೇಂಗಿದ್ದಿ..?ಉಂಡಾತೋ…?ಎಂತಾರು ಬೇಕೋ…?ಹೇಳಿ ಕೇಳುವೊ.ಒಂದೊದರಿ ಆದರೂ ಅವರ ಕಾಲುಹಿಡುದು ಆಶೀರ್ವಾದ ತೆಕ್ಕೊಂಬೊ?ನವಗೆ ಬೇಕಾಗಿ ಅವು ಮಾಡಿದ್ದದರ ನೂರರಲ್ಲಿ ಒಂದಂಶ ಆದರೂ ತಿರುಗುಸಿ ಕೊಡ್ಲೆ ಪ್ರಯತ್ನ ಮಾಡುವೊ.
ಅಪ್ಪ ನಮ್ಮ ಬಿಟ್ಟಿಕ್ಕಿ ಹೋದ ಮತ್ತೆ ಅವರ ಹೆಸರಿಲ್ಲಿ ತಾಜುಮಹಲು ಕಟ್ಸುವದರಿಂದ ಅವು ಇಪ್ಪಗಳೇ ಅವರ ಚೆಂದಕೆ ನೋಡಿಯೊಂದು,ಮನಗೆ ಹೋಪಗ ಅವಕ್ಕೇ ಹೇಳಿ ಗಿಸೆಂದ ಒಂದು ಹತ್ತ್ರುಪಾಯಿ ಕರ್ಚು ಮಾಡಿ ವಸ್ತ್ರವೊ,ಬೇನಗೆ ಮುಲಾಮೋ ತೆಕ್ಕೊಂಡು ಹೋದರೆ ನಮ್ಮ ಗೆಂಟೆಂತೂ ಹೋಗ.ದೇವರು ನವಗೆ ಅದರ ನೂರು ಪಾಲು ಕೊಡುಗು.
ಈಗಳೇ ಅಪ್ಪಂಗೆ ಫೋನು ಮಾಡಿ ಮಾತಾಡಿ.ಅವಕ್ಕೆಷ್ಟು ಕುಶಿ ಆವ್ತು.ನಿಂಗಳ ಮನಸ್ಸಿಂಗೆಷ್ಟು ಸಂತೋಷ ಆವ್ತು ಹೇಳಿ ನೋಡಿ.
~~~~
 

15 thoughts on “ಗಡಿಬಿಡಿ ಎಡೆಲಿ ಚೂರು ಹೊತ್ತು ಅಪ್ಪಂಗೆ ಕೊಡ್ಲೆಡಿಗೊ…..?

  1. ಆನು ಬರದ್ದದರ ಇಷ್ಟು ಪ್ರೀತಿಲಿ ಓದಿ,ಇನ್ನುದೇ ಬರವಲೆ ಎನಗೆ ಪ್ರೋತ್ಸಾಹ ಮಾಡಿದ್ದಕ್ಕೆ ಎಲ್ಲೋರಿಂಗೂ ಧನ್ಯವಾದಂಗೊ..

  2. ಎನ್ನಾ0ಗಿರುತ್ತವಕ್ಕೆ ಹೀ0ಗೆ ಬೈಲಿಲಿ ಜಿಪಿಎಸ್ಸು -ಚಿಪ್ಪು ಮಡಗಿ ಬರೆತ್ತವು ಹೇಳಿ ಗೊ0ತ್ತಿ ಇತ್ತಿಲ್ಲೆ.

  3. ಮನಸ್ಸಿಲಿ ಅಚ್ಚೊತ್ತಿ ನಿ೦ಬ ಭಾವಪೂರ್ಣ ಬರಹ. ಹೃದಯವ ತಟ್ಟಿತ್ತು.
    ಹೀ೦ಗೇ ಬರೆತ್ತಾ ಇರು ಶ್ರುತಿ.

  4. ಪ್ರಬುದ್ಧ ಲೇಖನ. ಪೈಸೆ ಹಿಂದೆ ಬಿದ್ದ ಇಂದ್ರಾಣ ಕಾಲದವು ಗಮನಿಸಬೇಕಾದ ವಿಷಯ… ಎಂತಕ್ಕೇ ಕೇಳಿರು ಪುರುಸೊತ್ತು ಇಲ್ಲೆ ಹೇಳುವ ಇಂದಿನವಕ್ಕೆ, ಅವಕ್ಕೆ ಬೇಕಾದ್ದಕ್ಕೆಲ್ಲ ಪುರುಸೊತ್ತು ಇರ್ತು ! ಇಂಥ ಒಳ್ಳೆ ವಿಷಯಕ್ಕೆ ಪುರುಸೊತ್ತು ಇರ್ತಿಲ್ಲೆ … ಚಾಮೀ …. ಎಲ್ಲರಿಂಗು ಒಳ್ಳೆ ಬುದ್ಧಿ ಕೊಡು.
    ಮುಂದಣ ಪೀಳಿಗೆಯವು- ಎಂಗಳ ನೆಡೆನುಡಿ ನೋಡಿ ಕಲಿತ್ತವು ಹೇಳುವ ಎಚ್ಚರವೂ ಬೇಕಲ್ಲದಾ…. ?

  5. ಎನಗೆ ಓದಿಪ್ಪ ಎ.ಆರ್ ಮಣಿಕಾಂತ್ ಬರದ ಪುಸ್ತಕಂಗೊ ನೆನಪಾತು, ಪಷ್ಟಾಯಿದು.

  6. ಸಣ್ಣ ಪ್ರಾಯದ ಶ್ರುತಿದು ಪ್ರಾಯದ ಅನುಭವ ಇಪ್ಪ ”ದೊಡ್ಡಮಾಣಿ ”(ಹಿರಿಮಗ )ಯ ಹಾಂಗಿಪ್ಪ ಪ್ರಬುದ್ಧ ಆಲೋಚನೆ . ಅಪ್ಪನೊಟ್ಟಿಂಗೆ ಕಳದ ಬಾಲ್ಯವ ನೆನಪು ಮಾಡ್ಸುತ್ತು, ಲೇಖನ ಮಾರ್ಮಿಕವಾಗಿ ಹೃದಯ ಕಲಂಕ್ಕುತ್ತು .

  7. ಸಣ್ಣ ಕೂಸಿನ ಬಾಯಿಲಿ ಬಂದ ಮಾತು ತುಂಬಾ ದೊಡ್ಡದು
    ಒಳ್ಳೆ ಬರಹ ಮನಸ್ಸು ತಟ್ಟುವ ಮಾತುಗ ;ಅಭಿನಂದನೆಗ
    ಆನು ಈಗಲೇ ಅಮ್ಮಂಗೆ ಫೋನ್ ಮಾಡುತ್ತೆ

  8. ಪ್ರತಿಯೊಬ್ಬನೂ ತಪ್ಪದ್ದೆ ಓದಿ ಒಂದು ಕ್ಷಣ ಚಿಂತುಸೆಕ್ಕಾದ ಶುದ್ದಿ. ವೆಂಕಟರಮಣ ಭಾವನ ಒಪ್ಪ ನಿಜಕ್ಕೂ ಹೃದಯತಟ್ಟುವಂತಾದ್ದು. ಹರೇ ರಾಮ

  9. ಹಲವಾರು ಹ್ರುದಯಂಗಳ ಕಲಕಿಕ್ಕು ಈ ಮಾತು. ಎನಗಂತೂ ಕಣ್ಣೀರು ತರುಸಿತ್ತು. ಈ ಪ್ರಾಯಲ್ಲಿ ಇಷ್ಟೊಂದು ವಿಷಯಂಗಳ ತಿಳುಕ್ಕೋಂಡಿಪ್ಪ ನಿಂಗಳ ಹೆತ್ತೋರು ಧನ್ಯ. ಹರೇ ರಾಮ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×